Part Time ಕೆಲಸಗಳು

ಇಂದಿನ ಹಣದುಬ್ಬರದ ದಿನಗಳಲ್ಲಿ, ಎಂ.ಬಿ.ಬಿ.ಎಸ್., ಬಿ.ಇ., ಎಂ.ಬಿ.ಎ., ಇತ್ಯಾದಿ ವೃತ್ತಿಪರ ಕೋರ್ಸ್‍ಗಳ ಕಾಲೇಜ್, ಹಾಸ್ಟೆಲ್ ಫೀಸ್ ಹೊಂದಿಸುವುದು ಸವಾಲೆನಿಸುತ್ತಿದೆಯೇ? ದಿನಕ್ಕೆ ಸ್ವಲ್ಪ ಸಮಯವನ್ನು ಕಾದಿಟ್ಟರೆ ಸಾಕು, ವಿದ್ಯಾರ್ಥಿಗಳಿಗೂ, ಇತರರಿಗೂ ದೈನಂದಿನ ಹಣಕಾಸಿನ ಅವಶ್ಯಕತೆಯನ್ನು ಪೂರೈಸುವ ಆವಕಾಶಗಳೀಗ ಲಭ್ಯ.

ಕೆಲಸಗಳು ಅನೇಕ; ಆಯ್ಕೆ ಸುಲಭ

ನಿಮಗಿರುವ ಸಮಯ, ಅಭಿರುಚಿ ಮತ್ತು ಅವಶ್ಯಕತೆಗಳಿಗೆ ತಕ್ಕಂತೆ ಕೆಲಸಗಳಿವೆ.

 • ಮಾರ್ಕೆಟಿಂಗ್: ಇಲ್ಲಿ ಹಲವು ಬಗೆಯ ಕೆಲಸಗಳಿವೆ. ಉದಾಹರಣೆಗೆ, ಆಫೀಸ್ ಅಥವಾ ಮನೆಯಲ್ಲಿ ಕುಳಿತು ಫೆÇೀನ್ ಮುಖಾಂತರ ಗ್ರಾಹಕರ ವಿವರಗಳನ್ನು ಶೇಖರಿಸಿ ಪ್ರಸ್ತುತಗೊಳಿಸುವುದು [ಅಪ್ಡೇಟ್], ಸಂಭಾವ್ಯ ಗ್ರಾಹಕರಿಗೆ ಉತ್ಪನ್ನಗಳ ಪ್ರಚಾರವನ್ನು ಮಾಡುವುದು ಇತ್ಯಾದಿ. ಈ ರೀತಿ, ಮಾರ್ಕೆಟಿಂಗ್ ಉದ್ಯೋಗಾವಕಾಶಗಳು ಅಪರಿಮಿತ ; ಆದಾಯ ನಿಮ್ಮ ಪರಿಶ್ರಮದ ಮೇಲೆ ಮಾತ್ರ ಅವಲಂಬಿತ.
 • ಹೋಟೆಲ್, ಕಾಫಿ-ಶಾಪ್, ರೆಸ್ಟೋರೆಂಟ್‍ಗಳು: ಸ್ವಾಗತಿಸುವುದು, ಆರ್ಡರ್ ತೆಗೆದುಕೊಳ್ಳುವುದು, ಸಪ್ಲೈಸ್, ಬಿಲ್ಲಿಂಗ್, ಉಸ್ತುವಾರಿ, ಸೇವೆಯಲ್ಲಿನ ಕುಂದು ಕೊರತೆಗಳ ನಿವಾರಣೆ, ಇತ್ಯಾದಿ.
 • ಮಾಧ್ಯಮಗಳು: ಟಿ.ವಿ. ಚಾನೆಲ್, ರೇಡಿಯೊ, ಪತ್ರಿಕೆಗಳ ಪ್ರಚಾರಕ್ಕಾಗಿ, ಸಂಶೋಧನೆಗಳಿಗಾಗಿ ನಿತ್ಯ ಅಥವಾ ವಾರಾಂತ್ಯದಲ್ಲಿ ಮಾಡುವ ಈ ಕೆಲಸಗಳಲ್ಲಿ, ಸಂದಾಯದೊಡನೆ ಒಳ್ಳೆಯ ಅನುಭವ ಸಹಾ ಲಭ್ಯ.
 • ಅಧ್ಯಾಪನ: ನಿಮಗೆ ಗಣಿತದಲ್ಲಿ ಸಾಮಥ್ರ್ಯವಿದೆಯೇ? ಹಾಗಿದ್ದಲ್ಲಿ, ಬೇರೆ ವಿದ್ಯಾರ್ಥಿಗಳಿಗೆ ಕಲಿಸಿ ಸಹಾಯ ಮಾಡಬಾರದೇಕೆ? ಈ ರೀತಿ, ನಿಮ್ಮಲ್ಲಿರುವ ಕೌಶಲ್ಯವನ್ನು ಬೇರೆಯವರಿಗೆ ಕಲಿಸುವುದರಿಂದ, ಅಧ್ಯಾಪನದ ಜೊತೆ ಗಳಿಕೆ ಕೂಡ ಆಗುತ್ತದೆ.
 • ಬರವಣಿಗೆ: ಇತ್ತೀಚೆಗೆ ಜನಪ್ರಿಯವಾಗಿರುವ ಮನೆಯಿಂದಲೂ ಮಾಡಬಹುದಾದ ಸ್ವತಂತ್ರವಾದ ಬರವಣಿಗೆಯಿಂದ [ಫ್ರೀಲಾನ್ಸ್ ಕಂಟೆಂಟ್ ರೈಟಿಂಗ್] ಅಂತರ್ಜಾಲದ ಪತ್ರಿಕೆಗಳಿಗೆ, ವೆಬ್ ಸೈಟ್‍ಗಳಿಗೆ, ಪುಸ್ತಕಗಳಿಗೆ, ಬರೆಯುವ ಮತ್ತು ಅನುವಾದಿಸುವ ಪಾರ್ಟ್ ಟೈಮ್ ಕೆಲಸಗಳಿವೆ. ಇದಲ್ಲದೆ, ಪ್ರಿಂಟ್ ಮಾಧ್ಯಮದ ಬರವಣಿಗೆಯನ್ನು ಕಂಪ್ಯೂಟರ್‍ಗೆ ಅಳವಡಿಸುವ ಕೆಲಸಗಳೂ ಇವೆ. ಹಾಂ! ಈ ಕೆಲಸಗಳಿಗೆ ಸಂದಾಯ ಡಾಲರ್‍ನಲ್ಲಿ! ಹಾಗಾಗಿ, ತಿಂಗಳಿಗೆ 40ರಿಂದ 50 ಸಾವಿರ ರೂಪಾಯಿಯ ಆದಾಯದ ಸಾಧ್ಯತೆಗಳಿವೆ!
 • ಶಾಪಿಂಗ್ ಮಾಲ್: ಕ್ರೆಡಿಟ್ ಕಾರ್ಡ್, ಬ್ಯಾಂಕ್, ರೆಸಾರ್ಟ್, ಮೊಬೈಲ್ ಇತ್ಯಾದಿ ಉದ್ದಿಮೆಗಳಲ್ಲಿನ ಪೈಪೋಟಿಯಿಂದ ಪ್ರಚಾರದ ಅವಕಾಶಗಳು ಅತ್ಯಧಿಕವಾಗಿವೆ. ಅದೇ ರೀತಿ, ಮಾಲ್, ಸೂಪರ್ ಮಾರ್ಕೆಟ್‍ಗಳಲ್ಲಿ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಪ್ರವರ್ತಕರ ಅಗತ್ಯವಿರುತ್ತದೆ.
 • ಪ್ರದರ್ಶನಗಳು: ಅತಿಥಿಗಳನ್ನು ಸ್ವಾಗತಿಸಿ, ಅವರನ್ನು ಪೂರ್ವನಿರ್ಧಾರಿತ ಸ್ಥಳಕ್ಕೆ ಕರೆದೊಯ್ಯುವುದು, ಉತ್ಪನ್ನಗಳ ಮಾಹಿತಿಯನ್ನು ನೀಡುವುದಂತಹ ಸರಳ ಜವಾಬ್ದಾರಿಗಳನ್ನು ನಿಭಾಯಿಸಿದರೆ, ಸಂಭಾವನೆ ಆಕರ್ಷಕ.
 • ಹವ್ಯಾಸಿ ಉದ್ಯೋಗಗಳು: ನಿಮಗೆ ಸಂಗೀತ, ನೃತ್ಯ, ಚಿತ್ರಕಲೆ, ಈಜು, ಯೋಗ, ಇತ್ಯಾದಿಗಳಲ್ಲಿ ಪರಿಣತಿ ಇದ್ದಲ್ಲಿ, ಈಗಿರುವ ಬೇಡಿಕೆಯನ್ನು ಉಪಯೋಗಿಸಿಕೊಂಡು, ಗಳಿಕೆಯ ಮಾರ್ಗವನ್ನಾಗಿ ಪರಿವರ್ತಿಸಬಹುದು.

ಅನುಕೂಲಗಳೇನು?

 • ಕರ್ತವ್ಯ ಮತು ಜವಾಬ್ದಾರಿ: ಸೋಮಾರಿತನ ಮಾಯವಾಗಿ, ಕರ್ತವ್ಯಗಳ ಮತ್ತು ಜವಾಬ್ದಾರಿಗಳ ಅರಿವಾಗಿ ಜೀವನದ ಮುಖ್ಯ ಪಾಠವನ್ನು ಕಲಿತಂತಾಗುತ್ತದೆ. ಹಾಗಾಗಿ, ನಡೆ, ನುಡಿಯಲ್ಲಿ ಪರಿಪಕ್ವತೆ ಬಂದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರ.
 • ಶಿಸ್ತು ಮತ್ತು ಸಮಯ ಪ್ರಜ್ಞೆ: ಸಾಮಾನ್ಯವಾಗಿ ಪಾರ್ಟ್ ಟೈಮ್ ಕೆಲಸಗಳಲ್ಲಿ ಸಮಯದ ಒತ್ತಡವಿರುವುದು ಸ್ವಾಭಾವಿಕ. ಈ ಒತ್ತಡದಿಂದ, ಸಮಯ ಪ್ರಜ್ಞೆ ಮೂಡಿ, ಕೆಲಸವನ್ನು ನಿರ್ವಹಿಸುವ ಸಾಮಥ್ರ್ಯವೂ ಬೆಳೆಯುತ್ತದೆ. ಈ ಶಿಸ್ತು ಮತ್ತು ಸಮಯ ಪ್ರಜ್ಞೆ, ಜೀವನದ ಯಶಸ್ಸಿಗೆ ಅತ್ಯವಶ್ಯಕ.
 • ಕೌಶಲ್ಯಗಳ ಕಲಿಯುವಿಕೆ: ಪಾರ್ಟ್ ಟೈಮ್ ಮಾರ್ಕೆಟಿಂಗ್ ಕೆಲಸಗಳಿಂದ ಸಂಬಂಧಪಟ್ಟ ಕೌಶಲ್ಯಗಳು-ಮಾತುಗಾರಿಕೆ, ವ್ಯಕ್ತಿತ್ವ ವಿಕಸನ, ಸಮಯೋಜಿತ ಜಾಣ್ಮೆ ಇತ್ಯಾದಿಗಳ-ಬಗ್ಗೆ ತರಬೇತಿ ಸಿಗುತ್ತದೆ. ಪಾರ್ಟ್ ಟೈಮ್ ಮತ್ತು ನೀವು ಅಪೇಕ್ಷಿಸುವ ಖಾಯಂ ವೃತ್ತಿಯಲ್ಲಿ ಹೊಂದಾಣಿಕೆಯಿದ್ದರೆ, ನೂತನ ಕೌಶಲ್ಯಗಳು ವೃತ್ತಿಯಲ್ಲಿ ಉಪಯೋಗಕ್ಕೆ ಬಂದು, ತ್ವರಿತವಾಗಿ ಉನ್ನತ ಪದವಿಯನ್ನು ಗಳಿಸಬಹುದು.
 • ಸ್ವಾವಲಂಬನೆ: ಯೌವನದಲ್ಲಿಯೇ ಸ್ವಾವಲಂಬಿಗಳಾಗಿ ಜೀವನದಲ್ಲಿ ಮೇಲೆ ಬರುವುದು ಒಂದು ಹೆಮ್ಮೆಯ ವಿಚಾರ. ಜೊತೆಗೆ, ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಕೂಡಿಡಬಹುದು; ಅಗತ್ಯ ವಸ್ತುಗಳನ್ನು ಖರೀದಿಸಬಹುದು; ಸಂಸಾರಕ್ಕೂ ನೆರವಾಗಬಹುದು. ಮುಖ್ಯವಾಗಿ, ಜೀವನದ ನಿಯಮಗಳ, ಮೌಲ್ಯಗಳ ಅರಿವಾದಂತೆ, ಅಹಂಕಾರ, ಪ್ರತಿಷ್ಠೆಯ ಬದಲಾಗಿ ಆತ್ಮಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.

ಪಾರ್ಟ್ ಟೈಮ್ ಕೆಲಸಗಳಲ್ಲಿ ವೈವಿಧ್ಯತೆಗಳಿವೆ; ಕಲಿಕೆಯ ದಾರಿಗಳಿವೆ. ಕುತೂಹಲವನ್ನು ಕೆರಳಿಸಿ, ಪ್ರತಿಭೆಯನ್ನು ಅರಳಿಸುವ ಸವಾಲುಗಳಿವೆ. ತಿಂಗಳೊಂದಕ್ಕೆ ಸುಮಾರು 10,000 ರೂಪಾಯಿಗಳವರೆಗೆ ಸಂಪಾದನೆಯಾಗಬಹುದು. ಅಷ್ಟೇ ಅಲ್ಲ! ಮಾನವ ಸಂಪನ್ಮೂಲ ಅಧಿಕಾರಿಗಳ ಪ್ರಕಾರ, ಇಂತಹ ಪಾರ್ಟ್ ಟೈಮ್ ಕೆಲಸಗಳು, ವಿದ್ಯಾಭ್ಯಾಸದ ನಂತರ ಖಾಯಂ ಕೆಲಸದ ನೇಮಕಾತಿಯಲ್ಲೂ ಸಹಾಯಕಾರಿ.

                                 

About author View all posts Author website

V Pradeep Kumar

2 CommentsLeave a comment

Leave a Reply

Your email address will not be published. Required fields are marked *