ಭೂಲೋಕದ ಸ್ವರ್ಗ ಸ್ವಿಟ್ಜಲ್ರ್ಯಾಂಡಿನಲ್ಲಿ…

ಪಟ್ಟಣವನ್ನು ವಿಭಜಿಸಿದ ವಿಸ್ಪ ನದಿಯ ಕಲರವ, ಹಕ್ಕಿಗಳ ಚಿಲಿಪಿಲಿ, ಲಘುವಾಗಿ ಬೀಳುತ್ತಿದ್ದ ಹಿಮ, ಆ ಪ್ರಾಕೃತಿಕ ಪರಿಸರಕ್ಕೊಂದು ಅಪೂರ್ವ ಸೌಂದರ್ಯದ ಲೇಪನ ಮಾಡಿದಂತಿತ್ತು…
ಇಲ್ಲಿನ ಸರೋವರದಲ್ಲಿ ಬೋಟಿಂಗ್ ನಿಷಿದ್ಧ; ಆದರೆ, ಕ್ರಿಕೆಟ್ ಆಡಬಹುದು…

ನಮ್ಮ ಬದುಕಿಗೊಂದು ಗುರಿಯಿರಬೇಕು; ಸಾಧಿಸುವ ಛಲವಿರಬೇಕು. ಸಾರ್ಥಕತೆಯ ಹಾದಿಯಲ್ಲಿ ಕಲಿಕೆ ನಿರಂತರವಾಗಿರಬೇಕು. ಬದುಕಿನ ಈ ಅನ್ವೇಷಣೆಯಲ್ಲಿ ಪ್ರವಾಸಗಳು ಅಮೂಲ್ಯ. ಪ್ರವಾಸದ ಅನುಭವಗಳು, ವಿಷಯಗಳು, ವಿಸ್ಮಯಗಳು ಜ್ಞಾನಾರ್ಜನೆಗೆ ದಾರಿ; ಮನಸ್ಸಿಗೆ ಚೇತೋಹಾರಿ. ಹಾಗಾಗಿ, ಬದುಕೇ ಒಂದು ಪಾಠಶಾಲೆ. ಅ ಬದುಕಿಗೊಂದು ಅರ್ಥ ಕಟ್ಟಿಕೊಡುವ ಹುಡುಕಾಟದಲ್ಲಿ, ಯಾವುದು ಮುಖ್ಯ, ಅಮುಖ್ಯ ಎನ್ನುವುದರ ಪರಿಕಲ್ಪನೆಯಿರಬೇಕು.

ಪ್ರವಾಸಗಳನ್ನು ಆಯ್ಕೆಮಾಡುವಾಗ ಮತ್ತು ಐಟಿನೆರರಿಯನ್ನು ನಿರ್ಧರಿಸುವಾಗ, ನಮ್ಮ ಉದ್ದೇಶವನ್ನು ಗಮನದಲ್ಲಿರಿಸುಕೊಳ್ಳುವುದು ಅಗತ್ಯ. ಹೊಸ ಸ್ಥಳಗಳ ವೀಕ್ಷಣೆ, ಮನರಂಜನೆ, ಶಾಪಿಂಗ್‍ಗಳೆಲ್ಲವೂ ಬೇಕು; ಇವೆಲ್ಲವನ್ನು ಅಚ್ಚುಕಟ್ಟಾಗಿ ಯೋಜಿಸಿ ನಿರ್ವಹಿಸುವ ಕಂಡಕ್ಟಡ್ ಗ್ರೂಪ್ ಪ್ರವಾಸಗಳಲ್ಲಿನ ಅನುಕೂಲಗಳನ್ನು ಅಲ್ಲಗಳೆಯುವಂತಿಲ್ಲ; ಯಾವುದೇ ಪ್ರದೇಶವನ್ನು ನಾವು ನೋಡಬಯಸಿದಾಗ, ಅಲ್ಲಿನ ಚರಿತ್ರೆ, ಭಾಷೆ, ಸಂಸ್ಕೃತಿ, ನೆಲದರಿಮೆಗಳನ್ನು ಅರಿತಾಗಲೇ, ನಮ್ಮ ಜ್ಞಾನ ಭಂಢಾರದ ವೃದ್ಧಿಯಾಗುವುದು. ಆದರೆ, ಎಲ್ಲರೂ ಹಿಡಿದ ಜಾಡನ್ನೇ ನಾವೂ

ಅನುಕರಿಸುವುದರಿಂದ ಕೆಲವೊಮ್ಮೆ ವೈಶಿಷ್ಟ್ಯಗಳನ್ನೂ, ವಿಶೇಷತೆಗಳನ್ನೂ ನೋಡಲಾಗುವುದಿಲ್ಲ; ನಮ್ಮ ಬದುಕಿನ ಕಲಿಕೆಗೊಂದು ಅರ್ಥಕಟ್ಟಿಕೊಡಲಾಗುವುದಿಲ್ಲ. ಹೀಗಾಗಿ, ಒಂದು ವಾರದ ಮಟ್ಟಿಗೆ ನನ್ನ ಧರ್ಮಪತ್ನಿ ಅನಿತ ಜೊತೆ ಸ್ವಿಟ್ಜಲ್ರ್ಯಾಂಡ್‍ಗೆ ಹೋಗುವುದೆಂದು ನಿರ್ಧರಿಸಿದಾಗ, ಕಂಡಕ್ಟಡ್ ಟೂರ್ ಬದಲು ಪ್ರವಾಸದ ಎಲ್ಲ ವ್ಯವಸ್ಥೆಗಳನ್ನು ನಾವೇ ಸ್ವತಃ ಮಾಡಿಕೊಂಡೆವು.

