Q & A for Students – January 2024

1.  ಪೊಲೀಸ್ಆಗಬೇಕಾದರೆಏನುಮಾಡಬೇಕು?

ನಮ್ಮ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿಯ ಸ್ಥಾಪನೆಗಾಗಿ ಹಗಲಿರುಳೂ ಪೊಲೀಸ್ ಇಲಾಖೆ ಶ್ರಮಿಸುತ್ತದೆ.  ಈ ನಿಟ್ಟಿನಲ್ಲಿ, ಇಲಾಖೆಯ ಉದ್ಯೋಗಿಗಳು ಸಂದರ್ಭಕ್ಕೆ ತಕ್ಕಂತೆ ಸ್ವಯಂ-ಪ್ರೇರಿತರಾಗಿ ಅಥವಾ ಮೇಲಧಿಕಾರಿಗಳ ಸೂಚನೆ/ಆದೇಶದಂತೆ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಹಾಗಾಗಿ, ನಿಗದಿತ  ವೇಳೆಯಲ್ಲಿಯೇ ಕೆಲಸ ಮಾಡುವ ಪರಿಪಾಠ ಎಲ್ಲಾ ಸಂದರ್ಭದಲ್ಲೂ ಕಾರ್ಯಸಾಧ್ಯವಲ್ಲ. ಆದ್ದರಿಂದ, ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನವನ್ನು ಸಾಧಿಸಬೇಕಾದರೆ ವೃತ್ತಿಯಲ್ಲಿ ಆಸಕ್ತಿ, ಅಭಿರುಚಿ, ಕೌಶಲಗಳ ಜೊತೆಗೆ ಕುಟುಂಬದ ಬೆಂಬಲ ಇರಬೇಕು.

ಪೊಲೀಸ್ ಕಾನ್ಸ್‌ಟೇಬಲ್ ಆಗಲು ಅಭ್ಯರ್ಥಿಗಳು ಸರ್ಕಾರಿ ಮಾನ್ಯತೆ ಪಡೆದ ಶಾಲೆ/ಕಾಲೇಜಿನಿಂದ ಪಿಯುಸಿ/ತತ್ಸಮಾನ ಕೋರ್ಸ್ನಲ್ಲಿ ತೇರ್ಗಡೆಯಾಗಿರಬೇಕು. ವಯೋಮಿತಿ ಕನಿಷ್ಠ ೧೮ ವರ್ಷ ಮತ್ತು ಗರಿಷ್ಠ ೨೫ ವರ್ಷದ ಒಳಗಿರಬೇಕು. ನಾಯಕತ್ವದ ಕೌಶಲ,  ದಿಟ್ಟತನ, ಸಹಭಾಗಿತ್ವದ ಕೌಶಲ, ಉತ್ತಮ ಸಂವಹನ, ಪರಿಶೋಧನಾ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲಗಳ ಜೊತೆ ಸಕಾರಾತ್ಮಕ ಧೋರಣೆಯಿರಬೇಕು; ಹಾಗೂ, ಮಾನಸಿಕ ಮತ್ತು ದೈಹಿಕ ಸದೃಡತೆಯಿರಬೇಕು. ಪ್ರಮುಖವಾಗಿ, ಈ ವೃತ್ತಿ ನಿಮಗೆ ಒಪ್ಪುತ್ತದೆಯೇ ಎಂದು ಖಚಿತವಾಗಬೇಕು. ಯಾವುದಾದರೂ ಪದವಿ ಕೋರ್ಸ್ನಲ್ಲಿ ತೇರ್ಗಡೇಯಾಗಿದ್ದರೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಹತೆ ಸಿಗುತ್ತದೆ.

ಎಲ್ಲಾ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆಗಳ ಮೂಲಕ ನಡೆಯುತ್ತದೆ.

ಕರ್ನಾಟಕ ಪೊಲೀಸ್ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ ಗಮನಿಸಿ: https://apc420.ksp-recruitment.in/

2. ಸರ್, ನಾನು ಬಿಕಾಂ ಮುಗಿಸಿ, ಎಂಬಿಎ ಮಾಡಲು ಪಿಜಿಸಿಇಟಿ ಬರೆದಿದ್ದೇನೆ. ನನಗೆ ಎಲ್ಎಲ್ಬಿ ಮತ್ತು ಎಂಬಿಎ ಎರಡರಲ್ಲಿಯೂ ಆಸಕ್ತಿ ಇದ್ದು, ಭವಿಷ್ಯವನ್ನು ರೂಪಿಸಿಕೊಳ್ಳಲು ಯಾವುದು ಸೂಕ್ತವೆಂದು ತಿಳಿಸಿ. ಸಂಜೆ ಕಾಲೇಜು ಮೂಲಕ ಎಲ್ಎಲ್ಬಿ ಮಾಡಬಹುದೇ?

ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್ ಸಂಬAಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳು ವಿಭಿನ್ನ. ಮೇಲ್ನೋಟಕ್ಕೆ, ವೃತ್ತಿಯ ಅವಕಾಶಗಳ ದೃಷ್ಟಿಯಿಂದ ಎಂಬಿಎ ಮಾಡುವುದು ಒಳ್ಳೆಯದು. ಹಾಗೂ, ನಮಗಿರುವ ಮಾಹಿತಿಯಂತೆ, ಎಲ್‌ಎಲ್‌ಬಿ (ರೆಗ್ಯುಲರ್) ಕೋರ್ಸ್ಗಳಿಗೆ ಮಾತ್ರ ಬಾರ್ ಕೌಂಸಿಲ್ ಮಾನ್ಯತೆಯಿರುತ್ತದೆ.

3. ನಾನು ಬಿ.ಎಸ್ಸಿ (ಪಿಸಿಎಮ್) ಪದವಿಯನ್ನು ಪೂರ್ಣಗೊಳಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಮನೆಯಲ್ಲಿ ಬಿ.ಇಡಿ ಮಾಡಲು ಹೇಳುತ್ತಿದ್ದಾರೆ. ಬಿ.ಇಡಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಬಿ.ಇಡಿ ನಂತರ ಪ್ರೌಡಶಾಲೆಗಳಲ್ಲಿ ನೀವು ಗಣಿತ/ವಿಜ್ಞಾನ ವಿಷಯಗಳನ್ನು ಭೋಧಿಸಬಹುದು. ಹೆಚ್ಚಿನ ಅವಕಾಶಗಳಿಗಾಗಿ ಎಂ.ಎಸ್ಸಿ ಮಾಡಿ, ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆಎಸ್‌ಇಟಿ ಅಥವಾ ಎನ್‌ಇಟಿ) ಮೂಲಕ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು. ಈ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಗಾಗಿ, ಪಿ.ಎಚ್‌ಡಿ ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಪಿ.ಎಚ್‌ಡಿ ಪದವೀಧರರಿಗೆ ಕೆಎಸ್‌ಇಟಿ/ಎನ್‌ಇಟಿ ಅರ್ಹತಾ ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ.

4. ನಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ. ಈಗ ನನ್ನ ಗುರಿ ಕೆಎಎಸ್ ಮಾಡುವುದು. ಅಧ್ಯಯನ ಮತ್ತು ತಯಾರಿ ಹೇಗೆ ಪ್ರಾರಂಭಿಸಬೇಕು ಎಂದು ಮಾರ್ಗದರ್ಶನ ನೀಡಿ.

ಸರ್ಕಾರಿ ವಲಯದ ಅನೇಕ ಉನ್ನತ ಹುದ್ದೆಗಳಿಗೆ ಕೆಎಎಸ್ ಏಕರೂಪದ ಪರೀಕ್ಷೆ. ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ ಸೇರಿದಂತೆ ಮೂರು ಹಂತದ ಪರೀಕ್ಷೆಯಿರುತ್ತದೆ. ಒಬ್ಬ ದಕ್ಷ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ  ಇತ್ಯಾದಿಗಳನ್ನು ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಪ್ರಶ್ನೆಗಳು ಪದವಿಯ ಮಟ್ಟದ್ದಾಗಿರುತ್ತದೆ ಮತ್ತು ವಿವರಣಾತ್ಮಕ ಮಾದರಿಯಲ್ಲಿರುವುದರಿಂದ ಬರವಣಿಗೆ ಉತ್ಕöÈಷ್ಟವಾದ ಗುಣಮಟ್ಟದ್ದಾಗಿರಬೇಕು.   ಈ ಎಲ್ಲಾ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ಕಾರ್ಯತಂತ್ರವನ್ನು ರೂಪಿಸಬೇಕು. ಈ ಸಲಹೆಗಳ ಅನುಸಾರ ಸಿದ್ಧತೆಯಿರಲಿ:

  • ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು.
  • ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆ ಅತ್ಯಗತ್ಯ.
  • ಗೂಗಲ್ ಮತ್ತು ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.
  • ಕೆಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆಯಿರಬೇಕು.
  • ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.

ಪರಿಣಾಮಕಾರಿ ಅಧ್ಯಯನದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

5. ನಾನು ಬಿ.ಎಸ್ಸಿ, ಬಿ.ಇಡಿ ಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ನಂತರ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಎಂ.ಎಸ್ಸಿ ಮಾಡಿರುತ್ತೇನೆ. ಎನ್ಇಟಿ ತಯಾರಿ ಬಗ್ಗೆ ತಿಳಿಸಿ.

ನೆಟ್ ಪರೀಕ್ಷೆಯಲ್ಲಿ ಒಟ್ಟು ಎರಡು ಪ್ರಶ್ನೆ ಪತ್ರಿಕೆಗಳಿರುತ್ತದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಒಟ್ಟು ೧೫೦ ಪ್ರಶ್ನೆಗಳಿರುತ್ತದೆ (೩೦೦ ಅಂಕಗಳು). ಮೊದಲನೇ ಪತ್ರಿಕೆ ಭೋಧನೆ/ ಸಂಶೋಧನಾ ಕ್ರಮ, ಅಭಿರುಚಿ ಇತ್ಯಾದಿ ಕುರಿತದ್ದಾಗಿದ್ದು, ಎರಡನೇ ಪತ್ರಿಕೆ ನೀವು ಭೋಧಿಸುವ ವಿಷಯಕ್ಕೆ ಸಂಬAಧಪಟ್ಟಿರುತ್ತದೆ. ಬಹುತೇಕ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ. ವಿಷಯಸೂಚಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ.

ಈ ಸಲಹೆಗಳನ್ನು ಗಮನಿಸಿ:

  • ಈ ಪರೀಕ್ಷೆಗಳು ಸ್ಪರ್ಧಾತ್ಮಕವಾಗಿರುತ್ತದೆ.  ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
  • ವಿಷಯಸೂಚಿಯ ಪ್ರಕಾರ ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ  ಮಾಹಿತಿಯನ್ನು ಸಂಗ್ರಹಿಸಿ.  
  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
  • ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
  • ಜೊತೆಗೆ ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

6. ಸರ್, ನಾನು ಬಿಕಾಂ ಮುಗಿಸಿ, ಎಂಬಿಎ ಮಾಡಲು ಪಿಜಿಸಿಇಟಿ ಬರೆದಿದ್ದೇನೆ. ನನಗೆ ಎಲ್ಎಲ್ಬಿ ಮತ್ತು ಎಂಬಿಎ ಎರಡರಲ್ಲಿಯೂ ಆಸಕ್ತಿ ಇದ್ದು, ಭವಿಷ್ಯವನ್ನು ರೂಪಿಸಿಕೊಳ್ಳಲು ಯಾವುದು ಸೂಕ್ತವೆಂದು ತಿಳಿಸಿ. ಸಂಜೆ ಕಾಲೇಜು ಮೂಲಕ ಎಲ್ಎಲ್ಬಿ ಮಾಡಬಹುದೇ?

ನೀವು ಪರಿಶೀಲಿಸುತ್ತಿರುವ ಎರಡೂ ಕೋರ್ಸ್ ಸಂಬAಧಿತ ವೃತ್ತಿಗಳ ಯಶಸ್ಸಿಗೆ ಬೇಕಾಗುವ ಸ್ವಾಭಾವಿಕ ಪ್ರತಿಭೆ ಮತ್ತು ಕೌಶಲಗಳು ವಿಭಿನ್ನ. ಮೇಲ್ನೋಟಕ್ಕೆ, ವೃತ್ತಿಯ ಅವಕಾಶಗಳ ದೃಷ್ಟಿಯಿಂದ ಎಂಬಿಎ ಮಾಡುವುದು ಒಳ್ಳೆಯದು. ಹಾಗೂ, ನಮಗಿರುವ ಮಾಹಿತಿಯಂತೆ, ಎಲ್‌ಎಲ್‌ಬಿ (ರೆಗ್ಯುಲರ್) ಕೋರ್ಸ್ಗಳಿಗೆ ಮಾತ್ರ ಬಾರ್ ಕೌಂಸಿಲ್ ಮಾನ್ಯತೆಯಿರುತ್ತದೆ

7. ನಾನು ಬಿ.ಎಸ್ಸಿ, ಬಿ.ಇಡಿ ಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ನಂತರ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಎಂ.ಎಸ್ಸಿ ಮಾಡಿರುತ್ತೇನೆ. ಎನ್ಇಟಿ ತಯಾರಿ ಬಗ್ಗೆ ತಿಳಿಸಿ.

