Q & A for Students – March 2023

1. ನನಗೀಗ 35 ವರ್ಷ ಮತ್ತು ಬಿಎ ಮಾಡಿದ್ದೇನೆ. ಈಗ ಬಿ.ಇಡಿ ಅಥವಾ ಎಲ್‌ಎಲ್‌ಬಿ ಮಾಡಬೇಕೆಂದುಕೊAಡಿದ್ದೀನಿ. ನನ್ನ ವಯಸ್ಸಿಗೆ ಅನುಗುಣವಾಗಿ ಯಾವ ಕೋರ್ಸ್ ಮಾಡಿದರೆ ಸೂಕ್ತ? ಮೈಸೂರು ಮತ್ತು ಚಾಮರಾಜನಗರದಲ್ಲಿ ಎಲ್‌ಎಲ್‌ಬಿ ಓದಲು ಸರ್ಕಾರಿ ಕಾಲೇಜಿದೆಯೇ? – ಹೆಸರು, ಊರು ತಿಳಿಸಿಲ್ಲ.

ಬಿ.ಇಡಿ ಮತ್ತು ಎಲ್‌ಎಲ್‌ಬಿ ಸಂಬಂಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಜ್ಞಾನ, ಆಸಕ್ತಿ, ಅಭಿರುಚಿ, ಮತ್ತು ಕೌಶಲಗಳು ವಿಭಿನ್ನ. ಹಾಗಾಗಿ, ವೃತ್ತಿಯ ಆಯ್ಕೆ ಮಾಡಲು ವಯಸ್ಸಿಗಿಂತ ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳು ಯಾವ ಕ್ಷೇತ್ರದಲ್ಲಿದೆಯೆಂದು ತಿಳಿದು, ಅದರಂತೆ ಕೋರ್ಸ್ ಆಯ್ಕೆ ತೆಗೆದುಕೊಳ್ಳುವುದು ಸರಿಯಾದ ಕ್ರಮ. ವೃತ್ತಿಯ ಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor
ಕರ್ನಾಟಕದಲ್ಲಿರುವ ಕಾನೂನು ಕಾಲೇಜುಗಳ ಮಾಹಿತಿಗಾಗಿ ಗಮನಿಸಿ: https://collegedunia.com/llb/karnataka-colleges

2. ಸರ್, ನಾನು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. ಸಿಎ ಕೋರ್ಸ್ ಮಾಡಬೇಕೆಂದುಕೊAಡಿದೆ.್ದ ಆದರೆ, ಆರ್ಥಿಕ ಪರಿಸ್ಥಿತಿಯಿಂದಾಗಿ ಸೇರಲು ಆಗಲಿಲ್ಲ. ಹಾಗಾಗಿ, ವಾಣಿಜ್ಯ ವಿಭಾಗದಲ್ಲಿ ಜೀವನವನ್ನು ರೂಪಿಸಿಕೊಳ್ಳಲು ಕಡಿಮೆ ಶುಲ್ಕದೊಂದಿಗೆ ಓದಲು ಯಾವ ಕೋರ್ಸ್ ಸೂಕ್ತ? ಅಥವಾ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವುದು ಉತ್ತಮವೇ? – ಹೆಸರು, ಊರು ತಿಳಿಸಿಲ್ಲ.

ಸಿಎ ಕೋರ್ಸ್ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ. ಜೊತೆಗೆ, ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಪರೀಕ್ಷೆಯ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ಮಾಡುವಾಗ ತರಬೇತಿ ಭತ್ಯ ಸಿಗುತ್ತದೆ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳ ಅಗತ್ಯವಿರುತ್ತದೆ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಚಾರ್ಟರ್ಡ್ ಅಕೌಂಟೆAಟ್ಸ್ಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿಎ ಕೋರ್ಸ್ ಮಾಡುವುದು ಮೊದಲ ಆದ್ಯತೆಯಾಗಿರುತ್ತದೆ.

