ಪದವಿ ಕೋರ್ಸ್‌ಗಳಲ್ಲಿ ಉತ್ತಮ ಆಯ್ಕೆ-ವಿಧಿ ವಿಜ್ಞಾನ

ವೈದ್ಯ ಕೀಯ ಪದವಿ ಓದುವುದಕ್ಕೆ ಅವಕಾಶ ಸಿಗದವರು ಹಾಗೂ ಗಣಿತದ ಬಗ್ಗೆ ಹೆಚ್ಚು

_ಒಲವಿಲ್ಲ ದ ವಿದ್ಯಾರ್ಥಿಗಳಲ್ಲಿ ಅನೇಕರು ಪದವಿ ಹಂತದಲ್ಲಿ ವಿಧಿ ವಿಜ್ಞಾನ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವತ್ತ ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಫೊರೆನ್ಸಿಕ್ ಸೈನ್ಸ್ ಕೋರ್ಸ್‌ಹಾಗೂ ಆ ನಂತರದ ಉದ್ಯೋಗಾವಕಾಶಗಳ ಕುರಿತ ವಿವರವನ್ನು ಇಲ್ಲಿ ಕೊಡಲಾಗಿದೆ.

‘ನನಗೆ ಫೊರೆನ್ಸಿಕ್ ಸೈನ್ಸ್ ಓದಬೇಕೆಂಬ ಆಸೆ. ಆರನೇ ಕ್ಲಾಸ್ನ ಲ್ಲಿದ್ದಾಗಿನಿಂದ ಥ್ರಿಲ್ಲ ರ್ ಸಿನಿಮಾ

ನೋಡುತ್ತಾ, ಈ ವಿಷಯದ ಬಗ್ಗೆ ಕುತೂಹಲ ಮೂಡಿತ್ತು. ಹೈಸ್ಕೂಲ್ಗೆ ಸೇರಿದ ಮೇಲೆ,

ಬಯೋಲಜಿಯ ಪಠ್ಯ ಗಳಿಲ್ಲಿದ್ದ ಡಿಎನ್ಎ , ಕ್ರೋಮೊಸೋಮ್ಸ್, _ಜೀನ್ಸ್ನಂ ತಹ ವಿಷಯಗಳು ಆ

ಕುತೂ ಹಲವನ್ನು ಮತ್ತಷ್ಟು ಹೆಚ್ಚಿಸಿದವು . ಹಾಗಾಗಿ ಈ ವಿಷಯವನ್ನು ಓದಬೇಕೆಂದು

ನಿರ್ಧರಿಸಿದೆ. ಈಗ ಎಸ್ಸೆಸ್ಸೆಲ್ಸಿ ಮುಗಿದಿದೆ. ನನ್ನ ಗುರಿ ತಲುಪಲು ಪಿಯುಸಿಯಲ್ಲಿ ಯಾವ

ಕಾಂಬಿನೇಷನ್ ತಗೋಬೇಕು, ಮುಂದಕ್ಕೆ ಯಾವ ರೀತಿ ಓದಬೇಕು? ಭವಿಷ್ಯ ದಲ್ಲಿ

ಉದ್ಯೋಗಾವಕಾಶಗಳು ಹೇಗಿವೆ? ಸ್ವಲ್ಪ ಮಾರ್ಗ ದರ್ಶನ ನೀಡಿ… ‘

– ಎಸ್ಸೆಸ್ಸೆಲ್ಸಿ ಪೂರೈಸಿದ ವಿದ್ಯಾರ್ಥಿನಿಯೊಬ್ಬಳು ದೂರವಾಣಿ ಕರೆ ಮಾಡಿ, ಹೀಗೊಂದು ಶೈಕ್ಷಣಿಕ

ಮಾರ್ಗ ದರ್ಶನ ಕೇಳಿದಳು. ಅವಳ ಕಥೆ ಕೇಳಿದಾಗ, ಸ್ವಲ್ಪ ನಗು ಬಂತು. ಆದರೆ, ಇಂಥ

ಆಸಕ್ತಿಗಳೇ ಮಕ್ಕ ಳನ್ನು ಉನ್ನತ ಹುದ್ದೆಗಳತ್ತ ಕೈ ಹಿಡಿದು ಕರೆದೊಯ್ಯುತ್ತ ವೆ ಎಂಬುದನ್ನೂ

ಅಲ್ಲಗಳೆಯಲಾಗಲಿಲ್ಲ .

ಇದೇ ರೀತಿ, ಇಂಥದ್ದೇ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಬ್ಬರು ಪತ್ರ ಬರೆದಿದ್ದರು. ಪತ್ರ ದಲ್ಲಿ ‘ಸರ್, ನಾನು ಪಿಯುಸಿ ಮುಗಿಸಿದ್ದೇನೆ. ಎಂಬಿಬಿಎಸ್ ಸೇರಬೇಕೆಂದುಕೊಂಡಿದ್ದೆ.

ಸಾಧ್ಯ ವಾಗಲಿಲ್ಲ. ಈಗ ಫೊರೆನ್ಸಿಕ್ ಸೈನ್ಸ್ ಓದಬೇಕೆನಿಸಿದೆ. ಆ ಕ್ಷೇತ್ರದಲ್ಲಿ ಓದುವ ಅವಕಾಶ,

ಉದ್ಯೋಗ ಸಾಧ್ಯತೆಗಳು ಹೇಗಿವೆ? ಕಾಲೇಜುಗಳ ಕುರಿತ ಮಾಹಿತಿ ನೀಡಿ’ ಎಂದು ವಿನಂತಿಸಿದ್ದ ರು. ವೈದ್ಯಕೀಯ ಪದವಿ ಸೇರುವ ಅವಕಾಶ ತಪ್ಪಿದ ಒಂದಷ್ಟು ವಿದ್ಯಾರ್ಥಿಗಳು ಹೀಗೆ, ‘ವಿಧಿ ವಿಜ್ಞಾನ ಅಥವಾ ಫೊರೆನ್ಸಿಕ್ ಸೈನ್ಸ್’ ಪದವಿ ಆಯ್ಕೆಯತ್ತ ಒಲವು ತೋರುತ್ತಿರುವ ಕುರಿತು ಇತ್ತೀಚೆಗಷ್ಟೇ ಪತ್ರ ಗಳ ಮೂಲಕ ತಿಳಿದಿತ್ತು.

ಹೌದು, ವಿಜ್ಞಾನದ ವಿದ್ಯಾರ್ಥಿಗಳಿಗೆ ಪಿಯುಸಿ ನಂತರ ವೈದ್ಯಕೀಯ ಮತ್ತು ಎಂಜಿನಿಯರಿಂಗ್

ಪದವಿಯಷ್ಟೇ, ಬಿ.ಎಸ್ಸಿ ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕೋರ್ಸ್ ಕೂಡ ಉತ್ತ ಮ

ಆಯ್ಕೆಯೇ. ಯಾಕೆಂದರೆ, ಈ ಕೋರ್ಸ್‌ ಓದುವವರ ಸಂಖ್ಯೆ ಕಡಿಮೆ. ಹಾಗಾಗಿ ಭವಿಷ್ಯದಲ್ಲಿ

ಫೊರೆನ್ಸಿಕ್ ಸೈನ್ಸ್ ಕಲಿತವರಿಗೆ ಸ್ವಲ್ಪ ಬೇಡಿಕೆ ಹೆಚ್ಚುವ ಸಾಧ್ಯತೆಗಳಿವೆ.

ಕ್ರಿಮಿನಾಲಜಿ ವಿಷಯಗಳು:

ಸಮಾಜದಲ್ಲಿ ನಡೆಯುವ ಅಪರಾಧಗಳು, ಕ್ರಿಮಿನಲ್ ಚಟುವಟಿಕೆಗಳನ್ನು ಪತ್ತೆ ಮಾಡಲು ವಿಧಿ ವಿಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಅಪರಾಧ ಶಾಸ್ತ ್ರ(ಕ್ರಿಮಿನಾಲಜಿ) ಅಧ್ಯ ಯನದಲ್ಲಿ ಅಪರಾಧ, ನಡವಳಿಕೆಯ ಕಾರಣಗಳು ಮತ್ತು ತಡೆಗಟ್ಟುವಿಕೆ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಕಾನೂನು, ಮನೋವಿಶ್ಲೇಷಣೆ ಇತ್ಯಾದಿ ವಿಷಯಗಳಿರುತ್ತ ವೆ. ಹಾಗಾಗಿ, ವಿಧಿ ವಿಜ್ಞಾನ, ಮನಃಶಾಸ್ತ್ರ, ಸಮಾಜ ಶಾಸ್ತ್ರ ಇವೆಲ್ಲವೂ ಅಪರಾಧ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳಾಗಿರುತ್ತ ವೆ. ಈ ಹಿನ್ನೆಲೆಯಲ್ಲಿ ವಿಧಿ ವಿಜ್ಞಾನ ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರದ ಪ್ರ ಮುಖ ವಿಭಾಗವಾಗಿದೆ.

ವಿಧಿ ವಿಜ್ಞಾನ ವಿಷಯಗಳೇನು?:

ವಿಧಿ ವಿಜ್ಞಾನ ವೃತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಬಿ.ಎಸ್ಸಿ (ವಿಧಿ ವಿಜ್ಞಾನ) ಕೋರ್ಸ್‌ನಲ್ಲಿ, ಕುತೂಹಲಕಾರಿ ಮತ್ತು ರೋಚಕವೆನಿಸಬಹುದಾದ ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ. ಉದಾಹರಣೆಗೆ, ಭೌತಿಕ ಪುರಾವೆಗಳ (ಬೆರಳಚ್ಚುಗಳು, ರಕ್ತ , ಕೂದಲು ಇತ್ಯಾದಿ) ಸಂಗ್ರ ಹಣೆ, ಸುರಕ್ಷತೆ ಮತ್ತು ವಿಶ್ಲೇಷಣೆ, ಘಟನೆಯ ದೃಶ್ಯ ದ ಮರುಸೃಷ್ಟಿ ಗಾಗಿ ಇಮೇಜಿಂಗ್ ತಂತ್ರಜ್ಞಾನದ ಬಳಕೆ, ಧ್ವನಿಯ ವಿಶ್ಲೇಷಣೆ (ಆಡಿಯೊ ಅನಾಲಿಸಿಸ್), ವಿಧಿ ವಿಜ್ಞಾನಕ್ಕೆ ಸಂಬಂಧಿಸಿದ ಮಾನವಶಾಸ್ತ್ರ  ಇತ್ಯಾದಿ. ಈ ಎಲ್ಲಾ ವಿಷಯಗಳನ್ನು, ವಿಧಾನಗಳನ್ನು, ತಂತ್ರ ಗಳನ್ನು ವೃತ್ತಿಯಲ್ಲಿ ಬಳಸಲು ವಿದ್ಯಾರ್ಥಿಗಳ ಓದುವಿಕೆ ಪರಿಣಾಮಕಾರಿಯಾಗಿರಬೇಕು. ತರಗತಿಯಲ್ಲಿ ಶೀಘ್ರ ಗ್ರಹಿಕೆ ಮತ್ತು ಏಕಾಗ್ರ ತೆ, ಪ್ರಶ್ನೆಗಾರಿಕೆಯ

ಕಲೆ, ಓದಿದ ನಂತರ ಪುನರುಚ್ಛಾರಣೆ, ಪುನರಾವರ್ತನೆ ಇತ್ಯಾದಿ ಕಾರ್ಯ ತಂತ್ರ ಗಾರಿಕೆಯನ್ನು ಉಪಯೋಗಿಸಬೇಕು.

ಕೋರ್ಸ್ ಪ್ರವೇಶ, ಅರ್ಹತೆಗಳೇನು?

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಬಿ.ಎಸ್ಸಿ (ವಿಧಿ ವಿಜ್ಞಾನ) ನಾಲ್ಕು ವರ್ಷ ದ ಕೋರ್ಸ್ ಆಗಿರುತ್ತದೆ. ಸಾಮಾನ್ಯವಾಗಿ, ಪಿಯುಸಿ ವಿದ್ಯಾರ್ಥಿಗಳು ಭೌತ ವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವ ವಿಜ್ಞಾನ ಓದಿರಬೇಕು. ಈ ಕೋರ್ಸ್‌ಗೆ ಕಾಲೇಜು/ವಿಶ್ವವಿದ್ಯಾಲಯಗಳ ನಿಯಮಾವಳಿ ಅನುಸಾರ ನೇರ ಅಥವಾ ಪ್ರ ವೇಶ ಪರೀಕ್ಷೆ ಮೂಲಕ ಸೇರುವ ಅವಕಾಶವಿರುತ್ತ ದೆ. ಮೂರು ವರ್ಷದ ನಂತರ ಪದವಿಯನ್ನು ನೀಡಲಾಗುತ್ತ ದೆ ಮತ್ತು ನಾಲ್ಕನೇ ವರ್ಷದಲ್ಲಿ

ಸಂಶೋಧನೆಯನ್ನು ಮಾಡಿದರೆ ನೇರವಾಗಿ ಪಿಎಚ್.ಡಿ ಮಾಡಲು ಅರ್ಹ ತೆ ಸಿಗುತ್ತ ದೆ. ಮೂರು ವರ್ಷದ ಪದವಿಯ ನಂತರ ಎರಡು ವರ್ಷದ ಸ್ನಾತಕೋತ್ತ ರ ಪದವಿ ಮಾಡುವ ಅವಕಾಶವೂ ಇದೆ. ಹೆಚ್ಚಿನ ತಜ್ಞತೆಗಾಗಿ, ನೀತಿ ಶಾಸ್ತ ್ರ ಮತ್ತು ಸಂಶೋಧನೆ, ಡಿಜಿಟಲ್ ಇಮೇಜಿಂಗ್, ಡಿಎನ್ಎ ಅನಾಲಿಸಿಸ್, ಮಾನವಶಾಸ್ತ್ರ, ವಿಷ ವೈದ್ಯ ವಿಜ್ಞಾನ, ಫೊರೆನ್ಸಿಕ್ ಜೆನೆಟಿಕ್ಸ್ ಮುಂತಾದ ವಿಷಯಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು ಅಥವಾ ವೃತ್ತಿಯನ್ನು ಅನುಸರಿಸುತ್ತಾ, ಅರೆಕಾಲಿಕ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್‌ಗಳನ್ನು ಮಾಡಬಹುದು.

ವೃತ್ತಿಯ ಅವಕಾಶಗಳು ಮತ್ತು ಕೌಶಲಗಳು:

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ಉತ್ತಮ ಸಂವಹನ, ನಾಯಕತ್ವದ ವ್ಯಕ್ತಿತ್ವ , ನೈತಿಕ ಅರಿವು, ದತ್ತಾಂಶ ಸಂಗ್ರ ಹಣೆ ಮತ್ತು ನಿರ್ವ ಹಣೆ, ತಾರ್ಕಿಕ ಪ್ರ ತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳ ಬೇಕು.

ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ

ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳು, ಕಾಲೇಜುಗಳಲ್ಲಿ ಫೊರೆನ್ಸಿಕ್ ಸೈಂಟಿಸ್ಟ್, ಫೊರೆನ್ಸಿಕ್ ಪ್ಯಾಥಾಲಿಜಿಸ್ಟ್, ಫೊರೆನ್ಸಿಕ್

ಟಾಕ್ಸಿಕಾಲಜಿಸ್ಟ್, ಫೊರೆನ್ಸಿಕ್ ಡಿಜಿಟಲ್ ಎಕ್ಸ್ಪರ್ಟ್‌ನಂತಹ ಹುದ್ದೆಗಳನ್ನು ಅರಸಬಹುದು.

ವಿಧಿ ವಿಜ್ಞಾನ ವಿಷಯದಲ್ಲಿ ಪದವಿ ನಂತರ, ಹೆಚ್ಚಿನ ತಜ್ಞತೆಗಾಗಿ, ಎಂ.ಎಸ್ಸಿ ಮಾಡಬಹುದು. ಬಿ.ಎಸ್ಸಿ (ವಿಧಿವಿಜ್ಞಾನ) ಕೋರ್ಸ್ ಮಾಡಬಹುದಾದ ಕಾಲೇಜುಗಳ ವಿವರಕ್ಕಾಗಿ ಗಮನಿಸಿ: https://collegedunia.com/bsc/forensic-science/karnataka-colleges

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *