ಅಲ್ಲಿ ಒಂದು ಕಾಫಿಯ ಬೆಲೆ 9500 ರುಪಯ!
ಒಂದು ಸಾಮಾನ್ಯ ಆ್ಯಶ್ ಟ್ರೇಗೆ 45 ಸಾವಿರ!!
ಯಾಕೆಂದರೆ,
ನಮ್ಮ ಒಂದು ರೂಪಾಯಿಯ ಬೆಲೆ ಅಲ್ಲಿ 200 ` ರುಪಯ’!
ನಾವು ನಮ್ಮ ಭಾರತ ದೇಶವನ್ನು ಹಳ್ಳಿಗಳ ದೇಶ ಎನ್ನುತ್ತೇವೆ. ಹಳ್ಳಿಗಳೇ ಭಾರತದ ಬೆನ್ನೆಲುಬು ಎಂಬುದು ಚಾಲ್ತಿಯಲ್ಲಿರುವ ಮಾತು. ಆದರೆ ಬೆಂಗಳೂರಿನಿಂದ 8 ಗಂಟೆಗಳಷ್ಟು (4800 ಕಿ.ಮೀ.) ದೂರದಲ್ಲಿರುವ ದೇಶದಲ್ಲಿ ಪರಿಸ್ಥಿತಿ ಭಿನ್ನ. ಆ ದೇಶವನ್ನು ಗುರುತಿಸುವುದು ಯಾವುದರಿಂದ ಗೊತ್ತೇ? ದ್ವೀಪಗಳಿಂದ! ಹೌದು, ಇಂಡೋನೇಷಿಯಾದಲ್ಲಿರುವ ದ್ವೀಪಗಳ ಸಂಖ್ಯೆ ಸುಮಾರು ಹದಿನೇಳು ಸಾವಿರಕ್ಕೂ ಹೆಚ್ಚು! ಆದರೆ ಜನವಸತಿಗೆ ಪ್ರಶಸ್ತವಾಗಿರುವುದು ಆರು ಸಾವಿರ ಮಾತ್ರ!
ಇಂಡೋನೇಷಿಯಾದ ದ್ವೀಪಗಳಲ್ಲೆಲ್ಲಾ ಅತಿ ಪುರಾತನವಾದದ್ದೇ ಬಾಲಿ ದ್ವೀಪ. ಈ ದ್ವೀಪದ ಇತಿಹಾಸ ಕ್ರಿಸ್ತ ಪೂರ್ವ ಸುಮಾರು 2000ದ ಹಿಂದಿನವರೆಗೂ ಹೋಗುತ್ತದೆ. ಅಷ್ಟೇ ಅಲ್ಲ, ಈ ಬಾಲಿ ದ್ವೀಪಕ್ಕೆ `ಇಂಟರ್‍ನ್ಯಾಷನಲ್ ಟ್ರಾವೆಲ್ ಮ್ಯಾಗಜಿನ್’ನವರು `ಪ್ರಪಂಚದ ಸುಂದರ ದ್ವೀಪಗಳಲ್ಲೊಂದು’ ಎಂದು ಗುರುತಿಸಿ ಬಿರುದು ನೀಡಿದ್ದಾರೆ. ಇಷ್ಟು ಸಾಕಲ್ಲವೇ ಬಾಲಿಯ ಬೆಂಬಲಕ್ಕೇ!
ಈ ದ್ವೀಪದ ಇನ್ನೊಂದು ವಿಶೇಷ ಗೊತ್ತೇ? ನಿಮಗೆ ಈಗಾಗಲೇ ಮದುವೆಯಾಗಿದ್ದರೆ ಮುಂದೆ ಹೇಳುವ ವಿಚಾರದಿಂದ ನಿಮಲ್ಲಿ ವಿಷಾದ ಮೂಡಬಹುದು. ಅಕಸ್ಮಾತ್ ನೀವು ಇನ್ನೂ ಬ್ಯಾಚಲರ್ ಆಗಿದ್ದರೆ ಇದನ್ನು ಕೇಳಿ ಮನಸ್ಸು ನವಿಲಿನಂತೆ ಕುಣಿಯಬಹುದು. ಆ ವಿಶೇಷ ಏನು ಗೊತ್ತೇ? ಇದೊಂದು ನವದಂಪತಿಗಳ ಸ್ವರ್ಗ! ಇಡೀ ದ್ವೀಪಕ್ಕೆ ದ್ವೀಪವೇ ಮಧುಚಂದ್ರದ ಮಂಚ! ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನವದಂಪತಿಗಳಾಗಿರುತ್ತಾರೆ. ಈಗ ವಿಷಾದಿಸುವುದು, ಸಂತೋಷಿಸುವುದು ನಿಮಗೇ ಬಿಟ್ಟಿದ್ದು.
ಸಾಮಾನ್ಯವಾಗಿ ಹನಿಮೂನ್‍ಗೆ ಹೋಗುವ ನವದಂಪತಿಗಳು, ಏಕಾಂತದ ಜೊತೆಗೆ ತಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಅನುಭವಿಸಲು ಕಾತರದಿಂದಿರುತ್ತಾರೆ. ಈ ಹೊಸ ಜೋಡಿಗಳ ಏಕಾಂತಕ್ಕೂ, ಸರಸಕ್ಕೂ, ವಿನೋದಕ್ಕೂ, ಕೀಟಲೆಗಳಿಗೂ ಮತ್ತು ವಿಶ್ರಾಂತಿಗೂ ಅನುವು ಮಾಡಿಕೊಡುವಂತಹ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಹಾಗಾಗಿ ನಿಮ್ಮ ಅಭಿರುಚಿಗೂ, ಆಯವ್ಯಯಕ್ಕೂ ತಕ್ಕಂತೆ ಮಧುಚಂದ್ರದ ಪ್ಯಾಕೇಜ್‍ಗಳು ಇಲ್ಲಿ ಯಥೇಚ್ಛವಾಗಿವೆ. ಅರಸನಿಂದ-ಆಳಿನವರೆಗೆ ಯಾರೇ ಆಗಲಿ, ಅವರ ಜೇಬಿಗೆ ಹೊಂದುವಂತ ಅನುಕೂಲಗಳು ನಿಮ್ಮ ಕೈ ಅಳತೆಗೆ ಎಟಗುತ್ತವೆ. ಉಳಿದುಕೊಳ್ಳಲು ಸಣ್ಣಹೋಟೆಲ್- ದೊಡ್ಡಹೋಟೆಲ್, ಪುಟ್ಟಬಂಗಲೆ-ಭವ್ಯಬಂಗಲೆಗಳ ಜೊತೆಗೆ ಆಧುನಿಕ ಸಲಕರಣೆಗಳಿಂದಲೂ ಸಜ್ಜುಗೊಳಿಸಿರುವ ಬಾಲಿನೀಸ್ ಶೈಲಿಯ ಕಟ್ಟಡಗಳು ನಮ್ಮನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ. ಜೊತೆಗೆ, ಕೈಗೊಬ್ಬ-ಕಾಲಿಗೊಬ್ಬ ಪರಿಚಾರಕರು ಕೈ ಕಟ್ಟಿ ನಿಮ್ಮ ಸೇವೆಗೆ ನಿಂತಿರುತ್ತಾರೆ. ಇವೆಲ್ಲದರ ಜೊತೆಗೆ ಕೈ ಕೈ ಹಿಡಿದು ಮನದಲ್ಲೇ ಡ್ಯುಯೆಟ್ ಹಾಡುತ್ತಾ ವಿಹರಿಸಲು ಸುಂದರ ಪರಿಸರ, ಬೆಟ್ಟ, ಗುಡ್ಡ, ನದಿ, ಜರಿ, ಪ್ರಕೃತಿಯ ರಾಶಿ ರಾಶಿ ವನಸಿರಿ… ಸ್ವರ್ಗಕ್ಕೆ ಕಿಚ್ಚಿಡಲು ಇನ್ನೇನು ಬೇಕು?
ಹಾಗಂತ ಈ ದ್ವೀಪವನ್ನು ನೀವು ಯಾವುದೋ ದೂರದ, ಅಪರಿಚಿತ ಜನರಿಂದ ಕೂಡಿದ ಪ್ರದೇಶ ಎಂದುಕೊಳ್ಳಬೇಡಿ. ಇಲ್ಲಿರುವ ಸುಮಾರು ಮೂರುವರೆ ದಶಲಕ್ಷ ಜನಸಂಖ್ಯೆಯಲ್ಲಿ ಶೇಕಡಾ 94% ರಷ್ಟು ಹಿಂದೂ ಧರ್ಮೀಯರು. ಈ ವಾಸ್ತವದ ಅರಿವು ನನಗಾದದ್ದು ಬೆಳಗಿನ ನಗರ ಸಂಚಾರದಲ್ಲಿ. ಅಲ್ಲಿಯ ವ್ಯಾಪಾರೀ ಸ್ಥಳಗಳು ಹೆಸರುಗಳು ಏನಿದ್ದವು ಗೊತ್ತೇ? ಸ್ಯಾಂಪಲ್‍ಗೆ ಹೇಳುತ್ತೇನೆ ಕೇಳಿ. ಅಹಿಂಸೆ, ಕರ್ಮ, ಬ್ರಹ್ಮ, ವಿಷ್ಣು, ಶಿವ, ಗಣೇಶ… ಇತ್ಯಾದಿ ಇತ್ಯಾದಿ. ನಮ್ಮ ನಾಡು-ಸಂಸ್ಕೃತಿಯಲ್ಲೇ ಈ ಪುರಾಣದ ಹೆಸರುಗಳನ್ನು ಮಳಿಗೆಗೆ/ಮಕ್ಕಳಿಗೆ ಇಡುವ ಪ್ರವೃತ್ತಿ ಮಾಯವಾಗುತ್ತಿರುವ ಈ ದಿನಗಳಲ್ಲಿ, ಬೇರೆ ದೇಶದಲ್ಲಿ ನಮ್ಮ ಪರಂಪರೆ ನೆನಪಿಸುವ ಹೆಸರುಗಳನ್ನು ಓದಿದರೆ, ಕೇಳಿದರೆ ಯಾರಿಗಾದರೂ ರೋಮಾಂಚನವಾಗದೇ ಇದ್ದೀತೇ?
ಇಂಥ ಜಾಗಕ್ಕೆ ಹೋಗಿ ಬಂದ ನನ್ನಬಗ್ಗೆ ನಿಮಗೆ ಅಸೂಯೆ ಉಂಟಾಗುತ್ತಿದೆಯೇ? ಇನ್ನೊಂದು ವಿಚಾರ ಹೇಳುವುದು ಮರೆತೆ. ನಾನು ಇಲ್ಲಿಗೆ ಹೋಗಿದ್ದು ವ್ಯಾವಹಾರಿಕ ಕಾರಣದ ಮೇಲೆ. ಅದೂ ಒಂಟಿಯಾಗಿ! ಇನ್ನು ನನ್ನ ಮಧುಚಂದ್ರದ ಮಾತು ದೂರವೇ ಉಳಿಯಿತಲ್ಲ! ಸುಮ್ಮನೆ ಮನಸ್ಸಿನಲ್ಲಿ ಮಂಡಿಗೆ ತಿಂದಿದ್ದಷ್ಟೇ ಬಂತು! ಹಾಗಾಗಿ ನಾನು `ವಿಷಾದದ ಗುಂಪಿನವನು’ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದುಕೊಳ್ಳುತ್ತೇನೆ.
ಬಾಲಿ ಉಷ್ಣವಲಯದಲ್ಲಿರುವುದರಿಂದ ಇಲ್ಲಿ ಸೆಕೆ ಸಾಮಾನ್ಯ; ಆದರೂ ನಮ್ಮ ಕರಾವಳಿ ಪ್ರದೇಶಗಳಿಗಿಂತ ಕಮ್ಮಿ. ಆದ್ದರಿಂದ ವರುಷದ ಯಾವುದೇ ಕಾಲ ಅಥವಾ ಸೀಜನ್‍ನಲ್ಲೂ-ಆಷಾಡ ಮಾಸವೂ ಸೇರಿದಂತೆ, ಬಾಲಿಗೆ ಹೋಗಬಹುದು. ಜೊತೆಗೆ ವರುಷವಿಡೀ ಮುಂಜಾನೆ ಮತ್ತು ರಾತ್ರಿ ಹನಿಮಳೆ ಇಲ್ಲಿ ಸರ್ವೇ ಸಾಮಾನ್ಯವಾಗಿದ್ದು ನಿಮ್ಮ ಏಕಾಂತಕ್ಕೂ, ಪ್ರಣಯಕ್ಕೂ, ಮೂಡಿಗೂ ಅನುಕೂಲವಾಗುವ ಒಂದು ಅದ್ಭುತ ವಾತಾವರಣವನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು.
ನನ್ನ ವ್ಯವಹಾರವೆಲ್ಲಾ ಮುಗಿದ ಮೇಲೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೊರಟೆ. ನಮ್ಮ ಬಸ್ಸು ಮೊದಲ ಪ್ರೇಕ್ಷಣೀಯ ಸ್ಥಳ ಬಾಟುಬುಲನ್ ತಲುಪಿತ್ತು; ಇಳಿದ ತಕ್ಷಣ ಸುಶ್ರಾವ್ಯವಾದ ಸಂಗೀತ ನಮ್ಮನ್ನು ಒಳಕ್ಕೆ ಸ್ವಾಗತಿಸಿತು. ನಮ್ಮ ದೇವಸ್ಥಾನಗಳಂತಹುದೇ ವಾಸ್ತು ಶೈಲಿಯ ಕಟ್ಟಡ; ದೊಡ್ಡ ಗೋಪುರದ ದ್ವಾರ, ಮುಂದಕ್ಕೆ ಹೋಗಿ ಮೆಟ್ಟಲುಗಳಿದಂತೆ ಸಣ್ಣ ತಾವರೆಯ ಕೊಳ, ಅದರ ಹಿಂದೆ ಗರ್ಭಗುಡಿ. ಅದರ ಬಲಕ್ಕೆ ಒಂದು ಅಂಗಳದಲ್ಲಿ ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಒಳಗೆ ಎತ್ತರದ ಮೇಜುಗಳ ಮೇಲೆ ಕುಳಿತುಕೊಳ್ಳಲು ಪ್ರೇಕ್ಷಕರಿಗೆ ಸೌಕರ್ಯಮಾಡಲಾಗಿತ್ತು. ನಮ್ಮ ಎಡಕ್ಕೆ ಸುಮಾರು 15 ಮಂದಿ ಸಂಗೀತಗಾರರು ಕುಳಿತು ವಿವಿಧ ವಾದ್ಯಗಳನ್ನು ನುಡಿಸುತ್ತಿದ್ದರು. ಜಲತರಂಗ್ ಇಲ್ಲಿನ ಒಂದು ವೈಶಿಷ್ಟ್ಯಪೂರ್ಣ ಮತ್ತು ಜನಪ್ರಿಯ ವಾದ್ಯ. ಯಾರೇ ಅ-ರಸಿಕನಾದರೂ ಆ ನಾದಕ್ಕೆ ತಲೆದೂಗುವಂತಿತ್ತು!
ನಮ್ಮ ಮುಂದೆ ವೇದಿಕೆಯಲ್ಲಿ ಕಲಾಕಾರರು ಬಾರೊಂಗ್ ನಾಟಕದ ದೃಶ್ಯಾವಳಿಗಳನ್ನು ಅಭಿನಯಿಸುತ್ತಿದ್ದರು. ಭಾಷೆ ಪ್ರಾದೇಶಿಕವಾದ್ದರೂ ಇಂಗ್ಲೀಷಿನಲ್ಲಿ ನಾಟಕದ ಸಂಕ್ಷಿಪ್ತ ವರದಿಯ ಪ್ರತಿ ನಮ್ಮ ಕೈಯಲ್ಲಿದ್ದರಿಂದ ಅರ್ಥಮಾಡಿಕೊಳ್ಳಲು ಸಹಾಯವಾಗಿತ್ತು. `ಬಾರೊಂಗ್’ ಎನ್ನುವ ಪುರಾತನ ಪ್ರಾಣಿಗೂ `ರಂಗದ’ ಎಂಬ ಪುರಾತನ ರಾಕ್ಷಸನಿಗೂ ಆಗುವ ಯುದ್ಧ ಸಾತ್ವಿಕ ಮತ್ತು ಪಾತಕ ಆತ್ಮಗಳ ನಡುವೆಯ ನಿರಂತರ ಹೋರಾಟದ ಕಲ್ಪನೆಯ ಪ್ರತಿಬಿಂಬ. [ಖಿhe eಣeಡಿಟಿಚಿಟ ಜಿighಣ beಣತಿeeಟಿ ಣhe gooಜ ಚಿಟಿಜ eviಟ sಠಿiಡಿiಣ]. ಎಲ್ಲೋ ನಮ್ಮ ಕೇರಳದ ಕಥಕಳಿ ಅಥವಾ ನಮ್ಮ ಕರಾವಳಿಯ ಯಕ್ಷಗಾನದ ವೇಷ, ಭೂಷಣ ಮತ್ತು ಅಭಿನಯ ಶೈಲಿಗೆ ಹೋಲುತ್ತಿತ್ತು. ಪ್ರತಿನಿತ್ಯ ನಡೆಯುವ ಒಂದು ಗಂಟೆಯ ಈ ಕಾರ್ಯಕ್ರಮದಲ್ಲಿ ವಿದೇಶಿ ಪ್ರವಾಸಿಗರೇ ಹೆಚ್ಚಿದ್ದು, ಕಾರ್ಯಕ್ರಮದ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತಿತ್ತು. ಇದಲ್ಲದೆ ಬಾಲಿಯಲ್ಲಿ ಹಿಂದೂ ಧರ್ಮದ ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನೃತ್ಯರೂಪಕದ ಕಾರ್ಯಕ್ರಮಗಳು [ಮಹಾಭಾರತ, ರಾಮಾಯಣ ಇತ್ಯಾದಿ] ಪ್ರತಿನಿತ್ಯ ಅಸಂಖ್ಯಾತ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.
ನಮ್ಮ ಮುಂದಿನ ಪ್ರೇಕ್ಷಣೀಯ ಸ್ಥಳ ಇಂಡೋನೇಷಿಯದ ಅತ್ಯಂತ ಪ್ರಸಿದ್ಧ ಚಿತ್ರಕಾರ ಆಂಟೋನಿಯೊ ಬ್ಲಾಂಕೊರವರ ಮನೆಯನ್ನು ಮ್ಯೂಸಿಯಮ್ ಆಗಿ ಮಾರ್ಪಡಿಸಿದ್ದ ಪ್ರದೇಶ. ಆಂಟೋನಿಯೊ ಬ್ಲಾಂಕೊ ಮೂಲತಃ ಸ್ಪೇನ್ ದೇಶದವರು. ಆ ಪ್ರದೇಶ ಇದ್ದದ್ದು ಕಂಪೂನ್ ನದಿಯ ತೀರದಲ್ಲಿ. ಬೆಟ್ಟದ ಮೇಲೆ, ಸುಂದರ ಗಿಡ ಮರಗಳ ನಡುವೆ ಎತ್ತರದ ಮೆಟ್ಟಿಲುಗಳ ಮೇಲೆ ನಿರ್ಮಿಸಿದ ಮಂದಿರವದು. ಅದು ಬಾಲಿನೀಸ್ ಶೈಲಿಯ ಗೋಪುರ. ಮಂದಿರದ ಒಳಗಿನ ಅಂಗಳದಲ್ಲಿ ಅವರ ಜನ್ಮ ಚರಿತ್ರೆ, ಮನೆತನ, ಅವರ ಕಾರ್ಯದ ಬಗ್ಗೆ ಸಾಕಷ್ಟು ವಿವರಗಳಿದ್ದವು. ಅವರ ಮಗ ಮಾರಿಯೊ ಸಹ ಚಿತ್ರಕಾರ. ನಮ್ಮನ್ನು ಎಲ್ಲೆಡೆ ಕರೆದೊಯ್ದು; ಹೆಮ್ಮೆಯಿಂದ ತನ್ನ ತಂದೆಯವರ ಕೃತಿಗಳ ವಿವರ, ಅವರ ಪ್ರಶಸ್ತಿಗಳು ಎಲ್ಲವನ್ನೂ ತೋರಿಸಿದ. ಉಷ್ಣ ವಲಯದಲ್ಲಿರುವ ಬಾಲಿ ಪ್ರದೇಶದಲ್ಲಿ ಅತ್ಯಂತ ಅಪರೂಪದ ಸಸ್ಯಗಳೂ, ಪಕ್ಷಿಗಳೂ, ವನ್ಯಮೃಗಗಳೂ ಇವೆ. ಮಾರಿಯೊ ಸಾಕಿದ್ದ ಸಾಕಷ್ಟು exoಣiಛಿ ಪಕ್ಷಿಗಳೊಡನೆ ನಮ್ಮ ಫೆÇೀಟೋ, ವಿಡಿಯೋ ಸೆಷನ್ ಆಯಿತು. ಇಂಡೋನೇಷಿಯದ ಸುಮಾತ್ರದ ದ್ವೀಪದಲ್ಲಿ ಅತ್ಯಂತ ದಟ್ಟವಾದ, ಬಾಹ್ಯಪ್ರಪಂಚಕ್ಕೂ, ಜನಜೀವನಕ್ಕೂ ಸಂಪರ್ಕವೇ ಇಲ್ಲದಂತ ಕಾಡುಗಳಿವೆ. ಇಲ್ಲಿ ಪ್ರಪಂಚದೆಲ್ಲೆಡೆ ಮಾಯವಾಗುತ್ತಿರುವ ಹುಲಿಗಳ ಜೊತೆಗೆ, ಆನೆಗಳೂ, ನೀರಾನೆಗಳೂ, ಘೇಂಡ ಮೃಗಗಳೂ ಸೇರಿದಂತೆ, ವಿರಳವಾದ ವನ್ಯಮೃಗಗಳಿವೆಯಂತೆ!
ಬಾಲಿ ದ್ವೀಪ ಮರ ಮತ್ತು ಕಲ್ಲಿನಲ್ಲಿ ಮಾಡಿದ ಕೆತ್ತನೆಯ ಕೆಲಸಗಳಿಗೆ ಹೆಸರುವಾಸಿ. ನಮ್ಮನ್ನು ಬಾಲಿಯ ನೆನಪಿನ ಕಾಣಿಕೆಗಳನ್ನು ಕೊಳ್ಳಲು ಅಲ್ಲಿನ ಉಬುದ್ ಪ್ರದೇಶದ ಪ್ರತಿಷ್ಠಿತ ಶೋರೂಮೊಂದಕ್ಕೆ ಕರೆದೊಯ್ದರು. ದಾರಿಯುದ್ದಕ್ಕೂ ಶೋರೂಮ್‍ಗಳು ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ಶಿಲಾಕೃತಿಗಳ ಸಾಲು. ಈ ಪ್ರದೇಶದಲ್ಲಿ ಹಲವಾರು ಪ್ರತಿಷ್ಠಿತ ರೆಸಾರ್ಟ್‍ಗಳೂ, ಪ್ರಾದೇಶಿಕ ಉಪಹಾರಗೃಹಗಳೂ ಇವೆ. ಆದ್ದರಿಂದ ಇಲ್ಲಿನ ಪುಟ್ಟ ಕಾಲುದಾರಿಗಳಲ್ಲಿ ನಡೆದು ಹೋಗುವುದೇ ಒಂದು ವಿಶಿಷ್ಟ ಅನುಭವ.
ನಿಮಗೆ ಯಾವುದನ್ನು ಹೇಳದಿದ್ದರೂ ಇಲ್ಲಿನ ಕರೆನ್ಸಿ-‘ರುಪಯ’ ಬಗ್ಗೆ ಹೇಳಲೇಬೇಕು. ಇದು ವಿಚಿತ್ರ ಆದರೂ ಸತ್ಯ! ಒಂದು ಅಮೆರಿಕದ ಡಾಲರ್‍ಗೆ ನಮ್ಮ ರೂಪಾಯಿಯಲ್ಲಿ ಎಷ್ಟು ಬೆಲೆ ಹೇಳಿ? ಸದ್ಯಕ್ಕೆ 45 ರೂಪಾಯಿ ಎಂದು ಇಟ್ಟುಕೊಳ್ಳಿ. ನಮಗೆ ಇದನ್ನು ನೋಡಿಯೇ ಹೊಟ್ಟೆ ಉರಿದು ಹೋಗುತ್ತದೆ. ಅದೇ ಡಾಲರ್ ಬೆಲೆ ಇಂಡೋನೇಷಿಯಾದಲ್ಲಿ ಎಷ್ಟು ಗೊತ್ತೇ? 9000 ರುಪಯ!. ಇದನ್ನು ಕೇಳಿದಮೇಲೆ ನಿಮಗೆ ನಿಜಕ್ಕೂ ಸಮಾಧಾನವಾಗಿರಬಹುದು. ಆದ್ದರಿಂದ ಇಲ್ಲಿ ಮೊದಲ ನೋಟಕ್ಕೆ ಎಲ್ಲವೂ ತುಟ್ಟಿ ಎನಿಸುತ್ತದೆ. ನಾನು ಕೊಂಡ ಒಂದು ಪುಟ್ಟ ಚಿsh ಣಡಿಚಿಥಿ -ಬೆಲೆ ಎಷ್ಟು ಗೊತ್ತೇ? 45,000 ರುಪಯಗಳು! visiಣiಟಿg ಛಿಚಿಡಿಜ hoಟಜeಡಿ ಗೆ 30,000 ರುಪಯಗಳು. ಒಂದು ಕಾಫಿಗೆ 9500/-. ನಮ್ಮ ಒಂದು ರೂಪಾಯಿಗೆ ಅವರ 200 ರುಪಯಗಳು. ನಮ್ಮ ನೋಟಿಗೆ ಇಂತಹ ಮರ್ಯಾದೆ ಬೇರೆಲ್ಲೂ ಸಿಗದು! ಇದಕ್ಕಾಗಿ ನಾವು ಭಾರತೀಯರು ನಮ್ಮ ಕಾಲರ್ ಮೇಲೆತ್ತಿ ಬೀಗಬಹುದು. ಅಲ್ಲವೇ?
ಅಂದು ಸಂಜೆ ನಮಗೊಂದು ಔತಣ ಕೂಟವಿತ್ತು. ಅಲ್ಲಿನ ಪ್ರಸಿದ್ಧವಾದ ಬಾಲಿನೀಸಿನ ರಾಜೋಪಚಾರದ ವ್ಯವಸ್ಥೆಯಾಗಿತ್ತು; ಕಾರಣಾಂತರಗಳಿಂದ ನಮ್ಮ ಸ್ವಾಗತ, ನಮ್ಮ ರೆಸಾರ್ಟಿನಿಂದಲೇ ಆರಂಭವಾಯಿತು. ನಾನು ಭಾಗವಹಿಸುತ್ತಿದ್ದ ಸಮಾವೇಶ ಸಂಜೆ 5.30ರ ಬದಲಿಗೆ, ಸುಮಾರು 6ಕ್ಕೆ ಮುಗಿದು, ನಾವು ಹೊರಡುವುದು 6.30 ಎಂದು ನಿಶ್ಚಯವಾಯಿತು. ಆದರೆ, ಬಾಲಿಯ ಒಂದು ಪ್ರಾಂತ್ಯದ ಅರಸರು, ನಮ್ಮನ್ನು 7 ಕ್ಕೆ ನಿರೀಕ್ಷಿಸುವುದು ಖಚಿತವಾಗಿತ್ತು. ಪ್ರಪಂಚದೆಲ್ಲೆಡೆಯಂತೆ, ಬಾಲಿಯಲ್ಲೂ ಸೋಮವಾರ ಸಂಜೆ, ವಿಪರೀತ ಸಂಚಾರದ ದಟ್ಟಣೆ. ಸುಮಾರು ಐವತ್ತು ಕಿ.ಮಿ ದೂರದ ಸ್ಥಳಕ್ಕೆ 30 ನಿಮಿಷದಲ್ಲಿ ಹೋಗುವಂತಿಲ್ಲ; ತಡವಾಗಿ ಹೋಗಿ, ಅರಸರನ್ನು ಕಾಯಿಸುವಂತಿಲ್ಲ.
ಸ್ಥಳೀಯ ಕಾಯಿದೆ ಮತ್ತು ಕಾನೂನುಗಳು, ಹೇಗೆ ಪ್ರವಾಸಿ ಉದ್ದಿಮೆಗಳಿಗೆ ಇಂತಹ ಸಂದರ್ಭಗಳಲ್ಲಿ ಅಡ್ಡಿ ಆತಂಕಗಳನ್ನೊಡ್ಡದೆ, ವಾಸ್ತವವಾಗಿ ನೆರವಾಗುತ್ತವೆ ಎನ್ನುವುದಕ್ಕೆ ನಿದರ್ಶನವೆಂಬಂತೆ, ನಮ್ಮ ಎರಡು ಬಸ್ಸುಗಳಿಗೆ, ಪೆÇೀಲೀಸ್ ಪಟ್ರೋಲ್ ವ್ಯವಸ್ಥೆಯಾಯಿತು. ನಮ್ಮ ಮುಂದೆ ಮತ್ತು ಹಿಂದೆ, ಕೆಂಪು ದೀಪದ ಪೆÇೀಲೀಸ್ ಪಹರೆಯ ಜೀಪ್, ಮಧ್ಯದಲ್ಲಿ ನಮ್ಮ ಬಸ್ಸುಗಳು. ಯಾವುದೇ ಸಂಚಾರೀ ಸಿಗ್ನಲ್‍ನಲ್ಲಿ ನಿಲ್ಲದೆ, ನಮ್ಮ ಭೇಟಿಯ ಸ್ಥಳಕ್ಕೆ, ನಮ್ಮ ರಾಜೋಪಚಾರಕ್ಕೆ ಸರಿಹೊಂದುವಂತೆ, ಸಮಯಕ್ಕೆ ಸರಿಯಾಗಿ ಹೋಗಲು ಮಾಡಿದ ಈ ವ್ಯವಸ್ಥೆ ಬೇರಾವ ದೇಶದಲ್ಲಿ ಸಿಗಬಹುದು? ಭಾರತದಲ್ಲಂತೂ ಊಹಿಸಿಕೊಳ್ಳಲೂ ಸಾಧ್ಯವೇ ಇಲ್ಲ!
ಬಸ್ಸಿನಿಂದ ಇಳಿಯುತ್ತಿದ್ದಂತೆಯೇ ನಮಗೆಲ್ಲರಿಗೂ ಅದ್ದೂರಿ ಸ್ವಾಗತ ಪ್ರಾರಂಭವಾಯಿತು. ಪುರುಷರಿಂದ ಪಂಜಿನ ನೃತ್ಯದ ನಂತರ ಸುಮಾರು 15 ಹೆಂಗಳೆಯರ ಬಳಕುವ, ವೈಯ್ಯಾರದ ನೃತ್ಯ. ಇದೆಲ್ಲಾ ಮುಗಿಯುವಷ್ಟರಲ್ಲಿ ಸುಮಾರು ಹದಿನೈದು ನಿಮಿಷವಾಯಿತು. ಆಮೇಲೆ ನೃತ್ಯರೂಪಕವಾಗಿ ನಮ್ಮನ್ನು ಅರಸರ ಆಸ್ಥಾನದ ಹೊರಾಂಗಣಕ್ಕೆ ಕರೆದೊಯ್ದರು. ಅರಸರು ಮತ್ತು ಅವರ ಶ್ರೀಮತಿಯವರು ಆಸ್ಥಾನದ ಬಾಗಿಲಲ್ಲೇ ನಮ್ಮನ್ನು ಸ್ವಾಗತಿಸಿದರು. ಒಳಗಡೆ ಇದ್ದ ಅರಳಿ ಕಟ್ಟೆಯ ಸುತ್ತಲೂ ಮೇಜುವಾನಿಯ ಏರ್ಪಾಡು. ಅರಸರು ಇಂಗ್ಲೀಷಿನಲ್ಲಿ ಚೊಕ್ಕಟವಾಗಿ ಸ್ವಾಗತ ಭಾಷಣ ಮಾಡಿದರು. ಭಾರತಕ್ಕೂ, ಇಂಡೋನೇಶಿಯ ದೇಶಕ್ಕೂ, ಅತ್ಯಂತ ಪ್ರಾಚೀನವೂ ನಿಕಟವೂ ಆದ ಸಂಬಂಧದ ಪ್ರಸ್ತಾಪ. ಅವರ ಭಾಷೆ ನಮ್ಮ ಸಂಸ್ಕೃತದಿಂದ ಪ್ರೇರೇಪಿತ. ಆದರೆ ಇಲ್ಲಿ ನಮ್ಮ ಸಂಭಾಷಣೆಗೆ ಇಂಗ್ಲೀಷೇ ಕೊಂಡಿ…
ಇಲ್ಲಿನ ಊಟದಲ್ಲಿ ಅನ್ನವೇ ಪ್ರಾಧಾನ್ಯ. `ಅಕ್ಕಿ’ ದೇವರು ಮಾನವ ಜನಾಂಗಕ್ಕೆ ಕೊಟ್ಟಿರುವ ಬಳುವಳಿ ಎಂದು ಇಲ್ಲಿನ ಜನ ನಂಬುತ್ತಾರೆ. ಊಟದ ನಂತರ ನಮಗಾಗಿ ಒಂದು ವಿಶೇಷವಾದ ನಾಟಕದ ಏರ್ಪಾಡಾಗಿತ್ತು. ಇದರ ಸಾರಾಂಶ ಒಳಿತು ಮತ್ತು ಕೆಡುಕುಗಳ ನಡುವಿನ ಕಾದಾಟ. ಅಂತ್ಯದಲ್ಲಿ ದುಷ್ಟ ಸಂಹಾರ ಶಿಷ್ಟ ರಕ್ಷಣೆ. ಇದರಲ್ಲಿ ಹೊಸದೇನಿರದಿದ್ದರೂ, ಅರಸರ ಆತಿಥ್ಯ, ಉಪಚಾರ, ಏರ್ಪಾಡು ಉನ್ನತ ಮಟ್ಟದ್ದಾಗಿತ್ತು; ಮೆಚ್ಚುವಂತದ್ದಾಗಿತ್ತು. ಎಲ್ಲಕ್ಕೂ ಹೆಚ್ಚಿನದಾಗಿ ಅವರ ಆಶಯ ಮತ್ತು ಉದ್ದೇಶ ಅರ್ಥಪೂರ್ಣವಾಗಿತ್ತು.
ಸಮುದ್ರ ತೀರವೆಂದರೆ ನನಗೆ ಯಾವಾಗಲೂ ತುಂಬ ಪ್ರಿಯ. ಹಾಗಾಗಿ ಪ್ರಪಂಚದ ಎಲ್ಲಾ ಸಮುದ್ರ ತೀರಗಳನ್ನು ನೋಡುವ ಅತೀವ ಅಪೇಕ್ಷೆ. ಮುಂಜಾನೆ 6ಕ್ಕೆ ಎದ್ದು, ಕಾಫಿ ಕುಡಿದು, ಕ್ಯಾಮೆರಾ ಹಿಡಿದು ಸಮುದ್ರ ದರ್ಶನಕ್ಕೆ ಹೊರಟೆ. ಅಲ್ಲಿ ಹೆಚ್ಚಿನ ಜನಸಂದಣಿ ಇರಲಿಲ್ಲ. ನಾನಿದ್ದ ರೂಮಿನ ಹಿಂಬದಿಯಲ್ಲೇ ಒಂದು ಸಣ್ಣ ಜಲಪಾತ; ಪಕ್ಕದಲ್ಲಿ ಹರಿಯುತ್ತಿದ್ದ ನೀರಿನ ತೊರೆ ದಾಟಲು ಮಾಡಿದ್ದ ಮರದ ಸೇತುವೆಯನ್ನು ದಾಟಿ ಮೇಲಕ್ಕೆ ನಡೆದರೆ, ದೂರದಲ್ಲಿ ಕಾಣಿಸುತ್ತಿತ್ತು ಸಮುದ್ರ. ತೀರಕ್ಕೆ ಸುಮಾರು ಒಂದು ಕಿ.ಮಿ; 77 ಹೆಕ್ಟೇರ್ ಭೂಮಿಯ ರೆಸಾರ್ಟಿನಲ್ಲೇ ನಡೆದೆ. ದಾರಿಯಲ್ಲಿ ಅದೊಂದು ಅದ್ಭುತ ಅನುಭವ. ವಿಶಾಲವಾದ ಈಜು ಕೊಳದ ಕೆಳಗೆ ನಡೆದರೆ ಇದ್ದ ಸಮುದ್ರ, ಈಜು ಕೊಳಕ್ಕೇ ಹೊಂದಿಕೊಂಡಂತೆಯೇ ಇದ್ದು ಅಗಾಧವಾದ ಮತ್ತು ಅಪರಿಮಿತವಾದ ಸಾಗರದ ನೀರು, ಇದು ಒಂದು ರೀತಿಯ ಅಪೂರ್ವವಾದ ಔಠಿಣiಛಿಚಿಟ iಟಟusioಟಿ ನನ್ನು ಸೃಷ್ಠಿಸಿತ್ತು . ಈಜು ಕೊಳದ ಸಮೀಪ ಧ್ಯಾನ, ವ್ಯಾಯಾಮ ಮಾಡಲು, ಗಾಲ್ಫ್ ಆಡಲು ವ್ಯವಸ್ಥೆ. ಅಲ್ಲಲ್ಲೇ ಕಪ್ಪು ಹೆಂಚಿನ ಬಂಗಲೆಗಳು, ಮರಗಳು, ಹೂ ಗಿಡಗಳು ರೆಸಾರ್ಟಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು.
ಸ್ವಲ್ಪ ದೂರದಲ್ಲೇ ತೀರಕ್ಕೆ ಹೋಗಲಿದ್ದ ಮೆಟ್ಟಿಲುಗಳು ಕಾಣಿಸಿತು. ನೂರಾರು ಮೆಟ್ಟಿಲುಗಳನ್ನು ಇಳಿದ ಮೇಲೆ, ಸಮುದ್ರ ತೀರದಿಂದ ಮೇಲೆ ಪುಟಿದೆದಿದ್ದಂತೆ ಕಾಣುತ್ತಿದ್ದ ನೈಸರ್ಗಿಕ ಬೃಹತ್ ಬಂಡೆಗಳ ಸಾಲು. ಆಶ್ಚರ್ಯಕರವಾದ ಜಾಗದಲ್ಲಿ, ಭೂಮಿಯಿಂದ ಸುಮಾರು ಐವತ್ತು ಅಡಿ ಎತ್ತರದಲ್ಲಿ, ಚಪ್ಪಟೆಯಾದ ಬಂಡೆಗಳ ಮೇಲೆ, ಜಪಾನಿನ ವಾಸ್ತುಶಿಲ್ಪಿ ಕೊಯ್ಚಿ ನಿರ್ಮಿಸಿದ ಬಾರ್. ಕೆಳಗೆ ಹಿಂದೂ ಮಹಾಸಾಗರದ ಅಲೆಗಳ ಅಬ್ಬರದ ಸದ್ದು; ಮೇಲೆ ಖoಛಿಞ ಃಚಿಡಿನ ಉನ್ಮಾದಕಾರಿ ಖoಛಿಞ ಮತ್ತು ಎಚಿzz ಒusiಛಿ ನ ವ್ಯವಸ್ಥೆ. ಇಂತಹ ಅದ್ವಿತೀಯವೂ, ಅದ್ದೂರಿಯೂ ಆದ ಸ್ಥಳವೇ ಒಂದು ರೀತಿಯ ಅಮಲೇರಿಸುವಂತಿತ್ತು. ಆದ್ದರಿಂದಲೇ ಇದು ಪ್ರಪಂಚದ ಅತ್ಯುನ್ನತ ಛಿoಛಿಞಣಚಿiಟ bಚಿಡಿ ಎಂದು ಹೆಸರುವಾಸಿಯಾಗಿ, ಬಾಲಿಯ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಿದೆ.
ನಾನು ಬಾಲಿಗೆ ಬಂದದ್ದು ವ್ಯವಹಾರದ ಮೇಲಾದರೂ, ಇಲ್ಲಿ ನೋಡಿದ ಸ್ಥಳಗಳೂ, ಆದ ಅನುಭವಗಳೂ, ಅಪಾರ. ಈ ದ್ವೀಪ ಕಟ್ಟಿಕೊಟ್ಟ ಅನುಭವಗಳು ಅವಿಸ್ಮರಣೀಯ, ಮಧುಚಂದ್ರವೊಂದನ್ನು ಬಿಟ್ಟು! ನಾನು ನನ್ನ ಧರ್ಮಪತ್ನಿಯೊಂದಿಗೆ ಇಲ್ಲಿಗೆ ಮತ್ತೊಮ್ಮೆ ಬರುವ ನಿರ್ಧಾರ ಮಾಡಿ ಅಲ್ಲಿಂದ ಬೀಳ್ಕೊಂಡೆ. ಇಲ್ಲಿನ ನೆನಪುಗಳೂ ಮರೆಯಲಾಗದಂತದ್ದು. ಆಲ್ಡಸ್ ಹಕ್ಸ್ಲಿ ಹೇಳಿದಂತೆ, “ನಮ್ಮಲ್ಲಿನ ನೆನಪುಗಳೇ ನಮ್ಮ ವೈಯಕ್ತಿಕ ಸಾಹಿತ್ಯದ ಭಂಡಾರ”. ಆ ನೆನಪುಗಳನ್ನು ಸದಾ ಹಸಿರಾಗಿಸಲು, ಲಕ್ಷಾಂತರ ಸಂಖ್ಯೆಯ ನೋಟು ಕೊಟ್ಟು ಇನ್ನಷ್ಟು ನೆನಪಿನ ಕಾಣಿಕೆಗಳನ್ನು ಕೊಂಡು, ವಿಮಾನವನ್ನು ಹತ್ತಿದೆ.
ಬಾಲಿ: ಕ್ಷಿಪ್ರ ಟಿಪ್ಪಣಿ
ಜನಸಂಖ್ಯೆ | 35,51,000 |
ಹಿಂದೂ ಧರ್ಮೀಯರು | 94% |
ವಾತಾವರಣ | ಸಾಮಾನ್ಯವಾಗಿ ಗರಿಷ್ಟ: 30 ರಿಂದ 32 ಸೆಂಟಿಗ್ರೇಡ್ ಕನಿಷ್ಟ: 22-24 ಸೆಂಟಿಗ್ರೇಡ್ |
ರಾಜಧಾನಿ | ದೆನ್‍ಪಸರ್ |
ವಿಮಾನ ನಿಲ್ದಾಣ | ನುಗರ್ ರಾಯ್ ಏರ್‍ಪೆÇೀರ್ಟ್, ದೆನ್‍ಪಸರ್ಬೆಂಗಳೂರಿನಿಂದ ಸಿಂಗಪೂರ್ / ಬ್ಯಾಂಗ್ಕಾಕ್ಮುಖಾಂತರ ದೆನ್‍ಪಸರಿಗೆಪ್ರಯಾಣಿಸಬಹುದು. |
ಅಂದಾಜು ವೆಚ್ಚ[ಭಾರತದ ರೂಪಾಯಿಗಳಲ್ಲಿ] ವಿಮಾನ ಪ್ರಯಾಣ [ಬೆಂಗಳೂರು – ದೆನ್‍ಪಸರ್ – ಬೆಂಗಳೂರು] | ಸುಮಾರು 25,000 – 50,000 [ಒಬ್ಬರಿಗೆ] |
ಹೋಟೆಲ್ | ಸುಮಾರು 5,000 ರಿಂದ 25,000,[ಇಬ್ಬರಿಗೆ, ಒಂದು ದಿನಕ್ಕೆ] |
ಸ್ಥಳೀಯ ಸಮಯ | +8.00 GMT +2.30 IST |