ಕೌಶಲ ವೃದ್ಧಿಗೆ ಡಿಜಿಟಲ್ ಕಲಿಕೆ

ನಿರಂತರವಾಗಿ ಬದಲಾಗುತ್ತಿರುವ ಇಂದಿನ ಸ್ಪರ್ಧಾತ್ಮಕಜಗತ್ತಿನಲ್ಲಿ ಉದ್ಯೋಗಿಗಳು ಮತ್ತು ವಿಧ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ವೃದ್ಧೀಕರಿಸುವುದುಕಡ್ಡಾಯವಾಗಿದೆ.

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಕೌಶಲ್ಯಗಳ ಬಗ್ಗೆ ಸಾಕಷ್ಟು ಪ್ರಾಮುಖ್ಯತೆಯಿಲ್ಲದೆ ಹೆಣಗಾಡುತ್ತಿರುವ ಉದ್ಯೋಗಾರ್ಥಿಗಳು ಒಂದೆಡೆಯಾದರೆ, ಈಗಾಗಲೇ ಉದ್ಯೋಗದಲ್ಲಿದ್ದು ಕೌಶಲ್ಯಗಳನ್ನು ನವೀಕರಿಸದೆ, ಅಸಮರ್ಪಕವಾದಕಾರ್ಯಕ್ಷಮತೆಯ ಪರಿಣಾಮವಾಗಿಉದ್ಯೋಗವನ್ನು ಕಳೆದುಕೊಳ್ಳುತ್ತಿರುವವರೂ ಉಂಟು. ತೀವ್ರವಾಗಿ ಅಳವಡಿಸಿಕೊಳ್ಳುತ್ತಿರುವ ರೋಬೋಟಿಕ್‍ತಂತ್ರಜ್ಞಾನ ಮತ್ತುಆಟೋಮೇಷನ್ ಪರಿಣಾಮವಾಗಿ ಸಾಂಪ್ರದಾಯಿಕಕ್ಷೇತ್ರದಲ್ಲಿನ ಕೆಲಸಗಳು ಕುಂಠಿತವಾಗುತ್ತಿದ್ದು, ಇಂದಿನ ಕೆಲಸಗಳಿಗೆ ನವೀಕರಿಸಿದತಂತ್ರಜ್ಞಾನದ ಕೌಶಲ್ಯಗಳುಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಡಿಜಿಟಲ್ ಕಲಿಕೆ ಅಥವಾಇ-ಕಲಿಕೆಯ ಸಹಾಯದಿಂದ ಕೌಶಲ್ಯಗಳನ್ನು ಪ್ರಸ್ತುತವಾಗಿಸಿಕೊಂಡು ವೃತ್ತಿಪರಜೀವನವನ್ನು ರೂಪಿಸಿಕೊಳ್ಳಬಹುದು.

ಡಿಜಿಟಲ್ ಕಲಿಕೆ ಬೋಧನೆ ಮತ್ತು ಕಲಿಕೆಗಳೆರಡಕ್ಕೂ ಸುಭದ್ರವಾದ ಅಡಿಪಾಯವನ್ನೊದಗಿಸಿದೆ. ಪ್ರಮುಖವಾಗಿ ಪಠ್ಯ, ಆಡಿಯೋ, ಚಿತ್ರಗಳು, ಅನಿಮೇಷನ್‍ಮತ್ತುವೀಡಿಯೊಇತ್ಯಾದಿ ಮಾಧ್ಯಮಗಳ ಮೂಲಕ ಜ್ಞಾನ ಮತ್ತು ಕೌಶಲ್ಯಗಳನ್ನು ಡಿಜಿಟಲ್ ಕಲಿಕೆ ಮೂಲಕ ವರ್ಧಿಸಿಕೊಳ್ಳಬಹುದು.

ಹಾಗಾಗಿ, ಆನ್‍ಲೈನ್ ಕೋರ್ಸ್‍ಗಳುಜನಪ್ರಿಯವಾಗಿರಲು ಅನೇಕ ಕಾರಣಗಳಿವೆ:

 • ಯಾವುದೇ ಸ್ಥಳದಿಂದ 24×7 ಮಾಹಿತಿ ಲಭ್ಯ.
 • ಉದ್ಯೋಗಿಗಳು ಉದ್ಯೋಗದಿಂದಅಥವಾ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ದೀರ್ಘ-ವಿರಾಮ ತೆಗೆದುಕೊಳ್ಳದೆ ತಮ್ಮ ಸಮಯಾನುಕೂಲಕ್ಕೆತಕ್ಕಂತೆಡಿಜಿಟಲ್-ಲನಿರ್ಂಗ್‍ನಿಂದಕಲಿಕೆಯನ್ನು ಮುಂದುವರಿಸಬಹುದು.
 • ನೂತನಉದ್ಯೋಗವನ್ನುಅರಸುವ ಉದ್ಯೋಗಿಗಳು ತಮ್ಮಕೌಶಲ್ಯವನ್ನು ನವೀಕರಿಸುವ ಸಾಧ್ಯತೆಗಳು.
 • ಆಫ್‍ಲೈನ್ ಮತ್ತುಆನ್‍ಲೈನ್ ಶಿಕ್ಷಣದ ಏಕೀಕರಣದೊಂದಿಗೆ ಸಮಗ್ರ ಕಲಿಕೆ.
 • ಡಿಜಿಟಲ್‍ಕಲಿಕೆಯಿಂದ ಕೌಶಲ್ಯಗಳನ್ನು ವೃದ್ಧಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ಮಹಾತ್ಮಗಾಂಧಿಯವರುಒಮ್ಮೆ ಹೇಳಿದ್ದರು, “ನಾಳೆಯೇ ಸಾಯುತ್ತೀರಿಎನ್ನುವಂತೆ ಬದುಕಿರಿಮತ್ತುಶಾಶ್ವತವಾಗಿಬದುಕಿರುತ್ತೀರಿಎಂದು ಭಾವಿಸಿಕೊಂಡು ಕಲಿಯಿರಿ.” ಈ ಅತ್ಯಮೂಲ್ಯವಾದ ನುಡಿಮುತ್ತನ್ನುವಯಸ್ಸು, ಸ್ಥಾನಮತ್ತುಪರಿಸ್ಥಿತಿಯನ್ನು ಮೀರಿ, ಬದುಕಿನಲ್ಲಿಅನುಸರಿಸಲು, ಡಿಜಿಟಲ್ ಕಲಿಕೆ ನಮ್ಮನ್ನು ಸಶಕ್ತಗೊಳಿಸುತ್ತದೆ.

ವೈವಿಧ್ಯಮಯಶಿಕ್ಷಣ

ಭಾರತವು ಸರ್ಕಾರೀ, ಖಾಸಗಿ ಮತ್ತುಡೀಮ್ಡ್ ಸೇರಿದಂತೆ 821 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿದೆ, ಹೆಚ್ಚಿನ ಸಂಸ್ಥೆಗಳಲ್ಲಿ ಡಿಜಿಟಲ್ ಕಲಿಕೆಗೆ ವಿವಿಧ ವಿಭಾಗಗಳಲ್ಲಿ ವೈವಿಧ್ಯಮಯಕೋರ್ಸ್‍ಗಳ ಆಯ್ಕೆಗಳಿವೆ. ಇದಲ್ಲದೆ, ತಂತ್ರಜ್ಞಾನ-ಸಂಬಂಧಿತ ಕೋರ್ಸ್‍ಗಳನ್ನು ನಡೆಸುವಅನ್ಯ ಸಂಸ್ಥೆಗಳೂ ಇವೆ. ಒಟ್ಟಾರೆ, ಕೆಲವು ಜನಪ್ರಿಯ ಕೋರ್ಸ್‍ಗಳೆಂದರೆ ವಿದೇಶಿ ಭಾμÉಗಳು, ಬಿಸಿನೆಸ್ ಮ್ಯಾನೇಜ್‍ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್, ಆಟೋಕ್ಯಾಡ್, ಡೇಟಾ ಬೇಸ್ ಮ್ಯಾನೇಜ್‍ಮೆಂಟ್ [ದತ್ತಾಂಶ ನಿರ್ವಹಣೆ], ಸರ್ವರ್‍ಡೇಟಾಬೇಸ್ ನಿರ್ವಹಣೆ, ಡೇಟಾಅನಾಲಿಟಿಕ್ಸ್, ಆರ್ಟಿಫಿಷಿಯಲ್‍ಇಂಟೆಲಿಜೆನ್ಸ್, ಕ್ಲೌಡ್‍ಕಂಪ್ಯೂಟಿಂಗ್, ಐಟಿ ಸರ್ವೀಸಸ್ ಮತ್ತುಕ್ವಾಲಿಟಿ ಮ್ಯಾನೇಜ್‍ಮೆಂಟ್.

ಡಿಜಿಟಲ್ ಕಲಿಕೆಕೇವಲ ಶೈಕ್ಷಣಿಕ/ಉದ್ಯೋಗ ಸಂಬಂಧಿತ ಕೋರ್ಸ್‍ಗಳಿಗಷ್ಟೇ ಸೀಮಿತವಾಗಿಲ್ಲ. ಕಾಲೇಜುಅಥವಾಉದ್ಯೋಗವನ್ನು ಪ್ರಾರಂಭಿಸಿದಾಗ ನೀವು ತ್ಯಜಿಸಿರಬಹುದಾದ ನೃತ್ಯಅಥವಾ ಸಂಗೀತದಂತಹಕಲಾತ್ಮಕ ಚಟುವಟಿಕೆಗಳ ಬಗ್ಗೆ ನೀವು ಇನ್ನೂಉತ್ಸುಕರಾಗಿದ್ದರೆ, ಡಿಜಿಟಲ್ ಕಲಿಕೆಈ ನಿಟ್ಟಿನಲ್ಲಿ ಮುಂದುವರಿಯಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಇದು ಬಹುಶಃ, ಪರ್ಯಾಯ ವೃತ್ತಿಜೀವನವನ್ನುಅಭಿವೃದ್ಧಿಪಡಿಸಲೂ ಸಹ ಕಾರಣವಾಗಬಹುದು. ಉದಾಹರಣೆಗೆ, ಅನಿವಾಸಿ ಭಾರತೀಯರು ಫೇಸ್‍ಬುಕ್, ಫೇಸ್‍ಟೈಮ್, ಸ್ನಾಪ್‍ಚಾಟ್, ಸ್ಕೈಪ್, ವಾಟ್ಸಾಪ್‍ಇತ್ಯಾದಿ ಮಾಧ್ಯಮಗಳ ಮೂಲಕ ಭಾರತೀಯ ಸಂಗೀತ, ನಾಟ್ಯತಜ್ಞರೊಡನೆ ಬೆರೆತುತಮ್ಮಲ್ಲಿರುವಕಲೆಯನ್ನುಇನ್ನೂಉನ್ನತ ಹಂತಕ್ಕೆ ವರ್ಧಿಸಿಕೊಳ್ಳಬಹುದು. ಇಂತಹ ಶೈಕ್ಷಣಿಕ ಮತ್ತುಕಲಾತ್ಮಕ ಅಗತ್ಯಗಳನ್ನು ಪೂರೈಸುವ ಪ್ರಸಿದ್ಧ ಅಕಾಡೆಮಿಗಳಿವೆ, ಸಂಸ್ಥೆಗಳಿವೆ, ಸ್ವತಂತ್ರವಾಗಿ ವ್ಯವಹರಿಸುವತಜ್ಞರಿದ್ದಾರೆ. ಆದ್ದರಿಂದ, ಡಿಜಿಟಲ್ ಕಲಿಕೆಸಮಯ, ದೂರ ಮತ್ತು ಗಡಿಗಳ ಅಡೆತಡೆಗಳನ್ನು ಮೀರಿತಜ್ಞ ವೃತ್ತಿಪರರೊಂದಿಗೆಕಲಿಕೆಯಅನಿಯಮಿತಆಯ್ಕೆಯನ್ನುಒದಗಿಸುತ್ತದೆ,
ಡಿಜಿಟಲ್‍ಕಲಿಕೆಯಕೋರ್ಸ್ ನಿರ್ಧರಿಸುವ ಮೊದಲು, ಈ ಕೆಳಗಿನ ಸಲಹೆಗಳನ್ನು ಪರಿಗಣಿಸಿ.

ಸ್ಪಷ್ಟ ಗುರಿಗಳಿರಲಿ

ಕೋರ್ಸ್ ಬಗ್ಗೆ ಅಪೇಕ್ಷೆ, ನಿರೀಕ್ಷೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು ಸಹಜ. ಆದ್ದರಿಂದ, ಶೈಕ್ಷಣಿಕ / ವೃತ್ತಿಪರ ಗುರಿಗಳ ಬಗ್ಗೆ ನಿಮಗೆ ಸ್ಪಷ್ಟವಾದಕಲ್ಪನೆಯಿರಬೇಕು. ಹಾಗೂ, ನೀವು ನಿರ್ಧರಿಸುವ ಕೋರ್ಸ್‍ಗಳಿಂದ ನಿರ್ಧಿಷ್ಟ ಸಮಯದಲ್ಲಿಗುರಿಗಳನ್ನು ಸಾಧಿಸಲು ಸಾಧ್ಯವಾಗಬೇಕು.

ಮಾನ್ಯತೆ ಪಡೆದ ಸಂಸ್ಥೆಯನ್ನೇ ಆರಿಸಿ

ನೀವು ಗಳಿಸುವಜ್ಞಾನ ಮತ್ತು ಕೌಶಲ್ಯಗಳು ಉಪಯುಕ್ತವಾಗಿದ್ದರೂ ಸಹ, ಶೈಕ್ಷಣಿಕ ಮತ್ತುಉದ್ಯಮ ವಲಯಗಳಲ್ಲಿ ಅಂತಹ ಕೋರ್ಸ್‍ಗಳನ್ನು ಎಷ್ಟರ ಮಟ್ಟಿಗೆಗುರುತಿಸಲಾಗುತ್ತದೆಎಂಬುದನ್ನು ಪರಿಶೀಲಿಸುವುದುಅಗತ್ಯ. ಆದ್ದರಿಂದ, ಕೋರ್ಸ್‍ಆಯ್ಕೆಯ ಮುನ್ನ ಸಂಪೂರ್ಣವಾದ ಸಂಶೋಧನೆ ಮಾಡಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಮಾತ್ರ ಸೇರಿ.

ಕೋರ್ಸ್ ಮತ್ತು ಬೋಧನಾಕ್ರಮ

ಆನ್‍ಲೈನ್ ಚರ್ಚೆಗಳು, ಸಂವಾದಾತ್ಮಕ ಇ-ಪಾಠಗಳು, ಬೋಧಕ-ನೇತೃತ್ವದಅಥವಾ ಸ್ವಯಂ-ಗತಿಯ ಪಾಠಗಳು, ಕೇಸ್ ಸ್ಟಡೀಸ್, ಮೊಬೈಲ್ ಕಲಿಕೆಗಳು, ಎಲೆಕ್ಟ್ರಾನಿಕ್ ಸಿಮ್ಯುಲೇಶನ್‍ಗಳು ವೀಡಿಯೊ ತರಗತಿಗಳು, ವರ್ಚುವಲ್ ತರಗತಿಗಳು, ಮುಂತಾದ ಹಲವಾರು ಬೋಧನಾ ವಿಧಾನಗಳಿವೆ/ವೇದಿಕೆಗಳಿವೆ. ಕೋರ್ಸ್‍ನ ವಿಷಯ ಮತ್ತು ಬೋಧನಾಕ್ರಮ ನಿಮ್ಮಅಗತ್ಯದಂತೆಇದೆಯೇಎನ್ನುವುದರ ಮೌಲ್ಯಮಾಪನ ಮಾಡಿ, ಉಪಯುಕ್ತತೆಯಕುರಿತು ಖಚಿತಪಡಿಸಿಕೊಳ್ಳಿ. ಜೊತೆಗೆ, ರೇಡಿಯೊ ಮತ್ತು ಟಿ.ವಿ. ಮಾಧ್ಯಮದ ಮುಖಾಂತರ ಅನೇಕ ಶಿಕ್ಷಣ ಮತ್ತುಕೌಶಲ್ಯ ಸಂಭಂದಿತ ಕಾರ್ಯಕ್ರಮಗಳು ಪ್ರಸಾರವಾಗುತ್ತಲಿದ್ದು ಅವುಗಳ ಪ್ರಯೋಜನವನ್ನೂ ಪಡೆಯಿರಿ.

ಈ ರೀತಿ, ಕೋರ್ಸನ್ನುಎಚ್ಚರಿಕೆಯಿಂದಆರಿಸುವುದರಿಂದ ನೀವು ಕೋರ್ಸನ್ನು ಪೂರ್ಣಗೊಳಿಸುವುದು ಸುಲಭ ಮತ್ತುಕೋರ್ಸ್ ನಂತರದ ನಿರಾಶೆ, ಆತಂಕಗಳಿಂದ ಪಾರಾಗಬಹುದು.

ಸಕ್ರಿಯ ಭಾಗವಹಿಸುವಿಕೆ

ಡಿಜಿಟಲ್ ಕಲಿಕೆಮುಖಾಮುಖಿ ಸಂವಹನವಿಲ್ಲದಕಲಿಕೆಯ ಮಾರ್ಗ. ಹಾಗಾಗಿ ಮಾಧ್ಯಮ, ಗ್ರಹಿಸುವ ಶಕ್ತಿ, ವಿಷಯದ ಪರಿಚಯ, ಬೋಧಕರೊಡನೆಹೊಂದಿಕೊಳ್ಳುವ ಸಾಮಥ್ರ್ಯ,ಇವೆಲ್ಲವೂಕಲಿಕೆಯ ಪರಿಪೂರ್ಣತೆಗೆಅತ್ಯಗತ್ಯ. ಬೋಧಕರು ಮತ್ತು ವರ್ಚುವಲ್ ಸಹಪಾಠಿಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು, ಆನ್‍ಲೈನ್ ಚರ್ಚೆಗಳು ಮತ್ತು ಸಂಭಂದಿತ ವೇದಿಕೆಗಳಲ್ಲಿ ಭಾಗವಹಿಸುವುದುಕಲಿಕೆಯ ಮಟ್ಟವನ್ನು ನಿರ್ಧರಿಸುತ್ತದೆ.

ಸ್ವಯಂ ಶಿಸ್ತು 

ಇಂದಿನ ಒತ್ತಡದ ಬದುಕಿನಲ್ಲಿ ವೃತ್ತಿಪರ ಮತ್ತು ವೈಯಕ್ತಿಕಜೀವನದ ನಡುವೆ ಸಮತೋಲನವನ್ನು ಸಾಧಿಸುವುದು, ಮತ್ತು ಸಮಯದ ನಿರ್ವಹಣೆಒಂದು ಸವಾಲಾಗಿದೆ. ಪೂರ್ಣ ಸಮಯದ ವೃತ್ತಿಜೀವನದಲ್ಲಿತೊಡಗಿರುವಎಲ್ಲರಿಗೂಡಿಜಿಟಲ್ ಕಲಿಕೆಒದಗಿಸುವ ಸಾಧ್ಯತೆಗಳು ಅಪಾರ. ಆನ್‍ಲೈನ್‍ಕೋರ್ಸ್‍ನ ಸಾಧ್ಯತೆಗಳು, ನಮ್ಯತೆಗಳು ಉತ್ಸಾಹಿ ಕಲಿಯುವವರನ್ನುಆಕರ್ಷಿಸುತ್ತದೆಯಾದರೂ, ಕೋರ್ಸನ್ನು ಪೂರ್ಣಗೊಳಿಸಲು ಸ್ವಯಂ-ಶಿಸ್ತು ಮತ್ತು ಬಲವಾದ ಸ್ವಯಂ-ಪ್ರೇರಣೆ ನಿರ್ಣಾಯಕವಾಗುತ್ತದೆ.

ಸಾಂಪ್ರದಾಯಿಕ ಶಿಕ್ಷಣಕ್ಕೆ ಬೇಡಿಕೆ ಹೆಚ್ಚಾಗಿದ್ದರೂ, ಗುಣಮಟ್ಟದ ಸಂಸ್ಥೆಗಳು ಮತ್ತುಅಧ್ಯಾಪಕರತೀವ್ರಕೊರತೆಯಿಂದಾಗಿಅಭಿವೃದ್ಧಿಗೆಅಡ್ಡಿಯಾಗಿದೆ. ಇದಲ್ಲದೆ, ಸಾಂಪ್ರದಾಯಿಕಕಲಿಕೆಯಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣಶಾಸ್ತ್ರದಲ್ಲಿನ ಬದಲಾವಣೆಗಳು ನಿಧಾನ ಮತ್ತುಉದ್ಯಮದ ಅವಶ್ಯಕತೆಗಳಿಗೆ ಅಷ್ಟಾಗಿ ಸಂಬಂಧಿಸಿಲ್ಲ.

ಉದಾಹರಣೆಗೆ, ಎಂಜಿನಿಯರಿಂಗ್ ಪದವೀಧರರಲ್ಲಿ ಕೇವಲ 25% ಮಾತ್ರಉದ್ಯೋಗಕ್ಕೆ ಸಿದ್ಧರಾಗಿದ್ದಾರೆ ಮತ್ತು ಉಳಿದವರು ಉದ್ಯೋಗ ಸಂಬಂಧಿತ ಕೌಶಲ್ಯಗಳಿಲ್ಲದೆ,ಕ್ಯಾಂಪಸ್ ನೇರ-ನೇಮಕಾತಿಗೆಯೋಗ್ಯರಿಲ್ಲವೆಂದುಉದ್ಯಮ ಭಾವಿಸುತ್ತದೆ. ಇಂತಹ ಪರಿಸ್ಥಿತಿಗಳಲ್ಲಿ ಡಿಜಿಟಲ್ ಕಲಿಕೆ ವ್ಯವಸ್ಥೆಯು ಸಾಂಪ್ರದಾಯಿಕ ಕಲಿಕೆಗೆ ಪೂರಕವಾಗಬಹುದು ಮತ್ತು ಉದ್ಯೋಗಾರ್ಥಿಗಳು ಉದ್ಯೋಗ-ಸಿದ್ಧ ಕೌಶಲ್ಯಗಳನ್ನು ಪಡೆದುಕೊಳ್ಳಬಹುದು. ಹೀಗಾಗಿ, ಜ್ಞಾನ ಮತ್ತು ಕೌಶಲ್ಯಗಳ ಅಂತರವನ್ನು ಸರಿಪಡಿಸಲುಡಿಜಿಟಲ್ ಕಲಿಕೆಅದ್ಭುತ ಅವಕಾಶಗಳನ್ನು ಒದಗಿಸಿ, ನಿಮ್ಮ ದೌರ್ಬಲ್ಯಗಳನ್ನು ಶಕ್ತಿಯನ್ನಾಗಿಸಿ ಪರಿವರ್ತಿಸಿ, ಶೈಕ್ಷಣಿಕ ಮತ್ತು ವೃತ್ತಿಪರಜಗತ್ತಿನಲ್ಲಿ, ನಿಮ್ಮ ಯಶಸ್ಸಿಗೆ ಕಾರಣವಾಗಬಲ್ಲದು.

ಸಲಹೆಗಳು

 • ಕೋರ್ಸ್ ಮತ್ತು ಸಂಸ್ಥೆಯನ್ನುಆಯ್ಕೆಮಾಡುವಾಗಜಾಗರೂಕರಾಗಿರಿ.
 • ಪಠ್ಯಕ್ರಮ ಮತ್ತು ಬೋಧನಾಕ್ರಮವನ್ನು ಅರ್ಥಮಾಡಿಕೊಳ್ಳಿ.
 • ಶಿಸ್ತುಬದ್ಧವಾಗಿರಿ; ಸಂಘಟಿತವಾಗಿರಿ.
 • ಕಲಿಕೆಯಲ್ಲಿ ನಿಮ್ಮ ಅಭಿಪ್ರಾಯಗಳು ಮತ್ತು ಸಮಸ್ಯೆಗಳನ್ನು ಸಮಾಲೋಚಿಸಿ.
 • ಸಮಯಕ್ಕೆ ಸರಿಯಾಗಿ ಕಾರ್ಯಯೋಜನೆಗಳನ್ನು ಯೋಜಿಸಿ ಮತ್ತು ಪೂರ್ಣಗೊಳಿಸಿ.
 • ಪರೀಕ್ಷೆಗಳನ್ನು ಬರೆಯುವಾಗ ಪ್ರಾಮಾಣಿಕವಾಗಿರಿ.
 • ವೈಯಕ್ತಿಕ ಸಂವಹನ ಅಗತ್ಯವಿರುವ [ತಂಡ ನಿರ್ಮಾಣ, ನಾಯಕತ್ವ, ಸಾರ್ವಜನಿಕ ಮಾತನಾಡುವಿಕೆ, ಅಂತರ್-ವೈಯಕ್ತಿಕ ನೈಪುಣ್ಯತೆ] ಕೋರ್ಸ್‍ಗಳಿಗೆ ಸೇರುವುದರಿಂದ ಹೆಚ್ಚಿನ ಅನುಕೂಲವಾಗಲಾರದು.

Download PDF Document

                                 

About author View all posts Author website

V Pradeep Kumar

Leave a Reply

Your email address will not be published. Required fields are marked *