ನಿಮಗೆ ಸಿಎ ಮಾಡಲಾಗದಿದ್ದರೆ, ಬಿಕಾಂ ಪದವಿಯನ್ನು ಮುಗಿಸಿ ಬ್ಯಾಂಕಿAಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್‌ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಅಥವಾ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನೂ ಪಡೆದುಕೊಳ್ಳಬಹುದು. ಅಂತಿಮ ಆಯ್ಕೆಯ ಮುನ್ನ ನಿಮ್ಮ ಆಸಕ್ತಿ, ಅಭಿರುಚಿ, ಕೌಶಲಗಳನ್ನು ಗುರುತಿಸಿ, ವೃತ್ತಿ ಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊಗಳನ್ನು ವೀಕ್ಷಿಸಿ:

https://www.youtube.com/@ExpertCareerConsultantAuthor

https://www.youtube.com/watch?v=jmijSoqBDVw

3. ನಾನು ಎಲೆಕ್ಟಿçಕಲ್ ಮತ್ತು ಎಲೆಕ್ಟಾçನಿಕ್ಸ್ ಎಂಜಿನಿಯರಿAಗ್ ಮುಗಿಸಿ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುತ್ತಿದ್ದು, ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡಿದ್ದೇನೆ. ಈಗ, ದೂರ ಶಿಕ್ಷಣದ ಮುಖಾಂತರ ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಮಾಡಬೇಕೆಂದುಕೊAಡಿದ್ದೇನೆ. ಇದರಿಂದ, ಯುಪಿಎಸ್‌ಸಿ ಪರೀಕ್ಷೆಗೆ ಅನುಕೂಲವಾದರೂ, ಮುಂದೆ ಎಂಎ (ಕನ್ನಡ) ಪದವಿಗೆ ಇರುವ ಅವಕಾಶಗಳೇನು? – ಅಶೋಕ್, ಚಿತ್ರದುರ್ಗ.

ಎಂಎ (ಕನ್ನಡ) ಪದವಿಯ ನಂತರ, ಪ್ರಿಂಟ್ ಮತ್ತು ಎಲೆಕ್ಟಾçನಿಕ್ ಸೇರಿದಂತೆ ಮಾಧ್ಯಮಗಳು, ಪ್ರಕಾಶನ ಸಂಸ್ಥೆಗಳು, ಚಿತ್ರೋಧ್ಯಮ, ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಇ-ಕಾಮರ್ಸ್, ಕೋಚಿಂಗ್ ತರಗತಿಗಳು, ಶಿಕ್ಷಣ ಸೇರಿದಂತೆ ಅನೇಕ ವಲಯಗಳಲ್ಲಿ ವೃತ್ತಿಯ ಅವಕಾಶಗಳಿವೆ.

4. ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಸಂಬಂಧಿಸಿದ ಪಠ್ಯಕ್ರಮಗಳನ್ನು ತಿಳಿಸಿ. – ಹೆಸರು, ಊರು ತಿಳಿಸಿಲ್ಲ.

ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮದ ಮಾಹಿತಿಗಾಗಿ ಗಮನಿಸಿ:

https://toppersexam.com/STATE-LEVEL-EXAMS/KRD-VILLAGE-ACCOUNTANT/syllabus_2255.html
ಹಾಗೂ, ಹೆಚ್ಚಿನ ಮಾಹಿತಿ ಮತ್ತು ಅಧಿಸೂಚನೆಗಳಿಗೆ ಕಂದಾಯ ಇಲಾಖೆಯ ಅಧಿಕೃತ https://kandaya.karnataka.gov.in/ ಅನ್ನು ಗಮನಿಸಿ:

5. ಸರ್, ಪಿಎಸ್‌ಐ ಪರೀಕ್ಷೆ ಕುರಿತ ಉಪಯುಕ್ತ ಮಾಹಿತಿ ನೀಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. – ಹೆಸರು, ಊರು ತಿಳಿಸಿಲ್ಲ.

ಪಿಎಸ್‌ಐ ನೇಮಕಾತಿಗೆ ನಡೆಯುವ ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿಗಾಗಿ ಗಮನಿಸಿ:

https://recruitment.ksp.gov.in/assets/docs/notifications/2021-PSI-Civil-402-posts.pdf

ಹಾಗೂ, ಪ್ರಸಕ್ತ ಸಾಲಿನ ನೇಮಕಾತಿಗೆ ಸಂಬAಧಿಸಿದ ಅಧಿಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ https://recruitment.ksp.gov.in ಅನ್ನು ಗಮನಿಸುತ್ತಿರಿ.