ಸ್ವಿಟ್ಜಲ್ರ್ಯಾಂಡ್‍ನ ಎಲ್ಲ ಟೂರ್‍ಗಳಲ್ಲಿ ಸಾಮಾನ್ಯವಾಗಿರುವುದು ಮೌಂಟ್ ಟಿಟ್ಲಿಸ್ ಮತ್ತು ಉಂಪ್ಫ್ರಾಘ್ ಪರ್ವತಗಳು. ಈ ಪರ್ವತಗಳು ಮತ್ತು ಇನ್ನಿತರ ಜನಪ್ರಿಯ ಸ್ಥಳಗಳಾದ ಜûೂರಿಕ್, ಜಿನೀವ, ಬರ್ನ್, ಲೂಸರ್ನ್, ಇಂಟರ್ಲಾಕೆನ್‍ಗಳನ್ನು ನೋಡಿದ ಮೇಲೆ ನಮಗಿನ್ನೂ ಮೂರು ದಿನಗಳ ಸಮಯವಿತ್ತು. ಹಾಗಾಗಿ, ಜûರ್ಮಾಟ್ ಮತ್ತು ಸೇಂಟ್ ಮೊರಿಟ್ಜ್ ಸ್ವಿಟ್ಜಲ್ರ್ಯಾಂಡಿನ ಅತ್ಯಂತ ಉನ್ನತ ಶ್ರೇಣಿಯ ಗಿರಿಧಾಮಗಳೆಂದು ಜûೂರಿಕ್ ನಗರದ ರೈಲ್ವೆ ಆಫೀಸಿನಲ್ಲಿ ತಿಳಿದ ಮೇಲೆ ನಾವು ಇಲ್ಲಿಗೆ ಭೇಟಿ ಮಾಡಲು ನಿರ್ಧರಿಸಿದೆವು.

ಜûರ್ಮಾಟ್

ಜûರ್ಮಾಟ್ ಸ್ವಿಟ್ಜಲ್ರ್ಯಾಂಡ್-ಇಟಲಿಯ ಗಡಿಯಲ್ಲಿ, ಆಲ್ಫ್ಸ್ ಪರ್ವತ ವಲಯದಲ್ಲಿರುವ ಮ್ಯಾಟರ್‍ಹಾರ್ನ್ ಶಿಖರದ ತಪ್ಪಲಿನಲ್ಲಿರುವ ಪುಟ್ಟದೊಂದು ಪಟ್ಟಣ. ರೈಲು ನಿಲ್ದಾಣದಿಂದ ಹೊರಬರುತ್ತಿದ್ದಂತೆ ಕಂಡ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಲಘುವಾಗಿ ಬೀಳುತ್ತಿದ್ದ ಹಿಮ, ಎಲ್ಲೆಡೆಯಿದ್ದ ಹಿಮದ ರಾಶಿಯ ನಡುವಿನ ಪ್ರಮುಖ ರಸ್ತೆಯ ಎರಡೂ ಬದಿಯಲ್ಲಿ ಹೋಟೆಲ್, ಚಾಲೆಗಳು [ಸ್ಥಳೀಯ ಶೈಲಿಯ ಮರದ ಮನೆಗಳು], ಕೆಫೆ, ರೆಸ್ಟೋರೆಂಟ್ಸ್, ಅಂಗಡಿಗಳು ಇತ್ಯಾದಿ. ಬಣ್ಣಬಣ್ಣದ ಉಣ್ಣೆಯ ಪೋಷಾಕು, ಹ್ಯಾಟ್ಸ್, ಬೂಟ್ಸ್, ಗ್ಲೋವ್ಸ್ ಧರಿಸಿದ ಪ್ರವಾಸಿಗರು ಲವಲವಿಕೆಯಿಂದ, ಉತ್ಸಾಹದಿಂದ ಓಡಾಡುತ್ತಿದ್ದು ಎಲ್ಲೆಡೆ ಸಂಭ್ರಮದ ವಾತಾವರಣವಿತ್ತು. ಈ ಪಟ್ಟಣವನ್ನು ವಿಭಜಿಸಿದ ವಿಸ್ಪ ನದಿಯ ಕಲರವ, ಹಕ್ಕಿಗಳ ಚಿಲಿಪಿಲಿ, ಆ ಪ್ರಾಕೃತಿಕ ಪರಿಸರಕ್ಕೊಂದು ಅಪೂರ್ವ ಸೌಂದರ್ಯದ ಲೇಪನ ಮಾಡಿದಂತಿತ್ತು. ದೂರದಲ್ಲಿ ಕಾಣುತ್ತಿದ್ದ ಪರ್ವತಗಳೂ ಸೇರಿದಂತೆ ಹಿಮಾವೃತವಾದ ಬೆಳ್ಳಗಿನ ಬೆಡಗಿನ ಆ ಸಿರಿ; ