Q & A for Students – September 2023

1. ನನ್ನ ಮಗ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ನಂತರ ಎಂಬಿಎ ಮಾಡಬೇಕೆಂದುಕೊAಡಿದ್ದಾನೆ. ಆದರೆ, ಎಂಬಿಎ ಆಯ್ಕೆಯಲ್ಲಿ ಗೊಂದಲವಿದೆ. ದಯವಿಟ್ಟು ನಿಮ್ಮ ಸಲಹೆ ನೀಡಿ.

2. ನಾನು ಬಿ.ಇ (ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ) ಮುಗಿಸಿ ಎಂಬಿಎ ಮಾಡಬಯಸಿದ್ದೇನೆ. ಬದುಕಿನಲ್ಲಿ ಉತ್ತಮ ಸ್ಥಾನವನ್ನು ಗಳಿಸಲು ಯಾವ ಕೋರ್ಸ್ ಮಾಡಬಹುದೆಂದು ತಿಳಿಸಿ.

ವೈವಿಧ್ಯಮಯ ಮತ್ತು ಬಹುಪಯೋಗಿ ಗುಣಲಕ್ಷಣಗಳಿಂದ ಅಸಂಖ್ಯಾತ ಉದ್ಯಮಗಳಲ್ಲಿ ಪಾಲಿಮರ್‌ಗಳ ಬಳಕೆಯಾಗುತ್ತಿದೆ. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಬಿ.ಇ ನಂತರ ವೃತ್ತಿಪರ ಜೀವನವನ್ನು ರೂಪಿಸಿಕೊಳ್ಳಲು, ಎಂಬಿಎ ಉತ್ತಮ ಆಯ್ಕೆ.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪರಿಗಣಿಸಿ, ಯಾವ ವಿಭಾಗದ ವೃತ್ತಿಯಲ್ಲಿ ಹೆಚ್ಚಿನ ತೃಪ್ತಿ ಮತ್ತು ಯಶಸ್ಸು ನಿಮ್ಮದಾಗಬಹುದೆಂದು ಪರಿಶೀಲಿಸಿ, ಅದರಂತೆ  ವೃತ್ತಿಯೋಜನೆಯನ್ನು ತಯಾರಿಸಿ. ಉದಾಹರಣೆಗೆ, ಉತ್ಪಾದನಾ ಕ್ಷೇತ್ರ, ಮಾರುಕಟ್ಟೆಯ ನಿರ್ವಹಣೆ, ಮಾನವ ಸಂಪನ್ಮೂಲದ ನಿರ್ವಹಣೆ, ಲಾಜಿಸ್ಟಿಕ್ಸ್, ಹಣಕಾಸು ಮುಂತಾದ ಸ್ಪೆಷಲೈಸೇಷನ್‌ಗಳಲ್ಲಿ ಎಂಬಿಎ ಮಾಡಬಹುದು. ಹಾಗೂ, ಅನೇಕ ವಿಶ್ವವಿದ್ಯಾಲಯಗಳಲ್ಲಿ ಎಂಬಿಎ (ವೇಸ್ಟ್ ಮ್ಯಾನೇಜ್‌ಮೆಂಟ್ ಅಂಡ್ ಸೋಷಿಯಲ್ ಎಂಟರ್‌ಪ್ರೆನರ್‌ಷಿಪ್) ಕೋರ್ಸ್ ಲಭ್ಯವಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

3. ನಾನು ಬಿ.ಎ (ಅರ್ಥಶಾಸ್ತç, ರಾಜ್ಯಶಾಸ್ತç) ಓದುತ್ತಿದ್ದೇನೆ. ಆದರೆ, ನನಗೆ ಎಂಎ (ಪತ್ರಿಕೋದ್ಯಮ) ಓದುವ ಆಸಕ್ತಿಯಿದೆ. ಅದನ್ನು ತೆಗೆದುಕೊಳ್ಳುವ ಆವಕಾಶವಿದೆಯೇ?

ಅನೇಕ ವಿಶ್ವವಿದ್ಯಾಲಯಗಳಲ್ಲಿ ಎಂಎ (ಪತ್ರಿಕೋದ್ಯಮ) ಕೋರ್ಸ್ ಅನ್ನು ಯಾವುದೇ ಪದವಿಯ ನಂತರ ಮಾಡುವ ಅವಕಾಶವಿದೆ. ಹಾಗಾಗಿ, ನಿಮಗೆ ಯಾವ ವಿಶ್ವವಿದ್ಯಾಲಯ ಸೂಕ್ತ ಎಂದು ನಿರ್ಧರಿಸಬಹುದು. ಹಾಗೂ, ಕ್ಯಾಂಪಸ್ ನೇರ ನೇಮಕಾತಿಯಿರುವ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ (ಪತ್ರಿಕೋದ್ಯಮ),  ಕೂಡ ಮಾಡಬಹುದು.

4. ನಾನು ೨೦೧೮ರಲ್ಲಿ ಬಿಇ (ಸಿವಿಲ್ ಎಂಜಿನಿಯರಿAಗ್) ಮುಗಿಸಿ, ಹೊರಗುತ್ತಿಗೆ ಮೂಲಕ ಸಣ್ಣ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಎಸ್‌ಕ್ಯುಎಲ್ ಕುರಿತ ಲೇಖನ ನೋಡಿದ ನಂತರ ಐಟಿ ಕ್ಷೇತ್ರದ ಕೋರ್ಸ್ ಮಾಡುವುದೇ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದೇ ಎಂಬ ಗೊಂದಲದಲ್ಲಿದ್ದೇನೆ. ಬಿಇ ಮಾಡಿ ಐದು ವರ್ಷಗಳಾದರೂ ಬದುಕಿನಲ್ಲಿ ನೆಲೆಯೂರಲಾಗಿಲ್ಲ. ನಿಮ್ಮ ಮಾರ್ಗದರ್ಶನ ನೀಡಿ.

ಮೊದಲಿಗೆ, ಎಂಜಿನಿಯರಿAಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿAಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬAಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ, ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬAಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಇತ್ಯಾದಿ ಕೌಶಲಗಳೂ  ಎಂಜಿನಿಯರಿAಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.

ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ  ಮೈಗೂಡಿಸಿಕೊಳ್ಳಬೇಕು. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವ ಸಿವಿಲ್ ಎಂಜಿನಿಯರಿAಗ್ ಕ್ಷೇತ್ರದಲಿ,್ಲ ಸುಮಾರು ಅರು ತಿಂಗಳುಗಳಲ್ಲಿ ಉತ್ತಮವಾದ ಕೆಲಸವನ್ನು ಪಡೆಯುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ. ಇದು ಸಾಧ್ಯವಾಗದಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಬಹುದು.

ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬAಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‌ಲೈನ್ ತರಗತಿಗಳು, ಸಾಧಕರ ಯಶಸ್ಸಿನ ಕಥೆಗಳು, ವಿಡಿಯೊಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು.

ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk

5. ನಾನು ಕಳೆದ ವರ್ಷ ಬಿ.ಎಸ್ಸಿ ಮುಗಿಸಿ ಪಿಎಸ್‌ಐ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದೇನೆ. ಆದರೆ, ಪಿಎಸ್‌ಐ ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ. ಇದರ ನಡುವೆ, ಎಂಎಸ್ಸಿ ಮಾಡುವುದೋ ಬಿಡುವುದೋ ಗೊತ್ತಿಲ್ಲ. ದಯವಿಟ್ಟು ನಿಮ್ಮ ಸಲಹೆ ನೀಡಿ.

ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳೇನು ಎಂದು ಮೊದಲು ಸ್ಪಷ್ಟವಾಗಬೇಕು. ಪಿಎಸ್‌ಐ ವೃತ್ತಿಯ ಅವಕಾಶಗಳು, ಎಂಎಸ್ಸಿ ನಂತರದ ವೃತ್ತಿಯ ಅವಕಾಶಗಳು, ಹಾಗೂ ಆಯಾ ವೃತ್ತಿಗಳ ಯಶಸ್ಸಿಗೆ ಬೇಕಾದ ಜ್ಞಾನ, ಪ್ರಾಥಮಿಕ ಮತ್ತು ವೃತ್ತಿಪರ ಕೌಶಲಗಳು ವಿಭಿನ್ನವಾಗಿವೆ. ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳು, ಕೌಶಲಗಳ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

ಹೆಚ್ಚಿನ ಮಾರ್ಗದರ್ಶನದ ಅಗತ್ಯವಿದ್ದರೆ, ಖುದ್ದಾಗಿ ಭೇಟಿ ಮಾಡಬಹುದು.

6. ನಾನು ಬಿ.ಕಾಂ. ಪದವಿ ಮುಗಿಸಿ ಎಂಕಾA ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಡೆದಿರುವೆ. ಪ್ರಸ್ತುತ, ನಾನು ಕನ್ನಡದಲ್ಲಿ ಎಂಎ ಮಾಡಬಹುದೇ?

ನಮ್ಮ ಅಭಿಪ್ರಾಯದಂತೆ, ನೀವು ಎಂಎ (ಕನ್ನಡ) ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksoumysuru.ac.in/

ನಾನು ೨೦೧೭ರಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣನಾಗಿದ್ದೇನೆ. ಆದರೆ, ಅಂಕಗಳು ಕಡಿಮೆ ಬಂದಿದ್ದು, ಈಗ ಮತ್ತೊಮ್ಮೆ ಪರೀಕ್ಷೆ ಬರೆಯಬಹುದೇ?

ಇತ್ತೀಚೆಗಷ್ಟೇ, ದ್ವಿತೀಯ ಪಿಯುಸಿ ಅಭ್ಯರ್ಥಿಗಳಿಗೆ (ಪುನರಾವರ್ತಿತ) ಈಗಿರುವ ನಿಯಮವನ್ನು ಬದಲಾಯಿಸಿ, ಗರಿಷ್ಠ ಮೂರು ವಾರ್ಷಿಕ ಪರೀಕ್ಷೆಗಳನ್ನು ಬರೆಯುವ ಅವಕಾಶವನ್ನು ನೀಡುವ ಪ್ರಸ್ತಾವನೆಯಾಗಿದೆ. ಹಾಗಾಗಿ,  ಶಿಕ್ಷಣ ಇಲಾಖೆಯ ಅಧಿಕೃತ ಅಧಿಸೂಚನೆಯ ನಂತರ, ನಿಯಮಾವಳಿಗಳ ಅನುಸಾರ, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮತ್ತೆ ಬರೆಯಬಹುದು.

7. ನಾನು ೨೦೨೧ರಲ್ಲಿ ಬಿ.ಟೆಕ್ (ಪೆಟ್ರೋಲಿಯಮ್ ಎಂಜಿನಿಯರಿAಗ್) ಪದವಿಯನ್ನು ಮಾಡಿದ್ದರೂ, ಈವರೆಗೆ ಈ ಕ್ಷೇತ್ರದಲ್ಲಿ ಉದ್ಯೋಗ ಸಿಕ್ಕಿಲ್ಲ. ಉತ್ತಮವಾದ ಉದ್ಯೋಗವನ್ನು ಪಡೆದು ಬದುಕಿನಲ್ಲಿ ನೆಲೆಯೂರಲು ಇನ್ನು ಯಾವ ಕೋರ್ಸ್ ಮಾಡಬೇಕು?

ಪೆಟ್ರೋಲಿಯಮ್ ಎಂಜಿನಿಯರಿAಗ್ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರದಲ್ಲಿ ಎಂಜಿನಿಯರಿAಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿAಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬAಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ, ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬAಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಇತ್ಯಾದಿ ಕೌಶಲಗಳೂ  ಎಂಜಿನಿಯರಿAಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.

ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ  ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬAಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ. ವ್ಯಕ್ತಿತ್ವ ವೃದ್ಧಿಸುವ ಕೇಂದ್ರಗಳು, ಕೌಶಲ ತರಬೇತಿ ಕೇಂದ್ರಗಳು, ಕೌಶಲ ಆಯೋಗಗಳು, ಆನ್‌ಲೈನ್ ತರಗತಿಗಳು, ಸಾಧಕರ ಯಶಸ್ಸಿನ ಕಥೆಗಳು, ವಿಡಿಯೊಗಳು, ಪುಸ್ತಕಗಳು ಇತ್ಯಾದಿಗಳನ್ನು ಉಪಯೋಗಿಸಿಕೊಂಡು ವ್ಯಕ್ತಿತ್ವದ ಪರಿಪೂರ್ಣತೆಯನ್ನು ಗಳಿಸಿ, ವೃತ್ತಿ ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಬಹುದು.

ಅಚ್ಚುಕಟ್ಟಾದ ಬಯೋಡೇಟ ಬರೆಯುವುದರ ಬಗ್ಗೆ ಮತ್ತು  ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ:
https://www.youtube.com/watch?v=hZZv9OGkBiM&t=55s
https://www.youtube.com/watch?v=T_z3ngIeyWk

ಹೆಚ್ಚಿನ ಮಾರ್ಗದರ್ಶನದ ಅಗತ್ಯವಿದ್ದರೆ, ಖುದ್ದಾಗಿ ಭೇಟಿ ಮಾಡಬಹುದು.

8. ನಾನು ಪಿಯುಸಿ ಮಾಡುತ್ತಿದ್ದು ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದೇನೆ. ಹಾಗಾಗಿ, ಓದುವ ವಿಧಾನಗಳ ಮಾಹಿತಿ ನೀಡಿ.

ಸಕಾರಾತ್ಮಕವಾದ ಆಲೋಚನೆಯಿಂದ ಈ ಪ್ರಶ್ನೆಯನ್ನು ಕೇಳಿರುವ  ನಿಮಗೆ ಅಭಿನಂದನೆಗಳು. ಕಾಲೇಜುಗಳಲ್ಲಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂವಹನದ ಕೊರತೆಯಿಂದ ಪ್ರಸ್ತುತ ಕಲಿಕೆಯ ವಿಧಾನಗಳು ಮೇಲ್ನೋಟಕ್ಕೆ ನಿಷ್ಪರಿಣಾಮಕಾರಿ ಎನಿಸುವುದು ಸಹಜ. ವೃತ್ತಿ ಜೀವನದ ಕನಸುಗಳು ನನಸಾಗಬೇಕಾದರೆ, ನಿಮ್ಮ ಕಲಿಕೆ ಪರಿಣಾಮಕಾರಿಯಾಗಬೇಕು. ಹಾಗಾಗಿ, ಈ ಐದು ಕಾರ್ಯತಂತ್ರಗಳನ್ನು ಬಳಸಿ:

  • ಸಮೀಕ್ಷೆ: ಆಳವಾದ ಓದುವಿಕೆಗೆ ಮೊದಲು ಓದುವ ವಸ್ತುವಿನ ಸಾರಾಂಶ/ಅಧ್ಯಾಯವನ್ನು ಅರ್ಥಮಾಡಿಕೊಳ್ಳುವುದು. ಸಮೀಕ್ಷೆಗಾಗಿ ಒಟ್ಟು ಸಮಯದ ಶೇ ೧೦ ಬೇಕಾಗುತ್ತದೆ.
  • ಪ್ರಶ್ನಿಸುವಿಕೆ: ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದಲ್ಲಿನ ಒಳನೋಟವನ್ನು ಪಡೆದು ಕಲಿಕೆ ಪರಿಣಾಮಕಾರಿಯಾಗುತ್ತದೆ. ಪ್ರಶ್ನಿಸುವಿಕೆಗೆ ಒಟ್ಟು ಸಮಯದ ಶೇ ೧೦ ಬೇಕಾಗುತ್ತದೆ.
  • ಓದುವಿಕೆ: ಈ ಪ್ರಕ್ರಿಯೆಯನ್ನು ಚಾರಣಕ್ಕೆ ಹೋಲಿಸಬಹುದು; ಕಷ್ಟಕರವಾದ ವಿಷಯವನ್ನು ನಿಧಾನವಾಗಿಯೂ (ನಿಧಾನವಾಗಿ ಏರುವುದು), ತಿಳಿದಿರುವ ಅಥವಾ ಸುಲಭದ ವಿಷಯವನ್ನು ತ್ವರಿತವಾಗಿಯೂ (ತ್ವರಿತವಾಗಿ ಇಳಿಯುವುದು) ಮತ್ತು ಪ್ರಚೋದನಕಾರಿ, ವಾದ, ಪರಿಕಲ್ಪನಾ ವಿಷಯವನ್ನು ಎಚ್ಚರಿಕೆಯಿಂದ ಓದುವುದು (ಅಪಾಯವಿರುವಲ್ಲಿ ಎಚ್ಚರಿಕೆಯಿಂದ). ಈ ರೀತಿ ಓದುವುದಕ್ಕೆ ಒಟ್ಟು ಸಮಯದ ಶೇ ೫೦ ಮೀಸಲಿಡಿ.
  • ಪುನರುಚ್ಛಾರಣೆ: ಓದಿದ ನಂತರ ಪುಸ್ತಕವನ್ನು ತೆಗೆದಿಟ್ಟು, ಮುಖ್ಯ ಅಂಶಗಳು ಮತ್ತು ಪ್ರಮುಖ ವಿವರಗಳನ್ನು ಪುನರುಚ್ಛರಿಸುವುದು ಅಥವಾ ಟಿಪ್ಪಣಿ ಬರೆಯುವುದು ಪರಿಣಾಮಕಾರಿ ಕಲಿಕೆಗೆ ಅಗತ್ಯ. ಇದಕ್ಕಾಗಿ, ಒಟ್ಟು ಸಮಯದ ಶೇ ೨೦ ಮೀಸಲಿಡಿ.
  • ಪುನರಾವರ್ತನೆ: ಕೊನೆಯ ಹಂತದಲ್ಲಿ, ಮೊದಲ ನಾಲ್ಕು ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಬೇಕು. ಈ ಪ್ರಕ್ರಿಯೆಗೆ, ಒಟ್ಟು ಸಮಯದ ಶೇ ೧೦ ಬೇಕಾಗುತ್ತದೆ. ಒಂದು ವೇಳೆ, ನಿಮ್ಮ ಕಲಿಕೆ ಅಸಮರ್ಪಕವೆನಿಸಿದರೆ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಓದುವ ಕಾರ್ಯತಂತ್ರಗಳ ಜೊತೆಗೆ, ಕಣ್ಣುಗಳಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

9. ಸರ್, ನಾನು ಇತ್ತೀಚೆಗೆ ದ್ವಿತೀಯ ಪಿಯುಸಿ ಮುಗಿಸಿ ಬಿ.ಎಸ್ಸಿ ಮಾಡುತ್ತಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಗೆ  ಈಗಿನಿಂದಲೇ ಯಾವ ರೀತಿಯಾಗಿ ತಯಾರಿ ಮಾಡಬೇಕೆಂದು ತಿಳಿಸಿ.

ಯುಪಿಎಸ್‌ಸಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.

  • ಪೂರ್ವಭಾವಿ ಪರೀಕ್ಷೆ (ಬಹು ಆಯ್ಕೆ ಮಾದರಿ).
  • ಮುಖ್ಯ ಪರೀಕ್ಷೆ (ಪ್ರಬಂಧ ರೂಪದ ಲಿಖಿತ ಪರೀಕ್ಷೆ).
  • ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಈ ಸಲಹೆಗಳನ್ನು ಗಮನಿಸಿ:

  • ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ.  ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
  • ಮುಖ್ಯ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ  ಮಾಹಿತಿಯನ್ನು ಸಂಗ್ರಹಿಸಿ.  
  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
  • ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
  • ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
  • ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ವಿಡಿಯೋಗಳನ್ನು ವೀಕ್ಷಿಸಿ. ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.

ಖುದ್ದಾಗಿ ತಯಾರಿಯಾಗಿ ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ; ಹಾಗಾಗಿ, ಕೋಚಿಂಗ್ ಕಡ್ದಾಯವಲ್ಲ. ಆದರೂ, ಕೋಚಿಂಗ್ ಸೆಂಟರ್‌ಗಳು ನೀಡುವ ಮಾರ್ಗದರ್ಶನ ಉಪಯುಕ್ತ. ಅಂತಿಮ ಆಯ್ಕೆ ನಿಮ್ಮದು.

10. ನಾನು ಪಿಯುಸಿ ನಂತರ, ಮುಂಬೈ ಹಿಂದಿ ವಿದ್ಯಾಪೀಠ ನಡೆಸುವ ಮೂರು ವರ್ಷದ ಬಿಎ (ಹಿಂದಿ) ಕೋರ್ಸ್ ಮಾಡಿ ಪದವಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದೇನೆ. ನಾನು, ಪದವಿ ಅರ್ಹತೆ ಬೇಕಾಗುವ ಹುದ್ದೆಗಳಿಗೆ ಅರ್ಜಿ ಹಾಕಬಹುದೇ? ಹಾಗೂ, ನಾನು ಪದವೀಧರ ಎಂದು ಹೇಳಿಕೊಳ್ಳಬಹುದೇ?

ನಮಗಿರುವ ಮಾಹಿತಿಯಂತೆ, ಮುಂಬೈ ಹಿಂದಿ ವಿದ್ಯಾಪೀಠ ಒಂದು ಖಾಸಗಿ ಸಂಸ್ಥೆ. ಈ ಸಂಸ್ಥೆಗೆ ಮಹಾರಾಷ್ಟç ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸೆಂಟ್ರಲ್ ಹಿಂದಿ ಡೈರೆಕ್ಟೋರೇಟ್, ಶಿಕ್ಷಣ ಇಲಾಖೆಯ ಮಾನ್ಯತೆ ಇದ್ದರೂ ಸಹ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಇರುವುದಿಲ್ಲ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ನೀವು ಮಾಡಿರುವ ಕೋರ್ಸ್ ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳು ನೀಡುವ ಬಿಎ ಪದವಿಗೆ ಸಮಾನ ಎಂದು ಹೇಳಲಾಗುವುದಿಲ್ಲ. ಆದರೂ ಸಹ, ಪದವಿ ವಿದ್ಯಾರ್ಹತೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ದಾಖಲೆ ಪರಿಶೀಲನೆ/ಸಂದರ್ಶನದ ಸಮಯದಲ್ಲಿ ನಿಮ್ಮ ವಿದ್ಯಾರ್ಹತೆಯನ್ನು ಸಾಬೀತು ಮಾಡಲು ಹೆಚ್ಚಿನ ದಾಖಲೆ/ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.

11. ಈಗ ಬಿಬಿಎ ಮೂರನೇ ವರ್ಷದಲ್ಲಿದ್ದೇನೆ. ಮುಂದೆ ಎಂಬಿಎ ಮಾಡಬೇಕೆಂಬ ಇಚ್ಛೆಯಿದೆ. ಈ ನಿರ್ಧಾರ ಸರಿಯೇ?

ಬಿಬಿಎ ನಂತರ ಎಂಬಿಎ ಕೋರ್ಸ್ ಉತ್ತಮ ಆಯ್ಕೆ. ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ, ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗಿ ಜೀವನಗಳೆರಡರಲ್ಲೂ ಯಶಸ್ಸನ್ನು ಸಾಧಿಸಬಹುದು. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ.

ನಮ್ಮ ದೇಶದಲ್ಲಿ ಸುಮಾರು ೫೦೦೦ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಯಿಟಿ ಗಳಂತಹ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಕ್ಯಾಂಪಸ್ ನೇಮಕಾತಿ ಇರುವ, ಉತ್ತಮ ರ‍್ಯಾಂಕಿAಗ್ ಇರುವ ಪ್ರತಿಷ್ಠಿತ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಬೇಕು. ಈ ಮಾಹಿತಿಯನ್ನು ಅನೇಕ ಮಾಧ್ಯಮಗಳು ಅಂತರ್ಜಾಲದಲ್ಲಿ ಪ್ರಕಟಿಸುತ್ತವೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=1TcHjPKJ1gw

12. ನಾನು ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಅಂತಿಮ ವರ್ಷದಲ್ಲಿದ್ದೇನೆ. ಇದಾದ ನಂತರ ಸಾಕಷ್ಟು ಶೈಕ್ಷಣಿಕ ಸಾಲವಿರುವುದರಿಂದ, ಕೆಲಸಕ್ಕೆ ಸೇರಬೇಕೇ ಅಥವಾ ಎಂಟೆಕ್ ಮಾಡುವುದೇ ಎಂಬ ಗೊಂದಲದಲ್ಲಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.

ಬಿ.ಟೆಕ್ (ಕಂಪ್ಯೂಟರ್ ಸೈನ್ಸ್) ಬೇಡಿಕೆಯಲ್ಲಿರುವ ಕ್ಷೇತ್ರ. ಸಾಮಾನ್ಯವಾಗಿ, ಈ ವಿಭಾಗದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನೇಮಕಾತಿಯ ಅವಕಾಶವಿರುತ್ತದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ನೀವು ಕ್ಯಾಂಪಸ್ ನೇಮಕಾತಿಯ ಮೂಲಕ ವೃತ್ತಿಯನ್ನು ಅರಸಬಹುದು. ಹಾಗೂ, ಎಂಟೆಕ್ ಪದವಿಯನ್ನು ಅರೆಕಾಲಿಕ/ವಾರಾಂತ್ಯದ ತರಗತಿಗಳ ಮೂಲಕ ಮಾಡಬಹುದು. ಅಥವಾ, ಕೆಲವು ವರ್ಷಗಳ ವೃತ್ತಿಯ ಅನುಭವದ ನಂತರ, ಕಂಪ್ಯೂಟರ್ ಸೈನ್ಸ್ನ ವಿಭಾಗಗಳಲ್ಲಿ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಡೇಟಾ ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೊಟಿಕ್ಸ್ ಇತ್ಯಾದಿ) ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ಪೂರ್ಣಾವಧಿ ಎಂಟೆಕ್ ಮಾಡಬಹುದು.