6. ನಾನು 3ನೇ ಸೆಮಿಸ್ಟರ್ ಬಿಕಾಂ ಮಾಡುತ್ತಿದ್ದೇನೆ. ಮುಂದೆ, ಸಿಎ ಆಗಬೇಕೆಂದುಕೊಂಡಿದ್ದೇನೆ. ದಯವಿಟ್ಟು ಅಧ್ಯಯನ ಸಾಮಗ್ರಿ, ಕೋಚಿಂಗ್ ಕೇಂದ್ರಗಳು, ಪರೀಕ್ಷೆ ಇತ್ಯಾದಿಗಳ ಬಗ್ಗೆ ತಿಳಿಸಿ. – ಹೆಸರು, ಊರು ತಿಳಿಸಿಲ್ಲ.

ಹೆಸರು, ಊರು ತಿಳಿಸಿಲ್ಲ. ಬಿಕಾಂ ಕೋರ್ಸಿನಲ್ಲಿ ಶೇಕಡ 55 ಅಂಕಗಳನ್ನು ಗಳಿಸಿದಲ್ಲಿ ಇಂಟರ್‌ಮೀಡಿಯಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ, 3 ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಒಟ್ಟಾರೆ, ಬಿಕಾಂ ನಂತರ ಸಿಎ ಕೋರ್ಸ್ ಮಾಡಲು ಕನಿಷ್ಠ 3-4 ವರ್ಷ ಬೇಕಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೋಗಳನ್ನು ವೀಕ್ಷಿಸಿ: https://icai.org/,
https://www.youtube.com/watch?v=RyNVWuRVjbA

7. ಬಿಕಾಂ ಕೋರ್ಸಿನಲ್ಲಿ ಶೇಕಡ 55 ಅಂಕಗಳನ್ನು ಗಳಿಸಿದಲ್ಲಿ ಇಂಟರ್‌ಮೀಡಿಯಟ್ ಕೋರ್ಸಿಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು. ಜೊತೆಗೆ, 3 ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆಂಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಒಟ್ಟಾರೆ, ಬಿಕಾಂ ನಂತರ ಸಿಎ ಕೋರ್ಸ್ ಮಾಡಲು ಕನಿಷ್ಠ 3-4 ವರ್ಷ ಬೇಕಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೋಗಳನ್ನು ವೀಕ್ಷಿಸಿ: – ಹೆಸರು, ಊರು ತಿಳಿಸಿಲ್ಲ.

ನವೀಕರಿಸಬಹುದಾದ ಶಕ್ತಿ ಮತ್ತು ಪರಿಸರ ವಿಜ್ಞಾನ, ಅಭಿವೃದ್ಧಿಯ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮ ಅಭಿಪ್ರಾಯದಂತೆ, ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಮಾನವ ಸಂಪನ್ಮೂಲಗಳು, ಬೇಡಿಕೆಗಿಂತ ಕಡಿಮೆಯಿದೆ. ಎಂ.ಎಸ್ಸಿ ನಂತರ ಜಲವಿದ್ಯುತ್ ಉದ್ಯಮಗಳು, ಸೌರಶಕ್ತಿ ಉದ್ಯಮಗಳು, ಜಿಯೋತರ್ಮಲ್ ಉದ್ಯಮಗಳು, ಪವನಶಕ್ತಿ ಉದ್ಯಮಗಳು, ವಿದ್ಯುತ್ಚಾಲಿತ ವಾಹನಗಳು, ತ್ಯಾಜ್ಯ ವಸ್ತುಗಳ ಮರುಬಳಕೆ ಉದ್ಯಮಗಳು, ಪರಿಸರ ಪ್ರವಾಸೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ನೀವು ಕೇಳಿರುವ ಎರಡೂ ವಿಶ್ವವಿದ್ಯಾಲಯಗಳು ಪ್ರತಿಷ್ಠಿತ ಸಂಸ್ಥೆಗಳು; ಹಾಗಾಗಿ, ಅಂತಿಮ ಆಯ್ಕೆ ನಿಮ್ಮದು.

8. ರಾಷ್ಟ್ರಿಯ ಶಿಕ್ಷಣ ನೀತಿ -2020 ಪ್ರಕಾರ ನಾಲ್ಕು ವರ್ಷದ ಪದವಿ ಮುಗಿಸಿದರೆ ನಮಗೆ ಆಗುವ ಉಪಯೋಗಗಳೇನು? ಮುಂದಿನ ಅವಕಾಶಗಳು ಹೇಗಿವೆ? – ನಾಗರಾಜ, ವಿಜಯನಗರ.

ರಾಷ್ಟ್ರಿಯ ಶಿಕ್ಷಣ ನೀತಿ -2020 ಪ್ರಕಾರ, ನಾಲ್ಕು ವರ್ಷದ ಪದವಿ ಕೋರ್ಸ್ಗಳು ಈಗ ಅನುಷ್ಠಾನಗೊಳ್ಳುತ್ತಿದೆ. ಅದರಂತೆ, ಈ ಬದಲಾವಣೆಗಳನ್ನು ಗಮನಿಸಿ:

 • ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿಯಂತೆ ಬಹು-ಶಿಸ್ತೀಯ (ಮಲ್ಟಿ-ಡಿಸಿಪ್ಲಿನರಿ) ವಿಷಯಗಳನ್ನು ಪದವಿ ಕೋರ್ಸಿನಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ, ವಿಜ್ಞಾನದ ವಿದ್ಯಾರ್ಥಿಗಳು ವಾಣಿಜ್ಯ/ಕಲಾ ವಿಭಾಗದ ವಿಷಯಗಳನ್ನು ಅಧ್ಯಯನ ಮಾಡಬಹುದು.
 • ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ, ಬಹುಹಂತದ ಪ್ರವೇಶ ಮತ್ತು ನಿರ್ಗಮನದ ಅವಕಾಶವಿದೆ. ಹಾಗಾಗಿ, ಮೊದಲ ವರ್ಷದ ನಂತರ ನಿರ್ಗಮಿಸಿದರೆ ಸರ್ಟಿಫಿಕೆಟ್ ಮತ್ತು ಎರಡು ವರ್ಷದ ನಂತರ ನಿರ್ಗಮಿಸಿದರೆ ಡಿಪ್ಲೊಮಾ ನೀಡಲಾಗುತ್ತದೆ.
 • ಈಗಿರುವಂತೆ, ಮೂರು ವರ್ಷದ ನಂತರ ಪದವಿಯನ್ನು ಪಡೆದು ಉನ್ನತ ಶಿಕ್ಷಣವನ್ನು ಮುಂದುವರೆಸಬಹುದು ಅಥವಾ ಉದ್ಯೋಗಾವಕಾಶಗಳನ್ನು ಅರಸಬಹುದು.
 • ನಾಲ್ಕನೇ ವರ್ಷದಲ್ಲಿ ವಿಷಯ ಸಂಬAಧಿತ ಸಂಶೋಧನೆಯನ್ನು ಮಾಡಿದ ನಂತರ ಪದವಿ (ಸಂಶೋಧನೆ) ನೀಡಲಾಗುತ್ತದೆ. ಈ ಪದವಿಯ ನಂತರ ನೇರವಾಗಿ ಪಿ.ಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.education.gov.in/sites/upload_files/mhrd/files/NEP_Final_English_0.pdf

9. ಸರ್, ಪ್ರಸ್ತುತ ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣದಲ್ಲಿ ಎಂಎ (ಶಿಕ್ಷಣ) ಪದವಿ ಮುಗಿಸಿದ್ದೇನೆ. ಈ ಪದವಿಯಿಂದ ಮುಂದೆ ಸಿಗಬಹುದಾದ ಹುದ್ದೆಗಳು, ಅವಕಾಶಗಳ ಬಗ್ಗೆ ತಿಳಿಸಬೇಕಾಗಿ ವಿನಂತಿ. – ಹರ್ಷವರ್ಧನ, ಮಾನ್ವಿ.

ವ್ಯಾಪಕವಾದ ಶಿಕ್ಷಣ ವಲಯದಲ್ಲಿನ ವೈವಿಧ್ಯಮಯ ಜವಾಬ್ದಾರಿಗಳನ್ನು ನಿರ್ವಹಿಸಲು ಎಂಎ (ಶಿಕ್ಷಣ) ಪದವಿ, ಅಭ್ಯರ್ಥಿಗಳನ್ನು ಸಜ್ಜು ಮಾಡುತ್ತದೆ. ಉದಾಹರಣೆಗೆ, ಕಲಿಕೆ, ಅಧ್ಯಯನ ಮತ್ತು ಭೋಧನೆ, ಪಠ್ಯಕ್ರಮ ಅಭಿವೃದ್ಧಿ, ಶಿಕ್ಷಕರ ಶಿಕ್ಷಣ, ಶಾಲಾಕಾಲೇಜು ನಿರ್ವಹಣೆ, ಶಿಕ್ಷಣ ನೀತಿ ಮತ್ತು ಅನುಷ್ಠಾನ, ಮೌಲ್ಯ ಮಾಪನ ಇತ್ಯಾದಿ. ಆಯಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಹೆಚ್ಚಿನ ತಜ್ಞತೆ ಮತ್ತು ವೃತ್ತಿಪರ ಕೌಶಲಗಳನ್ನು ಗಳಿಸಿ, ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

