ಚೆಲುವೆ ನಿನ್ನ ನಗುವ ನೋಡಿ
ಹರುಷ ನನ್ನ ಮನದಲಿ
ಚೆಲುವೆ ನಿನ್ನ ಮಾತ ಕೇಳಿ
ನನ್ನ ನೋವ ಮರೆತೆನು
ನಿನ್ನ ಹ್ರುದಯದ ಆಸೆ ನನ್ನ ಮನಸಲಿ, ಕನಸಲಿ
ನನ್ನ ಮನಸಿನ ಆಸೆ ನಿನ್ನ ಕಣ್ಣಲೀ, ಕಣ್ಣಲೀ
ಎರಡು ದೇಹ ಒಂದು ಜೀವ
ಬಿಡಲಾರೆ ನಾ ನಿನ್ನನು
ನಮ್ಮ ಅಮರ ಪ್ರೇಮದ ಭಕ್ತಿ ತೋರುವ ದೇವರಲ್ಲಿ
ನಿನ್ನ ಕಷ್ಟ ತೊರೆವ ಶಕ್ತಿ ನನ್ನ ಈ ತೋಳಲಿ
ಎಲ್ಲ ತೊರೆದು, ಎಲ್ಲ ಮರೆತು
ಬಾರೆ ನನ್ನ ಸಂಗಾತಿ