Q & A for Students – July 2023

1. ನಾನು ಬಿಎ 2ನೇ ಸೆಮಿಸ್ಟರ್ ಓದುತ್ತಿದ್ದು, ಯುಪಿಎಸ್‌ಸಿ ಮಾಡಲು ಇಚ್ಛಿಸಿದ್ದೇನೆ. ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದು, ಇಂಗ್ಲಿಷ್ ಅಷ್ಟೊಂದು ಬರುವುದಿಲ್ಲ. ತಯಾರಿ ಮಾಡುವುದು ಹೇಗೆ?

  • ಪೂರ್ವಭಾವಿ ಪರೀಕ್ಷೆ (ಬಹು ಆಯ್ಕೆ ಮಾದರಿ).
  • ಮುಖ್ಯ ಪರೀಕ್ಷೆ (ಕನ್ನಡದಲ್ಲಿ ಬರೆಯಬಹುದು).
  • ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ (ಕನ್ನಡದಲ್ಲಿ ನೀಡಬಹುದು).
  • ಈ ಸಲಹೆಗಳನ್ನು ಗಮನಿಸಿ:
  • ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
  • ಮುಖ್ಯ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.
  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
  • ಪರೀಕ್ಷೆಯಲ್ಲಿ ಯಶಸ್ವಿಯಾಗಲು, ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕೃಷ್ಟವಾದ ಬರವಣಿಗೆ ಇರಬೇಕು.
  • ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
  • ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ವಿಡಿಯೋಗಳನ್ನು ವೀಕ್ಷಿಸಿ. ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.
  • ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
  • ಯುಪಿಎಸ್‌ಸಿ ಪರೀಕ್ಷೆಗೆ ಖುದ್ದಾಗಿ ತಯಾರಿಯಾಗಿ, ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ; ಹಾಗಾಗಿ, ಕೋಚಿಂಗ್ ಕಡ್ಡಾಯವಲ್ಲ. ಆದರೂ, ಕೋಚಿಂಗ್ ಸೆಂಟರ್‌ಗಳು ನೀಡುವ ಮಾರ್ಗದರ್ಶನ ಉಪಯುಕ್ತ. ಅಂತಿಮ ಆಯ್ಕೆ ನಿಮ್ಮದು.

ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ; ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಇಂಗ್ಲಿಷ್ ಕಲಿಕೆ ಕುರಿತ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA

2. ನಾನು ಬಿಎ (ಇಂಗ್ಲಿಷ್) ಮುಗಿಸಿ, ಬಿ.ಇಡಿ ಕೋರ್ಸನ್ನು ಇಂಗ್ಲಿಷ್ ಕಷ್ಟವೆಂದು ಅರ್ಧಕ್ಕೇ ನಿಲ್ಲಿಸಿದ್ದೇನೆ. ಮನೆಯಲ್ಲಿ, ಎಂಎ (ಕನ್ನಡ) ಮಾಡು ಎನ್ನುತ್ತಿದ್ದಾರೆ; ನನಗೆ ನಾಟಕವೂ ಇಷ್ಟವಿದೆ. ಯಾವುದು ಮಾಡಲೆಂದು ಗೊಂದಲವಿದೆ. ದಯವಿಟ್ಟು ಪರಿಹಾರ ತಿಳಿಸಿ.

ನಿಖರವಾದ ವೃತ್ತಿಯೋಜನೆಯಿಲ್ಲದೆ ವಿಭಿನ್ನವಾದ ಕೋರ್ಸ್ಗಳನ್ನು ಮಾಡಿದರೆ ಇಂತಹ ಗೊಂದಲಗಳಾಗುವುದು ಸಹಜ. ಈಗಲೂ ಕಾಲ ಮಿಂಚಿಲ್ಲ; ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಅಭಿರುಚಿ ಯಾವ ಕ್ಷೇತ್ರದಲ್ಲಿದೆಯೆಂದು ಗುರುತಿಸಿ, ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಮುಂದಿನ ಕೋರ್ಸ್ ಆಯ್ಕೆಯಿರಲಿ. ಮೇಲ್ನೋಟಕ್ಕೆ ಬಿ.ಇಡಿ ಕೋರ್ಸ್ ಮಾಡುವುದರಿಂದ ವೃತ್ತಿಯನ್ನು ಅರಸಲು ಅನುಕೂಲವಾಗಬಹುದು.

ಔಪಚಾರಿಕ ಶಿಕ್ಷಣದ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯತೆ, ನಾಯಕತ್ವದ ಕೌಶಲ ಮುಂತಾದ ವೃತ್ತಿಗೆ ಪೂರಕವಾದ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ವೃತ್ತಿಯಲ್ಲೂ, ವೈಯಕ್ತಿಕ ಬದುಕಿನಲ್ಲೂ ಸಂತೃಪ್ತಿಯನ್ನು ಗಳಿಸಬಹುದು. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

ನಾನು ಡಿಪ್ಲೊಮಾ (ಮೆಕ್ಯಾನಿಕಲ್) ಮಾಡುತ್ತಿದ್ದು, ಮುಂದೆ ಎಂಜಿನಿಯರಿAಗ್ ಮಾಡುವ ಆಸೆಯಿದೆ. ಸರ್ಕಾರಿ ಎಂಜಿನಿಯರಿAಗ್ ಕಾಲೇಜಿಗೆ ಸೇರುವುದು ಹೇಗೆ? ದಯವಿಟ್ಟು ತಿಳಿಸಿ.

ಮೂರು ವರ್ಷದ ಡಿಪ್ಲೊಮಾ ನಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಡಿಪ್ಲೊಮಾ ಸಿಇಟಿ ಪ್ರವೇಶ ಪರೀಕ್ಷೆಯ ಮೂಲಕ, 2ನೇ ವರ್ಷದ ಯಾವುದೇ ಎಂಜಿನಿಯರಿAಗ್ ಕೋರ್ಸ್ಗೆ ಸೇರಬಹುದು. ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ಈ ಸುತ್ತೋಲೆಯನ್ನು ಗಮನಿಸಿ: https://cetonline.karnataka.gov.in/keawebentry456/dcet22/20220924153843kannada.pdf

3. ನಾನು ಡಿಪ್ಲೊಮಾ (ಸಿವಿಲ್) ಮಾಡಿದ್ದು ಮುಂದೇನು ಎಂದು ತಿಳಿಯುತ್ತಿಲ್ಲ. ಮನೆಯಲ್ಲಿ ಬಡತನ ಕಾಡುತ್ತಿದೆ. ದಯವಿಟ್ಟು ಉದ್ಯೋಗವೆಲ್ಲಿ ಸಿಗುತ್ತದೆ ತಿಳಿಸಿ.

ನಿಮ್ಮ ಕಷ್ಟ ಅರ್ಥವಾಗುತ್ತದೆ. ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಅಭಿವೃದ್ಧಿ ಶೇ 6ರಷ್ಟಿದ್ದು, ಅಂದಾಜುಗಳ ಪ್ರಕಾರ ಮೂಲಸೌಕರ್ಯಗಳ ಕ್ಷೇತ್ರದ ಅಭಿವೃದ್ಧಿ ಸುಮಾರು ಶೇ 8ರಷ್ಟಿದೆ. ಈ ಕ್ಷೇತ್ರದಲ್ಲಿ ಹೆದ್ದಾರಿಗಳು, ಸೇತುವೆಗಳ ನಿರ್ಮಾಣ, ನೀರಾವರಿ ಯೋಜನೆಗಳು, ರೈಲು, ಮೆಟ್ರೊ ಸೇರಿದಂತೆ ಸಾರ್ವಜನಿಕ ಸಾರಿಗೆ, ವಸತಿ ಸೌಕರ್ಯಗಳು, ಉದ್ದಿಮೆಗಳು ಸೇರಿದಂತೆ ಅನೇಕ ಅಭಿವೃದ್ಧಿಯ ಪಥದಲ್ಲಿರುವ ವಿಭಾಗಗಳಿವೆ. ಹಾಗಾಗಿ, ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಕ್ಷೇತ್ರಕ್ಕೆ ಸಂಬAಧಿಸಿದ ಶೈಕ್ಷಣಿಕ ಅರ್ಹತೆಯ ನಂತರವೂ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ವಿಶ್ಲೇಷಿಸಬೇಕು. ಪ್ರಮುಖವಾಗಿ, ನಿಮ್ಮ ಬಯೋಡೇಟಾ ನಿಮ್ಮಲ್ಲಿರುವ ವಿಶಿಷ್ಟ ಅರ್ಹತೆ, ಕೌಶಲ ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುವುದೇ? ನೀವು ಈವರೆಗೆ ಮಾಡಿರುವ ಪ್ರಯತ್ನಗಳಿಂದ ಸಂದರ್ಶನಗಳು ಸಿಗುತ್ತಿದೆಯೇ? ಅಥವಾ, ಸಂದರ್ಶನದಲ್ಲಿ ಸಮಸ್ಯೆಯಾಗುತ್ತಿದೆಯೇ? ಈ ಎಲ್ಲಾ ಸಾಧ್ಯತೆಗಳನ್ನು ಕೂಲಂಕಶವಾಗಿ ಪರಿಶೀಲಿಸಿ.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮೂಲಭೂತ ಎಂಜಿನಿಯರಿAಗ್ ಕೌಶಲ್ಯಗಳಾದ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಕಂಪ್ಯೂಟರ್ ಕೌಶಲಗಳು, ಸೃಜನಶೀಲತೆ, ವಿಶ್ಲೇಷಣಾತ್ಮಕ ಕೌಶಲ, ನಾಯಕತ್ವ ಮತ್ತು ನಿರ್ವಹಣಾ ಕೌಶಲಗಳು, ಕಲಿಯುವ ಉತ್ಸಾಹ, ವಿವರಗಳಿಗೆ ಗಮನ, ಸಮಯದ ನಿರ್ವಹಣೆ, ಸಂಘಟನಾ ಸಾಮರ್ಥ್ಯ ಮುಂತಾದವುಗಳನ್ನು ಬೆಳೆಸಿಕೊಳ್ಳಬೇಕು.

ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk

4. ನಾನು ಇಷ್ಟಪಟ್ಟ ಯಾವುದೇ ವೃತ್ತಿ/ಕೋರ್ಸ್ ಮಾಡಲು ಸ್ವಾತಂತ್ರ ಸಿಗದೆ, ಜೀವನದಲ್ಲಿ ನನಗಾಗಿ ಏನು ಉಳಿದಿದೆ ಎನ್ನುವಷ್ಟು ಬೇಸರವಾಗಿದೆ. ನಾನು ಈಗ ಬಿ.ಎಸ್ಸಿ ಮುಗಿಸಿ ಬಿ.ಇಡಿ ಮಾಡುತ್ತಿದ್ದೇನೆ. ಜೀವನದ ಉತ್ಸಾಹವನ್ನು ವೃದ್ಧಿಸಿಕೊಳ್ಳಲು ಧೈರ್ಯ ನೀಡಿ.

ಸಾಧನೆಯ ಹಾದಿಯಲ್ಲಿ ಇಂತಹ ಅಡಚಣೆಗಳು, ವಿಳಂಬಗಳು, ನಿರಾಸೆಗಳು ಸರ್ವೇಸಾಮಾನ್ಯ. ಇವುಗಳ ಮಧ್ಯೆಯೂ ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ.  ನಿಮ್ಮ ಬದುಕಿನ ಗುರಿ ಏನು ಎಂದು ನೀವು ತಿಳಿಸಿಲ್ಲ. ಸ್ಪಷ್ಟವಾದ, ಸಾಧಿಸಬಹುದಾದ  ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯ ಆಧಾರದ ಮೇಲೆ ವೃತ್ತಿಯ ಗುರಿಗಳನ್ನು ನಿರ್ಧರಿಸಿ. ಈ ಗುರಿಗಳನ್ನು ಸಾಕಾರಗೊಳಿಸಬೇಕಾದರೆ, ಸ್ವಯಂಪ್ರೇರಣೆಯೇ ನಿಮ್ಮ ಸಾಧನೆಗೆ ಸಂಜೀವಿನಿಯಾಗಬೇಕು. ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಿಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ, ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ, ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. 

ಬಿ.ಇಡಿ ಕೋರ್ಸ್ ನಂತರ ಅತ್ಯಂತ ಪವಿತ್ರವಾದ ಮತ್ತು ಗೌರವಯುತವಾದ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡು  ಮಾದರಿ ಶಿಕ್ಷಕರಾಗುವ ಅವಕಾಶ ನಿಮಗಿದೆ. ಇನ್ನೂ ಹೆಚ್ಚಿನ ಮಾರ್ಗದರ್ಶನ ಬೇಕಿದ್ದರೆ, ಈ ಅಂಕಣದ ಮೂಲಕ ಮತ್ತೊಮ್ಮೆ ಸಂಪರ್ಕಿಸಿ. ಶುಭಹಾರೈಕೆಗಳು.

5. ನಾನು ಎಂಬಿಎ (ಅರ್ಥಶಾಸ್ತç) ಮಾಡಬಹುದೇ? ಇದರಿಂದ ಅನುಕೂಲವಾಗುತ್ತದೆಯೇ? ಸರ್ಕಾರಿ ಕಾಲೇಜುಗಳ ಬಗ್ಗೆ ತಿಳಿಸಿ.

ನಮ್ಮ ದೇಶದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಎಂಬಿಎ ಕಾಲೇಜುಗಳು/ವಿಶ್ವವಿದ್ಯಾಲಯಗಳಿವೆ. ಸಾಮಾನ್ಯವಾಗಿ ಎಲ್ಲಾ ಎಂಬಿಎ ಕೋರ್ಸ್ಗಳಲ್ಲಿ ಮಾರ್ಕೆಟಿಂಗ್, ಹಣಕಾಸು, ಮಾನವ ಸಂಪನ್ಮೂಲ, ಉತ್ಪಾದನೆ, ಲಾಜಿಸ್ಟಿಕ್ಸ್ ಮುಂತಾದ ವಿಭಾಗಗಳಿದ್ದು, ಈ ಎಲ್ಲಾ ಪಠ್ಯಕ್ರಮಗಳಲ್ಲಿ ಅರ್ಥಶಾಸ್ತç ಒಂದು ಪ್ರಮುಖ ಕಲಿಕೆಯ ವಿಷಯವಾಗಿರುತ್ತದೆ. ಆದರೂ, ಎಂಬಿಎ (ಅರ್ಥಶಾಸ್ತç) ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್, ಅಮಿಟಿ ವಿಶ್ವವಿದ್ಯಾಲಯ ಮುಂತಾದ ಕೆಲವೇ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಾತ್ರ ಲಭ್ಯ. ಹಾಗಾಗಿ, ಸಾರ್ವಜನಿಕ ಅರ್ಥಶಾಸ್ತç, ಅಂತರಾಷ್ಟಿçÃಯ ಅರ್ಥಶಾಸ್ತç, ಅನ್ವಯಿಕ ಅರ್ಥಶಾಸ್ತç, ಸಾರ್ವಜನಿಕ ವಲಯದ ಉದ್ಯಮಗಳು ಮುಂತಾದ ಕ್ಷೇತ್ರಗಳಲ್ಲಿ ವಿಶೇಷವಾದ ಆಸಕ್ತಿಯಿದ್ದು, ನಿರ್ದಿಷ್ಟ ವೃತ್ತಿಯನ್ನು ಅನುಸರಿಸುವ ಯೋಜನೆಯಿದ್ದರೆ, ಈ ಕೋರ್ಸ್ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

6. ನಾನು ಮೂರನೇ ವರ್ಷದ ಫಾರ್ಮ್.ಡಿ ಕೋರ್ಸ್ ಮಾಡುತ್ತಿದ್ದು, ಮುಂದೆ ಯುಕೆ/ಯುಎಸ್‌ಎ ದೇಶಗಳಲ್ಲಿ ವೃತ್ತಿಯನ್ನು ಅರಸಬೇಕು. ಹಾಗಾಗಿ, ಅಲ್ಲಿ ಲೈಸೆನ್ಸ್ ಪಡೆಯಲು ಮಾಡಬೇಕಾದ ಅರ್ಹತಾ ಪರೀಕ್ಷೆಯ ವಿವರವನ್ನು ತಿಳಿಸಿ.

ನಮಗಿರುವ ಮಾಹಿತಿಯಂತೆ ಫಾರ್ಮ್.ಡಿ ಕೋರ್ಸ್ ನಂತರ ಅಮೇರಿಕ ದೇಶದಲ್ಲಿ ವೃತ್ತಿಯನ್ನು ಅರಸಬೇಕಾದರೆ, ಮೊದಲು ಇಂಗ್ಲಿಷ್ ಭಾಷಾ ಪರಿಣತಿ (ಟಿಒಇಎಫ್‌ಎಲ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ನಂತರ ಸ್ಥಳೀಯ ಅರ್ಹತಾ ಪರೀಕ್ಷೆ (ಎಫ್‌ಜಿಇಇ)ಯಲ್ಲಿ ಉತ್ತೀಣರಾಗಬೇಕು. ಇದಾದ ನಂತರ, ನಾರ್ತ್ ಅಮೇರಿಕ ಫಾರ್ಮಾಸಿಸ್ಟ್ ಲೈಸೆನ್ಸ್ (ಎನ್‌ಎಪಿಎಲ್‌ಇಎಕ್ಸ್) ಪರೀಕ್ಷೆಯ ಮೂಲಕ ಫಾರ್ಮಸಿ ಲೈಸೆನ್ಸ್ ಪಡೆಯಬೇಕು. ಯುಕೆ ದೇಶದಲ್ಲಿಯೂ ಸ್ಥಳೀಯ ಅರ್ಹತಾ ಪರೀಕ್ಷೆ ಮತ್ತು ಪ್ರಾಯೋಗಿಕ ತರಬೇತಿಯ ನಂತರ ಲೈಸೆನ್ಸ್ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://nabp.pharmacy/programs/foreign-pharmacy/

7. ನಾನು ಪಿಯುಸಿ ಓದುತ್ತಿದ್ದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ (ಐಐಎಸ್‌ಸಿ) ಸಂಸ್ಥೆಯ ಬಿ.ಎಸ್ಸಿ/ಎಂ.ಎಸ್ಸಿ (ಸಂಶೋಧನೆ) ಕೋರ್ಸ್ ಮಾಡಲು ಬಯಸಿದ್ದೇನೆ. ನನಗೆ ಮಾರ್ಗದರ್ಶಕರು ಯಾರೂ ಇಲ್ಲ. ದಯವಿಟ್ಟು ಮಾರ್ಗದರ್ಶನ ನೀಡಿ.

ನಾಲ್ಕು ವರ್ಷದ ಬಿ.ಎಸ್ಸಿ (ಸಂಶೋಧನೆ) ಕೋರ್ಸ್ ಅನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಸಂಸ್ಥೆಯಲ್ಲಿ ಮಾಡಲು ಜೆಇಇ (ಮೈನ್ಸ್ ಅಥವಾ ಅಡ್ವಾನ್ಸ್), ನೀಟ್, ಕೆವಿಪಿವೈ ಅಥವಾ ಐಐಎಸ್‌ಇಆರ್ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಈ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಸೀಟ್ ಹಂಚಿಕೆಯಾಗುತ್ತದೆ. ಈ ಕೋರ್ಸ್ ಅನ್ನು ಜೀವವಿಜ್ಞಾನ, ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಪರಿಸರ ವಿಜ್ಞಾನ ಮುಂತಾದ ವಿಷಯಗಳಲ್ಲಿ ಮಾಡಬಹುದು. ಬಿ.ಎಸ್ಸಿ (ಸಂಶೋಧನೆ) ಕೋರ್ಸನ್ನು ಇನ್ನಿತರ ಪ್ರತಿಷ್ಠಿತ ಸಂಸ್ಥೆಗಳಲ್ಲಿಯೂ ಮಾಡಬಹುದು ಎನ್ನುವುದು ನಿಮ್ಮ ಗಮನದಲ್ಲಿರಲಿ. ಬಿ.ಎಸ್ಸಿ ನಂತರ ಹೆಚ್ಚಿನ ತಜ್ಞತೆಗಾಗಿ, ನೇರವಾಗಿ ಪಿಎಚ್.ಡಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://bs-ug.iisc.ac.in/info_brochure.html

8. ನನಗೆ ನೀಟ್ ಮತ್ತು ಸಿಇಟಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಬಂದಿಲ್ಲ. ಜೀವವಿಜ್ಞಾನದಲ್ಲಿ ಆಸಕ್ತಿಯಿದೆ. ಬಿ.ಎಸ್ಸಿ ಕೋರ್ಸ್ ಅನ್ನು ಯಾವ ವಿಷಯದಲ್ಲಿ ಮಾಡಬಹುದು?

ಬಿ.ಎಸ್ಸಿ ಕೋರ್ಸ್ ಅನ್ನು  ಬಯಾಲಜಿ, ಬಯೋಕೆಮಿಸ್ಟಿç, ಬಯೋಟೆಕ್ನಾಲಜಿ, ಬಯೋಇನ್‌ಫರ್‌ಮೇಟಿಕ್ಸ್, ಮೈಕ್ರೊಬಯಾಲಜಿ, ಕ್ಲಿನಿಕಲ್ ರಿಸರ್ಚ್, ಜೆನೆಟಿಕ್ಸ್, ಸೈಕಾಲಜಿ, ಜೆರಿಯಾಟ್ರಿಕ್ ಕೇರ್, ಫೊರೆನ್ಸಿಕ್ ಸೈನ್ಸ್ ಮುಂತಾದ ವಿಷಯಗಳಲ್ಲಿ ಮಾಡಬಹುದು. ಆಸಕ್ತಿಯಿದ್ದರೆ, ಬಿ.ಎಸ್ಸಿ (ಪ್ಯಾರ ಮೆಡಿಕಲ್) ಮತ್ತು ಬಿ.ಫಾರ್ಮಾ ಕೋರ್ಸ್ಗಳನ್ನೂ ಮಾಡಬಹುದು.

9. ಎಂಬಿಎ ಮಾಡಲು ಪಿಜಿಸಿಇಟಿ ಕಡ್ಡಾಯವೇ? ಸರ್ಕಾರಿ ಕಾಲೇಜಿಗೆ ಪ್ರವೇಶ ಹೇಗೆ? ಈ ಕೋರ್ಸ್ನಲ್ಲಿ ಕಲಿಸುವ ವಿಷಯಗಳು ಯಾವುವು?

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ.

ಸರ್ಕಾರಿ ಮತ್ತು ಅನೇಕ ಖಾಸಗಿ ಕಾಲೇಜುಗಳಲ್ಲಿ ಎಂಬಿಎ ಪ್ರವೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿಜಿಸಿಇಟಿ ಪರೀಕ್ಷೆಯಲ್ಲಿನ ಫಲಿತಾಂಶ ಮತ್ತು ಇನ್ನಿತರ ಪ್ರಕ್ರಿಯೆಗಳ  ಮೂಲಕ ನಿರ್ಧರಿಸಲಾಗುತ್ತದೆ.

ಸಾಮಾನ್ಯವಾಗಿ, ಎಂಬಿಎ ಕೋರ್ಸಿನಲ್ಲಿ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಅರ್ಥಶಾಸ್ತç, ಹಣಕಾಸು, ಮಾನವ ಸಂಪನ್ಮೂಲ, ಉತ್ಪಾದನೆ, ಲಾಜಿಸ್ಟಿಕ್ಸ್, ಸಾಂಸ್ಥಿಕ ನಡವಳಿಕೆ, ಕೈಗಾರಿಕ ಸಂಬAಧಗಳು, ಸಂವಹನ, ಕಾನೂನು ಮುಂತಾದ ವಿಷಯಗಳನ್ನು ಕಲಿಸಲಾಗುತ್ತದೆ. ಇದರ ಜೊತೆಗೆ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಸೂತ್ರಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg

10. ನಾನು ಬಿ.ಎಸ್ಸಿ ಓದುತ್ತಿದ್ದು ಎಂ.ಎಸ್ಸಿ (ಭ್ರೂಣಶಾಸ್ತç) ಅಧ್ಯಯನ ಮಾಡಲು ಇಚ್ಛಿಸಿದ್ದೇನೆ. ಈ ಕೋರ್ಸ್ ಮಾಡಲು ಉತ್ತಮ ಕಾಲೇಜುಗಳು, ಪ್ರವೇಶ ಪರೀಕ್ಷೆ ಮತ್ತು ಕೋರ್ಸ್ ನಂತರದ ವೃತ್ತಿಜೀವನದ ಬಗ್ಗೆ ತಿಳಿಸಿ.

ಭ್ರೂಣಶಾಸ್ತç ವಿಶಿಷ್ಟವಾದ ಮತ್ತು  ಬೇಡಿಕೆಯಲ್ಲಿರುವ ಕ್ಷೇತ್ರ. ಎಂ.ಎಸ್ಸಿ (ಭ್ರೂಣಶಾಸ್ತç) ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಕೆಎಂಸಿ ಮಣಿಪಾಲ್ ಮುಂತಾದ ಕರ್ನಾಟಕದ  ಕೆಲವೇ ಸಂಸ್ಥೆಗಳಲ್ಲಿ ಲಭ್ಯ. ದೆಹಲಿಯ ಆಲ್ ಇಂಡಿಯ ಇನ್‌ಸ್ಟಿಟ್ಯೂಟ್ ಅಫ್ ಮೆಡಿಕಲ್ ಸೈನ್ಸ್ನಲ್ಲಿಯೂ ಈ ಕೋರ್ಸ್ ಲಭ್ಯವಿದೆ. ನೀವು ಸೇರಬಯಸುವ ಸಂಸ್ಥೆಯನ್ನು ಆದರಿಸಿ, ಪ್ರವೇಶ ಪರೀಕ್ಷೆಯಿರುತ್ತದೆ.

ಈ ಕೋರ್ಸ್ ನಂತರ ಉತ್ತಮವಾದ ವೃತ್ತಿಯ ಅವಕಾಶಗಳಿವೆ. ಎಂಬ್ರಿಯಾಲಜಿಸ್ಟ್,  ಫರ್ಟಿಲಿಟಿ ರಿಸರ್ಚರ್, ಜೆನಟಿಸಿಸ್ಟ್, ಜೆನಟಿಕ್ ಕೌನ್ಸೆಲರ್, ಲ್ಯಾಬ್ ಮ್ಯಾನೇಜರ್, ರಿಪ್ರೊಡಕ್ಟಿವ್ ಬಯಾಲಜಿಸ್ಟ್, ಎಂಬ್ರಿಯಾಲಜಿ ಉಪನ್ಯಾಸಕರು ಇತ್ಯಾದಿ  ಹುದ್ದೆಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು,  ಫರ್ಟಿಲಿಟಿ ಸೆಂಟರ್ಸ್, ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳು ಮುಂತಾದ ಕ್ಷೇತ್ರಗಳಲ್ಲಿ ಪಡೆಯಬಹುದು.

11. ಸರ್, ನಾನು ಎಂಜಿನಿಯರಿAಗ್ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಮನಃಶಾಸ್ತç ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುವ ಆಸಕ್ತಿಯಿದೆ. ಈ ಕೋರ್ಸ್ ಮತ್ತು ವೃತ್ತಿ ಸಂಬAಧಿತ ಅವಕಾಶಗಳ ಕುರಿತು ತಿಳಿಸಿ.

ಮನಃಶಾಸ್ತç ವಿಷಯದಲ್ಲಿ ಎಂ.ಎಸ್ಸಿ ಅಥವಾ ಎಂಎ ಮಾಡಬಹುದು. ಎಂ.ಎಸ್ಸಿ ಕೋರ್ಸ್ ವಿಜ್ಞಾನ ಮತ್ತು ಸಂಶೋಧನಾತ್ಮಕ ಆಂಶಗಳ ಮೇಲೆ ಕೇಂದ್ರೀಕೃತವಾಗಿದ್ದು ಎಂಎ ಕೋರ್ಸ್ ಮನೋವಿಜ್ಞಾನದ ಮಾನವಿಕ ಅಂಶಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದ, ಮುಂದಿನ ನಿಮ್ಮ ವೃತ್ತಿ ಯೋಜನೆಯನ್ನು ಪರಿಗಣಿಸಿ, ಅದರಂತೆ ಕೋರ್ಸ್ ಆಯ್ಕೆಯಿರಲಿ.

ಈ ಕೋರ್ಸ್ ನಂತರ ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಮಾನಸಿಕ ಆರೋಗ್ಯ ಸಂಸ್ಥೆಗಳು, ಕೌನ್ಸೆಲಿಂಗ್ ಸಂಸ್ಥೆಗಳು, ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಬಹುದು.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

12. ನಾನು ಬಿ.ಎಸ್ಸಿ (ತೋಟಗಾರಿಕೆ) ಮಾಡಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದೇನೆ. ನಾನು ಸಹಾಯಕ ಪ್ರಾಧ್ಯಾಪಕನಾಗಬೇಕೆಂದುಕೊAಡಿದ್ದೇನೆ. ನಿಮ್ಮ ಸಲಹೆ ನೀಡಿ.

ಉತ್ತಮ ಸಹಾಯಕ ಪ್ರಾಧ್ಯಾಪಕರಾಗಲು ವಿಷಯದ ಕುರಿತ ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ಈ ವೃತ್ತಿಯನ್ನು ಅನುಸರಿಸಬಹುದು.

ಸಾಮಾನ್ಯವಾಗಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬAಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ ೫೫ ಅಂಕಗಳೊAದಿಗೆ ಪಡೆದಿರಬೇಕು. ಹಾಗೂ, ರಾಷ್ಟಿçÃಯ/ರಾಜ್ಯ ಮಟ್ಟದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪಿ.ಎಚ್‌ಡಿ ಪದವಿಯನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ದೊರಕುತ್ತದೆ. ಈ ಶೈಕ್ಷಣಿಕ ಅರ್ಹತೆಯ ನಂತರ ಸರ್ಕಾರಿ ವಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು.

13. ನಾನು ೨ನೇ ಪಿಯುಸಿ ಓದುತ್ತಿದ್ದು, ವೆಟರ್ನರಿ ಕ್ಷೇತ್ರದಲ್ಲಿ ಆಸಕ್ತಿಯಿದೆ. ಇಂಡಿಯನ್ ವೆಟರ್ನರಿ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಮಾಡುವುದು ನನ್ನ ಉದ್ದೇಶ. ನಿಮ್ಮ ಮಾರ್ಗದರ್ಶನ ನೀಡಿ.

ಇಂಡಿಯನ್ ವೆಟರ್ನರಿ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಮಾಡುವುದು ನಿಮ್ಮ ಉದ್ದೇಶವಾದರೆ ಮೊದಲು ಬ್ಯಾಚಲರ್ ಅ¥s಼ï ವೆಟರ್ನರಿ ಸೈನ್ಸ್ (ಬಿವಿಎಸ್‌ಸಿ) ಕೋರ್ಸ್ ಮಾಡಬೇಕು. ಇಂಡಿಯನ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಸೇರಿದಂತೆ ರಾಜ್ಯದ ಅನೇಕ ಸಂಸ್ಥೆಗಳಲ್ಲಿ ಈ ಕೋರ್ಸ್ ಲಭ್ಯವಿದ್ದು, ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಸೀಟ್ ಹಂಚಿಕೆಯಾಗುತ್ತದೆ. ಈ ಕೋರ್ಸ್ ನಂತರ ಸಂಶೋಧನೆಯನ್ನು ಪಿಎಚ್.ಡಿ ಕೋರ್ಸ್ ಮೂಲಕ ಮಾಡಬಹುದು.

ಸಂಶೋಧನಾ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಕಲ್ಪನೆಯಿರಬೇಕು. ಸಂಶೋಧನೆ ಕುರಿತು ಸಾಕಷ್ಟು ಸಂಪಲ್ಮೂಲನಗಳು ಇದ್ದರೂ ಸಹ, ವಿಷಯವನ್ನು  ನಿರ್ಧರಿಸುವುದು ಸುಲಭವಲ್ಲ.  ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ivri.nic.in/

14. ನಾನು ಪಿಯುಸಿ (ವಿಜ್ಞಾನ) ಮಾಡಿ ಈಗ ಬಿಸಿಎ ಮಾಡಲು ಇಚ್ಛಿಸಿದ್ದೇನೆ. ಇದರಿಂದ ಭವಿಷ್ಯದಲ್ಲಿ ಹೇಗೆ ಸಹಾಯವಾಗುತ್ತದೆ?

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಸಿಎ ಪದವೀಧರರಿಗೆ ಬೇಡಿಕೆ ಇದೆ. ನಾಲ್ಕು ವರ್ಷದ ಬಿಸಿಎ ಕೋರ್ಸಿನಲ್ಲಿ ವೃತ್ತಿಪರ ಇಂಗ್ಲೀಷ್, ಗಣಿತ, ಸಂಖ್ಯಾಶಾಸ್ತç, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಬAಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಡೇಟಾ ಸೈನ್ಸ್, ಎಐ, ಎಂಎಲ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿAಗ್ ಮುಂತಾದ ವಿಷಯಗಳಲ್ಲಿ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕೋರ್ಸ್ ಮಾಡಬಹುದು.  ಕ್ಯಾಂಪಸ್ ನೇಮಕಾತಿಯಿರುವ ಕಾಲೇಜಿನಲ್ಲಿ ಬಿಸಿಎ ಮಾಡುವುದರಿಂದ ವೃತ್ತಿಯನ್ನು ಆರಂಭಿಸಲು ಸುಲಭವಾಗುತ್ತದೆ. ನೀವು ಸೇರಬಯಸುವ ಕಾಲೇಜನ್ನು ಅವಲಂಬಿಸಿ ಪ್ರವೇಶ ನೇರವಾಗಿಯೂ ಕೆಲವೊಮ್ಮೆ ಪ್ರವೇಶ ಪರೀಕ್ಷೆಯ ಮುಖಾಂತರವೂ ಆಗುತ್ತದೆ. ಹೆಚ್ಚಿನ ತಜ್ಞತೆಗಾಗಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ, ಸರ್ಟಿಫಿಕೆಟ್/ಡಿಪ್ಲೊಮಾ/ಎಂಸಿಎ/ಪಿಎಚ್.ಡಿ ಕೋರ್ಸ್ ಮಾಡಬಹುದು.

15. ಸರ್, ನಾನು ಎಂಎ (ಅರ್ಥಶಾಸ್ತç) ಕೋರ್ಸ್ ಅನ್ನು ಮುಕ್ತ ವಿಶ್ವವಿದ್ಯಾಲಯದ ಮೂಲಕ ಮಾಡಲು ಇಚ್ಛಿಸಿದ್ದೇನೆ. ಪ್ರವೇಶ ಪ್ರಕ್ರಿಯೆ ಯಾವಾಗ ಶುರುವಾಗಲಿದೆ? ದಯವಿಟ್ಟು ತಿಳಿಸಿ.

ಸ್ನಾತಕೋತ್ತರ ಕೋರ್ಸ್ ಪ್ರವೇಶ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಉದಾಹರಣೆಗೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಕಟಣೆಯ ಪ್ರಕಾರ ೨೦೨೩-೨೦೨೪ನೇ ಶೈಕ್ಷಣಿಕ ವರ್ಷದ  ಪ್ರವೇಶಕ್ಕೆ ದಿನಾಂಕ ೩೧, ಆಗಸ್ಟ್, ೨೦೨೩ ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksoumysuru.ac.in/

16. ನಾನು ಬಿ.ಎಸ್ಸಿ (ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ) ಮುಗಿಸಿದ್ದು, ಎಂ.ಎಸ್ಸಿ ಯಾವ ವಿಷಯದಲ್ಲಿ ಮಾಡಬಹುದು?

ಮೊದಲಿಗೆ, ಎಂ.ಎಸ್ಸಿ ನಂತರದ ನಿಮ್ಮ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು ಮತ್ತು ಅದರಂತೆ ಶಿಕ್ಷಣವನ್ನು ಮುಂದುವರೆಸಬೇಕು. ಎಂ.ಎಸ್ಸಿ ಕೋರ್ಸ್ ಅನ್ನು ಯಾವುದಾದರೂ ಒಂದು ವಿಷಯದಲ್ಲಿ (ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ) ಅಥವಾ ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಆಶಯದಂತೆ, ವಿಶ್ವವಿದ್ಯಾಲಯ ಅನುದಾನ ಆಯೋಗ ಮತ್ತು ವಿಶ್ವವಿದ್ಯಾಲಯದ ನಿಬಂಧನೆಗಳ ಅನುಸಾರ, ಎರಡು ವಿಷಯಗಳಲ್ಲಿಯೂ ಮಾಡಬಹುದು (ಡ್ಯುಯಲ್ ಡಿಗ್ರಿ). ಎರಡೂ ಕೋರ್ಸ್ ತರಗತಿಗಳ ವೇಳಾಪಟ್ಟಿ ಇದಕ್ಕೆ ಅನುವು ಮಾಡುವಂತಿದ್ದರೆ, ಏಕಕಾಲಕ್ಕೆ ಎರಡು ರೆಗ್ಯುಲರ್ ಕೋರ್ಸ್ಗಳನ್ನು ಮಾಡಬಹುದು ಅಥವಾ ಒಂದು ಕೋರ್ಸ್ನ್ನು ದೂರಶಿಕ್ಷಣ/ಆನ್‌ಲೈನ್ ಮೂಲಕ ಮಾಡಬಹುದು. ಎಂ.ಎಸ್ಸಿ ನಂತರ ಆಯಾ ಕ್ಷೇತ್ರಕ್ಕೆ ಸಂಬAಧಿಸಿದ ಪ್ರತಿಷ್ಠಿತ ಸರ್ಕಾರಿ/ಖಾಸಗಿ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಶಿಕ್ಷಣ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು.

ಪ್ರಮುಖವಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ, ವೃತ್ತಿಯೋಜನೆಯನ್ನು ರೂಪಿಸಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

17. ನಾನು ಬಿ.ಫಾರ್ಮಾ ಓದುತ್ತಿದ್ದು ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಅನುಸಾರ ಈ ಕೋರ್ಸ್ ಜೊತೆಗೆ ಮೂರು ವರ್ಷದ ಡಿಪ್ಲೊಮಾ (ಜನರಲ್ ನರ್ಸಿಂಗ್ ಅಂಡ್ ಮಿಡ್‌ವೈಫರಿ) ಮಾಡಬಹುದೇ?

ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಅನುಸಾರ ಎರಡು ರೆಗ್ಯುಲರ್ ಕೋರ್ಸ್ಗಳನ್ನು ಒಂದೇ ಸಮಯದಲ್ಲಿ ಮಾಡುವ ಅವಕಾಶವಿದೆ: ಆದರೆ, ಎರಡೂ ತರಗತಿಗಳ ವೇಳಾಪಟ್ಟಿ ಇದಕ್ಕೆ ಅನುವು ಮಾಡುವಂತಿರಬೇಕು. ನೀವು ಯಾವ ವಿಶ್ವವಿದ್ಯಾಲಯದಲ್ಲಿ ಈಗ ಅಧ್ಯಯನ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ. ಈ ಎರಡೂ ರೆಗ್ಯುಲರ್ ಕೋರ್ಸ್ಗಳಾಗಿರುವುದರಿಂದ ಹೆಚ್ಚಿನ ಮಾಹಿತಿಗಾಗಿ, ನೀವು ಓದುತ್ತಿರುವ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ. 

ಮೇಲಾಗಿ, ನೀವು ಕೇಳುತ್ತಿರುವ ಕೋರ್ಸ್ಗಳು ಸ್ವಾಸ್ಥ÷್ಯ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬAಧಿಸಿದ್ದರೂ, ಎರಡೂ ಕೋರ್ಸ್ ಸಂಬAಧಿಸಿದ ವೃತ್ತಿಗಳು ವಿಭಿನ್ನವಾಗಿದೆ. ನೀವು ಈಗಾಗಲೇ ಎರಡನೇ ವರ್ಷದ ಬಿ.ಫಾರ್ಮಾ ಮಾಡುತ್ತಿರುವುದರಿಂದ, ಮೇಲ್ನೋಟಕ್ಕೆ, ಈ ಕೋರ್ಸ್ ಮುಂದುವರೆಸುವುದೇ ಸೂಕ್ತವೆನಿಸುತ್ತದೆ. ಅಂತಿಮ ಆಯ್ಕೆ ನಿಮ್ಮದು.

18. ನಾನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂಬಿಎ ಮುಗಿಸಿದ್ದು, ಈಗ ಅಮೇರಿಕ ದೇಶದ ಸಿಪಿಎ ಕೋರ್ಸ್ ಮಾಡಲು ಇಚ್ಛಿಸಿದ್ದೇನೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.

ಅಮೇರಿಕ ದೇಶದ ವಿವಿಧ ರಾಜ್ಯಗಳ ಲೆಕ್ಕಪತ್ರ ಮಂಡಳಿ ನೀಡುವ ಸಿಪಿಎ (ಸರ್ಟಿಫೈಡ್ ಪಬ್ಲಿಕ್ ಅಕೌಂಟೆAಟ್), ಒಂದು ಪ್ರತಿಷ್ಠಿತ ಅಕೌಂಟೆನ್ಸಿ ಪರವಾನಗಿ ಆಗಿದು,್ದ ಭಾರತವೂ ಸೇರಿದಂತೆ ಅನೇಕ ರಾಷ್ಟçಗಳಲ್ಲಿ  ಅಪಾರವಾದ ಮನ್ನಣೆಯಿದೆ. ಈಗ ಭಾರತದಲ್ಲಿದ್ದುಕೊಂದೇ ಈ ಪರವಾನಗಿಯನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://nasba.org/licensure/gettingacpalicense/
https://www.becker.com/blog/cpa/how-to-become-a-cpa-in-india

19. ನಾನು ಎಂಬಿಎ (ಆನ್‌ಲೈನ್) ಮಾಡಲು ಇಚ್ಛಿಸಿದ್ದೇನೆ. ಆನ್‌ಲೈನ್ ಮತ್ತು ರೆಗ್ಯುಲರ್ ಎಂಬಿಎ ಕೋರ್ಸ್ಗಳಲ್ಲಿನ ವ್ಯತ್ಯಾಸಗಳೇನು? ಉತ್ತಮ ಕಾಲೇಜುಗಳಾವುವು?

ಉದ್ಯಮದ ಜವಾಬ್ದಾರಿಗಳನ್ನು ನಿರ್ವಹಿಸಲು ಸಮಗ್ರವಾದ ತಿಳುವಳಿಕೆಯನ್ನು-ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಆಯವ್ಯಯ ಶಾಸ್ತç, ಬಂಡವಾಳ ಪೂರೈಕೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ ಇತ್ಯಾದಿ-ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಎಂಬಿಎ (ರೆಗ್ಯುಲರ್) ಕೋರ್ಸಿನಲ್ಲಿ ವೈವಿಧ್ಯಮಯ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಉದಾಹರಣೆಗೆ, ಅಸೈನ್‌ಮೆಂಟ್ಸ್, ಮಿನಿ ಪ್ರಾಜೆಕ್ಟ್÷್ಸ, ಕೇಸ್ ಸ್ಟಡೀಸ್, ಗ್ರೂಪ್ ಡಿಸ್ಕಷನ್, ಪ್ರೆಸೆಂಟೇಷನ್ ಇತ್ಯಾದಿ. ಈ ಎಲ್ಲಾ ವಿಧಾನಗಳನ್ನು ಪರಿಣಾಮಕಾರಿಯಾಗಿ ಆನ್‌ಲೈನ್ ಮೂಲಕ ಅಳವಡಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗಾಗಿ, ರೆಗ್ಯುಲರ್ ಎಂಬಿಎ ಕೋರ್ಸಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ನೀವು ಈಗಾಗಲೇ ವೃತ್ತಿಯಲ್ಲಿದ್ದರೆ, ವಾರಾಂತ್ಯದ ಅಥವಾ ಆನ್‌ಲೈನ್ ಎಂಬಿಎ ಮಾಡಿ, ವೃತ್ತಿಯಲ್ಲಿ ಪ್ರಗತಿಯನ್ನು ಸಾಧಿಸಬಹುದು. ಕಾಲೇಜು ಆಯ್ಕೆ  ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ: https://collegedunia.com/courses/master-of-business-administration-mba/online-courses#9 https://www.youtube.com/watch?v=DmaXk-MuoOI

20. ಬ್ಯಾಂಕಿಂಗ್ ಪರೀಕ್ಷೆಯ ಬಗ್ಗೆ ತಿಳಿಸಿ. ಈ ಪರೀಕ್ಷೆಯನ್ನು  ಬಿಸಿಎ ಪದವೀಧರರು ಬರೆಯಬಹುದೇ?

ಬಿಸಿಎ ಪದವಿಯ ನಂತರ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ಬ್ಯಾಂಕಿAಗ್ ಕ್ಷೇತ್ರದಲ್ಲಿನ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ, ಪ್ರೊಬೆಷನರಿ ಆಫೀಸರ್ ಹುದ್ದೆಗೆ ಮೂರು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಇರುತ್ತದೆ.

  • ಪೂರ್ವಭಾವಿ ಪರೀಕ್ಷೆ
  • ಮುಖ್ಯ ಪರೀಕ್ಷೆ
  • ವೈಯಕ್ತಿಕ ಸಂದರ್ಶನ

ವೈಯಕ್ತಿಕ ಸಂದರ್ಶನದ ನಂತರ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ, ಅರ್ಜಿ ಸಲ್ಲಿಸಲು ಕನಿಷ್ಠ ೨೦ ವರ್ಷ ಆಗಿರಬೇಕು; ಗರಿಷ್ಠ ೩೦ ವರ್ಷ ವಯೋಮಿತಿ ಮೀರಿರಬಾರದು.  ಈ ಆಯ್ಕೆ ಪ್ರಕ್ರಿಯೆಯ ಹಂತಗಳು, ಮಾದರಿ, ಪಠ್ಯಕ್ರಮ, ಅವಕಾಶಗಳು, ಸವಾಲುಗಳು ಇತ್ಯಾದಿಗಳನ್ನು ಅರಿತು ಖುದ್ದಾಗಿ ನೀವೇ ತಯಾರಾಗಬಹುದು ಅಥವಾ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಬ್ಯಾಂಕಿAಗ್ ಮತ್ತು ಫೈನಾನ್ಸ್ ಸಂಬಂಧಿತ ಅರೆಕಾಲಿಕ ಕೋರ್ಸ್ಗಳನ್ನು ಮಾಡುವುದರಿಂದ ಈ ಕ್ಷೇತ್ರದಲ್ಲಿನ ಸವಾಲುಗಳು ಮತ್ತು ಅವಕಾಶಗಳ ಅರಿವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ನೆರವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://ibps.in/

21. ನನಗೆ ವಿಜ್ಞಾನ ಕ್ಷೇತ್ರದಲ್ಲಿ ಓದುವ ಆಸೆಯಿತ್ತು. ಆದರೆ, ಬೇರೆಯವರ ಒತ್ತಾಯದಿಂದ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು, ಈಗ ಬಿಕಾಂ ಮಾಡುತ್ತಿದ್ದೇನೆ. ಬಿಕಾಂ ನಂತರ ಉದ್ಯಮಿಯಾಗಲು ಮಾರ್ಗದರ್ಶನ ನೀಡಿ.

ಉದ್ಯಮವನ್ನು ಪ್ರಾರಂಭಿಸುವ ಮುಂಚೆ, ನೀವು ಮಾರುಕಟ್ಟೆಗೆ ನೀಡಬಯಸುವ ಉತ್ಪನ್ನ ಅಥವಾ ಸೇವೆಯ ಕುರಿತು ಸ್ಪಷ್ಟವಾದ ಪರಿಕಲ್ಪನೆಯಿರಬೇಕು. ಹಾಗೂ, ಮಾರುಕಟ್ಟೆಯಲ್ಲಿ ಅಂತಹ ಉತ್ಪನ್ನ ಅಥವಾ ಸೇವೆಗೆ ಬೇಡಿಕೆ ಇರಬೇಕು; ವಿನೂತನ  ಉತ್ಪನ್ನ ಅಥವಾ ಸೇವೆಯಾದರೆ, ಬೇಡಿಕೆಯನ್ನು ನಿರೀಕ್ಷಿಸುವಂತಿರಬೇಕು. ಮಾರುಕಟ್ಟೆಯ ಬೇಡಿಕೆಯ ಪ್ರಮಾಣ, ಬೆಲೆ, ಉತ್ಪಾದನಾ ಸವಾಲುಗಳು, ಮಾನವ ಸಂಪನ್ಮೂಲ, ಹಣಕಾಸು ಇತ್ಯಾದಿ ಅಂಶಗಳ ಕುರಿತು ನಿಖರವಾದ ಮಾಹಿತಿಯನ್ನು ಸಂಗ್ರಹಿಸಲು ಸಂಶೋಧನೆಯನ್ನು ಮಾಡಬೇಕು. ಸಂಶೋಧನೆಯಲ್ಲಿ ಲಭಿಸಿದ ಮಾಹಿತಿಯನ್ನು ವಿಶ್ಲೇಶಿಸಿ, ಅದರಂತೆ ಉದ್ಯಮದ ಯೋಜನೆಯನ್ನು ಸಿದ್ಧಪಡಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಎಲ್ಲಾ ಕಾರ್ಯಗಳನ್ನು ನಿಭಾಯಿಸುವ ಆತ್ಮವಿಶ್ವಾಸವಿದ್ದರೆ ಉದ್ಯಮವನ್ನು ಸ್ವತಃ ಸ್ಥಾಪಿಸಬಹುದು ಅಥವಾ ಉದ್ಯಮ ಕ್ಷೇತ್ರದ ಮಾರ್ಗದರ್ಶಕರನ್ನು ಸಂಪರ್ಕಿಸಬಹುದು.  ಹೊಸ ಉದ್ಯಮಿಗಳಿಗೆ ನೆರವಾಗುವ ಕೇಂದ್ರ ಸರ್ಕಾರದ ಅನೇಕ ಯೋಜನೆಗಳ ಮಾಹಿತಿಗಾಗಿ ಗಮನಿಸಿ: https://digest.myhq.in/top-10-government-schemes-for-startups-in-india

22. ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದು ಕಾರಣಾಂತರಗಳಿAದ ಪದವಿ ಕೋರ್ಸನ್ನು ಮುಂದುವರಿಸಲು ಆಗಲಿಲ್ಲ. ಈಗ ಬಿಎ (ದೂರ ಶಿಕ್ಷಣ) ಮಾಡಬೇಕೆಂದುಕೊಂಡಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ.

ಬಿಎ ಕೋರ್ಸನ್ನು ಯಾವ ವಿಷಯದಲ್ಲಿ ಮಾಡಬೇಕು ಮತ್ತು ನಂತರದ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟವಾದ ಕಲ್ಪನೆಯಿರಬೇಕು. ೨೦೨೩-೨೦೨೪ನೇ ಶೈಕ್ಷಣಿಕ ವರ್ಷದ  ಪದವಿ ಕೋರ್ಸ್ (ದೂರಶಿಕ್ಷಣ) ಪ್ರವೇಶ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಉದಾಹರಣೆಗೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಸೂಚನೆಯಂತೆ ಮೂರು ವರ್ಷದ ಬಿಎ ಪದವಿಗೆ ಅರ್ಜಿ ಸಲ್ಲಿಸಲು ದಿನಾಂಕ ೩೧, ಆಗಸ್ಟ್ ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ksoumysuru.ac.in/

23. ನಾನು ಸರ್ಕಾರಿ ಟೂಲ್ ರೂಮ್ ಮತ್ತು ಟ್ರೆöÊನಿಂಗ್ ಸೆಂಟರ್‌ನಲಿ,್ಲ ಟೂಲ್ ಮತ್ತು ಡೈ ಮೇಕಿಂಗ್ ಡಿಪ್ಲೊಮಾ ಮಾಡಿದ್ದೇನೆ. ಮುಂದೇನು ಮಾಡುವುದು ತಿಳಿಸಿ.

ಮುಂದಿನ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಈ ಸಲಹೆಗಳನ್ನು ಗಮನಿಸಿ:

  • ಟೂಲ್ ಮತ್ತು ಡೈ ಮೇಕಿಂಗ್ ಡಿಪ್ಲೊಮಾ ಅಭ್ಯರ್ಥಿಗಳಿಗೆ ಉತ್ಪಾದನಾ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆಯಿದೆ. ಹಾಗಾಗಿ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೇರವಾಗಿ ಉದ್ಯೋಗವನ್ನು ಪಡೆಯಬಹುದು.
  • ಹೆಚ್ಚಿನ ತಜ್ಞತೆಗಾಗಿ, ಬಿಇ/ಬಿಟೆಕ್ (ಮೆಕ್ಯಾನಿಕಲ್) ಕೋರ್ಸ್ ಮಾಡಬಹುದು.
  • ಔದ್ಯೋಗಿಕ ಕ್ಷೇತ್ರದ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

24. ಸರ್, ನಾನು ಬಿಎ (ಅರ್ಥಶಾಸ್ತç) ೬ನೇ ಸೆಮೆಸ್ಟರ್ ಓದುತ್ತಿದ್ದೇನೆ. ೩ ತಿಂಗಳ ಇಂಟರ್ನ್ಶಿಪ್ ಮಾಡಬೇಕು. ಒಳ್ಳೆಯ ಇಂಟರ್ನ್ಶಿಪ್ ನೀಡುವ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ವಿವರವನ್ನು ನೀಡಿ.

ಶಿಕ್ಷಣ ಸಂಸ್ಥೆಗಳಲ್ಲಿ ನೀಡುವ ಸೈದ್ಧಾಂತಿಕ ಜ್ಞಾನದ ಪ್ರಾಯೋಗಿಕ ಅಂಶಗಳನ್ನು ಅರ್ಥಮಾಡಿಕೊಳ್ಳಲು, ಕಾರ್ಪೊರೇಟ್ ಪ್ರಾಜೆಕ್ಟ್ಗಳನ್ನು (ಇಂಟರ್ನ್ಶಿಪ್) ವಿನ್ಯಾಸಗೊಳಿಸಲಾಗುತ್ತದೆ. ಆದಾಗ್ಯೂ, ಈ ಸೀಮಿತ ಉದ್ದೇಶದೊಂದಿಗೆ ಪ್ರಾಜೆಕ್ಟ್ಗಳನ್ನು ಮಾಡುವುದು ಸೂಕ್ತವಲ್ಲ; ಬದಲಾಗಿ, ಯಶಸ್ವಿ ವೃತ್ತಿಯನ್ನು  ರೂಪಿಸುವ ಅತ್ಯುತ್ತಮ  ಅವಕಾಶವನ್ನಾಗಿ ಬಳಸಿಕೊಳ್ಳಬೇಕು. ಈ ಸಲಹೆಗಳನ್ನು ಗಮನಿಸಿ:

  • ನಿಮ್ಮ ಆಸಕ್ತಿ, ಅಭಿರುಚಿ, ಕೌಶಲ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ರೂಪಿಸಿ.
  • ವೃತ್ತಿಯೋಜನೆಯಲ್ಲಿ, ನೀವು ಮುಂದೆ ಯಾವ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡಲು ಬಯಸುತ್ತೀರಿ ಎಂದು ನಿರ್ಧರಿಸಿ, ಆ ಕ್ಷೇತ್ರದ ಪ್ರತಿಷ್ಠಿತ ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಪಟ್ಟಿಯನ್ನು ಮಾಡಬೇಕು. ಈ ಪಟ್ಟಿಯನ್ನು ಮಾಡಲು ಜಾಲತಾಣ ಮತ್ತು ಲಿಂಕ್ಡ್ಇನ್ (LinkedIn) ಸಾಮಾಜಿಕ ಮಾಧ್ಯಮ ಸಹಾಯವಾಗುತ್ತದೆ.
  • ಪ್ರಾಜೆಕ್ಟಿಗೆ ಅಗತ್ಯವಾದ  ವಿಷಯವನ್ನು  ನಿರ್ಧರಿಸುವುದು ಸುಲಭವಲ್ಲ.  ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ, ಕಂಪನಿಗೆ ನೀವು ಮಾಡುವ ಪ್ರಾಜೆಕ್ಟ್ ಉಪಯುಕ್ತವಾಗಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.
  • ಈ ಪ್ರತಿಷ್ಠಿತ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳನ್ನು ಇಮೇಲ್/ದೂರವಾಣಿ ಮೂಲಕ ಸಂಪರ್ಕಿಸಿ, ನಿಮ್ಮ ಪ್ರಸ್ತಾವನೆಯನ್ನು ಪರಿಣಾಮಕಾರಿಯಾಗಿ ಮಂಡಿಸಿ.

ಅತ್ಯುತ್ತಮ ಕಂಪನಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ಗಳನ್ನು ಪಡೆಯಲು, ಶಿಕ್ಷಣ ಸಂಸ್ಥೆಗಳ ಪ್ಲೇಸ್‌ಮೆಂಟ್ ಸೆಲ್ ಕಾರ್ಯನಿರ್ವಹಿಸುತ್ತದೆ. ನೀವು ಓದುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಈ ಸೌಕರ್ಯವಿಲ್ಲದಿದ್ದರೆ, ಸ್ವಂತ ಪ್ರಯತ್ನಗಳಿಂದ ಸೂಕ್ತವಾದ ಪ್ರಾಜೆಕ್ಟ್ ಪಡೆಯಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ: http://www.vpradeepkumar.com/projects-to-kickstart-your-career/

25. ನಾನು ಪಿಯುಸಿ (ವಿಜ್ಞಾನ) ಮುಗಿಸಿದ್ದು, ೮೪,೦೦೦ ರ‍್ಯಾಂಕ್ ಗಳಿಸಿರುವುದರಿಂದ ಎಂಜಿನಿಯರಿAಗ್‌ಗೆ ಸರ್ಕಾರಿ ಸೀಟ್ ಸಿಗುವುದಿಲ್ಲವೆನಿಸುತ್ತಿದೆ. ಆದ್ದರಿಂದ, ಕೊನೆಯವರಿಗೂ ಕಾಯುವುದೇ ಅಥವಾ ಬಿಬಿಎ/ಬಿಬಿಎಮ್ ಮಾಡುವುದೇ? ಯಾವುದು ಸೂಕ್ತ?

ಈ ವರ್ಷದ ಎಂಜಿನಿಯರಿAಗ್ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಕಳೆದ ವರ್ಷದ ಮಾಹಿತಿಯಂತೆ, ೧೭೯೩ ಸರ್ಕಾರಿ ಎಂಜಿನಿಯರಿAಗ್ ಕಾಲೇಜುಗಳ ಸೀಟುಗಳು ಭರ್ತಿಯಾಗಲಿಲ್ಲ. ಹಾಗಾಗಿ, ಕರ್ನಾಟಕದ ಯಾವುದಾದರೂ ಕಾಲೇಜಿನಲ್ಲಿ ಎಂಜಿನಿಯರಿAಗ್ ಸೀಟ್ ಸಿಗುವ ಸಾಧ್ಯತೆಯಿದೆ. ಮೇಲಾಗಿ, ಎಂಜಿನಿಯರಿAಗ್ ಮತ್ತು ಬಿಬಿಎ ಸಂಬAಧಿತ ವೃತ್ತಿಗಳಿಗೆ ಬೇಕಾಗುವ ಅಭಿರುಚಿ ಮತ್ತು ಕೌಶಲಗಳು ವಿಭಿನ್ನವಾಗಿವೆ. ಹಾಗಾಗಿ, ನಿಮಗೆ ಯಾವ ವೃತ್ತಿ ಸೂಕ್ತ ಎಂದು ಪರೀಶೀಲಿಸುವುದು ಮುಖ್ಯ. ಅಂತಿಮ ನಿರ್ಧಾರ ನಿಮ್ಮದು.

26. ನಾನು ಬಿ.ಎಸ್ಸಿ ಮುಗಿಸಿದ್ದೇನೆ. ಈಗ ಗ್ರಾಮೀಣ ಮತ್ತು ನಗರಾಭಿವೃದ್ಧಿ ವಿಷಯದಲ್ಲಿ ಡಿಪ್ಲೊಮಾ ಮಾಡುವ ಆಸಕ್ತಿಯಿದೆ. ಈ ವಿಷಯದ ಕೋರ್ಸ್ ಮಾಡಲು ಉತ್ತಮ ಕಾಲೇಜುಗಳ ವಿವರವನ್ನು ತಿಳಿಸಿ.

ನಮಗಿರುವ ಮಾಹಿತಿಯಂತೆ ಈ ಎರಡೂ ವಿಭಿನ್ನವಾದ ವಿಷಯಗಳಿಗೆ ಸಂಬAಧಿಸಿದAತೆ ಒಂದೇ ಡಿಪ್ಲೊಮಾ ಕೋರ್ಸ್ ಲಭಿಸುವುದು ಸಾಧ್ಯವಾಗಲಾರದು. ಹಾಗಾಗಿ, ನಿಮ್ಮ ಆಸಕ್ತಿಯಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ಅಥವಾ ಎರಡು ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಏಕಕಾಲದಲ್ಲಿ ಮಾಡಬಹುದು. ಈ ಕೋರ್ಸ್ಗಳು ಆನ್‌ಲೈನ್/ದೂರಶಿಕ್ಷಣದ ಮೂಲಕ ದೊರೆಯುತ್ತದೆ. ಹಾಗೂ, ನಿಮ್ಮ ವೃತ್ತಿಯೋಜನೆಯನ್ನು ಅನುಷ್ಠಾನಗೊಳಿಸಲು ಸಹಾಯವಾಗುವುದಾದರೆ, ಈ ವಿಷಯಗಳ ಬಗ್ಗೆ ಎಂಎ ಕೋರ್ಸ್ ಮಾಡುವ ಸಾಧ್ಯತೆಗಳನ್ನೂ ಪರಿಶೀಲಿಸಿ. ಜಾಲತಾಣದಲ್ಲಿ ಪ್ರಾಥಮಿಕ ಸಂಶೋಧನೆಯ ಮೂಲಕ  ಸಮಗ್ರವಾದ ಕೋರ್ಸ್ ಮಾಹಿತಿಯನ್ನು ಕಲೆಹಾಕಿ, ಮುಂದಿನ ನಿರ್ಧಾರವನ್ನು ಮಾಡಬಹುದು. ನೀವು ಕೇಳುತ್ತಿರುವ ವಿಷಯಗಳ ಕುರಿತಾದ ಕೋರ್ಸ್ ಮಾಹಿತಿಗಾಗಿ ಗಮನಿಸಿ: http://ignou.ac.in/ignou/aboutignou/school/soce/programmes https://swayam.gov.in/explorer?searchText=urban+planning

27. ನಾನು ಬಿ.ಎಸ್ಸಿ ೩ನೇ ಸೆಮೆಸ್ಟರ್ ಓದುತ್ತಿರುವಾಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿರುತ್ತೇನೆ. ಬಡ್ತಿಗೆ, ಈ ಶೈಕ್ಷಣಿಕೆ  ಅರ್ಹತೆಯನ್ನು  ಪರಿಗಣಿಸುತ್ತಾರೆಯೇ? ಅಥವಾ, ಪದವಿಯನ್ನು ಗಳಿಸಿದ ಬಳಿಕವೇ ಬಡ್ತಿಗೆ ಅರ್ಹತೆ ಸಿಗುತ್ತದೆಯೇ?

ನಿಮ್ಮ ನೇಮಕಾತಿಯ ನಿಯಮ ಮತ್ತು ನಿಬಂಧನೆಗಳು, ಸೇವಾ ವಿವರಗಳ ಮಾಹಿತಿಯಿಲ್ಲದೆ ನಿಖರವಾಗಿ ಉತ್ತರಿಸುವುದು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ.

28. ನಾನು ಅಂತಿಮ ಸೆಮೆಸ್ಟರ್ ಬಿಕಾಂ ಮಾಡುತ್ತಿದ್ದು, ಮುಂದೆ ಸಿಎ ಮಾಡುವ ಗುರಿ ಇದೆ. ಮುಂದೇನು ಮಾಡಬೇಕು ತಿಳಿಸಿ.

ಬಿಕಾಂ ಪರೀಕ್ಷೆಯಲ್ಲಿ ಶೇಕಡ ೫೫ ಅಂಕಗಳನ್ನು ಗಳಿಸಿದಲ್ಲಿ, ಇಂಟರ್‌ಮೀಡಿಯಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ ೩ ವರ್ಷದ ಆರ್ಟಿಕಲ್ಡ್ ಟ್ರೆöÊನಿಂಗ್‌ಗೆ  ಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಟ ೩-೪ ವರ್ಷ ಬೇಕಾಗುತ್ತದೆ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಚಾರ್ಟರ್ಡ್ ಅಕೌಂಟೆAಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo

29. ನಾನು ಡಿ.ಇಡಿ ಮುಗಿಸಿದ್ದು, ಈಗ ಬಿ.ಇಡಿ ತತ್ಸಮಾನ ಇಂಟಿಗ್ರೇಟೆಡ್ ಕೋರ್ಸ್ ಮಾಡಲು ಬಯಸಿದ್ದೇನೆ. ಯಾವ ವಿಶ್ವವಿದ್ಯಾಲಯದಲ್ಲಿ ಮಾಡಬಹುದು?

ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಆಶಯದಂತೆ ಐಟಿಇಪಿ (ಇಂಟಿಗ್ರೇಟೆಡ್  ಟೀಚರ್ ಎಜುಕೇಷನ್ ಪ್ರೋಗ್ರಾಮ್) ಅನುಸಾರ ನಾಲ್ಕು ವರ್ಷದ ಇಂಟಿಗ್ರೇಟೆಡ್ ಬಿಇಡಿ ಕೋರ್ಸನ್ನು ವಿಜ್ಞಾನ (ಬಿ.ಎಸ್ಸಿ), ವಾಣಿಜ್ಯ(ಬಿಕಾಂ) ಕಲಾ (ಬಿಎ) ವಿಭಾಗಗಳೊಂದಿಗೆ ಮಾಡುವುದು ನಿಮ್ಮ ಭವಿಷ್ಯದ ದೃಷ್ಠಿಯಿಂದ ಸೂಕ್ತವೆನಿಸುತ್ತದೆ. ಉದಾಹರಣೆಗೆ, ವಿಜ್ಞಾನದ ವಿಷಯಗಳನ್ನು ಭೋಧಿಸುವ ಆಸಕ್ತಿಯಿದ್ದರೆ, ಬಿ.ಎಸ್ಸಿ, ಬಿಇಡಿ ಕೋರ್ಸ್ ಮಾಡಬಹುದು. ಈ ಕೋರ್ಸನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಮೈಸೂರು ಹಾಗೂ  ಸರ್ಕಾರಿ ಕಾಲೇಜುಗಳಲ್ಲಿ ಮಾಡಬಹುದು. ಪ್ರವೇಶ ಪ್ರಕ್ರಿಯೆ ನ್ಯಾಷನಲ್ ಕಾಮನ್ ಎಂಟ್ರನ್ಸ್ ಟೆಸ್ಟ್ (ಎನ್‌ಸಿಇಟಿ) ಮೂಲಕ ನಡೆಯುತ್ತದೆ. ಇದಲ್ಲದೆ, ಅನೇಕ ಖಾಸಗಿ ವಿಶ್ವವಿದ್ಯಾಲಯಗಳಲ್ಲಿಯೂ ಇಂಟಿಗ್ರೇಟೇಡ್ ಬಿ.ಇಡಿ ಕೋರ್ಸ್ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ncet.samarth.ac.in

30. ನಮಸ್ಕಾರ, ನಾನು ಕಳೆದ  ೪೦ ವರ್ಷಗಳಿಂದ ಪ್ರಜಾವಾಣಿಯ ಓದುಗ. ನಿಮ್ಮ ಅಂಕಣ ತುಂಬಾ ಉಪಯುಕ್ತ. ನನ್ನದು ಎರಡು ಪ್ರಶ್ನೆಗಳು:

  • ನನ್ನ ಮಗಳು ದ್ವಿತೀಯ ಪಿಯುಸಿ (ವಾಣಿಜ್ಯ) ಓದುತ್ತಿದ್ದಾಳೆ. ಮುಂದೆ ಜೀವನದ ಭದ್ರತೆಯ ದೃಷ್ಠಿಯಿಂದ ಯಾವ ಕೋರ್ಸ್ ಓದುವುದು ಉತ್ತಮ?
  • ದ್ವಿತೀಯ ಪಿಯುಸಿ ಪರೀಕ್ಷೆಯ ನಂತರದ ರಜೆಯಲ್ಲಿ ಅವಳಿಗೆ ಯಾವ ತರಬೇತಿಯ ಅವಶ್ಯಕತೆ ಇದೆ? ನಾವು ಶಿವಮೊಗ್ಗದಲ್ಲಿ ಇರುತ್ತೇವೆ. ಇಲ್ಲಿ ಯಾವ ತರಬೇತಿ ಸಿಗಬಹುದು? ದಯವಿಟ್ಟು ಉತ್ತರಿಸಿ.

ಈ ಸಲಹೆಗಳನ್ನು ಗಮನಿಸಿ:

  • ಪಿಯುಸಿ ನಂತರ ಬಿಕಾಂ ಮಾಡಿ ಉದ್ಯೋಗ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದು. ಈಗ ಬಿಕಾಂ ಪದವಿಯನ್ನು ಸುಮಾರು ಹತ್ತು ವಿಷಯಗಳಲ್ಲಿ (ಬ್ಯಾಂಕಿAಗ್, ಇನ್‌ಶ್ಯೂರೆನ್ಸ್, ಇನ್ವೆಷ್ಟ್ಮೆಂಟ್, ಅಕೌಂಟಿAಗ್ ಟ್ರಾವೆಲ್ ಇತ್ಯಾದಿ) ಮಾಡಬಹುದು. ಪದವಿಯ ನಂತರ ಆಯಾ ಕ್ಷೇತ್ರಗಳಲ್ಲಿ, ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
  • ಆಸಕ್ತಿ, ಅಭಿರುಚಿಯಿದ್ದಲ್ಲಿ ಪಿಯುಸಿ ನಂತರ ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ, ಅತ್ಯುನ್ನತ ಆಯ್ಕೆ ಎನ್ನಬಹುದಾದ ಸಿಎ ಕೋರ್ಸ್ ಮಾಡಬಹುದು.
  • ವಾಣಿಜ್ಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಹಾಗಾಗಿ, ಮುಂದಿನ ಶೈಕ್ಷಣಿಕ ಕೋರ್ಸ್ ಜೊತೆಗೆ, ವ್ಯಕ್ತಿತ್ವ ಮತ್ತು ಕೌಶಲಾಭಿವೃದ್ಧಿ ಕೋರ್ಸ್ ಮಾಡುವುದು ಸೂಕ್ತ. 
  • ನಮಗಿರುವ ಮಾಹಿತಿಯಂತೆ, ಕೌಶಲಾಭಿವೃದ್ಧಿ, ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ ತರಬೇತಿ, ಸಿಎ ಕೋರ್ಸ್ ಮಾಡಲು ಆರ್ಟಿಕಲ್ಡ್ ಟ್ರೆöÊನಿಂಗ್ ಮುಂತಾದ ಸೌಕರ್ಯಗಳು ಶಿವಮೊಗ್ಗದಲ್ಲೂ ದೊರಕುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=jmijSoqBDVw

31. ನಾನು ಮೂರು ವರ್ಷದ ಪ್ಯಾರಮೆಡಿಕಲ್ ಮುಗಿಸಿದ್ದು, ಈಗ ಬಿಕಾಂ ಮಾಡಬಹುದೇ? ಅಥವಾ ಈ ಕೋರ್ಸ್ ಪಿಯುಸಿಗೆ ಸಮಾನವೇ?

ನಮ್ಮ ಅಭಿಪ್ರಾಯದಂತೆ, ಮೂರು ವರ್ಷದ ಪ್ಯಾರಮೆಡಿಕಲ್ ಕೋರ್ಸ್ ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ನಿಮಗೆ ಬಿಕಾಂ ಮಾಡುವ ಅರ್ಹತೆಯಿರುತ್ತದೆ. ನಿಖರವಾದ ಮಾಹಿತಿಗಾಗಿ, ನೀವು ಬಿಕಾಂ ಮಾಡಬಯಸುವ ಕಾಲೇಜನ್ನು ಸಂಪರ್ಕಿಸಿ.

32. ನಾನು ಎಂಎ (ಅರ್ಥಶಾಸ್ತç) ಮಾಡುತ್ತಿದ್ದು, ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿಯಿದೆ. ಯುಪಿಎಸ್‌ಸಿ ಮೂಲಕ ಉದ್ಯೋಗವನ್ನು ಮಾಡಲು ಆಸಕ್ತಿಯಿದೆ. ಎಂಎ (ಅರ್ಥಶಾಸ್ತç) ಹೇಗೆ ಉಪಯೋಗವಾಗಬಹುದು?

ಎಂಎ (ಅರ್ಥಶಾಸ್ತç) ಕೋರ್ಸ್ ನಂತರ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ, ನಿಮ್ಮ ಆಸಕ್ತಿಯ ಅನುಸಾರ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ, ಬ್ಯಾಂಕಿAಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲೂ ವೃತ್ತಿಯನ್ನು ಅರಸಬಹುದು. ಡಾಕ್ಟರೇಟ್ ಮಾಡಿದರೆ, ಶಿಕ್ಷಕ ವೃತ್ತಿಯಲ್ಲಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಬಹುದು.

ಪ್ರಮುಖವಾಗಿ, ನೀವು ಸ್ವಯಂ-ಮೌಲ್ಯಮಾಪನ ಮಾಡಿಕೊಂಡು ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಿದರೆ, ಅದರಂತೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

ಡಿಜಿಟಲ್ ಮಾರ್ಕೆಟಿಂಗ್ ಕಲಿಯುವುದರಿಂದ ಆಗುವ ಪ್ರಯೋಜನಗಳೇನು? ಇದರ ಬಗ್ಗೆ ಮಾಹಿತಿ ನೀಡಿ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಉದ್ಯಮವನ್ನು ಅಭಿವೃದ್ಧಿಪಡಿಸಲು ಡಿಜಿಟಲ್ ಮಾರ್ಕೆಟಿಂಗ್ ಪ್ರಮುಖವಾದ ಮತ್ತು ಪರಿಣಾಮಕಾರಿಯಾದ ಸಾಧನವಾಗಿದೆ. ಗ್ರಾಹಕರ ಗಮನವನ್ನು ಸೆಳೆಯುವುದು, ಪದಾರ್ಥ ಮತ್ತು ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಒದಗಿಸುವುದು, ಗ್ರಾಹಕರ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ, ವಿಶ್ವಾಸಾರ್ಹ ಬ್ರಾ÷್ಯಂಡ್ ನಿರ್ಮಾಣ ಮುಂತಾದ ಉದ್ಯಮ ಕ್ಷೇತ್ರದ ಬಹುತೇಕ ಕಾರ್ಯಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಿದ್ದಾಂತಗಳ ಬಳಕೆಯಾಗುತ್ತದೆ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ ಬಿಬಿಎ/ಎಂಬಿಎ ಪದವಿಗಳಲ್ಲದೆ, ಅರೆಕಾಲಿಕ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು  ಮಾಡಿ ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬಹುದು.

33. ಸರ್, ನಾನು ಬಿ.ಎಸ್ಸಿ (ಮೈಕ್ರೊಬಯಾಲಜಿ ಮತ್ತು ಬಯೋಟೆಕ್ನಾಲಜಿ) ಮಾಡಿ ಎಂಬಿಬಿಎಸ್ ಸೇರಬಹುದೇ?

ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಅಂಡ್  ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಕಳೆದ ವರ್ಷದ ಅಧಿಸೂಚನೆಯಂತೆ, ಕನಿಷ್ಠ ವಯೋಮಿತಿ ೧೭ ವರ್ಷಕ್ಕೆ ಸೀಮಿತವಾಗಿದ್ದು, ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಲಾಗಿದೆ. ನೀವು ಬಿ.ಎಸ್ಸಿ ಕೋರ್ಸ್ ಮೂಲಕ ಈಗಾಗಲೇ ಗಳಿಸಿರುವ ಜ್ಞಾನ, ಎಂಬಿಬಿಎಸ್ ಕೋರ್ಸ್ಗೆ ಉಪಯುಕ್ತವಾಗುತ್ತದೆ.

34. ನಾನು ಎಂಟೆಕ್ (ಮೆಕ್ಯಾನಿಕಲ್) ಮುಗಿಸಿದ್ದೇನೆ. ಪೂರ್ಣಾವಧಿ ಮತ್ತು ಅರೆಕಾಲಿಕ ಪಿಎಚ್.ಡಿ ಮಾಡುವುದು ಹೇಗೆ? ಕರ್ನಾಟಕದಲ್ಲಿ ಉತ್ತಮ ವಿಶ್ವವಿದ್ಯಾಲಯಗಳು ಯಾವುವು?

ಕರ್ನಾಟಕದಲ್ಲಿ ಪಿಎಚ್.ಡಿ ಮಾಡಲು ಐಐಎಸ್‌ಸಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಬೆಂಗಳೂರು), ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಧಾರವಾಡ), ಮಣಿಪಾಲ್ ಅಕಾಡೆಮಿ ಅಫ್ ಹೈಯರ್ ಎಜುಕೇಷನ್, ಮಣಿಪಾಲ್ ಹಾಗೂ ಇನ್ನಿತರ  ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು.

ವಿಶ್ವವಿದ್ಯಾಲಯ ಅನುದಾನ ಆಯೋಗದ ೨೦೨೨ರ ಕರಡು ನಿಯಮಾವಳಿಗಳಂತೆ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಪಿಎಚ್.ಡಿ (ಅರೆಕಾಲಿಕ) ಮಾಡಬಹುದು. ಆದರೆ, ಪೂರ್ಣಾವಧಿ ಪಿಎಚ್.ಡಿ ಮಾಡಲು ಅನ್ವಯವಾಗುವ ಎಲ್ಲಾ ನಿಯಮಾವಳಿಗಳು ಉದ್ಯೋಗದಲ್ಲಿರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ugc.gov.in/pdfnews/4405511_Draft-UGC-PhD-regulations-2022.pdf

35. ನಾನು ಬಿಕಾಂ ಮುಗಿಸಿದ್ದು, ಈಗ ಎಂಎ (ಅರ್ಥಶಾಸ್ತç) ಮಾಡುವ ಅಭಿರುಚಿಯಿದೆ. ಈ ಕೋರ್ಸ್ ನನಗೆ ಸೂಕ್ತವೇ?

ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವ ಕೋರ್ಸ್ ನಿಮಗೆ ಸೂಕ್ತವೆಂದು ನಿರ್ಧರಿಸಬೇಕು. ಇಂದಿನ ಪ್ರಶ್ನೋತ್ತರದಲ್ಲಿ ವಿವರಿಸಿರುವಂತೆ ಎಂಎ (ಅರ್ಥಶಾಸ್ತç) ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಎಂಎ (ಅರ್ಥಶಾಸ್ತç) ಪದವಿಯ ನಂತರ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.