ಉತ್ತರ ಧ್ರುವದ ಹಿಮಗಿರಿಯ ನಾಡು ನಾರ್ವೆ. ಸುಂದರ ನದೀ ಕಣಿವೆಗಳು, ನೈಸರ್ಗಿಕ ದ್ವೀಪಗುಚ್ಛಗಳ ಈ ದೇಶಕ್ಕೆ ದೈತ್ಯ ಹಡಗಿನಲ್ಲಿ ಸಮುದ್ರದ ಮೇಲೆ ತೇಲುತ್ತಾ ಹೋಗುವುದೇ ಒಂದು ಅನುಪಮ ಅನುಭವ.
ನಾರ್ವೆ ಹುಟ್ಟಿನಲ್ಲೇ ಪ್ರಕೃತಿಯ ಅಧ್ಬುತವಿದೆ. ಭೂಪದರದ ಸರಿಯುವಿಕೆಯಿಂದಲೂ ಮತ್ತು ದೀರ್ಘಕಾಲದ ಜ್ವಾಲಾಮುಖಿ ಚಟುವಟಿಕೆಯಿಂದಲೂ ಈ ದೇಶ ನಿರ್ಮಾಣವಾಗಿದೆ ಎನ್ನುತ್ತಾರೆ. ನಾರ್ವೆಯ ಪರ್ವತಶ್ರೇಣಿಗಳ ನಡುವೆ ಸುಮಾರು ನೂರು ಕಿ.ಮೀ.ಗಳ ಓಸ್ಲೋಫಿಯೋರ್ಡ್‍ನ[ಔsಟoಜಿರಿoಡಿಜ] ಸೃಷ್ಟಿ ಹೇಗೇ ಆಗಿರಲಿ, ಇದೀಗ ಜಗತ್ತಿನ ಅತ್ಯಂತ ಸುಂದರ ಪ್ರದೇಶಗಳಲ್ಲಿ ಒಮ್ದು ಎನ್ನುವುದಂತೂ ನಿಸ್ಸಂಶಯ.
ಮ್ಯಾನೇಜ್‍ಮೆಂಟ್ ಇನ್‍ಸ್ಟಿಟ್ಯೂಟ್ ವತಿಯಿಂದ ಕಾರ್ಪೊರೇಟ್ ಸಹೋದ್ಯೋಗಿಗಳೊಡನೆ ಯೂರೋಪ್ ಪ್ರವಾಸದ ಆಹ್ವಾನ ಬಂದಾಗ ಆದ ಸಂತಸ ಅಷ್ಟಿಷ್ಟಲ್ಲ. ಏಕೆಂದರೆ ಸಹಸ್ರಾರು ವರ್ಷಗಳ ಹಿಂದೆ ಸಂಭವಿಸಿದ ಅನೇಕ ನೈಸರ್ಗಿಕ ಕಾರಣಗಳಿಂದ ಉತ್ತರ ಯೂರೋಪ್‍ನ ನಾರ್ವೆ ದೇಶದಲ್ಲಿ ಅತ್ಯಂತ ರಮಣೀಯವಾದ ಲೋಕವೇ ಸೃಷ್ಟಿಯಾಗಿದೆ. ಆ ಲೋಕಕ್ಕೆ ಭೇಟಿ ನೀಡುವ ಆಹ್ಲಾಧಕರ ಅವಕಾಶ ತಾನೇ ತಾನಾಗಿ ಬಂದಾಗ ಯಾರಿಗೆ ಖುಶಿಯಾಗುವುದಿಲ್ಲ? ನಿಜಕ್ಕೂ ಅದೊಂದು ದೈವದತ್ತ ಕೊಡುಗೆಯಂದೇ ಭಾವಿಸಿದೆ.
ಪ್ರವಾಸ ಮನುಷ್ಯನ ಜ್ಞಾನದಾಹ ತಣಿಸುವ ಅತ್ಯುತ್ತಮ ಮಾರ್ಗ. ಅದರಲ್ಲೂ ನಿರಂತರವಾಗಿ ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುವುದರಿಂದ ಆಯಾ ಪ್ರದೇಶಗಳ ಅರ್ಥವ್ಯವಸ್ಥೆಯಲ್ಲಿನ ಬೇಡಿಕೆ-ಪೂರೈಕೆಗಳ ಜೊತೆ ಅಲ್ಲಿನ ಕಲೆ-ಸಂಸ್ಕೃತಿ, ಆಚಾರ-ವಿಚಾರಗಳ ಸೂಕ್ಷ್ಮತೆಗಳನ್ನು ತಿಳಿಯುತ್ತಾ ಹೋದಂತೆ ಮನುಷ್ಯನ ವ್ಯಕ್ತಿತ್ವ ವಿಶಾಲವಾಗುತ್ತಾ ಹೋಗುತ್ತದೆ.
