ಅಪ್ಪನೂ ಆಗಿದ್ದಳೂ ನನ್ನಮ್ಮ

ಸಾವು ನಿಗೂಢ….. ಎಂದು ಸ್ನೇಹಿತರೊಬ್ಬರಿಗೆ ಪತ್ರದಲ್ಲಿ ಬರೆದಿದ್ದ ನನ್ನ ತಂದೆ ಹಿರಿಯ ಸಮಾಜವಾದಿ, ಮುತ್ಸದ್ದಿ ದಿ|| ಎಸ್. ವೆಂಕಟರಾಮ್ ಅದಾದ ಕೆಲವೇ ದಿನಗಳಲ್ಲಿ ಅಸು ನೀಗಿದ್ದರು. ಅದಾಗಿ ಸಾವು ಕೇವಲ ನಿಗೂಡ ಮಾತ್ರವಲ್ಲ, ಅದು ಅನಿರೀಕ್ಷಿತವೂ ಸಹ ಎಂದು ಸುಮಾರು ಎರಡೂವರೆ ದಶಕಗಳ ಹಿಂದೆ0iÉುೀ ನನಗರಿವಾಗಿತ್ತು. ಆದರೂ ಅತ್ಯಂತ ಆಶಾವಾದಿಯಾಗಿ, ಆಸ್ಪತ್ರೆಯಲ್ಲಿದ್ದ ನನ್ನ ತಾಯಿ ಸರೋಜ ವೆಂಕಟರಾಮ್‍ರವರನ್ನು ನೋಡಲು ದುಬೈನಿಂದ ಹಠಾತ್ತನೆ ಹೊರಟಿದ್ದ ನನಗೆ, ಅವರು ನಮ್ಮನ್ನು ಅಗಲಿ ಹೋಗುತ್ತಾರೆಂಬ ಕಲ್ಪನೆ ಕೂಡ ಇರಲಿಲ್ಲ.

