Q & A for Students – May 2022

Q1. ನಮಸ್ಕಾರ, ನಾನು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೇನೆ ಎಂಬ ನಂಬಿಕೆ ಇದೆ. ಮುಂದೆ ಪಿಯುಸಿ ವಿಜ್ಞಾನ (ಪಿಸಿಎಂಬಿ) ಆಯ್ಕೆಮಾಡಿಕೊಳ್ಳುತ್ತೇನೆ. ಪಿಯುಸಿ ನಂತರದ ಕೋರ್ಸ್ ಅವಕಾಶಗಳ ಬಗ್ಗೆ ತಿಳಿಸಿಕೊಡಿ.

ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಕೋರ್ಸ್ ಮಾಡಬೇಕು. ಹಾಗಾಗಿ, ವೃತ್ತಿ ಯೋಜನೆಯನ್ನು ಮಾಡದೆ ಕೋರ್ಸ್ ಆಯ್ಕೆ ಸಮಂಜಸವಲ್ಲ. ಪಿಯುಸಿ ನಂತರ ನೀವು ಮಾಡಬಹುದಾದ ಕೆಲವು ಪ್ರಮುಖ ಕೋರ್ಸ್ಗಳೆಂದರೆ ಎಂಬಿಬಿಎಸ್, ಬಿಇ/ಬಿಟೆಕ್, ಬಿಎಸ್‌ಸಿ (ವಿಜ್ಞಾನ, ಕೃಷಿ ಸಂಬAಧಿತ, ಬಯೋಟೆಕ್, ಪ್ಯಾರಾ ಮೆಡಿಕಲ್, ಫ್ಯಾಷನ್ ಡಿಸೈನ್, ಫೋರೆನ್ಸಿಕ್ ಇತ್ಯಾದಿ), ಬಿವಿಎಸ್‌ಸಿ, ಬಿಬಿಎ, ಸಿಎ, ಎಸಿಎಸ್ ಸೇರಿದಂತೆ ವೈವಿಧ್ಯಮಯ ಕೋರ್ಸ್ ಆಯ್ಕೆಗಳಿವೆ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q2. ನಾನುಕಳೆದ ಅಕ್ಟೋಬರ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪೂರ್ಣಗೊಳಿಸಿರುವೆ. ಈಗ, ನನಗೆ ಖಾಸಗಿ ಕಂಪನಿಗಳಲ್ಲಿ ಅವಕಾಶ ಸಿಕ್ಕರೂ ಉದ್ಯೋಗಕ್ಕೆ ಸೇರಲು ಇಷ್ಟವಿಲ್ಲ. ಏಕೆಂದರೆ, ನಾನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆ ನಡೆಸುತ್ತಿರುವೆ. ನನ್ನ ಈ ನಿರ್ಧಾರ ಸರಿಯೇ ಅಥವಾ ತಪ್ಪೇ?

ಇತ್ತೀಚಿನ ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಪೈಪೋಟಿ ತೀಕ್ಷ÷್ಣವಾಗಿದೆ. ಹಾಗೂ, ಕೆಲವು ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಏಕಾಗ್ರತೆ, ಸಮಯದ ನಿರ್ವಹಣೆ ಮತ್ತು ನಿರಂತರ ಪರಿಶ್ರಮದ ಅಗತ್ಯವಿದ್ದು, ಉದ್ಯೋಗದಲ್ಲಿದ್ದರೆ ನಿಭಾಯಿಸುವುದು ಕಷ್ಟವಾಗಬಹುದು.

ನೀವು ತಯಾರಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಹಂತಗಳು, ಮಾದರಿ, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಸ್ವರೂಪ, ಅಧ್ಯಯನದ ಪುಸ್ತಕಗಳ ಪಟ್ಟಿ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ ಇತ್ಯಾದಿಗಳನ್ನು ಅರಿತು ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗುರುತಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಬೆಕು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಿಮಗಿರುವ ಅವಕಾಶಗಳು, ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದು ಒಳ್ಳೆಯದು.

Q3. ನಾನು ಪಿಯುಸಿಗೆ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ ಆದರೆ, ಕಾಲೇಜಿನ ಆಯ್ಕೆಯಲ್ಲಿ ಗೊಂದಲವಿದೆ. ದಯವಿಟ್ಟು, ಬೆಂಗಳೂರಿನಲ್ಲಿ ಒಂದು ಉತ್ತಮ ಕಾಲೇಜನ್ನು ಆಯ್ಕೆ ಮಾಡುವುದು ಹೇಗೆಂದು ತಿಳಿಸಿ.

ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿAಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿAಗ್ ಮಾಹಿತಿಯನ್ನು ಪರಾಮರ್ಶಿಸಿ. ಹಾಗೂ, ಕಾಲೇಜು ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ. https://www.youtube.com/c/EducationalExpertManagementCareerConsultant

Q4. ಇಂಗ್ಲಿಷ್ ಮಾಧ್ಯಮದಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದೇನೆ. ಉತ್ತಮ ಅಂಕ ಗಳಿಸುವ ಭರವಸೆ ಇದೆ. ಪಿಯುಸಿ (ಪಿಸಿಎಂಬಿ) ಓದುತ್ತೇನೆ. ನನಗೆ ಎಂಬಿಬಿಎಸ್, ಎಂಜಿನಿಯರಿಂಗ್ ಓದುವುದರಲ್ಲಿ ಆಸಕ್ತಿ ಇಲ್ಲ. ಪದವಿಯ ನಂತರ ಕೋಚಿಂಗ್ ಪಡೆಯುವ ಮೂಲಕ ಕೆಎಎಸ್, ಐಎಎಸ್ ಮಾಡುವ ಗುರಿ ಹೊಂದಿದ್ದೇನೆ. ಹಾಗಾಗಿ, ಪಿಯುಸಿ ನಂತರ ನನ್ನ ಆಯ್ಕೆ ಯಾವುದಿರಬೇಕು?

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿರುವಾಗಲೇ ಕೆಎಎಸ್, ಐಎಎಸ್ ಮಾಡಬೇಕೆನ್ನುವ ನಿಮ್ಮ ಗುರಿ ಶ್ಲಾಘನೀಯ. ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸಂಸ್ಥೆಗಳು ನಡೆಸುವ ಈ ಪರೀಕ್ಷೆಗಳ ನಂತರ ಅಖಿಲ ಭಾರತ, ಗ್ರೂಪ್ ಎ, ಗ್ರೂಪ್ ಬಿ ಸೇರಿದಂತೆ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿನ ಹುದ್ದೆಗಳ ವರ್ಗೀಕರಣವಿದೆ. ಆದ್ದರಿಂದ, ಈ ಎರಡೂ ಪರೀಕ್ಷೆಗಳ ಮೂಲಕ ಲಭ್ಯವಿರುವ ಹುದ್ದೆಗಳ ಅವಕಾಶಗಳನ್ನು ಗಮನಿಸಿ, ನಿಮಗೆ ಯಾವುದು ಸೂಕ್ತ ಎಂದು ಗುರುತಿಸಿ, ಅದಕ್ಕೆ ಅನುಗುಣವಾಗಿ ಪದವಿ ಕೋರ್ಸ್ ಮಾಡುವುದು ಒಳ್ಳೆಯದು. ಪದವಿಯಲ್ಲಿ ಓದುವ ವಿಷಯಕ್ಕೂ ಐಎಎಸ್ ಪರೀಕ್ಷೆಯ ಐಚ್ಚಿಕ ವಿಷಯಕ್ಕೂ ಸಾಮ್ಯತೆಯಿದ್ದರೆ, ನಿಮ್ಮ ಗುರಿಯ ಸಾಧನೆಗೆ ಸಹಾಯವಾಗುತ್ತದೆ. ಈ ಪರೀಕ್ಷೆಗಳ ಮಾದರಿ, ಐಚ್ಚಿಕ ವಿಷಯಗಳು, ಪಠ್ಯಕ್ರಮ ಇತ್ಯಾದಿಗಳಲ್ಲಿ ಆಗಿಂದಾಗ್ಗೆ ತಿದ್ದುಪಡಿಗಳಾಗುವ ಸಾಧ್ಯತೆಯಿರುತ್ತದೆ. ನೀವು ಪಿಯುಸಿ ಮಾಡಿದ ನಂತರ, ಈ ಬದಲಾವಣೆಗಳನ್ನು ಗಮನಿಸಿ, ಪದವಿಯ ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.

Q5. ಈ ವರ್ಷ ನಾನು 10ನೇ ತರಗತಿ ಸಿಬಿಎಸ್‌ಸಿ ಪರೀಕ್ಷೆ ಬರೆಯುತ್ತಿರುವೆ. ನನಗೆ ಆಸ್ಟೊçà ಫಿಸಿಕ್ಸ್ ವಿಷಯದಲ್ಲಿ ಆಸಕ್ತಿ ಇದೆ. ಹಾಗಾಗಿ, ಮುಂದೆ ಯಾವ ಕೋರ್ಸ್ ಸೇರಬಹುದು? ವಂದನೆಗಳು.

Q6. ನನಗೆ ಇಸ್ರೊ ಗೆ ಸೇರಬೇಕು ಆಗಬೇಕು ಎನ್ನುವ ಆಸೆ ಇದೆ. ಆದ್ದರಿಂದ, 10ನೇ ತರಗತಿ ನಂತರ ಏನು ಮಾಡಬೇಕು?

ಪಿಯುಸಿ ಹಂತದಲ್ಲಿ ಭೌತಶಾಸ್ತç ಮತ್ತು ಗಣಿತಶಾಸ್ತç ವಿಷಯಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡು ಬಿಇ/ಬಿಟೆಕ್/ಬಿಎಸ್‌ಸಿ ಪದವಿಯ ನಂತರ ಸ್ನಾತಕೋತ್ತರ ಕೋರ್ಸ್ ಮಾಡಬೇಕು. ಇದಾದ ನಂತರ ಇಂಡಿಯನ್ ಸ್ಪೇಸ್ ರಿಸರ್ಚ್ ಸಂಸ್ಥೆ (ಇಸ್ರೊ) ಮತ್ತು ಆಸ್ಟೊçà ಫಿಸಿಕ್ಸ್ ಸಂಬಂಧಿತ ಇತರ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಬಹುದು. ಹಾಗೂ, ಹೆಚ್ಚಿನ ತಜ್ಞತೆಗಾಗಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಆಸ್ಟೊç ಫಿಸಿಕ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ಗಳಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಪಿಎಚ್‌ಡಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.careerindia.com/how-to/how-to-become-a-space-scientist-in-isro-explore-isro-jobs-and-space-science-colleges-in-india/articlecontent-pf10061-025486.html

Q7. ಪಿಯುಸಿ ಮತ್ತು ಟಿಸಿಚ್ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ 25 ವರ್ಷಗಳ ಸೇವೆ ಸಲ್ಲಿಸಿದ್ದು, ಕುವೆಂಪು ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದ ಮೂಲಕ ಹಿಂದಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತೇನೆ. ‘ಶಿಕ್ಷಣ ಕ್ಷೇತ್ರದಲ್ಲಿ ಗ್ರಾಮೀಣ ಶಿಕ್ಷಕರ ಪಾತ್ರ’ ಪ್ರಬಂಧ ಮಂಡಿಸಬೇಕೆAದಿದ್ದೇನೆ. ಯಾರನ್ನು ಸಂಪರ್ಕಿಸಬೇಕು?

ನೀವು ಮಂಡಿಸಬೇಕೆಂದಿರುವ ಪ್ರಬಂಧದ ಉದ್ದೇಶದ ಬಗ್ಗೆ ಸ್ಪಷ್ಟತೆಯಿರಲಿ. ಪ್ರಬಂಧ ಪ್ರಕಟಿಸುವ ನಿಟ್ಟಿನಲ್ಲಿ, ಈ ಸಲಹೆಗಳನ್ನು ಗಮನಿಸಿ:

• ನಿಮ್ಮ ಉದ್ದೇಶಕ್ಕೆ ಅನುಗುಣವಾಗಿ ಅಂತರಾಷ್ಟಿçÃಯ, ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆ (ಜರ್ನಲ್), ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಪಟ್ಟಿಯನ್ನು ಮಾಡಿ.

Q8. ದ್ವಿತೀಯ ಪಿಯುಸಿ (ವಿಜ್ಞಾನ) ಮುಗಿಸಿದ ಮೇಲೆ ಯಾವ ಕೋರ್ಸ್ ಮಾಡಿದರೆ ಉತ್ತಮ?

ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಕೋರ್ಸ್ ಮಾಡಬೇಕು. ಹಾಗಾಗಿ, ವೃತ್ತಿ ಯೋಜನೆಯನ್ನು ಮಾಡದೆ ಕೋರ್ಸ್ ಆಯ್ಕೆ ಸಮಂಜಸವಲ್ಲ. ಪಿಯುಸಿ (ವಿಜ್ಞಾನ) ನಂತರ ನೀವು ಮಾಡಬಹುದಾದ ಕೆಲವು ಪ್ರಮುಖ ಕೋರ್ಸ್ಗಳೆಂದರೆ ಎಂಬಿಬಿಎಸ್, ಬಿಇ/ಬಿಟೆಕ್, ಬಿಎಸ್‌ಸಿ (ವಿಜ್ಞಾನ, ಕೃಷಿ ಸಂಬAಧಿತ, ಬಯೋಟೆಕ್, ನರ್ಸಿಂಗ್, ಪ್ಯಾರಾ ಮೆಡಿಕಲ್, ಫ್ಯಾಷನ್ ಡಿಸೈನ್, ಹೋಟೆಲ್ ಮ್ಯಾನೇಜ್‌ಮೆಂಟ್, ಫೋರೆನ್ಸಿಕ್ ಇತ್ಯಾದಿ), ಬಿಫಾರ್ಮ, ಬಿ.ಡಿಇಎಸ್, ಬಿವಿಎಸ್‌ಸಿ, ಬಿಬಿಎ, ಸಿಎ, ಎಸಿಎಸ್, ಐಸಿಡಬ್ಲು÷್ಯ ಸೇರಿದಂತೆ ವೈವಿಧ್ಯಮಯ ಕೋರ್ಸ್ ಆಯ್ಕೆಗಳಿವೆ. ವೃತ್ತಿ ಯೋಜನೆ ಪ್ರಕ್ರಿಯೆ ಮತ್ತು ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

Q9. ನಾನು, ಈಗ ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ವಿದೇಶದಲ್ಲಿ ಓದುವ ಹಂಬಲವಿದೆ. ವಿದೇಶದಲ್ಲಿ ಉಚಿತವಾಗಿ ಓದಲು ಸಾಧ್ಯವೇ? ಸರ್ಕಾರದಿಂದ ಯಾವುದಾದರೂ ವಿದ್ಯಾರ್ಥಿವೇತನ ಸಿಗುವುದೇ? ನನಗೆ ವಿದೇಶದಲ್ಲಿ ಮನೋಶಾಸ್ತ್ರದಲ್ಲಿ ಎಂಎಸ್‌ಸಿ ಮಾಡುವ ಬಯಕೆ ಇದೆ. ನಾನು ಆರ್ಥಿಕವಾಗಿ ಹಿಂದುಳಿದ ಕಾರಣ ನನಗೆ ದುಬಾರಿ ಹಣ ಖರ್ಚು ಮಾಡಿ ಓದಲು ಸಾಧ್ಯವಿಲ್ಲ. ನಿಮ್ಮ ಸಲಹೆ ತಿಳಿಸಿ.

ನಮಗೆ ತಿಳಿದಂತೆ ವಿದೇಶದಲ್ಲಿ ಉಚಿತವಾಗಿ ಓದಲು ಸಾಧ್ಯವಿಲ್ಲ. ಆದರೆ, ಅಂತರರಾಷ್ಟಿçÃಯ ವಿದ್ಯಾರ್ಥಿಗಳಿಗೆ ಅರ್ಹತೆ ಮತ್ತು ಆದಾಯವನ್ನು ಪರಿಗಣಿಸಿ ಸ್ಕಾಲರ್‌ಶಿಪ್ ಸೌಲಭ್ಯಗಳು ಲಭ್ಯವಿರುತ್ತದೆ. ಜೊತೆಗೆ ಸಹಾಯಧನ, ಅರೆಕಾಲಿಕ ನೌಕರಿಗಳಂತಹ ಸೌಲಭ್ಯಗಳೂ ಇವೆ. ಅನೇಕ ಖಾಸಗಿ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯದಲ್ಲಿ ವಿಶ್ವವಿದ್ಯಾಲಯಗಳ ಜೊತೆ ಕೈಗೂಡಿಸಿವೆ. ಹೆಚ್ಚಿನ ವಿವರಗಳಿಗಾಗಿ ನೀವು ಸೇರ ಬಯಸುವ ವಿಶ್ವವಿದ್ಯಾಲಯದ ವೆಬ್‌ಸೈಟನ್ನು ಪರಿಶೀಲಿಸಿ.

ಇದಲ್ಲದೆ, ಕೇಂದ್ರ ಸರ್ಕಾರದ ನ್ಯಾಷನಲ್ ಓವರ್‌ಸೀಸ್ ಸ್ಕಾಲರ್‌ಶಿಪ್ ಸ್ಕೀಮ್ ಅಡಿಯಲ್ಲಿಯೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಲಭ್ಯವಿದೆ. ಈ ಸೌಲಭ್ಯದ ವಿವರ ಮತ್ತು ಅರ್ಹತೆಯ ನಿಯಮಗಳ ಕುರಿತು ಕೇಂದ್ರ ಸರ್ಕಾರದ ಸೋಷಿಯಲ್ ಜಸ್ಟೀಸ್ ಅಂಡ್ ಎಂಪವರ್‌ಮೆAಟ್ ಇಲಾಖೆಯ ವೆಬ್‌ಸೈಟನ್ನು ಪರಿಶೀಲಿಸಿ.

Q10. ನಾನು ಪಿಯುಸಿಗೆ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆದರೆ, ಕಾಲೇಜಿನ ಆಯ್ಕೆಯಲ್ಲಿ ಗೊಂದಲವಿದೆ. ದಯವಿಟ್ಟು, ಉತ್ತರ ಕನ್ನಡದ ಉತ್ತಮ ವಿಜ್ಞಾನ ಕಾಲೇಜಿನ ಕುರಿತು ಮಾಹಿತಿ ನೀಡಿ.

Q11. ನಾನು ಈ ಬಾರಿ ದ್ವಿತೀಯ ಪಿಯುಸಿ(ಸೈನ್ಸ್) ಪರೀಕ್ಷೆ ಬರೆದಿದ್ದೇನೆ. ನನಗೆ ಏರೋನಾಟಿಕಲ್ ಎಂಜಿನಿಯರಿಂಗ್ ಮಾಡಬೇಕೆಂಬ ಬಯಕೆ ಇದೆ. ಆದರೆ ಇದಕ್ಕೆ ಸಂಬಂಧಿಸಿ ಮುಂದೇನು ಮಾಡಬೇಕು ಎಂಬುದು ನನಗೆ ತಿಳಿದಿಲ್ಲ. ನಾನು ಸಿಇಟಿ ಹಾಗೂ ಜೆಇಇ ಎರಡೂ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಏರೊನಾಟಿಕಲ್ ಎಂಜಿನಿಯರಿಂಗ್ ಓದಲು ಉತ್ತಮ ಕಾಲೇಜು ಯಾವುದು?

ಏರೋನಾಟಿಕಲ್ ಎಂಜಿನಿಯರಿಂಗ್ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಸಿಇಟಿ ಮತ್ತು ಜೆಇಇ ಪರೀಕ್ಷೆಗಳಲ್ಲಿ ಉನ್ನತ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ.

ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿAಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿAಗ್ ಮಾಹಿತಿಯನ್ನು ಪರಾಮರ್ಶಿಸಿ. ಹಾಗೂ, ಕಾಲೇಜು ಆಯ್ಕೆ ಪ್ರಕ್ರಿಯೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q12. ಸರ್, ನಾನು ಬಿಎಸ್‌ಸಿ ಮುಗಿಸಿರುತ್ತೇನೆ. ಈಗ ನಾನು ಕೆಪಿಎಸ್‌ಸಿ, ಕೆಎಸ್‌ಪಿ ಸೇರಿದಂತೆ, ಪದವಿ ಆಧಾರಿತ ಹುದ್ದೆಗಳಿಗೆ ಅರ್ಜಿ ಹಾಕಬಹುದಾ? ಬಿಎಲ್‌ಐಎಸ್‌ಸಿ ಬಗ್ಗೆ ತಿಳಿಸಿ.

ಬಿಎಸ್‌ಸಿ ಪದವಿಯ ನಂತರ ಯುಪಿಎಸ್‌ಸಿ, ಕೆಪಿಎಸ್‌ಸಿ, ಕೆಎಸ್‌ಪಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಹಾಗೂ ಕೆಲವೊಮ್ಮೆ ನೇರವಾಗಿಯೂ ಅರ್ಜಿ ಹಾಕುವ ಅವಕಾಶಗಳಿರುತ್ತದೆ. ಬಿಎಲ್‌ಐಎಸ್‌ಸಿ ಅಂದರೆ ಬ್ಯಾಚುಲರ್ ಅಫ್ ಲೈಬ್ರರಿ ಅಂಡ್ ಇನ್‌ಫರ್ಮೇಷನ್ ಸೈನ್ಸ್ ಕೋರ್ಸ್. ಈ ಕೋರ್ಸ್ ಅನ್ನು ಯಾವುದಾದರೂ ಪದವಿಯ ನಂತರ ಮಾಡಬಹುದು. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ಗ್ರಂಥಾಲಯಗಳಲ್ಲಿ ಮತ್ತು ಮಾಹಿತಿ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳಿವೆ.

Q13. ನಾನು ಬಿಇ(ಇಇಇ) ಮುಗಿಸಿದ್ದೇನೆ. ಅದರೊಂದಿಗೆ ಜಾವಾ, ಪೈಥಾನ್ ಕೋರ್ಸ್ ಕೂಡ ಮುಗಿಸಿದ್ದೇನೆ. ಎಂಜಿನಿಯರಿಂಗ್ ನಂತರ ನಾನು ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದೆ; ಆದರೆ ಕೆಲಸ ಸಿಗಲಿಲ್ಲ. ಈಗ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೇನೆ. ಆದರೆ, ಈಗ ಓದಿನ ಅಂತರದ ಕಾರಣಕ್ಕೆ ನನಗೆ ಅಲ್ಲೂ ಕೆಲಸ ಸಿಗುತ್ತಿಲ್ಲ. ನಾನು ಮುಂದೇನು ಮಾಡಲಿ?

ಸರ್ಕಾರಿ ಉದ್ಯೋಗಗಳ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಯುತ್ತಿದ್ದು ಈಗ ಪೈಪೋಟಿ ತೀಕ್ಷ್ಣವಾಗಿದೆ. ಆದ್ದರಿಂದ, ನೀವು ಭಾಗವಹಿಸಲು ಬಯಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಹಂತಗಳು, ಮಾದರಿ, ಪಠ್ಯಕ್ರಮ, ಪ್ರಶ್ನೆಪತ್ರಿಕೆಗಳ ಸ್ವರೂಪ, ಅಧ್ಯಯನದ ಪುಸ್ತಕಗಳ ಪಟ್ಟಿ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ ಇತ್ಯಾದಿಗಳನ್ನು ಅರಿತು ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗುರುತಿಸಿ, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಬೇಕು. ಹಾಗೂ, ಕೆಲವು ಪ್ರತಿಷ್ಟಿತ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಏಕಾಗ್ರತೆ, ಸಮಯದ ನಿರ್ವಹಣೆ ಮತ್ತು ನಿರಂತರ ಪರಿಶ್ರಮದ ಅಗತ್ಯವಿದ್ದು, ಕೋಚಿಂಗ್ ಅಗತ್ಯವಿದೆಯೇ ಎಂದು ಯೋಚಿಸಿ.

ಸಾಫ್ಟ್ವೇರ್ ವಲಯದಲ್ಲಿ ಆಸಕ್ತಿಯಿದ್ದರೆ ನಿಮ್ಮ ಜ್ಞಾನ ಮತ್ತು ಕೌಶಲವನ್ನು ಆಗಾಗ್ಗೆ ಪರಿಷ್ಕರಿಸುತ್ತಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

Q14. ಸರ್, ಬಿಕಾಂ ಮುಗಿಸಿ ದೂರ ಶಿಕ್ಷಣದಲ್ಲಿ ಎಂಎ ಮಾಡಿದ್ದೇನೆ. ದೂರ ಶಿಕ್ಷಣದ ಎಂಎ ಕಲಿಯುತ್ತಾ ಬಿ.ಇಡಿ ಕೋರ್ಸ್ ಮಾಡಬಹುದಾ? ಮತ್ತು ಬಿಕಾಂ ನಂತರ ಎಂಎ ಮಾಡಿದರೆ ಏನಾದರೂ ತೊಂದರೆ ಇದೆಯಾ?

ದೂರ ಶಿಕ್ಷಣದ ಎಂಎ ಮಾಡುತ್ತಾ ಬಿ.ಇಡಿ ಕೋರ್ಸ್ ಮಾಡಬಹುದು. ಹಾಗೂ, ಬಿಕಾಂ ನಂತರ ಎಂಎ (ಕೆಲವು ವಿಷಯಗಳಲ್ಲಿ) ಕೂಡಾ ಮಾಡಬಹುದು. ನಿಮಗೆ ಆಸಕ್ತಿಯಿರುವ, ಇಷ್ಟವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ಅನುಗುಣವಾಗಿ ಕೋರ್ಸ್ ಮಾಡುವುದು ಒಳ್ಳೆಯದು.

Q15. ಬಿಇ ಮುಗಿಸಿ ಕೆಲಸಕ್ಕೆ ಹೋಗದೆ ಸಂಪೂರ್ಣ ಸಮಯವನ್ನು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ಮುಡುಪಿಟ್ಟಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನೋಡುತ್ತಿದ್ದರೆ, ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವೇ?

ಸಾಧನೆಯ ಹಾದಿಯಲ್ಲಿ, ಆಂತರಿಕ ಮತ್ತು ಬಾಹ್ಯ ಪರಿಸರದ ಅಡಚಣೆಗಳು, ವೈಫಲ್ಯಗಳು, ವಿಳಂಬಗಳು ಸರ್ವೇಸಾಮಾನ್ಯ. ಇಂತಹ ಸವಾಲುಗಳನ್ನು ನಿರೀಕ್ಷಿಸಿ, ಮನಸ್ಸು ಸ್ಥಿತಪ್ರಜ್ಞೆಯಿಂದಿದ್ದರೆ ಸೃಜನಶೀಲ ಚಿಂತನೆ ಸಾಧ್ಯವಾಗಿ, ಸಾಧನೆಯ ಹಾದಿ ಸುಗಮವಾಗುತ್ತದೆ. ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದಿರಿ ಮತ್ತು ನಿಮ್ಮ ದೀರ್ಘಾವಧಿ ಕನಸುಗಳಿಂದ ದೂರ ಸರಿಯದಿರಿ. ಹಾಗೂ,

ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದರೆ, ಸ್ವಯಂಪ್ರೇರಣೆಯೇ ಸಾಧನೆಗೆ ಸಂಜೀವಿನಿಯಾಗಬೇಕು. ಶುಭಹಾರೈಕೆಗಳು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ:

http://www.vpradeepkumar.com/self-motivation/

Q16. ನಾನು ರಸಾಯನ ಶಾಸ್ತ್ರದಲ್ಲಿ ಎಂಎಸ್‌ಸಿ ಮಾಡಬೇಕು ಎಂದುಕೊAಡಿದ್ದೇನೆ. ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.

ಎಂಎಸ್‌ಸಿ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ರಾಸಾಯನಿಕ ಪದಾರ್ಥಗಳು, ಫಾರ್ಮಾ, ರಸಗೊಬ್ಬರ, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ, ಆಹಾರ ಮತ್ತು ಪಾನೀಯ ಸಂಸ್ಕರಣೆ, ಸಂಶೋಧನೆ, ಪ್ರಯೋಗಾಲಯಗಳು, ವಿದ್ಯಾಸಂಸ್ಥೆಗಳು ಸೇರಿದಂತೆ ಅನೇಕ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳನ್ನು ಪಡೆದುಕೊಳ್ಳಬಹುದು.