10. ನಾನು ಬಿಕಾಂ ಪದವಿಯನ್ನು ಮುಗಿಸಿದ್ದು, ಆನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮುಂದುವರಿಸಲು ಆಗಲಿಲ್ಲ, ಈಗ, ಬೇರೆ ಕೆಲಸ ಮಾಡುತ್ತಿದ್ದೇನೆ. ಸಹಾಯಕ ಪ್ರಾಧ್ಯಾಪಕ ಹುದ್ದೆ ಪಡೆಯಬೇಕಾದರೆ ಮುಂದೇನು ಮಾಡಬೇಕು? – ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬAಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ 55 ಅಂಕಗಳೊAದಿಗೆ ಪಡೆದಿರಬೇಕು. ಹಾಗೂ, ರಾಷ್ಟ್ರೀಯ/ರಾಜ್ಯ ಮಟ್ಟದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪಿ.ಎಚ್‌ಡಿ ಪದವಿಯನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ದೊರಕುತ್ತದೆ. ಈ ಶೈಕ್ಷಣಿಕ ಅರ್ಹತೆಯ ನಂತರ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://cetonline.karnataka.gov.in/kea/gfgc2021

11. ಸರ್, ನಾನು ಬಿಕಾಂ ಮುಗಿಸಿದ್ದು ಜರ್ನಲಿಸಮ್ ಮಾಡಬೇಕೆಂದಿರುವೆ. ಇದಕ್ಕೆ, ಸರ್ಕಾರಿ ಕಾಲೇಜುಗಳು ಇವೆಯೇ?. ಕೋರ್ಸ್ ಅವಧಿ ಎಷ್ಟು? ಸರ್ಕಾರಿ ಸೌಲಭ್ಯ ಪಡೆದು ಈ ಮಾಡಲು ಸಾದ್ಯವೇ? – ಹೆಸರು, ಊರು ತಿಳಿಸಿಲ್ಲ.

ಬಿಕಾಂ ನಂತರ ಎರಡು ವರ್ಷದ ಎಂಎ (ಜರ್ನಲಿಸಮ್ ಮತ್ತು ಮಾಸ್ ಕಮ್ಯೂನಿಕೇಷನ್) ಸ್ನಾತಕೋತ್ತರ ಕೋರ್ಸನ್ನು ಸರ್ಕಾರಿ/ಖಾಸಗಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಮಾಡಬಹುದು. ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಶಿಪ್ ಸೌಲಭ್ಯಗಳಿವೆ. ಇದರ ಜೊತೆಗೆ ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್ಗಳು ಈ ನಿಟ್ಟಿನಲ್ಲಿ ಅನೇಕ ಸ್ಕಾಲರ್‌ಶಿಪ್ ಸೌಲಭ್ಯಗಳನ್ನು ನೀಡುತ್ತಿವೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ:

https://www.shiksha.com/mass-communication-media/journalism/colleges/colleges-karnataka

https://www.buddy4study.com/article/karnataka-scholarships

ಶೈಕ್ಷಣಿಕ ಸಾಲವನ್ನು ಆಕರ್ಷಕ ಬಡ್ಡಿ ದರ ಮತ್ತು ವಿದ್ಯಾರ್ಥಿ ಸ್ನೇಹಿ ನಿಯಮಗಳೊಂದಿಗೆ ದೇಶದಲ್ಲಿರುವ ಎಲ್ಲಾ ಬ್ಯಾಂಕ್‌ಗಳು ನೀಡುತ್ತವೆ. ಕೇಂದ್ರ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮಾರ್ಗದರ್ಶನದಲ್ಲಿ ಈ ಸಾಲಗಳನ್ನು ಪಡೆಯಲು ವಿದ್ಯಾಲಕ್ಶ್ಮಿ ಜಾಲತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.vidyalakshmi.co.in/Students/

12. ನಾನು ಬಿಎ ಮುಗಿಸಿದ್ದೇನೆ. ಬಿ.ಇಡಿ ಮಾಡುವ ಆಸೆಯಿದೆ. ಆದರೆ, ಹಣದ ಅವಶ್ಯಕತೆ ಹೆಚ್ಚಿರುವ ಕಾರಣ ಮಾಡಲು ಆಗುತ್ತಿಲ್ಲ. ಮುಂದೆ ಅನುಕೂಲವಾದಾಗ ಮಾಡಬಹುದೇ? – ಸಿದ್ದು ಶಿರ್ಮಾ, ಕಲಬುರ್ಗಿ

ಬಿ.ಇಡಿ ಕೋರ್ಸನ್ನು ಸರ್ಕಾರಿ ಕಾಲೇಜುಗಳಲ್ಲಿಯೂ ಮಾಡಬಹುದು. ಈಗಿರುವ ನಿಯಮಗಳಂತೆ ಬಿ.ಇಡಿ ಪದವಿಯ ನಂತರ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ಇರುತ್ತದೆ.

13. ನಾನು ದ್ವೀತಿಯ ಪಿಯುಸಿ ಕಾಮರ್ಸ್ ವಿಭಾಗದ ಇಂಗ್ಲಿಷ್‌ನಲ್ಲಿ ಮಾತ್ರ ಪಾಸಾಗಿ, ಉಳಿದ 5 ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದೇನೆ. ಓದನ್ನು ಮುಂದುವರಿಸಲು ಏನು ಮಾಡಲಿ? 2023ನೇ ಸಾಲಿನಲ್ಲಿ ಮರು ಪರೀಕ್ಷೆ ಬರೆಯುವುದಕ್ಕೆ ಏನನ್ನು ಮಾಡಬೇಕು? ಯಾವ ಕೋಚಿಂಗ್ ಸೆಂಟರ್ ಸೇರಲಿ? – ಹೆಸರು, ಊರು ತಿಳಿಸಿಲ್ಲ.

ನಿಮ್ಮ ಕಾಲೇಜಿನ ಮುಖಾಂತರ ಮುಂದಿನ ಪರೀಕ್ಷೆಗೆ ನೋಂದಾಯಿಸಿಕೊAಡು ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಬಹುದು. ಎಲ್ಲಾ ವಿಷಯಗಳಿಗೂ ಕೋಚಿಂಗ್ ಕಡ್ಡಾಯವಲ್ಲ; ನಿಮಗೆ ನಿಭಾಯಿಸಲಾಗದ ವಿಷಯಗಳಿಗೆ ಮಾತ್ರ ಕೋಚಿಂಗ್ ಸೇರಬಹುದು. ಯಾವುದೇ ವೈಫಲ್ಯವು ಮಾರಕವಲ್ಲ ಅಥವಾ ಯಶಸ್ಸು ಅಂತಿಮವಲ್ಲವೆನ್ನುವುದು ನಿಮ್ಮ ನೆನಪಿನಲ್ಲಿರಲಿ. ಆದರೆ, ನಮ್ಮ ತಪ್ಪುಗಳಿಂದ ಪಾಠ ಕಲಿಯದಿರುವುದೇ ನಿಜವಾದ ವೈಫಲ್ಯ. ಹಾಗಾಗಿ, ಸ್ವಯಂ ಮೌಲ್ಯಮಾಪನದಿಂದ ಪರೀಕ್ಷೆಯ ವೈಫಲ್ಯದ ಕಾರಣಗಳನ್ನು ಗುರುತಿಸಿ, ಮುಂದೆ ಅಂತಹ ತಪ್ಪುಗಳು ಮರುಕಳಿಸದಂತೆ ಕಾಳಜಿ ವಹಿಸಿ.

ಪ್ರಮುಖವಾಗಿ ಪಿಯುಸಿ ನಂತರ ಮುಂದೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

14. ನಾನು ಸಿವಿಲ್ ಎಂಜಿನಿಯರಿAಗ್ ಮಾಡಿದ್ದೇನೆ. ನಾನು ಸಿಎ ಕೋರ್ಸ್ ಮಾಡಬಹುದೇ? – ಹೆಸರು, ಊರು ತಿಳಿಸಿಲ್ಲ.

ಎಂಜಿನಿಯರಿಂಗ್ ಪದವಿ ಪರೀಕ್ಷೆಯಲ್ಲಿ ಕನಿಷ್ಠ ಶೇ 60 ಗಳಿಸಿದ್ದರೆ ಸಿಎ (ಇಂಟರ್‌ಮೀಡಿಯೆಟ್) ಕೋರ್ಸಿಗೆ ನೋಂದಾಯಿಸಿಕೊಳ್ಳಬಹುದು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ನಾಲ್ಕು ವರ್ಷದ ಎಂಜಿನಿಯರಿAಗ್ ಕೋರ್ಸ್ ನಂತರ ಸಿಎ ಕೋರ್ಸ್ ಮಾಡಲು ಇನ್ನೂ ನಾಲ್ಕು ವರ್ಷ ಬೇಕಾಗುತ್ತದೆ. ಇದಲ್ಲದೆ, ಎಂಜಿನಿಯರಿಂಗ್ ಕ್ಷೇತ್ರಕ್ಕೂ, ಹಣಕಾಸು ನಿರ್ವಹಣೆಯ ಕ್ಷೇತ್ರಕ್ಕೂ ಅಗತ್ಯವಾದ ಜ್ಞಾನ ಮತ್ತು ಕೌಶಲಗಳು ವಿಭಿನ್ನವಾಗಿದೆ. ಬಹುಶಃ, ಎಂಜಿನಿಯರಿಂಗ್ ಕೋರ್ಸನ್ನು ಮಾಡುವ ಮುಂಚೆ ನಿಮ್ಮ ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿರಲಿಲ್ಲವೆನಿಸುತ್ತದೆ. ಈಗಲೂ, ಕಾಲ ಮಿಂಚಿಲ್ಲ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವೃತ್ತಿಯೋಜನೆಯನ್ನು ಮಾಡಿ ಮುಂದಿನ ನಿರ್ಧಾರವನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

15. ನಾನು ಬಿ.ಎಸ್ಸಿ ದ್ವಿತೀಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಕೆಎಎಸ್ ಮಾಡುವ ಆಸೆಯಿದೆ. ನನಗೆ ಸಂಗೀತದಲ್ಲೂ ಆಸಕ್ತಿ ಇದ್ದು, ಮುಂದೆ ಗಾಯಕಿಯಾಗುವ ಬಯಕೆಯೂ ಇದೆ. ಆದರೆ, ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಬೇಕು ಎನ್ನುವ ಛಲವೂ ಇದೆ. ದಯವಿಟ್ಟು ಪರೀಕ್ಷೆಗೆ ಹೇಗೆ ಓದಬೇಕು ಮತ್ತು ಯಾವ ವಿಷಯಗಳು ಇವೆ ಎಂದು ತಿಳಿಸಿ. ನನಗೆ ಅರ್ಥವಾಗುತ್ತಿಲ್ಲ. – ಹೆಸರು, ಊರು ತಿಳಿಸಿಲ್ಲ.

ಸರ್ಕಾರಿ ವಲಯದ ಅನೇಕ ಉನ್ನತ ಹುದ್ದೆಗಳಿಗೆ ಕೆಎಎಸ್ ಏಕರೂಪದ ಪರೀಕ್ಷೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸೇರಿದಂತೆ ಮೂರು ಹಂತದ ಪರೀಕ್ಷೆಯಿರುತ್ತದೆ. ಒಬ್ಬ ದಕ್ಷ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ.

ಮುಖ್ಯ ಪರೀಕ್ಷೆಯಲ್ಲಿ ಕಡ್ಡಾಯವಾದ ಮತ್ತು ಐಚ್ಛಿಕ ವಿಷಯಗಳಿರುತ್ತದೆ. ಪ್ರಶ್ನೆಗಳು ಪದವಿಯ ಮಟ್ಟದ್ದಾಗಿರುತ್ತದೆ ಮತ್ತು ವಿವರಣಾತ್ಮಕ ಮಾದರಿಯಲ್ಲಿರುವುದರಿಂದ ನಿಮ್ಮ ಬರವಣಿಗೆ ಉತ್ಕöÈಷ್ಟವಾದ ಗುಣಮಟ್ಟದ್ದಾಗಿರಬೇಕು. ಈ ಎಲ್ಲಾ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಇವೆಲ್ಲವನ್ನು ನಿಭಾಯಿಸುವ ಆತ್ಮವಿಶ್ವಾಸವಿಲ್ಲದಿದ್ದರೆ, ಕೋಚಿಂಗ್ ಸೇರಬಹುದು. ಸಂಗೀತದಲ್ಲಿ ನಿಮಗಿರುವ ಆಸಕ್ತಿಯನ್ನು ಪೋಷಿಸಿ, ಉತ್ತಮ ಗಾಯಕಿಯಾಗಲು ಪ್ರಯತ್ನಿಸಿ. ವೃತ್ತಿಯಲ್ಲಿನ ಒತ್ತಡವನ್ನು ನಿರ್ವಹಿಸಿ, ನಿಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಲು, ಇಂತಹ ಹವ್ಯಾಸಗಳು ಸಹಾಯಕಾರಿ.

ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://testbook.com/kpsc-kas/syllabus

16. ಸರ್, ನಾನು ಅಂತಿಮ ವರ್ಷದ ಎಂಎ (ಸಮಾಜಶಾಸ್ತ್ರ) ವಿದ್ಯಾರ್ಥಿಯಾಗಿದ್ದು, ಪಿ.ಎಚ್‌ಡಿ ಮಾಡಬಯಸಿದ್ದೇನೆ. ಮುಂದಿನ ತಯಾರಿಯ ಬಗ್ಗೆ ಕೂಲಂಕಶವಾಗಿ ತಿಳಿಸಿ. – ಶಿವು, ಸಿರಾವರ, ರಾಯಚೂರು ಜಿಲ್ಲೆ.

ಸಾಮಾನ್ಯವಾಗಿ, ಪಿಎಚ್‌ಡಿ ಮಾಡಲು ಈ ಕೆಳಗೆ ತಿಳಿಸಿರುವ ಪ್ರಕ್ರಿಯೆ ಇರುತ್ತದೆ:

 • ಪಿಎಚ್‌ಡಿ ಕೋರ್ಸಿಗೆ ಅಗತ್ಯವಾದ ಸಂಶೋಧನೆಯ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.
 • ಸಂಬAಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ನಂತರ (ಅಥವಾ ನಾಲ್ಕು ವರ್ಷದ ಸಂಶೋಧನಾತ್ಮಕ ಪದವಿಯ ನಂತರ) ಪಿಎಚ್‌ಡಿ ಕೋರ್ಸ್ ಮಾಡಲು ಅರ್ಹತೆ ಸಿಗುತ್ತದೆ. ಪಿಎಚ್‌ಡಿ ಕೋರ್ಸಿನಲ್ಲಿ ನೀವು ಮಾಡುವ ಸಂಶೋಧನೆ ಕುರಿತ ಸುದೀರ್ಘವಾದ ಪ್ರಸ್ತಾವನೆಯನ್ನು ತಯಾರಿಸಬೇಕು. ಇದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಅನುಮತಿ ಸಿಗುತ್ತದೆ.
 • ವಿಶ್ವವಿದ್ಯಾಲಯಗಳು ಪ್ರತಿ ವರ್ಷದ ಪಿಎಚ್‌ಡಿ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಅವಕಾಶಗಳನ್ನು ಹೊಂದಿರುತ್ತವೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರವೇಶ ಪರೀಕ್ಷೆಗಳು, ಸಂದರ್ಶನಗಳು ಮತ್ತು ಸಂಶೋಧನಾ ಪ್ರಸ್ತಾವನೆಯ ಮೌಲ್ಯಮಾಪನ ಇತ್ಯಾದಿ ಪ್ರಕ್ರಿಯೆಗಳಿರುತ್ತದೆ.
 • ಪಿಎಚ್‌ಡಿ ಕೋರ್ಸಿಗೆ ಆಯ್ಕೆಯಾದ ನಂತರ ಸಂಶೋಧನೆಯನ್ನು ಪೂರ್ಣಗೊಳಿಸಿ ಮಹಾಪ್ರಬಂಧವನ್ನು (ಥೀಸಿಸ್) ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಇದಲ್ಲದೆ, ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಬೇಕು.
 • ನೀವು ಸಲ್ಲಿಸಿದ ಮಹಾಪ್ರಬಂಧವನ್ನು ವಿಷಯ ತಜ್ಞರ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
 • ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಸ್ವೀಕಾರ ಮಾಡಿದ ನಂತರ ಪಿಎಚ್‌ಡಿ ಪದವಿಯನ್ನು ನೀಡಲಾಗುತ್ತದೆ. ಈ ಇಡೀ ಪ್ರಕ್ರಿಯೆಗೆ 3-5 ವರ್ಷ ಬೇಕಾಗಬಹುದು.
 • ಪ್ರತಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳು, ಶುಲ್ಕಗಳು, ವಿದ್ಯಾರ್ಥಿ ವೇತನ, ಅನುದಾನ ಇತ್ಯಾದಿಗಳು ವಿಭಿನ್ನವಾಗಿರುತ್ತದೆ