Q & A for Students – December 2022

Q1. ಬಿ.ಎಸ್ಸಿ ಓದಿ ಮುಗಿದಿದೆ. ಈಗ, ಎಂಸಿಎ ಮಾಡಬೇಕಾದರೆ ಹೇಗೆ ಸಿದ್ಧತೆ ಮಾಡಬೇಕು? ಓದಲು ಕಷ್ಟವಾಗಬಹುದೇ? ಇದರ ಬಗ್ಗೆ ಮಾಹಿತಿ ಕೊಡಿ.

ನೀವು ಪಿಯುಸಿ/ಪದವಿಯಲ್ಲಿ ಗಣಿತವನ್ನು ಓದಿ, ಕನಿಷ್ಠ ಶೇ 50 ಅಂಕಗಳನ್ನು ಗಳಿಸಿದ್ದರೆ, ಎಂಸಿಎ ಮಾಡಿ ಸಾಫ್ಟ್ವೇರ್ ವೃತ್ತಿಯನ್ನು ಅರಸಬಹುದು. ಈಗ, ಎಂಸಿಎ ಎರಡು ವರ್ಷದ ಕೋರ್ಸ್ ಆಗಿರುತ್ತದೆ. ಮೊದಲಿಗೆ, ನೀವು ಯಾವ ವಿಶ್ವವಿದ್ಯಾಲಯದಲ್ಲಿ ಎಂಸಿಎ ಮಾಡಬೇಕೆಂದು ನಿರ್ಧರಿಸಿ, ಅದಕ್ಕೆ ಅನುಗುಣವಾಗುವ ಪ್ರವೇಶ ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಂಡು, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಗಣಿತ, ಸಂಖ್ಯಾಶಾಸ್ತ್ರ ಮತ್ತು ಕಂಪ್ಯೂಟರ್ ಸಿದ್ಧಾಂತಗಳ ಬಗ್ಗೆ ಪರಿಣತಿಯಿರಬೇಕು. ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಸ್ವತಂತ್ರವಾಗಿ ತಯಾರಾಗಬಹುದು ಅಥವಾ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು.

ಆತ್ಮವಿಶ್ವಾಸ, ಪರಿಶ್ರಮ ಮತ್ತು ಪರಿಣಾಮಕಾರಿ ಕಾರ್ಯತಂತ್ರವಿದ್ದರೆ, ಯಾವುದೇ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು. ಪರಿಣಾಮಕಾರಿ ಓದುವಿಕೆಯ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

Q2. ಎಂಜಿನಿಯರಿAಗ್ ಕೋರ್ಸ್ನಲ್ಲಿ ಯಾವುದು ಉತ್ತಮ? ಸಿಎಸ್‌ಅಥವಾ ಐಎಸ್‌ಇ?

ಸಿಎಸ್‌ಇ (ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್) ಮತ್ತು ಐಎಸ್‌ಇ (ಇನ್‌ಫರ್ಮೇಷನ್ ಸೈನ್ಸ್ ಎಂಜಿನಿಯರಿಂಗ್) ಎರಡೂ ವಿಭಾಗಗಳಲ್ಲಿ ಸಾಫ್ಟ್ವೇರ್ ಕಲಿಕೆಯಾಗುತ್ತದೆ. ಹಾಗಾಗಿ, ಎರಡೂ ವಿಭಾಗಗಳು ಬೇಡಿಕೆಯಲ್ಲಿವೆ. ಸಿಎಸ್‌ಇ ವಿಭಾಗದಲ್ಲಿ ಸಾಫ್ಟ್ವೇರ್ ಜೊತೆಗೆ ಹಾರ್ಡ್ವೇರ್ ಕಲಿಕೆಯೂ ಆಗುವುದರಿಂದ, ಸಿಎಸ್‌ಇ ವಿಭಾಗಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.

Q3. ನಾನು ಪ್ರಥಮ ವರ್ಷದ ಬಿಸಿಎ ಕಲಿಯುತ್ತಿದ್ದು, ಕೆಲವೊಂದು ಸರ್ಕಾರಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ್ದೇನೆ. ಹಾಗಾಗಿ, ಕಾಲೇಜಿನ ಕಲಿಕೆಯ ಜೊತೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿ ತಯಾರಿ ನಡೆಸಬೇಕೆಂದು ಮಾಹಿತಿ ನೀಡಿ, ಸರ್.

ಉತ್ಸಾಹಭರಿತ ಮನಸ್ಸು, ಗುರಿ ಸೇರುವ ಸಂಕಲ್ಪ, ನಿಮ್ಮ ಸಾಮರ್ಥ್ಯದಲ್ಲಿ ಅಚಲವಾದ ಆತ್ಮವಿಶ್ವಾಸ ಮತ್ತು ಪರಿಣಾಮಕಾರಿ ಕಾರ್ಯತಂತ್ರವಿದ್ದರೆ, ನಿಮ್ಮನ್ನು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಜೊತೆಗೆ, ಈ ಸಲಹೆಗಳನ್ನು ಅನುಸರಿಸಿ.

 • ಪರೀಕ್ಷೆಯ ಮಾದರಿ, ಪಠ್ಯಕ್ರಮ ಇತ್ಯಾದಿಗಳನ್ನು ಗಮನಿಸಿ.
 • ಪರೀಕ್ಷೆಯಲ್ಲಿ ಅಪೇಕ್ಷಿತ ಶೇಕಡಾವಾರು ಗುರಿಯನ್ನು ನಿರ್ಧರಿಸಿ.
 • ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
 • ಅಣಕು ಪರೀಕ್ಷೆಗಳನ್ನು ಪ್ರತ್ಯೇಕವಾಗಿ ಮತ್ತು ಸಹಪಾಟಿಗಳೊಡನೆ ಅಭ್ಯಾಸ ಮಾಡಿ.
 • ಪ್ರಶ್ನೆಪತ್ರಿಕೆಯಲ್ಲಿನ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ.
 • ಖಚಿತವಾಗಿ ತಿಳಿದಿರುವ ಪ್ರಶ್ನೆಗಳು/ವಿಭಾಗಗಳನ್ನು ಮೊದಲು ಉತ್ತರಿಸಿ.
 • ಪ್ರಶ್ನೆಗಳನ್ನು ಉತ್ತರಿಸುವಾಗ ವೇಗ ಮತ್ತು ನಿಖರತೆಯಲ್ಲಿ ಸಮತೋಲನವಿರಲಿ.
 • ತಪ್ಪುದಾರಿಗೆಳೆಯಬಹುದಾದ ತಂತ್ರಗಾರಿಕೆಯ ಪ್ರಶ್ನೆಗಳ ಬಗ್ಗೆ ಎಚ್ಚರವಿರಲಿ.
 • ಪರೀಕ್ಷೆಯ ದಿನದಂದು ಆದಷ್ಟು ಶಾಂತಚಿತ್ತದಿಂದಿರುವುದರಿಂದ ಒತ್ತಡ ಕಡಿಮೆಯಾಗಿ, ಫಲಿತಾಂಶ ಉತ್ತಮವಾಗುತ್ತದೆ.
 • ನಿಮ್ಮ ಆಸಕ್ತಿ, ಅಭಿರುಚಿ ಕುರಿತ ಪ್ರಶ್ನೆಗಳನ್ನು ಪ್ರಾಮಾಣಿಕವಾಗಿ ಉತ್ತರಿಸಿ.
 • ತಿಳಿಯದ ಬಹು ಆಯ್ಕೆ ಪ್ರಶ್ನೆಗಳನ್ನು ಉತ್ತರಿಸುವಾಗ, ಖಚಿತವಾದ ತಪ್ಪು ಆಯ್ಕೆಗಳನ್ನು ತೆಗೆದುಹಾಕಿ ಜಾಣತನದಿಂದ ಊಹಿಸಿ.

ಈಗ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದು. ಕಾರ್ಯತಂತ್ರಗಳನ್ನು ರೂಪಿಸುವ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/how-to-succeed-in-entrance-exams/

Q4. ಬಿಇ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಮುಗಿಸಿದ್ದೇನೆ. ಬಿ.ಇಡಿ ಮಾಡಿ ಶಿಕ್ಷಕ ವೃತ್ತಿಯನ್ನು ಅರಸಬೇಕೆಂದಿದ್ದೇನೆ. ಇದಕ್ಕೆ, ಮತ್ತೆ ಬಿಎ ಮಾಡುವ ಅಗತ್ಯವಿದೆಯೇ?

ಎಂಜಿನಿಯರಿAಗ್ ಪದವೀಧರರು ಬಿ.ಇಡಿ ಮಾಡುವ ಅಗತ್ಯವಿಲ್ಲದೆ ಕರ್ನಾಟಕ ಸರ್ಕಾರದ ಟಿಇಟಿ ಪರೀಕ್ಷೆಯ ಮುಖಾಂತರ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಭೋಧಿಸುವ ವ್ಯವಸ್ಥೆ ಈಗ ಜಾರಿಯಾಗುತ್ತಿದೆ. ಅನ್ಯ ವಿಷಯಗಳನ್ನು ಭೋಧಿಸುವ ಆಸಕ್ತಿಯಿದ್ದರೆ, ಆ ವಿಷಯಗಳನ್ನು ಪದವಿಯಲ್ಲಿ ಓದಿರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.schooleducation.kar.nic.in/index.html

Q5. ನಾನು ಪ್ರಸ್ತುತ ಬಿಎ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ಸಿವಿಲ್ ಸರ್ವಿಸ್ ಮಾಡುವ ಗುರಿಯಿದೆ. ಆದರೆ ನಾನು ಪ್ರೈಮರಿ ಶಾಲೆಯಿಂದ ಓದಿದ್ದು ಕನ್ನಡ ಮಾಧ್ಯಮದಲ್ಲಿ. ಹಾಗಾಗಿ ಇಂಗ್ಲಿಷ್ ಭಾಷೆ ಕಷ್ಟವೆನಿಸುತ್ತದೆ. ಅಲ್ಲದೆ, ಕಲಾ ವಿಭಾಗದ ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ಸು ಗಳಿಸುತ್ತಿರುವುದು ಕಡಿಮೆ ಅಂತಿದ್ದಾರೆ. ದಯವಿಟ್ಟು ಪರಿಹಾರ ಸೂಚಿಸಿ.

ಕನ್ನಡ ಮಾಧ್ಯಮದಲ್ಲಿ ಕಲಿತ ಕಲಾ ವಿಭಾಗದ ಪದವೀಧರರು ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಪಡೆದು ಯಶಸ್ವಿಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ, ಯುಪಿಎಸ್‌ಸಿ ಆಯೋಜಿಸುವ ನಾಗರಿಕ ಸೇವಾ ಪರೀಕ್ಷೆಗೆ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.

ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಮಾಹಿತಿಯುಳ್ಳ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ. ಐಎಎಸ್/ಕೆಎಎಸ್ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಇಂಗ್ಲಿಷ್ ಕಲಿಕೆ ಕುರಿತ ಮಾಹಿತಿಗಾಗಿ ಗಮನಿಸಿ: https://www.prajavani.net/education-career/education/how-to-learn-english-v-pradeep-kumar-column-896542.html

Q6. ಸರ್, ಈಗ ಎಂಕಾಂ ಮುಗಿಸಿ ಕೆಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಒಂದು ವರ್ಷವಾದರೂ ಪರೀಕ್ಷೆಯ ಅಧಿಸೂಚನೆಯೇ ಆಗಿಲ್ಲ. ನಾನು ಬಿ.ಇಡಿ ಮಾಡಬೇಕೇಂದುಕೊAಡಿದ್ದೇನೆ. ಇದರಿಂದಾಗುವ ಅವಕಾಶಗಳನ್ನು ತಿಳಿಸಿ; ಇನ್ನೊಂದೆಡೆ ಕೆಲಸ ಮಾಡಬೇಕು ಅನಿಸುತ್ತದೆ. ಆದ್ದರಿಂದ, ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಇದರ ಬಗ್ಗೆ ಮಾಹಿತಿ ತಿಳಿಸಿ ಕೊಡಿ ಸರ್.

ನೀವು ಪರಿಶೀಲಿಸುತ್ತಿರುವ ಎರಡೂ ಆಯ್ಕೆಗಳೂ ವಿಭಿನ್ನವಾಗಿವೆ. ಶಿಕ್ಷಕ ವೃತ್ತಿಗೂ ಕೆಎಎಸ್ ವೃತ್ತಿಗೂ ಅಗತ್ಯವಾದ ಜ್ಞಾನ, ಕೌಶಲ ಮತ್ತು ಮನೋಧೋರಣೆಗಳಲ್ಲಿ ಪ್ರಮುಖ ವ್ಯತ್ಯಾಸಗಳಿವೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ ಮತ್ತು ಅಭಿರುಚಿಗೆ ಯಾವ ವೃತ್ತಿ ಸೂಕ್ತವೆಂದು ಅರಿತು, ಅದರಂತೆ ವೃತ್ತಿಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸುಗಮವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

Q7. ಸರ್, ನಾನು ಬಿಕಾಂ ಪದವಿಯನ್ನು ಮುಗಿಸಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುವುದು ಉತ್ತಮವೇ ಅಥವಾ ಎಂಕಾA ಮಾಡುವುದು ಉತ್ತಮವೇ ಎನ್ನುವುದರ ಬಗ್ಗೆ ತಿಳಿಸಿಕೊಡಿ.

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕೋರ್ಸ್ ನಿರ್ಧಾರದ ಮುನ್ನ, ಯಾವ ವೃತ್ತಿ ನಿಮಗೆ ಯಶಸ್ಸು ಮತ್ತು ಬದುಕಿನಲ್ಲಿ ಸಂತೃಪ್ತಿಯನ್ನು ತಂದುಕೊಡಬಲ್ಲದು ಎನ್ನುವುದು ಮುಖ್ಯವಾಗುತ್ತದೆ. ವೃತ್ತಿಯ ಆಯ್ಕೆಯಾದ ಮೇಲೆ, ಮುಂದಿನ ಕೋರ್ಸ್/ಸ್ಪರ್ಧಾತ್ಮಕ ಪರೀಕ್ಷೆಯ ಆಯ್ಕೆ ಸುಲಭವಾಗುತ್ತದೆ. ಹಾಗೂ, ನೀವು ಪದವಿ ಮಾಡಿರುವುದರಿಂದ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಲೇ ಅರ್ಹತೆ ಸಿಗುತ್ತದೆ. ಹಾಗಾಗಿ, ಸರ್ಕಾರಿ ವಲಯವೇ ನಿಮ್ಮ ಧ್ಯೇಯವಾದರೆ, ಎಂಕಾA ಮಾಡುವುದರ ಬದಲು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಬಹುದೆನಿಸುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ಅಂಕಣದ ಮೂಲಕ ಸಂಪರ್ಕಿಸಿ.

Q8. ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಪಿಯುಸಿ ಮುಗಿದ ಮೇಲೆ ಫೊರೆನ್ಸಿಕ್ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಕೋರ್ಸ್ ಮಾಡುವ ಆಸೆ ಇದೆ. ಅದರೆ, ಹೇಗೆ ಮುಂದುವರಿಯಬೇಕು ಎಂದು ತಿಳಿಯುತ್ತಿಲ್ಲ. ಇದರ ಬಗ್ಗೆ ಮಾರ್ಗದರ್ಶನ ಮಾಡಿ.

ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು. ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್ ಮಾಡಬಹುದಾದ ಕಾಲೇಜುಗಳ ವಿವರಕ್ಕಾಗಿ ಗಮನಿಸಿ: https://collegedunia.com/bsc/forensic-science/karnataka-colleges

Q9. ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ಮುಂದೆ ಪ್ರಾಥಮಿಕ ಶಾಲಾ ಶಿಕ್ಷಕನಾಗಬೇಕೆಂದಿರುವೆ. ಅದಕ್ಕೆ ಮುಂದಿನ ಪದವಿ ಹಂತದಲ್ಲಿಯೇ ಯಾವ ರೀತಿ ತಯಾರಿ ನಡೆಸಬೇಕು ಎಂದು ತಿಳಿಸಿ? ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಕ್ರಿಯೆ, ಪ್ರಶ್ನೆಪತ್ರಿಕೆಯ ರಚನೆ ಹಾಗೂ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿ. ಜೊತೆಗೆ, ಯಾವ ಪುಸ್ತಕಗಳನ್ನು ಓದಬೇಕು ಎಂದು ತಿಳಿಸಿ?

ನೀವು ಶಾಲೆಯಲ್ಲಿ ಭೋಧಿಸಲು ಇಚ್ಛಿಸುವ ವಿಷಯವನ್ನು ಪದವಿಯಲ್ಲಿ ಓದಿರಬೇಕು. ಹಾಗಾಗಿ, ಆಸಕ್ತಿ, ಅಭಿರುಚಿಯಂತೆ, ಪದವಿ ಕೋರ್ಸ್ನ ವಿಷಯಗಳನ್ನು ನಿರ್ಧರಿಸಿ. ನೇಮಕಾತಿಗೆ ಅನ್ವಯವಾಗುವ ವಯೋಮಿತಿ, ವಿವಿಧ ತರಗತಿಗಳಿಗೆ ಅನ್ವಯವಾಗುವ ಕನಿಷ್ಠ ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷೆಯ ಸ್ವರೂಪ, ಪ್ರಶ್ನೆಪತ್ರಿಕೆಯ ರಚನೆ, ಆಯ್ಕೆಯ ಮಾನದಂಡ ಇತ್ಯಾದಿ ವಿವರಗಳಿಗೆ ಗಮನಿಸಿ: https://schooleducation.kar.nic.in/Prypdfs/GenCirculars/PryC&RKan23022022.pdf

Q10. ಬಿಎ (ಸೈಕಾಲಜಿ) ಮಾಡಿದ್ದೇನೆ. ಮದುವೆಯಾಗಿ, ಮಗುವಿದೆ. ಈಗ, ಮತ್ತೆ ಸೈಕಾಲಜಿಯಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬೇಕು ಎಂದಿದ್ದೇನೆ. ಹೇಗೆ ಮುಂದುವರಿಯಬೇಕು ಗೊತ್ತಾಗುತ್ತಿಲ್ಲ. ತಿಳಿಸಿ, ಸರ್.

ಮನ:ಶಾಸ್ತ್ರ (ಸೈಕಾಲಜಿ) ವಿಸ್ತಾರವಾದ ಕ್ಷೇತ್ರ. ಕ್ಲಿನಿಕಲ್ ಸೈಕಾಲಜಿ, ಕಾಗ್‌ನೈಟಿವ್ ಸೈಕಾಲಜಿ, ಆಕ್ಯುಪೇಷನಲ್ ಸೈಕಾಲಜಿ, ಎಜುಕೇಷನಲ್ ಸೈಕಾಲಜಿ, ಫೊರೆನ್ಸಿಕ್ ಸೈಕಾಲಜಿ ಸೇರಿದಂತೆ ಅನೇಕ ವಿಭಾಗಗಳಿವೆ. ನಿಮಗೆ ಆಸಕ್ತಿ, ಅಭಿರುಚಿಯಿರುವ ವಿಭಾಗವನ್ನು ಆಯ್ಕೆ ಮಾಡಿಕೊಂಡು ಆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ ಮಾಡಿ, ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳನ್ನು ನವೀಕರಿಸಿಕೊಂಡು ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

Q11. ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದು, ಮನೆಯವರ ಒತ್ತಾಯಕ್ಕೆ ಇದನ್ನು ತೆಗೆದುಕೊಂಡಿದ್ದೇನೆ. ನನಗೆ ಕ್ರಿಮಿನಾಲಜಿ ಮಾಡಬೇಕೆಂಬ ಆಸೆಯಿದೆ. ಯಾವ ಕಾಲೇಜುಗಳಲ್ಲಿ ಈ ಕೋರ್ಸ್ ಇದೆ. ಕೋರ್ಸ್ ಬಗ್ಗೆ ಮಾಹಿತಿ ನೀಡಬಹುದಾ?

ಅಪರಾಧ ಶಾಸ್ತ್ರದ (ಕ್ರಿಮಿನಾಲಜಿ) ಅಧ್ಯಯನದಲ್ಲಿ ಅಪರಾಧ, ನಡವಳಿಕೆಯ ಕಾರಣಗಳು ಮತ್ತು ತಡೆಗಟ್ಟುವಿಕೆ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಕಾನೂನು, ಮನೋವಿಶ್ಲೇಷಣೆ ಇತ್ಯಾದಿ ವಿಷಯಗಳಿರುತ್ತವೆ. ಮನ:ಶಾಸ್ತç, ವಿಧಿ ವಿಜ್ಞಾನ, ಸಮಾಜ ಶಾಸ್ತ್ರ, ಇವೆಲ್ಲವೂ ಅಪರಾಧ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು. ಅಪರಾಧ ಶಾಸ್ತ್ರದ ಪದವಿ ಕೋರ್ಸ್ಗಳನ್ನು ಸಾಮಾನ್ಯವಾಗಿ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಪಿಯುಸಿ ನಂತರ ಮಾಡಬಹುದು. ಈಗ ಅನುಷ್ಠಾನಗೊಳ್ಳುತ್ತಿರುವ ನೂತನ ಶಿಕ್ಷಣ ನೀತಿಯ ಅನುಸಾರ ಐಚ್ಛಿಕ ವಿಷಯವಾಗಿಯೂ ಅಧ್ಯಯನ ಮಾಡುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸ್ನಾತಕೋತ್ತರ ಪದವಿಯನ್ನು ಮಾಡುವುದು ಒಳ್ಳೆಯದು. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೋಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು. ಕಾಲೇಜುಗಳ ವಿವರಗಳಿಗಾಗಿ ಗಮನಿಸಿ: https://www.shiksha.com/humanities-social-sciences/colleges/criminology-colleges-karnataka

Q12. ನಾನು ಬಿ.ಎಸ್ಸಿ (ನರ್ಸಿಂಗ್) ಮುಗಿಸಿ ಕರ್ನಾಟಕ ನರ್ಸಿಂಗ್ ಕೌಂಸಿಲ್‌ಗೆ ನೋಂದಾಯಿಸಿಕೊAಡಿದ್ದೇನೆ. ಈಗ ಡಿಫಾರ್ಮಾ ಮಾಡುವ ಆಸೆ ಇದೆ. ಡಿಫಾರ್ಮಾ ಮಾಡಬಹುದಾದರೆ ಕರ್ನಾಟಕ ನರ್ಸಿಂಗ್ ಕೌಂಸಿಲ್‌ನೋಂದಣಿ ರದ್ದಾಗುತ್ತದೆಯೇ? ಇದರ ಬಗ್ಗೆ ಮಾಹಿತಿ ನೀಡಿ ಸರ್.

