Q & A for Students – June 2023

Q1. ನಾನು ಎನ್‌ಇಪಿ ಪಠ್ಯಕ್ರಮದಂತೆ ಬಿ.ಎಸ್ಸಿ (ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ) ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೇನು ಮಾಡಬಹುದು ಎಂದು ತಿಳಿಸಿ. ಹಾಗೂ, ನನಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳುವ ಆಸೆಯಿದೆ. ಆದರೆ, ಮಾರ್ಗದರ್ಶನದ ಕೊರತೆಯಿದೆ.

ಬಿ.ಎಸ್ಸಿ ಪದವಿಯ ನಂತರ ಉನ್ನತ ಶಿಕ್ಷಣ ಅಥವಾ ವೃತ್ತಿಯನ್ನು ಅರಸುವ ವೈವಿಧ್ಯಮಯ ಮತ್ತು ಆಕರ್ಷಕ ಅವಕಾಶಗಳಿವೆ.

ನಾಲ್ಕು ವರ್ಷದ ಬಿ.ಎಸ್ಸಿ ಪದವಿಯ ನಂತರ ಹೆಚ್ಚಿನ ತಜ್ಞತೆಗಾಗಿ ಪಿಎಚ್.ಡಿ/ಎಂ.ಎಸ್ಸಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಭೋಧಿಸಬಹುದು ಅಥವಾ ಕೆಲವು ಪ್ರತಿಷ್ಠಿತ ಸಂಸ್ಥೆಗಳಾದ ಇಸ್ರೊ, ಬಿಎಆರ್‌ಸಿ, ಸಿಎಸ್‌ಐಆರ್, ಡಿಆರ್‌ಡಿಒ, ಟಿಐಎಫ್‌ಆರ್ ಮುಂತಾದ ಸಂಸ್ಥೆಗಳಲ್ಲಿ ನೌಕರಿಯನ್ನು ಅರಸಬಹುದು.

ಮೂರು ವರ್ಷದ ಬಿ.ಎಸ್ಸಿ ಮುಗಿಸಿದ ನಂತರ ನಿಮಗಿಷ್ಟವಿರುವ ಸರ್ಕಾರಿ ವಲಯದ ನೌಕರಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅರಸಬಹುದು. ಉದಾಹರಣೆಗೆ, ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ-ಸಿಜಿಎಲ್, ಐಬಿಪಿಎಸ್ (ಬ್ಯಾಂಕಿAಗ್), ಆರ್‌ಆರ್‌ಬಿ-ಎನ್‌ಟಿಪಿಸಿ (ರೈಲ್ವೇಸ್) ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಈ ಪರೀಕ್ಷೆಗಳ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಅರಿತು ಕಾರ್ಯತಂತ್ರವನ್ನು ರೂಪಿಸಬೇಕು.

ಈ ಎಲ್ಲಾ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಅಭಿರುಚಿ, ಆಸಕ್ತಿ ಮತ್ತು ಕೌಶಲಗಳಲ್ಲಿ ವ್ಯತ್ಯಾಸವಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಆದ್ದರಿಂದ, ಈ ಆಯ್ಕೆಗಳಲ್ಲಿ ನಿಮಗೆ ಯಾವುದು ಸೂಕ್ತ ಎಂದು ಪರಿಶೀಲಿಸಿ, ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

Q2. ನಾನು ಪಿಯುಸಿ ಮುಗಿಸಿ ಬಿ.ಎಸ್ಸಿ ಕೋರ್ಸನ್ನು ಕಂಪ್ಯೂಟರ್ ಸೈನ್ಸ್/ಐಟಿ ಕ್ಷೇತ್ರದಲ್ಲಿ ಮಾಡಬಯಸುತ್ತೇನೆ. ಉತ್ತಮವಾದ ಆಯ್ಕೆ ಯಾವುದು?

ಬಿ.ಎಸ್ಸಿ ಕೋರ್ಸಿನಲ್ಲಿ ಐಟಿ ಕ್ಷೇತ್ರಕ್ಕೆ ಸಂಬAಧಿಸಿದ ಮತ್ತು ಬಿಟೆಕ್‌ಗೆ ಉತ್ತಮವಾದ ಪರ್ಯಾಯ ಎನ್ನಬಹುದಾದ ಅನೇಕ ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ, ಬಿ.ಎಸ್ಸಿ ಕೋರ್ಸನ್ನು ಕಂಪ್ಯೂಟರ್ ಸೈನ್ಸ್, ಐಟಿ, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಇನ್‌ಫರ್ಮೇಷನ್ ಸಿಸ್ಟಮ್, ಬಯೋ ಇನ್‌ಫರ್‌ಮೆಟಿಕ್ಸ್, ಮಲ್ಟಿಮೀಡಿಯ, ಕ್ಲೌಡ್ ಕಂಪ್ಯೂಟಿAಗ್, ಬಿಗ್ ಡೇಟಾ ಮುಂತಾದ ವಿಷಯಗಳಲ್ಲಿ ಮಾಡಬಹುದು. ಈ ಆಯ್ಕೆಗಳು ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಒಪ್ಪುವ ವೃತ್ತಿ/ಕೋರ್ಸ್ ಆಯ್ಕೆ ಮಾಡಿ,  ಪಠ್ಯದ ಆಳ, ಅಗಲ ಮತ್ತು ಪರಿಮಿತಿಯನ್ನು ಅರಿತು, ವೃತ್ತಿಯ ಅವಶ್ಯಕತೆಗೆ ತಕ್ಕಂತೆ ಹೆಚ್ಚುವರಿ ಅರೆಕಾಲಿಕ/ಡಿಪ್ಲೊಮಾ ಕೋರ್ಸ್ ಮಾಡಿ, ಯಶಸ್ಸಿಗೆ ಬೇಕಾಗುವ ತಜ್ಞತೆ ಮತ್ತು ಕೌಶಲಗಳನ್ನು ಪಡೆದುಕೊಳ್ಳ್ಳಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ABkhf_hiHfw

Q3. ನಾನು ಪಿಯುಸಿ ಮುಗಿಸಿ ಬಿಕಾಂ ಮಾಡಬೇಕು. ಕಾಲೇಜಿಗೆ ಹೋದಾಗ ಅನೇಕ ಆಯ್ಕೆಗಳಿದ್ದು, ಯಾವುದನ್ನು ತೆಗೆದುಕೊಳ್ಳುವುದೆಂಬ ಗೊಂದಲವಿದೆ. ದಯವಿಟ್ಟು ಮಾರ್ಗದರ್ಶನ ನೀಡಿ.

ಇತ್ತೀಚಿನ ವರ್ಷಗಳಲ್ಲಿ ಬಿಕಾಂಗೆ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ, ಕಾಮರ್ಸ್ಗೆ ಸಂಬAಧಿಸಿದ ವ್ಯಾಪಾರ, ಉದ್ದಿಮೆಗಳು, ಬ್ಯಾಂಕಿAಗ್, ಇನ್‌ಶ್ಯೂರೆನ್ಸ್, ಸ್ಟಾಕ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್, ಇನ್ವೆಸ್ಟ್ಮೆಂಟ್ಸ್ ಮುಂತಾದ ಅಭಿವೃದ್ಧಿಯಾಗಿರುವ ಕ್ಷೇತ್ರಗಳಿವೆ. ಹಾಗಾಗಿ, ಅಗತ್ಯವಾದ ಜ್ಞಾನ ಮತ್ತು ವೃತ್ತಿಪರ ಕೌಶಲಗಳನ್ನು ನೀಡಿ, ಈ ಕ್ಷೇತ್ರದ ಮಾನವ ಸಂಪನ್ಮೂಲದ ಬೇಡಿಕೆಯನ್ನು ಪೂರೈಸಲು, ಬಿಕಾಂ ಕೋರ್ಸ್ ಸುಮಾರು ಹತ್ತು ವಿಭಾಗಗಳಲ್ಲಿ ಲಭ್ಯ. ಹಾಗಾಗಿ, ಬಿಕಾಂ ಕೋರ್ಸನ್ನು ಜನರಲ್, ಆನರ್ಸ್, ಬ್ಯಾಂಕಿAಗ್ ಅಂಡ್ ಇನ್ಶೂ÷್ಯ ರೆನ್ಸ್, ಫೈನಾನ್ಷಿಯಲ್ ಮಾರ್ಕೆಟ್ಸ್,  ಅಕೌಂಟಿAಗ್ ಮತ್ತು ಟ್ಯಾಕ್ಷೇಷನ್, ಇಂಟರ್ ನ್ಯಾಷನಲ್ ಫೈನಾನ್ಸ್, ಟೂರಿಸಮ್ ಅಂಡ್ ಟ್ರಾವೆಲ್, ಎಕನಾಮಿಕ್ಸ್, ಇ ಕಾಮರ್ಸ್ ಮುಂತಾದ ವಿಭಾಗಗಳಲ್ಲಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=jmijSoqBDVw

Q4. ನಾನು ಪಿಯುಸಿ ಮುಗಿಸಿ ಎಂಜಿನಿಯರಿAಗ್ ಮಾಡಲು ಯೋಚಿಸಿದ್ದೇನೆ. ಮುಂದಿನ ವರ್ಷಗಳಲ್ಲಿ, ಯಾವ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಇರುತ್ತದೆ?

ಈಗ, ಎಂಜಿನಿಯರಿAಗ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು  ಆಯ್ಕೆಗಳಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ವಿಭಾಗವನ್ನು ಆಯ್ಕೆ ಮಾಡುವುದು ಸೂಕ್ತ.  ನಮ್ಮ ಅಭಿಪ್ರಾಯದಂತೆ ಎಂಜಿನಿಯರಿAಗ್ ಕ್ಷೇತ್ರದ ಎಐ, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಅನಾಲಿಟಿಕ್ಸ್, ಸೈಬರ್ ಸೆಕ್ಯೂರಿಟಿ, ರೊಬೋಟಿಕ್ಸ್, ನವೀಕರಿಸಬಹುದಾದ ಇಂಧನ (ರಿನ್ಯೂಯಬಲ್ ಎನರ್ಜಿ), ಕಂಪ್ಯೂಟರ್ ಸೈನ್ಸ್, ಪರಿಸರ (ಎನ್ವಿರಾನ್‌ಮೆಂಟಲ್), ಬಯೋಮೆಡಿಕಲ್ ಮುಂತಾದ ವಿಭಾಗಗಳ ಪದವೀಧರರಿಗೆ ಹೆಚ್ಚು ಬೇಡಿಕೆಯಿರುತ್ತದೆ ಎಂದು ನಿರೀಕ್ಷಿಸಬಹುದು. ಇದರರ್ಥ, ಇನ್ನಿತರ ವಿಭಾಗಗಳಿಗೆ ಬೇಡಿಕೆ ಇರುವುದಿಲ್ಲ ಎಂದಲ್ಲ. ಎಂಜಿನಿಯರಿAಗ್ ಕ್ಷೇತ್ರದ ಎಲ್ಲಾ ವಿಭಾಗಗಳಿಗೆ ಬೇಡಿಕೆ ಇರುತ್ತದೆಯಾದರೂ, ವಿಶೇಷವಾಗಿ ಇನ್ನಿತರ ವಿಭಾಗಗಳ ವಿದ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ವೃತ್ತಿಪರ ವ್ಯಕ್ತಿತ್ವ ಮತ್ತು ಕೌಶಲಗಳೊಂದಿಗೆ, ಉತ್ತಮ ಫಲಿತಾಂಶದಿAದ ತೇರ್ಗಡೆಯಾಗಬೇಕು. ಹಾಗೂ, ಮೂಲ ಸೌಕರ್ಯಗಳು ಮತ್ತು ಕ್ಯಾಂಪಸ್ ನೇಮಕಾತಿಯಿರುವ ಎಂಜಿನಿಯರಿAಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡುವುದರಿಂದ, ಭವಿಷ್ಯವನ್ನು ರೂಪಿಸಿಕೊಳ್ಳಲು ಸುಲಭವಾಗುತ್ತದೆ.

Q5. ನಾನು ಬಿಎ ಪದವಿಯ ನಂತರ ಐಎಎಸ್ ಮಾಡಬೇಕೆಂದುಕೊAಡಿದ್ದೇನೆ. ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯವನ್ನು ಆಯ್ಕೆ ಮಾಡುವುದು ಹೇಗೆ?

ಪದವಿ ಪರೀಕ್ಷೆಗೆ ನೀವು ಓದಿರುವ ಅಥವಾ ಇಷ್ಟಪಟ್ಟಿರುವ ವಿಷಯಗಳನ್ನು ಗಮನಿಸಿ. ಇದರ ಜೊತೆಗೆ, ಹಿಂದಿನ ಪರೀಕ್ಷೆಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿದ್ದ ವಿಷಯಗಳನ್ನು ಪರಿಶೀಲಿಸಿ, ವೃತ್ತಿಯ ಗುರಿಗೆ ಅನುಗುಣವಾಗಿ, ಯಾವ ವಿಷಯ ಸೂಕ್ತ ಎಂದು ನಿರ್ಧರಿಸಬಹುದು.

ಮೇಲ್ನೋಟಕ್ಕೆ, ಕಲಾ ವಿಭಾಗದ ಅಭ್ಯರ್ಥಿಯಾದ ನಿಮಗೆ ಸಮಾಜ ಶಾಸ್ತç, ಇತಿಹಾಸ, ಭೂಗೋಳ, ಸಾರ್ವಜನಿಕ ಆಡಳಿತ ಮುಂತಾದ ವಿಷಯಗಳು ಸೂಕ್ತವಾಗಬಹುದು. ವಿಷಯ ಯಾವುದಿದ್ದರೂ ಪಠ್ಯಕ್ರಮವನ್ನು ಅರಿತು, ಪುಸ್ತಕಗಳು ಮತ್ತು ಅಧ್ಯಯನದ ಸಾಮಗ್ರಿಯನ್ನು ಸಿದ್ದಪಡಿಸಿಕೊಳ್ಳಬೇಕು. ಪ್ರಮುಖವಾಗಿ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

Q6. ನನ್ನ ಮಗ ಈ ವರ್ಷ ಬಿಇ (ಇಂಡಸ್ಟಿçಯಲ್ ಎಂಜಿನಿಯರಿAಗ್ ಅಂಡ್ ಮ್ಯಾನೇಜ್‌ಮೆಂಟ್) ಮುಗಿಸುತ್ತಿದ್ದು, ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಮುಂದೆ ಯಾವ ಕೋರ್ಸ್ ಮಾಡಬಹುದು? ದಯವಿಟ್ಟು ಮಾರ್ಗದರ್ಶನ ನೀಡಿ.

ಉನ್ನತ ಶಿಕ್ಷಣವನ್ನು ನಿರ್ಧರಿಸುವ ಮೊದಲು, ಯಾವ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಯೋಚಿಸಬೇಕು. ಪ್ರಮುಖವಾಗಿ, ಎರಡು ಆಯ್ಕೆಗಳಾದ ತಂತ್ರಜ್ಞಾನ ಅಥವಾ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ, ಸ್ವಾಭಾವಿಕ ಅಭಿರುಚಿ, ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ, ಯಾವ ಕ್ಷೇತ್ರ ಸೂಕ್ತ ಎಂದು ನಿರ್ಧರಿಸಿ, ವೃತ್ತಿಯೋಜನೆಯನ್ನು ಮಾಡಬೇಕು. ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿ, ಯಶಸ್ಸಿಗೆ ಬೇಕಾಗುವ ತಜ್ಞತೆ, ತರಬೇತಿ, ವೃತ್ತಿಪರ ಮತ್ತು ಪ್ರಾಥಮಿಕ ಕೌಶಲಗಳು, ವೃತ್ತಿಯ ಮೈಲಿಗಲ್ಲುಗಳು ಈ ಯೋಜನೆಯ ಅಂಶಗಳಾಗಿರುತ್ತವೆ. ಈ ಅಂಶಗಳನ್ನು ಪರಿಗಣಿಸಿ, ವೃತ್ತಿಯೋಜನೆಯನ್ನು ಮಾಡಿ ಅನುಷ್ಠಾನಗೊಳಿಸಬೇಕು.

ಇಂಡಸ್ಟಿçಯಲ್ ಎಂಜಿನಿಯರಿAಗ್ ಕ್ಷೇತ್ರಕ್ಕೆ ಸಂಬAಧಿಸಿದ, ಆಸಕ್ತಿದಾಯಕ ಮತ್ತು ಭವಿಷ್ಯದಲ್ಲಿ ಬೇಡಿಕೆಯನ್ನು ನಿರೀಕ್ಷಿಸಬಹುದಾದ ವಿಭಾಗದಲ್ಲಿ ಎಂಟೆಕ್/ಎAಎಸ್ ಕೋರ್ಸ್ಗಳನ್ನು ದೇಶ/ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು. ಮ್ಯಾನೇಜ್‌ಮೆಂಟ್ ಕ್ಷೇತ್ರದ ತಜ್ಞತೆಗಾಗಿ, ಎಂಬಿಎ ಮಾಡುವುದು ಸೂಕ್ತ. ಉನ್ನತ ಶಿಕ್ಷಣದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

Q7. ಬಿ.ಇಡಿ ಜೊತೆಗೆ ಎಂಎ (ದೂರ ಶಿಕ್ಷಣ) ಮಾಡಬೇಕೆಂದುಕೊAಡಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ ಮತ್ತು ಇದರಿಂದ, ಮುಂದೆ ಉದ್ಯೋಗದ ಮೇಲೆ ಪರಿಣಾಮ ಬೀರುವುದೇ?

ಶಿಕ್ಷಕ ವೃತ್ತಿಯನ್ನು ಅನುಸರಿಸಲು, ಬಿಇಡಿ ಮತ್ತು ಎಂಎ (ದೂರ ಶಿಕ್ಷಣ) ಉತ್ತಮ ಆಯ್ಕೆ. ಬಿಇಡಿ ಕೋರ್ಸನ್ನು ರೆಗ್ಯುಲರ್ ಅಥವಾ ದೂರಶಿಕ್ಷಣದ ಮೂಲಕ ಮಾಡಬಹುದು. ನೀವು ಆಯ್ಕೆ ಮಾಡುವ ಕಾಲೇಜಿನ/ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರವೇಶ ಪ್ರಕ್ರಿಯೆ, ಶುಲ್ಕಗಳು ಇತ್ಯಾದಿಗಳಿರುತ್ತದೆ.

ಬಿ.ಇಡಿ ಜೊತೆಗೆ ಪದವಿ ಕೋರ್ಸಿನಲ್ಲಿ ಓದಿರುವ ಅಥವಾ ಇಷ್ಟವಿರುವ ವಿಷಯದಲ್ಲಿ ಎಂಎ ಮಾಡಿ, ಶಿಕ್ಷಕರ ಅರ್ಹತಾ ಪರೀಕ್ಷೆಯ ನಂತರ, ಪದವಿಪೂರ್ವ ಕಾಲೇಜುಗಳಲ್ಲಿ ಅಧ್ಯಾಪಕರಾಗಬಹುದು.  ಮುಂದೆ ಸಾಧ್ಯವಾದರೆ, ಹೆಚ್ಚಿನ ತಜ್ಞತೆಗಾಗಿ ಪಿ.ಎಚ್‌ಡಿ ಮಾಡಿ  ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಗಳಿಸಬಹುದು.

ಈ ವೃತ್ತಿಯನ್ನು ಅನುಸರಿಸಲು ವಿಷಯದಲ್ಲಿ ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

Q8. ನಾನು ಪಿಯುಸಿ ಮುಗಿಸಿದ್ದು, ನರ್ಸಿಂಗ್ ಮತ್ತು ಎಂಜಿನಿಯರಿAಗ್ ಕೋರ್ಸ್ಗಳ ಬಗ್ಗೆ ತಿಳಿಸಿ. ಹೆಣ್ಣು ಮಕ್ಕಳಿಗೆ ಯಾವುದು ಸೂಕ್ತ?

ಮಹಿಳೆಯರ ಸಾಧನೆಗಳನ್ನು ಶಿಕ್ಷಣ, ಕ್ರೀಡೆ, ರಾಜಕೀಯ, ಮಾಧ್ಯಮ, ಕಲೆ ಮತ್ತು ಸಂಸ್ಕೃತಿ, ಸೇವಾ ಕ್ಷೇತ್ರಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದು. ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಅತ್ಯವಶ್ಯಕವಾಗಿದ್ದು  ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ, ವಾಣಿಜ್ಯ, ಕಲೆ, ಕಾನೂನು  ಮುಂತಾದ ಎಲ್ಲಾ ಶಿಕ್ಷಣ ಕ್ಷೇತ್ರಗಳಲ್ಲ್ಲಿ ಹೆಣ್ಣು ಮಕ್ಕಳ ದಾಖಲಾತಿ ನಿರಂತರವಾಗಿ ಹೆಚ್ಚುತ್ತಿದೆ. ಮೇಲಾಗಿ, ವೃತ್ತಿ/ಕೋರ್ಸ್ ಆಯ್ಕೆ ಮಾಡುವಾಗ ಲಿಂಗ ತಾರತಮ್ಯವಿಲ್ಲದೆ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಸಾಮರ್ಥ್ಯ, ಕೌಶಲಗಳು ಪ್ರಮುಖ ಆಧಾರಗಳಾಗಿರಬೇಕು.

ನೀವು ಪರಿಶೀಲಿಸುತ್ತಿರುವ ಎರಡೂ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳ ದೃಷ್ಟಿಯಿಂದ ವಿಭಿನ್ನ. ನರ್ಸಿಂಗ್ ವೃತ್ತಿಯಲ್ಲಿ ಯಶಸ್ವಿಯಾಗಲು ಸೇವಾ ಮನೋಭಾವ, ಅನುಭೂತಿ, ನಿಷ್ಠೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಇತ್ಯಾದಿಗಳ ಅವಶ್ಯಕತೆಯಿದ್ದರೆ ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಇತ್ಯಾದಿಗಳಿರಬೇಕು. ಆದ್ದರಿಂದ, ನಿಮಗೆ ಸೂಕ್ತವೆನಿಸುವ ವೃತ್ತಿಯನ್ನು ಆಯ್ಕೆ ಮಾಡಿ, ಅದರಂತೆ ಕೋರ್ಸ್ ಆಯ್ಕೆಯಿರಲಿ.

ಪಿಯುಸಿ ನಂತರ ಬಿ.ಎಸ್ಸಿ (ನರ್ಸಿಂಗ್) ಕೋರ್ಸ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪ್ರವೇಶ ಪರೀಕ್ಷೆ ಈಗ ಕಡ್ಡಾಯವಾಗಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ChvTG9rg33A

Q9. ನಾನು ಅಂತಿಮ ವರ್ಷದ ಬಿ.ಎಸ್ಸಿ ಮಾಡುತ್ತಿದ್ದು, ಮುಂದೆ ಎಂಎಸ್ಸಿ ಮಾಡುವ ಆಸೆ ಇದೆ. ಇದರ ಬಗ್ಗೆ ಮತ್ತು ಎನ್‌ಇಟಿ ಮತ್ತು ಕೆಎಸ್‌ಇಟಿ ಬಗ್ಗೆ ತಿಳಿಸಿ.

ಬಿ.ಎಸ್ಸಿ ನಂತರ ನಿಮಗಿಷ್ಟವಿರುವ ವಿಷಯದಲ್ಲಿ ಎಂ.ಎಸ್ಸಿ ಮಾಡಬಹುದು. ಎಂ.ಎಸ್ಸಿ ಪದವಿಯಲ್ಲಿ ಕನಿಷ್ಠ ಶೇ 55 (ಸಾಮನ್ಯ ವರ್ಗ) ಅಂಕಗಳನ್ನು ಗಳಿಸಿದರೆ ಎನ್‌ಇಟಿ/ಕೆಎಸ್‌ಇಟಿ ಪರೀಕ್ಷೆಯನ್ನು ಬರೆಯಬಹುದು. ಅಂತಿಮ ವರ್ಷದ ಎಂ.ಎಸ್ಸಿ ಮಾಡುವಾಗಲೂ ಈ ಪರೀಕ್ಷೆಗಳಲ್ಲಿ ಭಾಗವಹಿಸಬಹುದು. ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ದೇಶದ ಯಾವುದೇ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು; ಕೆಎಸ್‌ಇಟಿ ಪರೀಕ್ಷೆಯ ಮೂಲಕ ರಾಜ್ಯದ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು. ಈ ಎರಡೂ ಪರೀಕ್ಷೆಗಳ ಮಾದರಿ ಒಂದೇ ಇದ್ದು, ಪ್ರಶ್ನೆಪತ್ರಿಕೆ-1 ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬAಧಿಸಿರುತ್ತದೆ; ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುÄವಂತಹದ್ದಾಗಿರುತ್ತದೆ. ಪ್ರಶ್ನೆಪತ್ರಿಕೆ-2 ರಲ್ಲಿ ನಿಮ್ಮ ವಿಷಯ ಜ್ಞಾನದ ಕುರಿತಾದ ಪ್ರಶ್ನೆಗಳಿರುತ್ತದೆ. ಎನ್‌ಇಟಿ ಪರೀಕ್ಷೆ ವರ್ಷದಲ್ಲಿ ಎರಡು ಬಾರಿಯೂ, ಕೆಎಸ್‌ಇಟಿ ಪರೀಕ್ಷೆ ವರ್ಷದಲ್ಲಿ ಒಂದು ಬಾರಿ ಆಯೋಜಿಸಲಾಗುತ್ತದೆ.

ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. 

Q10. ನನ್ನ ಮಗ ಎಂಜಿನಿಯರಿAಗ್ ಮಾಡುತ್ತಿದ್ದು, ಒಂದು ವರ್ಷದ ನಂತರ ಕಾಲೇಜನ್ನು ಬದಲಾಯಿಸಬಹುದೇ? ದಯವಿಟ್ಟು ತಿಳಿಸಿ.

ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ವಿದ್ಯಾರ್ಥಿಗಳು ಒಂದು ವರ್ಷದ ನಂತರ ಕಾಲೇಜಿನ/ವಿಭಾಗದ ಬದಲಾವಣೆಗೆ ಅವಕಾಶವಿರುತ್ತದೆ. ಉದಾಹರಣೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿಯೂ (ವಿಟಿಯು) ಈ ಅವಕಾಶವಿದ್ದು ನಿಯಮಾವಳಿಗಳು, ಶುಲ್ಕಗಳು ಸರ್ಕಾರಿ/ಅನುದಾನಿತ/ಅನುದಾನರಹಿತ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅನ್ವಯಿಸುತ್ತದೆ. ಹಾಗಾಗಿ, ಸಂಬAಧಪಟ್ಟ ಕಾಲೇಜು/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ವಿಟಿಯು ವಿಶ್ವವಿದ್ಯಾಲಯದ ಸುತ್ತೋಲೆಯನ್ನು ಗಮನಿಸಿ: https://vtu.ac.in/wp-content/uploads/2022/11/NOTIFICATION-4170-11162022183808.pdf

Q11. ನಾನು ಡಿಎಮ್‌ಎಲ್‌ಟಿ ಮಾಡಿದ್ದು, ಶಿಕ್ಷಣ ಮುಂದುವರಿಸಬೇಕಾದರೆ ಪ್ಯಾರಾಮೆಡಿಕಲ್ ಕ್ಷೇತ್ರದ ಯಾವ ಕೋರ್ಸ್ ಆಯ್ಕೆ ಮಾಡಬಹುದು?

ಡಿಎಮ್‌ಎಲ್‌ಟಿ (ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಕೋರ್ಸ್ ನಂತರ ಇಮೇಜಿಂಗ್ ಟೆಕ್ನಾಲಜಿ, ಅನಸ್ಥೇಶಿಯ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಕೇರ್ ಮುಂತಾದ ಕ್ಷೇತ್ರಗಳ ಸರ್ಟಿಫಿಕೆಟ್/ಡಿಪ್ಲೊಮಾ/ಪದವಿ ಕೋರ್ಸ್ಗಳನ್ನು ಮಾಡಬಹುದು. ಪದವಿ ಕೋರ್ಸ್ಗಳಿಗೆ  ಲ್ಯಾಟರಲ್ ಪ್ರವೇಶದ ಸಾಧ್ಯತೆಯನ್ನು ಪರಿಶೀಲಿಸಿ.

Q12. ಬಿಎಎಂಎಸ್ ಮತ್ತು ಬಿ.ಎಸ್ಸಿ (ಕೃಷಿ) ಕೋರ್ಸ್ಗಳಿಗೆ ಭವಿಷ್ಯದಲ್ಲಿ ಬೇಡಿಕೆ, ಉದ್ಯೋಗಾವಕಾಶಗಳು ಮತ್ತು ಉನ್ನತ ಶಿಕ್ಷಣದ ಕುರಿತ ಮಾಹಿತಿಯನ್ನು ದಯವಿಟ್ಟು ನೀಡಿ.

ಹೆಚ್ಚುತ್ತಿರುವ ಪರಿಸರ ಮಾಲಿನ್ಯ,  ನೈಸರ್ಗಿಕ ವಿಪತ್ತುಗಳು ಮತ್ತು ಪಿಡುಗುಗಳ ಜೊತೆಗೆ ಜಗತ್ತಿನ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚುತ್ತಿದು,್ದ ಆರೋಗ್ಯಕ್ಕೆ ಸಂಬAಧಿಸಿದ ಎಲ್ಲಾ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.  ಹಾಗಾಗಿ, ಬಿಎಎಂಎಸ್ (ಬ್ಯಾಚೆಲರ್ ಅ¥s಼ï ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ) ಕೋರ್ಸಿಗೆ ಭವಿಷ್ಯದಲ್ಲಿಯೂ ಬೇಡಿಕೆಯನ್ನು ನಿರೀಕ್ಷಿಸಬಹುದು. ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಬಹುದು. ಹಲವಾರು ವರ್ಷಗಳ ಅನುಭವದ ನಂತರ ಖುದ್ದಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ತಜ್ಞತೆಗಾಗಿ, ಎಂಎಸ್ (ಆಯುರ್ವೇದ) ಮಾಡಬಹುದು.

ನಮ್ಮ ದೇಶದ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿ ಮತ್ತು ಸಂಬAಧಿತ ವಲಯದ ಕೊಡುಗೆ ಸುಮಾರು ಶೇ 20ರಷ್ಟಿದೆ. ಇದಲ್ಲದೆ, ಬೆಳೆಗಳ ಹಾಳಾಗುವಿಕೆ, ಪ್ರವಾಹ, ಕೀಟಗಳು, ರೋಗಗಳು ಇತ್ಯಾದಿ ಕಾರಣಗಳಿಂದ ಪ್ರತಿ ವರ್ಷ ಸುಮಾರು ಶೇ 20ಕ್ಕೂ ಹೆಚ್ಚು ಬೆಳೆ ನಾಶವಾಗುತ್ತಿದೆ. ಹಾಗಾಗಿ, ಕೃಷಿ ಸಂಬAಧಿತ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಧಿಕ ಇಳುವರಿ, ಸಮಯದ ಉಳಿತಾಯ, ಉತ್ಪಾದನಾ ವೆಚ್ಚದ ಕಡಿತ, ಉತ್ಪನ್ನಗಳ ಸಂರಕ್ಷಣೆ, ಸಾಗಣೆ ಮತ್ತು ಮಾರಾಟ ನಿರ್ವಹಣೆ ಕುರಿತ ಅತ್ಯಂತ ಉಪಯುಕ್ತ ಮಾಹಿತಿಯನ್ನು ಬಿ.ಎಸ್ಸಿ (ಕೃಷಿ) ಕೋರ್ಸ್ನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸ್ ಮಾಡಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆಯನ್ನು ನಿರೀಕ್ಷಿಸಬಹುದು.

ಈ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕೃಷಿ ಉದ್ದಿಮೆಗಳು, ಆಹಾರ ಸಂಬAಧಿತ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ರಸಗೊಬ್ಬರ ಮತ್ತು ಕೀಟನಾಶಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳು, ಬ್ಯಾಂಕಿAಗ್, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣಕ್ಕಾಗಿ, ಎಂ.ಎಸ್ಸಿ/ಪಿಎಚ್.ಡಿ ಮಾಡಬಹುದು. ಹಾಗೂ ನಿಮಗೆ ಅಭಿರುಚಿಯಿದ್ದಲ್ಲಿ, ಜ್ಞಾನ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.

ನಿಮ್ಮ ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಗೆ ಅನುಗುಣವಾಗಿ, ಮೊದಲು ವೃತ್ತಿಯ ಆಯ್ಕೆ ಮಾಡಿ ಅದರಂತೆ ಕೋರ್ಸ್ ಆಯ್ಕೆ ಇರಲಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

Q13. ನಾನು ಪಿಯುಸಿ ಮುಗಿಸಿದ್ದು, ನರ್ಸಿಂಗ್ ಮತ್ತು ಎಂಜಿನಿಯರಿAಗ್ ಕೋರ್ಸ್ಗಳ ಬಗ್ಗೆ ತಿಳಿಸಿ. ಹೆಣ್ಣು ಮಕ್ಕಳಿಗೆ ಯಾವುದು ಸೂಕ್ತ?

ಮಹಿಳೆಯರ ಸಾಧನೆಗಳನ್ನು ಶಿಕ್ಷಣ, ಕ್ರೀಡೆ, ರಾಜಕೀಯ, ಮಾಧ್ಯಮ, ಕಲೆ ಮತ್ತು ಸಂಸ್ಕೃತಿ, ಸೇವಾ ಕ್ಷೇತ್ರಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದು. ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಅತ್ಯವಶ್ಯಕವಾಗಿದ್ದು  ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್, ಗಣಿತ, ವಾಣಿಜ್ಯ, ಕಲೆ, ಕಾನೂನು  ಮುಂತಾದ ಎಲ್ಲಾ ಶಿಕ್ಷಣ ಕ್ಷೇತ್ರಗಳಲ್ಲ್ಲಿ ಹೆಣ್ಣು ಮಕ್ಕಳ ದಾಖಲಾತಿ ನಿರಂತರವಾಗಿ ಹೆಚ್ಚುತ್ತಿದೆ. ಮೇಲಾಗಿ, ವೃತ್ತಿ/ಕೋರ್ಸ್ ಆಯ್ಕೆ ಮಾಡುವಾಗ ಲಿಂಗ ತಾರತಮ್ಯವಿಲ್ಲದೆ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಸಾಮರ್ಥ್ಯ, ಕೌಶಲಗಳು ಪ್ರಮುಖ ಆಧಾರಗಳಾಗಿರಬೇಕು.

ನೀವು ಪರಿಶೀಲಿಸುತ್ತಿರುವ ಎರಡೂ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಸಾಮರ್ಥ್ಯ ಮತ್ತು ಕೌಶಲಗಳ ದೃಷ್ಟಿಯಿಂದ ವಿಭಿನ್ನ. ನರ್ಸಿಂಗ್ ವೃತ್ತಿಯಲ್ಲಿ ಯಶಸ್ವಿಯಾಗಲು ಸೇವಾ ಮನೋಭಾವ, ಅನುಭೂತಿ, ನಿಷ್ಠೆ, ಪ್ರಾಮಾಣಿಕತೆ, ಸಮಯ ಪ್ರಜ್ಞೆ ಇತ್ಯಾದಿಗಳ ಅವಶ್ಯಕತೆಯಿದ್ದರೆ ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಇತ್ಯಾದಿಗಳಿರಬೇಕು. ಆದ್ದರಿಂದ, ನಿಮಗೆ ಸೂಕ್ತವೆನಿಸುವ ವೃತ್ತಿ/ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

ಪಿಯುಸಿ ನಂತರ ಬಿ.ಎಸ್ಸಿ (ನರ್ಸಿಂಗ್) ಕೋರ್ಸ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯೋಜಿಸುವ ಪ್ರವೇಶ ಪರೀಕ್ಷೆ ಈಗ ಕಡ್ಡಾಯವಾಗಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ChvTG9rg33A

Q14. ನಾನು ಪಿಯುಸಿ ಮುಗಿಸಿ ಮೆಡಿಕಲ್ ಕ್ಷೇತ್ರಕ್ಕೆ ಹೋಗಬೇಕೆಂದುಕೊAಡಿದ್ದೇನೆ. ಬಿ.ಎಸ್ಸಿಯಲ್ಲಿ ಯಾವ ಕೋರ್ಸ್ ತೆಗೆದುಕೊಳ್ಳಬೇಕು?

ಪಿಯುಸಿ ನಂತರ ಮೆಡಿಕಲ್, ಆರೋಗ್ಯ ಮತ್ತು ಸ್ವಾಸ್ಥ÷್ಯ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಲು ಎಂಬಿಬಿಎಸ್, ಬಿಡಿಎಸ್, ಆಯುರ್ವೇದ, ನ್ಯಾಚುರೋಪತಿ ಅಲ್ಲದೆ ಹಲವಾರು ವೈವಿಧ್ಯಮಯ ಅವಕಾಶಗಳಿವೆ.

  • ಪ್ಯಾರಮೆಡಿಕಲ್/ಇನ್ನಿತರ ಕೋರ್ಸ್ಗಳು: ಬಿ.ಎಸ್ಸಿ ಕೋರ್ಸನ್ನು ಮೆಡಿಕಲ್ ಸೈನ್ಸ್, ಲ್ಯಾಬೋರೇಟರಿ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಅನಸ್ಥೇಶಿಯ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಟೆಕ್ನಾಲಜಿ, ನರ್ಸಿಂಗ್, ಡಯಟಿಕ್ಸ್, ಫಿಸಿಯೋತೆರಪಿ, ಸ್ಪೋರ್ಟ್ಸ್ ಸೈನ್ಸ್ ಮುಂತಾದ ವಿಭಾಗಗಳಲ್ಲಿ ಮಾಡಬಹುದು.
  • ಫಾರ್ಮಾ: ಬಿಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ,  ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ÷್ಯಕ್ಕೆ ಸಂಬAಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಲ್ಯಾಬೋರೇಟರಿಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್ಸಿ÷್ಕçಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ
  • ವಿಜ್ಞಾನ, ಅನ್ವಯಿಕ ವಿಜ್ಞಾನ ಮತ್ತು ಸಂಶೋಧನೆ: ಈ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಬಿ.ಎಸ್ಸಿ ಕೋರ್ಸನ್ನು ಬಯಾಲಜಿ, ಬಯೋಕೆಮಿಸ್ಟಿç, ಬಯೋಟೆಕ್ನಾಲಜಿ, ಬಯೋಇನ್‌ಫರ್‌ಮೇಟಿಕ್ಸ್, ಮೈಕ್ರೊಬಯಾಲಜಿ, ಕ್ಲಿನಿಕಲ್ ರಿಸರ್ಚ್, ಜೆನೆಟಿಕ್ಸ್, ಸೈಕಾಲಜಿ, ಕ್ರಿಮಿನಾಲಜಿ, ಫೊರೆನ್ಸಿಕ್ ಸೈನ್ಸ್, ಕೌನ್ಸೆಲಿಂಗ್, ಪರಿಸರ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಾಡಿ ವೃತ್ತಿಯನ್ನು ಅರಸಬಹುದು. ಹೆಚ್ಚಿನ ತಜ್ಞತೆಗಾಗಿ, ಎಂ.ಎಸ್ಸಿ/ಪಿಎಚ್.ಡಿ ಮಾಡಬಹುದು.

15. ನಾನು ಎಂಬಿಬಿಎಸ್ ಮಾಡಿ ವೈದ್ಯಳಾಗಬೇಕೆಂದಿದ್ದೆ. ಆದರೆ, ಈ ವರ್ಷದ ನೀಟ್ ಪರೀಕ್ಷೆಯಲ್ಲಿ 100 ಅಂಕಗಳಷ್ಟೇ ಬಂದಿದೆ. ನಾನು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿರಲಿಲ್ಲ. ಹಾಗಾಗಿ, ಈ ವರ್ಷ ಸಂಪೂರ್ಣವಾಗಿ ನೀಟ್ ಪರೀಕ್ಷೆಗೆ ತಯಾರಿ ನಡೆಸಬಹುದೇ ಎಂದು ಯೋಚಿಸುತ್ತಿದ್ದೇನೆ. ಈ ನಿರ್ಧಾರ ಸರಿಯೇ ಅಥವಾ ಬೇರೆ ಯಾವ ಕೋರ್ಸ್ ಮಾಡಬಹುದು? ಬೆಂಗಳೂರಿನ ಯಾವ ಕೋಚಿಂಗ್ ಸೆಂಟರ್ ಉತ್ತಮ ಆಯ್ಕೆ? ನಿಮ್ಮ ಮಾರ್ಗದರ್ಶನದ ಅಗತ್ಯವಿದೆ.

ಅಮ್ರುತ ಎಸ್, ಊರು ತಿಳಿಸಿಲ್ಲ.

ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬರಲಿಲ್ಲವೆಂದು ಎದೆಗುಂದದೆ, ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಲು, ಸ್ವಯಂಪ್ರೇರಣೆಯೇ ನಿಮ್ಮ ಸಾಧನೆಗೆ ಸಂಜೀವಿನಿಯಾಗಬೇಕು.

ಮೊದಲಿಗೆ, ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದರೂ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿರುವುದಕ್ಕೆ ಕಾರಣಗಳನ್ನು ವಿಶ್ಲೇಷಿಸಬೇಕು. ಹಾಗಾಗಿ, ಈ ಸಾಧ್ಯತೆಗಳನ್ನು ಪರಿಶೀಲಿಸಿ:

  • ಅರ್ಹತಾ ಪರೀಕ್ಷೆ ಮತ್ತು ನೀಟ್ ಪರೀಕ್ಷೆಗಳ ನಡುವೆ ಸಮತೋಲನದ ಕೊರತೆ.
  • ವಿಶೇಷವಾಗಿ, ನೀಟ್ ಪರೀಕ್ಷೆಯ ತಯಾರಿಗೆ ಅಗತ್ಯವಾದ ಏಕಾಗ್ರತೆ, ಇನ್ನಿತರ ಕೊರತೆಗಳು.
  • ನೀಟ್ ಅಣಕು ಪರೀಕ್ಷೆಯ ಅಂಕಗಳು ಮತ್ತು ಅಂತಿಮ ಪರೀಕ್ಷೆಯ ಅಂಕಗಳ ವ್ಯತ್ಯಾಸಗಳು.
  • ನೀಟ್ ಪರೀಕ್ಷೆಯಲ್ಲಿ ಉತ್ತರಿಸಿರದ ಪ್ರಶ್ನೆಗಳ ಸಂಖ್ಯೆ ಮತ್ತು ತಪ್ಪು ಉತ್ತರಗಳಿಂದ ಬಂದಿರಬಹುದಾದ ಋಣಾತ್ಮಕ ಅಂಕಗಳ ಪರಿಣಾಮ.

ಎಂಬಿಬಿಎಸ್ ಮಾಡಿ ವೈದ್ಯಳೇ ಆಗಬೇಕು ಎನ್ನುವುದಾದರೆ, ಈಗಲೂ ಅವಕಾಶವಿದೆ. ಈ ವರ್ಷದ ನೀಟ್ ಪರೀಕ್ಷೆಯ ವಿಶ್ಲೇಷಣೆಯನ್ನು ಆಧರಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ, ಮುಂದಿನ ವರ್ಷದ ನೀಟ್ ಪರೀಕ್ಷೆಗೆ ಉತ್ಸಾಹದಿಂದಲೂ, ಸಕಾರಾತ್ಮಕ ಧೋರಣೆಯಿಂದಲೂ ತಯಾರಾಗಿ. ಕೋಚಿಂಗ್ ಸೆಂಟರ್‌ಗಳ ಉಪಯುಕ್ತತೆಯನ್ನು ಅಲ್ಲಗಳೆಯಲಾಗದು. ಕೋಚಿಂಗ್ ಸೆಂಟರ್ ಸೇರಬೇಕೇ ಅಥವಾ ಯಾವ ಕೋಚಿಂಗ್ ಸೆಂಟರ್ ಸೇರಬೇಕು ಎನ್ನುವ ನಿರ್ಧಾರ ನಿಮ್ಮದು.

ಮೆಡಿಕಲ್ ಕ್ಷೇತ್ರಕ್ಕೆ ಸಂಬAಧಿಸಿದ ಇನ್ನಿತರ ಕೋರ್ಸ್ಗಳ ಬಗ್ಗೆ ಇಂದಿನ ಪ್ರಶ್ನೋತ್ತರದಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದಿಕೊಳ್ಳಿ.

Q16. ನಾನು ಪದವಿಯನ್ನು ಮುಗಿಸಿ ಪೊಲೀಸ್ ಇಲಾಖೆಯನ್ನು ಸೇರಬೇಕೆಂದುಕೊAಡಿದ್ದೆ. ಆದರೆ, ನನ್ನ ಎತ್ತರ ಕಡಿಮೆಯಿದೆ. ಸ್ನೇಹಿತರು ಬಿ.ಇಡಿ ಮಾಡಲು ಸಲಹೆ ನೀಡುತ್ತಿದ್ದಾರೆ. ದಾರಿ ಕಾಣದೆ ಕಂಗಾಲಾಗಿದ್ದೇನೆ. ಪರಿಹಾರ ತಿಳಿಸಿ.

ನಮ್ಮ ಬದುಕಿಗೊಂದು ಕೈಪಿಡಿ ಇಲ್ಲ; ಯಶಸ್ಸಿಗೆ ಇಂತದ್ದೇ ವೃತ್ತಿ ಮಾಡಬೇಕೆನ್ನುವ ನಿಯಮವಿಲ್ಲ. ಆದರೆ, ವೃತ್ತಿಯನ್ನು ನಮ್ಮ ಅಭಿರುಚಿಯಂತೆ, ಆಸಕ್ತಿಯಂತೆ ಆರಿಸಿ, ಪರಿಶ್ರಮದಿಂದ  ಅನುಸರಿಸಿದರೆ, ಬದುಕಿನಲ್ಲಿ ಯಶಸ್ಸು, ಸಂತೃಪ್ತಿ ಸಿಗುವುದರಲ್ಲಿ ಸಂದೇಹವಿಲ್ಲ.  ನೀವು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

17. ಸರ್, ನಾನು ಎಂಕಾA ಮುಗಿಸುತ್ತಿದ್ದು, ಪೊಲೀಸ್ ಪೇದೆ ಹುದ್ದೆಯ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ಒಂದು ವೇಳೆ, ಈ ಕೆಲಸ ಸಿಗದಿದ್ದರೆ ಮುಂದೇನು ಮಾಡಬೇಕು ತಿಳಿಯುತ್ತಿಲ್ಲ. ಏನಾದರೂ ಪರಿಹಾರ ತಿಳಿಸಿ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವಾಗ ಸೂಕ್ತವಾದ ಕಾರ್ಯತಂತ್ರವಿರಬೇಕು; ಸಕಾರಾತ್ಮಕ ಧೋರಣೆಯಿರಬೇಕು; ಗೆಲ್ಲುವ ವಿಶ್ವಾಸವಿರಬೇಕು. ಆದ್ದರಿಂದ, ಈಗಲೇ ವೈಫಲ್ಯದ ಬಗ್ಗೆ ಯೋಚಿಸದೆ ಪರೀಕ್ಷೆಯ ಮಾದರಿ, ಪಠ್ಯಕ್ರಮವನ್ನು ಅರಿತು, ಏಕಾಗ್ರತೆಯಿಂದಲೂ, ಪರಿಶ್ರಮದಿಂದಲೂ ತಯಾರಾಗಿ. ಹಾಗೂ, ಪದವೀಧರರಾದ ನಿಮಗೆ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಅರ್ಹತೆಯೂ ಇರುತ್ತದೆ. 

18. ನಾನು ಅಂತಿಮ ವರ್ಷದ ಬಿ.ಎಸ್ಸಿ ಮಾಡುತ್ತಿದ್ದು, ಮುಂದೆ ಎಂಎಸ್ಸಿ ಮಾಡುವ ಆಸೆ ಇದೆ. ಇದರ ಬಗ್ಗೆ ಮತ್ತು ಎನ್‌ಇಟಿ ಮತ್ತು ಕೆಎಸ್‌ಇಟಿ ಬಗ್ಗೆ ತಿಳಿಸಿ.

ಬಿ.ಎಸ್ಸಿ ನಂತರ ನಿಮಗಿಷ್ಟವಿರುವ ವಿಷಯದಲ್ಲಿ ಎಂ.ಎಸ್ಸಿ ಮಾಡಬಹುದು. ಎಂ.ಎಸ್ಸಿ ಪದವಿಯಲ್ಲಿ ಕನಿಷ್ಠ ಶೇ 55 (ಸಾಮನ್ಯ ವರ್ಗ) ಅಂಕಗಳನ್ನು ಗಳಿಸಿದರೆ ಎನ್‌ಇಟಿ/ಕೆಎಸ್‌ಇಟಿ ಪರೀಕ್ಷೆಯನ್ನು ಬರೆಯಬಹುದು. ಅಂತಿಮ ವರ್ಷದ ಎಂ.ಎಸ್ಸಿ ಮಾಡುವಾಗಲೂ ಈ ಪರೀಕ್ಷೆಗಳಲ್ಲಿ ಭಾಗವಹಿಸಬಹುದು. ಎನ್‌ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ,  ದೇಶದ ಯಾವುದೇ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು; ಕೆಎಸ್‌ಇಟಿ ಪರೀಕ್ಷೆಯ ಮೂಲಕ ರಾಜ್ಯದ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರಾಗಬಹುದು. ಈ ಎರಡೂ ಪರೀಕ್ಷೆಗಳ ಮಾದರಿ ಒಂದೇ ಇದ್ದು, ಪ್ರಶ್ನೆಪತ್ರಿಕೆ-1 ಸಾಮಾನ್ಯ ಜ್ಞಾನ, ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬAಧಿಸಿರುತ್ತದೆ; ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಅಳೆಯುÄವಂತಹದ್ದಾಗಿರುತ್ತದೆ. ಪ್ರಶ್ನೆಪತ್ರಿಕೆ-2ರಲ್ಲಿ ನಿಮ್ಮ ವಿಷಯ ಜ್ಞಾನದ ಕುರಿತಾದ ಪ್ರಶ್ನೆಗಳಿರುತ್ತದೆ. ಎನ್‌ಇಟಿ ಪರೀಕ್ಷೆ ವರ್ಷದಲ್ಲಿ ಎರಡು ಬಾರಿಯೂ, ಕೆಎಸ್‌ಇಟಿ ಪರೀಕ್ಷೆ ವರ್ಷದಲ್ಲಿ ಒಂದು ಬಾರಿ ಆಯೋಜಿಸಲಾಗುತ್ತದೆ.

ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. 

19. ;ನಾನು ಪಿಯುಸಿ ಮುಗಿಸಿದ್ದು ಫೊರೆನ್ಸಿಕ್ ಸೈನ್ಸ್ ಓದುವ ಆಸೆ ಇದೆ. ದಯವಿಟ್ಟು ಇದರ ಬಗ್ಗೆ ತಿಳಿಸಿ.

ಪಿಯುಸಿ ನಂತರ ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್ ಉತ್ತಮ ಆಯ್ಕೆ ಎನ್ನುವುದರಲ್ಲಿ ಸಂದೇಹವಿಲ್ಲ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ಉತ್ತಮ ಸಂವಹನ, ನಾಯಕತ್ವದ ವ್ಯಕ್ತಿತ್ವ, ನೈತಿಕ ಅರಿವು, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ, ಈ ವಿಷಯದ ಬಗ್ಗೆ ವಿಸ್ತöÈತವಾದ ಈ ಲೇಖನವನ್ನು ಗಮನಿಸಿ: https://www.prajavani.net/education-career/education/best-choice-in-graduate-courses-forensic-science-complete-information-here-2311659

Q20. ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಆದರೆ, ಇನ್ನೂ ಘಟಿಕೋತ್ಸವ ನಡೆದಿಲ್ಲ. ಮುಂದಿನ ಪರೀಕ್ಷೆಗಳಿಗೆ/ಹುದ್ದೆಗಳಿಗೆ ಪದವಿಯ ಆಧಾರದ ಮೇಲೆ ಅರ್ಜಿ ಸಲ್ಲಿಸಬಹುದೇ ಅಥವಾ ಅಂತಿಮ ಅಂಕಪಟ್ಟಿ ಬಂದ ಮೇಲೆ ಸಲ್ಲಿಸಬೇಕೆ?

ನೀವು ಯಾವ ಪರೀಕ್ಷೆ/ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿಲ್ಲ. ಸಾಮಾನ್ಯವಾಗಿ, ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ/ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತಾ ಪರೀಕ್ಷೆಗೆ ಹಾಜರಾದ/ಅಥವಾ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಹಾಗೂ, ತಾತ್ಕಾಲಿಕ ಪದವಿ ಪ್ರಮಾಣಪತ್ರವನ್ನು ಸಲ್ಲಿಸಿ, ಅಧಿಕೃತ ಪ್ರಮಾಣಪತ್ರವನ್ನು ಸಲ್ಲಿಸಲು ನಿರ್ಧಿಷ್ಟ ಅವಧಿಯ ಕಾಲಾವಕಾಶವಿರುತ್ತದೆ. ಮೇಲಾಗಿ, ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಗಾರ ( ನ್ಯಾಷನಲ್ ಅಕಾಡಿಮಿಕ್ ಡಿಪಾಸಿಟರಿ) ಮೂಲಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ವಿದ್ಯಾರ್ಥಿಗಳಿಗೂ, ಉದ್ಯೋಗದಾತರಿಗೂ ಲಭ್ಯ ಮಾಡುವ ವ್ಯವಸ್ಥೆಯಿದೆ. ನಿಮ್ಮ ಆಧಾರ್ ದಾಖಲೆಯ ಮೂಲಕ ದಿಜಿಲಾಕರ್ ಖಾತೆಯನ್ನು ತೆರೆಯಬಹುದು. ಹಾಗಾಗಿ, ಈ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ.

Q21. ನನ್ನ ಮಗ ಎಂಜಿನಿಯರಿAಗ್ ಮಾಡುತ್ತಿದ್ದು, ಒಂದು ವರ್ಷದ ನಂತರ ಕಾಲೇಜನ್ನು ಬದಲಾಯಿಸಬಹುದೇ? ದಯವಿಟ್ಟು ತಿಳಿಸಿ.

ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ವಿದ್ಯಾರ್ಥಿಗಳು ಒಂದು ವರ್ಷದ ನಂತರ ಕಾಲೇಜಿನ/ವಿಭಾಗದ ಬದಲಾವಣೆಗೆ ಅವಕಾಶವಿರುತ್ತದೆ. ಉದಾಹರಣೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿಯೂ (ವಿಟಿಯು) ಈ ಅವಕಾಶವಿದ್ದು ನಿಯಮಾವಳಿಗಳು, ಶುಲ್ಕಗಳು ಸರ್ಕಾರಿ/ಅನುದಾನಿತ/ಅನುದಾನರಹಿತ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅನ್ವಯಿಸುತ್ತದೆ. ಹಾಗಾಗಿ, ಸಂಬAಧಪಟ್ಟ ಕಾಲೇಜು/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ವಿಟಿಯು ವಿಶ್ವವಿದ್ಯಾಲಯದ ಸುತ್ತೋಲೆಯನ್ನು ಗಮನಿಸಿ: https://vtu.ac.in/wp-content/uploads/2022/11/NOTIFICATION-4170-11162022183808.pdf

Q22. ನಾನು ಡಿಎಮ್‌ ಎಲ್‌ ಟಿ ಮಾಡಿದ್ದು, ಶಿಕ್ಷಣ ಮುಂದುವರಿಸಬೇಕಾದರೆ ಪ್ಯಾರಾಮೆಡಿಕಲ್ ಕ್ಷೇತ್ರದ ಯಾವ ಕೋರ್ಸ್ ಆಯ್ಕೆ ಮಾಡಬಹುದು?

ಡಿಎಮ್‌ಎಲ್‌ಟಿ (ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಕೋರ್ಸ್ ನಂತರ ಇಮೇಜಿಂಗ್ ಟೆಕ್ನಾಲಜಿ, ಅನಸ್ಥೇಶಿಯ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಕೇರ್ ಮುಂತಾದ ಕ್ಷೇತ್ರಗಳ ಸರ್ಟಿಫಿಕೆಟ್/ಡಿಪ್ಲೊಮಾ/ಪದವಿ ಕೋರ್ಸ್ಗಳನ್ನು ಮಾಡಬಹುದು. ಪದವಿ ಕೋರ್ಸ್ಗಳಿಗೆ  ಲ್ಯಾಟರಲ್ ಪ್ರವೇಶದ ಸಾಧ್ಯತೆಯನ್ನು ಪರಿಶೀಲಿಸಿ.

Q23. ನಾನು ಬಿ. ಫಾರ್ಮಾ ಮುಗಿಸಿ ಎಂ. ಫಾರ್ಮಾ ಮಾಡಬೇಕೆಂದಿದ್ದೇನೆ. ಯಾವ ವಿಷಯಕ್ಕೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಹೆಚ್ಚಿನ ಬೇಡಿಕೆಯಿದೆ? ಹಾಗೂ, ಸೌದಿ ಅರೇಬಿಯ ದೇಶದಲ್ಲಿ ಯಾವ ವಿಷಯಕ್ಕೆ ಬೇಡಿಕೆಯಿದೆ?

ಎಂಫಾರ್ಮಾ ಕೋರ್ಸ್ ಅನ್ನು ಬಯೋಟೆಕ್ನಾಲಜಿ, ಫಾರ್ಮಾಸ್ಯೂಟಿಕಲ್ ಕೆಮಿಸ್ಟಿç, ಫಾರ್ಮಾಸ್ಯೂಟಿಕ್ಸ್, ಫಾರ್ಮಾಕಾಲಜಿ, ಫಾರ್ಮಾಸ್ಯೂಟಿಕಲ್ ಪ್ರಾಕ್ಟೀಸ್, ಫಾರ್ಮಾಸ್ಯೂಟಿಕಲ್ ಕ್ವಾಲಿಟಿ ಅಶ್ಯೂರೆನ್ಸ್, ರೆಗ್ಯುಲೇಟರಿ ಅಫೇರ್ಸ್ ಮುಂತಾದ ವಿಷಯಗಳಲ್ಲಿ ಮಾಡಬಹುದು. ಈ ಎಲ್ಲಾ ಕ್ಷೇತ್ರಗಳಿಗೂ ಬೇಡಿಕೆಯಿದೆ; ಹಾಗಾಗಿ, ಎಂಫಾರ್ಮಾ ಕೋರ್ಸ್ ನಂತರದ ನಿಮ್ಮ ವೃತ್ತಿಯೋಜನೆಯಂತೆ ನಿರ್ಧರಿಸಿ.

ನಮಗಿರುವ ಮಾಹಿತಿಯಂತೆ, ಸೌದಿ ಅರೇಬಿಯ ಸೇರಿದಂತೆ ಅನೇಕ ಮಧ್ಯಪ್ರಾಚ್ಯ ದೇಶಗಳಲ್ಲಿ ವೃತ್ತಿಯನ್ನು ಅರಸಲು ಪ್ರಾಯೋಗಿಕ ಅನುಭವದ ಜೊತೆಗೆ ಸ್ಥಳೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ವೃತ್ತಿಯೋಜನೆ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

Q24. ನನ್ನ ಮಗ ಎಂ. ಎಸ್ಸಿ ( ಗಣಿತ) ಓದುತ್ತಿದ್ದಾನೆ. ಇದಾದ ನಂತರ ಎಂಬಿಎ ಅಥವಾ ಡೇಟಾ ಅನಾಲಿಸಿಸ್ ಕಲಿಯಬೇಕೆಂದಿದ್ದಾನೆ. ಡೇಟಾ ಅನಾಲಿಸಿಸ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ.

ಸಂಸ್ಥೆಗಳ ಕಾರ್ಯಾಚರಣೆ, ಹಣಕಾಸು ಮಾರುಕಟ್ಟೆ, ಸರ್ಕಾರಿ ಇಲಾಖೆಗಳ ವ್ಯವಹಾರಗಳು, ಗ್ರಾಹಕರ ಆದ್ಯತೆಗಳು ಮತ್ತು ನಡವಳಿಕೆಗಳು, ಉದ್ಯೋಗಿಗಳ ಕಾರ್ಯಕ್ಷಮತೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಂಗ್ರಹವಾಗುವ ದತ್ತಾಂಶವನ್ನು, ಒಂದು ಚೌಕಟ್ಟಿನಲ್ಲಿ ಅರ್ಥೈಸಲು, ದತ್ತಾಂಶದ ವಿಶ್ಲೇಷಣೆ (ಡೇಟಾ ಅನಾಲಿಸಿಸ್) ಅತ್ಯವಶ್ಯಕವಾಗಿದೆ. ಹಾಗಾಗಿ, ದತ್ತಾಂಶ ವಿಶ್ಲೇಷಣೆ ಉದ್ಯೋಗ ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಕ್ಷೇತ್ರ. ಎಂ.ಎಸ್ಸಿ ನಂತರ ಪೂರ್ಣಾವಧಿ/ಅಲ್ಪಾವಧಿ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ ಮತ್ತು ನಿರ್ವಹಣೆ ಕುರಿತಾದ ಕೋರ್ಸ್ಗಳನ್ನು ಕ್ಯಾಂಪಸ್ ನೇರ ನೇಮಕಾತಿಯಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಮಾಡಬಹುದು. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ದತ್ತಾಂಶ ದೃಶ್ಯೀಕರಣ, ವಿಶ್ಲೇಷಣಾ ಕೌಶಲ, ವಿವರಗಳಿಗೆ ಗಮನ, ಸಂಖ್ಯಾಶಾಸ್ತçದ ತಜ್ಞತೆ, ಕ್ರಮಾವಳಿ, ಯೋಜನೆಯ ನಿರ್ವಹಣೆ ಮುಂತಾದ ವೃತ್ತಿಪರ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು.

Q25. ದಯವಿಟ್ಟು ಪಿಯುಸಿ ನಂತರದ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿ.

ಪಿಯುಸಿ ನಂತರ, ನಿಮ್ಮ ವಿಭಾಗದ ಪ್ರಕಾರ (ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ) ವೈವಿಧ್ಯಮಯ ಕೋರ್ಸ್ ಆಯ್ಕೆಗಳಿವೆ. ಮೊದಲು, ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಕೌಶಲಗಳನ್ನು ವಿಶ್ಲೇಷಿಸಿ, ವೃತ್ತಿಯ ಆಯ್ಕೆಯನ್ನು ಮಾಡಿ, ಅದರಂತೆ ಕೋರ್ಸ್ ಆಯ್ಕೆಯಿರಲಿ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=ChvTG9rg33A

Q26.      ನನಗೆ ಎಂಬಿಬಿಎಸ್ ಮಾಡುವ ಆಸೆ ಇದೆ. ಆದರೆ, ಅಷ್ಟೊಂದು ಹಣ ಕೊಟ್ಟು ಓದುವ ಶಕ್ತಿಯಿಲ್ಲ. ನಾನು ಏನು ಮಾಡಬಹುದು?

ಎಂಬಿಬಿಎಸ್ ಪ್ರವೇಶಕ್ಕೆ ಆಯೋಜಿಸುವ ನೀಟ್, ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆ. ಆದ್ದರಿಂದ, ನೀಟ್ ಪರೀಕ್ಷೆಯ ಮೂಲಕ ಸರ್ಕಾರಿ ಕೋಟಾದಲ್ಲಿ ಸೀಟ್ ಪಡೆಯುವುದೇ ನಿಮ್ಮ ಮೊದಲ ಗುರಿಯಾಗಿರಲಿ. ಕಳೆದ ವರ್ಷಗಳ ಕಟ್ ಆಫ್ ಮಾಹಿತಿ ಅಂತರ್ಜಾಲದಲ್ಲಿ ಸುಲಭವಾಗಿ ಲಭ್ಯವಿದೆ. ಈ ಮಾಹಿತಿಯನ್ನು ಆದರಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರಚಿಸಿ, ಏಕಾಗ್ರತೆ ಮತ್ತು ಪರಿಶ್ರಮದಿಂದ ಅನುಷ್ಠಾನಗೊಳಿಸಿ.

ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿದ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಹೆಚ್ಚಿನ ವಿವರಗಳಿಗಾಗಿ ಈ ಜಾಲತಾಣವನ್ನು ಗಮನಿಸಿ: https://scholarships.gov.in/

ಇದಲ್ಲದೆ, ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲಿ,್ಲ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಷಿ÷್ಮ ಜಾಲತಾಣವನ್ನು  ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

Q27.      ನನ್ನ ಮಗಳು ಕಳೆದ ವರ್ಷ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿAಗ್ ಕೋರ್ಸ್ಗೆ ಕೆಎಸ್‌ಐಟಿ ಕಾಲೇಜಿಗೆ ಸೇರಿದ್ದಳು. ವರ್ಷ, ಬಿಎಂಎಸ್ ಕಾಲೇಜಿಗೆ ವರ್ಗಾವಣೆ ಮಾಡಬೇಕಾದರೆ ಏನು ಮಾಡಬೇಕು?

ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ವಿದ್ಯಾರ್ಥಿಗಳು ಒಂದು ವರ್ಷದ ನಂತರ ಕಾಲೇಜಿನ/ವಿಭಾಗದ ಬದಲಾವಣೆಗೆ ಅವಕಾಶವಿರುತ್ತದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿಯೂ (ವಿಟಿಯು) ಈ ಅವಕಾಶವಿದ್ದು ನಿಯಮಾವಳಿಗಳು, ಶುಲ್ಕಗಳು ಅನುದಾನಿತ/ಅನುದಾನರಹಿತ ಕಾಲೇಜುಗಳಿಗೆ ಪ್ರತ್ಯೇಕವಾಗಿ ಅನ್ವಯಿಸುತ್ತದೆ. ಹಾಗಾಗಿ, ಕಾಲೇಜು/ವಿಶ್ವವಿದ್ಯಾಲಯವನ್ನು ಸಂಪರ್ಕಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಕಳೆದ ವರ್ಷದ ವಿಟಿಯು ವಿಶ್ವವಿದ್ಯಾಲಯದ ಸುತ್ತೋಲೆಯನ್ನು ಗಮನಿಸಿ:
https://vtu.ac.in/wp-content/uploads/2022/11/NOTIFICATION-4170-11162022183808.pdf

Q28.      ಬಿ.ಇಡಿ ಕೋರ್ಸ್ ದಾಖಲಾತಿಗೆ ವ್ಯಾಸಂಗ ಪ್ರಮಾಣಪತ್ರ ಮತ್ತು ಗ್ರಾಮೀಣ ಪ್ರಮಾಣಪತ್ರ ಕಡ್ಡಾಯವೇ?

ನೀವು ಯಾವ ಪ್ರವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುತ್ತೀರಿ ಎಂದು ತಿಳಿಸಿಲ್ಲ. ನಮಗಿರುವ ಮಾಹಿತಿಯಂತೆ, ಕರ್ನಾಟಕದ ಅಭ್ಯರ್ಥಿ ಎಂದು ಪರಿಗಣಿಸಲು ಕನಿಷ್ಠ 7 ವರ್ಷಗಳ ವ್ಯಾಸಂಗ ಪ್ರಮಾಣ ಪತ್ರಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಸಲ್ಲಿಸಬೇಕು. ಹಾಗೂ, ಗ್ರಾಮೀಣ ಮೀಸಲಾತಿ ಇಲ್ಲದಿರುವುದರಿಂದ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ, ಬಿ.ಇಡಿ ಕೋರ್ಸ್ಗೆ, ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಮತ್ತು ಹಂಚಿಕೆ ಕುರಿತ ಈ ಸುತ್ತೋಲೆಯನ್ನು ಗಮನಿಸಿ: https://www.schooleducation.kar.nic.in/cacellpdfs/Bed-2021-22/2_BEdnotification2021_22_Final.pdf