Q & A for Students – August 2023

1. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದಿದ್ದೇನೆ. ಕೆಎಸ್‌ಇಟಿ ಪರೀಕ್ಷೆಯನ್ನು ಬರೆದಿದ್ದೇನೆ. ಐಎಎಸ್ ಅಧಿಕಾರಿಯಾಗಬೇಕಾದರೆ, ಮುಂದೆ ನಾನು ಯಾವ ವಿಷಯದಲ್ಲಿ, ಪದವಿಯನ್ನು ಮುಂದುವರಿಸಬೇಕು ಎಂಬ ಗೊಂದಲವಾಗುತ್ತಿದೆ. ಮಾರ್ಗದರ್ಶನ ನೀಡಿ.

ಐಎಎಸ್ ಅಧಿಕಾರಿಯಾಗಲು, ಯುಪಿಎಸ್‌ಸಿ ಆಯೋಜಿಸುವ ಮೂರು ಹಂತಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ, ಆಯ್ಕೆಯಾಗಬೇಕು:

  • ಬಹು ಆಯ್ಕೆ ಮಾದರಿಯ ಪೂರ್ವಭಾವಿ ಪರೀಕ್ಷೆ.
  • ಪ್ರಬಂಧ ರೂಪದ ಮುಖ್ಯ ಪರೀಕ್ಷೆ.
  • ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.

ಬಿ.ಎ, ಬಿ.ಕಾಂ, ಬಿ.ಎಸ್ಸಿ ಮುಂತಾದ ಯಾವುದಾದರೂ ಪದವಿ ಕೋರ್ಸ್ ಮುಗಿಸಿದ ನಂತರ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಭಾಗವಹಿಸಲು ಅರ್ಹತೆ ಸಿಗುತ್ತದೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ನೀವು ಆಯ್ಕೆ ಮಾಡುವ ಐಚ್ಛಿಕ ವಿಷಯಕ್ಕೆ ಸಂಬAಧಿಸಿದ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ಹಾಗಾಗಿ, ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಪರಿಣತಿಯಿರುವ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದು ಸೂಕ್ತ. ಆದರೆ, ಪದವಿ ಕೋರ್ಸ್ಗಳಿಗೆ ಮಾಡುವ ಅಧ್ಯಯನಕ್ಕೂ ಯುಪಿಎಸ್‌ಸಿ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.

ಪರೀಕ್ಷೆಗಳ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

2. ನಾನು ಎಂಜಿನಿಯರಿAಗ್ ಮಾಡಬೇಕು. ಅದರಲ್ಲಿ ಯಾವ ವಿಭಾಗದ ಕೋರ್ಸ್ ಒಳ್ಳೆಯದು ತಿಳಿಸಿ.

ನಮ್ಮ ಅಭಿಪ್ರಾಯದಂತೆ ಎಂಜಿನಿಯರಿAಗ್ ಕ್ಷೇತ್ರದ ಎಐ, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೋಟಿಕ್, ನವೀಕರಿಸಬಹುದಾದ ಇಂಧನ, ಪರಿಸರ ಮುಂತಾದ ವಿಭಾಗಗಳ ಪದವೀಧರರಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆಯಿರುವ ನಿರೀಕ್ಷೆಯಿದೆ. ಆದರೆ, ನಿಮ್ಮ ಅಭಿರುಚಿ, ಆಸಕ್ತಿಯ ಅನುಸಾರ ವಿಭಾಗದ ಆಯ್ಕೆ ಮಾಡುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

3. ನನಗೀಗ ೩೨ ವರ್ಷ ವಯಸ್ಸು. ಕಾರಣಾಂತರಗಳಿAದ ಓದಲು ಸಾಧ್ಯವಾಗಿರಲಿಲ್ಲ. ಈಗ ಬಿಎ (ರಾಜ್ಯಶಾಸ್ತç, ಸಮಾಜ ಶಾಸ್ತç, ಅರ್ಥಶಾಸ್ತç) ಅಂತಿಮ ಸೆಮಿಸ್ಟರ್‌ನಲ್ಲಿದ್ದೇನೆ. ಆರ್ಥಿಕ ಸಂಕಷ್ಟದ ಕಾರಣ, ಮತ್ತೆ ಕೆಲಸಕ್ಕೆ ಹೋಗಬೇಕಿದೆ. ನಾನು ದೂರಶಿಕ್ಷಣದಲ್ಲಿ ಎಂಎ ಮಾಡಬಹುದೇ? ಯಾವ ವಿಷಯದಲ್ಲಿ ಮಾಡಬಹುದು? ರಾಷ್ಟಿçÃಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಪರೀಕ್ಷೆಯಲ್ಲಿ ಭಾಗವಹಿಸಲು, ದೂರಶಿಕ್ಷಣ ಪದವಿಯ ನಂತರ ಅರ್ಹತೆ ಸಿಗುವುದೇ? ಸರ್ಕಾರಿ ನೌಕರಿ ಅಥವಾ ಶಿಕ್ಷಕಿಯಾಗುವ ಕನಸಿದೆ. ದಯವಿಟ್ಟು ಪರಿಹಾರ ತಿಳಿಸಿ.

ನೀವು ಕೆಲಸದಲ್ಲಿದ್ದುಕೊಂಡು, ದೂರಶಿಕ್ಷಣದ ಮೂಲಕ ಎಂಎ ಕೋರ್ಸ್ ಮಾಡಬಹುದು. ಮುಂದೆ, ನೀವು ಶಿಕ್ಷಕಿಯಾಗಿ ಯಾವ ವಿಷಯವನ್ನು ಭೋಧಿಸಲು ಇಚ್ಛಿಸುತ್ತೀರೋ, ಆ ವಿಷಯದಲ್ಲಿ ಎಂಎ ಕೋರ್ಸ್ ಮಾಡುವುದು ಸೂಕ್ತ. ನಮ್ಮ ಅಭಿಪ್ರಾಯದಂತೆ, ಎಂಎ (ಅರ್ಥಶಾಸ್ತç) ಕೋರ್ಸಿಗೆ  ಹೆಚ್ಚಿನ ಬೇಡಿಕೆಯಿದೆ.  ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ದ ಮಾನ್ಯತೆ ಪಡೆದ ದೂರ ಶಿಕ್ಷಣದ ಎಲ್ಲಾ ಪದವಿ ಕೋರ್ಸ್ಗಳಿಗೆ ಮಾನ್ಯತೆಯಿದ್ದು, ನೀವು ರಾಷ್ಟಿçÃಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಭಾಗವಹಿಸಬಹುದು. ಮಾನ್ಯತೆಯಿರುವ ದೂರಶಿಕ್ಷಣ ಕೋರ್ಸ್ ಮಾಹಿತಿಗಾಗಿ ಗಮನಿಸಿ: https://deb.ugc.ac.in/

4. ನಾನು ಅಂತಿಮ ವರ್ಷದ ಬಿ.ಎಸ್ಸಿ ಬಯೋಟೆಕ್ನಾಲಜಿ (ಬಿಬಿಜಿ) ಓದುತ್ತಿದ್ದೇನೆ. ನಾನು ಮುಂದೆ ಯಾವ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಮಾಡಬಹುದು? ಯಾವ ರೀತಿಯ ಕೆಲಸ ಸಿಗಬಹುದು? ಇಂಟರ್ನ್ಷಿಪ್  ಯಾವ ರೀತಿ ಮಾಡಬಹುದು?

ನೀವು ಮಾಡುತ್ತಿರುವ ಬಿ.ಎಸ್ಸಿ (ಬಯೋಟೆಕ್ನಾಲಜಿ, ಬಯೋಕೆಮಿಸ್ಟಿç, ಜೆನೆಟಿಕ್ಸ್) ಕೋರ್ಸ್ನಲ್ಲಿ ಉತ್ತಮವಾದ ಮತ್ತು ಬೇಡಿಕೆಯಲ್ಲಿರುವ ವಿಷಯಗಳಿವೆ. ಹಾಗಾಗಿ, ನಿಮ್ಮ ಅಭಿರುಚಿ ಮತ್ತು ಆಸಕ್ತಿಯ ಅನುಸಾರ ಜೆನೆಟಿಕ್ಸ್ ಅಥವಾ ಬಯೋಟೆಕ್ನಾಲಜಿ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡಿ, ಆಯಾ ಕ್ಷೇತ್ರಕ್ಕೆ ಸಂಬAಧಿಸಿದAತೆ, ಖಾಸಗಿ ಕ್ಷೇತ್ರದಲ್ಲಿ, ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹಾಗೂ, ಯುಪಿಎಸ್‌ಸಿ/ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲಿನ ಅವಕಾಶಗಳನ್ನೂ ಬಳಸಿಕೊಳ್ಳಬಹುದು.  ಇಂಟರ್ನ್ಷಿಪ್ ಕುರಿತ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ: http://www.vpradeepkumar.com/projects-to-kickstart-your-career/

5. ನಾನು ಮೊದಲ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ (ಸಸ್ಯಶಾಸ್ತç, ರಸಾಯನಶಾಸ್ತç). ಬಿ.ಎಸ್ಸಿ ನಂತರ ಯಾವ ಉದ್ಯೋಗ ಸಿಗಬಹುದು? ಈ ಪದವಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಸಹಾಯವಾಗಬಹುದೇ? ಬಿ.ಎಸ್ಸಿ ನಂತರ ಜೀನವದಲ್ಲಿ ಹೇಗೆ ನೆಲೆಯೂರಬಹುದು ? ಮಾರ್ಗದರ್ಶನ ನೀಡಿ.

ನಮ್ಮ ಅಭಿಪ್ರಾಯದಂತೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಪದವಿಯಷ್ಟೇ ಸಾಕಾಗುವುದಿಲ್ಲ. ಹಾಗಾಗಿ, ಬಿ.ಎಸ್ಸಿ ಪದವಿಯ ನಂತರ ಉನ್ನತ ಶಿಕ್ಷಣ (ಎಂ.ಎಸ್ಸಿ, ಎಂಬಿಎ, ಕೌಶಲಾಭಿವೃದ್ಧಿ ಕೋರ್ಸ್ಗಳು) ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ (ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿAಗ್, ರೈಲ್ವೇಸ್ ಇತ್ಯಾದಿ) ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಅಭಿರುಚಿ, ಆಸಕ್ತಿ, ಸಾಮರ್ಥ್ಯ, ಅವಕಾಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವೈಯಕ್ತಿಕ ಮತ್ತು ವೃತ್ತಿಪರ ಧ್ಯೇಯಗಳನ್ನು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸುಗಮವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

6. ನಾನು ಬಿ.ಎಸ್ಸಿ ಕೋರ್ಸ್ನಲ್ಲಿ ಮೈಕ್ರೋಬಯಾಲಜಿ ವಿಷಯವನ್ನು ಓದಬೇಕಿದೆ. ಇದಕ್ಕೆ ನೀಟ್ ಪರೀಕ್ಷೆ ಬರೆಯಬೇಕೇ?

ಬಿ.ಎಸ್ಸಿ ಕೋರ್ಸ್ ಮಾಡಲು ನೀಟ್ ಪ್ರವೇಶ ಪರೀಕ್ಷೆಯ ಅಗತ್ಯವಿಲ್ಲ. ಸಾಮಾನ್ಯವಾಗಿ, ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನೇರವಾದ ಪ್ರವೇಶವಿರುತ್ತದೆ. ಆದರೆ, ಕೆಲವು ಪ್ರತಿಷ್ಠಿತ  ಕಾಲೇಜುಗಳಲ್ಲಿ ಪ್ರತ್ಯೇಕ ಪ್ರವೇಶ ಪರೀಕ್ಷೆಯೂ ಇರುತ್ತದೆ.

7. ಕೆಎಎಸ್ ಮುಖ್ಯ ಪರೀಕ್ಷೆಗೆ ಯಾವ ರೀತಿಯ ತಯಾರಿ ಬೇಕಾಗುತ್ತದೆ? ಪರೀಕ್ಷೆಯ ಮಾದರಿಯೇನು? ದಯವಿಟ್ಟು ತಿಳಿಸಿ.

ಕೆಎಎಸ್ ಅಧಿಕಾರಿಯಾಗಬೇಕಾದರೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು.  ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಟೆಕ್ ಮುಂತಾದ ಯಾವುದಾದರೂ ಪದವಿ ಕೋರ್ಸ್ ಮುಗಿಸಿದ ನಂತರ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ (ಬಹು ಆಯ್ಕೆ ಮಾದರಿ) ಭಾಗವಹಿಸಲು ಅರ್ಹತೆ ಸಿಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮುಖ್ಯ ಪರೀಕ್ಷೆಗೆ ಅರ್ಹತೆ ಸಿಗುತ್ತದೆ. ಮುಖ್ಯ ಪರೀಕ್ಷೆಯ ಮಾದರಿ ಈ ರೀತಿ ಇರುತ್ತದೆ:

ಅರ್ಹತಾದಾಯಕ ಪತ್ರಿಕೆಗಳು

  • ಕನ್ನಡ (ಕಡ್ಡಾಯ)-೧೫೦ ಅಂಕಗಳು
  • ಇAಗ್ಲಿಷ್ (ಕಡ್ಡಾಯ)-೧೫೦ ಅಂಕಗಳು

ಕಡ್ಡಾಯ ಪತ್ರಿಕೆಗಳು

  • ಪ್ರಬಂಧ -೨೫೦ ಅಂಕಗಳು
  • ೪ ಸಾಮಾನ್ಯ ಅಧ್ಯಯನದ ಪತ್ರಿಕೆಗಳು-ಪ್ರತಿ ಪತ್ರಿಕೆಗೆ ೨೫೦ ಅಂಕಗಳು
  • ಒಟ್ಟು ೫ ಕಡ್ಡಾಯ ಪತ್ರಿಕೆಗಳು-೧೨೫೦ ಅಂಕಗಳು

ಅAತಿಮ ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆ  (೫೦ ಅಂಕಗಳು) ಇರುತ್ತದೆ.

ಮುಖ್ಯ ಪರೀಕ್ಷೆಯ ತಯಾರಿಗೆ ಈ ಸಲಹೆಗಳನ್ನು ಗಮನಿಸಿ:

  • ಪದವಿ ಕೋರ್ಸ್ಗಳಿಗೆ ಮಾಡುವ ಅಧ್ಯಯನಕ್ಕೂ ಕೆಪಿಎಸ್‌ಸಿ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.
  • ಪರೀಕ್ಷೆಯ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.
  • ಕರ್ನಾಟಕ ರಾಜ್ಯದ ಇತಿಹಾಸ, ಭೂಗೋಳ, ಯೋಜನೆಗಳು, ಆರ್ಥಿಕ ಸ್ಥಿತಿ ಮತ್ತು ಪ್ರಸ್ತುತ ವಿದ್ಯಮಾನಗಳು ಮುಂತಾದ ವಿಷಯಗಳನ್ನು ಕೂಲಂಕಷವಾಗಿ ಓದಿ, ಅರ್ಥೈಸಿಕೊಳ್ಳಬೇಕು.
  • ಪರೀಕ್ಷೆಗೆ ೪-೫ ತಿಂಗಳು ಇರುವಾಗ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ಪ್ರಕ್ರಿಯೆಯನ್ನು ಆರಂಭಿಸಿ.
  • ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ.
  • ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

8. ನಾನು ಬಿ.ಎಸ್ಸಿ ಮುಗಿಸಿದ್ದು, ಎಂಬಿಎ ಕೋರ್ಸ್ಗೆ ಸೇರುವ ಪ್ರಕ್ರಿಯೆ ಬಗ್ಗೆ ತಿಳಿಸಿ.

ಬಿ.ಎಸ್ಸಿ ನಂತರ ಎಂಬಿಎ ಕೋರ್ಸ್ ಮಾಡಲು ಸಾಮಾನ್ಯವಾಗಿ ಈ ಪ್ರಕ್ರಿಯೆಗಳಿರುತ್ತದೆ.

  • ಪ್ರವೇಶ ಪರೀಕ್ಷೆ.
  • ಸಮೂಹ ಚರ್ಚೆ.
  • ವೈಯಕ್ತಿಕ ಸಂದರ್ಶನ.

ಇAಡಿಯನ್ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್ (ಐಐಎಂ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಬಿಎ ಮಾಡಲು ಕ್ಯಾಟ್ ಪರೀಕ್ಷೆಯನ್ನು ಬರೆಯಬೇಕು. ಇನ್ನಿತರ ವಿಶ್ವವಿದ್ಯಾಲಯ/ಕಾಲೇಜುಗಳಿಗೆ ಜಿಮ್ಯಾಟ್, ಪಿಜಿ-ಸಿಇಟಿ, ಮ್ಯಾಟ್ ಇತ್ಯಾದಿ ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ನೀವು ಯಾವ ವಿಶ್ವವಿದ್ಯಾಲಯ/ಕಾಲೇಜಿನಲ್ಲಿ ಎಂಬಿಎ ಮಾಡಲು ಬಯಸುತ್ತೀರೋ, ಅದಕ್ಕೆ ಅನ್ವಯವಾಗುವ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಕಾಲೇಜು ಆಯ್ಕೆ ಪ್ರಕ್ರಿಯೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

9. ನಾನು ಬಿ.ಎಸ್ಸಿ (ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿಶಾಸ್ತç) ಮುಗಿಸಿದ್ದು, ಎಂ.ಎಸ್ಸಿ ಕೋರ್ಸನ್ನು ಯಾವ ವಿಷಯದಲ್ಲಿ ಮಾಡಿದರೆ ಉತ್ತಮವಾದ ವೃತ್ತಿಯ ಅವಕಾಶಗಳಿವೆ? ಹಾಗೂ, ನಮಗೆ ಮೀನುಗಾರಿಕೆ ಮತ್ತು ಹೈನುಗಾರಿಕೆ ವಿಷಯದಲ್ಲಿ ಉನ್ನತ ಶಿಕ್ಷಣ ಮಾಡುವ ಅವಕಾಶಗಳಿವೆಯೇ?

ನಮ್ಮ ಅಭಿಪ್ರಾಯದಂತೆ ರಸಾಯನ ವಿಜ್ಞಾನದಲ್ಲಿ, ಎಂ.ಎಸ್ಸಿ ಮಾಡಿದರೆ ಹೆಚ್ಚಿನ ಉದ್ಯೋಗಾವಕಾಶಗಳಿವೆ.

ಹಾಗೂ, ಬಿ.ಎಸ್ಸಿ ನಂತರ ಎಂ.ಎಸ್ಸಿ (ಮೀನುಗಾರಿಕೆ/ಹೈನುಗಾರಿಕೆ) ಕೋರ್ಸನ್ನು ಮಾಡುವ ಅವಕಾಶಗಳಿವೆ. ಸರ್ಕಾರಿ ವಲಯದ ಇಂಡಿಯನ್ ಕೌಂಸಿಲ್ ಅ¥s಼ï ಅಗ್ರಿಕಲ್ಚರಲ್ ರಿಸರ್ಚ್ (Iಅಂಖ) ಸಂಸ್ಥೆ ಮತ್ತು ೭೪ ಸರ್ಕಾರಿ ಕೃಷಿ ಸಂಬAಧಿತ ವಿಶ್ವವಿದ್ಯಾಲಯಗಳಲ್ಲಿ ಕೃಷಿ ವಿಜ್ಞಾನ, ಮೀನುಗಾರಿಕೆ, ಹೈನುಗಾರಿಕೆ, ಪಶುವಿಜ್ಞಾನ, ತೋಟಗಾರಿಕೆ ಮುಂತಾದ ವಿಷಯಗಳಲ್ಲಿ ಎಂ.ಎಸ್ಸಿ, ಪಿಎಚ್.ಡಿ ಕೋರ್ಸ್ಗಳ ಮೂಲಕ ಉನ್ನತ ಶಿಕ್ಷಣವನ್ನು ಮಾಡಬಹುದು. ಆಸಕ್ತ ಅಭ್ಯರ್ಥಿಗಳು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಓಖಿಂ)  ಆಯೋಜಿಸುವ ಎಐಇಇಎ (ಂIಇಇA) ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಅರ್ಹತೆಯ ನಿಯಮಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳನ್ನು ಗಮನಿಸಿ:

10. ನಾನು ಎಂ.ಎಸ್ಸಿ (ಭೌತವಿಜ್ಞಾನ) ಮಾಡಿ ಸರ್ಕಾರಿ ಕೆಲಸದಲ್ಲಿದ್ದೇನೆ. ಈ ಕೆಲಸದಲ್ಲಿದ್ದುಕೊಂಡು ಬಿ.ಇಡಿ ಮಾಡಬಹುದೇ?

ನಮ್ಮ ಅಭಿಪ್ರಾಯದಂತೆ, ನೀವು ಬಿ.ಇಡಿ ಕೋರ್ಸನ್ನು ದೂರಶಿಕ್ಷಣದ ಮೂಲಕ ಮಾಡಬಹುದು. ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆ ಪಡೆದ ದೂರ ಶಿಕ್ಷಣದ ಕೋರ್ಸ್ ಮಾಹಿತಿಗಾಗಿ ಗಮನಿಸಿ: https://deb.ugc.ac.in/

11. ನಾನು ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ ತರಬೇತಿಯನ್ನು ಪಡೆಯುತ್ತಿದ್ದಾಗ ಪದವಿ ಕೋರ್ಸಿನ ಒಂದು ವಿಷಯದ ಪರೀಕ್ಷೆಯನ್ನು ಬರೆಯಲಾಗಲಿಲ್ಲ. ಈಗ ಪ್ರಾಂಶುಪಾಲರು ಪೂರಕ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ನೀಡಿದ್ದಾರೆ. ಈಗ ಉಳಿದ ವಿಷಯದ ಪರೀಕ್ಷೆಯನ್ನು ಮುಗಿಸಿ, ಪದವಿ ಕೋರ್ಸನ್ನು ಪೂರ್ಣಗೊಳಿಸಿದರೆ ಏನಾದರೂ ಸಮಸ್ಯೆಯಾಗುವುದೇ?

ನಮ್ಮ ಅಭಿಪ್ರಾಯದಂತೆ, ಉಳಿದಿರುವ ಒಂದು ವಿಷಯದ ಪೂರಕ ಪರೀಕ್ಷೆಗೆ ಹಾಜರಾಗಿ ಪದವಿಯನ್ನು ಪೂರ್ಣಗೊಳಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

12. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮುಗಿಸಿದ್ದು, ಮುಂದೆ ಬಿ.ಎಸ್ಸಿ (ನರ್ಸಿಂಗ್) ಮಾಡಬಹುದೇ?

ಪಿಯುಸಿ (ವಿಜ್ಞಾನ) ನಂತರ ಬಿ.ಎಸ್ಸಿ (ನರ್ಸಿಂಗ್) ಮಾಡಬಹುದು. ಕರ್ನಾಟಕದಲ್ಲಿ ಪ್ರವೇಶ ಪ್ರಕ್ರಿಯೆ ಸಿಇಟಿ ಮೂಲಕ ನಡೆಯುತ್ತದೆ.

13. ನಾನು ೨೦೧೭ರ ಪಿಯುಸಿ ಪರೀಕ್ಷೆಯಲ್ಲಿ ಭಾಗವಹಿಸಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದೇನೆ. ಈಗ ಪೂರಕ ಪರೀಕ್ಷೆಯಲ್ಲಿ ಆ ಒಂದು ವಿಷಯದ ಪರೀಕ್ಷೆಯಲ್ಲಿ ಭಾಗವಹಿಸಬಹುದೇ ಅಥವಾ ಎಲ್ಲಾ ವಿಷಯಗಳಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬೇಕೆ?

ನಮಗಿರುವ ಮಾಹಿತಿಯಂತೆ, ಮೂಲ ಅನುತ್ತೀರ್ಣ ಅಂಕಪಟ್ಟಿ, ಅರ್ಜಿಯ ಆಧಾರದ ಮೇಲೆ ಪರೀಕ್ಷಾ ಶುಲ್ಕಗಳನ್ನು ಸಲ್ಲಿಸಿ,  ಸಂಬAಧಿಸಿದ ದಾಖಲೆಗಳನ್ನು ಪ್ರಾಂಶುಪಾಲರ ಮೂಲಕ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಸಲ್ಲಿಸಿ, ಪರೀಕ್ಷೆಗೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ, ಈ ಸುತ್ತೋಲೆಯನ್ನು ಗಮನಿಸಿ: https://kseab.karnataka.gov.in/storage/pdf-files/2022-23_IIPUC_SUPP_2_CIRCULAR.pdf

14. ಸರ್, ನಾನು ಬಿ.ಎಸ್ಸಿ (ಮೈಕ್ರೊಬಯಾಲಜಿ ಮತ್ತು ಬಯೋಟೆಕ್ನಾಲಜಿ) ಮುಗಿಸಿದ್ದೇನೆ. ಈಗ, ಎಂಬಿಬಿಎಸ್ ಸೇರಬಹುದೇ?

ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಕಳೆದ ವರ್ಷದ ಅಧಿಸೂಚನೆಯಂತೆ, ಕನಿಷ್ಠ ವಯೋಮಿತಿ ೧೭ ವರ್ಷಕ್ಕೆ ಸೀಮಿತವಾಗಿದ್ದು, ಗರಿಷ್ಠ ವಯೋಮಿತಿಯನ್ನು ತೆಗೆದುಹಾಕಲಾಗಿದೆ. ನೀವು ಬಿ.ಎಸ್ಸಿ ಕೋರ್ಸ್ ಮೂಲಕ ಈಗಾಗಲೇ ಗಳಿಸಿರುವ ಜ್ಞಾನ, ಎಂಬಿಬಿಎಸ್ ಕೋರ್ಸ್ಗೆ ಉಪಯುಕ್ತವಾಗುತ್ತದೆ. ಆದರೆ, ೫ ೧/೨ ವರ್ಷದ ಎಂಬಿಬಿಎಸ್ ಮಾಡಬಹುದೇ ಅಥವಾ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು (ಉದಾಹರಣೆಗೆ ಎಂ.ಎಸ್ಸಿ, ಎಂಬಿಎ ಇತ್ಯಾದಿ) ಮಾಡುವುದು ಸೂಕ್ತವೇ ಎಂದು ಪರಿಶೀಲಿಸಿ. ವೃತ್ತಿಜೀವನದ ದೃಷ್ಟಿಯಿಂದ, ನಿಮ್ಮ ಅಭಿರುಚಿ, ಆಸಕ್ತಿ, ಸಾಮರ್ಥ್ಯಗಳನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ಮಾಡುವುದರಿಂದ, ಮುಂದಿನ ಹಾದಿ ಸುಗಮವಾಗುತ್ತದೆ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

15. ನಾನು ಪಿಯುಸಿ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗೆಯವರಾಗಿ ಕೆಲಸಕ್ಕೆ ಸೇರಿರುತ್ತೇನೆ. ಈಗ ಪದವಿಯನ್ನು ಮಾಡಲು ಇಚ್ಛಿಸಿದ್ದು, ಬಡ್ತಿಗೆ ಈ ಶೈಕ್ಷಣಿಕೆ  ಅರ್ಹತೆಯನ್ನು  ಪರಿಗಣಿಸುತ್ತಾರೆಯೇ?

ನಿಮ್ಮ ನೇಮಕಾತಿಯ ನಿಯಮ ಮತ್ತು ನಿಬಂಧನೆಗಳು, ಸೇವಾ ವಿವರಗಳ ಮಾಹಿತಿಯಿಲ್ಲದೆ ನಿಖರವಾಗಿ ಉತ್ತರಿಸುವುದು ಸಾಧ್ಯವಿಲ್ಲ. ಹಾಗಾಗಿ, ನಿಮ್ಮ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ.

16. ನಾನು ೨ನೇ ವರ್ಷದ ಬಿಎ ಕೋರ್ಸ್ ಮಾಡುತ್ತಿದ್ದೇನೆ. ನನಗೆ ಐಎಎಸ್ ಆಗುವ ಆಸೆಯಿದೆ. ಆದರೆ ಸ್ನೇಹಿತರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎಂಬಿಬಿಎಸ್, ಎಂಜಿನಿಯರಿAಗ್ ಮಾಡಿದವರೇ ಉತ್ತೀರ್ಣರಾಗುತ್ತಾರೆ; ನಿಮಗೆಲ್ಲಾ ಆಗುವುದಿಲ್ಲಾ ಅಂತಿದ್ದಾರೆ. ನನಗೆ ಇಂಗ್ಲಿಷ್ ಕಷ್ಟ ಇದೆ.  ನಾನು, ಈ ಪರೀಕ್ಷೆ ಬರೆದು ಉತ್ತೀರ್ಣವಾಗಬಹುದೇ? ತಿಳಿಸಿಕೊಡಿ ಸರ್.

ಯುಪಿಎಸ್‌ಸಿ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ; ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿರುವ ಅನುಭವ ಯುಪಿಎಸ್‌ಸಿ ಪರೀಕ್ಷೆಗೆ ಸ್ವಲ್ಪ ಮಟ್ಟಿಗೆ ಸಹಾಯವಾಗಬಹುದು; ಆದರೆ ಅದೇ ನಿರ್ಣಾಯಕವಲ್ಲ.  ಕಠಿಣವಾದ ಈ ಪರೀಕ್ಷೆಯ ಯಶಸ್ಸಿಗೆ ಸೂಕ್ತವಾದ ಕಾರ್ಯತಂತ್ರ, ಸಾಕಷ್ಟು ಪರಿಶ್ರಮ ಹಾಗೂ ಏಕಾಗ್ರತೆಯಿದ್ದರೆ ಯಾರು ಬೇಕಾದರೂ ಐಎಎಸ್ ಅಧಿಕಾರಿಯಾಗಬಹುದು. ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬಹು ಆಯ್ಕೆ ಮಾದರಿಯಾಗಿರುತ್ತದೆ; ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದು; ಸಂದರ್ಶನವನ್ನು ಕನ್ನಡದಲ್ಲಿ ನೀಡಬಹುದು.

ಮೇಲ್ನೋಟಕ್ಕೆ, ಕಲಾ ವಿಭಾಗದ ಅಭ್ಯರ್ಥಿಯಾದ ನಿಮಗೆ ಸಮಾಜ ಶಾಸ್ತç, ಇತಿಹಾಸ, ಭೂಗೋಳ, ಸಾರ್ವಜನಿಕ ಆಡಳಿತ ಮುಂತಾದ ವಿಷಯಗಳು ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯಗಳ ಆಯ್ಕೆಗೆ ಸೂಕ್ತವಾಗಬಹುದು. ವಿಷಯ ಯಾವುದಿದ್ದರೂ ಪಠ್ಯಕ್ರಮವನ್ನು ಅರಿತು, ಪುಸ್ತಕಗಳು ಮತ್ತು ಅಧ್ಯಯನದ ಸಾಮಗ್ರಿಯನ್ನು ಸಿದ್ದ ಪಡಿಸಿಕೊಳ್ಳಬೇಕು. ಪ್ರಮುಖವಾಗಿ, ಓದುವಿಕೆ ಪರಿಣಾಮಕಾರಿಯಾಗಿರಬೇಕು.

ಇದಕ್ಕೆ ಬೇಕಾದ ಪುಸ್ತಕಗಳನ್ನು ಖರೀದಿಸಿ ಸ್ವತಂತ್ರವಾಗಿ ತಯಾರಾಗಬಹುದು ಅಥವಾ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಈ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು, ಆಡಳಿತಾತ್ಮಕ ವಿಷಯಗಳ ಕುರಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ನಿಮ್ಮ ಇಂಗ್ಲಿಷ್ ಕಲಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA

18. ನಾನು ಡಿಪ್ಲೊಮಾ (ಮೆಕ್ಯಾನಿಕಲ್) ಮಾಡುತ್ತಿದ್ದೇನೆ. ಮುಂದೆ ಬಿಟೆಕ್ ಮಾಡುವುದು ಹೇಗೆ? ದಯವಿಟ್ಟು ತಿಳಿಸಿ.

ಡಿಪ್ಲೊಮಾ ಮುಗಿಸಿದ ನಂತರ ಲ್ಯಾಟರಲ್ ಎಂಟ್ರಿ ಮೂಲಕ ಎರಡನೇ ವರ್ಷದ ಬಿಟೆಕ್‌ಗೆ ಸೇರಬಹುದು. ಕರ್ನಾಟಕದಲ್ಲಿ, ಪ್ರವೇಶ ಪ್ರಕ್ರಿಯೆ ಸಿಇಟಿ ಮೂಲಕ ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/keawebentry456/dcet22/Diploma%202022%20%20Information%20Bulletin%20finalkannada.pdf

19. ನನ್ನ ಮಗ ೪ ವರ್ಷದ ಗ್ರಾಫಿಕ್ ಡಿಸೈನ್ ಕೋರ್ಸ್ ಮಾಡುತ್ತಿದ್ದಾನೆ. ಇದಾದ ಮೇಲೆ, ಉನ್ನತ ಶಿಕ್ಷಣಕ್ಕಾಗಿ ಯಾವ ಕೋರ್ಸ್ ಮಾಡಬಹುದು?

ಡಿಸೈನ್ ಕ್ಷೇತ್ರಕ್ಕೆ ಸಂಬAಧಿಸಿದ ಅನೇಕ ಉದ್ದಿಮೆಗಳಲ್ಲಿ, ವೈವಿಧ್ಯಮಯ ಮತ್ತು ವಿಭಿನ್ನವಾದ ವೃತ್ತಿಯ ಆಯ್ಕೆಗಳಿವೆ. ಉದಾಹರಣೆಗೆ, ಗ್ರಾಫಿಕ್ ಡಿಸೈನರ್, Uಘಿ ಡಿಸೈನರ್, ಆರ್ಟ್ ಡೈರೆಕ್ಟರ್, ಅನಿಮೇಟರ್, ಪ್ರಾಡಕ್ಟ್ ಡೆವಲಪರ್, ಮಾರ್ಕೆಟಿಂಗ್ ಸ್ಪೆಷಲಿಸ್ಟ್ ಇತ್ಯಾದಿ. ಹಾಗಾಗಿ, ಗ್ರಾಫಿಕ್ ಡಿಸೈನ್ ಕೋರ್ಸ್ ನಂತರ ಯಾವ ವೃತ್ತಿಯನ್ನು ಅನುಸರಿಸಬೇಕು ಎಂದು ಮೊದಲು ನಿರ್ಧರಿಸಬೇಕು. ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರಿಯಬೇಕಾದರೆ, ಹೆಚ್ಚಿನ ತಜ್ಞತೆಗಾಗಿ ಡಿಸೈನ್ ಸಂಬAಧಿತ ಸ್ನಾತಕೋತ್ತರ ಕೋರ್ಸ್ ಮಾಡಬಹುದು. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಎಂಬಿಎ ಮಾಡಬಹುದು. ಹಾಗೂ, ಈ ಕ್ಷೇತ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಡಿಸೈನ್(ಬೆಂಗಳೂರು), ನೀಡುತ್ತಿರುವ ಕೋರ್ಸ್ಗಳು ಸೂಕ್ತವೇ ಎಂದು ಪರಿಶೀಲಿಸಿ.

20. ಸರ್, ಬಿ.ಎಸ್ಸಿ (ನರ್ಸಿಂಗ್) ಆದ ಮೇಲೆ ಬಿ.ಎಸ್ಸಿ (ಫೊರೆನ್ಸಿಕ್ ಸೈನ್ಸ್) ಮಾಡಬಹುದೇ?

ಫೊರೆನ್ಸಿಕ್ ನರ್ಸಿಂಗ್ ವಿಶೇಷವಾದ ಮತ್ತು ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಬಿ.ಎಸ್ಸಿ (ಫೊರೆನ್ಸಿಕ್ ಸೈನ್ಸ್) ಕೋರ್ಸ್ ಮಾಡಬಹುದು. ಹಾಗೂ, ನಿಮ್ಮ ವೃತ್ತಿಯೋಜನೆ ಮತ್ತು ಆದ್ಯತೆಯಂತೆ, ಒಂದು ವರ್ಷದ ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ (ಫೊರೆನ್ಸಿಕ್ ಸೈನ್ಸ್) ಮಾಡಿದರೆ ಸಾಕಾಗಬಹುದೇ ಎಂದು ಪರಿಶೀಲಿಸಿ.

21. ನಾನು ಪಿಯುಸಿ (ವಾಣಿಜ್ಯ) ಮುಗಿಸಿದ್ದೇನೆ. ಮುಂದಿನ ವಿದ್ಯಾಭ್ಯಾಸಕ್ಕೆ ಯಾವ ಕೋರ್ಸ್ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿದ್ದೇನೆ. ದಯವಿಟ್ಟು ಮಾರ್ಗದರ್ಶನ ನೀಡಿ.