ಕಾಲುನೋವಿನಿಂದ ಬಳಲುತ್ತಿದ್ದರೂ, ವಯಸ್ಸು ಎಪ್ಪತ್ತಾರಾಗಿದ್ದರೂ, ಲವಲವಿಕೆಯಿಂದ ಎಲ್ಲೆಡೆ ಓಡಾಡಿಕೊಂಡಿದ್ದ ಅವರು ಇನ್ನಿಲ್ಲ ಎಂದರೆ ನಂಬುವುದು ಕಷ್ಟವೇ. ವೆಂಕಟರಾಮ್‍ರವರ ಯಶಸ್ಸಿನ ಹಿಂದೆ ಸರೋಜರವರ ಪಾತ್ರ ಹಿರಿದಾಗಿತ್ತು ಎಂದು ಅವರ ಕುಟುಂಬವನ್ನು ಹತ್ತಿರದಲ್ಲಿ ಕಂಡ ಎಲ್ಲರ ಒಮ್ಮತದ ಅಭಿಪ್ರಾಯ. ಸದಾ ನಗುಮುಖದಿಂದ, ಆತ್ಮೀಯತೆಯಿಂದ ಮನೆಗೆ ಬಂದವರೆಲ್ಲರಿಗೂ ಕಾಫಿ, ಟೀ ಸರಬರಾಜು ಮಾಡುತ್ತಾ, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮದುವೆಯಾದ ತರುಣದಲ್ಲಿ ಬೆಂಗಳೂರಿನಲ್ಲಿ ಕಳೆದ ಕಷ್ಟದ ದಿನಗಳಲ್ಲಿ ಸಹನೆಯಿಂದಲೂ, 1975-76 ರ ಎಮರ್ಜೆಂಸಿ0iÀi ಕರಾಳ ದಿನಗಳಲ್ಲಿ ಇಂದಲ್ಲ ನಾಳೆ ದೇಶದ ರಾಜಕೀಯ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ವಿಶ್ವಾಸದಿಂದಲೂ, ವೆಂಕಟರಾಮ್‍ರವರ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತಾ, ಹೆತ್ತ ನಾಲ್ಕು ಮಕ್ಕಳ ಜವಾಬ್ದಾರಿಯನ್ನು ಹೊತ್ತು ಅವರನ್ನು ಓದಿಸಿ ಬೆಳೆಸಿದ ಮಹಾ ತಾಯಿ ಅವರು. ಹಾಗೆ0iÉುೀ ಜಾತಿ, ಮತಗಳ ಭೇದಗಳನ್ನು ಪರಿಗಣಿಸದೇ ರೈತ ಕಾರ್ಮಿಕರೊಡಗೂಡಿದಂತೆ ಎಲ್ಲರ ಓಳಿತಿಗಾಗಿ, ದೇಶದ ಹಿತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ವೆಂಕಟರಾಮ್ ರವರಿಂದ ಪ್ರಭಾವಿತರಾಗಿ ಮನಗೆ ಬರುತ್ತಿದ್ದ ಎಲ್ಲರಿಗೂ ಪ್ರೀತಿಯ ತಾಯಿಯಂತಿದ್ದರು. ಹೀಗೆ ಬರುತ್ತಿದ್ದು ವೆಂಕಟರಾಮ್ ಕುಟುಂಬಕ್ಕೆ ಹತ್ತಿರವಾದ ಹೆಸರುಗಳಲ್ಲಿ ಪ್ರಮುಖವಾದವರು ಪಿ.ಜಿ.ಆರ್ ಸಿಂಧ್ಯ, ಟಿ.ಎನ್. ಸೀತಾರಾಮ್, ಆರ್. ವೆಂಕಟಸ್ವಾಮಿ, ಕೆ.ವಿ.ನಾಗರಾಜಮೂರ್ತಿ, ಶೂದ್ರ ಶ್ರೀನಿವಾಸ್, ದಿ|| ಡಾ. ಜೀವ್‍ರಾಜ್ ಆಳ್ವ ಮತ್ತು ದಿ|| ರಮೇಶ್ ಬಂದಗದ್ದೆ, ದಿ|| ಪುರುಷೋತ್ತಮ ಮತ್ತಿತರರು.

ಬಹಳಷ್ಟು ಕಾಲ ವೆಂಕಟರಾಮ್ ರವರ ನೆರಳಿನಲ್ಲಿದ್ದು, ಅವರ ಬೆನ್ನೆಲುಬಾಗಿದ್ದ ಸರೋಜರವರು, ಕಾಲಕ್ರಮೇಣ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ವೆಂಕಟರಾಮ್ ರವರು ಗತಿಸಿದ ಕೆಲವು ವರುಷಗಳಲ್ಲಿ ರಾಜಕೀಯಕ್ಕಿಳಿದು ರಾಜಾಜಿನಗರ ರಾಮಮಂದಿರ ಕ್ಷೇತ್ರದಿಂದ ಕಾಪೆರ್Çೀರೇಟರ್ ಆಗಿ 1983-88ರವರೆಗೆ ನಗರಪಾಲಿಕೆಯಲ್ಲಿ ಸೇವೆ ಸಲ್ಲಿಸಿದಿದ್ದರು.. ಮತ್ತು 1985-86ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಆಗಿಯೂ ಸೇವೆ ಸಲ್ಲಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ಇತ್ತೀಚಿಗೆ ಸಕ್ರಿಯ ರಾಜಕೀಯದಿಂದ ದೂರವಿದ್ದರೂ, ಸಮಾಜವಾದಿ ಮತ್ತು ಇತರೆ ಸಭೆ, ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ವೆಂಕಟರಾಮ್ ರವರ ಸಮಾಜವಾದಿ ಗೆಳೆಯರು, ಅತ್ಮೀಯರು, ಅಭಿಮಾನಿಗಳು ಮತ್ತು ಹಿತೈಷಿಗಳಿಗೆಲ್ಲಾ ಒಟ್ಟಾಗಿ ಸೇರುವ ತಾಣವನ್ನು ದೊರಕಿಸಿ ಆ ಬಳಗಕ್ಕೆ ಜೀವ ತುಂಬುವ ಕೊಂಡಿಯಾಗಿದ್ದರು. ಈಗ ನನ್ನ ಜೊತೆ ಇವರೆಲ್ಲರೂ ಒಂದು ರೀತಿಯಲ್ಲಿ ಅನಾಥರೇ.

ನಾನು ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿಸ್ತೆಗೆ ಮುಂಚೆ ಅವರ ನೋವನ್ನು, ಸೊರಗಿ ಹೋಗಿದ್ದ ಅವರ ದೇಹವನ್ನು ನೋಡಿ ಕಣ್ಣೀರನ್ನು ತಡೆಯಾಗದಿದ್ದಾಗ, ನನ್ನ ಕೈಯನ್ನು ಹಿಡಿದು ” ಧೈರ್ಯವಾಗಿರು” ಎಂದು ಹೇಳಿ ಅವರ ಸುತ್ತ ಸೇರಿದ್ದ ನಮ್ಮೆಲ್ಲರಲ್ಲೂ ಧೈರ್ಯವನ್ನು ತುಂಬಿ ಬೇಗನೆ ಗುಣವಾಗುವ ಆಸೆಯನ್ನು ಬೆಳಗಿಸಿದ್ದರು. ಅದೇ ರೀತಿ ಸತತವಾಗಿ ಸಾವು ಮತ್ತು ಬದುಕಿನ ಮಧ್ಯೆ ಹೋರಾಡಿ ಸಾಕಷ್ಟು ಗುಣವಾಗಿದ್ದರೂ ಸಹ. ಆದರೆ ಮನುಷ್ಯನ ಜೀವಕ್ಕೆ ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವೂ ಅಷ್ಟೇ ಮುಖ್ಯ. ವರುಷಗಳಿಂದ ಅವರು ಹೇಳದಿದ್ದರೂ ಸಹ ಮನಸ್ಸಿನಲ್ಲಿ ಪ್ರಾಯಶಃ ಒಂದು ಕೊರಗಿತ್ತು ಎನಿಸುತ್ತದೆ. ಜೀವನ ಪರ್ಯಂತ ಎಂಥಾ ಕಷ್ಟದ ದಿನಗಳಲ್ಲಿಯೂ ಧೈರ್ಯಗೆಡದ ಧೀರ ಮಹಿಳೆಗೆ ಈಡೆರದೊಂದು ಸಣ್ಣ ಹಂಬಲ ಕೊನೆಯ ಕೆಲದಿನಗಳಲ್ಲಿ ಬದುಕುಳಿಯುವ ಆಸೆಯನ್ನು ಅವರಿಂದ ಕಸಿದುಗೊಂಡಿತೇ ಎಂಬ ಸಂಶಯ ಕಾಡುತ್ತಿದೆ.ನಾನು ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿಸ್ತೆಗೆ ಮುಂಚೆ ಅವರ ನೋವನ್ನು, ಸೊರಗಿ ಹೋಗಿದ್ದ ಅವರ ದೇಹವನ್ನು ನೋಡಿ ಕಣ್ಣೀರನ್ನು ತಡೆಯಾಗದಿದ್ದಾಗ, ನನ್ನ ಕೈಯನ್ನು ಹಿಡಿದು ” ಧೈರ್ಯವಾಗಿರು” ಎಂದು ಹೇಳಿ ಅವರ ಸುತ್ತ ಸೇರಿದ್ದ ನಮ್ಮೆಲ್ಲರಲ್ಲೂ ಧೈರ್ಯವನ್ನು ತುಂಬಿ ಬೇಗನೆ ಗುಣವಾಗುವ ಆಸೆಯನ್ನು ಬೆಳಗಿಸಿದ್ದರು. ಅದೇ ರೀತಿ ಸತತವಾಗಿ ಸಾವು ಮತ್ತು ಬದುಕಿನ ಮಧ್ಯೆ ಹೋರಾಡಿ ಸಾಕಷ್ಟು ಗುಣವಾಗಿದ್ದರೂ ಸಹ. ಆದರೆ ಮನುಷ್ಯನ ಜೀವಕ್ಕೆ ದೇಹದ ಆರೋಗ್ಯದ ಜೊತೆಗೆ ಮನಸ್ಸಿನ ಆರೋಗ್ಯವೂ ಅಷ್ಟೇ ಮುಖ್ಯ. ವರುಷಗಳಿಂದ ಅವರು ಹೇಳದಿದ್ದರೂ ಸಹ ಮನಸ್ಸಿನಲ್ಲಿ ಪ್ರಾಯಶಃ ಒಂದು ಕೊರಗಿತ್ತು ಎನಿಸುತ್ತದೆ. ಜೀವನ ಪರ್ಯಂತ ಎಂಥಾ ಕಷ್ಟದ ದಿನಗಳಲ್ಲಿಯೂ ಧೈರ್ಯಗೆಡದ ಧೀರ ಮಹಿಳೆಗೆ ಈಡೆರದೊಂದು ಸಣ್ಣ ಹಂಬಲ ಕೊನೆಯ ಕೆಲದಿನಗಳಲ್ಲಿ ಬದುಕುಳಿಯುವ ಆಸೆಯನ್ನು ಅವರಿಂದ ಕಸಿದುಗೊಂಡಿತೇ ಎಂಬ ಸಂಶಯ ಕಾಡುತ್ತಿದೆ.

ನನಗೆ ಮಾನವ ಮೂಳೆ, ಮಾಂಸದ ತಡಿಕೆ ಎಂದು ನೆನಪಾದದ್ದು ಅವರ ಅಸ್ಥಿಯ ಮುಂದೆ, ಕಾವೇರಿ ನದಿಯ ತಟದಲ್ಲಿ ಅಂತಿಮ ಕ್ರಿ0iÉು ನಡೆಸುತ್ತಿದ್ದಾಗ. ಧೀರ್ಘ ಕಾಲ ಕಾಲುನೋವಿನಿಂದ ಬಳಲುತ್ತಿದ್ದ ಅವರ ದೇಹದ ಪುಡಿ ಪುಡಿಯಾದ ಮೂಳೆಗಳನ್ನು ನೋಡಿದಾಗ. ವಿಧಿಯ ಆಟ ಬಲ್ಲವರಿಲ್ಲ, ನಿಜ. ಸಾವು ನಿಗೂಢ ಮತ್ತು ಅನಿರೀಕ್ಷಿತ ಕೂಡ. ಇಂತಹ ಕಹಿ ಸತ್ಯದ ಅರಿವು ಮತ್ತೊಮ್ಮೆ ನನಗಾಯಿತು.

ಆದರೂ ಐವತ್ತು ವರುಷಗಳು ಅವರೊಡನೆ ಬಾಳಿದ ಸಿಹಿನೆನಪುಗಳು, ಅವರಾಡುತ್ತಿದ್ದ ಪ್ರೀತಿ, ಅಕ್ಕರೆಯ ಮಾತುಗಳು ನನ್ನೊಡನೆ ಸದಾ ಕಾಲವಿರುತ್ತದೆ. ಇದರ ಜೊತೆಗೆ ವೆಂಕಟರಾಮ್ ರವರ ಸ್ವಾರ್ಥರಹಿತ ಮತ್ತು ಧೀಮಂತ ವ್ಯಕ್ತಿತ್ವ ನಮಗೆ ಎಂದೆಂದಿಗೂ ಮಾರ್ಗದರ್ಶನವಾಗಿರುತ್ತದೆ. ಇಂತಹ ತಂದೆ, ತಾಯಿ ಎಲ್ಲರಿಗೂ ಲಭಿಸುವುದಿಲ್ಲವೆಂಬ ಸಿಹಿ ಸತ್ಯದ ಅರಿವೂ ಸಹಾ ನಮಗಿದೆ.

Download PDF document

   

About author View all posts Author website

V Pradeep Kumar

Leave a Reply

Your email address will not be published. Required fields are marked *