ನೆಟ್ ಪರೀಕ್ಷೆಯಲ್ಲಿ ಒಟ್ಟು ಎರಡು ಪ್ರಶ್ನೆ ಪತ್ರಿಕೆಗಳಿರುತ್ತದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಒಟ್ಟು ೧೫೦ ಪ್ರಶ್ನೆಗಳಿರುತ್ತದೆ (೩೦೦ ಅಂಕಗಳು). ಮೊದಲನೇ ಪತ್ರಿಕೆ ಭೋಧನೆ/ ಸಂಶೋಧನಾ ಕ್ರಮ, ಅಭಿರುಚಿ ಇತ್ಯಾದಿ ಕುರಿತದ್ದಾಗಿದ್ದು, ಎರಡನೇ ಪತ್ರಿಕೆ ನೀವು ಭೋಧಿಸುವ ವಿಷಯಕ್ಕೆ ಸಂಬAಧಪಟ್ಟಿರುತ್ತದೆ. ಬಹುತೇಕ ಪ್ರಶ್ನೆಪತ್ರಿಕೆಗಳು ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿರುತ್ತದೆ. ವಿಷಯಸೂಚಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ.

ಈ ಸಲಹೆಗಳನ್ನು ಗಮನಿಸಿ:

ಈ ಪರೀಕ್ಷೆಗಳು ಸ್ಪರ್ಧಾತ್ಮಕವಾಗಿರುತ್ತದೆ.  ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

ವಿಷಯಸೂಚಿಯ ಪ್ರಕಾರ ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ  ಮಾಹಿತಿಯನ್ನು ಸಂಗ್ರಹಿಸಿ.  

ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.

ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ. ಜೊತೆಗೆ ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

8. ನಾನು ಈ ವರ್ಷ ಪಿಯುಸಿ ಮುಗಿಸುತ್ತಿದ್ದು ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ಬೆಂಗಳೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸೀಟ್ ಪಡೆಯಲು ನೀಟ್ ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಪಡೆಯಬೇಕು ತಿಳಿಸಿ.

ಈ ವರ್ಷದ ನೀಟ್ ಪರೀಕ್ಷೆಂiÀi  ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಭೌತಶಾಸ್ತç, ರಸಾಯನ ಶಾಸ್ತç ಮತ್ತು ಜೀವಶಾಸ್ತç ವಿಭಾಗಗಳಿಂದ ಕೆಲವು ವಿಷಯಗಳನ್ನು ತೆಗೆದು ಹಾಕಲಾಗಿದೆ ಹಾಗೂ ಕೆಲವು ವಿಷಯಗಳನ್ನು ಸೇರಿಸಲಾಗಿದೆ. ಒಟ್ಟಾರೆ, ಕಳೆದ ವರ್ಷ ೯೭ ಅಧ್ಯಾಯಗಳಿದು,್ದ ಈ ವರ್ಷದ ಪರೀಕ್ಷೆಗೆ ೭೯ ಅಧ್ಯಾಯಗಳಿವೆ ಎಂದು ತಿಳಿಸಲಾಗಿದೆ. ಹಾಗಾಗಿ, ಈ ವರ್ಷದ ರ‍್ಯಾಂಕ್ ಮತ್ತು ಅಂಕಗಳಲ್ಲಿ ವ್ಯತ್ಯಾಸಗಳಾಗುವ ನಿರೀಕ್ಷೆಯಿದ್ದು, ಸರ್ಕಾರಿ ಕಾಲೇಜುಗಳ ಕಟ್ ಆಪ್ ರ‍್ಯಾಂಕ್ ಅನ್ನು ನಿಖರವಾಗಿ ಅಂದಾಜು ಮಾಡುವುದು ಕಷ್ಟಸಾಧ್ಯ. ಆದರೂ, ಅಖಿಲ ಭಾರತ ಮಟ್ಟದ ಈ ಪರೀಕ್ಷೆಯಲಿ,್ಲ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ೬೫೦ ಅಂಕಗಳನ್ನು ಪಡೆದರೆ, ಸರ್ಕಾರಿ ಕಾಲೇಜುಗಳಲ್ಲಿ ಸೀಟ್ ಸಿಗಬಹುದು.

ಆದ್ದರಿಂದ, ಪರಿಷ್ಕರಿಸಿದ ಪಠ್ಯಕ್ರಮವನ್ನು ಅರಿತು, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ. ಶುಭಹಾರೈಕೆಗಳು. ಪಠ್ಯಕ್ರಮದ ವಿವರಗಳಿಗಾಗಿ ಗಮನಿಸಿ:

https://www.nmc.org.in/MCIRest/open/getDocument?path=/Documents/Public/Portal/LatestNews/NEET%20UG%202024_Approved_Final.pdf

9. ನಾನು ಕೆಎಎಸ್ ಪರೀಕ್ಷೆಗೆ ತಯಾರಾಗುತ್ತಿದ್ದೀನಿ. ನನಗೆ ಯಾವ ರೀತಿಯಾಗಿ ಓದಬೇಕು ತಿಳಿಯುತ್ತಿಲ್ಲ. ನಿಮ್ಮ ಸಲಹೆ ನೀಡಿ.

ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗೆ ಈ ಸಲಹೆಗಳನ್ನು ಗಮನಿಸಿ:

  • ಪದವಿ ಕೋರ್ಸ್ಗಳಿಗೆ ಮಾಡುವ ಅಧ್ಯಯನಕ್ಕೂ ಕೆಎಎಸ್ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.
  • ಪರೀಕ್ಷೆಯ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಾಗಬಹುದು.
  • ಕರ್ನಾಟಕ ರಾಜ್ಯದ ಇತಿಹಾಸ, ಭೂಗೋಳ, ಯೋಜನೆಗಳು, ಆರ್ಥಿಕ ಸ್ಥಿತಿ ಮತ್ತು ಪ್ರಸ್ತುತ ವಿದ್ಯಮಾನಗಳು ಮುಂತಾದ ವಿಷಯಗಳನ್ನು ಕೂಲಂಕಷವಾಗಿ ಓದಿ, ಅರ್ಥೈಸಿಕೊಳ್ಳಬೇಕು.
  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
  • ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೊಗಳನ್ನು ವೀಕ್ಷಿಸಿ.
  • ಸಾಮಾಜಿಕ ತಾಲತಾಣದಿಂದ ದೂರವಿದ್ದರೆ ಏಕಾಗ್ರತೆ ಸುಲಭ.
  • ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ.

ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

10. ನಾನು ಬಿ.ಎಸ್ಸಿ, ಬಿ.ಇಡಿ ಮಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ನಂತರ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣದ ಮೂಲಕ ಎಂ.ಎಸ್ಸಿ ಮಾಡಿರುತ್ತೇನೆ. ಎನ್‌ಇಟಿ ತಯಾರಿ ಬಗ್ಗೆ ತಿಳಿಸಿ.

11. ಕನ್ನಡದಲ್ಲಿ ಸಹಾಯಕ ಪ್ರಾಧ್ಯಾಪಕರಾಗಬೇಕಾದರೆ ನನ್ನ ತಯಾರಿ ಹೇಗೆ ಇರಬೇಕು?

ಉತ್ತಮ ಸಹಾಯಕ ಪ್ರಾಧ್ಯಾಪಕರಾಗಲು ವಿಷಯದ ಕುರಿತ ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ಈ ವೃತ್ತಿಯನ್ನು ಅನುಸರಿಸಬಹುದು. ಎಂಎ (ಕನ್ನಡ) ದಲ್ಲಿ ಕನಿಷ್ಠ ಶೇ ೫೫ ಅಂಕಗಳನ್ನು ಪಡೆದು, ಎನ್‌ಇಟಿ (ರಾಷ್ಟಿçÃಯ ಅರ್ಹತಾ ಪರೀಕ್ಷೆ) ಅಥವಾ ಕೆಸ್‌ಇಟಿ (ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ) ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.  ಎನ್‌ಇಟಿ /ಕೆಸ್‌ಇಟಿ ಪರೀಕ್ಷೆಯಲ್ಲಿ ಒಟ್ಟು ಎರಡು ಪ್ರಶ್ನೆ ಪತ್ರಿಕೆಗಳಿರುತ್ತದೆ. ಮೂರು ಗಂಟೆಗಳ ಅವಧಿಯ ಈ ಪರೀಕ್ಷೆಯಲ್ಲಿ ಒಟ್ಟು ೧೫೦ ಪ್ರಶ್ನೆಗಳಿರುತ್ತದೆ (೩೦೦ ಅಂಕಗಳು). ಮೊದಲನೇ ಪತ್ರಿಕೆ ಭೋಧನೆ/ ಸಂಶೋಧನಾ ಕ್ರಮ, ಅಭಿರುಚಿ ಇತ್ಯಾದಿ ಕುರಿತದ್ದಾಗಿದ್ದು, ಎರಡನೇ ಪತ್ರಿಕೆ ನೀವು ಭೋಧಿಸುವ ವಿಷಯಕ್ಕೆ ಸಂಬAಧಪಟ್ಟಿರುತ್ತದೆ. ವಿಷಯಸೂಚಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಜಾಲತಾಣದಲ್ಲಿ ಲಭ್ಯ.

ಈ ಸಲಹೆಗಳನ್ನು ಗಮನಿಸಿ:

  • ಈ ಪರೀಕ್ಷೆಗಳು ಸ್ಪರ್ಧಾತ್ಮಕವಾಗಿರುತ್ತದೆ.  ಹಾಗಾಗಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
  • ವಿಷಯಸೂಚಿಯ ಪ್ರಕಾರ ಅಗತ್ಯವಾದ ಪುಸ್ತಕಗಳು ಮತ್ತು ಇನ್ನಿತರ ಅಧ್ಯಯನದ  ಮಾಹಿತಿಯನ್ನು ಸಂಗ್ರಹಿಸಿ.  
  • ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು ಮಾಡುತ್ತಿರಬೇಕು.
  • ಪರೀಕ್ಷೆಯಲ್ಲಿ ಯಶಸ್ವಿಯಾಗಲು ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಪುನರಾವರ್ತನೆ ಮತ್ತು ಉತ್ಕöÈಷ್ಟವಾದ ಬರವಣಿಗೆ ಇರಬೇಕು. ನಿಮ್ಮ ಬರವಣಿಗೆ ಕಾಗುಣಿತ, ವ್ಯಾಕರಣ ದೋಷ ಮುಕ್ತವಾಗಿರಲಿ; ಓದಲು ಸುಲಭವಾಗಿರಲಿ.
  • ಜೊತೆಗೆ ಸಮಯದ ನಿರ್ವಹಣೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

12. ನಾನು ಈ ವರ್ಷ ಬಿ.ಎಸ್ಸಿ ಮುಗಿಸುತ್ತಿದ್ದು ಮುಂದೆ ಇಂಗ್ಲಿಷ್ ಶಿಕ್ಷಕಿಯಾಗುವ ಆಸೆಯಿದೆ. ಬಿ.ಎಸ್ಸಿ ನಂತರ ಯಾವ ಕೋರ್ಸ್ ಮಾಡಬೇಕು?

ಉತ್ತಮ ಶಿಕ್ಷಕರಾಗಲು ವಿಷಯದ ಕುರಿತು ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ಈ ವೃತ್ತಿಯನ್ನು ಅನುಸರಿಸಬಹುದು.

ಬಿ.ಎಸ್ಸಿ ನಂತರ ಎಂಎ (ಇಂಗ್ಲಿಷ್) ಮಾಡಿ ರಾಷ್ಟಿçÃಯ/ರಾಜ್ಯ ಮಟ್ಟದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ವಲಯದ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಬಹುದು. ವೃತ್ತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಗಳಿಸಲು,  ಪಿ.ಎಚ್‌ಡಿ (ಇಂಗ್ಲಿಷ್) ಮಾಡಿ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಬಹುದು. ಪಿ.ಎಚ್‌ಡಿ ಪದವಿಯನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ದೊರಕುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/Mb4PKUb35_Q

13. ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದು, ಮುಂದೆ ಎಂಜಿನಿಯರಿAಗ್ (ಬಯೋಟೆಕ್) ಮಾಡಬೇಕು? ಕೆಸಿಇಟಿ ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಬರಬೇಕು? ಹಾಗೂ ಎಂಜಿನಿಯರಿAಗ್ ನಂತರದ ಅವಕಾಶಗಳೇನು?

ಬಯೋಟೆಕ್ನಾಲಜಿ ಕ್ಷೇತ್ರ ಕ್ಷಿಪ್ರವಾಗಿ ಅಭಿವೃದ್ಧಿಯಾಗುತ್ತಿದೆ. ಎಂಜಿನಿಯರಿAಗ್ ನಂತರ  ಫಾರ್ಮಾಸ್ಯುಟಿಕಲ್, ಆಹಾರ ಉತ್ಪಾದನೆ, ಸಂಸ್ಕರಣೆ ಮತ್ತು ಸುರಕ್ಷತೆ,  ರಸಾಯನ ಶಾಸ್ತ್ರ, ಕೃಷಿ, ಪರಿಸರ ನಿಯಂತ್ರಣ, ತ್ಯಾಜ್ಯ ನಿರ್ವಹಣೆ, ಇಂಧನ, ಜೆನೆಟಿಕ್ಸ್, ಸಂತಾನೋತ್ಪತ್ತಿ, ತಂತ್ರಜ್ಞಾನ ಬೆಂಬಲ, ಸಂಶೋಧನೆ, ಪ್ರಯೋಗಶಾಲೆಗಳು ಮುಂತಾದ ಕ್ಷೇತ್ರಗಳಲ್ಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಪಿಯುಸಿ ನಂತರ ಬಿಟೆಕ್ (ಬಯೋಟೆಕ್ನಾಲಜಿ) ಮಾಡಿ ಕ್ಯಾಂಪಸ್ ನೇಮಕಾತಿಯ ಮೂಲಕ ವೃತ್ತಿಯನ್ನು ಅರಸಬಹುದು ಅಥವಾ ಉನ್ನತ ಶಿಕ್ಷಣಕ್ಕಾಗಿ ಎಂಟೆಕ್ ಮಾಡಬಹುದು. ನಿಮ್ಮ ಮುಂದಿನ ವೃತ್ತಿಯೋಜನೆಯ ಬಗ್ಗೆ ಸ್ಪಷ್ಟತೆಯಿದ್ದಲ್ಲಿ, ಪಿಯುಸಿ ನಂತರ ಇಂಟಿಗ್ರೇಟೆಡ್ ಎಂಟೆಕ್ (ಬಯೋಟೆಕ್ನಾಲಜಿ) ಕೂಡಾ ಮಾಡಬಹುದು.

ಪಿಯುಸಿ ಮತ್ತು ಕೆಸಿಇಟಿ ಅಂಕಗಳು ಮತ್ತು ರ‍್ಯಾಂಕಿAಗ್ ಆಧಾರದ ಮೇಲೆ, ರಾಜ್ಯದ ಕಾಲೇಜುಗಳಲ್ಲಿ ಲಭ್ಯವಿರುವ ಎಂಜಿನಿಯರಿAಗ್ ಸೀಟ್ ಹಂಚಿಕೆಯಾಗುತ್ತದೆ. ಹಾಗಾಗಿ, ಕೆಸಿಇಟಿ ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸಬೇಕೆಂದು ನಿಖರವಾಗಿ ಅಂದಾಜಿಸುವುದು ಸಾಧ್ಯವಿಲ್ಲ. ಶುಭಹಾರೈಕೆಗಳು. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

14. ಸರ್, ನಾನು ಡಿಪ್ಲೊಮಾ (ಆರೋಗ್ಯ ಪರೀಕ್ಷಕ) ಕೋರ್ಸ್ ಮುಗಿಸುತ್ತಿದ್ದು ಭವಿಷ್ಯದ ದೃಷ್ಟಿಯಿಂದ ಮುಂದೆ ಯಾವ ಕೋರ್ಸ್ ಮಾಡಬೇಕು?

ಡಿಪ್ಲೊಮಾ (ಆರೋಗ್ಯ ಪರೀಕ್ಷಕ) ಕೋರ್ಸ್ ನಂತರ ನಿಮ್ಮ ಆಸಕ್ತಿಯ ಅನುಸಾರ ಬಿ.ಎಸ್ಸಿ (ಪ್ಯಾರಾ ಮೆಡಿಕಲ್ ಸೇರಿದಂತೆ ವೈವಿಧ್ಯಮಯ ಆಯ್ಕೆಗಳು) ಮಾಡುವುದು ಸೂಕ್ತ. ಅಥವಾ, ಡಿಪ್ಲೊಮಾ ನಂತರ ವೃತ್ತಿಯನ್ನು ಆರಂಭಿಸಿ, ಸಂಬAಧಪಟ್ಟ ವಿಷಯದಲ್ಲಿ ಅರೆಕಾಲಿಕ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು ಮಾಡಬಹುದು.

15. ಸರ್, ನಾನು ಐಟಿಐ ನಂತರ ಪದವಿ ಮತ್ತು ಬಿ.ಇಡಿ ಕೋರ್ಸ್ ಮಾಡಿದ್ದೀನಿ. ನಾನು ಎಚ್‌ಎಸ್‌ಟಿಆರ್ ಪರೀಕ್ಷೆ ಬರೆದು ಸರಕಾರಿ ಉದ್ಯೋಗ ಮಾಡಬಹುದೇ?

ನೀವು ಪದವಿ ಮತ್ತು ಬಿ.ಇಡಿ ಕೋರ್ಸ್ ಮುಗಿಸಿದ ನಂತರ ಎಚ್‌ಎಸ್‌ಟಿಆರ್ ಪರೀಕ್ಷೆಯ ಮೂಲಕ ಪ್ರೌಢಶಾಲೆಯ ಶಿಕ್ಷಕರಾಗಲು ಅರ್ಹತೆಯಿರುತ್ತದೆ.

16. ನಾನು ಬಿಎ (ಸಮಾಜ ವಿಜ್ಞಾನ) ಪೂರ್ಣಗೊಳಿಸಿದ್ದು, ಸ್ನಾತಕೋತ್ತರ ಇಂಗ್ಲಿಷ್ ಪದವಿಯಲ್ಲಿ ದೂರ ಶಿಕ್ಷಣದ ಮೂಲಕ ಮಾಡಬೇಕೆಂದುಕೊAಡಿದ್ದೇನೆ. ಜೊತೆಗೆ ಬಿ.ಇಡಿ (ರೆಗ್ಯುಲರ್) ಮಾಡುತ್ತಿದ್ದೇನೆ. ದೂರಶಿಕ್ಷಣದ ಪದವಿ ಸರ್ಕಾರಿ ಉದ್ಯೋಗಕ್ಕೆ ಮಾನ್ಯತೆಯಿರುತ್ತದೆಯೇ? ನಾನು ಪ್ರೌಢಶಾಲಾ ಶಿಕ್ಷಕನಾಗಲು ಅರ್ಹನೇ?

ನಮ್ಮ ಅಭಿಪ್ರಾಯದಂತೆ ಪದವಿ ಕೋರ್ಸ್ ಮತ್ತು ಬಿ.ಇಡಿ ಕೋರ್ಸ್ ನಂತರ ಪ್ರೌಢಶಾಲೆಯ ಶಿಕ್ಷಕರಾಗಲು ಅರ್ಹತೆಯಿರುತ್ತದೆ. ಆದರೆ, ನೀವು ಬಿಎ/ಸ್ನಾತಕೋತ್ತರ ಪದವಿಯಲ್ಲಿ ಓದಿರುವ ವಿಷಯವನ್ನು ಬೋಧನಾ ವಿಷಯವನ್ನಾಗಿ ಬಿ.ಇಡಿ ಕೋರ್ಸ್ನಲ್ಲಿ ಓದಿರಬೇಕು. ಹಾಗೂ, ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ದೂರ ಶಿಕ್ಷಣ ಬ್ಯೂರೊ, ಮಾನ್ಯತೆಯಿರುವ ಎಲ್ಲಾ ದೂರಶಿಕ್ಷಣ ಕೋರ್ಸ್ಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಅರ್ಹತೆಯಿರುತ್ತದೆ. ನೀವು  ಮಾಡಬೇಕೆಂದುಕೊAಡಿರುವ ದೂರ ಶಿಕ್ಷಣ ಕೋರ್ಸ್ ಮಾನ್ಯತೆಯ ಮಾಹಿತಿಗಾಗಿ ಗಮನಿಸಿ: https://deb.ugc.ac.in/