Q & A for Students – June 2022

Q1. ನಾನು ಪಿಯುಸಿ (ವಿಜ್ಞಾನ) ಮಾಡಿದ್ದೇನೆ. ಮುಂದೆ ಬಿಎಸ್‌ಸಿ (ಕೃಷಿ) ಮಾಡಬೇಕು ಎಂದುಕೊಂಡಿದ್ದೇನೆ. ಇದರ ಬಗ್ಗೆ ಮಾಹಿತಿ ನೀಡಿ. – ಪ್ರೀತಿ, ಹೊಸಪೇಟೆ.

ಬಿಎಸ್‌ಸಿ (ಕೃಷಿ), ಕೃಷಿ ಉತ್ಪನ್ನಗಳ ವ್ಯವಸಾಯ, ಮಾರಾಟ ಮತ್ತು ನಿರ್ವಹಣೆಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳನ್ನು ಕಲಿಸುವ ನಾಲ್ಕು ವರ್ಷದ ಕೋರ್ಸ್.

ನಮ್ಮ ದೇಶದಲ್ಲಿ ಬೆಳೆಗಳ ಹಾಳಾಗುವಿಕೆ, ಪ್ರವಾಹ, ಕೀಟಗಳು, ರೋಗಗಳು ಇತ್ಯಾದಿ ಕಾರಣಗಳಿಂದ ಪ್ರತಿ ವರ್ಷ ಸುಮಾರು ಶೇಕಡಾ 20 ಕ್ಕೂ ಹೆಚ್ಚು ಬೆಳೆ ನಾಶವಾಗುತ್ತದೆ. ಹಾಗಾಗಿ, ಕೃಷಿ ಸಂಬಂಧಿತ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಧಿಕ ಇಳುವರಿ, ಸಮಯದ ಉಳಿತಾಯ, ಉತ್ಪಾದನಾ ವೆಚ್ಚದ ಕಡಿತ, ಉತ್ಪನ್ನಗಳ ಸಂರಕ್ಷಣೆ, ಸಂಸ್ಕರಣೆ, ಸಾಗಣೆ ಮತ್ತು ಮಾರಾಟ ನಿರ್ವಹಣೆ ಕುರಿತ ಅತ್ಯಂತ ಉಪಯುಕ್ತ ಮಾಹಿತಿಯನ್ನು ಈ ಕೋರ್ಸ್ನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸ್ ಮಾಡಿರುವ ಪದವೀಧರರಿಗೆ ಹೆಚ್ಚಿನ ಬೇಡಿಕೆಯಿದೆ.

ಈ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಕೃಷಿ ಉದ್ದಿಮೆಗಳು, ಆಹಾರ ಸಂಬAಧಿತ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ರಸಗೊಬ್ಬರ ಮತ್ತು ಕೀಟನಾಶಕ ಸಂಸ್ಥೆಗಳು, ಕೃಷಿ ಯಂತ್ರೋಪಕರಣಗಳು, ಬ್ಯಾಂಕಿಂಗ್, ಸಂಶೋಧನಾ ಸಂಸ್ಥೆಗಳು, ಪ್ರಯೋಗಾಲಯಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

ಹಾಗೂ ನಿಮಗೆ ಅಭಿರುಚಿಯಿದ್ದಲ್ಲಿ, ಜ್ಞಾನ ಮತ್ತು ಕೌಶಲಗಳ ಸದುಪಯೋಗದಿಂದ ಸ್ವಂತ ಕೃಷಿ ಆರಂಭಿಸಿ, ಪ್ರಯೋಗಶೀಲ ರೈತರಾಗಿ, ನಾಡಿನ ಇನ್ನಿತರ ರೈತರಿಗೂ ಮಾದರಿಯಾಗಬಹುದು.

ಪ್ರಮುಖವಾಗಿ, ಈ ಕೋರ್ಸ್ ನಂತರದ ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಕನಸುಗಳ ಬಗ್ಗೆ ಸ್ಪಷ್ಟತೆಯಿರಬೇಕು. ಹಾಗಾಗಿ, ವೃತ್ತಿಯೋಜನೆ ಮಾಡುವ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q2. ನಾನು ಬಿಎಸ್‌ಸಿ ಮಾಡಿದ್ದು, ಮುಂದೆ ಎಂಎಸ್‌ಸಿ (ಭೂಗೋಳ) ಮಾಡಬೇಕೆಂದುಕೊಂಡಿದ್ದೀನಿ. ಈ ಕೊರ್ಸ್ ನಂತರದ ಅವಕಾಶಗಳ ಬಗ್ಗೆ ತಿಳಿಸಿ.

ಎಂಎಸ್‌ಸಿ (ಭೂಗೋಳ) ಕೋರ್ಸ್ ನಂತರ ಕಾರ್ಟೊಗ್ರಾಫರ್, ಪರಿಸರ ನಿರ್ವಾಹಕ, ಹವಾಮಾನ ಶಾಸ್ತçಜ್ಞ, ನಿಸರ್ಗ ಸಂರಕ್ಷಣಾ ಅಧಿಕಾರಿ, ಮಾಲಿನ್ಯ ವಿಶ್ಲೇಷಕ, ಜನಸಂಖ್ಯಾ ಶಾಸ್ತçಜ್ಞ, ಭೂಮಾಪಕ, ಭೂಗೋಳ ಅಧ್ಯಾಪಕ ಮುಂತಾದ ಹುದ್ದೆಗಳನ್ನು ಸಂಬಂಧಿತ ಕ್ಷೇತ್ರಗಳಲ್ಲಿ ಪಡೆದುಕೊಳ್ಳಬಹುದು. ಹಾಗೂ, ಯುಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉನ್ನತ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.

Q3. ನಾನು ಬಿಎ ಅಂತಿಮ ಪದವಿಯಲ್ಲಿ ಓದುತ್ತಿದ್ದೇನೆ. ಇದಾದ ನಂತರ, ಎಂಬಿಎ ಮಾಡಬಹುದೇ? ನಾನು, ಯಾವ ವಿಭಾಗದಲ್ಲಿ ಎಂಬಿಎ ಮಾಡಬಹುದು? ಇದರಿಂದ ನನಗೆ ಮುಂದೆ ತೊಂದರೆ ಆಗುವುದಿಲ್ಲವೇ?

ಒಂದು ಉದ್ಯಮದ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಎಲ್ಲಾ ಪ್ರಯತ್ನಗಳನ್ನು ಕೇಂದ್ರೀಕರಿಸಿ, ಯೋಜನೆಗಳನ್ನು ನಿಷ್ಠೆಯಿಂದ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ತಿಳುವಳಿಕೆಯನ್ನು, ಎಂಬಿಎ ಕೋರ್ಸಿನ ವಿಭಾಗಗಳಾದ ಮಾರುಕಟ್ಟೆಯ ನಿರ್ವಹಣೆ, ಹಣಕಾಸಿನ ಆಡಳಿತ, ಬಂಡವಾಳ ನಿರ್ವಹಣೆ, ಉತ್ಪಾದನೆ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ ಇತ್ಯಾದಿಗಳಲ್ಲಿ ನೀಡಲಾಗುತ್ತದೆ. ಹಾಗಾಗಿ, ನಿಮ್ಮ ಆಸಕ್ತಿಯ ಅನುಸಾರ ಒಂದು ಅಥವಾ ಎರಡು ವಿಭಾಗಗಳಲ್ಲಿ ( (ಡ್ಯುಯಲ್ ಸ್ಪೆಷಲೈಜೇಷನ್) ತಜ್ಞತೆಯನ್ನು ಪಡೆದುಕೊಳ್ಳಬಹುದು.

ಜಾಗತೀಕರಣದ ನಂತರ ಎಂಬಿಎ ಒಂದು ಜನಪ್ರಿಯ ಸ್ನಾತಕೋತ್ತರ ಕೋರ್ಸ್ ಮತ್ತು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ಕೋರ್ಸ್ ಸಹಾಯಕಾರಿ. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಎಂಬಿಎ ಕೋರ್ಸ್ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

Q4. ನಾನು 2016ರಲ್ಲಿ ಎಸ್‌ಎಸ್‌ಎಲ್‌ಸಿ ಕನ್ನಡ ಮಾಧ್ಯಮದಲ್ಲಿ ಮುಗಿಸಿ 2018ರಲ್ಲಿ ಪಿಯುಸಿ ಕಾಮರ್ಸ್ ಮಾಡಿದ್ದೇನೆ. 2021ರಲ್ಲಿ ಬಿಕಾಂ ಇಂಗ್ಲಿಷ್ ಮಾಧ್ಯಮದಲ್ಲಿ ಶೇಕಡಾ 80ರಷ್ಟು ಅಂಕಗಳನ್ನು ಪಡೆದು ಉತ್ತಿರ್ಣನಾಗಿದ್ದೇನೆ. ಇದೀಗ, ಯುಪಿಎಸ್‌ಸಿ ಪರೀಕ್ಷೆಗೆ ಓದಲು ಶುರುಮಾಡಿದ್ದೇನೆ. ಆದರೆ, ಯಾವ ಭಾಷೆಯಲ್ಲಿ ಬರೆಯಬೇಕು ಎಂದು ಗೊಂದಲ ಇದೆ. ದಯವಿಟ್ಟು ನಿಮ್ಮ ಸಲಹೆ ನೀಡಿ. – ಸತೀಶ್, ಕೋಲಾರ.

ಯುಪಿಎಸ್‌ಸಿ ಪರೀಕ್ಷೆಯನ್ನು ಯಾವ ಭಾಷೆಯಲ್ಲಿ ಬರೆಯಬೇಕೆನ್ನುವ ಪ್ರಶ್ನೆ ಮುಖ್ಯವಾದರೂ ಕಠಿಣವಾದ ಈ ಪರೀಕ್ಷೆಗೆ ಐಚ್ಛಿಕ ವಿಷಯಗಳ ಆಯ್ಕೆ ಮತ್ತು ಈ ವಿಷಯಗಳ ಕುರಿತ ವಿಸ್ತöÈತವಾದ ಅಧ್ಯಯನ, ಪರೀಕ್ಷೆಗೆ ಸೂಕ್ತವಾದ ಕಾಯತಂತ್ರ ಮತ್ತು ತಯಾರಿಗೆ ಹೆಚ್ಚಿನ ಗಮನವನ್ನು ನೀಡಬೇಕು. ಹಾಗೂ, ಯಾವ ಭಾಷೆಯಲ್ಲಿ ಹೆಚ್ಚಿನ ತಜ್ಞತೆಯಿದ್ದು, ವ್ಯಾಕರಣ ಶುದ್ಧ ಬರವಣಿಗೆ ಸಾಧ್ಯವೋ ಆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗಾಗಿ, ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಇಂಗ್ಲಿಷ್‌ನಲ್ಲಿ ಬರೆದು ಮುಖ್ಯ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಬಹುದೇ ಎಂದು ಪರಿಶೀಲಿಸಿ.

Q5. ನಾನು ವಿಜ್ಞಾನ ವಿದ್ಯಾರ್ಥಿಯಾಗಿದ್ದು ಏರೋನಾಟಿಕಲ್ ಎಂಜಿನಿಯರಿಂಗ್ ಮಾಡುವ ಆಸೆ ಇದೆ. ಅದಕ್ಕೆ ಕೆಸಿಇಟಿ ಬರೆದರೆ ಸಾಕಾ ಅಥವಾ ಬೇರೆ ಸಿಇಟಿ ಬರೆಯಬೇಕೇ? ಎಂಜಿನಿಯರಿಂಗ್ ಮುಗಿಯುವುದಕ್ಕೆ ಎಷ್ಟು ಹಣ ಬೇಕು? ಕರ್ನಾಟಕದಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ಗೆ ಯಾವ ಕಾಲೇಜು ಸೂಕ್ತ? – ಶಂಕರ್, ಬಾಗಲಕೋಟೆ.

ಕರ್ನಾಟಕದಲ್ಲಿರುವ ಅನೇಕ ಕಾಲೇಜುಗಳಲ್ಲಿ ಏರೋನಾಟಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಕೋರ್ಸ್ ಲಭ್ಯವಿದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ ಕೆಸಿಇಟಿ ಪರೀಕ್ಷೆ ಸಾಕಾಗುತ್ತದೆ. ಆದರೂ, ಐಐಟಿ ಸೇರಿದಂತೆ ಕೆಲವು ಪ್ರತಿಷ್ಠಿತ ಸಂಸ್ಥೆಗಳಿಗೆ ಸೇರಬೇಕಾದರೆ ಜೆಇಇ ಮುಂತಾದ ಪ್ರವೇಶ ಪರೀಕ್ಷೆಗಳನ್ನು ಬರೆಯಬೇಕು. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ ನೀವು ಯಾವ ಕಾಲೇಜು (ಸರ್ಕಾರಿ, ಖಾಸಗಿ) ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ. ಉತ್ತಮ ಕಾಲೇಜುಗಳ ಮಾಹಿತಿಗಾಗಿ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಮಾಧ್ಯಮ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ಹಾಗೂ, ಉತ್ತಮ ಕಾಲೇಜುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗಾಗಿ ಈ ವಿಡಿಯೊ ವೀಕ್ಷಿಸಿ:

Q6. ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಬಿಸಿಎ ಮಾಡಿ, ನಂತರ ಎಂಬಿಎ (ಇವೆಂಟ್ ಮ್ಯಾನೇಜ್‌ಮೆಂಟ್) ಮಾಡಬೇಕೆಂಬ ಅಭಿಲಾಷೆ ಇದೆ. ಆದರೆ, ನನ್ನ ಪೋಷಕರು ಬಿಎಸ್‌ಸಿ (ಕೃಷಿ) ಮಾಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಮಾನಸಿಕವಾಗಿ ತುಂಬಾ ಹಿಂಸೆಯಾಗುತ್ತಿದೆ. ನಾನು ಓದಬೇಕೆಂದಿರುವ ಈ ಕೋರ್ಸುಗಳು, ನನ್ನ ಗುರಿ ಸಮಂಜಸವಾಗಿದೆಯೇ, ದಯವಿಟ್ಟು ತಿಳಿಸಿ. – ಸುಜನ್, ಹೊನ್ನಾಳಿ.

ಬಿಸಿಎ, ಎಂಬಿಎ ಕೋರ್ಸ್ಗಳ ನಂತರದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಕನಸುಗಳ ಬಗ್ಗೆ ನಿಮಗೆ ಸ್ಪಷ್ಟತೆಯಿರಬೇಕು. ನೀವು ವೃತ್ತಿಯಲ್ಲೂ, ವೈಯಕ್ತಿಕ ಜೀವನದಲ್ಲೂ ಬೆಳೆದು ಸಂತೃಪ್ತಿಯನ್ನು ಪಡೆಯಬೇಕಾದರೆ, ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನೇ ಅರಸಬೇಕು. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ, ವೃತ್ತಿಯ ಆಯ್ಕೆಗೆ ಪೂರಕವಾಗುವ ಸಾಮರ್ಥ್ಯ ಮತ್ತು ಸನ್ನದ್ದತೆಯನ್ನು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿ, ಅವರ ಆತಂಕವನ್ನು ಹೋಗಲಾಡಿಸಿ. ಏಕೆಂದರೆ, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನೂ, ಕುಟುಂಬದ ಅಗತ್ಯ ಮತ್ತು ಸವಾಲುಗಳನ್ನೂ ಪರಿಗಣಿಸಿ, 

ಒಂದು ಮುಕ್ತ ವಾತಾವರಣದಲ್ಲಿ ಪರಸ್ಪರ ಚರ್ಚಿಸಿ, ವೃತ್ತಿಯ ಆಯ್ಕೆ ಮತ್ತು ಯೋಜನೆಯನ್ನು ಮಾಡಿ. ಅದರಂತೆ ಕೋರ್ಸ್ ಆಯ್ಕೆಯನ್ನು ಮಾಡಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ.

ವೃತ್ತಿ ಯೋಜನೆಯನ್ನು ಮಾಡುವುದರ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q7. ಸರ್, ನಾನು ಬಿಕಾಂ ಮೊದಲನೇ ವರ್ಷದಲ್ಲಿ ಓದುತ್ತಾ ಇದ್ದೇನೆ. ಪಿಯುಸಿ ವಿದ್ಯಾರ್ಹತೆ ಮೇಲೆ ಉದ್ಯೋಗಕ್ಕೆ ಪ್ರಯತ್ನಿಸಿ, ಉದ್ಯೋಗ ಸಿಕ್ಕಿದ ಮೇಲೆ ಎರಡನೇ ವರ್ಷದ ಪದವಿಯನ್ನು ದೂರಶಿಕ್ಷಣದ ಮೂಲಕ ಮುಂದುವರಿಸಲು ಅವಕಾಶವಿದೆಯೇ ಎಂದು ತಿಳಿಸಿ. – ಸವಿತಾ, ಚಿಕ್ಕಮಗಳೂರು.

ನಮಗಿರುವ ಮಾಹಿತಿಯಂತೆ ಈ ಬದಲಾವಣೆ ಸಾಧ್ಯವಿಲ್ಲ. ಆದರೂ, ನೀವು ಬಿಕಾಂ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣವೂ ಇದ್ದಲ್ಲಿ, ಬದಲಾವಣೆಯ ಸಾಧ್ಯತೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಡನೆ ವಿಚಾರಿಸಿ.

Q8. ಸರ್, ನಾನು ಈ ವರ್ಷದ ಎನ್‌ಇಇಟಿ (ನೀಟ್) ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ, ಒಬಿಸಿ ವರ್ಗದ ಅಡಿಯಲ್ಲಿ ಎಂಬಿಬಿಎಸ್ ಸೀಟ್ ಪಡೆಯಲು ಯಾವ ರ‍್ಯಾಂಕ್ ಮತ್ತು ಅಂಕಗಳನ್ನು ಪಡೆಯಬೇಕು ಎಂದು ತಿಳಿಸಿ.

ಎನ್‌ಇಇಟಿ (ನೀಟ್)-2022 ರ ಪರೀಕ್ಷೆಯಲ್ಲಿ ನಿರೀಕ್ಷಿಸುವ ರ‍್ಯಾಂಕ್ ಮತ್ತು ಅಂಕಗಳ ಆಧಾರದ ಮೇಲೆ  ಒಬಿಸಿ ಮೀಸಲಾತಿಯಲ್ಲಿ ಯಾವ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಸಿಗಬಹುದುದೆಂದು ಈಗಲೇ ನಿಖರವಾಗಿ ಅಂದಾಜು ಮಾಡುವುದು ಸಾಧ್ಯವಿಲ್ಲ. ಏಕೆಂದರೆ, ಪ್ರತಿ ವರ್ಷ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳ ಸಂಖ್ಯೆ, ಪರೀಕ್ಷೆಯ ಕಠಿಣತೆ ಮತ್ತು ಫಲಿತಾಂಶ, ನೂತನ ಕಾಲೇಜುಗಳು ಮತ್ತು ಹೆಚ್ಚುವರಿ ಸೀಟುಗಳು, ಒಟ್ಟಾರೆ ಲಭ್ಯವಿರುವ ಸೀಟುಗಳು, ಸೀಟ್ ಹಂಚಿಕೆಯನ್ನು ನಿರ್ಧರಿಸುತ್ತವೆ. ಹಾಗಾಗಿ, ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಹಿಂದಿನ ವರ್ಷಗಳ ರ‍್ಯಾಂಕ್ ಮತ್ತು ಅಂಕಗಳ ಆಧಾರದ ಮೇಲೆ, ನಾನಾ ಕಾಲೇಜುಗಳಲ್ಲಿ ಸೀಟ್ ಲಭಿಸಿದ ಮಾಹಿತಿಯನ್ನು ಪರಿಶೀಲಿಸಿ, ನಿಮ್ಮ ಗುರಿ ಮತ್ತು ಕಾರ್ಯತಂತ್ರವನ್ನು ನಿರ್ಧರಿಸುವುದು ಸೂಕ್ತ. ನಮ್ಮ ಅಭಿಪ್ರಾಯದಂತೆ, ಕನಿಷ್ಠ 550 (ಗರಿಷ್ಠ 720) ಅಂಕಗಳನ್ನು ಗಳಿಸಿದಲ್ಲಿ, ಸರ್ಕಾರಿ ಸೀಟ್ ಸಿಗುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://www.collegedekho.com/articles/neet-cutoff-karnataka-aiq-state-quota-seats/

Q9. ನಾನು, ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಓದಿದ್ದೇನೆ. ನನಗೆ, ಆರನೇ ಸೆಮಿಸ್ಟರ್ ಅಂಕಪಟ್ಟಿ ಮತ್ತು ಪದವಿಯ ಸರ್ಟಿಫಿಕೆಟ್ ಬಂದಿಲ್ಲ. ಈ ಸಮಸ್ಯೆ ಪರಿಹರಿಸಲು, ನಿಮ್ಮ ಅಮೂಲ್ಯವಾದ ಸಲಹೆಯನ್ನು ಬಯಸಿದ್ದೇನೆ. – ಬೆಂಗಳೂರು.

ಬೆAಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟಿನ ರಾಷ್ಟಿçÃಯ ಶೈಕ್ಷಣಿಕ ಕಣಜದ (ಎನ್‌ಎಡಿ) ಮೂಲಕ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆಯಿದೆ. ಈ ಸಾಧ್ಯತೆಯನ್ನು ಪರಿಶೀಲಿಸಿ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://eng.bangaloreuniversity.ac.in/nad/

ನಿಮ್ಮ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ವಿಶ್ವವಿದ್ಯಾಲಯದ ರಿಜಿಸ್ಟಾçರ್‌ರನ್ನು ಸಂಪರ್ಕಿಸಿ.

Q10. ನನಗೆ ಈಗ 23 ವರ್ಷ ತುಂಬಿದೆ. ಚಿಕ್ಕಂದಿನಿಂದಲೂ ಕ್ರಿಕೆಟ್ ಎಂದರೆ ಹುಚ್ಚು. ನಾನು ಈಗ ಕ್ರಿಕೆಟ್ ಅಕಾಡೆಮಿಗೆ ಸೇರಿದರೆ ಜೀವನ ಇದೆಯೇ? ದಯವಿಟ್ಟು ತಿಳಿಸಿ.

ಕ್ರಿಕೆಟ್ ಆಟದಲ್ಲಿ ನಿಮಗಿರುವ ಆಸಕ್ತಿ ಶ್ಲಾಘನೀಯ. ಕ್ರಿಕೆಟ್ ಕ್ಷೇತ್ರದಲ್ಲಿ, ಈವರೆಗಿನ ನಿಮ್ಮ ಸಾಧನೆಯ ಕುರಿತು ನೀವು ಮಾಹಿತಿಯನ್ನು ನೀಡಿಲ್ಲವಾದ್ದರಿಂದ ನಿಷ್ಪಕ್ಷಪಾತವಾಗಿ ವಿಶ್ಲೇಷಿಸಿ, ಮಾರ್ಗದರ್ಶನ ನೀಡುವುದು ಅಸಾಧ್ಯ.

ಇದೊಂದು, ಅತಿ ಹೆಚ್ಚು ಪೈಪೋಟಿಯಿರುವ ಕ್ಷೇತ್ರ; ಹಾಗಾಗಿ, ಸಾಧನೆ ಇಲ್ಲಿ ಸುಲಭವಲ್ಲ. ಈ ಹವ್ಯಾಸವನ್ನು, ವೃತ್ತಿಯನ್ನಾಗಿ ಪರಿವರ್ತಿಸುವ ಶಕ್ತಿ, ನೈಪುಣ್ಯತೆ ಮತ್ತು ಪ್ರತಿಭೆ ನಿಮ್ಮಲ್ಲಿದೆಯೇ? ಇದು ಜೀವನೋಪಾಯದ ವಿಚಾರ; ನೀವು ಈ ವೃತ್ತಿಯನ್ನೇ ಅವಲಂಬಿಸಿ, ಜೀವನದಲ್ಲಿ ಏಳಿಗೆಯನ್ನು ಸಾಧಿಸಬಲ್ಲಿರಾ? ಬದುಕಿನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿಭಾಯಿಸಬಲ್ಲಿರಾ? ಈ ಮೂಲಭೂತ ಪ್ರಶ್ನೆಗಳಿಗೆ, ನಿಮ್ಮ ಪೋಷಕರೊಡನೆ ಚರ್ಚಿಸಿ, ಉತ್ತರವನ್ನು ಕಂಡುಕೊಳ್ಳಿ.

ನೀವು ಗಮನಿಸಬೇಕಾದ ವಿಚಾರವೇನೆಂದರೆ, ಇಂತಹ ಅಸಂಪ್ರದಾಯಿಕ ವೃತ್ತಿಗಳಲ್ಲಿ ಮೊದಲ ಹಲವಾರು ವರ್ಷಗಳು ಅತ್ಯಂತ ಕಠಿಣವಾಗಿದ್ದು ನಿಮ್ಮ ನೆಲೆಯನ್ನು ಕಂಡುಕೊಳ್ಳಲು ಕಷ್ಟಗಳನ್ನೂ, ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಆದ್ದರಿಂದ, ನಿಮ್ಮಲ್ಲಿ ಅಸಾಧಾರಣವಾದ ಪ್ರತಿಭೆಯಿದ್ದು, ಕುಟುಂಬದ ಬೆಂಬಲ ಸಂಪೂರ್ಣವಾಗಿದ್ದರೆ, ವೃತ್ತಿಪರ ಕ್ರಿಕೆಟ್ ಆಟಗಾರರಾಗಲು ಪ್ರಯತ್ನಿಸಬಹುದು. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ, ನಮ್ಮನ್ನು ಸಂಪರ್ಕಿಸಿ.

Q11. ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಬಿಎಸ್‌ಸಿ ಮುಗಿಸಿ, ಕೆಎಎಸ್ ಪರೀಕ್ಷೆ ಬರೆದು ತಹಶೀಲ್ದಾರ್ ಆಗಬೇಕು ಎನ್ನುವುದು ನನ್ನ ಆಸೆ. ಆದರೆ, ನನ್ನ ಪೋಷಕರು ಎಂಜಿನಿಯರಿಂಗ್ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ನಾನು ಮಾನಸಿಕ ಹಿಂಸೆಗೆ ಒಳಪಟ್ಟಿದ್ದೀನಿ. ಇದರಲ್ಲಿ, ಯಾವುದು ಮಾಡಿದರೆ ನನ್ನ ಆಸೆ ಈಡೇರಬಹುದು? – ದೀಪಾ ಹಕ್ಕೀ, ಐನಾಪುರ್.

ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ಆದ್ದರಿಂದಲೇ, ಪಿಯುಸಿ ನಂತರ ಮುಂದೇನು ಅನ್ನೋ ನಿರ್ಣಾಯಕ ಹಂತದ ಈ ಪ್ರಶ್ನೆಯ ಕುರಿತು ಎಲ್ಲಾ ವಿಧ್ಯಾರ್ಥಿಗಳಿಗೂ ಪೋಷಕರಿಗೂ ನಿರಂತರವಾಗಿ ಆಗುವ ಚರ್ಚೆ, ವಾದ ಸರ್ವೇಸಾಮಾನ್ಯ. ಆದರೆ, ಈ ಚರ್ಚೆಯನ್ನು ಮಾನಸಿಕ ಹಿಂಸೆಯೆAದುಕೊಳ್ಳದೆ, ಪೋಷಕರನ್ನು ನಿಮ್ಮ ಒಳಿತನ್ನೇ ಬಯಸುವ ಸ್ನೇಹಿತರೆಂದು ಭಾವಿಸಿ.

ಕೆಎಎಸ್ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಮುಖ್ಯವಾಗಿ ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನೂ, ಕುಟುಂಬದ ಅಗತ್ಯ ಮತ್ತು ಸವಾಲುಗಳನ್ನೂ ಪರಿಗಣಿಸಿ, ಒಂದು ಮುಕ್ತ ವಾತಾವರಣದಲ್ಲಿ ಪರಸ್ಪರ ಚರ್ಚಿಸಿ, ವೃತ್ತಿ ಯೋಜನೆಯನ್ನು ಮಾಡಿ. ಅದರಂತೆ ಕೋರ್ಸ್ ಆಯ್ಕೆಯನ್ನು ಮಾಡಿ, ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ವೃತ್ತಿ ಯೋಜನೆಯನ್ನು ಮಾಡುವುದರ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q12. ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಬಿಎಸ್‌ಸಿ (ಅರಣ್ಯ) ಮಾಡಬೇಕು ಎಂಬ ಅಭಿಲಾಷೆ ಇದೆ. ಆದರೆ, ಕೆಲವರು, ಇದರಲ್ಲಿ ಭವಿಷ್ಯವಿಲ್ಲ ಎಂದು ಹೇಳುತಿದ್ದಾರೆ. ಬಿಎಸ್‌ಸಿ (ಅರಣ್ಯ) ಮಾಡಿದ ನಂತರ ಸಿಗಬಹುದಾದ ಅರಣ್ಯ ಇಲಾಖೆಯ ಹುದ್ದೆಗಳ ಬಗ್ಗೆ ತಿಳಿಸಿ. – ಚಿನ್ಮಯ್, ಮಂಡ್ಯ.

ನಿಮ್ಮಲ್ಲಿರುವ ಸ್ವಾಭಾವಿಕ ಪ್ರತಿಭೆ, ಆಸಕ್ತಿಯಂತೆ ವೃತ್ತಿಯನ್ನು ಆಯ್ಕೆಮಾಡಿಕೊಂಡರೆ, ವೃತ್ತಿಯಲ್ಲಿ ಯಶಸ್ಸನ್ನು ಗಳಿಸುವುದು ಸಾಧ್ಯ. ಪದವಿಯ ನಂತರ, ನೀವು ಆರ್‌ಎಫ್‌ಒ ಹುದ್ದೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ಪಡೆದುಕೊಳ್ಳಬಹುದು. ಆರ್‌ಎಫ್‌ಒ ಹುದ್ದೆಗೆ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 50 ಅಂಕ ಗಳಿಸಿರಬೇಕು. ಕರ್ನಾಟಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದಾದ ನಂತರ ದೇಹದಾಢ್ರ‍್ಯತೆ, ವೈದ್ಯಕೀಯ ಮತ್ತು ದೈಹಿಕ ತಾಳ್ವಿಕೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಈ ಎಲ್ಲಾ ಪರೀಕ್ಷೆಗಳ ಆಧಾರದ ಮೇಲೆ ನೇಮಕಾತಿಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://kfdrecruitment.in/

Q13. ನಾನು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದೇನೆ. ಪಿಯುಸಿ ನಂತರ, ಜೆಇಇ ಮೇನ್ಸ್ ಮತ್ತು ಅಡ್ವಾಂಸ್ಡ್ ಮಾಡಿದ ಬಳಿಕ, ದೇಶದ ಯಾವುದಾದರೂ ಪ್ರತಿಷ್ಟಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಟೆಕ್ ಮುಗಿಸಬೇಕೆಂಬ ಆಸೆ ಹೊಂದಿದ್ದೇನೆ. ಆದರೆ ಮನೆಯಲ್ಲಿನ ಪರಿಸ್ಥಿತಿ ಗಮನಿಸಿದರೆ, ಓದು ಮುಗಿದ ಬಳಿಕ ಯಾವ ಕೆಲಸ ಸಿಗಬಹುದು? ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕ್ಯಾಂಪಸ್ ನೇಮಕಾತಿ ಇರುತ್ತದೆಯೇ?

ಅಭ್ಯರ್ಥಿಗಳಿಗೆ ಸರಿಯಾದ ಉದ್ಯೋಗ ಸಿಗುವುದು ಎಷ್ಟು ಕಷ್ಟವೋ, ಉದ್ಯೋಗದಾತರಿಗೆ ಕೌಶಲಯುಕ್ತ ಅಭ್ಯರ್ಥಿಗಳು ಸಿಗುವುದೂ ಸಹ ಅಷ್ಟೇ ಕಷ್ಟ! ಆದ್ದರಿಂದ, ವೃತ್ತಿಜೀವನದಲ್ಲಿ ಯಶಸ್ಸಿನ ಅನ್ವೇಷಣೆಯಲ್ಲಿರುವ ಅಭ್ಯರ್ಥಿಗಳು, ಜ್ಞಾನಾರ್ಜನೆಯ ಜೊತೆಗೆ ತಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ವೃತ್ತಿ ಸಂಬಂಧಿತ ಕೌಶಲಗಳನ್ನು, ತಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡರೆ ಕ್ಯಾಂಪಸ್ ನೇಮಕಾತಿ ಸುಲಭವಾಗುತ್ತದೆ.

ಸಾಮಾನ್ಯವಾಗಿ, ಎಲ್ಲಾ ಪ್ರತಿಷ್ಟಿತ ಕಾಲೇಜುಗಳಲ್ಲಿ ಕ್ಯಾಂಪಸ್ ನೇಮಕಾತಿ ಇರುತ್ತದೆ. ಹಾಗೂ, ನೀವು ಬರೆಯುತ್ತಿರುವ ಪ್ರವೇಶ ಪರೀಕ್ಷೆಗಳ ನಂತರ, ಕ್ಯಾಂಪಸ್ ನೇಮಕಾತಿ ಮತ್ತು ಸಂಪನ್ಮೂಲಗಳನ್ನು ಪರಿಗಣಿಸಿ, ಕಾಲೇಜನ್ನು ಆಯ್ಕೆಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:

Q14. ದ್ವಿತೀಯ ಪಿಯುಸಿ (ವಿಜ್ಞಾನ) ಯಲ್ಲಿ ಶೇ 77.16 ರಷ್ಟು ಅಂಕ ಬಂದಿದೆ. ನಾನು ಮುಂದೆ ಪದವಿಯಲ್ಲಿ ಪತ್ರಿಕೋದ್ಯಮ ಓದುವ ಆಸಕ್ತಿ ಹೊಂದಿದ್ದೇನೆ. ಆದರೆ, ಕೆಲವರು ಈ ಕ್ಷೇತ್ರದಲ್ಲಿ ಭವಿಷ್ಯವಿಲ್ಲ; ಈ ಪದವಿ ಕೇವಲ ಕಲಾ ವಿಭಾಗದಲ್ಲಿ ಸಾಮಾನ್ಯವಾಗಿ ತೇರ್ಗಡೆ ಹೊಂದಿದವರಿಗೆ ಮಾತ್ರ ಎನ್ನುತ್ತಿದ್ದಾರೆ. ಹಾಗಾಗಿ ಪತ್ರಿಕೋದ್ಯಮ ಕ್ಷೇತ್ರದ ಬಗ್ಗೆ ನನ್ನ ಅನುಮಾನಗಳನ್ನು ದಯವಿಟ್ಟು ಬಗೆಹರಿಸಿ ಮತ್ತು ಈ ವಿಭಾಗದಲ್ಲಿ ಮುಂದೆ ಸಿಗಬಹುದಾದ ಆಯ್ಕೆಗಳ ಬಗ್ಗೆ ತಿಳಿಸಿ. – ಎ.ಬಿ. ಪ್ರತಿಭಾ ಕುಮಾರಿ, ಮುದ್ದೇಬಿಹಾಳ, ವಿಜಯಪುರ.

ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಪಿಯುಸಿ ನಂತರ ಜರ್ನಲಿಸಮ್ ಮತ್ತು ಮಾಸ್ ಕಮ್ಯೂನಿಕೇಷನ್ ಪದವಿಯನ್ನು ಮಾಡುವುದರ ಜೊತೆಗೆ ವೃತ್ತಿ ಸಂಬಂಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನ ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.

ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್‌ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್‌ಕಾಸ್ಟ್ ಇತ್ಯಾದಿ ವಲಯಗಳಲ್ಲಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ಆಯ್ಕೆಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ತಜ್ಞತೆಗಾಗಿ, ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಕೋರ್ಸ್ ಮಾಡಬಹುದು.

ಕಳೆದೆರಡು ವರ್ಷಗಳಲ್ಲಿ, ಕೋವಿಡ್ ಪಿಡುಗಿನ ಕಾರಣದಿಂದ, ಸ್ವಲ್ಪ ಮಟ್ಟಿಗಿನ ಹಿನ್ನಡೆಯನ್ನು ಕಂಡಿದ್ದ ಮಾಧ್ಯಮ ಕ್ಷೇತ್ರ, ಈಗ ಮತ್ತೆ ಪ್ರಗತಿಯ ಹಾದಿಯಲ್ಲಿದೆ. ಹಾಗಾಗಿ, ನಿಮಗೆ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇದ್ದಲ್ಲಿ, ಈ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Q15. ನಾನು ಬಿಎಸ್‌ಸಿ ಮುಗಿಸಿದ್ದೀನಿ. ಮುಂದೆ ಎಂಬಿಎ ಮಾಡಬೇಕು ಅಂದುಕೊAಡಿದ್ದೇನೆ. ಎಂಬಿಎ ಮಾಡಲು ಯಾವ ಕಾಲೇಜು ಸೂಕ್ತ? ಜೊತೆಗೆ ಇದಕ್ಕಾಗಿ ಯಾವ ಪ್ರವೇಶ ಪರೀಕ್ಷೆ ಬರೆಯಬೇಕು? ಎಂಬಿಎ ಬಗ್ಗೆ ಮಾಹಿತಿ ನೀಡಿ.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ. ನಿಮ್ಮ ಆಸಕ್ತಿ, ಅಭಿರುಚಿಗೆ ಅನುಗುಣವಾಗಿ ಎಂಬಿಎ ಕೋರ್ಸ್ ಅನ್ನು ಮಾರುಕಟ್ಟೆಯ ನಿರ್ವಹಣೆ, ಹಣಕಾಸು, ಮಾನವ ಸಂಪನ್ಮೂಲದ ನಿರ್ವಹಣೆ, ಉತ್ಪಾದನೆ, ಲಾಜಿಸ್ಟಿಕ್ಸ್ ಇತ್ಯಾದಿ ವರ್ಗೀಕರಣಗಳಲ್ಲಿ ಮಾಡಬಹುದು.

ನಮ್ಮ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಯಿಟಿ, ಮ್ಯಾಟ್ ಇತ್ಯಾದಿ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಕ್ಯಾಂಪಸ್ ನೇಮಕಾತಿ ಮತ್ತು ಸಂಪನ್ಮೂಲಗಳನ್ನು ಪರಿಗಣಿಸಿ ಉತ್ತಮ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು. ಉತ್ತಮ ಕಾಲೇಜುಗಳ ಆಯ್ಕೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/c/EducationalExpertManagementCareerConsultant

16. ನಾನು ಅಂತಿಮ ವರ್ಷದ ಎಂಎಸ್‌ಸಿ (ಗಣಿತ) ಓದುತ್ತಿದ್ದೇನೆ. ನನಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅನ್ನೋ ಆಸೆ. ಕೆಲವರು, ನಿನಗೆ ಶಿಕ್ಷಕಿ ಹೊರತು ಬೇರೆ ಯಾವ ಕೆಲಸ ಸಿಗುವುದಿಲ್ಲ ಎಂದು ಹೇಳುತ್ತಾರೆ. ಈ ಪದವಿ ನಂತರ ಸಿಗಬಹುದಾದ ಹುದ್ದೆಗಳ ಬಗ್ಗೆ ತಿಳಿಸಿ. ನಾನು ಬೇರೆ ಕೋರ್ಸ್ ಮಾಡಬೇಕೇ? – ಕವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು.

ಹಲವಾರು ಅಮೂಲ್ಯವಾದ ಐಟಿ ಕ್ಷೇತ್ರದ ವೃತ್ತಿಪರ ಕೌಶಲಗಳಾದ ವಿಶ್ಲೇಷಾತ್ಮಕ ಕೌಶಲ, ಸಂಖ್ಯಾಶಾಸ್ತç, ಕ್ರಮಾವಳಿ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ ಇತ್ಯಾದಿಗಳು ಎಂಎಸ್‌ಸಿ (ಗಣಿತ) ಕೋರ್ಸ್ ಮಾಡುವಾಗ ನಿಮ್ಮಲ್ಲಿ ಅಭಿವೃದ್ಧಿಯಾಗುತ್ತದೆ. ಹಾಗಾಗಿ, ಐಟಿ ಕ್ಷೇತ್ರದ ಸಾಫ್ಟ್ವೇರ್ ಡೆವಲಪರ್, ಡೇಟಾ ಸೈಂಟಿಸ್ಟ್, ಡೇಟಾ ಅನಲಿಸ್ಟ್, ಆಪರೇಷನ್ಸ್ ರಿಸರ್ಚ್ ಅನಲಿಸ್ಟ್ ಮುಂತಾದ ಹುದ್ದೆಗಳನ್ನು ಎಂಎಸ್‌ಸಿ ನಂತರ ಪಡೆದುಕೊಳ್ಳಬಹುದು. ಅಗತ್ಯವಿದ್ದರೆ, ಈ ವಿಷಯಗಳಲ್ಲಿ ಅಲ್ಪಾವಧಿ ಡಿಪ್ಲೊಮಾ/ ಸರ್ಟಿಫಿಕೆಟ್ ಕೋರ್ಸ್ ಮಾಡಬಹುದು.

Q17. ನಾನು ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇನೆ. ಮುಂದೆ ಯಾವ ಪದವಿ ಮಾಡಬೇಕೆಂದು ತಿಳಿಯುತ್ತಿಲ್ಲ. ಎಲ್‌ಎಲ್‌ಬಿ ಮತ್ತು ಇನ್ನಿತರ ಪದವಿಗಳ ಬಗ್ಗೆ ಮಾಹಿತಿ ತಿಳಿಸಿ. – ಆನಂದ.

ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಕೋರ್ಸ್ಗಳೆಂದರೆ ಸಿಎ (ಫೌಂಡೇಷನ್ ಕೋರ್ಸ್ ಮುಖಾಂತರ), ಬಿಕಾಂ (ಜನರಲ್, ಹಾನರ್ಸ್, ಬ್ಯಾಂಕಿAಗ್, ಫೈನಾನ್ಸ್, ಟೂರಿಸಮ್, ಪ್ರೊಫೆಷನಲ್, ಇಂಟರ್‌ನ್ಯಾಷನಲ್ ಫೈನಾನ್ಸ್ ಇತ್ಯಾದಿ), ಬಿಬಿಎ, ಬಿಸಿಎ, ಬಿಎಸ್‌ಡಬ್ಲು÷್ಯ, ಎಸಿಎಸ್, ಸಿಎಂಎ, 5 ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ. ಹಾಗಾಗಿ, ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ವೃತ್ತಿ ಯೋಜನೆಯ ಅನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q18. ಸಿಎ ಪರೀಕ್ಷೆ ಮುಗಿಸಿದವರು ಕೆಪಿಎಸ್‌ಸಿ ಪರೀಕ್ಷೆ ಬರೆಯಬಹುದೇ?

ಸಿಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಈ ವೃತ್ತಿಪರ ಪದವಿಯ ಆಧಾರದ ಮೇಲೆ ನಾಗರಿಕ ಸೇವಾ ಪರೀಕ್ಷೆಗೆ ಪ್ರವೇಶ ಪಡೆಯಲು ಅರ್ಹತೆ ಸಿಗುತ್ತದೆ.

Q19. ನಾನು ಎಂಎ, ಬಿಇಡಿ ಮುಗಿಸಿದ್ದೇನೆ. ಬಿಇಡಿ ಯಲ್ಲಿ ಕನ್ನಡ ಮತ್ತು ಸಮಾಜ ವಿಜ್ಞಾನ ನನ್ನ ಐಚ್ಛಿಕ ವಿಷಯಗಳು. ಆದರೆ ಪದವಿ ಹಂತದಲ್ಲಿ ಎಚ್‌ಇಪಿ ನನ್ನ ವಿಷಯವಾಗಿತ್ತು. ಈಗ ನನಗೆ ಶಾಲಾ ಹಂತದಲ್ಲಿ ಕನ್ನಡ ಬೋಧನೆಗೆ ಅವಕಾಶವಿಲ್ಲವಾಗಿದೆ. ಕನ್ನಡ ವಿಷಯ ಬೋಧನೆಗೆ ಸಾಹಿತ್ಯ ಪರಿಷತ್ತಿನ ಕಾವ, ಜಾಣ, ರತ್ನ ಪರೀಕ್ಷೆಯು ಸಮಾನವಾದುದ್ದೇ? ದಯವಿಟ್ಟು ಗೊಂದಲವನ್ನು ಪರಿಹರಿಸಿ. – ಪ್ರವೀಣ್ ಕುಮಾರ್ ಎನ್.ಎಂ., ಮಳವಳ್ಳಿ, ಮಂಡ್ಯ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾವ ಅಥವಾ ಜಾಣ ಅಥವಾ ರತ್ನ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಕರ್ನಾಟಕ ಸರ್ಕಾರದ ಅಧಿಕಾರಿಗಳು ಮತ್ತು ನೌಕರರಿಗೆ ಇಲಾಖೆಯಿಂದ ಗೊತ್ತು ಮಾಡಿರುವ ಇಲಾಖಾ ಭಾಷಾ ಪರೀಕ್ಷೆಯಿಂದ ವಿನಾಯಿತಿ ದೊರೆಯುತ್ತದೆ. ನಮಗಿರುವ ಮಾಹಿತಿಯಂತೆ, ಶಾಲಾ ಹಂತದಲ್ಲಿ ಕನ್ನಡ ಭೋದಿಸುವ ಶಿಕ್ಷಕರ ನೇಮಕಾತಿಗೆ ಪದವಿ ಹಂತದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದಿರಬೇಕು. ಹೆಚ್ಚಿನ ಮಾಹಿತಿಗಾಗಿ, ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಅಥವಾ ಶಿಕ್ಷಣ ಇಲಾಖೆಯ ದಿನಾಂಕ 23/02/2022 ರ ಸುತ್ತೋಲೆಯನ್ನು ಗಮನಿಸಿ: https://www.schooleducation.kar.nic.in/html/circularsgen.html