Q17. ಸರ್, ನಾನು ಪತ್ರಿಕೋದ್ಯಮದಲ್ಲಿ ಎಂಎ ಮುಗಿಸಿ 2 ವರ್ಷವಾಗಿದೆ, ಕಳೆದ ವರ್ಷ ನೆಟ್, ಕೆಸೆಟ್ ಕೂಡ ಪಾಸ್ ಮಾಡಿರುವೆ. ವಿದೇಶದಲ್ಲಿ ಪಿಎಚ್‌ಡಿ ಮಾಡುವ ಹಂಬಲವಿದೆ. ಜರ್ಮನಿ, ಫ್ರಾನ್ಸ್ ಮತ್ತಿತರ ವಿಶ್ವವಿದ್ಯಾಲಯಗಳ ವೆಬ್‌ಸೈಟ್ ಕೂಡ ವೀಕ್ಷಿಸಿ, ಕೊನೆಗೆ ಮಾರ್ಗದರ್ಶನವಿಲ್ಲದೆ ಕುಳಿತಿರುವೆ. ಮನೆಯಲ್ಲಿ ಬಡತನ; ಪೀಸ್ ಕಟ್ಟಲು ಹಣವಿಲ್ಲ. ನಿಮ್ಮ ಸಲಹೆ ತಿಳಿಸಿ.

ನೀವು ನೀಡಿರುವ ಕಿರು ಮಾಹಿತಿಯಿಂದ, ನಿಮ್ಮ ವೃತ್ತಿ ಜೀವನದ ಗುರಿ ತಿಳಿಯುತ್ತಿಲ್ಲ. ಸ್ಪಷ್ಟವಾದ, ಸಾಧಿಸಬಹುದಾದ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳಿಂದ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ನಿಮ್ಮ ಆಸಕ್ತಿ, ಅಭಿರುಚಿಯ ಆಧಾರದ ಮೇಲೆ ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ನಿಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುವುದು ಉತ್ತಮ. ವೃತ್ತಿ ಯೋಜನೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

https://www.youtube.com/c/EducationalExpertManagementCareerConsultant

ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q18. ನಾನು ದ್ವಿತೀಯ ಪಿಯುಸಿ (ವಾಣಿಜ್ಯ) ಪರೀಕ್ಷೆಯನ್ನು ಚೆನ್ನಾಗಿ ಮಾಡಿದ್ದೇನೆ. ಇಲ್ಲಿಯವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತಿದ್ದು, ಇಂಗ್ಲಿಷ್‌ನಲ್ಲಿ ಆಸಕ್ತಿ ಇರುವುದರಿಂದ, ಬಿಕಾಂ ಪದವಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಮುಂದುವರಿಸಬೇಕೆಂದುಕೊಂಡಿದ್ದೇನೆ. ಇದು ನನಗೆ ಕಷ್ಟಕರವಾಗಬಹುದೇ?

ಇಂಗ್ಲಿಷ್ ಕಲಿಯುವುದು ಕಷ್ಟವೇನಲ್ಲ. ಇಂಗ್ಲಿಷ್ ಕಲಿಕೆ ಕುರಿತು, ಕಳೆದ ವರ್ಷದ ಡಿಸೆಂಬರ್ 27ರ ಪ್ರಶ್ನೋತ್ತರದಲ್ಲಿ ಸುದೀರ್ಘವಾದ ಮಾರ್ಗದರ್ಶನವಿದೆ. ದಯವಿಟ್ಟು ಓದಿಕೊಳ್ಳಿ.

Q19. ಕೆಲಸದ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಮಯವನ್ನು ನಿರ್ವಹಣೆ ಮಾಡುವುದು ಹೇಗೆ?

ವೃತ್ತಿಯಲ್ಲಿದ್ದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವುದು ಅಸಾಧ್ಯವೇನಲ್ಲ.

ಸಮಯದ ನಿರ್ವಹಣೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:

Q20. ಸರ್, ನಾನು ಸಿವಿಲ್ ಇಂಜಿನಿಯರಿಂಗ್ (ಅಂತಿಮ ಸೆಮಿಸ್ಟರ್) ಓದುತ್ತಿದ್ದೇನೆ. ಇನ್ನೆರಡು ತಿಂಗಳಲ್ಲಿ ವ್ಯಾಸಂಗ ಮುಗಿಯುತ್ತದೆ. ನಂತರ, ಯಾವ ಕ್ಷೇತ್ರದಲ್ಲಿ ಬೇಗ ಕೆಲಸ ದೊರಕುತ್ತದೆ? ನನಗೆ ಬ್ಯಾಂಕಿಗ್ ಕೋಚಿಂಗ್ ತೆಗೆದುಕೊಂಡು, ಆ ಕ್ಷೇತ್ರದಲ್ಲಿ ಹೋಗಬೇಕೆಂದು ಯೋಚನೆಯಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳೇನೆಂಬುದನ್ನು ತಿಳಿಸಿ.

ನಿಮ್ಮ ಆಸಕ್ತಿಗೆ ಅನುಗುಣವಾಗಿ ಹೆದ್ದಾರಿ ಯೋಜನೆಗಳು, ರಸ್ತೆ ಮತ್ತು ಸೇತುವೆ ನಿರ್ಮಾಣ, ರೈಲ್ವೆ, ಅಣೆಕಟ್ಟು ಮತ್ತು ನೀರಾವರಿ ಯೋಜನೆಗಳು, ನಗರಗಳಲ್ಲಿ ಮೂಲ ಸೌಕರ್ಯ ನಿರ್ಮಾಣ, ವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆಗಳು, ವಸತಿ ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಬಹುದು. ನಮ್ಮ ಅಭಿಪ್ರಾಯದಂತೆ, ನೀವು ಓದಿರುವ ಕೋರ್ಸಿಗೂ ವೃತ್ತಿಗೂ ಸಾಮ್ಯತೆಯಿದ್ದರೆ, ಸಾಧನೆಗೆ ನೆರವಾಗುತ್ತದೆ.

Q21. ನಾನು ಬಿಎ ಓದುತ್ತಿದ್ದೇನೆ. ನಮ್ಮ ರಾಜ್ಯದಲ್ಲಿ ಲಭ್ಯವಿರುವ ಸ್ಕಾಲರ್‌ಶಿಪ್ ಬಗ್ಗೆ ಮಾಹಿತಿ ನೀಡಿ.

ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಸ್ಕಾಲರ್‌ಶಿಪ್ ಮಾಹಿತಿಗಾಗಿ ಗಮನಿಸಿ:

https://www.buddy4study.com/article/karnataka-scholarships

Q22. ನಾನು ಡಿಪ್ಲೊಮಾ ಮುಗಿಸಿ, ಪೊಲೀಸ್ ಪರೀಕ್ಷೆಗೆ ಮನೆಯಲ್ಲೇ ಸಂಪೂರ್ಣ ತಯಾರಿ ನಡೆಸುತ್ತಿದ್ದೇನೆ. ಕೋಚಿಂಗ್ ಇರಲೇಬೇಕೇ? ಮನೆಯಲ್ಲೇ ತಯಾರಿ ನಡೆಸಲೇ? ಪಿಎಸ್‌ಐ ನೋಟಿಫಿಕೇಷನ್ ಯಾವಾಗ? ದಯವಿಟ್ಟು ಮಾಹಿತಿ ನೀಡಿ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನವಿರಬೇಕು. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಿದ್ದರೆ ಸ್ವಯಂ ಅಧ್ಯಯನದಿಂದಲೂ ಯಶಸ್ಸನ್ನು ಗಳಿಸಬಹುದು. ಪರೀಕ್ಷೆಗೆ ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ ಖುದ್ದಾಗಿ ತಯಾರಿ ಮಾಡಬಹುದು. ಯೂಟ್ಯೂಬಿನಲ್ಲಿ ತಯಾರಿ ಕುರಿತ ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ವಯಂ ಅಧ್ಯಯನದಿಂದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವುದು ಕ್ಲಿಷ್ಟವಾದ ಆಯ್ಕೆ. ಎರಡೂ ಬಗೆಯ ಪ್ರಯತ್ನಗಳಿಂದ ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಇರುವುದರಿಂದ ಈ ಗೊಂದಲ ಸಹಜ. ಹಾಗಾಗಿ, ಅಂತಿಮ ನಿರ್ಧಾರ ನಿಮ್ಮದು. ಪಿಎಸ್‌ಐ ನೋಟಿಫಿಕೇಷನ್ ಮತ್ತು ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://ksp-recruitment.in/

Q23. ನಾನು ಬಿಎಸ್‌ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ (ಲೈಫ್ ಸೈನ್ಸ್). ನಾನು ಎನ್‌ಡಿಎ ಪರೀಕ್ಷೆ ಬರೆಯಬಹುದೇ?

ಮಾನ್ಯತೆ ಪಡೆದ ಬೋರ್ಡ್ನಿಂದ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಿಂದ 12ನೇ ತರಗತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಎನ್‌ಡಿಎ ಪರೀಕ್ಷೆಗೆ ಅರ್ಹರಾಗಿರುತ್ತಾರೆ ಮತ್ತು ಗರಿಷ್ಟ 19 ವರ್ಷಗಳ ಒಳಗಿದ್ದಲ್ಲಿ, ಎನ್‌ಡಿಎ ಪರೀಕ್ಷೆ ಬರೆಯಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://upsc.gov.in/whats-new/National Defence Academy and Naval Academy Examination %28I%29%2C 2022/Exam Notification

Q24. ನಾನು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 86 ತೆಗೆದುಕೊಂಡಿದ್ದೇನೆ. ಪಿಯುಸಿಯಲ್ಲಿ ಯಾವ ವಿಭಾಗವನ್ನು ತೆಗೆದುಕೊಳ್ಳಬೇಕು ಎನ್ನುವ ಗೊಂದಲವಾಗುತ್ತಿದೆ. ಕಲಾ ವಿಭಾಗ ತೆಗೆದುಕೊಂಡು ಎಲ್‌ಎಲ್‌ಬಿ ಮಾಡಿ ಐಎಎಸ್ ಮಾಡಬೇಕು ಅಂತ ಅಂದುಕೊಂಡೆ. ಆದರೆ, ತುಂಬಾ ಜನ ಕಾಮರ್ಸ್ ತೆಗೆದುಕೊಂಡು, ಪಿಯುಸಿ ಆದ ಮೇಲೆ ಕೂಡ ಎಲ್‌ಎಲ್‌ಬಿ ಮಾಡಬಹುದು ಅಂತ ಹೇಳುತ್ತಿದ್ದಾರೆ. ಹಾಗಾಗಿ ನನಗೆ ಕಾಮರ್ಸ್ ಮತ್ತು ಕಲಾ ವಿಭಾಗಗಳಲ್ಲಿ ಯಾವುದನ್ನು ತೆಗೆದುಕೊಳ್ಳಬಹುದೆಂದು ದಯವಿಟ್ಟು ತಿಳಿಸಿ.

ನಾಗರಿಕ ಸೇವಾ ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಮುಖ್ಯವಾಗಿ, ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ವೃತ್ತಿ ಯೋಜನೆಯನ್ನು ಮಾಡಬೇಕು. ವೃತ್ತಿ ಯೋಜನೆಯನ್ನು ಮಾಡುವ ಪ್ರಕ್ರಿಯೆ ಕುರಿತ ಲೇಖನ, ಇದೇ ತಿಂಗಳ 23ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಹಾಗೂ, ಪದವಿ ಪರೀಕ್ಷೆಯ ವಿಷಯಗಳನ್ನು ಆಧರಿಸಿ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನು ಆರಿಸಿಕೊಳ್ಳುವುದರ ಬಗ್ಗೆಯೂ ಇದೇ ತಿಂಗಳ 26ರ ಸಂಚಿಕೆಯಲ್ಲಿ ಲೇಖನ ಪ್ರಕಟವಾಗಿದೆ. ಈ ಎರಡೂ ಲೇಖನಗಳನ್ನು ಓದಿಕೊಂಡರೆ, ನಿಮ್ಮ ಗೊಂದಲ ಪರಿಹಾರವಾಗುತ್ತದೆ. ಹೆಚ್ಚಿನ ಮಾರ್ಗದರ್ಶನ ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

Q25. ನಾನು, ಎಂಕಾಂ ಮಾಡಿ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವನ್ನಾಗಿ, ಕಾಮರ್ಸ್ ಮತ್ತು ಅಕೌಂಟೆನ್ಸಿ ತೆಗೆದುಕೊಳ್ಳಬೇಕು ಎಂದು ಇಷ್ಟ. ಆದರೆ, ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಸ್ತುತ ಬೆಂಗಳೂರಿನಲ್ಲಿ ತರಬೇತಿ ಸೌಲಭ್ಯವಿಲ್ಲ, ಹಾಗಾಗಿ, ಕನ್ನಡ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಲು ಇಷ್ಟ ಪಡುತ್ತೇನೆ. ಈ ಎರಡರ ಮಧ್ಯೆ ಗೊಂದಲಕ್ಕೆ ಸಿಕ್ಕಿದ್ದೇನೆ. ದಯಮಾಡಿ, ನಿಮ್ಮ ಸಲಹೆ ನೀಡಿ.

ನಮಗಿರುವ ಮಾಹಿತಿಯಂತೆ, ನಾಗರಿಕ ಸೇವಾ ಪರೀಕ್ಷೆಯ ಕಾಮರ್ಸ್ ವಿಷಯದ ತರಬೇತಿ ಬೆಂಗಳೂರಿನಲ್ಲಿ ಲಭ್ಯ. ಹಾಗಾಗಿ ಅಂತಿಮ ನಿರ್ಧಾರ ನಿಮ್ಮದು.

Q26. ದೂರ ಶಿಕ್ಷಣದ ಮೂಲಕ ಪದವಿ ಪಡೆದವರಿಗೆ ಐಎಎಸ್, ಐಪಿಎಸ್ ಮಾಡಲು ಅವಕಾಶವಿದೆಯೇ? ದೂರಶಿಕ್ಷಣದಲ್ಲಿ ಯಾವ ವಿಶ್ವವಿದ್ಯಾಲಯ ಉತ್ತಮ? ದಯಮಾಡಿ ತಿಳಿಸಿ.

ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರು, ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಬಹುದು. ಉತ್ತಮ ವಿಶ್ವವಿದ್ಯಾಲಯದ ಮಾಹಿತಿಗಾಗಿ ಗಮನಿಸಿ: https://collegevidya.com/blog/top-distance-learning-colleges-in-india/

Q27. ನಾನು ಬಿಎ ಮುಗಿಸಿ ಎಂಎ ಮಾಡುತ್ತಾ ಪಿಎಸ್‌ಐ ಸ್ಪರ್ಧಾತ್ಮಕ ಪರಿಕ್ಷೆಗೆ ಓದುತ್ತಿದ್ದೇನೆ. ಈ ಭ್ರಷ್ಟಾಚಾರದ ಸಮಯದಲ್ಲಿ ನಾನು ಪಿಎಸ್‌ಐ ಹುದ್ದೆ ಪಡೆಯಬಹುದೇ?

ಆತಂಕದ ಇಂದಿನ ಪರಿಸ್ಥಿತಿ ತಾತ್ಕಾಲಿಕ; ಹಾಗಾಗಿ ಎದೆಗುಂದದೆ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ, ನಿಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಿ. ಹಾಗೂ, ಇನ್ನೂ ಹೆಚ್ಚಿನ ಏಕಾಗ್ರತೆ, ದೃಢತೆ ಮತ್ತು ಸಮಯದ ನಿರ್ವಹಣೆಯಿಂದ ತಯಾರಾಗಿ, ಸ್ಪರ್ಧಾತ್ಮಕ ಪರಿಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಪ್ರಯತ್ನಿಸಿ. ಶುಭಹಾರೈಕೆಗಳು.

Q28. ನಾನು, ನನ್ನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 90 ಗಳಿಸಿದ್ದು ಮುಂದೆ ಆರ್ಕಿಯಾಲಜಿಸ್ಟ್ ಅಗಲು ಬಯಸಿದ್ದೇನೆ. ಅದು ಹೇಗೆ ಎಂದು ತಿಳಿಸಿಕೊಡಿ.

ಪುರಾತತ್ವ ಶಾಸ್ತç (ಆರ್ಕಿಯಾಲಜಿ) ದಲ್ಲಿ ತಜ್ಞತೆ ಪಡೆಯುವ ಮುಂಚೆ ಇತಿಹಾಸ, ಮಾನವ ಶಾಸ್ತç ಮತ್ತು ಸಮಾಜ ಶಾಸ್ತçದಂತಹ ವಿಷಯಗಳ ಓದುವಿಕೆ ನಿಮ್ಮ ಮುಂದಿನ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಭದ್ರ ಬುನಾದಿಯನ್ನು ಒದಗಿಸುತ್ತವೆ. ಹಾಗಾಗಿ, ಈ ವಿಷಯಗಳಲ್ಲಿ ಬಿಎ ಪದವಿ ಕೋರ್ಸ್ ಮಾಡಿ, ಸ್ನಾತಕೋತ್ತರ ಪದವಿ ಕೋರ್ಸನ್ನು ಪುರಾತತ್ವ ಶಾಸ್ತçದಲ್ಲಿ ಮಾಡಿ, ಪುರಾತತ್ವ ಶಾಸ್ತçಜ್ಞರಾಗಿ ಕೆಲಸ ಮಾಡಬಹುದು. ಈ ವಿಷಯದಲ್ಲಿ ಪಿಎಚ್‌ಡಿ ಮಾಡಿದರೆ, ಇನ್ನೂ ಹೆಚ್ಚಿನ ಅವಕಾಶಗಳು ಲಭಿಸುತ್ತವೆ.