ನಮ್ಮ ಪ್ರೀತಿಯು ಅಮರ
ನಿನ್ನೊಂದಿಗೆ ಕಳೆಯೋ ಕ್ಷಣವೂ ಮಧುರ
ಸೂರ್ಯ ಚಂದ್ರರೊಡಗೂಡಿ ಬೆಳೆದ ನಮ್ಮ ಪ್ರೀತಿಯು
ಅದರ ಸ”ಯು ಮಧುರ
ಬದುಕು ಒಂದು ಕವನ
ಬರೆವ ನಾವು ಜೊತೆಗೂಡಿ
ಪ್ರೀತಿ ಒಂದು ಹಸಿ ಚಿಗುರು
ಬೆಳೆಸೋಣ ನಾವು ಜೊತೆಯಲಿ
ಮನದ ಮನೆಗೆ ಹೊಸ ಬಣ್ಣ, ಹೊಸ ಬಣ್ಣ
ಕಟ್ಟೋಣ ತೋರಣ, ಹಸಿರು ತೋರಣ
ಜೊತೆಗೂಡಿ ಬಾಳೋಣ
ಸುಖ ಶಾಂತಿ ಪಡೆಯೋಣ