ಡಿಜಿಟಲ್ ಜಗತ್ತಿನಲ್ಲಿ ಮಾನವಿಕ ಶಾಸ್ತçಗಳ ಪ್ರಸ್ತುತತೆ

ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಮ್ಮನ್ನು ನಿಬ್ಬೆರಗಾಗಿಸುವ ಅನೇಕ ಬೆಳವಣಿಗೆಗಳಾಗುತ್ತಿವೆ.

ಉದಾಹರಣೆಗೆ, ಆಟೋಮೊಬೈಲ್ ಉದ್ಯಮದಲ್ಲಿ, ಕಂಪನಿಗಳು ಮಾನವನ ನಡವಳಿಕೆಯನ್ನು ಗ್ರಹಿಸಿ, ಅದಕ್ಕನುಗುಣವಾಗಿ ಸುರಕ್ಷಿತ, ಸ್ವಯಂ-ಚಾಲನಾ ಕಾರುಗಳನ್ನು ನಿರ್ಮಿಸಲು ಮಾನವಶಾಸ್ತçದ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಇದೇ ರೀತಿ, ಅನೇಕ ವಲಯಗಳಲ್ಲಿ ತಂತ್ರಜ್ಞಾನದ ಅಪಾರವಾದ ಶಕ್ತಿಗೆ, ಮಾನವಿಕ ವಿಜ್ಞಾನದ ಅರ್ಥಪೂರ್ಣ ಒಳನೋಟಗಳನ್ನು ಒದಗಿಸುವ ಮೂಲಕ, ಆಟೊಮೇಷನ್‌ನ ಉತ್ಕöÈಷ್ಟತೆಯ ವೃದ್ಧಿಯಾಗುತ್ತಿದೆ. ಹಾಗಾಗಿ, ಗ್ರಾಹಕರ ಅಪೇಕ್ಷೆಗಳು, ಆದ್ಯತೆಗಳು ಮತ್ತು ಪ್ರಚೋದನೆಗಳ ಒಳನೋಟಗಳನ್ನು ಪಡೆಯಲು ಸಮಾಜಶಾಸ್ತçಜ್ಞರು, ಇತಿಹಾಸಕಾರರು ಮತ್ತು ಭಾಷಾಶಾಸ್ತçಜ್ಞರು ಸೇರಿದಂತೆ ಮಾನವಿಕ ಶಾಸ್ತçಜ್ಞರ ಸೇವೆಯನ್ನು ಅಗಾಧವಾಗಿ ಬಳಸುತ್ತಿರುವ ಉದಾಹರಣೆಗಳಿವೆ. ಹೀಗೆ, ಗ್ರಾಹಕರ ಬಗ್ಗೆ ಹೆಚ್ಚಿನ ತಿಳುವಳಿಕೆಯೊಂದಿಗೆ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ಸೇವೆಗಳು ಮಾರುಕಟ್ಟೆಯಲ್ಲಿ ತಮ್ಮದೇ ಆದ ವಿಶಿಷ್ಟತೆಯೊಂದಿಗೆ ದೀರ್ಘಾವದಿಯ ಯಶಸ್ಸನ್ನು ಕಾಣಬಹುದು. ಈ ಕುತೂಹಲಕಾರಿ ಬೆಳವಣಿಗೆಗಳಿಂದ ಮಾನವಿಕ ಶಾಸ್ತçಕ್ಕೆ ಸಂಬಧಿಸಿದ ಉದ್ಯೋಗಗಳಿಗೊಂದು ಪುನರುಜ್ಜೀವನ ಬಂದAತಾಗಿದೆ.

ಮಾನವಿಕ ಶಾಸ್ತçಗಳೆಂದರೆ ಚರಿತ್ರೆ, ಮನಶ್ಯಾಸ್ತç, ತತ್ವಶಾಸ್ತç, ರಾಜಕೀಯ ವಿಜ್ಞಾನ, ಸಮಾಜ ಶಾಸ್ತç, ಮಾನವ ಶಾಸ್ತç, ಸಾಹಿತ್ಯ, ಭಾಷೆ, ಕಾನೂನು ಸೇರಿದಂತೆ ಸವಿಸ್ತಾರವಾದ ಕ್ಷೇತ್ರ. ಈ ನಿಟ್ಟಿನಲ್ಲಿ, ಹೆಸರಾಂತ ಲೇಖಕ ಸ್ಕಾಟ್ ಹಾರ್ಟ್ಲಿ ಬರೆದಿರುವ ಪುಸ್ತಕ, ‘ ದಿ ಫಝೀ ಅಂಡ್ ಟೆಕೀ-ವಿಲ್ ಲಿಬರಲ್ ಆರ್ಟ್ಸ್ ರೂಲ್ ದಿ ಡಿಜಿಟಲ್ ವರ್ಲ್ಡ್?’ ಜಗತ್ತಿನಾದ್ಯಾಂತ ಆರೋಗ್ಯಕಾರಿ, ಚಿಂತನಾಶೀ¯ ಚರ್ಚೆಯನ್ನು ಹುಟ್ಟುಹಾಕಿದೆ. ಹಲವಾರು ಉದ್ಯಮಗಳ ಯಶಸ್ಸಿನ ಹಿಂದೆ ತಂತ್ರಜ್ಞಾನ ಸೇರಿದಂತೆ ಮಾನವಿಕ ಶಾಸ್ತçಜ್ಞರ ಕೈವಾಡವೂ ಇದೆ ಎನ್ನುವುದೇ ಹಾರ್ಟ್ಲಿ ಅವರ ಪ್ರಮುಖ ಸಿದ್ದಾಂತ. ಈ ಅಂಶವನ್ನು ಧೃಡೀಕರಿಸಲು ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್, ಸ್ಲಾಕ್‌ನ ಸ್ಟೀವರ್ಟ್ ಬಟರ್‌ಫೀಲ್ಡ್, ಅಲಿಬಾಬಾದ ಜ್ಯಾಕ್ ಮಾ, ಯೂಟ್ಯೂಬ್‌ನ ಸುಸಾನ್ ವೊಜ್ಸಿಕ್ಕಿ, ಏರ್‌ಬಿಎನ್‌ಬಿಯ ಬ್ರಿಯಾನ್ ಚೆಸ್ಕಿ ಮುಂತಾದವರು ತಮ್ಮ ವಿದ್ಯಾಭ್ಯಾಸದಲ್ಲಿ ಓದಿರುವ ವಿಷಯಗಳು ಯಾವುವೆಂದರೆ, ಹಿನ್ನೆಲೆ ಭಾಷೆಗಳು, ಮಾನವಿಕ ಶಾಸ್ತç ಅಥವಾ ಲಲಿತಕಲೆಗಳು ಎಂದು ಹಾರ್ಟ್ಲಿ ಮನದಟ್ಟು ಮಾಡುತ್ತಾರೆ. ಮಾನವಿಕ ಶಾಸ್ತçಗಳ ಅಧ್ಯಯನದಿಂದ ಮಾನವನ ನಡವಳಿಕೆಯ ಹಿನ್ನೆಲೆ, ಪ್ರಚೋದನೆಯ ಬಗ್ಗೆ ಒಳನೋಟವನ್ನು ಪಡೆದು, ಗ್ರಾಹಕರ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಬಹುದೆನ್ನುವುದೇ ತಜ್ಞರ ಅಭಿಪ್ರಾಯ.

ನಮ್ಮ ಸಾಂಪ್ರದಾಯಿಕ ಉದ್ಯೋಗಗಳು

ಇಂದಿನ ಅತ್ಯಂತ ಬೇಡಿಕೆಯ ಉದ್ಯೋಗಗಳು ಕೆಲವು ವರ್ಷಗಳ ಹಿಂದೆ ಇರಲಿಲ್ಲ; ಒಂದು ಅಂದಾಜಿನAತೆ, ಇಂದಿನ ಕೆಲವು ಉದ್ಯೋಗಗಳು ಮುಂದೆ ಇರಲಾರದು. ಹೀಗಿದ್ದರೂ ಸಹ, ನಮ್ಮ ವಿದ್ಯಾರ್ಥಿಗಳು ಪೂರ್ವ-ನಿರ್ಧರಿತ ವೈದ್ಯಕೀಯ ಮತ್ತು ಎಂಜಿನಿಯರಿAಗ್ ವೃತ್ತಿ ಮಾರ್ಗಗಳನ್ನೇ ಅರಸುತ್ತಿದ್ದಾರೆ. ಇದು ಶೇಕಡ 80ರಷ್ಟು ಎಂಜಿನಿಯರಿಂಗ್ ಪದವೀಧರರಲ್ಲಿ ಉದ್ಯೋಗಗಳಿಗೆ ಬೇಕಾದ ಕೌಶಲಗಳಿಲ್ಲರುವುದಿಲ್ಲ ಎಂದು ಅನೇಕ ಸಮೀಕ್ಷೆಗಳು ವರದಿ ಮಾಡಿದ ನಂತರವೂ ಸಹ, ಎಂಜಿನಿಯರಿAಗ್ ಪದವಿಯ ವ್ಯಾಮೋಹ ಕುಗ್ಗಿಲ್ಲ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಪ್ರಪಂಚದಾದ್ಯಂತ, ಪ್ರಸಿದ್ಧ ಉದ್ಯಮಿಗಳು, ಅರ್ಥಶಾಸ್ತçಜ್ಞರು ಮತ್ತು ಲೇಖಕರು ಹಾರ್ಟ್ಲಿಯನ್ನು ಬೆಂಬಲಿಸುತ್ತಿದ್ದಾರೆ. ಸಾಮಾಜಿಕ ಕೌಶಲಗಳ ಮಹತ್ವದ ಬಗ್ಗೆ ಸಂಶೋಧನೆ ನಡೆಸಿದ ಹಾರ್ವರ್ಡ್ ಅರ್ಥಶಾಸ್ತçಜ್ಞ ಡೇವಿಡ್ ಡೆಮಿಂಗ್ ಹೇಳುವಂತೆ, “ಅಲ್ಗಾರಿದಮ್ ಆಗಿ ಪರಿವರ್ತಿಸಲಾಗದಿರುವುದನ್ನು ನಿಭಾಯಿಸುವ ಸಾಮರ್ಥ್ಯ, ಮತ್ತು ವಿನೂತನ ಸಮಸ್ಯೆಗಳು ಮತ್ತು ಸನ್ನಿವೇಶಗಳನ್ನು, ನೀವು ಎಷ್ಟು ಚೆನ್ನಾಗಿ ನಿಭಾಯಿಸುತ್ತೀರಿ, ಎನ್ನುವುದೇ ಯಶಸ್ಸನ್ನು ನಿರ್ಧರಿಸುವ ಪ್ರಮುಖ ಅಂಶ”.

ಹಾರ್ಟ್ಲಿ ಮತ್ತು ಇತರರು ವಾದಿಸುವಂತೆ, ಭವಿಷ್ಯದ ಉದ್ದಿಮೆಗಳು, ತಂತ್ರಜ್ಞರು ಮತ್ತು ಮಾನವಿಕ ಶಾಸ್ತçದ ಹಿನ್ನೆಲೆಯಿಂದ ಬಂದವರ ನಡುವಿನ ಸಹಯೋಗವಾಗಿರುತ್ತದೆ. ಇದೇ ನಿಟ್ಟಿನಲ್ಲಿ, ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳುತ್ತಾರೆ, ‘ಹಾರ್ಟ್ಲಿ ಇಂದಿನ ಕೋಡರ್ ಮತ್ತು ಎಂಜಿನಿಯರ್ ಯುಗದಲ್ಲಿ ಮಾನವೀಯತೆಯ ಪರವಾಗಿ ಸಕಾಲಿಕವಾದ ಮತ್ತು ಬಲವಾದ ವಾದವನ್ನು ಮಾಡುತ್ತಾರೆ. ಈ ವಾದವನ್ನು ಒಪ್ಪುವ ಇನ್ಫೋಸಿಸ್‌ನ ಮಾಜಿ ಸಿಇಒ ಮತ್ತು ಸಹ ಸಂಸ್ಥಾಪಕರಾದ ಎಸ್.ಡಿ.ಶಿಬುಲಾಲ್, “ತಂತ್ರಜ್ಞಾನದ ಮುಖ್ಯ ಗುರಿಯು ಮಾನವನ ಅಗತ್ಯಗಳನ್ನು, ಕಾಳಜಿಗಳನ್ನು ಪರಿಹರಿಸುವುದು. ಹಾಗೆ ಮಾಡುವಂತಾಗಲು, ಟೆಕ್ಕಿಯು ಮೊದಲು ಮಾನವತಾವಾದಿಯಾಗಿರಬೇಕು ಮತ್ತು ಮಾನವನ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಲಿಬರಲ್ ಆರ್ಟ್ಸ್ ಶಿಕ್ಷಣ, ಇದಕ್ಕೆ ಅನುವು ಮಾಡುತ್ತದೆ” ಎಂದು ಹೇಳುತ್ತಾರೆ.

ಮುಂದಿನ ಹಾದಿ

ಭವಿಷ್ಯದ ಉದ್ಯೋಗಗಳಿಗೆ, ಆಮೂಲಾಗ್ರವಾಗಿ ಬದಲಾದ ಜ್ಞಾನ ಮತ್ತು ಕೌಶಲಗಳ ಅಗತ್ಯ ಕಡ್ಡಾಯವೆಂದೇ ಹೇಳಬೇಕು. ಆದ್ದರಿಂದ, ವಿದ್ಯಾರ್ಥಿಗಳು ಪೂರ್ವ-ನಿರ್ಧರಿತ ಸ್ಟೆಮ್ (STEM- ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿAಗ್, ಮ್ಯಾಥಮ್ಯಾಟಿಕ್ಸ್) ಕೋರ್ಸ್ಗಳಾಚೆಯಿರುವ ಇನ್ನಿತರ ಕೋರ್ಸ್ಗಳು ಮತ್ತು ಸಂಬAಧಿತ ಉದ್ಯೋಗಗಳತ್ತ ಗಮನವನ್ನು ಹರಿಸಿ, ಮಾನವಿಕ ಶಾಸ್ತç ಸೇರಿದಂತೆ ಸ್ಟೀಮ್ (STEAM- ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿAಗ್, ಆರ್ಟ್ಸ್, ಮ್ಯಾಥಮ್ಯಾಟಿಕ್ಸ್) ಕೋರ್ಸ್ಗಳನ್ನು ಪರಿಗಣಿಸಿ ತಮ್ಮ ಮುಂದಿನ ಭವಿಷ್ಯಕ್ಕೊಂದು ಭದ್ರ ಬುನಾದಿಯನ್ನು ಹಾಕಿಕೊಳ್ಳಬಹುದು. ಹಾಗೂ, ಯಾವುದೇ ಕೋರ್ಸ್ನೊಂದಿಗೆ, ತಮ್ಮ ಇಚ್ಛೆಯ ಅನುಸಾರ, ಬೇರೊಂದು ವಿಷಯವನ್ನು ಓದುವ ಅವಕಾಶ, ಈಗ ನೂತನ ಶಿಕ್ಷಣ ನೀತಿ(NEP)ಯ ಅನ್ವಯ ಸಾಧ್ಯವಿದೆ.

ಒಟ್ಟಾರೆ ಹೇಳುವುದಾದರೆ, ಭವಿಷ್ಯದ ಉದ್ದಿಮೆಗಳಲ್ಲಿ ತಂತ್ರಜ್ಞರ ಜೊತೆಗೆ ಮಾನವಿಕ ಶಾಸ್ತçಜ್ಞರ ಸಹಕಾರ ಮತ್ತು ಸಹಯೋಗದ ಅಗತ್ಯ ಕಂಡುಬರುತ್ತಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ, ಈ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ಗುರುತಿಸಿ, ತಮ್ಮ ಸ್ವಾಭಾವಿಕ ಆಸಕ್ತಿ ಮತ್ತು ಪ್ರತಿಭೆಯಂತೆ ತಮ್ಮ ವೃತ್ತಿಜೀವನದ ಯೋಜನೆಯನ್ನು ರೂಪಿಸಿಕೊಳ್ಳಬೇಕು.

Download PDF document

About author View all posts Author website

V Pradeep Kumar

Leave a Reply

Your email address will not be published. Required fields are marked *