Q & A for Students – November 2021

Q & A – 1st November, 2021

Q1. ನಾನು ಬಿಎಸ್‌ಸಿ (ಪಿಸಿಎಂ) ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ರಕ್ಷಣಾ ಪಡೆಗೆ ಸೇರಬೇಕು ಎಂಬ ಆಸೆ ಇದೆ. ಸೇನೆ ಅಥವಾ ವಾಯುಸೇನೆಗೆ ಸೇರಬಯಸಿದ್ದೇನೆ. ಹೇಗೆ ಸೇರಬಹುದೆಂದು ದಯಮಾಡಿ ತಿಳಿಸಿ.

ರಕ್ಷಣಾ ಪಡೆಗೆ ಸೇರಿ ದೇಶಸೇವೆ ಮಾಡಬೇಕೆನ್ನುವ ನಿಮ್ಮ ಆಸೆ ಶ್ಲಾಘನೀಯ. ಸೇನಾಧಿಕಾರಿಗಳಿಗೆ ಸಿಗುವ ವೇತನ, ಸವಲತ್ತುಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಸಿಗುವ ಗೌರವ, ಮನ್ನಣೆಯನ್ನು ಗಮನಿಸಿದರೆ ಈ ವೃತ್ತಿ ಅತ್ಯಂತ ಆಕರ್ಷಣೀಯ.

ಪಿಯುಸಿ ನಂತರ ಎನ್‌ಡಿಎ ಪರೀಕ್ಷೆ ಅಥವಾ ಟೆಕ್ನಿಕಲ್ ಎಂಟ್ರಿ ಸ್ಕೀಮ್  ಮುಖಾಂತರ ರಕ್ಷಣಾ ಪಡೆಯನ್ನು ಸೇರಬಹುದು.  ನೀವು ಪದವಿಯ ಅಂತಿಮ ವರ್ಷದಲ್ಲಿರುವುದರಿಂದ  ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಸಿಡಿಎಸ್) ಪರೀಕ್ಷೆಯ ಮುಖಾಂತರ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಸೇರಿ ನಾನ್-ಟೆಕ್ನಿಕಲ್ ಹುದ್ದೆಗಳನ್ನು ಅರಸಬಹುದು.  ಹಾಗೂ, ಭಾರತೀಯ ವಾಯುಸೇನೆಯ ಹುದ್ದೆಗಳಿಗೆ ಏರ್ ಫೋರ್ಸ್ ಕಂಬೈನ್ಡ್ ಅಡ್ಮಿಷನ್ ಟೆಸ್ಟ್ (ಎಎಫ್‌ಸಿಎಟಿ) ಮುಖಾಂತರ ಪ್ರಯತ್ನಿಸಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ:https://indianarmy.nic.in/home, https://afcat.cdac.in/AFCAT/CareerAsPerQualification.html

Q2. ನಾನು ಇಂಗ್ಲಿಷ್ ಎಂಎ ಮುಗಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮಾಡಿರುತ್ತೇನೆ. ಬೆಂಗಳೂರಿನಲ್ಲಿ ಒಂದು ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ವಿದೇಶದಲ್ಲಿ ಪೋಸ್ಟ್ ಡಾಕ್ಟರೇಟ್ ಮಾಡಲು ಆಸೆ ಹಾಗೂ ಅಲ್ಲಿಯೇ ಉದ್ಯೋಗ ಪಡೆಯಬೇಕೆಂದು ಬಯಸುತ್ತೇನೆ. ಯಾವ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅವಕಾಶಗಳ ಸಿಗುತ್ತವೆ?

ನೀವು ನೀಡಿರುವ ಇಷ್ಟೇ ಮಾಹಿತಿಯನ್ನು ಗಮನಿಸಿ  ಸಮಂಜಸವಾದ ಸಲಹೆ ನೀಡಲಾಗುವುದಿಲ್ಲ. ಆದರೂ, ವಿದೇಶಿ ವಿಶ್ವವಿದ್ಯಾಲಯಗಳಲ್ಲಿನ ಅವಕಾಶಗಳನ್ನು ಮತ್ತು ನೀವು ಪೋಸ್ಟ್ ಡಾಕ್ಟರೇಟ್ ಸಂಶೋಧನೆಯ ವಿಷಯವನ್ನು  ಗಮನಿಸಿ ಸೂಕ್ತವಾದ ವಿಶ್ವವಿದ್ಯಾಲಯದ ಆಯ್ಕೆ ಮಾಡಬೇಕು. ಯುಎಸ್‌ಎ, ಯುಕೆ, ಆಸ್ಟೆçÃಲಿಯ ಮತ್ತು ನ್ಯೂಜಿಲೆಂಡ್ ವಿಶ್ವವಿದ್ಯಾಲಯಗಳ ಅವಕಾಶಗಳನ್ನು ಪರಿಶೀಲಿಸಿ. ಪ್ರಮುಖವಾಗಿ, ವಿಷಯದ ಪ್ರಸ್ತುತತೆ ಕುರಿತು ನಿಮ್ಮ ಪಿಎಚ್‌ಡಿ ಮಾರ್ಗದರ್ಶಕರ ಅಭಿಪ್ರಾಯ ಹಾಗೂ ಮಾರ್ಗದರ್ಶನ ಉಪಯುಕ್ತ. 2022-23ನೇ ಸಾಲಿನ ಫುಲ್ ಬ್ರೆöÊಟ್ ಸ್ಕಾಲರ್‌ಶಿಪ್‌ಗೂ ನೀವು ಪ್ರಯತ್ನಿಸಬಹುದು. ಹೆಚ್ಚಿನ ವಿವರಗಳಿಗಾಗಿ, ಗಮನಿಸಿ: https://www.usief.org.in/Fulbright-Nehru-Postdoctoral-Research-Fellowship.aspx

Q3. ನಾನು ಎಂಎ (ಇಂಗ್ಲೀಷ್) ಮುಗಿಸಿದ್ದೇನೆ. ಆದರೆ, ಮುಂದೇನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.

ನೀವು ನೀಡಿರುವ ಮಾಹಿತಿಯ ಪ್ರಕಾರ ವೃತ್ತಿಯ ಯೋಜನೆಯಂತೆ ಕೋರ್ಸ್ ಮಾಡಿದ್ದೀರಾ ತಿಳಿಯದು. ಇಲ್ಲದಿದ್ದರೆ, ಇಂತಹ ಗೊಂದಲಗಳು ಸ್ವಾಭಾವಿಕ. ಎಂಎ ನಂತರ ಆಸಕ್ತಿಯಿದ್ದರೆ ಪಿಎಚ್‌ಡಿ ಮಾಡಿ ಅಥವಾ ಅದಕ್ಕೂ ಮುಂಚಿತವಾಗಿ ಶಿಕ್ಷಕ ವೃತ್ತಿಯನ್ನು ಅರಸಬಹುದು. ಭಾಷೆಯ ತಜ್ಞತೆಯಿದ್ದರೆ ಮನೆಯಿಂದಲೇ ಮಾಡಬಹುದಾದ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಇತ್ಯಾದಿ ಅವಕಾಶಗಳಿವೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ವೃತ್ತಿಗಳನ್ನೂ ಅರಸಬಹುದು. ನಿಮ್ಮ ಸಾಮರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ.

Q4. ಸರ್, ನಾನು ಡಿಪ್ಲೊಮಾ ಮುಗಿಸಿದ್ದೇನೆ. ನನಗೆ ಪೊಲೀಸ್ ಆಗಬೇಕು ಅಂತ ಆಸೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ಇದೆಯಾ? ಹಾಗೇ, ನಾವು ಬಡವರು; ಪರೀಕ್ಷೆಗೆ ಮನೆಯಲ್ಲಿ ಕೂತು ಓದಬಹುದಾ ಅಥವಾ ಕೋಚಿಂಗ್ ಅನಿವಾರ್ಯವೇ? ಮಾರ್ಗದರ್ಶನ ನೀಡಿ ಸರ್.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ನಿಭಾಯಿಸಬಹುದು ಎನ್ನುವ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ, ಕೋಚಿಂಗ್ ಸೆಂಟರ್ ಅವಶ್ಯಕತೆಯಿಲ್ಲ. ಅನೇಕ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ತಯಾರಾಗಿ ಯಶಸ್ವಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಪರೀಕ್ಷೆಗೆ ಹೇಗೆ ಓದಬೇಕು ಎನ್ನುವುದನ್ನು ಆಗಸ್ಟ್ ತಿಂಗಳ 23ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಕರ್ನಾಟಕ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತು ವಿಷಯಸೂಚಿಗೆ  ಗಮನಿಸಿ: https://prepp.in/karnataka-police-exam

Q5. ನಾನು ಈಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿವಿಲ್ ಎಂಜಿನಿಯರಿಂಗ್ ಮಾಡಿದ್ದೇನೆ. ತಿಂಗಳಿಗೆ 35 ಸಾವಿರ ಸಂಬಳ ಇದೆ. ಈಗ ನನಗೆ ಪಿಸಿ (ಪೊಲೀಸ್) ಕೆಲಸ ಸಿಕ್ಕಿದೆ. ಮಾಡುತ್ತಿರುವ ಕೆಲಸ ಮುಂದುವರೆಸುವುದೋ ಅಥವಾ ಪಿಸಿ ಕೆಲಸಕ್ಕೆ ಹೋಗುವುದೋ ಗೊಂದಲದಲ್ಲಿದ್ದೇನೆ. ಸಲಹೆ ನೀಡಿ ಸರ್.

ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ಆಯಾ ವೃತ್ತಿಗೆ ಅನುಗುಣವಾದ ಕೌಶಲಗಳ ಅಗತ್ಯವಿರುತ್ತದೆ. ಯಾವ ವೃತ್ತಿ ನಿಮಗೆ ಸೂಕ್ತ ಎಂದು ಗುರುತಿಸಲು ನಿಮ್ಮ ವ್ಯಕ್ತಿತ್ವ, ಆಸಕ್ತಿ ಮತ್ತು ವೃತ್ತಿಯ ಅವಶ್ಯಕತೆಗಳನ್ನು ಗಮನಿಸಬೇಕು. ನಿಮ್ಮ ಜೀವನದ ಗುರಿಯನ್ನು ಯೋಜನೆಯೆಂಬ ವಾಹನದ ಮೂಲಕವೇ ತಲುಪಲು ಸಾಧ್ಯ. ಹಾಗಾಗಿ, ಮೊದಲು ನಿಮ್ಮ ವೃತ್ತಿ ಮತ್ತು ಖಾಸಗಿ ಜೀವನದ ಕನಸುಗಳನ್ನು ಸಾಕಾರ ಪಡಿಸುವ ಯೋಜನೆಯನ್ನು ಮಾಡಿ, ನಿಮ್ಮ ಅಭಿರುಚಿಗೆ ಅನುಗುಣವಾದ ವೃತ್ತಿಯನ್ನೇ ಆರಿಸಿಕೊಳ್ಳಿ.

Q6. ನಾನು ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ವೆಟರ್ನರಿ ಕೋರ್ಸ್ ಮಾಡುವ ಆಸಕ್ತಿ ಇದೆ. ಈ ಕೋರ್ಸಿಗೆ  ವಯೋಮಿತಿ ತಿಳಿಸಿ.

ನಮಗಿರುವ ಮಾಹಿತಿಯಂತೆ ಕನಿಷ್ಠ 17 ವರ್ಷ ಮತ್ತು ಗರಿಷ್ಠ 25 ವರ್ಷದ ಮಿತಿಯಿರುತ್ತದೆ.

Q & A – 8th November, 2021

ಒಳ್ಳೆಯ ಕೆಲಸ ಎಂದರೆ ಯಾವುದು?

Q1. ಸರ್, ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಮುಂದೆ ಎಂಜಿನಿಯರಿಂಗ್ ತೆಗೆದುಕೊಳ್ಳುವುದು ಉತ್ತಮವೋ, ಬಿಎಸ್‌ಸಿ (ನರ್ಸಿಂಗ್) ಉತ್ತಮವೋ? ಒಳ್ಳೆಯ ಕೆಲಸ ಸಿಗಲು ಯಾವ ಕೋರ್ಸ್ ಮಾಡಬೇಕು?

ನಿಮ್ಮ ಜೀವನದಲ್ಲಿ ಸಂತೃಪ್ತಿಯನ್ನು ನೀಡುವ ಕೆಲಸವನ್ನು ಒಳ್ಳೆಯ ಕೆಲಸವೆಂದು ಹೇಳಬಹುದು. ವೈಯಕ್ತಿಕ ಜೀವನ ಸುಖಕರವಾಗಿರಬೇಕಾದರೆ, ನೀವು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬೇಕು; ಆಗಲೇ ಜೀವನದ ಎಲ್ಲಾ ಸಂಪತ್ತು, ಸಂತೃಪ್ತಿ ನಿಮ್ಮದಾಗಬಲ್ಲದು.  ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಕೌಶಲಗಳಿಗೂ ಸರಿಹೊಂದುವಂತ, ನಿಮ್ಮ ಇಷ್ಟ, ಅಭಿರುಚಿಗೆ ಸ್ಪಂದಿಸುವಂತ, ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ. ಏಕೆಂದರೆ, ಒಲವಿಲ್ಲದ ವೃತ್ತಿ ನೀರಸಮಯ; ಅಂತಹ ವೃತ್ತಿಯಲ್ಲಿ ಯಶಸ್ಸು ಅಸಾಧ್ಯ.

ಬೌದ್ದಿಕ ಶಿಕ್ಷಣದಿಂದ ಹೆಚ್ಚಿನ ವೇತನದ ಕೆಲಸಗಳು ಸಿಗಬಹುದು; ಸಂತೃಪ್ತಿಯ ಜೀವನವಲ್ಲ. ಹೆಚ್ಚಿನ ವೇತನ, ಸವಲತ್ತುಗಳಿದ್ದರೂ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವಿಲ್ಲದೆ, ಪರಸ್ಪರ ಭಿನ್ನಾಭಿಪ್ರಾಯ, ಮನಸ್ತಾಪಗಳಿಂದ, ಖಿನ್ನತೆಯಿಂದ ಬಳಲುತ್ತಿರುವ ಸಂಸಾರಗಳನ್ನು ನಾವು ನೋಡಬಹುದು.

ಜೀವನದಲ್ಲಿ ಕನಸುಗಳಿರಬೇಕು; ಕನಸುಗಳು ಮಹತ್ವಾಕಾಂಕ್ಷೆಯಾಗಬೇಕು. ಅದರಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು.

Q2. ಸರ್, 2021ರಲ್ಲಿ ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಬಿಎಸ್‌ಸಿ (ನರ್ಸಿಂಗ್)ಗೆ ಸೇರಬೇಕು ಅಂತ ಇದ್ದೇನೆ. ಪ್ರವೇಶ ಪ್ರಕ್ರಿಯೆ, ಸರ್ಕಾರದ ಸೀಟು ಗಿಟ್ಟಿಸಿಕೊಳ್ಳುವುದು ಹೇಗೆ?

ಬಿಎಸ್‌ಸಿ ನರ್ಸಿಂಗ್ ಕೋರ್ಸಿಗೆ ಪಿಯುಸಿ ಫಲಿತಾಂಶದ ಆಧಾರದ ಮೇಲೆ ಪ್ರವೇಶದ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ, ಡೈರೆಕ್ಟೊರೇಟ್ ಅಫ್ ಮೆಡಿಕಲ್ ಎಜುಕೇಷನ್ ಜಾಲತಾಣವನ್ನು ಪರಾಮರ್ಶಿಸಿ.

Q3. ನಾನು ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮುಂದೆ ನಾನು ಪಿಎಸ್‌ಐ ಆಗಬೇಕು ಅಂತ ಸತತವಾಗಿ ಅಭ್ಯಾಸ ಮಾಡುತ್ತಿದ್ದು 3 ಬಾರಿ ಪ್ರಯತ್ನಿಸಿದರೂ ಸಫಲತೆ ಸಿಕ್ಕಿಲ್ಲ. ಯಾವುದೇ ಕೋಚಿಂಗ್ ತೆಗೆದುಕೊಂಡಿಲ್ಲ. ಈ ಮೊದಲು ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು ಸಿಕ್ಕಿದೆ. ಪಿಎಸ್‌ಐ ದ್ವಿತೀಯ ಪೇಪರ್ ಪರೀಕ್ಷೆಯಲ್ಲಿ 5-10 ಅಂಕದಲ್ಲಿ ವೈಫಲ್ಯವಾಗುತ್ತಿದೆ. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನೂ ಬಿಡಿಸಿದ್ದೇನೆ, ನನ್ನ ವಿಫಲತೆಗೆ ಕಾರಣಗಳನ್ನು ತಿಳಿದು ವಿಷಯಗಳನ್ನು ಚೆನ್ನಾಗಿ ಓದಿದರೂ ಸಾಧ್ಯವಾಗುತ್ತಿಲ್ಲ.

Q4. ನಾನು ಪದವಿ ಮುಗಿಸಿ ಎರಡು ವರ್ಷ ಆಗಿದೆ. ಪೊಲೀಸ್ ಆಗಬೇಕು ಅನ್ನೋ ಕನಸು ತುಂಬಾ ಇದೆ. ಅದಕ್ಕೆ ಸಿದ್ದತೆಯನ್ನೂ ನಡೆಸುತ್ತಿದ್ದೇನೆ. ಆದರೂ, ಯಾವ ಪರೀಕ್ಷೆ ಬರೆದರೂ 50 ಅಂಕದ ಮೇಲೆ ಹೋಗುತ್ತಿಲ್ಲ; ಆತ್ಮವಿಶ್ವಾಸ ಕುಗ್ಗುತ್ತಾ ಇದೆ. ನನ್ನನ್ನು ನಂಬಿ ನನ್ನ ಕುಟುಂಬ ಇದೆ.  ಹೇಗೆ ತಯಾರಿ ನಡೆಸಬೇಕು?

ಅಭ್ಯರ್ಥಿಗಳಿಗೆ ಸರಿಯಾದ ಉದ್ಯೋಗ ಸಿಗುವುದು ಎಷ್ಟು ಕಷ್ಟವೋ ಸಂಸ್ಥೆಗಳಿಗೆ ಕೌಶಲಯುಕ್ತ ಅಭ್ಯರ್ಥಿಗಳು ಸಿಗುವುದೂ ಸಹ ಅಷ್ಟೇ ಕಷ್ಟ! ಕೌಶಲವೆಂದರೆ, ಅಪೇಕ್ಷಿತ ಅಥವಾ ಪೂರ್ವನಿರ್ಧಾರಿತ ಮಾನದಂಡದAತೆ ವೃತ್ತಿಯ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸಾಮರ್ಥ್ಯ. ಆದ್ದರಿಂದಲೇ, ವೃತ್ತಿಯಲ್ಲಿ ಯಶಸ್ವಿಯಾಗಲು ಅಭ್ಯರ್ಥಿಗಳಿಗೆ ಅರ್ಹತೆ ಮತ್ತು ಯೋಗ್ಯತೆಯಿದೆಯೇ ಎಂದು ಗುರುತಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ  ಪರೀಕ್ಷೆಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಹಾಗಾಗಿ, ಪೊಲೀಸ್ ವೃತ್ತಿಗೆ ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳಿವೇ ಎಂದು ನಿಮಗೂ ಖಾತರಿಯಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಓದಬೇಕು ಎನ್ನುವುದನ್ನು ಆಗಸ್ಟ್ ತಿಂಗಳ 23ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ.  ದಯವಿಟ್ಟು ಓದಿಕೊಳ್ಳಿ. ಹಾಗೂ, ಹಿಂದಿನ ಪರೀಕ್ಷೆಗಳಲ್ಲಿನ ವಿಫಲತೆಯ ಕಾರಣಗಳನ್ನು ಅವಲೋಕಿಸಿ ಮುಂದಿನ ಪರೀಕ್ಷೆಯಲ್ಲಿ ಸೂಕ್ತವಾಗಿ ಬರೆಯುವ ತಂತ್ರಗಾರಿಕೆಯನ್ನು ಯೋಜಿಸಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ಆತ್ಮವಿಶ್ವಾಸವನ್ನು ಬೆಳೆಸುವ ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು.

Q5. ನಾನು ಪ್ರಸ್ತುತ ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಧ್ಯಯನ ಮಾಡುತಿದ್ದು, ಎನ್‌ಆರ್‌ಎ   (ನ್ಯಾಷನಲ್ ರೆಕ್ರೂಟ್ಮೆಂಟ್ ಏಜೆನ್ಸಿ) ಬಗ್ಗೆ ಹಲವಾರು ಗೊಂದಲಗಳಿದ್ದು ದಯವಿಟ್ಟು ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕೊಡಿ.

ಎನ್‌ಆರ್‌ಎ ಸ್ಥಾಪಿಸುವ ಮೊದಲು, ಭಾರತೀಯ ರೈಲ್ವೆ, ಇತರ ಇಲಾಖೆಗಳು, ಸಚಿವಾಲಯಗಳು, ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಸರ್ಕಾರಿ ಸೇವೆಗಳ ಅಡಿಯಲ್ಲಿ ಗ್ರೂಪ್ ಬಿ., ಗ್ರೂಪ್ ಸಿ ಮತ್ತು ಗ್ರೂಪ್ ಡಿ (ನಾನ್-ಗೆಜೆಟೆಡ್) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮಾಡಲಾಗುತ್ತಿತ್ತು. ಹೆಚ್ಚಿನ ಹುದ್ದೆಗಳಿಗೆ ಒಂದೇ ರೀತಿಯ ಅರ್ಹತೆಯ ಅಗತ್ಯವನ್ನು ಮನಗಂಡು ಎನ್‌ಆರ್‌ಎ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದರಿಂದ ಸರ್ಕಾರಿ ಸಂಸ್ಥೆಗಳ ಬಹುತೇಕ ಹುದ್ದೆಗಳನ್ನು ಅರಸುವ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷೆಯ ಸೌಲಭ್ಯ ದೊರಕಲಿದೆ.

ಎನ್‌ಆರ್‌ಎ ನಿರ್ವಹಿಸುವ ಮೊದಲ ಸಿಇಟಿ ಪರೀಕ್ಷೆ 2022ರಲ್ಲಿ ನಡೆಯುವ ನಿರೀಕ್ಷೆಯಿದೆ.

Q6. ಸರ್, ನಾನು ಬಿಎನ್‌ವೈಎಸ್‌ನ ಇಂಟರ್ನ್‍ಶಿಪ್ ಮಾಡುತ್ತಿರುವೆ. ಮುಂದೆ, ನಾನು ಸ್ನಾತಕೋತ್ತರ ಪದವಿ ಮಾಡಿದರೆ ಉತ್ತಮವೇ ಅಥವಾ ಸರ್ಕಾರಿ ಕೆಲಸದ ಅವಕಾಶಗಳಿವೆಯೇ (ಕರ್ನಾಟಕದಲ್ಲಿ) ಹಾಗೂ ಖಾಸಗಿ ಕೆಲಸದ ಲಭ್ಯತೆ ಬಗ್ಗೆ ದಯಮಾಡಿ ತಿಳಿಸಿಕೂಡಿ.

ಇAದು ಅತ್ಯಂತ ಹೆಚ್ಚಿನ ಬೇಡಿಕೆಯಲ್ಲಿರುವ, ಆರೋಗ್ಯ ಅಥವಾ ಸ್ವಾಸ್ಥಕ್ಕೆ ಸಂಬಂಧಿಸಿದ  ವಲಯದಲ್ಲಿ ನೀವು ಪದವಿ ಶಿಕ್ಷಣವನ್ನು ಮುಗಿಸುವ ಹಂತದಲ್ಲಿದ್ದೀರಿ. ಇದಲ್ಲದೆ, ನ್ಯಾಚುರೋಪತಿ ಮತ್ತು ಯೋಗದ ಅಭ್ಯಾಸದಿಂದ ಆರೋಗ್ಯದ ಮೇಲಾಗುವ ಸಕಾರಾತ್ಮಕ ಪರಿಣಾಮಗಳ ಅರಿವು ಪ್ರಪಂಚಾದಾದ್ಯAತ ಇದೆ.

ಅತ್ಯಂತ ತ್ವರಿತವಾದ ಗತಿಯಲ್ಲಿ ಅಭಿವೃದ್ಧಿಯಾಗುತ್ತಿರೋ ಈ ಕ್ಷೇತ್ರದಲ್ಲಿ ನೀವು ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಕೆಲಸಕ್ಕೆ ಸೇರಬಹುದು. ಹಲವಾರು ವರ್ಷಗಳ ಅನುಭವದ ನಂತರ ಖುದ್ದಾಗಿ ಪ್ರಾಕ್ಟೀಸ್ ಮಾಡಬಹುದು. ಇದಲ್ಲದೆ, ಸಂಶೋಧನಾ ಸಂಸ್ಥೆಗಳು, ಯೋಗ ತರಬೇತಿ ಸಂಸ್ಥೆಗಳು, ಆಯುಷ್ ಸಚಿವಾಲಯ ಇತ್ಯಾದಿಗಳಲ್ಲಿಯೂ ವೃತ್ತಿಯನ್ನು ಅರಸುವ ಅವಕಾಶಗಳಿವೆ. ನಿಮ್ಮ ವೃತ್ತಿಜೀವನದ ಯೋಜನೆಯಂತೆ ಉನ್ನತ ಶಿಕ್ಷಣದ ಅಗತ್ಯವಿದೆಯೇ ಎಂದು ಪರಿಶೀಲಿಸಿ.

Q & A – 15th November, 2021

ಎಂಬಿಎ ನಂತರ ಮುಂದೇನು?

Q1. ಬಿಕಾಂ ಮಾಡಿ, ಎಂಬಿಎ ಮಾಡಿದ್ದೇನೆ. ಮುಂದೇನು ಮಾಡಬೇಕೆನ್ನುವ ಗೊಂದಲದಲ್ಲಿದ್ದೇನೆ. ನಿಮ್ಮ ಸಲಹೆ ನೀಡಿ – ನಿಖಿಲ್, ಊರು ತಿಳಿಸಿಲ್ಲ

ಒಂದು ಉದ್ಯಮದ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳುವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತ್ರ, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ-ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಹಾಗೂ, ಎಂಬಿಎ ಕೋರ್ಸಿನಲ್ಲಿ ಕಲಿಸುವ ತತ್ವಗಳು, ಸೂತ್ರಗಳು ವೈಯಕ್ತಿಕ ಜೀವನದಲ್ಲೂ ಉಪಯುಕ್ತ.

ಎಂಬಿಎ ಕೋರ್ಸ್ ನಂತರ ಆಕರ್ಷಕ ಅವಕಾಶಗಳಿವೆ. ಬ್ಯಾಂಕಿAಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಸ್ಯೂರೆನ್ಸ್,  ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಇನ್ನೂ ಹೆಚ್ಚಿನ ತಜ್ಞತೆಯ ಅಗತ್ಯವಿದ್ದರೆ, ಪಿಎಚ್‌ಡಿ ಕೂಡಾ ಮಾಡಬಹುದು.

Q2. ನಾನು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ. ಭಾರತೀಯ ಸೇನೆಗೆ ಸೇರಬೇಕು ಎಂಬ ಆಸೆ ಇದೆ. ಹೇಗೆ ಸೇರಬೇಕೆಂದು ತಿಳಿಸಿ – ಸಂತೋಷ ಟಿ, ಊರು ತಿಳಿಸಿಲ್ಲ.

ನೀವು ಪದವಿಯ ಅಂತಿಮ ವರ್ಷದಲ್ಲಿರುವುದರಿಂದ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (ಸಿಡಿಎಸ್) ಪರೀಕ್ಷೆಯ ಮುಖಾಂತರ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಸೇರಿ ನಾನ್-ಟೆಕ್ನಿಕಲ್ ಹುದ್ದೆಗಳನ್ನು ಅರಸಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: https://indianarmy.nic.in/home

Q3. ನಾನು ಬಿಫಾರ್ಮಾ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ. ಓದಿದ ನಂತರ ನೌಕರಿಯ ಅವಕಾಶಗಳೇನು? ನನಗೆ ಫಾರ್ಮ್ ಡಿ ಮಾಡುವ ಬಯಕೆಯಿದೆ. ಇದನ್ನು ನಾನು ಮಾಡಬಹುದೇ? ಅಥವಾ ಎಂಫಾರ್ಮಾ ಮಾಡಲೇಬೇಕೇ? ಒಂದು ವೇಳೆ ಎಂಫಾರ್ಮಾ ಮಾಡಿದರೆ ನೌಕರಿಯ ಅವಕಾಶಗಳು ಹೇಗೆ? – ತೇಜು ತಾಪನ್, ಬೆಂಗಳೂರು

ಬಿಫಾರ್ಮಾ ಪದವಿಯ ನಂತರ ನೇರವಾಗಿ ಮೂರು ವರ್ಷದ ಡಾಕ್ಟರ್ ಅಫ್ ಫಾರ್ಮಸಿ ಕೋರ್ಸ್(ಫಾರ್ಮ್ ಡಿ) ಅಥವಾ ಎರಡು ವರ್ಷದ ಎಂಫಾರ್ಮಾ ಕೋರ್ಸ್ ಮಾಡಬಹುದು. ಈ ಎರಡೂ ಕೋರ್ಸ್ಗಳಿಗೂ ವೃತ್ತಿಯ ಅನೇಕ ಅವಕಾಶಗಳಿವೆ. ಹೆಚ್ಚಿನ ವಿವರಗಳಿಗೆ ಗಮನಿಸಿ:

https://www.pharmdinfo.com/pharm-d-course-f124/topic1704.html

Q4. ನಾನು 2015ರಲ್ಲಿ ಆರ್ಟ್ಸ್ ಪದವಿ ಮುಗಿಸಿದ್ದೇನೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಓದು ಮೋಟಕುಗೊಳಿಸಿದೆ. ನನಗೀಗ 28 ವರ್ಷ. ನನ್ನ ಗುರಿ ಪೊಲೀಸ್ ಅಧಿಕಾರಿ ಆಗಬೇಕು ಎನ್ನುವುದು. ನಿಮ್ಮ ಸಲಹೆ ಏನು? – ದುರುಗೇಶ್ ಪಿ. ಪಾಟೀಲ್, ಊರು ತಿಳಿಸಿಲ್ಲ

ನಮಗಿರುವ ಮಾಹಿತಿಯಂತೆ ಪಿಎಸ್‌ಐ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 25 ವರ್ಷದ ಹಾಗೂ ಇನ್ನಿತರ ವರ್ಗಗಳಾದರೆ 27 ವರ್ಷದ ಗರಿಷ್ಠ ಮಿತಿಯಿದೆ. ಆದರೆ, ಪೊಲೀಸ್ ಅಧಿಕಾರಿಯಾಗುವುದೇ ನಿಮ್ಮ ಗುರಿ ಎನ್ನುವುದಾದರೆ ಯುಪಿಎಸ್‌ಸಿ ಮುಖಾಂತರ ಐಪಿಎಸ್ ಅಧಿಕಾರಿಯಾಗಲು ಪ್ರಯತ್ನಿಸಬಹುದು.

Q5. ನಾನು ಬಿಎಸ್‌ಸಿ ಪದವಿ ಮುಗಿಸಿದ್ದೇನೆ. ಮುಂದೆ ಎಂಎಸ್‌ಸಿ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ ನಾನು ಪಿಜಿಸಿಇಟಿಗೆ ಅರ್ಜಿ ಸಲ್ಲಿಸಿಲ್ಲ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ – ಶೈಲಜಾ, ಬೆಂಗಳೂರು.

ಬಿಎಸ್‌ಸಿ ಪದವಿಯ ಆಧಾರದ ಮೇಲೆ ನೇರವಾಗಿ ಅಥವಾ ಕೆಲವೊಮ್ಮೆ ಪರೀಕ್ಷೆಗಳ ಮೂಲಕ ಎಂಎಸ್‌ಸಿ ಕೋರ್ಸಿಗೆ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶದ ಅವಕಾಶವಿದೆ. ಈ ವರ್ಷದ ಪ್ರಕ್ರಿಯೆ ಇದೀಗ ಶುರುವಾಗುತ್ತಿದೆ. ಹಾಗಾಗಿ, ಈಗಲೂ ನೀವು ಎಂಎಸ್‌ಸಿಗೆ ಪ್ರಯತ್ನಿಸಬಹುದು.

Q6. ನಾನು ಪಿಯುಸಿ (ಪಿಸಿಎಂಬಿ) ಮುಗಿಸಿ ನೀಟ್ ಪರೀಕ್ಷೆ ಬರೆದಿದ್ದೇನೆ. ಎಂಬಿಬಿಎಸ್ ಓದಲು ಸರ್ಕಾರಿ ಸೀಟು ಸಿಗಲು ಕೆಲವು ಅಂಕಗಳು ಕಡಿಮೆಯಿದೆ. ಬಿಎಎಂಸ್ ಮಾಡಿದರೆ ಒಳ್ಳೆಯದೋ ಅಥವಾ ಬಿಡಿಎಸ್ ಮಾಡಿದರೆ ಒಳ್ಳೆಯದೋ? ಮುಂದೆ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು? – ಹೆಸರು, ಊರು ತಿಳಿಸಿಲ್ಲ.

ಈ ವರ್ಷ ಎಂಬಿಬಿಎಸ್ ಅಥವಾ ಬಿಡಿಎಸ್ ಕೋರ್ಸ್ ಸೇರಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ಮತ್ತು ಎಂಬಿಬಿಎಸ್ ಕೋರ್ಸನ್ನೇ ಮಾಡುವ ಗುರಿಯಿದ್ದರೆ, ಅಲ್ಪ ವಿರಾಮವನ್ನು ತೆಗೆದುಕೊಂಡು ಪರಿಪೂರ್ಣ ತಯಾರಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಯತ್ನಿಸಬಹುದು. ಪ್ರಮುಖವಾಗಿ, ನಿಮ್ಮ ವೃತ್ತಿ ಯೋಜನೆಯಂತೆ ಕೋರ್ಸ್ ನಿರ್ಧಾರ ಮಾಡುವುದು ಸೂಕ್ತ.

Q7. ನಾನು ಬಿಎಸ್‌ಸಿಯನ್ನು (ಪಿಎಂಸಿಎಸ್) 2021ರಲ್ಲಿ ಮುಗಿಸಿದ್ದೀನಿ. ನನಗೆ ಭೌತಶಾಸ್ತç ಅಥವಾ ಗಣಿತದಲ್ಲಿ ಸ್ನಾತಕೋತ್ತರ ಪದವಿ ಮಾಡಲಿಷ್ಟವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಆಸಕ್ತಿ ಇಲ್ಲ. ಹಾಗಾಗಿ, ಎಂಬಿಎ ಮಾಡಬೇಕು ಎಂದುಕೊAಡಿದ್ದೇನೆ. ಈ ನಿರ್ಧಾರ ಸರಿಯೇ? – ಹೆಸರು, ಊರು ತಿಳಿಸಿಲ್ಲ.

ಬಿಎಸ್‌ಸಿ ನಂತರ ಎಂಎಸ್‌ಸಿ (ಕಂಪ್ಯೂಟರ್ ಸೈನ್ಸ್), ಎಂಸಿಎ ಅಥವಾ ಎಂಬಿಎ ಮಾಡಬಹುದು. ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿಯ ಆಧಾರದ ಮೇಲೆ ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಒಳ್ಳೆಯದು.

Q8. ನಾನು ಪಿಯುಸಿ (ವಿಜ್ಞಾನ) ಮುಗಿಸಿ ಬಿಎಸ್‌ಸಿ (ಅನಸ್ಥೇಶಿಯಾ) ಸೇರಬೇಕೆಂದುಕೊAಡಿದ್ದೇನೆ. ಪ್ರವೇಶ ಪ್ರಕ್ರಿಯೆ, ಸರ್ಕಾರದ ಸೀಟು ಗಿಟ್ಟಿಸಿಕೊಳ್ಳುವುದು ಹೇಗೆ? ಮುಂದೇನು ಮಾಡುವುದೆಂದು ಗೊತ್ತಾಗುತಿಲ್ಲ – ಮೇಘನಾ ಅಶ್ವತ್, ಊರು ತಿಳಿಸಿಲ್ಲ

ಬಿಎಸ್‌ಸಿ (ಅನಸ್ಥೇಶಿಯಾ) ಕೋರ್ಸ್ ಪ್ರಕ್ರಿಯೆ ಇತ್ಯಾದಿ ಕುರಿತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.rguhs.ac.in/

Q & A – 22nd November, 2021

ಪಿಎಚ್‌ಡಿ ಮಾಡುವುದು ಹೇಗೆ?

Q1. ನಾನು ಎಂಬಿಎ (ಎಚ್‌ಆರ್ ಮತ್ತು ಫೈನಾನ್ಸ್) ಮುಗಿಸಿದ್ದೇನೆ. ಪಿಎಚ್‌ಡಿ ಮಾಡಬೇಕು ಎಂದುಕೊಂಡಿದ್ದೇನೆ. ಪಿಎಚ್‌ಡಿ ಪ್ರಕ್ರಿಯೆ ಹೇಗೆ? ಅರ್ಹತೆ ಏನು? ದಯವಿಟ್ಟು ತಿಳಿಸಿ – ಚಂದನ್ ಕೆ., ಶಿವಮೊಗ್ಗ

ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 55% ಅಂಕಗಳು ಅಥವಾ ಪಿಎಚ್‌ಡಿ ಮಾಡುವ ವಿಶ್ವವಿದ್ಯಾಲಯದ ನಿಯಮದಂತಿರಬೇಕು. ನೀವು ಪಿಎಚ್‌ಡಿ ಮಾಡುವ ಕ್ಷೇತ್ರ (ಎಚ್‌ಆರ್, ಫೈನಾನ್ಸ್, ಮ್ಯಾನೇಜ್‌ಮೆಂಟ್ ಇತ್ಯಾದಿ) ಮತ್ತು ಸಂಶೋಧನಾ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಕಲ್ಪನೆಯಿರಬೇಕು. ಪಿಎಚ್‌ಡಿ ಮಾಡಲು ಬಯಸುವ ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಕೆಲವು ವಿಶ್ವವಿದ್ಯಾಲಯಗಳು ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ಸಂಶೋಧನಾ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸೂಚಿಸುತ್ತವೆ.

ಪಿಎಚ್‌ಡಿ ಕೋರ್ಸ್ ಅರ್ಜಿಯ ಪರಿಶೀಲನೆಯ ನಂತರ ಪ್ರವೇಶ ಪರೀಕ್ಷೆ ಮತ್ತು ಇನ್ನಿತರ ಪ್ರಕ್ರಿಯೆಗಳ ಮುಖಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸಂಶೋಧನೆಯಲ್ಲಿ ನಿಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಮಾರ್ಗದರ್ಶಕರನ್ನು ನಿಯೋಜಿಸಲಾಗುತ್ತದೆ. ಸಾಮಾನ್ಯವಾಗಿ, 3ರಿಂದ 5 ವರ್ಷಗಳಲ್ಲಿ ಪಿಎಚ್‌ಡಿ ಮುಗಿಸಬಹುದು.

Q2. ನಾನು ಎಂಕಾಂ ಮುಗಿಸಿದ್ದೇನೆ. ಎಸ್‌ಎಸ್‌ಸಿ ನೇಮಕಾತಿ ಮಾಡುವ ಅಕೌಂಟೆಂಟ್ ಮತ್ತು ಆಡಿಟ್ ಹುದ್ದೆಗಳ ಮಾಹಿತಿ, ಪರೀಕ್ಷೆಯ ಪಠ್ಯಕ್ರಮ ಮತ್ತು ತಯಾರಿ ಹೇಗೆ ನಡೆಸಬೇಕು ಎಂದು ತಿಳಿಸಿ. – ಸುಭಾಷ್ ಪವಾರ, ಬೀದರ್

ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ನಡೆಸುವ ರಾಷ್ಟಿçÃಯ ಮಟ್ಟದ ಅತ್ಯಂತ ಜನಪ್ರಿಯ ಪರೀಕ್ಷೆಯ ಮಾದರಿ, ತಯಾರಿ ಮತ್ತು ಹೆಚ್ಚಿನ ವಿವರಗಳಿಗೆ ಗಮನಿಸಿ:

https://www.shiksha.com/exams/ssc-cgl-exam-preparation

Q3. ಅರಣ್ಯ ರಕ್ಷಕ ಹುದ್ದೆಗಳ ಲಿಖಿತ ಪರೀಕ್ಷೆಗೆ ಋಣಾತ್ಮಕ ಅಂಕಗಳು ಇರುತ್ತವೆಯೇ ಎಂಬುದನ್ನು ತಿಳಿಸಿ – ವಿಶ್ವನಾಥ್, ಊರು ತಿಳಿಸಿಲ್ಲ

ನಮಗಿರುವ ಮಾಹಿತಿಯಂತೆ ತಪ್ಪಾದ ಉತ್ತರಗಳಿಗೆ 0.25 ಋಣಾತ್ಮಕ ಅಂಕಗಳಿರುತ್ತದೆ.

Q4. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮುಗಿಸಿದ್ದೇನೆ. ಈಗ ನಾನು ಸೇನೆಗೆ ಸೇರಬೇಕು ಎಂದು ಬಯಸಿದ್ದೇನೆ. ಅದಕ್ಕಾಗಿ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಹೇಗೆ ಸೇರಬೇಕೆಂದು ದಯಮಾಡಿ ತಿಳಿಸಿ – ರಾಧಿಕಾ ಬಿ, ರಾಯಚೂರು

ರಕ್ಷಣಾ ಪಡೆಗೆ ಸೇರಿ ದೇಶಸೇವೆ ಮಾಡಬೇಕೆನ್ನುವ ನಿಮ್ಮ ಆಸೆ ಶ್ಲಾಘನೀಯ. ಪಿಯುಸಿ ನಂತರ ಎನ್‌ಡಿಎ ಪರೀಕ್ಷೆ ಅಥವಾ ಟೆಕ್ನಿಕಲ್ ಎಂಟ್ರಿ ಸ್ಕೀಮ್ ಮುಖಾಂತರ ರಕ್ಷಣಾ ಪಡೆಯನ್ನು ಸೇರಬಹುದು.

ಹೆಚ್ಚಿನ ವಿವರಗಳಿಗೆ ಗಮನಿಸಿ: https://indianarmy.nic.in/home

Q5. ಬಿಪಿಇಡಿ, ಎಂಪಿಇಡಿ ಮುಗಿಸಿದ್ದೇನೆ. ಮುಂದೇನು ಮಾಡಬಹುದು? – ಶಶಿಕುಮಾರ್, ಕೊಪ್ಪಳ.

ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ದೈಹಿಕ ಶಿಕ್ಷಣ ಅತ್ಯಗತ್ಯ. ಎಂಪಿಇಡಿ ನಂತರ ಶಾಲಾ ಕಾಲೇಜುಗಳು, ಜಿಮ್ ಮತ್ತು ಫಿಟ್‌ನೆಸ್ ಸಂಸ್ಥೆಗಳು, ಕ್ರೀಡೆ ಮತ್ತು ಸಂಬAಧಿತ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಎನ್‌ಜಿಒ ಸಂಸ್ಥೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಇನ್ನೂ ಹೆಚ್ಚಿನ ತಜ್ಞತೆಯ ಅಗತ್ಯವಿದ್ದರೆ, ಪಿಎಚ್‌ಡಿ ಕೂಡಾ ಮಾಡಬಹುದು.

Q6. ನಾನು ಪಿಯುಸಿ ಮುಗಿಸಿದ್ದೇನೆ. ಪೊಲೀಸ್ ಕಾನ್‌ಸ್ಟೇಬಲ್ ಆಗಲು ಇಚ್ಛಿಸಿದ್ದೇನೆ. ನನಗೆ ಸೂಕ್ತವಾದ ಸಲಹೆ ಮತ್ತು ಉತ್ತಮ ಪುಸ್ತಕಗಳನ್ನು ತಿಳಿಸಿ – ವೀರೇಶ್, ಕಲಬುರ್ಗಿ

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ, ದೈಹಿಕ ಮಾನದಂಡಗಳು ಮತ್ತು ವಿಷಯಸೂಚಿಗೆ ಗಮನಿಸಿ: https://prepp.in/karnataka-police-exam

Q7. ನಾನು ಬಿಎ ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಐಎಫ್‌ಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇದೆ. ನಾನು ಮುಂದೇನು ಮಾಡಬೇಕು? – ಹೆಸರು, ಊರು ತಿಳಿಸಿಲ್ಲ.

ಯಾವುದೇ ಪದವಿಯ ನಂತರ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಮುಖಾಂತರ ಐಎಫ್‌ಎಸ್ ಅಧಿಕಾರಿಯಾಗಬಹುದು. ನೀವು ಪದವಿ ಕೋರ್ಸಿನ ಅಂತಿಮ ವರ್ಷದಲ್ಲಿರುವುದರಿಂದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗವಹಿಸಬಹುದು.

Q8. ನಾನು ಈಗ ಬಿಕಾಂ ಮುಗಿಸಿದ್ದೆನೆ. ನನಗೆ ಮುಂದೆ ಓದಲು ತುಂಬಾ ಆಸೆ. ಆದರೆ, ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ಆದ್ದರಿಂದ ಮುಂದೆ ಓದಲು ಆಗುವುದಿಲ್ಲ. ಹಾಗಾಗಿ, ನಾನು ಮುಂದೆ ಯಾವ ತರಹದ ಕೆಲಸಕ್ಕೆ ಸೇರಬಹುದು? – ಹೆಸರು, ಊರು ತಿಳಿಸಿಲ್ಲ

ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ.

ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಅರಸಬಹುದು. ಜೊತೆಗೆ, ನಿಮ್ಮ ಆಸಕ್ತಿಯ ಅನುಸಾರ ದೂರ ಶಿಕ್ಷಣದ ಮುಖಾಂತರ ಎಂಬಿಎ ಮುಂತಾದ ಸ್ನಾತಕೋತ್ತರ ಕೋರ್ಸ್ಗಳನ್ನು ಮಾಡಬಹುದು. ಹಾಗಾಗಿ, ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ.

Q9. ನಾನು ಬಿಕಾಂ ಮಾಡಿ ಎಂಬಿಎ ಮಾಡಿದ್ದೇನೆ. ನನಗೆ ಬಿಎ ಓದುವ ಆಸಕ್ತಿ ಇದೆ. ರೆಗ್ಯುಲರ್ ಬಿಎ ಕೋರ್ಸೇ ಮಾಡಬೇಕು. ಹೇಗೆ ಮಾಡಬೇಕು ತಿಳಿಸಿ – ತ್ರಿವೇಣಿ, ಬೆಳಗಾವಿ

ಸಾಮಾನ್ಯವಾಗಿ ಪದವಿಯ ನಂತರ ಸ್ನಾತಕೋತ್ತರ ಕೋರ್ಸ್ಗಳನ್ನು ಮಾಡುವುದು ವಾಡಿಕೆ. ಎಂಬಿಎ ಕೋರ್ಸ್ ನಂತರ ವೃತ್ತಿಯ ಆಕರ್ಷಕ ಅವಕಾಶಗಳಿವೆ. ಹಾಗಾಗಿ, ಈ ಅವಕಾಶಗಳನ್ನು ಸದುಪಯೋಗಿಸಿಕೊಂಡು ದೂರ ಶಿಕ್ಷಣದ ಮುಖಾಂತರ ನಿಮಗಿಷ್ಟವಿರುವ ವಿಷಯದಲ್ಲಿ ಬಿಎ ಮಾಡಬಹುದು.

Q & A 29th November, 2021

ಪರಿಣಾಮಕಾರಿ ಓದುವಿಕೆ ಹೇಗೆ?

Q1. ನಾವು ದೈನಂದಿನ ಜೀವನದಲ್ಲಿ ಸಾಕಷ್ಟು ಓದುತ್ತಿರುತ್ತೇವೆ. ಓದಿದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ? – ಚೇತನ್ ಕಳ್ಳಿಮನಿ, ಮಹಾಲಿಂಗಪುರ.

ವಿದ್ಯೆಯೆಂದರೆ ಕೇವಲ ಓದು, ಬರಹ, ಪರೀಕ್ಷೆಗಳಷ್ಟೇ ಅಲ್ಲ; ವಿದ್ಯೆಯ ಮೂಲ ಉದ್ದೇಶ ಜ್ಞಾನಾರ್ಜನೆ. ಶಾಲಾಕಾಲೇಜುಗಳಲ್ಲಿ ಹೇಗೆ ಕಲಿಸುತ್ತಾರೆ ಎಂಬುದರ ಜೊತೆಗೆ ನೀವು ಹೇಗೆ ಕಲಿಯುತ್ತೀರ ಎಂಬುದು ಮುಖ್ಯ. ಅಧ್ಯಾಪಕರೊಂದಿಗೆ ದೈಹಿಕ ಭಾಷೆ, ನಿಲುವು, ಕಣ್ಣುಸಂಪರ್ಕ, ಮುಖಭಾವ ಮುಂತಾದ ಅಮೌಖಿಕ ಸಂವಹನದ ಸಂಜ್ಞೆಗಳಿAದ ಪ್ರತಿಕ್ರಿಯಿಸುತ್ತಾ, ಉಪನ್ಯಾಸವನ್ನು ಕೇಳುವ ಅಭ್ಯಾಸವಿರಲಿ. ಜೊತೆಗೆ, ನಿಮ್ಮ ಓದುವಿಕೆ ಪರಿಣಾಮಕಾರಿಯಾಗಿದ್ದರೆ, ಓದಿದ ವಿಷಯ ನೆನಪಿನಲ್ಲಿರುತ್ತದೆ. ಪರಿಣಾಮಕಾರಿ ಓದುವಿಕೆಗೆ ಈ ಕಾರ್ಯತಂತ್ರಗಳನ್ನು ಬಳಸಿ.

  • ಸಮೀಕ್ಷೆ: ಇದು, ನೀವು ಚಾರಣವನ್ನು ಪ್ರಾರಂಭಿಸುವ ಮೊದಲು ಬೆಟ್ಟದ ವೈಮಾನಿಕ ನೋಟವನ್ನು ಪಡೆಯುವಂತೆ. ಅಂದರೆ, ಆಳವಾದ ಓದುವಿಕೆಗೆ ಮೊದಲು ಓದುವ ವಸ್ತುವಿನ ಸಾರಾಂಶ/ಅಧ್ಯಾಯವನ್ನು ಅರ್ಥಮಾಡಿಕೊಳ್ಳುವುದು. ಸಮೀಕ್ಷೆಗಾಗಿ ಒಟ್ಟು ಸಮಯದ ಶೇ 10 ಬೇಕಾಗುತ್ತದೆ.
  • ಪ್ರಶ್ನಿಸುವಿಕೆ: ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದಲ್ಲಿನ ಒಳನೋಟವನ್ನು ಪಡೆದು ಕಲಿಕೆ ಪರಿಣಾಮಕಾರಿಯಾಗುತ್ತದೆ. ಪ್ರಶ್ನಿಸುವಿಕೆಗೆ ಒಟ್ಟು ಸಮಯದ ಶೇ 10 ಬೇಕಾಗುತ್ತದೆ.
  • ಓದುವಿಕೆ: ಈ ಪ್ರಕ್ರಿಯೆಯನ್ನು ಮತ್ತೆ ಚಾರಣಕ್ಕೆ ಹೋಲಿಸಬಹುದು; ಕಷ್ಟಕರವಾದ ವಿಷಯವನ್ನು ನಿಧಾನವಾಗಿಯೂ (ನಿಧಾನವಾಗಿ ಏರುವುದು), ತಿಳಿದಿರುವ ಅಥವಾ ಸುಲಭದ ವಿಷಯವನ್ನು ತ್ವರಿತವಾಗಿಯೂ (ತ್ವರಿತವಾಗಿ ಇಳಿಯುವುದು) ಮತ್ತು ಪ್ರಚೋದನಕಾರಿ, ವಾದ, ಪರಿಕಲ್ಪನಾ ವಿಷಯವನ್ನು ಎಚ್ಚರಿಕೆಯಿಂದ ಓದುವುದು (ಅಪಾಯವಿರುವಲ್ಲಿ ಎಚ್ಚರಿಕೆಯಿಂದ). ಈ ರೀತಿ ಓದುವುದಕ್ಕೆ ಒಟ್ಟು ಸಮಯದ ಶೇ 50 ಮೀಸಲಿಡಿ.
  • ಪುನರುಚ್ಛಾರಣೆ: ಓದಿದ ನಂತರ ಪುಸ್ತಕವನ್ನು ತೆಗೆದಿಟ್ಟು, ಮುಖ್ಯ ಅಂಶಗಳು ಮತ್ತು ಪ್ರಮುಖ ವಿವರಗಳನ್ನು ಪುನರುಚ್ಛರಿಸುವುದು ಅಥವಾ ಟಿಪ್ಪಣಿ ಬರೆಯುವುದು ಪರಿಣಾಮಕಾರಿ ಕಲಿಕೆಗೆ ಅಗತ್ಯ. ಇದಕ್ಕಾಗಿ, ಒಟ್ಟು ಸಮಯದ ಶೇ 20 ಮೀಸಲಿಡಿ.
  • ಪುನರಾವರ್ತನೆ: ಕೊನೆಯ ಹಂತದಲ್ಲಿ, ಮೊದಲ ನಾಲ್ಕು ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಬೇಕು. ಈ ಪ್ರಕ್ರಿಯೆಗೆ, ಒಟ್ಟು ಸಮಯದ ಶೇ 10 ಬೇಕಾಗುತ್ತದೆ. ಒಂದು ವೇಳೆ, ನಿಮ್ಮ ಕಲಿಕೆ ಅಸಮರ್ಪಕವೆನಿಸಿದರೆ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಓದುವ ಕಾರ್ಯತಂತ್ರಗಳ ಜೊತೆಗೆ, ಕಣ್ಣುಗಳಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿದೆ. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.vpradeepkumar.com/effective-learning/

Q2. ನಾನು ಬಿಎಸ್‌ಸಿ (ಸಿಬಿಝೆಡ್) 2021 ರಲ್ಲಿ ಮುಗಿಸಿದ್ದೇನೆ. ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂದು ಬಯಸಿದ್ದೇನೆ. ಈ ಕ್ಷೇತ್ರದ ಉದ್ಯೋಗಾವಕಾಶಗಳೇನು?

ನೀವು ಮಾಡಲು ಬಯಸುತ್ತಿರುವ ಸ್ನಾತಕೋತ್ತರ ಪದವಿಯ ನಂತರ ಪರಿಸರ ವಿಜ್ಞಾನಿ, ಪರಿಸರ ಎಂಜಿನಿಯರ್, ಪರಿಸರ ಜೀವಶಾಸ್ತ್ರಜ್ಞ, ಪರಿಸರ ಪತ್ರಕರ್ತ ಇತ್ಯಾದಿ ವೃತ್ತಿಗಳ ಅವಕಾಶಗಳಿವೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಗಣಿಗಳು, ಪರಮಾಣು ಘಟಕಗಳು, ರಸಗೊಬ್ಬರ ಸ್ಥಾವರಗಳು, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ ಉದ್ದಿಮೆಗಳು, ಆಹಾರ ಸಂಸ್ಕರಣಾ ಘಟಕಗಳು, ಜಲ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳು, ಸರೋವರ ಸಂರಕ್ಷಣಾ ಇಲಾಖೆಗಳು, ನಗರ ಪ್ರಾಧಿಕಾರಗಳು ಇತ್ಯಾದಿ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಈ ಕ್ಷೇತ್ರದಲ್ಲಿ ವೈವಿಧ್ಯಮಯ ಅವಕಾಶಗಳಿರುವುದರಿಂದ ನಿಮ್ಮ ಆಸಕ್ತಿ ಮತ್ತು ಅಭಿರುಚಿಯಂತೆ ವೃತ್ತಿಯ ಯೋಜನೆಯನ್ನು ಮಾಡಿಕೊಳ್ಳಬೇಕು.

Q3. ನಾನು ಎಂಕಾಂ ಮಾಡಿ ಖಾಸಗಿ ಕಂಪನಿಯಲ್ಲಿದ್ದೇನೆ. ಆದರೆ ಈ ಕಂಪನಿಯಲ್ಲಿ ಎಂಬಿಎ ಗೆ ತುಂಬಾ ಮಹತ್ವ ಕೊಡುತ್ತಾರೆ. ನನಗೀಗ 35 ವರ್ಷ. ನಾನು ಎಂಬಿಎ ಮಾಡಬೇಕೇ? ನಾನು ಎಂಕಾಂ ಮಾಡಿದ್ದು ತಪ್ಪಾಯಿತೇ? – ಸ್ವಾತಿ, ಹುಬ್ಬಳ್ಳಿ

ವೃತ್ತಿಯ ಯೋಜನೆಯಂತೆ ಕೋರ್ಸ್ ಮಾಡುವುದು ಸಮಂಜಸ. ನೀವು ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಕೌಶಲಗಳಿಗೂ ಮತ್ತು ವೃತ್ತಿಯ ಅವಶ್ಯಕತೆಗಳಿಗೂ ಹೊಂದಾಣಿಕೆಯಿರಬೇಕು. ಪ್ರಮುಖವಾಗಿ, ಉದ್ಯೋಗದ ಯಶಸ್ಸಿಗೆ ವೃತ್ತಿ ಸಂಬAಧಿತ ಕೌಶಲಗಳಲ್ಲದೆ ಯೋಜನೆ ಮತ್ತು ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ, ನಾಯಕತ್ವದ ಕೌಶಲಗಳಂತ ಪ್ರಾಥಮಿಕ ಕೌಶಲಗಳಿರಬೇಕು. ಹಾಗಾಗಿ, ನಿಮ್ಮ ವ್ಯಕ್ತಿತ್ವದಲ್ಲಿ ಈ ಕೌಶಲಗಳನ್ನು ವೃದ್ಧಿಸಿ ನಿಮ್ಮ ಉದ್ಯೋಗದ ಕಾರ್ಯಕ್ಷಮತೆಯನ್ನು ನಿರೀಕ್ಷಿತ ಮಟ್ಟಕ್ಕೆ ಏರಿಸಿ.

Q4. ಎಂಕಾಂ ಮುಗಿಸಿದ್ದೇನೆ. ಎನ್‌ಇಟಿ, ಎಸ್‌ಎಲ್‌ಇಟಿ ಅಥವಾ ಕೆಎಸ್‌ಇಟಿ ಪರೀಕ್ಷೆ ಬರೆಯಬೇಕು ಎಂದಿದ್ದೇನೆ. ಯಾವ ಪುಸ್ತಕ ಓದಬೇಕು. ಮೊದಲನೇ ಬಾರಿಗೆ ಪರೀಕ್ಷೆಯಲ್ಲಿ ಪಾಸಾಗುವುದು ಹೇಗೆ? – ಸ್ಪೂರ್ತಿ ಎಂ., ಶಿವಮೊಗ್ಗ

ಈ ಪರೀಕ್ಷೆಗಳಲ್ಲಿನ ವ್ಯತ್ಯಾಸಗಳನ್ನರಿತು ನಿಮ್ಮ ವೃತ್ತಿ ಯೋಜನೆಯಂತೆ ಯಾವ ಪರೀಕ್ಷೆಯನ್ನು ಬರೆಯಬೇಕೆನ್ನುವ ನಿರ್ಧಾರ ನಿಮ್ಮದು. ಪರೀಕ್ಷೆಯ ತಯಾರಿ, ಪುಸ್ತಕಗಳು ಇತ್ಯಾದಿ ವಿವರಗಳಿಗೆ ಗಮನಿಸಿ: https://www.shiksha.com/exams/ugc-net-exam-preparation

Q5. ಎನ್‌ಟಿಎಸ್‌ಇ ಪರೀಕ್ಷೆಗೆ 8ನೇ ತರಗತಿಯಿಂದ ತಯಾರಿ ಹೇಗೆ ಮಾಡುವುದು? ನಾನು ಮುಂಜಾನೆಯಿAದ ಸಂಜೆ 4 ರವರೆಗೆ ಶಾಲೆಗೆ ಹೋಗುತ್ತೇನೆ. ಇನ್ನುಳಿದ ಸಮಯದಲ್ಲಿ ಶಾಲೆ ಹಾಗೂ ಇತರ ಪರೀಕ್ಷೆಗೆ ತಯಾರಿ ಹೇಗೆ ಮಾಡುವುದು?

ಎನ್‌ಟಿಎಸ್‌ಇ ಪರೀಕ್ಷೆಯಂತಹ ನಿರ್ದಿಷ್ಟವಾದ ಗುರಿಯನ್ನು ಸಾದಿಸಲು ಸಮಯವನ್ನು ಸೂಕ್ತವಾಗಿ ಬಳಸಲು ಯೋಜನಾ ಶಕ್ತಿ ಮತ್ತು ಅದನ್ನು ಪರಿಪಾಲಿಸುವ ಶಿಸ್ತಿರಬೇಕು. ನಿಮ್ಮ ದೈನಂದಿನ ದಿನಚರಿಯ ತರಗತಿಗಳು, ತರಬೇತಿ, ವ್ಯಾಯಾಮ, ಹವ್ಯಾಸ, ಆಟ, ಅಭ್ಯಾಸ, ಪ್ರಯಾಣ, ಮನರಂಜನೆ, ಮನೆಯ ಮತ್ತು ವೈಯಕ್ತಿಕ ಕೆಲಸಗಳು ಸೇರಿದಂತೆ ಸಮಗ್ರವಾದ ಪಟ್ಟಿಯನ್ನು ತಯಾರಿಸಿ. ಕೆಲಸಗಳ ಪ್ರಾಮುಖ್ಯತೆಯಂತೆ, ಅವುಗಳ ಆದ್ಯತೆಯನ್ನು ತುರ್ತಾಗಿ ಮಾಡಬೇಕಾದ ಅಥವಾ ತಡವಾಗಿ ಮಾಡಬಹುದಾದ ಕೆಲಸಗಳಂತೆ ಗುರುತಿಸಿ ಚತುಷ್ಕೋನದ ನಾಲ್ಕು ಭಾಗಗಳಲ್ಲಿ ವಿಂಗಡಿಸಿ. ಸಾಮಾನ್ಯವಾಗಿ, ಭಾಗ 4 ರಲ್ಲಿ ಮಹತ್ವವಲ್ಲದ ಅನೇಕ ಚಟುವಟಿಕೆಗಳಿದ್ದು, ಸಮಯದ ನಿರ್ವಹಣೆಗೆ ಅಗಾಧವಾದ ಅವಕಾಶಗಳಿರುವುದನ್ನು ಗಮನಿಸಿ. ಈ ಭಾಗದಲ್ಲಿ, ಸಮಯದ ದುರ್ಬಳಕೆಯಾಗದಂತೆ ನಿಯಂತ್ರಿಸಿ, ಉಳಿಸಿದ ಸಮಯವನ್ನು ಉನ್ನತ ಶಿಕ್ಷಣ ಮತ್ತು ವೃತ್ತಿಜೀವನ ಕುರಿತಂತೆ, ಚಿಂತನೆಗೂ, ಯೋಜನೆಗೂ ಮೀಸಲಿಡಿ. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.vpradeepkumar.com/how-to-manage-time-effectively/

Q6. ನಾನು ಬಿಎ ಕೊನೆಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಐಎಫ್‌ಎಸ್ ಅಧಿಕಾರಿಯಾಗಬೇಕು ಎಂಬ ಬಯಕೆ ಇದೆ. ಇದಕ್ಕೇನು ಮಾಡಬೇಕು?

ಯಾವುದೇ ಪದವಿಯ ನಂತರ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಮುಖಾಂತರ ಐಎಫ್‌ಎಸ್ ಅಧಿಕಾರಿಯಾಗಬಹುದು. ನೀವು ಪದವಿ ಕೋರ್ಸಿನ ಅಂತಿಮ ವರ್ಷದಲ್ಲಿರುವುದರಿಂದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗವಹಿಸಬಹುದು.