Q & A for Students – May 2023

Q1. ನಾನೀಗ ಬಿ.ಎಸ್ಸಿ ಮೂರನೇ ವರ್ಷದಲ್ಲಿದ್ದು, ಮುಂದೆ ಎಂ.ಸಿಎ ಅಥವಾ ಎಂ.ಎಸ್ಸಿ ಮಾಡಬೇಕೆಂದಿದ್ದೇನೆ. ಸರಿಯಾದ ಆಯ್ಕೆ ಯಾವುದೆಂದು ತಿಳಿಸಿ.

ನೀವು ಯಾವ ವಿಷಯಗಳಲ್ಲಿ ಬಿ.ಎಸ್ಸಿ ಮಾಡುತ್ತಿದ್ದೀರೆಂದು ತಿಳಿಸಿಲ್ಲ. ಎಂ.ಸಿಎ ಕೋರ್ಸ್, ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳು ಮತ್ತು ಅಪ್ಲಿಕೇಷನ್ಸ್ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಎಂ.ಎಸ್ಸಿ ಕೋರ್ಸ್ ನಂತರದ ಅವಕಾಶಗಳು, ಕೋರ್ಸಿನ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ವೃತ್ತಿಯ ದೃಷ್ಠಿಯಿಂದ, ಎಂ.ಸಿಎ ಅಥವಾ ಎಂ.ಎಸ್ಸಿ ನಂತರ, ಆಯಾ ಕ್ಷೇತ್ರಗಳಲ್ಲಿನ ಕೆಲಸದ ವಿವರಗಳಿಗೆ (ಜಾಬ್ ಪ್ರೊಫೈಲ್) ತಕ್ಕಂತೆ ಜ್ಞಾನ, ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ಪರಿಶೀಲಿಸಲು, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೃತ್ತಿಯೋಜನೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

Q2. ನಾನು ಬಿಕಾಂ ದ್ವಿತೀಯ ವರ್ಷದಲ್ಲಿದ್ದು, ಸಿಎ ಮಾಡಬೇಕೆಂದುಕೊA ಡಿದ್ದೇನೆ. ಈಗಿನಿಂದಲೇ ಪ್ರಾರಂಭ ಮಾಡಬೇಕಾದರೆ ಹೇಗೆ? ದಯವಿಟ್ಟು ತಿಳಿಸಿ.

ಸಿಎ ಮಾಡಲು ಎರಡು ಆಯ್ಕೆಗಳಿರುತ್ತದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಫೌಂಡೇಷನ್ ಕೋರ್ಸ್ಗೆ ಸೇರಿ, ಶೇ 50ರ ಅಂಕಗಳನ್ನು ಪಡೆದರೆ, ಇಂಟರ್‌ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಬಿಕಾಂ ಪದವೀಧರರು ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲ. ಬಿಕಾಂ ಪದವಿಯಲ್ಲಿ ಕನಿಷ್ಠ ಶೇ 55 ಅಂಕಗಳನ್ನು ಗಳಿಸಿ ನೇರವಾಗಿ ಸಿಎ ಇಂಟರ್‌ಮೀಡಿಯಟ್ ಕೋರ್ಸ್ ಮಾಡಬಹುದು. ಹಾಗಾಗಿ, ಈಗಲೇ ಫೌಂಡೇಷನ್ ಕೋರ್ಸ್ ಮಾಡುವುದು ಅಥವಾ ಬಿಕಾಂ ನಂತರ ನೇರವಾಗಿ ಇಂಟರ್‌ಮೀಡಿಯಟ್ ಕೋರ್ಸ್ ಮಾಡುವುದು, ನಿಮ್ಮ ಆಯ್ಕೆ.

ಜೊತೆಗೆ, 3 ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆAಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆAಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=RyNVWuRVjbA

Q3. ನನಗೆ ಕಿವಿ ಕೇಳಿಸುವುದಿಲ್ಲ. ನಾನು ಡಿಪ್ಲೊಮಾ ( ಸಿವಿಲ್ ಎಂಜಿನಿಯರಿA ಗ್) ಮುಗಿಸಿದ್ದೇನೆ. ಆದರೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದು, ನನ್ನ ಅಣ್ಣನ ಸಹಾಯದಿಂದ ಉತ್ತೀರ್ಣನಾಗಲು ಪ್ರಯತ್ನಿಸುತ್ತಿದ್ದೇನೆ. ಮುಂದೆ ಬಿಇ ಮಾಡಬೇಕು; ಆದರೆ, ಪಾಠಗಳನ್ನು ಕೇಳಿಸಿಕೊಳ್ಳದೆ ಬಿಇ ಓದುವುದು ಕಷ್ಟ. ಕಾಲೇಜಿನಲ್ಲಿ ಉಪನ್ಯಾಸಕರನ್ನು ಕೇಳುವುದಕ್ಕೆ ಭಯ; ಏಕೆಂದರೆ, ಅವರು ನನಗೆ ಅರ್ಥ ಆಗುವ ಹಾಗೆ ಹೇಳುವುದಿಲ್ಲ. ನನ್ನ ಪ್ರಯತ್ನದಿಂದಲೇ ಉತ್ತೀರ್ಣನಾಗುವುದು ಹೇಗೆ?

ಶ್ರವಣ ದೋಷವಿದ್ದರೂ, ಡಿಪ್ಲೊಮಾ ಮುಗಿಸಿ ಎಂಜಿನಿಯರಿAಗ್ ಪದವಿಯನ್ನು ಮಾಡುವ ಧ್ಯೇಯವಿರುವ ನಿಮಗೆ ಅಭಿನಂದನೆಗಳು. ಎಂಜಿನಿಯರಿAಗ್ ಪದವಿಯನ್ನು ಮಾಡಲು ತಮಿಳುನಾಡಿನ ಕೃಷ್ಣನ್‌ಕೋವಿಲ್‌ನಲ್ಲಿರುವ ಕಲಸಲಿಂಗಮ್ ಅಕಾಡೆಮಿ ಅಫ್ ರಿಸರ್ಚ್ ಅಂಡ್ ಎಜುಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ. ಈ ಸಂಸ್ಥೆ ಶ್ರವಣದೋಷವಿರುವ ವಿದ್ಯಾರ್ಥಿಗಳಿಗೆಂದೇ ವಿಶೇಷವಾದ ಬಿಟೆಕ್ ಕೋರ್ಸ್ನ್ನು ಮಾಡಲು ಬೇಕಾಗುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎನ್ನಲಾಗುತ್ತದೆ. ದೇಶದಲ್ಲಿರುವ ಇಂತಹ ಸಂಸ್ಥೆಗಳನ್ನು ಸಂಪರ್ಕಿಸಿ ನಿಮ್ಮ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://kare.kalasalingam.ac.in/course/b-techship-computer-science-and-engineering/

ಇದಲ್ಲದೆ, ನೀವು ಓದುವ ಕಾರ್ಯತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ನಿಮ್ಮ ಓದುವಿಕೆ ಹೆಚ್ಚು ಪರಿಣಾಮಕಾರಿಯಾಗಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ: http://www.vpradeepkumar.com/effective-learning/

Q4. ನಾನು ಬಿಎಸ್ಸಿ (ಪಿಸಿಎಂ) ಪದವಿ ಮುಗಿಸಿದ್ದೇನೆ. ಮುಂದೆ ಎಂಎಸ್ಸಿ (ಡೇಟಾ ಸೈನ್)್ಸ ಮಾಡಬೇಕೆಂದುಕೊAಡಿದ್ದೇನೆ. ಎಂ.ಎಸ್ಸಿ ಕೋರ್ಸಿನಲ್ಲಿ ಡೇಟಾ ಸೈನ್ಸ್ ಹಾಗೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಎಂಬAತೆ ಎರಡು ಆಯ್ಕೆಗಳಿವೆ. ಇವೆರಡರಲ್ಲಿ ಯಾವುದು ಸೂಕ್ತ?

ವ್ಯಾಪಾರದ ಮಾಹಿತಿ, ದತ್ತಾಂಶ ತಿಳುವಳಿಕೆ ಮತ್ತು ತಯಾರಿಕೆ, ಮೌಲ್ಯಮಾಪನ ಮತ್ತು ನಿಯೋಜನೆಗಾಗಿ ಉದ್ಯಮಗಳು ಡೇಟಾ ಸೈನ್ಸ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿAದ, ಜಾಗತಿಕ ಮಾರುಕಟ್ಟೆಯಲ್ಲಿ ಡೇಟಾ ಸೈನ್ಸ್ ತಜ್ಞರಿಗೆ ಅಪಾರವಾದ ಬೇಡಿಕೆಯಿದೆ.

ಡೇಟಾ ಸೈನ್ಸ್ ಕ್ಷೇತ್ರದಲ್ಲಿರುವ ಅನೇಕ ವಿಭಾಗಗಳಲ್ಲಿ ಅನಾಲಿಟಿಕ್ಸ್ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮೇಲ್ನೋಟಕ್ಕೆ ಎಂ.ಎಸ್ಸಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉತ್ತಮ ಆಯ್ಕೆಯೆಂದು ಅನಿಸಿದರೂ, ಎರಡೂ ಕೋರ್ಸ್ಗಳ ಸಂಪೂರ್ಣ ವಿವರಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಮೇಲಷ್ಟೇ ನಿರ್ಣಯಕ್ಕೆ ಬರಬಹುದು. ಉದಾಹರಣೆಗೆ, ಎರಡೂ ಕೋರ್ಸ್ಗಳ ಕಲಿಕೆಯ ಫಲಿತಾಂಶವೇನು (ಲರ್ನಿಂಗ್ ಔಟ್‌ಕಮ್) ಎನ್ನುವುದು ವೃತ್ತಿಯ ದೃಷ್ಠಿಯಿಂದ ಮುಖ್ಯವಾಗುತ್ತದೆ. ಹಾಗಾಗಿ, ನೀವು ತಿಳಿಸಿರುವ ಎರಡೂ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ವಿಷಯ, ವಿನ್ಯಾಸ, ಮೂಲಸೌಕರ್ಯಗಳು, ಪ್ಲೇಸ್‌ಮೆಂಟ್ ಮಾಹಿತಿ, ಇತ್ಯಾದಿಗಳನ್ನು ಪರಿಶೀಲಿಸಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳನ್ನು ಗಮನಿಸಿ, ಯಾವ ವಿಶ್ವವಿದ್ಯಾಲಯದ ಕೋರ್ಸ್ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

Q5. ನಾನು ದ್ವಿತೀಯ ಪಿಯುಸಿ ಪರೀಕ್ಷೆಯ ಎಲ್ಲಾ ವಿಷಯದಲ್ಲಿಯೂ ತೇರ್ಗಡೆಯಾಗಿರುತ್ತೇನೆ. ಒಂದೆರಡು ವಿಷಯದಲ್ಲಿ ಅತೃಪ್ತಿಯಿದೆ. ಫಲಿತಾಂಶವನ್ನು ತಿರಸ್ಕರಿಸಿ ಮತ್ತೆ ಪರೀಕ್ಷೆ ಬರೆದರೆ ಪುನರಾವರ್ತಿತ ಅಭ್ಯರ್ಥಿ ಎಂದು ಅಂಕ ಪಟ್ಟಿಯಲ್ಲಿ ನಮೂದಿಸುತ್ತಾರಾ? ಹಾಗೂ, ಅದರಲ್ಲಿ ಮೊದಲಿಗಿಂತಲೂ ಕಡಿಮೆ ಅಂಕಗಳು ಬಂದರೆ ಯಾವ ಅಂಕವನ್ನು ಪರಿಗಣಿಸುತ್ತಾರೆ?

ನಮಗಿರುವ ಮಾಹಿತಿಯಂತೆ, ಒಂದು ಬಾರಿ ಫಲಿತಾಂಶವನ್ನು ತಿರಸ್ಕರಿಸಿ, ಪೂರಕ ಪರೀಕ್ಷೆಗೆ ಹಾಜರಾದ ಮೇಲೆ ಹಿಂದಿನ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಮರುಪಡೆಯಲು ಅವಕಾಶವಿರುವುದಿಲ್ಲ. ಹಾಗೂ, ಅಂಕಪಟ್ಟಿಯಲ್ಲಿನ ವಿದ್ಯಾರ್ಥಿಯ ವಿವರದಲ್ಲಿ ‘ಪುನರಾವರ್ತಿತ’ (ರಿಪೀಟರ್) ಎಂಬ ಮಾಹಿತಿಯಿರುತ್ತದೆ.

Q6. ಬಿ.ಎಸ್ಸಿ (ಆಹಾರ ಸಂಸ್ಕರಣೆ) ಕೋರ್ಸ್ ಯಾವ ಕರ್ನಾಟಕದ ಕಾಲೇಜುಗಳಲ್ಲಿ ಲಭ್ಯವಿದೆ? ಹಾಗೂ ಯಾವ ಕಾಲೇಜಿನಲ್ಲಿ ಮಾಡಿದರೆ ಉತ್ತಮ?

ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಆಹಾರ ತಂತ್ರಜ್ಞಾನ ಕ್ಷೇತ್ರ ಮುಂಚೂಣಿಯಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ, ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ಧಪಡಿಸುವ ಕಾರ್ಯಗಳಲ್ಲಿ ಆಹಾರ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದಲ್ಲಿ, ಬಿ.ಎಸ್ಸಿ/ಬಿಟೆಕ್-ಆಹಾರ ತಂತ್ರಜ್ಞಾನ (ಫುಡ್ ಟೆಕ್ನಾಲಜಿ) ಕೋರ್ಸ್ ಮಾಡಬಹುದು. ಈ ಕೋರ್ಸ್ಗಳು ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಹಾಸನ, ಹಾವೇರಿ ಹೀಗೆ ಆಯ್ದ ಕೆಲವು ನಗರಗಳಲ್ಲಿ ಮಾತ್ರ ಲಭ್ಯ. ದೇಶದ ಇನ್ನಿತರ ಪ್ರಮುಖ ನಗರಗಳಲ್ಲೂ ಈ ಕೋರ್ಸ್ ಮಾಡಬಹುದು. ಕರ್ನಾಟಕದಲ್ಲಿ ಬಿಟೆಕ್ ಮಾಡಲು ಸಿಇಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಬಿ.ಎಸ್ಸಿ ಮಾಡಲು ಆಯಾ ಕಾಲೇಜುಗಳ ನಿಯಮಾವಳಿಗಳಂತೆ ಪ್ರವೇಶ ಪ್ರಕ್ರಿಯೆ ಇರುತ್ತದೆ.

ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಬಹು ರಾಷ್ಟಿçÃಯ ಕಂಪನಿಗಳು ಸೇರಿದಂತೆ ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬAಧಿತ ( ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ವಿಪುಲವಾದ ಉದ್ಯೋಗದ ಅವಕಾಶಗಳಿವೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=r6vHcwlCiY8

Q7. ನಾನು ದ್ವಿತೀಯ ಪಿಯುಸಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಪ್ರಕಾರ ಎಂಜಿನಿಯರಿAಗ್ ಜೊತೆ ಬಿ.ಎಸ್ಸಿ ಮಾಡಬಹುದೇ?

ನೂತನ ರಾಷ್ಟಿçÃಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುತ್ತಿದ್ದು, ಎರಡು ಪದವಿಪೂರ್ವ ಕೋರ್ಸ್ಗಳನ್ನು ಏಕಕಾಲದಲ್ಲಿ ಮಾಡಬಹುದು. ಈ ಯೋಜನೆಯನ್ನು ಜಾರಿಗೆ ತರಲು ಇಚ್ಛಿಸುವ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು, ಹಾಜರಾತಿ ನೀತಿಯನ್ನು ನಿಗದಿಪಡಿಸಬಹುದು. ನೂತನ ರಾಷ್ಟಿçÃಯ ಶಿಕ್ಷಣ ನೀತಿಯ ಆಶಯದಂತೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅನುಸಾರ ವಿಜ್ಞಾನ, ಸಮಾಜ ವಿಜ್ಞಾನ, ಕಲೆ, ಮಾನವಿಕ ವಿಷಯಗಳು ಇತ್ಯಾದಿ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಸಮಗ್ರವಾದ ಬಹು-ಶಿಸ್ತೀಯ ಶಿಕ್ಷಣದ ಅನುಭವದಿಂದ ತಮ್ಮ ಉದ್ಯೋಗಾರ್ಹತೆಯನ್ನು ಹೆಚ್ಚಿಸಿಕೊಳ್ಳಬಹುದು.

ಆದರೆ, ಒಂದೇ ವಿಭಾಗದ ಎರಡು ಕೋರ್ಸ್ಗಳನ್ನು ಮಾಡುವುದೇ ಅಥವಾ ವಿಭಿನ್ನ ವಿಭಾಗಗಳ ಕೋರ್ಸ್ಗಳನ್ನು ಮಾಡುವುದು ಉದ್ಯೋಗಾರ್ಹತೆಯ ದೃಷ್ಠಿಯಿಂದ ಸೂಕ್ತವೇ ಎಂದು ನಿರ್ಧರಿಸಿ.

Q8. ನಾನು ದ್ವಿತೀಯ ಪಿಯುಸಿ ಮುಗಿಸಿದ್ದು, ಮೆಡಿಕಲ್ ಮತ್ತು ಎಂಜಿನಿಯರಿAಗ್ ಅಲ್ಲದೆ ಉತ್ತಮ ಆದಾಯ ಸಿಗುವ ಯಾವ ಕೋರ್ಸ್ ಮಾಡಬಹುದು?

ವಿಜ್ಞಾನದ ವಿದ್ಯಾರ್ಥಿಗಳು, ಮೆಡಿಕಲ್ ಮತ್ತು ಎಂಜಿನಿಯರಿAಗ್ ಅಲ್ಲದೆ ವಿಜ್ಞಾನ ಸಂಬAಧಿತ ಇನ್ನಿತರ ಕೋರ್ಸ್ಗಳನ್ನು ಮಾಡಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ, ಬಿ.ಎಸ್ಸಿ ಕೋರ್ಸನ್ನು ಕಂಪ್ಯೂಟರ್ ಸೈನ್ಸ್ (ಅನೇಕ ಆಯ್ಕೆಗಳು), ಅರಣ್ಯ ವಿಜ್ಞಾನ, ಆಹಾರ ತಂತ್ರಜ್ಞಾನ, ಪುಷ್ಠಿ ವಿಜ್ಞಾನ, ಏರೋನಾಟಿಕಲ್, ಅಪ್ಲೆöÊಡ್ ಫಿಸಿಕ್ಸ್, ಎಲೆಕ್ಟಾçನಿಕ್ಸ್, ಹೋಟೆಲ್ ಮ್ಯಾನೇಜ್‌ಮೆಂಟ್, ಟ್ರಾವೆಲ್, ಟೂರಿಸಮ್, ಪತ್ರಿಕೋದ್ಯಮ, ಸೌಂಡ್ ಎಂಜಿನಿಯರಿAಗ್, ಆಕ್ಚುಏರಿಯಲ್ ವಿಜ್ಞಾನ (Actuarial Science), ಮುಂತಾದ ವಿಷಯಗಳಲ್ಲಿ ಮಾಡಬಹುದು. ಅದೇ ರೀತಿ, ಬಿ.ಎಸ್ಸಿ (ಸಾಂಪ್ರದಾಯಿಕ ವಿಷಯಗಳು), ಬಿಸಿಎ, ಬಿ.ಡಿಸೈನ್ (ಫ್ಯಾಷನ್, ಪ್ರಾಡಕ್ಟ್, ವಿಎಫ್‌ಎಕ್ಸ್, ಅನಿಮೇಷನ್), ಬಿಬಿಎ, ಬಿಕಾಂ, ಬಿಫಾರ್ಮ, ಬಿಎ, ಸಿಎ, ಎಸಿಎಸ್ ಮುಂತಾದ ಕೋರ್ಸ್ಗಳನ್ನೂ ಮಾಡಬಹುದು. ಒಟ್ಟಾರೆ ಹೇಳುವುದಾದರೆ, ಪಿಯುಸಿ ನಂತರ, ವಿಜ್ಞಾನದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಕೋರ್ಸ್ ಆಯ್ಕೆಗಳಿವೆ.

ಸಾಧನೆಯ ಮಾರ್ಗದಲ್ಲಿ ಆದಾಯಕ್ಕಿಂತ ವೃತ್ತಿಯಲ್ಲಿ ಸಿಗುವ ಸಂತೃಪ್ತಿ ಮುಖ್ಯವಾಗುತ್ತದೆ. ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿಯಂತೆ, ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು, ನಿಮ್ಮ ಭವಿಷ್ಯದ ದೃಷ್ಠಿಯಿಂದ ಸೂಕ್ತ.https://www.youtube.com/watch?v=oyUMPrEKPPU

Q9. ನಾನೀಗ ಬಿ.ಎಸ್ಸಿ ಎರಡನೇ ವರ್ಷದಲ್ಲಿ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನದ ವಿಷಯಗಳನ್ನು ಓದುತ್ತಿದ್ದೇನೆ. ಮುಂದೆ ಯಾವ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ ಎಂದು ತಿಳಿಸಿ. ನನಗೆ ಸರ್ಕಾರಿ ನೌಕರಿಯ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವ ಆಸಕ್ತಿ ಹೊಂದಿದ್ದು ಮನೆಯಿಂದಲೇ ತಯಾರಿ ನಡೆಸಿರುವೆ. ಮಾರ್ಗದರ್ಶನ ನೀಡಿ.

ಬಿ.ಎಸ್ಸಿ ನಂತರ ಹೆಚ್ಚಿನ ತಜ್ಞತೆಗಾಗಿ ಸ್ನಾತಕೋತ್ತರ/ಪಿಎಚ್.ಡಿ ಕೋರ್ಸ್ ಮಾಡಬಹುದು. ಅಥವಾ, ಸರ್ಕಾರಿ ನೌಕರಿ ಪಡೆಯಲು ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ, ಐಬಿಪಿಎಸ್, ಪೊಲೀಸ್ ಇಲಾಖೆ, ರೈಲ್ವೇಸ್ ಮುಂತಾದ ಸಂಸ್ಥೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬಹುದು. ಇದಲ್ಲದೆ ಸರ್ಕಾರಿ ವಲಯದ ಪ್ರತಿಷ್ಠಿತ ಸಂಸ್ಥೆಗಳಾದ ಐಎಸ್‌ಆರ್‌ಒ, ಬಿಎಆರ್‌ಸಿ, ಡಿಆರ್‌ಡಿಒ, ಸಿಎಸ್‌ಐಆರ್ ಮುಂತಾದ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ಸ್ವಂತ ಪರಿಶ್ರಮದಿಂದ ಐಎಎಸ್/ ಕೆಎಎಸ್ ನಂತಹ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

Q10. ನಾನು ಬಿಕಾಂ ಅಂತಿಮ ವರ್ಷದಲ್ಲಿದ್ದು, ಎಂಬಿಎ ಮಾಡಲು ನಿರ್ಧರಿಸಿದ್ದೇನೆ. ಹಾಗೂ, ನನಗೆ ಸಿಎಂಎ ಮತ್ತು ಸಿಎಫ್‌ಎ ಕೋರ್ಸ್ಗಳ ಬಗ್ಗೆಯೂ ಆಸಕ್ತಿಯಿದೆ. ಈ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿ.

ಎಂಬಿಎ ಕೋರ್ಸ್ ಜೊತೆಗೆ ನಿಮ್ಮ ಆದ್ಯತೆಯಂತೆ, ಹೆಚ್ಚಿನ ತಜ್ಞತೆಗಾಗಿ ಸಿಎಂಎ ಅಥವಾ ಸಿಎಫ್‌ಎ ಕೋರ್ಸ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.getmyuni.com/articles/cfa-vs-cma

Q11. ನಾನು ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಕೆಸಿಇಟಿ ಪರೀಕ್ಷೆ ಬರಿಯುತ್ತಿದ್ದೇನೆ. ಯಾವ ವೃತಿಪರ ಕೋರ್ಸ್ ಆರಿಸಿದರೆ ಉತ್ತಮ?

ಬದುಕಿನ ಪಾಠಶಾಲೆಯಲ್ಲಿ ಯಶಸ್ಸನ್ನು ಗಳಿಸಲು ಇಂತದ್ದೇ ಕೋರ್ಸ್ ಅಥವಾ ವೃತ್ತಿಯನ್ನು ಅನುಸರಿಸಬೇಕೆಂಬ ನಿಯಮವೇನಿಲ್ಲ. ಆದರೆ, ನಿಮಗೆ ಆಸಕ್ತಿಯಿರುವ, ಅಭಿರುಚಿಯಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಅನುಸರಿಸಿದರೆ ಯಶಸ್ಸು ಸುಲಭವೆನ್ನುವುದು ನಿರ್ವಿವಾದ. ಹಾಗಾಗಿ, ನಿಮ್ಮ ಅಭಿರುಚಿ ಮತ್ತು ಸಾವi.ರ್ಥ್ಯವನ್ನು ಅರಿಯಲು ಆಪ್ಟಿಟ್ಯೂಡ್ ಟೆಸ್ಟ್ ಮಾಡಿ, ಅದರ ಆಧಾರದ ಮೇಲೆ ಸೂಕ್ತವಾದ ವೃತ್ತಿ ಮತ್ತು ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

Q12. ಬಿ.ಎಸ್ಸಿ (ಆಹಾರ ತಂತ್ರಜ್ಞಾನ) ಕೋರ್ಸ್ ಬಗ್ಗೆ ಮಾಹಿತಿ ನೀಡಿ.

ಪಿಯುಸಿ (ವಿಜ್ಞಾನ) ನಂತರ ವಿದ್ಯಾರ್ಥಿಗಳಿಗೆ ಬಿ.ಎಸ್ಸಿ-ಆಹಾರ ತಂತ್ರಜ್ಞಾನ (ಫುಡ್ ಟೆಕ್ನಾಲಜಿ) ಕೋರ್ಸ್ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಆಯ್ಕೆ. ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಆಹಾರ ತಂತ್ರಜ್ಞಾನ ಕ್ಷೇತ್ರ ಮುಂಚೂಣಿಯಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ, ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ಧಪಡಿಸುವ ಕಾರ್ಯಗಳಲ್ಲಿ ಆಹಾರ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಈ ಕೋರ್ಸ್ ಬೆಂಗಳೂರು, ಮಂಗಳೂರು, ಧಾರವಾಡ ಸೇರಿದಂತೆ, ದೇಶದ ಪ್ರಮುಖ ನಗರಗಳಲ್ಲಿ ಲಭ್ಯ ಮತ್ತು ಆಯಾ ಕಾಲೇಜುಗಳ/ವಿಶ್ವವಿದ್ಯಾಲಯಗಳ ನಿಯಮಾವಳಿಗಳಂತೆ ಪ್ರವೇಶ ಪ್ರಕ್ರಿಯೆ ಇರುತ್ತದೆ. ಇದಲ್ಲದೆ, ಬಿಟೆಕ್ (ಆಹಾರ ತಂತ್ರಜ್ಞಾನ) ಕೋರ್ಸ್ ಸಹಾ ಲಭ್ಯವಿದೆ ಎನ್ನುವುದನ್ನು ಗಮನಿಸಿ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ವಿಷಯದಲ್ಲಿ ಆಸಕ್ತಿ, ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ವಿವರಗಳಿಗೆ ಗಮನ, ಸಂವಹನ ಇತ್ಯಾದಿ ಕೌಶಲಗಳಿರಬೇಕು.ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಬಹು ರಾಷ್ಟಿçÃಯ ಕಂಪನಿಗಳು ಸೇರಿದಂತೆ ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬAಧಿತ ( ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ವಿಪುಲವಾದ ಉದ್ಯೋಗದ ಅವಕಾಶಗಳಿವೆ.

ಹೆಚ್ಚಿನ ತಜ್ಞತೆಗಾಗಿ, ಎಂಎಸ್ಸಿ/ಎAಬಿಎ ಮಾಡುವುದರಿಂದ ಉದ್ಯೋಗಾರ್ಹತೆಯನ್ನೂ ಹೆಚ್ಚಿಸಿಕೊಳ್ಳಬಹುದು. ವೃತ್ತಿಯಲ್ಲಿನ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=r6vHcwlCiY8

Q13. ನಾನು ಬಿ.ಎಸ್ಸಿ (ನರ್ಸಿಂಗ್) ಮುಗಿಸಿ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೀಗ 37 ವರ್ಷಗಳಾಗಿದ್ದು, ಎಂ.ಎಸ್ಸಿ ನರ್ಸಿಂಗ್‌ಗೆ ಸಿಇಟಿ ಪರೀಕ್ಷೆ ಬರೆಯಬಹುದೇ?

ಎಂ.ಎಸ್ಸಿ (ನರ್ಸಿಂಗ್) ಕೋರ್ಸ್ ಮಾಡಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪಿಜಿಸಿಇಟಿ ಪರೀಕ್ಷೆಯನ್ನು ಬರೆಯಬೇಕು. ಕಳೆದ ವರ್ಷದ ಅಧಿಸೂಚನೆಯಂತೆ, ಅಭ್ಯರ್ಥಿಗಳ ವಯಸ್ಸು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕಡೆಯ ದಿನಾಂಕದAದು 45 ವರ್ಷದ ಒಳಗಿರಬೇಕು. ಹಾಗಾಗಿ, ನೀವು ಈ ಪರೀಕ್ಷೆಯನ್ನು ಬರೆಯಬಹುದು. ಈ ವರ್ಷದ ಪ್ರವೇಶ ಪರೀಕ್ಷೆಯ ಅಧಿಸೂಚನೆ ಇನ್ನು ಕೆಲವು ತಿಂಗಳಲ್ಲಿ ಪ್ರಕಟವಾಗಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/

Q14. ನನಗೀಗ 33 ವರ್ಷಗಳಾಗಿದ್ದು, ಎಂಬಿಎ ಮಾಡಿ ಕಳೆದ 7 ವರ್ಷಗಳಿಂದ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಕಾಂಟ್ರಾಕ್ಟ್ ಕೆಲಸಗಳಷ್ಟೇ ಸಿಗುತ್ತಿದ್ದು, ಕಳೆದ ಜನವರಿಯಿಂದ ಕೆಲಸವಿಲ್ಲ. ಈ ಕಾರಣದಿಂದ ಖಿನ್ನತೆಗೆ ಒಳಗಾಗಿದ್ದು, ಸರ್ಕಾರಿ ಅಥವಾ ಖಾಸಗಿ ವೃತ್ತಿಯನ್ನು ಅರಸಲು, ನಿಮ್ಮ ಮಾರ್ಗದರ್ಶನ ಬೇಕಾಗಿದೆ.

ಉದ್ಯೋಗಾರ್ಹತೆಯನ್ನು ವೃದ್ಧಿಸುವ ಎಂಬಿಎ ಪದವಿಯ ನಂತರವೂ ನೀವು ಸೂಕ್ತವಾದ ವೃತ್ತಿಯಲ್ಲಿ ತೊಡಗಿಸಿಕೊಳ್ಳದಿರುವುದಕ್ಕೆ ಕಾರಣಗಳೇನು ಎಂದು ವಿಶ್ಲೇಷಿಸಬೇಕು. ನೀವು ನೀಡಿರುವ ಕಿರುಮಾಹಿತಿಯಿಂದ ಇದು ಸಾಧ್ಯವಿಲ್ಲ; ಮೇಲ್ನೋಟಕ್ಕೆ, ಸರಿಯಾದ ಯೋಜನೆಯನ್ನು ಮಾಡದಿರುವುದು ಕಾರಣವಾಗಿರಬಹುದು.

ನಿಮ್ಮ ಈವರೆಗಿನ ಅನುಭವ ಯಾವ ಕ್ಷೇತ್ರದಲ್ಲಿದೆ ಎಂದು ತಿಳಿಸಿಲ್ಲ. ಸದ್ಯಕ್ಕೆ, ಹಲವಾರು ಉದ್ದಿಮೆಗಳ (ಐಟಿ, ಐಟಿಇಎಸ್, ಸಾಮಜಿಕ ಮಾಧ್ಯಮ, ಇ-ಕಾಮರ್ಸ್, ನವೋದ್ಯಮಗಳು ಇತ್ಯಾದಿ ) ಆರ್ಥಿಕ ಹಿನ್ನಡೆಯಿಂದ ಉದ್ಯೋಗ ಮಾರುಕಟ್ಟೆ ಸಂಕಷ್ಟದಲ್ಲಿದೆ. ಹಾಗಾಗಿ, ಖಾಸಗಿ ವಲಯದ ಈ ಕ್ಷೇತ್ರಗಳನ್ನು ಬಿಟ್ಟು ಇನ್ನಿತರ ಕ್ಷೇತ್ರಗಳಲ್ಲಿ (ಮೂಲಭೂತ ಸೌಕರ್ಯಗಳು, ಆರೋಗ್ಯ, ಫಾರ್ಮ, ಬ್ಯಾಂಕಿAಗ್, ಇನ್ವೆಸ್ಟ್ಮೆಂಟ್, ರೀಟೈಲ್, ಎಫ್‌ಎಂಜಿಸಿ ಇತ್ಯಾದಿ) ಪ್ರಯತ್ನಿಸಬಹುದು.

ಸರ್ಕಾರಿ ವಲಯದ ಕೆಪಿಎಸ್‌ಸಿ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನೂ ನಿಮಗೆ ಅವಕಾಶವಿದೆ. ಯುಪಿಎಸ್‌ಸಿ ಪರೀಕ್ಷೆಗೆ, ಕೆಲವು ಜಾತಿ, ಪಂಗಡದವರಿಗೆ ವಯೋಮಿತಿಯಲ್ಲಿ ರಿಯಾಯಿತಿಯಿದೆ (ಗರಿಷ್ಟ ವಯೋಮಿತಿ 37 ವರ್ಷಗಳು) ಎನ್ನುವುದು ನಿಮ್ಮ ಗಮನದಲ್ಲಿರಲಿ. ನಿಮಗೆ ಆಸಕ್ತಿಯಿರುವ ಸರ್ಕಾರಿ ವಲಯದ ಇನ್ನಿತರ ಅವಕಾಶಗಳ ಮಾಹಿತಿಯನ್ನು ಕಲೆಹಾಕಿ, ಸಾಧ್ಯತೆಗಳನ್ನು ಪರಿಶೀಲಿಸಿ.

ಪ್ರಮುಖವಾಗಿ, ಎಂಬಿಎ ಪದವಿಯಲ್ಲಿ ಜೀವನಕ್ಕೂ, ವೃತ್ತಿಗೂ ಅಗತ್ಯವಾದ ಅನೇಕ ಮೂಲಭೂತ ಮೌಲ್ಯಗಳು, ಸೂತ್ರಗಳ ಮನದಟ್ಟಾಗುತ್ತದೆ. ಉದಾಹರಣೆಗೆ, ತರ್ಕಬದ್ಧ ಆಲೋಚನೆ, ಯೋಜನಾ ಶಕ್ತಿ, ಶಿಸ್ತು, ಸಮಯ ಪ್ರಜ್ಞೆ, ಸಕಾರಾತ್ಮಕ ಧೋರಣೆ, ಸ್ವಯ-ಪ್ರೇರಣೆ ಇತ್ಯಾದಿಗಳ ಸದುಪಯೋಗದಿಂದ ಖಿನ್ನತೆಯಿಂದ ಹೊರಬಂದು, ಸೂಕ್ತವಾದ ವೃತ್ತಿಯೋಜನೆಯಿಂದ, ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನ ಅಥವಾ ವೈಯಕ್ತಿಕ ಸಂದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ಸಂಪರ್ಕಿಸಿ. ನಿಮ್ಮ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಹೊರಹೊಮ್ಮುವ ಬಯೋಡೇಟಾ ರಚಿಸಿ ಮತ್ತು ಆತ್ಮವಿಶ್ವಾಸದಿಂದ ವೃತ್ತಿಯ ಸಂದರ್ಶನವನ್ನು ಎದುರಿಸಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊಗಳನ್ನು ವೀಕ್ಷಿಸಿ:
https://www.youtube.com/watch?v=WHZTFCmu3zg
https://www.youtube.com/watch?v=T_z3ngIeyWk

Q15. ನಾನು ಅಂತಿಮ ವರ್ಷದ ಬಿಕಾಂ ಮಾಡುತ್ತಿದ್ದೇನೆ, ಎಂಬಿಎ (ದೂರಶಿಕ್ಷಣ) ಮಾಡಲು ಸಿಇಟಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕೇ?

ಎಂಬಿಎ (ದೂರಶಿಕ್ಷಣ) ಮಾಡಲು ಪಿಜಿಸಿಇಟಿ ಪರೀಕ್ಷೆಯ ಅಗತ್ಯವಿಲ್ಲ. ಆದರೆ, ಕೆಲವು ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಅಭ್ಯರ್ಥಿಗಳಿಗೆ ಮ್ಯಾನೇಜ್‌ಮೆಂಟ್ ಶಿಕ್ಷಣಕ್ಕೆ ಬೇಕಾಗುವ ಆಸಕ್ತಿ, ಅಭಿರುಚಿ ಇದೆಯೇ ಎಂದು ತಿಳಿಯಲು ಆಪ್ಟಿಟ್ಯೂಡ್ ಟೆಸ್ಟ್ ಆಯೋಜಿಸುತ್ತವೆ. ಹಾಗಾಗಿ, ಪ್ರವೇಶ ಪ್ರಕ್ರಿಯೆ, ನೀವು ಸೇರಲು ಬಯಸುವ ವಿಶ್ವವಿದ್ಯಾಲಯದ ನಿಯಮಾವಳಿಗಳನ್ನು ಅವಲಂಬಿತವಾಗಿರುತ್ತದೆ.

Q16. ನಾನು ದ್ವಿತೀಯ ಪಿಯುಸಿಯಲ್ಲಿ 2015ರಲ್ಲಿ ಅನುತ್ತೀರ್ಣವಾಗಿ 2020ರಲ್ಲಿ ಉತ್ತೀರ್ಣನಾಗಿದ್ದೇನೆ. ಈಗ ಬಿ.ಎಸ್ಸಿ ಮಾಡಬಹುದೇ?

ನಮಗಿರುವ ಮಾಹಿತಿಯಂತೆ ನೀವು ಬಿ.ಎಸ್ಸಿ ಕೋರ್ಸ್ ಮಾಡಬಹುದು. ಆದರೆ, ನಿಮ್ಮ ಸ್ವಾಭಾವಿಕ ಆಸಕ್ತಿ, ಅಭಿರುಚಿಯಂತೆ ಯಾವ ವೃತ್ತಿ ನಿಮಗೆ ಸರಿಹೊಂದುತ್ತದೆ ಎಂದು ಪರಿಶೀಲಿಸಿ, ಅದರಂತೆ ವೃತ್ತಿಯೋಜನೆಯನ್ನು ಮಾಡಿ, ನಂತರ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

Q17. ನಾನು ಪದವಿಯನ್ನು ಮುಗಿಸಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಬೇಕು. ಮೊದಲ ಹಂತದಿAದ ಕೊನೆಯವರೆಗೂ ತಯಾರಿ ಮಾಡುವುದು ಹೇಗೆ? ಕೌಶಲಾಭಿವೃದ್ಧಿ ಮಾಡಿಕೊಳ್ಳುವುದು ಹೇಗೆ? ಕೋಚಿಂಗ್ ಕಡ್ಡಾಯವೇ?

ಯುಪಿಎಸ್‌ಸಿ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆ.

  1. ಪೂರ್ವಭಾವಿ ಪರೀಕ್ಷೆ (ಬಹು ಆಯ್ಕೆ ಮಾದರಿ).
  2. ಮುಖ್ಯ ಪರೀಕ್ಷೆ (ಪ್ರಬಂಧ ರೂಪದ ಲಿಖಿತ ಪರೀಕ್ಷೆ).
  3. ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಈ ಸಲಹೆಗಳನ್ನು ಗಮನಿಸಿ:

  • ಯುಪಿಎಸ್‌ಸಿಯ ಮುಖ್ಯ ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
  • ಮುಖ್ಯ ಪರೀಕ್ಷೆಯಲ್ಲಿರುವ ವಿಷಯಗಳ ಪಠ್ಯಕ್ರಮವನ್ನು ತಿಳಿದುಕೊಂಡು, ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ ಮಾಹಿತಿಯನ್ನು ಸಂಗ್ರಹಿಸಿ.
  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
  • ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
  • ಜೊತೆಗೆ, ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.
  • ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ವಿಡಿಯೋಗಳನ್ನು ವೀಕ್ಷಿಸಿ. ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.

ಖುದ್ದಾಗಿ ತಯಾರಿಯಾಗಿ ಯಶಸ್ವಿಯಾಗಿರುವ ಅನೇಕ ಉದಾಹರಣೆಗಳಿವೆ; ಹಾಗಾಗಿ, ಕೋಚಿಂಗ್ ಕಡ್ದಾಯವಲ್ಲ. ಆದರೂ, ಕೋಚಿಂಗ್ ಸೆಂಟರ್‌ಗಳು ನೀಡುವ ಮಾರ್ಗದರ್ಶನ ಉಪಯುಕ್ತ. ಅಂತಿಮ ಆಯ್ಕೆ ನಿಮ್ಮದು.

Q18. ನಾನು ಪಿಯುಸಿ ಮುಗಿಸಿದ್ದೇನೆ. ಫೊರೆನ್ಸಿಕ್ ಸೈನ್ಸ್ ಕ್ಷೇತ್ರದ ಅವಕಾಶಗಳು ಮತ್ತು ಕಾಲೇಜುಗಳ ಬಗ್ಗೆ ಮಾಹಿತಿ ನೀಡಿ. ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್ ಮಾಡಬಹುದು.

ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ಹೆಚ್ಚಿನ ತಜ್ಞತೆಗಾಗಿ, ಎಂ.ಎಸ್ಸಿ ಮಾಡಬಹುದು. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು. ಬಿ.ಎಸ್ಸಿ (ವಿಧಿವಿಜ್ಞಾನ) ಕೋರ್ಸ್ ಮಾಡಬಹುದಾದ ಕಾಲೇಜುಗಳ ವಿವರಕ್ಕಾಗಿ ಗಮನಿಸಿ: https://collegedunia.com/bsc/forensic-science/karnataka-colleges

Q19. ನಾನು ಎಂಜಿನಿಯರಿAಗ್ (ಮೆಕ್ಯಾನಿಕಲ್) ಮುಗಿಸಿ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ನಾನು ಈಗ ಎಂಎ ಪದವಿ ಮಾಡಬಹುದೇ?

ಕೆಪಿಎಸ್‌ಸಿ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ. ಪರೀಕ್ಷೆಯ ಹಂತಗಳು, ಮಾದರಿ, ವಿಷಯಗಳು, ಪಠ್ಯಕ್ರಮ ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂಬAಧಪಟ್ಟ ಮತ್ತು ನಿಮಗಿಷ್ಟವಿರುವ ವಿಷಯದಲ್ಲಿ ಎಂಎ (ದೂರಶಿಕ್ಷಣ) ಮಾಡುವುದರಿಂದ, ಕೆಪಿಎಸ್‌ಸಿ ಪರೀಕ್ಷೆಗೆ ಅನುಕೂಲವಾಗಬಹುದು.

Q20. ನಾನು ಕಳೆದ ವಾರದ ಸಿಇಟಿ ಪರೀಕ್ಷೆಯಲ್ಲಿ ಸರಿಯಾಗಿ ಮಾಡಲಾಗಲಿಲ್ಲ. ಏನಾಗುತ್ತದೋ ಗೊತ್ತಿಲ್ಲ. ಎಂಜಿನಿಯರಿAಗ್ ಸಿಗದಿದ್ದರೆ, ಏನು ಮಾಡಬಹುದು. ದಯವಿಟ್ಟು ಸಹಾಯ ಮಾಡಿ.

ಇತ್ತೀಚಿನ ವರ್ಷಗಳಲಿ,್ಲ ನಮ್ಮ ರಾಜ್ಯದ ಎಂಜಿನಿಯರಿAಗ್ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು ಸಂಪೂರ್ಣವಾಗಿ ಭರ್ತಿಯಾಗುತ್ತಿಲ್ಲ. ಹಾಗಾಗಿ, ಎಂಜಿನಿಯರಿAಗ್ ಮಾಡುವುದೇ ನಿಮ್ಮ ಅಪೇಕ್ಷೆಯಾಗಿದ್ದರೆ, ಚಿಂತಿಸುವುದು ಬೇಡ. ಇದಲ್ಲದೆ, ಎಂಜಿನಿಯರಿAಗ್ ಕೋರ್ಸಿಗೆ ಪರ್ಯಾಯವೆನ್ನಬಹುದಾದ ಬಿ.ಎಸ್ಸಿ, ಬಿಸಿಎ ಮುಂತಾದ ಕೋರ್ಸ್ಗಳಿವೆ. ನಿಮಗಿಷ್ಟವಿರುವ ವಿಷಯದಲ್ಲಿ ಈ ಕೋರ್ಸ್ಗಳನ್ನು ಮಾಡಿ, ಅರೆಕಾಲಿಕ ಕೌಶಲಾಭಿವೃದ್ಧಿ ಕೋರ್ಸ್ಗಳನ್ನು ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ABkhf_hiHfw

Q21. ಸರ್, ನಾನು ಎಂಎ (ಪತ್ರಿಕೋದ್ಯಮ) ಮಾಡಿ, ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕಿದ್ದೇನೆ. ನನಗೆ ಪಿಎಚ್.ಡಿ ಮಾಡುವ ಆಸೆಯಿದೆ. ಕೆಲಸದಲ್ಲಿದ್ದುಕೊಂಡು ಪಿಎಚ್.ಡಿ ಮಾಡಬಹುದೇ? ಪಿಎಚ್.ಡಿಗೆ ಬೇಕಾದ ಅರ್ಹತೆಗಳೇನು? ಪಿಎಚ್.ಡಿ ಬಿಟ್ಟು ಸ್ನಾತಕೋತ್ತರ ಪದವೀಧರರು ಬೇರೆ ಯಾವ ಉನ್ನತ ಶಿಕ್ಷಣ ಪಡೆಯಬಹುದು?

ವಿಶ್ವವಿದ್ಯಾಲಯ ಅನುದಾನ ಆಯೋಗದ 2022ರ ಕರಡು ನಿಯಮಾವಳಿಗಳಂತೆ ಉದ್ಯೋಗದಲ್ಲಿರುವ ಅಭ್ಯರ್ಥಿಗಳು ಪಿಎಚ್.ಡಿ ಮಾಡಬಹುದು. ಆದರೆ, ಪೂರ್ಣಾವಧಿ ಪಿಎಚ್.ಡಿ ಮಾಡಲು ಅನ್ವಯವಾಗುವ ಎಲ್ಲಾ ನಿಯಮಾವಳಿಗಳು ಉದ್ಯೋಗದಲ್ಲಿರುವ ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ. ನೀವು ಕೆಲಸ ಮಾಡುತ್ತಿರುವ ಸಂಸ್ಥೆಯ ಅನುಮತಿಯ ಜೊತೆಗೆ, ಕನಿಷ್ಠ 6 ತಿಂಗಳು ಪಿಎಚ್.ಡಿ ಸಂಶೋಧನೆಯ ಪೂರ್ಣಾವಧಿ ಕೋರ್ಸ್ ಮಾಡಬೇಕಾಗುತ್ತದೆ. ಇನ್ನಿತರ ನಿಯಮಾವಳಿಗಳು ನೀವು ಸೇರಬಯಸುವ ವಿಶ್ವವಿದ್ಯಾಲಯವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ugc.gov.in/pdfnews/4405511_Draft-UGC-PhD-regulations-2022.pdf

ಪಿಎಚ್.ಡಿ ಮಾಡಲಾಗದಿದ್ದರೆ, ಸಂಬAಧಪಟ್ಟ ಇನ್ನೊಂದು ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್ (ಉದಾಹರಣೆಗೆ ಭಾಷೆ, ಸಾಹಿತ್ಯ, ಮಾಧ್ಯಮ ಇತ್ಯಾದಿ) ಅಥವಾ ಅರೆಕಾಲಿಕ/ದೂರಶಿಕ್ಷಣದ ಮೂಲಕ ವೃತ್ತಿಪರ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು ಮಾಡಬಹುದು. ಪಿಎಚ್.ಡಿ ಮಾಡುವ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=Mb4PKUb35_Q

Q22. ನಾನು ಇನ್ನೆರಡು ತಿಂಗಳಲ್ಲಿ ಎಂ.ಎಸ್ಸಿ (ರಸಾಯನ ವಿಜ್ಞಾನ) ಮುಗಿಸುತ್ತಿದ್ದೇನೆ. ಸಂಸ್ಥೆಗಳಲ್ಲಿ ಕೆಲಸ ಮಾಡುವುದೇ, ಎನ್‌ಇಟಿ ಮಾಡಿ ಉಪನ್ಯಾಸಕರಾಗುವುದೇ ಅಥವಾ ಕೆಎಎಸ್ ಮಾಡುವುದೇ ಎಂಬ ಗೊಂದಲವಿದೆ. ಏನು ಮಾಡಿದರೆ ಮುಂದಿನ ಭವಿಷ್ಯ ಚೆನ್ನಾಗಿರಬಹುದು?

ಖಚಿತವಾದ ವೃತ್ತಿಯೋಜನೆಯಿಲ್ಲದೆ ಕೋರ್ಸ್ಗಳನ್ನು ಮಾಡಿದರೆ ಇಂತಹ ಗೊಂದಲಗಳು ಸಾಮಾನ್ಯ. ಜೀವನದಲ್ಲಿ ನಿರ್ದಿಷ್ಟವಾದ, ಸ್ಪಷ್ಟವಾದ, ಸಾಧಿಸಬಹುದಾದ, ಮತ್ತು ಅಳೆಯಬಹುದಾದ ಗುರಿಯಿರಬೇಕು. ಬಾಳಿಗೊಂದು ಗುರಿ ಇದ್ದರೆ, ನಮ್ಮಲ್ಲಿರುವ ಸುಪ್ತ ಶಕ್ತಿಗಳನ್ನು ಆ ಗುರಿಯೆಡೆಗೆ ಕೇಂದ್ರೀಕರಿಸಿ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಪಡೆಯಬಹುದು.

ಈಗ ನೀವು ಪರಿಶೀಲಿಸುತ್ತಿರುವ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳು ವಿಭಿನ್ನ. ಹಾಗಾಗಿ, ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ನಿಮಗೊಪ್ಪುವ ಮತ್ತು ಆತ್ಮಸಂತೃಪ್ತಿಯನ್ನು ತಂದುಕೊಡುವ ವೃತ್ತಿಯನ್ನು ಆಯ್ಕೆ ಮಾಡಿ, ಅದರಂತೆ ಮುಂದಿನ ನಿರ್ಧಾರವನ್ನು ಮಾಡುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0