ಪರಿಣಾಮಕಾರಿ ಕಲಿಕೆಗೆ ಕಾರ್ಯತಂತ್ರ

ಕೆಲವು ವರ್ಷಗಳ ಹಿಂದೆ, ಓದುವ ಪ್ರಕ್ರಿಯೆಯ ಬಗ್ಗೆ, ವಿದ್ಯಾರ್ಥಿಗಳನ್ನು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳಿರಲಿಲ್ಲ. ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರಗಳೇನು; ಜ್ಞಾಪಕಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಹೇಗೆ, ಇಂತಹ ಪ್ರಮುಖ ವಿಷಯಗಳ ಬಗ್ಗೆ ನಮ್ಮ ಶಾಲಾಕಾಲೇಜುಗಳಲ್ಲಿ ಕಲಿಸುವುದು ವಿರಳವೇ.

SQ3R

ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಒಂದು ಪರಿಣಾಮಕಾರಿ ಓದುವ ವಿಧಾನವನ್ನುSQ3R ಎಂದು ಕರೆಯಲಾಗುತ್ತದೆ; surveying [ಸಮೀಕ್ಷೆ], questioning [ ಪ್ರಶ್ನಿಸುವಿಕೆ],  Reading[ಓದುವುದು],   Restate [ಪುನರುಚ್ಛಾರಣೆ] ಮತ್ತುReview [ಪುನರಾವರ್ತನೆ].

ಸಮೀಕ್ಷೆ

ಇದು, ನೀವು ಚಾರಣವನ್ನು ಪ್ರಾರಂಭಿಸುವ ಮೊದಲು ಬೆಟ್ಟದ ವೈಮಾನಿಕ ನೋಟವನ್ನು ಪಡೆಯುವಂತೆ. ಅಂದರೆ, ಆಳವಾದ ಓದುವಿಕೆಗೆ ಮೊದಲು ಓದುವ ವಸ್ತುವಿನ ಸಾರಾಂಶ/ಅಧ್ಯಾಯವನ್ನು ಅರ್ಥಮಾಡಿಕೊಳ್ಳುವುದು.
• ಮೊದಲ ಪ್ಯಾರಾಗ್ರಾಫ್ ಮತ್ತು ನಂತರ ಕೊನೆಯದನ್ನು ಓದುವ ಮೂಲಕ ಅಧ್ಯಾಯವನ್ನು ಸಮೀಕ್ಷೆ ಮಾಡಿ.
• ಮೊದಲ ಮತ್ತು ಕೊನೆಯ ಪ್ಯಾರಾಗ್ರಾಫ್ ನಡುವಿನ ಪ್ಯಾರಾಗಳ ಮೊದಲ ವಾಕ್ಯವನ್ನು ಓದಿ.
• ದೀರ್ಘವಾದ ಪ್ಯಾರಾಗಳು / ಉಪ-ಶೀರ್ಷಿಕೆಗಳು, ಇಟಾಲಿಕ್ಸ್‍ನಲ್ಲಿರುವ ಪದಗಳನ್ನು ಗಮನಿಸಿ; ರೇಖಾಚಿತ್ರಗಳು ಮತ್ತು ಕೋಷ್ಟಕಗಳನ್ನು ನೋಡಿ.
• ಮೊದಲನೆಯದಾಗಿ, ಎರಡನೆಯದಾಗಿ, ಮುಂತಾದ ‘ಸೈನ್‍ಪೆÇೀಸ್ಟ್’ ಪದಗಳನ್ನು ಗಮನಿಸಿ.
• ಮುಖ್ಯ ಅಂಶವನ್ನು ಎತ್ತಿ ತೋರಿಸುವ ಪದಗಳನ್ನು ಗಮನಿಸಿ: ಅಂದರೆ, ಅದೇ ರೀತಿ, ಮತ್ತಷ್ಟು, ಹೆಚ್ಚುವರಿಯಾಗಿ ಆದರೆ, ಮತ್ತೊಂದೆಡೆ, ಆದಾಗ್ಯೂ ಇತ್ಯಾದಿ.
ಸಮೀಕ್ಷೆಗಾಗಿ ಒಟ್ಟು ಸಮಯದ 10% ಬೇಕಾಗುತ್ತದೆ.

ಪ್ರಶ್ನಿಸುವಿಕೆ

ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದಲ್ಲಿನ ಒಳನೋಟವನ್ನು ಪಡೆದು ಕಲಿಕೆ ಪರಿಣಾಮಕಾರಿಯಾಗುತ್ತದೆ. ಪ್ರಶ್ನೆಗಳು ಹೀಗಿರಬಹುದು:
• ಅಧ್ಯಾಯವು ವಿಷಯಗಳ ಬಗ್ಗೆ ಏನು ಸೂಚಿಸುತ್ತದೆ?
• ಅದರಲ್ಲಿ ಏನು ಇರುತ್ತದೆ ಎಂದು ನಾನು ಭಾವಿಸುತ್ತೇನೆ?
• ಏನು ಇರುವುದಿಲ್ಲ ಎಂದು ನಾನು ಭಾವಿಸುತ್ತೇನೆ?
ನಿರಂತರವಾಗಿ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಎತ್ತುವ ಮೂಲಕ, ನಮ್ಮ ಚಿಂತನಾಶಕ್ತಿ ವೃದ್ಧಿಸಿ, ಜ್ಞಾಪಕ ಶಕ್ತಿ ಹೆಚ್ಚುತ್ತದೆ; ಕಲಿಕೆ ಪರಿಣಾಮಕಾರಿಯಾಗುತ್ತದೆ.
ಪ್ರಶ್ನಿಸುವಿಕೆಗೆ ಒಟ್ಟು ಸಮಯದ 10% ಬೇಕಾಗುತ್ತದೆ.

ಓದು

ಓದುವಿಕೆಯ ಪ್ರಕ್ರಿಯೆಯನ್ನು ಚಾರಣಕ್ಕೆ ಹೋಲಿಸಬಹುದು; ಕಷ್ಟಕರವಾದ ವಿಷಯವನ್ನು ನಿಧಾನವಾಗಿಯೂ [ನಿಧಾನವಾಗಿ ಏರುವುದು], ತಿಳಿದಿರುವ ಅಥವಾ ಸುಲಭದ ವಿಷಯವನ್ನು ತ್ವರಿತವಾಗಿಯೂ [ ತ್ವರಿತವಾಗಿ ಇಳಿಯುವುದು] ಮತ್ತು ಪ್ರಚೋದನಕಾರಿ, ವಾದ, ಪರಿಕಲ್ಪನಾ ವಿಷಯವನ್ನು ಎಚ್ಚರಿಕೆಯಿಂದ ಓದುವುದು [ಅಪಾಯವಿರುವಲ್ಲಿ ಎಚ್ಚರಿಕೆಯಿಂದ].
ಈ ರೀತಿ ಓದುವುದಕೆ,್ಕ ಒಟ್ಟು ಸಮಯದ 50% ಬೇಕಾಗಬಹುದು.

ಪುನರುಚ್ಛಾರಣೆ

ಓದಿದ ನಂತರ ಪುಸ್ತಕವನ್ನು ತೆಗೆದಿಟ್ಟು, ಮುಖ್ಯ ಅಂಶಗಳು ಮತ್ತು ಪ್ರಮುಖ ವಿವರಗಳನ್ನು ಪುನರುಚ್ಛರಿಸುವುದು ಅಥವಾ ಟಿಪ್ಪಣಿ ಬರೆಯುವುದು ಪರಿಣಾಮಕಾರಿ ಕಲಿಕೆಗೆ ಅಗತ್ಯ.

ಸಂಶೋಧನೆಯ ಪ್ರಕಾರ, ಪುನರುಚ್ಛರಿಸುವುದರಿಂದ ವಿಷಯಗಳನ್ನು ಮೂರು ಪಟ್ಟು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳಬಹುದು.
ಇದಕ್ಕಾಗಿ, ಒಟ್ಟು ಸಮಯದ 20% ಮೀಸಲಿಡಿ.

ಪುನರಾವರ್ತನೆ

ಕೊನೆಯ ಹಂತದಲ್ಲಿ, ಮೊದಲ ನಾಲ್ಕು ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಬೇಕು. ಶೀರ್ಷಿಕೆಗಳನ್ನು, ಉಪಶೀರ್ಷಿಕೆಗಳನ್ನು ಮತ್ತೊಮ್ಮೆ ಸಮೀಕ್ಷೆ ಮಾಡಿ, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿ. ಅಧ್ಯಾಯದ ಸಾರಾಂಶವನ್ನು ಅರ್ಥೈಸಲು, ಕ್ಲಿಷ್ಟವಾದ ವಿಷಯಗಳನ್ನು ಪುನಃ ಓದುವುದರಿಂದ ನಿಮ್ಮ ತಿಳುವಳಿಕೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಈ ಪ್ರಕ್ರಿಯೆಗೆ, ಒಟ್ಟು ಸಮಯದ 10% ಬೇಕಾಗುತ್ತದೆ. ಒಂದು ವೇಳೆ, ನಿಮ್ಮ ಕಲಿಕೆ ಅಸಮರ್ಪಕವಾಗಿದ್ದರೆ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಓದುವ ತಂತಗಳ ಜೊತೆಗೆ, ನಮ್ಮ ಕಣ್ಣುಗಳಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿದೆ.

 • ಪಠ್ಯವನ್ನು ನೋಡಿದ ನಂತರ ಮನಸ್ಸು ಅರ್ಥೈಸಿಕೊಳ್ಳುತ್ತದೆ.
 • ಹಾಗಾಗಿ, ದೃಷ್ಟಿಯ ವ್ಯಾಪ್ತಿಯನ್ನು [ಹೆಚ್ಚಿನ ಪದಗಳು] ಹೆಚ್ಚಿಸುವುದರಿಂದ ಒಂದೇ ನೋಟದಲ್ಲಿ ಹೆಚ್ಚಿನ ಪಠ್ಯವನ್ನು ಗ್ರಹಿಸಬಹುದು.
 • ವಿಷಯದೊಂದಿಗಿನ ಪರಿಚಿತತೆ ಮತ್ತು ಉತ್ಸಾಹ, ಗ್ರಹಿಕೆಯ ವೇಗವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ನೀವು ರಸಾಯನಶಾಸ್ತ್ರದಂತಹ ವಿಷಯ ಅಥವಾ ಫುಟ್‍ಬಾಲ್‍ನಂತಹ ಆಟದ ಬಗ್ಗೆ ಪರಿಚಿತರಾಗಿದ್ದರೆ/ಆಸಕ್ತಿಯಿದ್ದರೆ, ಅದರ ಬಗ್ಗೆ ಒಂದು ಅಧ್ಯಾಯ ಅಥವಾ ಲೇಖನವನ್ನು ಅರ್ಥಮಾಡಿಕೊಳ್ಳಲು ನಿಮಗೆ ತೊಂದರೆಯಾಗುವುದಿಲ್ಲ.

ಸಲಹೆಗಳು

 • ದಿನನಿತ್ಯದ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿ.
 • ಆದಷ್ಟು ಶಾಂತ ವಾತಾವರಣದಲ್ಲಿ ಏಕಾಗ್ರತೆಯಿಂದ ಓದಿ.
 • ನಿಯತಕಾಲಿಕವಾಗಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.
 • ಓದುವಾಗ ಸ್ವಯಂ-ಮೌಲ್ಯಮಾಪನ ಮಾಡಿ.
 • ಹಿಂದಿನ ಉಪನ್ಯಾಸದ ಟಿಪ್ಪಣಿಗಳನ್ನು ನೋಡಿ ಮುಂದಿನ ಉಪನ್ಯಾಸಕ್ಕೆ ತಯಾರಾಗಿ.
 • ಟಿಪ್ಪಣಿಗಳನ್ನು ತೆಗೆದುಕೊಳ್ಳುವುದು ಮತ್ತು ಸಕ್ರಿಯವಾಗಿ ಆಲಿಸುವುದರ ಮೂಲಕ ಗಮನವನ್ನು ಬೋಧಕರ ಮೇಲೆ ಕೇಂದ್ರೀಕರಿಸಿ.
 • ಮನಸ್ಸು ಉಲ್ಲಾಸವಾಗಿರುವಾಗ, ಕಠಿಣ ವಿಷಯಗಳು ಮತ್ತು ಕಡಿಮೆ ಆಸಕ್ತಿಯ ವಿಷಯಗಳನ್ನು ಓದಿ.
 • ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಭ್ರಮರಿ ಪ್ರಾಣಾಯಾಮವನ್ನು ದಿನಕ್ಕೆ 2-3 ಬಾರಿ ಅಭ್ಯಾಸ ಮಾಡಿ.

Download PDF Document

                                 

About author View all posts Author website

V Pradeep Kumar

Leave a Reply

Your email address will not be published. Required fields are marked *