ಪಿಯುಸಿ ನಂತರದ ಕೋರ್ಸ್ ಆಯ್ಕೆಗಾಗಿ, ಈ ಮೂರು ಸಲಹೆಗಳನ್ನು ಗಮನಿಸಿ:

  • ವಾಣಿಜ್ಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆ ಎಂದರೆ ಚಾರ್ಟರ್ಡ್ ಅಕೌಂಟೆAಟ್ (ಸಿಎ) ಕೋರ್ಸ್.
  • ಈಗ ಬಿಕಾಂ ಕೋರ್ಸ್ನಲ್ಲಿ ಅಕೌಂಟಿAಗ್, ಅಕೌಂಟಿAಗ್ ಮತ್ತು ಫೈನಾನ್ಸ್, ಟ್ಯಾಕ್ಸೇಷನ್, ಬ್ಯಾಂಕಿAಗ್ ಮತ್ತು ಇನ್‌ಶ್ಯೂರೆನ್ಸ್, ಇಂಟರ್‌ನ್ಯಾಷನಲ್ ಬಿಸಿನೆಸ್, ಮಾರ್ಕೆಟಿಂಗ್, ಇನ್ವೆಸ್ಟ್ಮೆಂಟ್ಸ್ ಸೇರಿದಂತೆ ಸುಮಾರು ಹತ್ತು ವಿಭಾಗಗಳಿವೆ. ನಿಮ್ಮ ಆಸಕ್ತಿಯ ಅನುಸಾರ ಆಯ್ಕೆ ಮಾಡಬಹುದು.
  • ಐದು ವರ್ಷದ ಇಂಟಿಗ್ರೇಟೆಡ್ ಎಂಬಿಎ ಕೋರ್ಸ್ ಮಾಡಬಹುದು.
  • ಕೋರ್ಸ್ ಆಯ್ಕೆ ಮುನ್ನ ನಿಮ್ಮ ಅಭಿರುಚಿ, ಆಸಕ್ತಿ, ಸಾಮರ್ಥ್ಯಗಳನ್ನು ಪರಿಶೀಲಿಸಿ, ನಿಮಗೆ ಸರಿಹೊಂದುವ ವೃತ್ತಿಯೋಜನೆಯನ್ನು ಮಾಡಿ, ವೃತ್ತಿಯ ಆಯ್ಕೆಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

22. ನಾನು ಬಿಕಾಂ ಪದವಿಯನ್ನು ಮುಗಿಸಿದ್ದು ಮುಂದೆ ಎಂಬಿಎ ಮಾಡಬೇಕೆಂದುಕೊAಡಿದ್ದೇನೆ. ಫೈನಾನ್ಸ್ ಮತ್ತು ಅಗ್ರಿ ಬಿಸಿನೆಸ್ ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ಎಂಬಿಎ (ಡ್ಯುಯಲ್ ಸ್ಪೆಷಲೈಜೇಷನ್) ಮಾಡಬಹುದೇ? ಈ ಕೋರ್ಸ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಿದೆಯೇ?

ಬಿಕಾಂ ಪದವಿಯ ನಂತರ ಎಂಬಿಎ ಉತ್ತಮ ಆಯ್ಕೆ; ಆದರೆ, ಎಂಬಿಎ (ಫೈನಾನ್ಸ್ ಮತ್ತು ಅಗ್ರಿ ಬಿಸಿನೆಸ್) ಸಂಯೋಜನೆ ಸಿಗುವುದು ವಿರಳ. ನಮಗಿರುವ ಮಾಹಿತಿಯಂತೆ, ಈ ಸಂಯೋಜನೆಯ ಎಂಬಿಎ ಕೋರ್ಸ್, ಮೈಸೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಿಲ್ಲ.

ಎಲ್ಲಾ ಎಂಬಿಎ ಕೋರ್ಸ್ಗಳಲ್ಲಿ ಹಣಕಾಸು ನಿರ್ವಹಣೆಯ ವಿಷಯದ ಆಳವಾದ ಕಲಿಕೆಯಾಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ನಮ್ಮ ಅಭಿಪ್ರಾಯದಂತೆ, ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು  ಸೇರಿದಂತೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಎಂಬಿಎ (ಅಗ್ರಿ ಬಿಸಿನೆಸ್) ಮಾಡಬಹುದು. ಹಣಕಾಸು ನಿರ್ವಹಣೆ ಕುರಿತಂತೆ ಹೆಚ್ಚಿನ ತಜ್ಞತೆಗಾಗಿ, ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು ಆನ್‌ಲೈನ್ ಮೂಲಕ ಮಾಡಬಹುದು.

ಎಂಬಿಎ (ಅಗ್ರಿ ಬಿಸಿನೆಸ್) ಕೋರ್ಸ್ ಮಾಹಿತಿಗಾಗಿ ಗಮನಿಸಿ: https://www.shiksha.com/mba/colleges/mba-in-agri-business-colleges-india

23. ನಾನು ಬಿಕಾಂ ಪದವಿಯನ್ನು ಮುಗಿಸಿದ್ದು, ಮುಂದೆ ಎಂಬಿಎ ಮಾಡಬೇಕೆಂದುಕೊAಡಿದ್ದೇನೆ. ಎಂಬಿಎ ಕೋರ್ಸ್ನಲ್ಲಿ ಯಾವ ವಿಷಯಗಳನ್ನು ಆಯ್ಕೆ ಮಾಡಬೇಕು? ಆ ವಿಷಯಗಳ ಬಗ್ಗೆ ಸಂಕ್ಷಿಪ್ತ ವಿವರಣೆ ಕೊಡಿ.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್ ಸಿದ್ದಾಂತದ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸಿನಲ್ಲಿ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು, ಲಾಜಿಸ್ಟಿಕ್ಸ್, ಬಿಸಿನೆಸ್ ಅನಾಲಿಟಿಕ್ಸ್, ಉತ್ಪಾದನೆ, ಇಂಟರ್‌ನ್ಯಾಷನಲ್ ಬಿಸಿನೆಸ್ ಮುಂತಾದ ಸ್ಪೆಷಲೈಜೇಷನ್ಸ್ಗಳಿದ್ದು ನಿಮ್ಮ ವೃತ್ತಿಯೋಜನೆಯಂತೆ ಆಯ್ಕೆ ಮಾಡಿಕೊಳ್ಳಬಹುದು. ಮ್ಯಾನೇಜ್‌ಮೆಂಟ್ ತತ್ವ ಮತ್ತು ಸಿದ್ದಾಂತಗಳು, ಕಾನೂನು, ಸಂಖ್ಯಾಶಾಸ್ತç, ಮಾನವ ಸಂಪನ್ಮೂಲ, ಅರ್ಥಶಾಸ್ತç, ಮಾರ್ಕೆಟಿಂಗ್ ನಿರ್ವಹಣೆ, ಬಿಸಿನೆಸ್ ಸಂವಹನ ಇತ್ಯಾದಿ ವಿಷಯಗಳು ಎಲ್ಲಾ ಸ್ಪೆಷಲೈಜೇಷನ್ ವಿದ್ಯಾರ್ಥಿಗಳಿಗೂ ಇರುತ್ತದೆ.  ಎಂಬಿಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg

24. ಎಸ್‌ಕ್ಯುಎಲ್ (Sಕಿಐ) ಕುರಿತು ಮಾಹಿತಿ ನೀಡಿ. ಇದು ಎಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವೇ? ಅಥವಾ ಬಿಬಿಎ, ಬಿ.ಕಾಂ ವಿದ್ಯಾರ್ಥಿಗಳು ಕಲಿಯಬಹುದೇ? ಇದನ್ನು ಎಲ್ಲಿ ಕಲಿಯಬಹುದು? ಉದ್ಯೋಗಾವಕಾಶಗಳೇನು? ಇದರ ಜೊತೆಗೆ ಯಾವ ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆ ಕಲಿತರೆ ಒಳ್ಳೆಯದು?

ಸಂರಚಿಸಿದ ಭಾಷಾ ಪ್ರಶ್ನಾವಳಿ (ಎಸ್‌ಕ್ಯುಎಲ್) ಕೋರ್ಸ್ ಅನ್ನು ಒಂದು ತಿಂಗಳೊಳಗೆ ಕಲಿಯಬಹುದು; ಆದರೆ, ಈ ಕೋರ್ಸ್ ಮೂಲಕ ಪಡೆದ ಜ್ಞಾನ ಮತ್ತು ಕೌಶಲವನ್ನು ಪರಿಣಾಮಕಾರಿಯಾಗಿ ಬಳಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗೂ, ಅದು ಯಾವ ರೀತಿ, ಯಾವ ಕಾರ್ಯ ಮತ್ತು ಸಂದರ್ಭದಲ್ಲ್ಲಿ ಬಳಸುತ್ತೀರಾ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ದತ್ತಾಂಶ ಸಂಗ್ರಹಣೆ, ದತ್ತಾಂಶ ಗಣಿಗಾರಿಕೆ, ಸಂಘಟನೆ ಮತ್ತು ನಿರ್ವಹಣೆ ಕುರಿತಾದ ವೃತ್ತಿಗಳಲ್ಲಿ ಈ ಪ್ರೋಗ್ರಾಮಿಂಗ್ ಭಾಷೆಯ ಉಪಯೋಗವಾಗುತ್ತದೆ. ಹಾಗಾಗಿ, ಬಿಬಿಎ, ಬಿಕಾಂ ಸೇರಿದಂತೆ ಆಸಕ್ತಿಯಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಅಗತ್ಯಕ್ಕೆ ತಕ್ಕಂತೆ ರೆಗ್ಯುಲರ್/ಆನ್‌ಲೈನ್ ಮಾಧ್ಯಮದ ಮೂಲಕ  ಎಸ್‌ಕ್ಯುಎಲ್ ಕಲಿಯಬಹುದು.  ಎಸ್‌ಕ್ಯುಎಲ್ ಜೊತೆಗೆ, ಪೈಥಾನ್, ಆರ್, ಜಾವ, C++ ಮುಂತಾದ ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿತು ವೃತ್ತಿಪರ ಕೌಶಲಗಳನ್ನು ವೃದ್ಧಿಸಿಕೊಳ್ಳಬಹುದು. ಎಸ್‌ಕ್ಯುಎಲ್ ವ್ಯಾಪಕವಾಗಿ ಬಳಸುವ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಕರ್ಷಕ ಉದ್ಯೋಗಾವಕಾಶಗಳಿವೆ.

25. ನಾನು ಡಿಪ್ಲೊಮಾ (ಮೆಕ್ಯಾನಿಕಲ್) ಮಾಡಿದ್ದೇನೆ. ನನಗೆ ಪೊಲೀಸ್ ಕಾನ್ಸ್ಟೇಬಲ್ ಆಗುವ ಆಸೆಯಿದೆ.  ಖಾಸಗಿ ಕಾಲೇಜಿನಲ್ಲಿ ಓದಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಷ್ಟವಾಗುತ್ತದೆ.  ಆದರೆ, ಮನೆಯವರು ಬಿಟೆಕ್ ಮಾಡು ಎನ್ನುತ್ತಿದ್ದಾರೆ. ದಯವಿಟ್ಟು ಮಾರ್ಗದರ್ಶನ ನೀಡಿ.

ಬದುಕಿಗೆ ಅಗತ್ಯವಾದ ವೃತ್ತಿಯನ್ನು ನಿರ್ಧರಿಸುವುದು ಸುಲಭವಲ್ಲ;  ಇದು ನಮ್ಮ ಆಸಕ್ತಿ, ಅಭಿರುಚಿ ಮತ್ತು ಸಾಮರ್ಥ್ಯಗಳನ್ನು ಆದರಿಸಿ, ವ್ಯವಸ್ಥಿತವಾಗಿ ನಡೆಯಬೇಕಾದ ವಿಶ್ಲೇಷಾತ್ಮಕ ಪ್ರಕ್ರಿಯೆ. ಹಾಗಾಗಿ, ಪೊಲೀಸ್ ಇಲಾಖೆಯಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳುವ ನಿಮ್ಮ ಧ್ಯೇಯದ ಹಿಂದೆ ಬಲವಾದ ಕಾರಣಗಳಿರಬೇಕು; ಈ ವೃತ್ತಿ ನಿಮಗೆ ಸಂತೃಪ್ತಿಯನ್ನು ನೀಡಬಹುದು ಎಂದು ನಿಮಗೆ ಖಾತ್ರಿಯಾಗಬೇಕು. ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸಾಮರ್ಥ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವೃತ್ತಿಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

ನಾನು ಎಂಕಾಂ ಮಾಡಿದ್ದು, ಈಗ ಸಿಎಂಎ ಮಾಡಬೇಕೆಂದುಕೊAಡಿದ್ದೇನೆ. ಆದರೆ, ನನಗೀಗ ೨೪ ವರ್ಷಗಳಾಗಿದ್ದು, ಸಮಯ ಮೀರಿದೆಯೇ ಎನಿಸುತ್ತದೆ. ಈಗ, ಈ ಕೋರ್ಸ್ ಮಾಡಬಹುದೇ? ದಯವಿಟ್ಟು ಈ ಕೋರ್ಸ್ ವಿವರವನ್ನು ನೀಡಿ.

ಹೆಸರು, ಊರು ತಿಳಿಸಿಲ್ಲ.

ಐಸಿಡಬ್ಲು÷್ಯಎ (ಇಂಡಿಯನ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆAಟ್) ಎಂಬ ಹೆಸರಿನಲ್ಲಿ ಜನಪ್ರಿಯವಾಗಿದ್ದ ಈ ಕೋರ್ಸನ್ನು ಇತ್ತೀಚಿಗೆ  ಸಿಎಂಎ (ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆAಟ್) ಎಂದು ಬದಲಾಯಿಸಲಾಗಿದೆ. ಈ ಕೋರ್ಸ್ ಮಾಡಲು ಯಾವುದೇ ಗರಿಷ್ಠ ವಯೋಮಿತಿಯಿರುವುದಿಲ್ಲ. ನೀವು ಈಗಾಗಲೇ ಎಂಕಾA ಮಾಡಿರುವುದರಿಂದ, ವೃತ್ತಿಯಲ್ಲಿದ್ದುಕೊಂಡು ಸಿಎಂಎ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://icmai.in/icmai/

26. ನಾನು ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನ್ನ  ವೃತ್ತಿಗೆ ತೊಂದರೆಯಾಗದAತೆ, ನಾನು ಉನ್ನತ ಶಿಕ್ಷಣ ಪಡೆದುಕೊಳ್ಳಲು ಅವಕಾಶವಿದೆಯೇ?

ಸರ್ಕಾರಿ ಉದ್ಯೋಗಿಗಳಿಗೆ, ಪೂರ್ವಾನುಮತಿಯ ಅನುಸಾರ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಇಲಾಖೆಯ ಮೇಲಧಿಕಾರಿಗಳನ್ನು ಸಂಪರ್ಕಿಸಿ.

27. ನಾನು ಪ್ರಸ್ತುತ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೊಲೀಸ್ ಇಲಾಖೆಗೆ ಸೇರುವಾಗ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿಯನ್ನು ರೆಗುಲರ್ ಶಿಕ್ಷಣದ ಮೂಲಕ ಮುಗಿಸಿದ್ದೆ. ಈಗ ನೇರವಾಗಿ ಕೊನೆಯ ವರ್ಷದ ಪದವಿಯನ್ನು ಕೆಎಸ್‌ಒಯು ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿಯನ್ನು ಪಡೆದಿದ್ದೇನೆ. ಇದು ನನ್ನ ಮುಂದಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದೇ ಸರ್.

ನಮ್ಮ ಅಭಿಪ್ರಾಯದಂತೆ, ನಿಮ್ಮ ವೃತ್ತಿಯಲ್ಲಿನ ಕರ್ತವ್ಯ ಮತ್ತು ಜವಾಬ್ದಾರಿಗಳಿಗೆ ಅಡ್ಡಿಯಾಗದೆ, ಉಳಿದಿರುವ ಒಂದು ವರ್ಷದ ಪರೀಕ್ಷೆಗೆ ಹಾಜರಾಗಿ ಪದವಿಯನ್ನು ಪೂರ್ಣಗೊಳಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

28. ಸರ್, ನಾನು ಬಿ.ಎ ಪ್ರಥಮ ವರ್ಷದಲ್ಲಿ ಓದುತ್ತಿದ್ದೇನೆ. ನನ್ನ ಐಚ್ಛಿಕ ವಿಷಯಗಳು ಇತಿಹಾಸ, ಕನ್ನಡ ಆಗಿದೆ. ನನಗೆ, ಇತಿಹಾಸದಲ್ಲಿ ಎಷ್ಟು ಪ್ರಯತ್ನ ಮಾಡಿದರೂ ಇಸವಿಗಳ ನೆನಪು ಉಳಿಯಿತ್ತಿಲ್ಲ. ಆದ್ದರಿಂದ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಭೂಗೋಳಶಾಸ್ತçವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಳ್ಳಲು ಬಯಸುತ್ತೇನೆ. ನಾನು ೧೨ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಇಂಗ್ಲಿಷ್ ಕಲಿಕೆ ಸ್ವಲ್ಪ ಕಷ್ಟವಾಗುತ್ತಿದೆ. ಇಂಗ್ಲಿಷ್ ಕಲಿಯಲು ನಿಮ್ಮ ಸಲಹೆ ನೀಡಿ ಮತ್ತು ಯುಪಿಎಸ್‌ಸಿ ತಯಾರಿಗಾಗಿ ಪುಸ್ತಕಗಳ ಪಟ್ಟಿಯನ್ನು ತಿಳಿಸಿ.

ಇತಿಹಾಸದ ಪ್ರಮುಖ ಘಟನೆಗಳನ್ನು ಮತ್ತು ವರ್ಷಗಳನ್ನು ಸಾಮಾನ್ಯ ರೀತಿಯಲ್ಲಿ ಓದಿದರೆ, ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸ. ಆದರೆ, ಇತಿಹಾಸದ ಅಧ್ಯಾಯಗಳನ್ನು ಆಸಕ್ತಿಯಿಂದ ಕಥಾರೂಪದಲ್ಲಿ ಓದುತ್ತಾ, ಘಟನೆಗಳನ್ನು ಕಾಲಾನುಕ್ರಮದಂತೆ, ಮನಸ್ಸಿನಲ್ಲಿ ಮರುಸೃಷ್ಠಿ ಮಾಡಿಕೊಳ್ಳುತ್ತಾ ಓದಿದರೆ ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟದ ಕೆಲಸವಲ್ಲ. ಜೊತೆಗೆ, ಇತಿಹಾಸದ ಸಾಕ್ಷ÷್ಯಚಿತ್ರಗಳನ್ನು ಮತ್ತು ವಿಡಿಯೊಗಳನ್ನು ವೀಕ್ಷಿಸಿ. ಹಾಗೂ, ಓದುತ್ತಿರುವಾಗ ಟಿಪ್ಪಣಿಯನ್ನು ಬರೆದುಕೊಂಡು, ಘಟನೆಗಳ ಶೀರ್ಷಿಕೆಗಳನ್ನು ಮತ್ತು ಇಸವಿಗಳನ್ನು ಹೈಲೈಟ್ ಮಾಡಿಕೊಳ್ಳುವುದರಿಂದ, ಜ್ಞಾಪಕ ಶಕ್ತಿ ಹೆಚ್ಚುತ್ತದೆ.

ಯುಪಿಎಸ್‌ಸಿ ಪರೀಕ್ಷೆಯ ಪಠ್ಯಕ್ರಮವನ್ನು ಅರ್ಥೈಸಿಕೊಂಡು ಅನೇಕ ಮೂಲಗಳಿಂದ ಆಯ್ದ ಅಧ್ಯಯನ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳಬೇಕು. ವಿಷಯಕ್ಕೆ ಸಂಬAಧಿಸಿದ ಪುಸ್ತಕಗಳ ಮಾಹಿತಿಗಾಗಿ ಗಮನಿಸಿ: https://iasbaba.com/geography-strategy-2/ ನಿಮ್ಮ ಇಂಗ್ಲಿಷ್ ಕಲಿಕೆಗೆ ಸಹಾಯವಾಗಬಹುದಾದ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA

ನಮ್ಮ ಅಭಿಪ್ರಾಯದಂತೆ, ಬಿ.ಎಸ್ಸಿ ( ಕಂಪ್ಯೂಟರ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್) ಉತ್ತಮ ಆಯ್ಕೆ. ಆದರೆ, ನಿಮ್ಮ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳನ್ನು ಗಮನಿಸಿ, ವೈಯಕ್ತಿಕ ಬದುಕು ಮತ್ತು ವೃತ್ತಿಜೀವನದ ಧ್ಯೇಯಗಳನ್ನು ನಿರ್ಧರಿಸಬೇಕು. ಅದರಂತೆ ಬಿ.ಎಸ್ಸಿ ನಂತರ, ಉನ್ನತ ಶಿಕ್ಷಣವನ್ನು ಪಡೆಯಬೇಕೇ ಅಥವಾ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೇ ಎಂದು ಈಗಲೇ ನಿರ್ಧರಿಸುವುದು ಸೂಕ್ತ. ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಇದಲ್ಲದೆ, ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲಿ,್ಲ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷಿ÷್ಮ ಜಾಲತಾಣವನ್ನು  ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

29. ಸರ್, ನಾನು ಬಿಎ ೨ನೇ ವರ್ಷ ಓದುತ್ತಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಆದರೆ, ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿರುವಷ್ಟು  ಮಾಹಿತಿ, ರಾಜ್ಯ ಪಠ್ಯಕ್ರಮದ ಪುಸ್ತಕಗಳಲ್ಲಿಲ್ಲ. ಯುಪಿಎಸ್‌ಸಿ ಫೌಂಡೇಷನ್‌ಗಾಗಿ ಯಾವ ಪುಸ್ತಕಗಳನ್ನು ಓದಬೇಕು?

ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವಾಗ ಒಂದೇ ಮೂಲದ ಅಧ್ಯಯನ ಸಾಮಗ್ರಿ ಸಾಕಾಗುವುದಿಲ್ಲ. ಹಾಗಾಗಿ, ರಾಜ್ಯ ಪಠ್ಯಕ್ರಮದ ಜೊತೆಗೆ ಎನ್‌ಸಿಇಆರ್‌ಟಿ (ನ್ಯಾಷನಲ್ ಕೌಂಸಿಲ್ ಅಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೆöÊನಿಂಗ್) ಪಠ್ಯಕ್ರಮದ ಪುಸ್ತಕಗಳನ್ನೂ ಓದಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://ncert.nic.in/textbook.php