ನೀವು ಪರಿಶೀಲಿಸುತ್ತಿರುವ ಎರಡೂ ವೃತ್ತಿಗಳು ಆರೋಗ್ಯ ಕ್ಷೇತ್ರಕ್ಕೆ ಸಂಬAಧಿಸಿದ್ದರೂ ವೃತ್ತಿಯ ಅವಕಾಶಗಳು ಮತ್ತು ಸವಾಲುಗಳು ವಿಭಿನ್ನವಾಗಿವೆ. ಹಾಗಾಗಿ, ನೀವು ವೃತ್ತಿಯೋಜನೆಯನ್ನು ಮಾಡಿದರೆ ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ನೀವು ಡಿಫಾರ್ಮಾ ಮಾಡಬಹುದು; ನಮಗಿರುವ ಮಾಹಿತಿಯಂತೆ ಡಿಫಾರ್ಮಾ ಮಾಡುವುದರಿಂದ ನರ್ಸಿಂಗ್ ಕೌಂಸಿಲ್‌ನ ನೋಂದಣಿ ರದ್ದಾಗುವುದಿಲ್ಲ. ವೃತ್ತಿಯೋಜನೆ ಮಾಡುವ ಪ್ರಕ್ರಿಯೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

Q13. ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿ, ಹೈಡ್ರಾಲಿಕ್ಸ್ ಕ್ಷೇತ್ರದಲ್ಲಿ ಸಹಾಯಕ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೇನೆ. 16 ವರ್ಷದ ಅನುಭವವಿದೆ. ವೃತ್ತಿಗೆ ಅನುಕೂಲವಾಗುವ ಯಾವ ಕೋರ್ಸ್ಗಳನ್ನು ಮಾಡಬಹುದು?

ಹೈಡ್ರಾಲಿಕ್ಸ್ ಕ್ಷೇತ್ರದಲ್ಲಿ ಸ್ಮಾರ್ಟ್ ಬಳಕೆದಾರ ಇಂಟರ್‌ಫೇಸ್‌ಗಳು, ಲೋಡ್ ಸೆನ್ಸಿಂಗ್ ವಾಲ್ವ್ ತಂತ್ರಜ್ಞಾನ, ಹೈಬ್ರಿಡ್ ಆಕ್ಚುಯೇಷನ್ ಸಿಸ್ಟಮ್ ಸೇರಿದಂತೆ ನೂತನ ಆವಿಷ್ಕಾರಗಳ ಬಳಕೆಯಾಗುತ್ತಿದೆ. ಹಾಗಾಗಿ, ನಿಮಗಿರುವ ಅನುಭವದ ಜೊತೆಗೆ ನೂತನ ತಂತ್ರಜ್ಞಾನದ ಅರಿವು, ಮಾನವ ಸಂಪನ್ಮೂಲದ ನಿರ್ವಹಣೆ, ಸಂವಹನ ಮತ್ತು ನಾಯಕತ್ವದ ಕೌಶಲಗಳ ನವೀಕರಣ ಮಾಡಿಕೊಳ್ಳುವುದು ಸೂಕ್ತ. ಹಾಗೂ ವೃತ್ತಿಯ ಕರ್ತವ್ಯ, ಜವಾಬ್ದಾರಿಗಳು, ವೃತ್ತಿಯಲ್ಲಿನ ಸವಾಲುಗಳು, ಅವಕಾಶಗಳನ್ನು ಗಮನಿಸಿ, ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಮೌಲ್ಯಮಾಪನ ಮಾಡಿದ ನಂತರ, ಯಾವ ಕೋರ್ಸ್ಗಳನ್ನು ಮಾಡಬೇಕು ಎಂದು ತಿಳಿಯುತ್ತದೆ. ಕೋರ್ಸ್ಗಳ ಮಾಹಿತಿಗಾಗಿ ಗಮನಿಸಿ: https://www.udemy.com/topic/hydraulics/

Q14. ನಾನು ಪದವಿ ಪೂರೈಸಿ, ವರ್ಷ ಬಿ.ಇಡಿ ಮಾಡಬೇಕೆಂದುಕೊAಡಿದ್ದೇನೆ. ಜೊತೆಗೆ, ಎಂಎ ಕೂಡ ಮಾಡಬೇಕೆಂದುಕೊAಡಿದ್ದೇನೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಎರಡು ಪದವಿಗಳನ್ನು ಒಟ್ಟಿಗೆ ಮಾಡಿದರೆ, ಮುಂದೆ ಸರ್ಕಾರಿ ನೇಮಕಾತಿಗಳ (ಶಿಕ್ಷಕ, ಉಪನ್ಯಾಸಕ ಇತ್ಯಾದಿ) ದಾಖಲಾತಿ ಪರಿಶೀಲನೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲವೇ? ದಯವಿಟ್ಟು ತಿಳಿಸಿ.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿ ಎರಡು ಪದವಿಗಳನ್ನು ಏಕಕಾಲದಲ್ಲಿ ಮಾಡುವ ಅವಕಾಶವನ್ನು ಕಲ್ಪಿಸಿದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ಸರ್ಕಾರಿ ನೇಮಕಾತಿಯ ಪ್ರಕ್ರಿಯೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿಲ್ಲ.

Q15. ನಾನು ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್ ಎಂಜಿನಿಯರಿಂಗ್ (ಇಇಇ) ಆಯ್ಕೆ ಮಾಡಿದ್ದೇನೆ. ಇದರ ಬಗ್ಗೆ ಮಾಹಿತಿ ಕೊಡಿ.

ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್ ಎಂಜಿನಿಯರಿAಗ್ ಪದವಿಯ ನಂತರ ಎಲೆಕ್ಟಾçನಿಕ್ಸ್ ಎಂಜಿನಿಯರ್, ಎಲೆಕ್ಟಿçಕಲ್ ಎಂಜಿನಿಯರ್, ನೆಟ್‌ವರ್ಕ್ ಎಂಜಿನಿಯರ್, ಸಿಸ್ಟಮ್ ಡೆವಲಪರ್, ಇನ್ಸ್ಟ್ರುಮೆಂಟಲ್ ಎಂಜಿನಿಯರ್ ಇತ್ಯಾದಿ ಹುದ್ದೆಗಳನ್ನು ಟೆಲಿಕಾಮ್, ಐಟಿ, ಪವರ್, ಟ್ರಾನ್ಸ್ಪೋರ್ಟ್, ಏರ್‌ಸ್ಪೇಸ್, ಮೆಟಲ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ಅರಸಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: www.sarvgyan.com

Q16. ನಮಸ್ಕಾರ. ನಾನು ದ್ವಿತೀಯ ಪಿಯುಸಿ (ವಾಣಿಜ್ಯ) ಮಾಡುತ್ತಿದ್ದೇನೆ. ಇದಾದ ನಂತರ, ಯಾವ ಕಂಪ್ಯೂಟರ್ ಸಾಫ್ಟ್ವೇರ್ ಕೋರ್ಸ್ ಉತ್ತಮ? ಯಾವ ವಿಶ್ವವಿದ್ಯಾಲಯದಲ್ಲಿ ಆನ್‌ಲೈನ್ ಕೋರ್ಸ್ ಮಾಡಬಹುದು?

ನೀವು ಪಿಯುಸಿ ನಂತರ ಬಿಸಿಎ ಕೋರ್ಸನ್ನು ರೆಗ್ಯುಲರ್/ದೂರ ಶಿಕ್ಷಣ/ಆನ್‌ಲೈನ್ ಮಾರ್ಗದಲ್ಲಿ ಮಾಡಬಹುದು. ಮಾಹಿತಿ ತಂತ್ರಜ್ಞಾನ ವಿಸ್ತಾರವಾದ ಮತ್ತು ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಸಿಎ ಪದವೀಧರರಿಗೆ ಬೇಡಿಕೆಯಿದೆ. ಬಿಸಿಎ ಕೋರ್ಸಿನಲ್ಲಿ ವೃತ್ತಿಪರ ಇಂಗ್ಲಿಷ್, ಗಣಿತ, ಸಂಖ್ಯಾಶಾಸ್ತç ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಂಬAಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಬಿಸಿಎ ನಂತರ ಕ್ಯಾಂಪಸ್ ನೇಮಕಾತಿಯ ಮುಖಾಂತರ ವೃತ್ತಿಯನ್ನು ಆರಂಭಿಸಬಹುದು ಅಥವಾ ಹೆಚ್ಚಿನ ತಜ್ಞತೆಗಾಗಿ, ಬೇಡಿಕೆಯಲ್ಲಿರುವ ವಿಷಯದಲ್ಲಿ (ಮೊಬೈಲ್ ಅಪ್ಲಿಕೇಶನ್ಸ್,

ಡೇಟಾ ಅನಾಲಿಟಿಕ್ಸ್, ಎಐ, ಡೇಟಾಬೇಸ್ ಮ್ಯಾನೇಜ್‌ಮೆಂಟ್, ಸೈಬರ್ ಸೆಕ್ಯೂರಿಟಿ, ಯೂಸರ್ ಇಂಟರ್‌ಫೇಸ್ ಇತ್ಯಾದಿ) ಸರ್ಟಿಫಿಕೆಟ್/ಡಿಪ್ಲೊಮಾ/ಎಂಸಿಎ ಕೋರ್ಸ್ ಮಾಡಬಹುದು.

Q17. ಬಿ.ಎಸ್ಸಿ ಮುಗಿದು ಎರಡು ವರ್ಷಗಳಾಗಿದೆ. ಮಧ್ಯಂತರದಲ್ಲಿ, ಬೇರೆ ಕೆಲಸ ಮಾಡುತ್ತಿದ್ದು ಒಳ್ಳೆಯ ಕೆಲಸ ಸಿಗಲಿಲ್ಲ ಎಂಬ ಬೇಸರ ಕೂಡ ಇದೆ. ಈಗ ಬಿ.ಇಡಿ ಮಾಡಲು ಇಚ್ಛಿಸಿದ್ದೇನೆ. ಮನೆಯಲ್ಲೇ ಓದುವ ಅವಕಾಶ ಸಿಗುತ್ತದೆಯೇ? ಅದಕ್ಕೆ ಸಿದ್ದತೆ ಹೇಗೆ?

ಒಳ್ಳೆಯ ಕೆಲಸ ಸಿಗದಿರುವ ಕಾರಣಗಳನ್ನು ಸ್ವಯಂ ಮೌಲ್ಯಮಾಪನದಿಂದ ಅರ್ಥಮಾಡಿಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಿ.ಇಡಿ ಕೋರ್ಸನ್ನು ದೂರ ಶಿಕ್ಷಣ/ಆನ್‌ಲೈನ್ ಮುಖಾಂತರ ಮಾಡಬಹುದು. ಆದರೆ, ನೀವು ಮಾಡುವ ಕೋರ್ಸ್ಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ರಾಷ್ಟ್ರೀಯ ಅಧ್ಯಾಪಕರ ಶಿಕ್ಷಣ ಪರಿಷತ್ (ಎನ್‌ಸಿಟಿಇ) ಮಾನ್ಯತೆ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ncte.gov.in/website/Index.aspx

Q18. ಸರ್, ನಾನು ಎಂ.ಎಸ್ಸಿ (ಸಸ್ಯಶಾಸ್ತ್ರ) ಪೂರ್ಣಗೊಳಿಸಿದ್ದು, ಕೆಎಎಸ್ ಅಧಿಕಾರಿಯಾಗಬೇಕೆಂಬ ಬಯಕೆಯಿದೆ. ಆದರೆ, ಸದ್ಯಕ್ಕೆ ಉದ್ಯೋಗದ ಅವಶ್ಯಕತೆ ಇರುವುದರಿಂದ, ಬಿ.ಇಡಿ ಮಾಡಿ ಶಿಕ್ಷಕ ವೃತ್ತಿಗೆ ಸೇರಿಕೊಂಡು ನನ್ನ ಸ್ವಂತ ದುಡಿಮೆಯ ಮೇಲೆ ನಿಂತು, ನಂತರ ಕೆಎಎಸ್ ತಯಾರಿ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ, ಕುರಿತು ಗೊಂದಲದಲ್ಲಿದ್ದೇನೆ. ದಯವಿಟ್ಟು ಸರಿಯಾದ ಸಲಹೆ ನೀಡಿ. ಧನ್ಯವಾದಗಳು.

ಶಿಕ್ಷಕ ವೃತ್ತಿಗೂ ಕೆಎಎಸ್ ವೃತ್ತಿಗೂ ಅಗತ್ಯವಾದ ಜ್ಞಾನ, ಕೌಶಲ ಮತ್ತು ಮನೋಧೋರಣೆಗಳಲ್ಲಿ ಪ್ರಮುಖ ವ್ಯತ್ಯಾಸಗಳಿವೆ. ಒಬ್ಬ ದಕ್ಷ ಕೆಎಎಸ್ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಆಯ್ಕೆಯ ಪ್ರಕ್ರಿಯೆಯಲ್ಲಿ ಕೂಲಂಕುಶವಾಗಿ ಪರೀಕ್ಷಿಸಲಾಗುತ್ತದೆ. ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಆಸಕ್ತಿ ಮತ್ತು ಅಭಿರುಚಿಯ ಆಧಾರದ ಮೇಲೆ ಕೆಎಎಸ್ ವೃತ್ತಿ ನಿಮಗೆ ಸರಿಹೊಂದುವುದೇ ಎಂದು ಸ್ವಯಂವಿಮರ್ಶೆ ಮಾಡುವುದು ಒಳ್ಳೆಯದು. ಆ ನಂತರ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಕೆಎಎಸ್ ಆಯ್ಕೆ ಪ್ರಕ್ರಿಯೆ ಕಠಿಣವಾಗಿರುವುದರಿಂದ, ನಿಮ್ಮ ಎಲ್ಲಾ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಕೇಂದ್ರೀಕರಿಸುವುದು ಅಗತ್ಯ. ಆದ್ದರಿಂದ, ಬಿ.ಇಡಿ ಮಾಡುವುದು ಸೂಕ್ತವಲ್ಲವೆನ್ನುವುದು ನಮ್ಮ ಅಭಿಪ್ರಾಯ.

ನೀವು ಎಂ.ಎಸ್ಸಿ (ಸಸ್ಯಶಾಸ್ತ್ರ) ಮಾಡಿರುವುದರಿಂದ ಹಾಗೂ ಸದ್ಯಕ್ಕೆ ಉದ್ಯೋಗದ ಅವಶ್ಯಕತೆಯಿರುವುದರಿಂದ, ಬಯೋಟೆಕ್ನಾಲಜಿ, ಔಷಧ, ಆಹಾರ, ನರ್ಸರಿಗಳು, ಪರಿಸರ, ಪ್ರಯೋಗಾಲಯಗಳು, ಸಂಶೋಧನೆ ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

Q19. ನಾನು ಬಿ.ಎಸ್ಸಿ ಪದವಿದರ. ಮುಂದೆ ಬಿ.ಇಡಿ ಮಾಡಬೇಕೆಂದಿದ್ದೇನೆ. ಈಗ ಬಿ.ಇಡಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹೇಗೆ ಮಾಡಬೇಕು? ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದು ಒಳ್ಳೆಯದೇ? ಅಥವಾ, ಕೇವಲ ಒಂದು ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ಓದುವುದು ಒಳ್ಳೆಯದೇ?

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಇದೇ ತಿಂಗಳ 5ನೇ ತಾರೀಖಿನ ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಕೆಲವು ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಪರಿಣಾಮಕಾರಿಯಾದ ಓದುವಿಕೆ, ಸಾಕಷ್ಟು ಪರಿಶ್ರಮ, ಸಮಯದ ನಿರ್ವಹಣೆ ಅತ್ಯಗತ್ಯ. ಹಾಗಾಗಿ, ವೃತ್ತಿಯೋಜನೆಯಂತೆ ನಿಮ್ಮ ಗುರಿಯನ್ನು ನಿರ್ಧರಿಸಿ, ಆ ನಿಟ್ಟಿನಲ್ಲಿ ಒಂದೆರಡು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ನಿಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಬೇಕು. ಪರಿಣಾಮಕಾರಿ ಓದುವಿಕೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

Q20. ಸರ್, ನಾನು ಬಿಎ ಮತ್ತು ಬಿ.ಇಡಿ ಪದವಿಯನ್ನು ಪೊರ್ಣಗೋಳಿಸಿ, ಎಚ್‌ಎಸ್‌ಟಿಆರ್ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ನಾನು 90% ದೃಷ್ಟಿ ದೋಷವಿರುವ ಅಭ್ಯರ್ಥಿಯಾಗಿದ್ದೇನೆ. ಆದ್ದರಿಂದ, ನೇಮಕಾತಿಯಲ್ಲಿ ತೋಂದರೆಯಾಗಬಹುದೇ?

ಬಿಎ, ಬಿ.ಇಡಿ ಮುಗಿಸಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ (ಎಚ್‌ಎಸ್‌ಟಿಆರ್) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನಿಮಗೆ ಅಭಿನಂದನೆಗಳು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರೀಕ್ಷಾ ಸಹಾಯಕರನ್ನು ಬಳಸಿಕೊಳ್ಳುವುದೂ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ. ಹಾಗೂ, ಸರ್ಕಾರದ ಮತ್ತು ಸರ್ಕಾರದ ಅನುದಾನ ಪಡೆಯುವ ಎಲ್ಲಾ ಶಿಕ್ಷಣ ಸಂಸ್ಥೆಗಳ ನೇಮಕಾತಿಯಲ್ಲಿ ವಿಶೇಷ ಚೇತನ ಅಭ್ಯರ್ಥಿಗಳಿಗೆ ಮೀಸಲಾತಿಯಿದೆ. ನಿಖರವಾದ ಮಾಹಿತಿ ಮತ್ತು ನಿಯಮಾವಳಿಗಾಗಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಅಥವಾ ಈ ಜಾಲತಾಣವನ್ನು ಗಮನಿಸಿ: https://schooleducation.kar.nic.in/secednKn/secedu.html

Q21. ನಾನೀಗ ಟಿ.ಸಿ.ಹೆಚ್, ಬಿ.ಎಸ್ಸಿ ಮತ್ತು ಬಿ.ಇಡಿ ಓದಿ ಪ್ರಸ್ತುತ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮಕ್ಕಳ ಆಪ್ತ ಸಮಾಲೋಚಕ ಆಗಬೇಕೆಂದಿದ್ದೇನೆ. ವೃತ್ತಿಯ ಜೊತೆಗೆ ಮಾಡಬಹುದಾದ ಡಿಪ್ಲೊಮಾ ಕೋರ್ಸ್, ಕಾಲೇಜುಗಳ ಬಗ್ಗೆ ತಿಳಿಸಿ. ಧನ್ಯವಾದಗಳು.

ಸ್ಪರ್ಧಾತ್ಮಕ ಪೈಪೋಟಿ, ಅತಿಯಾದ ಶೈಕ್ಷಣಿಕ ಒತ್ತಡ, ಪೋಷಕರ ನಿರೀಕ್ಷೆ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅಗತ್ಯವಿರುವ ಈ ಕಾಲಘಟ್ಟದಲ್ಲಿ ನಿಮ್ಮ ಆಲೋಚನೆ ಮೆಚ್ಚುವಂತದ್ದು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ತಾಳ್ಮೆ, ಅನುಭೂತಿ, ಸೇವಾ ಮನೋಭಾವ, ಉತ್ತಮ ಸಂವಹನ ಕೌಶಲ, ವಿಶ್ಲೇಷಾತ್ಮಕ ಕೌಶಲ, ದೂರದೃಷ್ಟಿ, ಉದ್ಯೋಗ ಕ್ಷೇತ್ರದ ಜ್ಞಾನ ಇತ್ಯಾದಿಗಳನ್ನು ಬೆಳೆಸಿಕೊಳ್ಳಬೇಕು.

ದೂರಶಿಕ್ಷಣ/ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ಸಂಬAಧಪಟ್ಟ ವಿಷಯಗಳಲ್ಲಿ (ಶೈಕ್ಷಣಿಕ ಮಾರ್ಗದರ್ಶನ, ವೃತ್ತಿಪರ ಮಾರ್ಗದರ್ಶನ, ಕೌಟುಂಬಿಕ ಮತ್ತು ಪೋಷಕರ ಮಾರ್ಗದರ್ಶನ, ಕೌನ್ಸೆಲಿಂಗ್ ಮನೋವಿಜ್ಞಾನ, ಮಾನಸಿಕ ಚಿಕಿತ್ಸೆ ಇತ್ಯಾದಿ), ನಿಮ್ಮ ಅನುಕೂಲ ಮತ್ತು ಆದ್ಯತೆಗೆ ತಕ್ಕಂತೆ ಸ್ನಾತಕೋತ್ತರ/ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಮಾಡಬಹುದು. ವಿಷಯಾನುಸಾರ ಹಲವಾರು ಕೋರ್ಸ್/ಕಾಲೇಜು ಆಯ್ಕೆಗಳಿರುವುದರಿಂದ ಕೂಲಂಕುಶವಾಗಿ ಪರಿಶೀಲಿಸಿ, ಅಂತಿಮ ನಿರ್ಧಾರವನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.shiksha.com/search?q=student%20counselling%20courses&s[]=16&rf=filters

Q22. ನಾನು ಎಂ.ಎಸ್ಸಿ (ಗಣಿತ) ಮಾಡಿದ್ದು, ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯಿಲ್ಲ. ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿ.

ಎA.ಎಸ್ಸಿ (ಗಣಿತ) ಮಾಡಿದ ನಂತರ ಖಾಸಗಿ ಕ್ಷೇತ್ರದ ಬ್ಯಾಂಕಿಂಗ್, ಐಟಿ, ಕಂಪ್ಯೂಟಿಂಗ್, ಡೇಟಾಬೇಸ್ ಮ್ಯಾನೇಜ್‌ಮೆಂಟ್, ಅನಲಿಟಿಕ್ಸ್, ರಿಸರ್ಚ್, ಇನ್ವೆಸ್ಟ್ಮೆಂಟ್ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಇಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೀವು ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಈ ಕ್ಷೇತ್ರಗಳಲ್ಲಿ, ಪ್ರತಿ ಉದ್ಯೋಗಿಗೆ ಅನ್ವಯವಾಗುವ ಉದ್ಯೋಗದ ವಿವರಗಳಿಗೆ (ಕರ್ತವ್ಯಗಳು, ಹೊಣೆಗಾರಿಕೆಗಳು, ಚಟುವಟಿಕೆಗಳು ಇತ್ಯಾದಿ) ಅನುಗುಣವಾಗಿ ಜ್ಞಾನ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ವಿಷಯದ ಜ್ಞಾನ ಮತ್ತು ವೃತ್ತಿ ಸಂಬAಧಿತ ಕೌಶಲಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಿರಬೇಕು.

Q23. ನಾನು ಎಂ.ಎಸ್ಸಿ (ರಸಾಯನ ಶಾಸ್ತ್ರ) ಮುಗಿಸಿದ್ದು, ಬಿ.ಇಡಿ ಮತ್ತು ಪಿ.ಎಚ್‌ಡಿ ಕೋರ್ಸ್ಗಳನ್ನು ಏಕಕಾಲದಲ್ಲಿ ಮಾಡಬೇಕೆಂದುಕೊಂಡಿದ್ದೇನೆ. ಇದರಿಂದ, ಮುಂದೆ ಸರ್ಕಾರಿ ಕೆಲಸಗಳಿಗೆ ತೊಂದರೆಯಾಗಬಹುದೇ?

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿ ಎರಡು ಪದವಿಗಳನ್ನು ಏಕಕಾಲದಲ್ಲಿ ಮಾಡುವ ಅವಕಾಶವನ್ನು ಕಲ್ಪಿಸಿದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ಸರ್ಕಾರಿ ನೇಮಕಾತಿಯ ಪ್ರಕ್ರಿಯೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿಲ್ಲ.