ಮುನ್ನಡೆ ನೀ

ನಮ್ಮ ಪ್ರೇಮದ ಫಲವೇ
ನಮ್ಮೊಲ″ನ ಸಿರಿಯೇ
ನಮ್ಮೆಲ್ಲರ ಬಾಳಿನಾಕಾಂಕ್ಷೆಂಯು ನೀನೇ
ಮುನ್ನಡೇ ನೀ ಮಗುವೇ, ಮುನ್ನಡೆ ನೀ

ಮತ ಭೇಧಗಳನು ಮರೆತು
ಭಾಷೆ ಸಂಸ್ಕ್ರುತಿಗಳಲಿ ಬೆರೆತು
ಈ ಸಮಾಜದ ಗೆಲು”ಗೆ
ಸಪ್ತ ಸ್ವರಗಳ ಧಾರೆಯ ಹರಿಸಿ
ಮುನ್ನಡೆ ನೀ ಮಗುವೇ, ಮುನ್ನಡೆ ನೀ

ಎಲ್ಲ ಜೀವಗಳನರಿತು
ಎಲ್ಲ ಮನಗಳಲಿ ಬೆರೆತು
ಈ ಪ್ರಪಂಚದ ಉಳಿವೆಗೆ
ಮಧುರ ಸಂಗೀತವ ನೀಡಿ
ಮುನ್ನಡೆ ನೀ ಮಗುವೇ, ಮುನ್ನಡೆ ನೀ

About author View all posts Author website

V Pradeep Kumar

Leave a Reply

Your email address will not be published. Required fields are marked *