ನನಗೆ ಸಮುದ್ರವೆಂದರೇ ಏನೋ ಮೋಹ, ಆಕರ್ಷಣೆ. ಸಮುದ್ರದ ದಡದಲ್ಲಿ ಕಾಲಿಗೆ ಬಂದಪ್ಪಳಿಸುವ ಅಲೆಗಳನ್ನು ಕಾಯುತ್ತಾ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಸಮುದ್ರವನ್ನೂ, ಸೂರ್ಯಾಸ್ತದ ಸೊಬಗನ್ನೂ, ನೋಡುತ್ತಾ ಏಕಾಂತತೆಯಲ್ಲಿ ಗಂಟೆಗಟ್ಟಳೆ ಕುಳಿತಾಗ, ಬದುಕಿನಲ್ಲಿ ಸಾಧಿಸುವುದು ಇನ್ನೂ ಸಾಕಷ್ಟಿದೆ ಎನ್ನುವ ಅರಿವು ಸದಾ ಕಾಲ ಪ್ರೇರೇಪಿಸುತ್ತದೆ.
ಮ್ಯಾನೇಜ್‍ಮೆಂಟ್ ಲೋಕದ ಒತ್ತಡದ ನಡುವೆ ಸಮುದ್ರ ವೀಕ್ಷಣೆ ಕೊಡುವ ಮಾನಸಿಕ ಬಿಡುಗಡೆಯೇ ಅಧ್ಬುತ. ಅದರ ನಡುವೆಯೇ ಆ ಸಮುದ್ರದಲ್ಲಿ ತೇಲುತ್ತಾ ಪ್ರಯಾಣಿಸುವ ಅವಕಾಶ ಸಿಕ್ಕಾಗ ಆದ ಸಂತೋಷವನ್ನು ಅಕ್ಷರಗಳಲ್ಲಿ ಬಣ್ಣಿಸುವುದು ಕಷ್ಟ. ಕೆಳಗೆ ವಿಶಾಲ ಜಲರಾಶಿ; ಮೇಲೆ ಅಗಾಧ ಆಕಾಶ. ನಡುವೆ ತೇಲುವ ಜೀವ!
ಸಾಗರದಲ್ಲೊಂದು ಅದ್ದೂರಿ ರೆಸಾರ್ಟ್
ಆ ದಿನ ಮಧ್ಯಾಹ್ನ ಮೂರುವರೆ ಗಂಟೆಗೆ ನಾವುಗಳೆಲ್ಲ ಓಸ್ಲೊ ನಗರಕ್ಕೆ ಹೊರಡಲು ಕೊಪೆಂಹೆಗೆನ್ ನಗರದ ಬಂದರಿಗೆ ಹಾಜರಾದಾಗ, ಸೌಮ್ಯವಾಗಿ ಅಪ್ಪಳಿಸುತ್ತಿದ್ದ ಅಲೆಗಳ ನಡುವೆ ಡಿಎಸ್‍ಡಿಎಸ್‍ನ ಹಡಗು ಕಾದಿತ್ತು; ಆದರೆ ಚೆಕ್ ಇನ್ ಮಾಡಲು ಇನ್ನೂ ಸಮಯವಿತ್ತು. ರಿಸೆಪ್ಷನ್‍ನಲ್ಲಿ ಇದ್ದ ವಿವರಗಳನ್ನು ಗಮನಿಸಿದೆ. ಸುಮಾರು 703 ಕ್ಯಾಬಿನ್‍ಗಳಲ್ಲಿ 2090 ಯಾತ್ರಿಕರನ್ನು ಕರೆದೊಯ್ಯಬಲ್ಲ, 585 ಅಡಿ ಉದ್ದ ಮತ್ತು 101 ಅಡಿ ಅಗಲದ, ಗಂಟೆಗೆ 21 ನಾಟ್ [ಸುಮಾರು 40 ಕಿ.ಮಿ] ವೇಗದಲ್ಲಿ ಚಲಿಸಬಲ್ಲ ಬೃಹತ್ ಹಡಗು. ಕೊಪೆನ್‍ಹೆಗೆನ್ ಮತ್ತು ಓಸ್ಲೊ ದೂರ 272 ನಾ. ಮೈಲ್ [503 ಕಿ. ಮಿ]. ಸಂಜೆ ಐದು ಗಂಟೆಗೆ ಕೊಪೆನ್‍ಹೆಗೆನ್ ಬಿಟ್ಟರೆ ಮುಂಜಾನೆ 930ಕ್ಕೆ ಓಸ್ಲೊ.
ಹಡಗಿನ ಬಾಗಿಲು ತೆರೆದ ಕ್ಷಣ ಕಾತುರದಿಂದ ಎಲ್ಲರಿಗಿಂತ ಮುಂಚೆ ಧಾವಿಸಿದೆ. ಹಡಗಿನ ಉದ್ದಗಲದ ಪ್ರಮಾಣದ ಅರಿವಿದ್ದರೂ ಅದರ ನಿಜ ಸ್ವರೂಪದ ಅನುಭವವಾಗಿದ್ದು ಒಳಹೋದ ಮೇಲೆಯೇ; ಯಾವುದೋ ರೆಸಾರ್ಟ್‍ಗೆ ಹೋದಂತೆ; ಅದ್ದೂರಿ ವೈವಿಧ್ಯಮಯ ಭವ್ಯತೆ. 11 ಅಂತಸ್ತಿನ ಹಡಗಿನಲ್ಲಿ 6 ರೆಸ್ಟುರೆಂಟ್‍ಗಳು, ಕೆ¥sóÉಗಳು, 5 ಬಾರುಗಳು, ಹಲವಾರು ಡಿಸ್ಕೊಗಳು, ಇಂಟರ್ನೆಟ್ ಕೆ¥sóÉಗಳು. ಹತ್ತನೇ ಡೆಕ್‍ನಲ್ಲಿ ಎರಡು ಈಜುಕೊಳಗಳು, ಒಂದು ಚಿತ್ರಮಂದಿರ ಮತ್ತು ಸೂಪರ್ ಮಾರ್ಕೆಟ್. ತಂಗಲು ಪುಟ್ಟ ಕ್ಯಾಬಿನ್; ಅದರ ಪ್ರಮಾಣಕ್ಕನುಗುಣವಾಗಿ ಬಾತ್‍ರೂಮ್. ಎಲ್ಲಾ ಸೌಕರ್ಯಗಳನ್ನು ಒದಗಿಸಲು ಪ್ರತಿ ಇಂಚನ್ನೂ ಬಳಸಿದ್ದ ಜಾಣತನ ನಿಜಕ್ಕೂ ಪ್ರಶಂಸನೀಯ.
ಹಡಗಿನಲ್ಲಿ ಸಾವಿರಾರು ಪ್ರಯಾಣಿಕರು, ಮುಖ್ಯವಾಗಿ ಯೂರೋಪ್ ಪ್ರವಾಸಿಗರು. ಮಾಹಿತಿ ತಂತ್ರಜ್ಞಾನ ಉದ್ಯೋಗದಲ್ಲಿದ್ದ ಭಾರತೀಯರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದರು; ಇಂದು ಪ್ರಪಂಚದ ಎಲ್ಲೆಡೆ ಕಾಣುವ ಸಂತೋಷದ ವಿಷಯ; ಬೆಂಗಳೂರಿನ ಜಯನಗರದ ಕೆಲವು ಸಾ¥sóï್ಟವೇರ್ ಇಂಜಿನಿಯರ್‍ಗಳ ಪರಿಚಯವೂ ಆಯಿತು.
ರಾತ್ರಿ ಸಹೋದ್ಯೋಗಿಗಳ ಜೊತೆ ಎಂಟನೇ ಡೆಕ್‍ನ ನೇವಿಗೇಟರ್ಸ್ ಬಾರ್‍ಗೆ ಹೋದೆವು. ಮಸಕು ಮಸಕಾಗಿದ್ದ ಕೆಂಬಣ್ಣದ ದೀಪಗಳ ಮಧ್ಯೆ ಯುವಜನರ ಡ್ಯಾನ್ಸ್ ನಡೆಯುತ್ತಿತ್ತು. ಅಲ್ಲಲ್ಲಿ ಪ್ರೇಮಿಗಳ ರಾಸಲೀಲೆ; ಇಲ್ಲಿ ಯಾವುದೂ ಮುಚ್ಚು ಮರೆಯಿಲ್ಲ.
ರಾತ್ರಿ ಕ್ಯಾಬಿನ್‍ಗೆ ಬಂದು, ಬೆಡ್ ಮೇಲಿನ ರೀಡಿಂಗ್ ದೀಪವನ್ನು ಬೆಳಗಿಸಿ, ಪ್ರಯಾಣದ ಟಿಪ್ಪಣಿ ಬರೆದೆ. ಹಡಗು ಬೃಹತ್ ಪ್ರಮಾಣವಾದ್ದರಿಂದಲೋ ಏನೋ ಸ್ಥಿರವಾದ ಪ್ರಯಾಣ; ಸುಖವಾದ ನಿದ್ರೆ.
ಅವಿಸ್ಮರಣೀಯ ನೋಟ
ಬೆಳಗ್ಗೆ 6ಕ್ಕೆ 11ನೇ ಅಂತಸ್ತಿನ ಅತ್ಯಂತ ಜನಪ್ರಿಯವಾದ ಓಪನ್ ಡೆಕ್‍ನಲ್ಲಿ ಸಂಧಿಸುವುದೆಂದು ನಮ್ಮೆಲ್ಲ ಸ್ನೇಹಿತರ ನಿಗದಿಯಾಗಿತ್ತು. ಅಲ್ಲಿಗೆ ಹೋಗುತ್ತಿದ್ದಂತೆ, ಮೇಲಿನಿಂದ ಕೆಳಗೆ ಜನ ಧಾವಿಸಿ ಬರುತ್ತಿದ್ದರು.
ಸಿಕ್ಕಾಪಟ್ಟೆ ಚಳಿಗಾಳಿ, ಅಲ್ಲಿರಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು. ಆದರೂ ಧೈರ್ಯ ಮಾಡಿ ಡೆಕ್‍ಗೆ ಹೋದಾಗ ನನ್ನ ಜೀವನದಲ್ಲೇ ಮರೆಯಲಾಗದಂತ ಅವಿಸ್ಮರಣೀಯ ದೃಶ್ಯ. ಎಡ ಭಾಗದಲ್ಲಿ ನಾರ್ವೆ ಮತ್ತು ಬಲಬಾಗದಲ್ಲಿ ಸ್ವೀಡನ್ ದೇಶದ ಸುಂದರ ಹಸಿರು ಪರ್ವತಮಾಲೆಗಳ ಮಧ್ಯದಲ್ಲಿನ ಕಿರಿದಾದ ಕಂದರದಲ್ಲಿ ಹಡಗಿನ ಸಂಚರಿಸುತ್ತಿತ್ತು. ದಟ್ಟನೆಯ ಮೋಡ ಉದಯಿಸುವ ಸೂರ್ಯನನ್ನು ತಡೆಗಟ್ಟಿತ್ತು; ಅತಿಯಾದ ಮಂಜು ವಾತಾವರಣವನ್ನು ಮಸಕಾಗಿಸಿತ್ತು. ಫೆÇಟೋ ತೆಗೆಯಲು ಇನ್ನೂ ಸ್ವಲ್ಪ ಸಮಯ ಕಾಯಲೇಬೇಕಿತ್ತು; ಆದರೆ ವಿಪರೀತ ಚಳಿ ನಮ್ಮ ನಮ್ಮ ದೈಹಿಕ ಮತ್ತು ಮಾನಸಿಕ ದೃಢತೆಗೆ ಸವಾಲು ಹಾಕುವಂತಿತ್ತು.
ಇಂಗ್ಲೀಷ್‍ನಲ್ಲಿ ಫಿಯೋರ್ಡ್ [ಜಿರಿoಡಿಜ] ಎನ್ನುವ ಈ ಕಂದರಗಳ ಸೃಷ್ಟಿ ನಿಜಕ್ಕೂ ಸ್ವಾರಸ್ಯಕರವಾಗಿದ್ದು ಅನೇಕ ಚರ್ಚೆಗಳಿಗೂ ವಾದಗಳಿಗೂ ಗ್ರಾಸವಾಗಿದೆ. ಭೂವೈಜ್ಞಾನಿಕ ದೃಷ್ಟಿಕೋನದಂತೆ ತೀರ್ವವಾದ ಹಿಮರಾಶಿಯ ಕರಗುವಿಕೆಯಿಂದಲೂ ಈ ಕಂದರಗಳ ಸೃಷ್ಟಿಯಾಗಿದೆ ಎನ್ನಲಾಗುತ್ತದೆ. 2008ರ ಅಧ್ಯಯನದ ಪ್ರಕಾರ ಸುಮಾರು 300 ದಶಲಕ್ಷ ವರ್ಷಗಳ ಹಿಂದೆ ಭೂಪದರದ ಸರಿಯುವಿಕೆಯಿಂದಲೂ ಮತ್ತು ದೀರ್ಘಕಾಲದ ಜ್ವಾಲಾಮುಖಿ ಚಟುವಟಿಕೆಯಿಂದಲೂ ನಿರ್ಮಾಣವಾಗಿದೆಯೆನ್ನಲಾಗುತ್ತದೆ. ಈ ಪ್ರದೇಶದ ಪರ್ವತಮಾಲೆಗಳ ನಡುವೆ ಸುಮಾರು ನೂರು ಕಿ.ಮೀ.ಗಳ ಓಸ್ಲೋಫಿಯೋರ್ಡ್‍ನ[ಔsಟoಜಿರಿoಡಿಜ] ಸೃಷ್ಟಿಯೇ ಒಂದು ಅದ್ಭುತ. ಯಾರು ಏನೇ ಹೇಳಲಿ-ಇದು ಜಗತ್ತಿನ ಸುಂದರ ಸೃಷ್ಟಿಯೇ ಹೌದು.
ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವನ್ನು ಗಮನಿಸಬಹುದು. ಬಿಸಿಯಾಗುತ್ತಿರುವ ಪೃಥ್ವಿ ಮತ್ತು ಪ್ರಕೃತಿಯ ವಿಕೋಪಗಳಿಂದ ಆಕ್ರ್ಟಿಕ್ ಸಾಗರದ ಹಿಮಗಡ್ಡೆಗಳು ಕರಗುತ್ತಿವೆ. ಇತ್ತೀಚಿನ ವರದಿಯೊಂದರ ಪ್ರಕಾರ, ಆಕ್ರ್ಟಿಕ್ ವಲಯದ ತಾಪಮಾನ ಸಾಧಾರಣಕ್ಕಿಂತ 20 ಡಿಗ್ರಿ ಹೆಚ್ಚಿದೆಯಂತೆ! ಬಿಸಿಯಾಗುತ್ತಿರುವ ಪೃಥ್ವಿಯಿಂದ ಉಂಟಾಗುವ ಸೂರ್ಯನ ಪ್ರಖರದಿಂದ ಈ ಸಾಗರದ ನೀರಿನ ತಾಪಮಾನ ಬೇಸಿಗೆಯಲ್ಲಿ ಹೆಚ್ಚಾಗುತ್ತಿದ್ದು ಅದು ಮತ್ತಷ್ಟು ಕ್ಷಿಪ್ರವಾಗಿ ಹಿಮಗಡ್ಡೆಗಳ ಕರಗುವಿಕೆಗೆ ಕಾರಣವಾಗುತ್ತಿದೆ.
ಆದರೆ, ಚೀನಾದ ಗಾದೆಯಂತೆ, ಸಂಕಷ್ಟಗಳ ಜೊತೆಯೇ ಇರುವ ಸದವಕಾಶದಗಳೂ ಹೆಚ್ಚುತ್ತವೆ. ನಾರ್ವೆ, ಡೆನ್ಮಾರ್ಕ್, ರಷಿಯ ಮತ್ತು ಅಮೇರಿಕ ದೇಶಗಳು ಬೇಸಿಗೆಯ ಕಾಲದಲ್ಲಿ ಆಕ್ರ್ಟಿಕ್ ಸಾಗರವನ್ನು ಬಳಸಿಕೊಂಡು, ಶಕ್ತಿಯ ಉತ್ಪಾದನೆ ನಡೆಸಲು ಯೋಜಿಸುತ್ತಿವೆ. ನೂತನ ಜಲಮಾರ್ಗದ ಸಾಧಕ-ಭಾಧಕಗಳ ಕುರಿತಂತೆ ತೀರ್ವವಾದ ಚರ್ಚೆಯೂ ನಡೆದಿದೆ. ಭೂವಿಜ್ಞಾನಿಗಳ ಪ್ರಕಾರ ಬೇಸಿಗೆಯ ಕಾಲದಲ್ಲಿ ಇದೀಗ ಅತಿ ಹೆಚ್ಚು ಬಳಕೆಯಲ್ಲಿರುವ ಜಲಮಾರ್ಗಗಳಾದ ಸೂಯeóï ಕೆನಾಲ್ ಮತ್ತು ಪನಾಮ ಕೆನಾಲ್‍ನಂತೆಯೇ ಆಕ್ರ್ಟಿಕ್ ಮಾರ್ಗದ ಬಳಕೆಯೂ ಹೆಚ್ಚು ಜನಪ್ರಿಯವಾಗಲಿದೆ.
