ಎಸ್. ವೆಂಕಟರಾಮ್ (S. Venkatram)

“ರಾಜಕೀಯ ಸ್ಥಿತಿ ಏನು, ಹೇಗೆ ಎಂಬುದು ಯಾರೂ ಊಹಿಸಲಾಗದ ವಿಷಯ. ದೇಶ ಹೋಗುತ್ತಿರುವ ಸ್ಥಿತಿ ಭಯಂಕರವಾಗಿದೆ. ಬೆಲೆ ಇಳಿತಗಳು ಆಗಿರಬಹುದು. ಆದರೆ ಜನರನ್ನು ವಿಚಾರಣೆ ಇಲ್ಲದೆ, ಆಪಾದನೆ ಇಲ್ಲದೆ, ಕಾಲದ ಮಿತಿಯಿಲ್ಲದೆ, ಸರ್ಕಾರ ಜೈಲಿನಲ್ಲಿಡುವ ಪರಿಸ್ಥಿತಿ ಮುಂದುವರಿದರೆ ಯಾರ ಭವಿಷ್ಯವೂ ಕ್ಷೇಮವಲ್ಲ. ನಮ್ಮ ಬಿಡುಗಡೆ ಇವತ್ತಲ್ಲ, ನಾಳೆ ಆಗುತ್ತೆ. ಅದರ ಬಗ್ಗೆ ಅಷ್ಟೇನು ಚಿಂತೆಯಿಲ್ಲ. ಆದರೂ ದೇಶದ ಭವಿಷ್ಯದ ಬಗ್ಗೆ ಚಿಂತೆ ಕಾಡುತ್ತಿದೆ. ಆದರೆ ಈ ಕಾರ್ಗತ್ತಲೆಯಿಂದ ಉಷಃಕಾಲ ಬರುತ್ತದೆಂದು ನಂಬಿಕೆಯಿದೆ”. ಇದು ನನ್ನ ತಂದೆ ಹಿರಿಯ ಸಮಾಜವಾದಿ, ಕಾರ್ಮಿಕ ನಾಯಕ ಎಸ್. ವೆಂಕಟರಾಮ್ ಮಾರ್ಚ್ 1976ರಲ್ಲಿ, ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ಬರೆದ ಪತ್ರದ ಸಾರಾಂಶ. ವೆಂಕಟರಾಮ್‍ರವರು ಸಮಾಜದ ಒಳಿತಿಗಾಗಿ, ಪರಿವರ್ತನೆಗಾಗಿ ನಡೆಸಿದ ರಾಜಕೀಯ ಮತ್ತು ಕಾರ್ಮಿಕ ಹೋರಾಟಗಳು, ಸತ್ಯಾಗ್ರಹಗಳು, ಜೈಲುವಾಸಗಳು ಅವರ ಸಾರ್ವಜನಿಕ ಜೀವನದ ಒಂದು ಅವಿಭಾಜ್ಯ ಅಂಗವಾಗಿತ್ತು.

ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಜೂನ್ 26, 1975 ತಮ್ಮ ಸ್ವಹಿತಕ್ಕಾಗಿ ಘೋಷಿಸಿದ ತುರ್ತುಪರಿಸ್ಥಿತಿಯ ಮೊದಲು ಮತ್ತು ಅದರ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ರಾಜಕೀಯ ನಾಯಕರುಗಳು, ಕಾರ್ಯಕರ್ತರು, ವಿಧ್ಯಾರ್ಥಿಗಳು ಮತ್ತು ಕಾರ್ಮಿಕರು, ನಡೆಸಿದ ಹೋರಾಟ ಭಾರತದ ಇತಿಹಾಸದ ಎರಡನೇ ಸ್ವಾತಂತ್ರ ಸಂಗ್ರಾಮವೆಂದರೆ ತಪ್ಪಾಗಲಾರದು. ಆ ದಿನಗಳಲ್ಲಿ ದೇಶಕ್ಕಾಗಿ ನಿಸ್ವಾರ್ಥವಾಗಿ ಹೋರಾಡಲು ವೆಂಕಟರಾಮ್‍ರವರಂತ ರಾಜಕೀಯ ನಾಯಕರುಗಳಿದ್ದರು; ಅವರಿಗೆ ಬೆಂಬಲವಾಗಿ ಲಕ್ಷಾಂತರ ಕಾರ್ಯಕರ್ತರೂ, ಕಾರ್ಮಿಕರೂ, ರೈತರೂ ಇದ್ದರು.

ಈಗ ದೇಶಾಭಿಮಾನವಿಲ್ಲದೆ, ಸೇವಾ ಮನೋಭಾವವಿಲ್ಲದೆ, ರಾಜಕೀಯ ವ್ಯಾಪಾರವಾಗಿ, ಭ್ರಷ್ಟಾಚಾರ ಮುಗಿಲಿಗೆದ್ದಿದೆ. ಭ್ರಷ್ಟಾಚಾರ, ಏರುತ್ತಿರುವ ಬೆಲೆ, ಜಾಗತೀಕರಣದ ಸಮಸ್ಯೆಗಳು ಇತ್ಯಾದಿಗಳಿಂದ ಎಲ್ಲಾ ಪ್ರದೇಶಗಳ, ಎಲ್ಲಾ ವರ್ಗಗಳ ಜನತೆ ಹತಾಶರಾಗಿದ್ದಾರೆ. ದೇಶದ ಸ್ಥಿತಿ ಅಂದಿಗಿಂತ ಇಂದು ಹೆಚ್ಚು ಭಯಂಕರವಾಗಿರುವ ಈ ಹಿನ್ನೆಲೆಯಲ್ಲಿ ವೆಂಕಟರಾಮ್‍ರವರಂತ ನಾಯಕರಿಲ್ಲದಿರುವುದು ವಿಷಾದದ ಸಂಗತಿ.

ರಾಜಕೀಯ ಭ್ರಷ್ಟಾಚಾರದ ವಿರುದ್ಧ ನಾಗರೀಕ ಸಮಾಜ ಸಿಡಿದೆದ್ದಿದೆ. ಆದರೆ, ಭೂತಾಕಾರವಾಗಿ ಕಾಣುತ್ತಿರುವ ಭ್ರಷ್ಟಾಚಾರ ನಮ್ಮ ದೇಶದ ಸಮಸ್ಯೆಗಳಲ್ಲೊಂದು ಮಾತ್ರ. ಜಾಗತೀಕರಣದಿಂದ ಹಲವಾರು ವಲಯಗಳಲ್ಲಿ ಪ್ರಗತಿಯಾಗಿದೆಯೆನ್ನಲು ಸ್ಪಷ್ಟೀಕರಣಗಳನ್ನು ನೀಡಬಹುದು; ಆದರೆ ಜಾಗತೀಕರಣವನ್ನು ನಮ್ಮ ಪರಿಸ್ಥಿತಿಗೆ ಸರಿಯಾಗಿ ಅಳವಡಿಸಿಕೊಳ್ಳದೆ ಆಗಿರುವ ದುಷ್ಪರಿಣಾಮಗಳನ್ನೂ ಗಮನಿಸಬೇಕು. ಆದರೆ, ಇದಕ್ಕೆ ಜಾಗತೀಕರಣದ ರೂಪರೇಷೆಗಳು ಮಾತ್ರ ಕಾರಣವಲ್ಲ; ಅದಕ್ಕೂ ಹೆಚ್ಚಾಗಿ ರಾಜಕೀಯ ಮತ್ತು ಆಡಳಿತದ ದೌರ್ಬಲ್ಯಗಳು ಕಾರಣ. ಮುಖ್ಯವಾಗಿ, ನಮ್ಮಾ ಎಲ್ಲಾ ಸಮಸ್ಯೆಗಳಿಗೂ ರಾಜಕೀಯ ಭ್ರಷ್ಟಾಚಾರವೇ ಕಾರಣವೆಂದು ಗ್ರಹಿಸಲಾಗದು. ಈ ನಿಟ್ಟಿನಲ್ಲಿ ಖಾಸಗೀ ವಲಯ ಮತ್ತು ಕಾರ್ಯಾಂಗಗಳಲ್ಲಿನ ಭ್ರಷ್ಟಾಚಾರದ ಪರಿಮಾಣ, ರಾಜಕೀಯ ವಲಯಕ್ಕಿಂತಲೂ ಬೃಹತ್ ಪ್ರಮಾಣದ್ದೆಂದು ನಾವು ಗುರುತಿಸಬೇಕು.

ಸರ್ವವ್ಯಾಪಿಯಾಗಿರುವ ಭ್ರಷ್ಟಾಚಾರದ ಪರಿಣಾಮವಾಗಿ, ಸ್ವಿಸ್ ಬ್ಯಾಂಕುಗಳಲ್ಲಿ ಶೇಖರಿಸಿರುವ ಕಪ್ಪುಹಣವನ್ನು ಸರ್ಕಾರ ವಶಪಡಿಸಿಕೊಳ್ಳಬೇಕು, ನಿಜ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಧಾರ್ಮಿಕಸ್ಥಳಗಳಲ್ಲಿನ ಬೃಹತ್ ಪ್ರಮಾಣದ ಆಸ್ತಿಪಾಸ್ತಿಯ ವಿವರುಗಳು ಜನತೆಯನ್ನು ಬೆರಗಾಗಿಸಿ, ನಮ್ಮ ದೇಶದ ಪುರಾತನ ಸಂಸ್ಕೃತಿ, ಪರಂಪರೆ ಮತ್ತು ಸಂಪತ್ತಿನ ದಿನಗಳನ್ನು ನೆನಪಾಗಿಸಿದೆ. ಇಂದು ಭಾರತ, ವಾರ್ಷಿಕ ಆದಾಯದ ಆಧಾರದ ಮೇಲೆ ಅಮೇರಿಕ, ಚೀನ, ಜಪಾನ್ ನಂತರ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಇದು ಅಧಿಕೃತ ಆದಾಯ ಮತ್ತು ಸಂಪತ್ತಿನ ಆಧಾರದ ಮೇಲೆ. ನಮ್ಮ ದೇಶಕ್ಕೆ ಸೇರಿದ ಎಲ್ಲಾ ಸಂಪತ್ತನ್ನು -ಈಗ ಎಲ್ಲೇ ಇರಲಿ, ಕ್ರೋಡೀಕರಿಸಿ, ಆದಾಯದ ಲೆಕ್ಕಾಚಾರ ಮಾಡಿದಲ್ಲಿ, ಭಾರತ ಪ್ರಪಂಚದ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್ ಮತ್ತು ಚೀನ ದೇಶಗಳನ್ನು ಹಿಂದೆ ಸರಿಸಿ, ಅಗ್ರ ಸ್ಥಾನಕ್ಕಾಗಿ ಅಮೇರಿಕದೊಡನೆ ಪೈಪೆÇೀಟಿಗೆ ನಿಲ್ಲುವುದರಲ್ಲಿ ಸಂಶಯವೇ ಇಲ್ಲ.

ಆದ್ದರಿಂದ, ಹೊರದೇಶಗಳಿಂದ ತರಬೇಕಾದ ಕಪ್ಪುಹಣದ ಜೊತೆಗೆ, ದೇಶದಲ್ಲೇ ಶೇಖರವಾಗಿರುವ ಬೃಹತ್ ಸಂಪತ್ತಿನ ಬಗ್ಗೆಯೂ ಕೇಂದ್ರ ಸರ್ಕಾರ ಎಚ್ಚೆತ್ತು ಕ್ರಮ ತೆಗೆದುಕೊಳ್ಳಬೇಕು. ಹಾಗಾದಲ್ಲಿ ಭಾರತ ನಿಜಕ್ಕೂ ಮತ್ತೆ ಸಂಪದ್ಭರಿತವಾಗಿ, ನಮ್ಮ ಸರ್ವತೋಮುಖ ಪ್ರಗತಿಯಾಗಲು ಸಾಧ್ಯ; ಹಣಕಾಸು, ತೆರಿಗೆಯಂತಹ ವಲಯಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರಬಹುದು. ಆದರೆ ಹಗರಣಗಳಲ್ಲಿ ಮುಳುಗಿರುವ ಕೇಂದ್ರ ಸರ್ಕಾರ ಜನಲೋಕಪಾಲ್‍ನಂತಹ ಮಸೂದೆಯ ಬಗ್ಗೆಯೇ ಹಿಂದೇಟು ಹಾಕುತ್ತಿದ್ದು, ದೇಶದ ಸಂಪತ್ತಿನ ರಕ್ಷಣೆಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಸಂಭವ. 1975-77 ರಲ್ಲಿ ಕಂಡಂತೆ, ಹೊಸ ಸಮಾಜವನ್ನು ರೂಪಿಸಲು ಅಗತ್ಯವಾದ, ತೀರ್ವವಾದ ಬದಲಾವಣೆಗಳು ದೇಶಾಭಿಮಾನದಿಂದ ಪ್ರೇರೇಪಿತ ಕ್ರಾಂತಿಯಿಂದಲೇ ಸಾಧ್ಯ. ಆದರೆ, ಇಂದಿನ ಕ್ರಾಂತಿಯಲ್ಲಿ ಭಾಗವಹಿಸಲು ಪ್ರಮುಖ ರಾಜಕೀಯ ಪಕ್ಷಗಳಿಗೆ ಯಾವ ನೈತಿಕ ಹಕ್ಕೂ ಇಲ್ಲ; ಏಕೆಂದರೆ ಇಂದಿನ ಕಲುಷಿತ ಭ್ರಷ್ಟಾಚಾರದ ರಾಜಕೀಯದಲ್ಲಿ ಹೆಚ್ಚು ಕಡಿಮೆ ಎಲ್ಲಾ ಪಕ್ಷಗಳೂ ಜನತಾ ನ್ಯಾಯಾಲಯದ ಮುಂದೆ ಬೆತ್ತಲೆಯಾಗಿದ್ದಾರೆ.

ಸಂತೋಷದ ಸಂಗತಿಯೇನೆಂದರೆ, ಯುವಜನಾಂಗ, ಮಹಿಳೆಯರೂ ಸೇರಿದಂತೆ ಮಧ್ಯಮವರ್ಗದ ಜನತೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗಿದ್ದಾರೆ. ಇದು ಕೆಲವೊಮ್ಮೆ sms, emಚಿiಟ ಅಥವಾ soಛಿiಚಿಟ meಜiಚಿ ಮುಖಾಂತರವಾಗಿದ್ದರೂ, ಜನತೆ ಎಚ್ಚೆತ್ತಿರುವುದು ಆರೋಗ್ಯಕರ ಬೆಳವಣಿಗೆ. ಗೂಗಲ್ ಸಂಸ್ಥೆಯಲ್ಲಿದ್ದ ನನ್ನ ಸ್ನೇಹಿತ ವೇಲ್ ಘೋನೀಮ್ ಇತ್ತೀಚಿನ ಈಜಿಪ್ಟ್ ಕ್ರಾಂತಿಯ ಕಹಳೆಯನ್ನೂದಿದ್ದು ಜಿಚಿಛಿebooಞನಲ್ಲಿಯೇ; ನಂತರ ಅಲ್ಲಿನ ಯುವಜನಾಂಗ ಪ್ರೇರೇಪಿತ ಕ್ರಾಂತಿ, ಹೊಸ ಸಮಾಜದ ಸೃಷ್ಟಿಗೆ ಅನುವಾದದ್ದು, ಈಜಿಪ್ಟಿನ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿರುತ್ತದೆ. ಹಾಗೆಯೇ, ಭಾರತದಲ್ಲೂ ಹೊಸ ಸಮಾಜದ ಸೃಷ್ಟಿಗೆ, ಯುವಜನಾಂಗ ಮತ್ತು ಮಧ್ಯಮ ವರ್ಗವೇ ಪ್ರಮುಖವಾದ ಪಾತ್ರ ವಹಿಸಲಿದೆ.

ಶತಮಾನಗಳಿಂದ ಮೊಘಲರು, ಬ್ರಿಟೀಶರು ಮತ್ತು ಸ್ವಾತಂತ್ರಾ ನಂತರ ನಮ್ಮವರೇ ಆದ, ನಾವೇ ಚುನಾಯಿಸಿದ ಜನಪ್ರತಿನಿದಿಗಳಿಂದ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯಲಾಗಿದೆ. ನ್ಯಾಯ ದೇವತೆಯ ಮುಂದೆ ಈ ಭ್ರಷ್ಟರು ಶರಣಾಗಲೇಬೇಕು. 1975-77ರ ಹೋರಾಟದಲ್ಲಿ ದೇಶದ ಒಳಿತಿಗಾಗಿ, ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಹೋರಾಡಿದ, ರಾಜಕೀಯ ನಾಯಕರುಗಳೂ, ಕಾರ್ಯಕರ್ತರೂ ಸೇರಿದಂತೆ ಸುಮಾರು 140,000 ಜನ ಬಂಧಿತರಾಗಿದ್ದರು. ಈಗ ದೇಶದ ಸಂಪತ್ತನ್ನು ಲೂಟಿ ಮಾಡಿರುವ ಲಕ್ಷಾಂತರ ಜನರಾರೇ ಇರಲಿ- ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಏಜೆಂಟರುಗಳು, ತೆರೆದಿರುವ ನಮ್ಮ ಸೆರೆಮನೆಗಳನ್ನು ಸೇರಲೇಬೇಕು. ಇಂದಿನ ಹೋರಾಟಗಳ ಕುರುಹಾಗಿ ಭ್ರಷ್ಟಾಚಾರಿಗಳ ಸೆರೆಮನೆಯ ಪಯಣ ಈಗಾಗಲೇ ಶುರುವಾಗಿದೆ. ತಾವೇ ಸೃಷ್ಟಿಸಿದ ಭ್ರಷ್ಟಾಚಾರದ ಸುಳಿಯಲ್ಲಿ, ತಾವೇ ತೋಡಿದ ಗುಂಡಿಗಳಲ್ಲಿ, ಭ್ರಷ್ಟರ ಸಮಾಧಿಯಾಗಬೇಕು; ಹೊಲಸಾಗಿರುವ ನಮ್ಮ ಸಮಾಜದ ಪರಿವರ್ತನೆಗೆ ಹೊಸ ಚಿಗುರು, ಹೊಸ ಆಶಾಕಿರಣ ಮೂಡಬೇಕು. ಎಲ್ಲ ಸಮಾಜಗಳಲ್ಲಿ ಬದಲಾವಣೆಗಳೇ ಶಾಶ್ವತ. ಆರೋಗ್ಯಕರವಾದ ಬದಲಾವಣೆಗಳಿಂದ ಸಮಾಜವನ್ನು ಶಕ್ತಿಯುತವಾಗಿ ಬೆಳಸಲು ಎರಡು-ಮೂರು ದಶಕಗಳಿಗೊಮ್ಮೆ ಇಂತಹ ಕ್ರಾಂತಿಗಳಾಗುತ್ತಿರಲೇಬೇಕು.

Download PDF document

   

About author View all posts Author website

V Pradeep Kumar

Leave a Reply

Your email address will not be published. Required fields are marked *