ಪ್ರವಾಸೋದ್ಯಮ ಕೇಂದ್ರ ಬಿಂದು
ಫಲವತ್ತಾದ ಕಾಡು ಮತ್ತು ಕಂದರಗಳ ಪರಿಸರದಲ್ಲಿರುವ ಓಸ್ಲೊ ನಗರದಲ್ಲಿನ ಪ್ರವಾಸೋಧ್ಯಮದ ಕೇಂದ್ರಬಿಂದು ಓಸ್ಲೋಫಿಯೂರ್ಡ್ ಎಂದರೆ ಅತಿಶಯೋಕ್ತಿಯಲ್ಲ. ಓಸ್ಲೋದಿಂದ ನಾರ್ವೆ ದೇಶದ ವಿಸ್ಮಯಕಾರಿ ಪ್ರಾಕೃತಿಕ ಪ್ರೇಕ್ಷಣೀಯ ಸ್ಥಳಗಳಿಗೆ ಸುಮಾರು 47 ಟೂರ್‍ಗಳಿವೆ. ನೂರಾರು ನೈಸರ್ಗಿಕ ದ್ವೀಪಗಳಿರುವ ಈ ಪ್ರದೇಶದಲ್ಲಿ ಎಲ್ಲ ವರ್ಗದ ಪ್ರವಾಸಿಗಳಿಗೂ ಸೂಕ್ತವಾದಂತ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಬೀಚ್ ರೆಸಾರ್ಟ್‍ಗಳಿವೆ. ಪ್ರವಾಸೋಧ್ಯಮದ ಅಭಿವೃದ್ಧಿಗೆ ಅನುಗುಣವಾಗಿ ಸೈಕಲ್, ಬಸ್, ಟ್ರೈನ್ ಮತ್ತು ಬಾಡಿಗೆ ಕಾರುಗಳ ಸೌಕರ್ಯವಿದೆ. ಓಸ್ಲೋಫಿಯೊರ್ಡ್‍ನ ಸೃಷ್ಟಿ ಪ್ರಕೃತಿಯ ವಿಕೋಪದಿಂದ ಆಗಿರಲು ಸಾಧ್ಯ; ಆದರೆ ಜಗತ್ತಿನ ಅಭಿವೃದ್ಧಿಶೀಲ ದೇಶಗಳಲ್ಲೊಂದಾದ ನಾರ್ವೆ ದೇಶದ ಅರ್ಥ ವ್ಯವಸ್ಥೆ ಬಲಗೊಳ್ಳಲು ಇದು ಬಹು ದೊಡ್ಡ ಕಾಣಿಕೆಯನ್ನೂ ನೀಡುತ್ತಿದೆ.
ಸಾವಿರಾರು ವರ್ಷಗಳ ಹಿಂದೆ, ಇಡೀ ದೇಶವೇ ಹಿಮಾವೃತವಾಗಿದ್ದ ನಾರ್ವೇ, ಇದೀಗ ಒಂದು ಸಂಪದ್ಭರಿತ ಶ್ರೀಮಂತ ದೇಶ. ಕೊಲ್ಲಿ ರಾಷ್ಟ್ರಗಳನ್ನು ಹೊರತು ಪಡಿಸಿದರೆ, ಅತ್ಯಧಿಕ ಕಚ್ಛಾ ತೈಲ ಮತ್ತು ನೈಸರ್ಗಿಕ ಅನಿಲದ ಉತ್ಪಾದನೆಯಾಗುವುದು ಇಲ್ಲೇ. ಇಲ್ಲಿನ ವಾರ್ಷಿಕ ತಲಾ ಆದಾಯ 97013 ಅಮೇರಿಕನ್ ಡಾಲರ್ ಆಗಿದ್ದು [2015], ಪ್ರಪಂಚದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದ ಹೆಗ್ಗಳಿಕೆ ಈ ದೇಶದ್ದು. ಅಷ್ಟೇ ಅಲ್ಲ! ಪ್ರತಿ ವರ್ಷ ನಡೆಯುವ ಮಾನವ ಅಭಿವೃದ್ಧಿ ಸೂಚ್ಯಂಕದ ಸಮೀಕ್ಷೆಯಲ್ಲಿ ನಾರ್ವೆ ದೇಶಕ್ಕೇ ಪ್ರಥಮ ಸ್ಥಾನ; ಭಾರತಕ್ಕೆ 130ನೇ ಸ್ಥಾನ. ಅಂದ ಹಾಗೆ ನೋಬೆಲ್ ಶಾಂತಿ ಪ್ರಶಸ್ತಿಯ ಪ್ರಧಾನ ಸಮಾರಂಭ ನಡೆಯುವುದೂ ಓಸ್ಲೋ ನಗರದಲ್ಲಿ.
ಮಧ್ಯರಾತ್ರಿಯ ಸೂರ್ಯನ ನಾಡೆಂದೇ ನಾರ್ವೆ ಪ್ರಸಿದ್ಧಿ ಹೊಂದಿದೆ. ಉತ್ತರ ಧ್ರುವದ ಸಮೀಪದಲ್ಲಿರುವ ನಾರ್ವೆಯ ಉತ್ತರದ ಪ್ರದೇಶಗಳಲ್ಲಿ, ಕೆಲವು ತಿಂಗಳುಗಳ ನಡುರಾತ್ರಿಯಲ್ಲಿ ಇದು ಮಧ್ಯಾಹ್ನವೇ ಎಂದೆನಿಸುವ ಸೂರ್ಯನ ಬೆಳಕು; ಹಾಗೆಯೇ ಛಳಿಗಾಲದ ಮಧ್ಯಾಹ್ನದ ಸಮಯದಲ್ಲಿ ನಡುರಾತ್ರಿಯೇನೋ ಎಂದೆನಿಸುವಷ್ಟು ಕತ್ತಲೆ!
ನಾರ್ವೆ ಅಧ್ಬುತ ಪ್ರಾಕೃತಿಕ ಸೌಂದರ್ಯ ಮತ್ತು ಜೈವಿಕ ವೈವಿಧ್ಯದ ನಾಡು. ಇಲ್ಲಿ ಎತ್ತ ನೋಡಿದರೂ ಪ್ರಕೃತಿದೇವಿಯೇಜೀವ ತಳೆದಂತೆ ರೋಮಾಂಚನಗೊಳಿಸುವ ಕಾಡು ಕಣಿವೆಗಳು, ಜಲಪಾತಗಳು, ಸುಂದರ ದ್ವೀಪಗಳು ಮತ್ತು ಹಿಮಾವೃತ ಶಿಖರಗಳು. ಬೆಳಗ್ಗೆ ಸೂರ್ಯ ಹುಟ್ಟುವ ಹೊತ್ತಿಗೆ ಡೆಕ್ ಮೇಲೆ ಮೈಮರೆತು ನಿಂತಿದ್ದ ನನ್ನನ್ನು ಎಚ್ಚರಿಸಿದ ಸ್ನೇಹಿತರು ರೆಸ್ಟೋರೆಂಟಿಗೆ ಕರೆದೊಯ್ದರು. ಉಪಹಾರದ ನಂತರ ಮತ್ತೆ ಓಪನ್ ಡೆಕ್‍ನಲ್ಲಿ ನಿಂತು ಓಸ್ಲೊ ನಗರದ ಪ್ರವೇಶದ ಸಂಭ್ರಮವನ್ನು ಸವಿಯಲು ಎಲ್ಲರೂ ನಿಂತಿದ್ದೆವು.
ಓಸ್ಲೊ ನಗರ ಹತ್ತಿರವಾಗುತ್ತಿತ್ತು; ನನ್ನ ಮೊತ್ತ ಮೊದಲ ಸಮುದ್ರ ಯಾನದ ಕನಸು ನನಸಾಗಿತ್ತು.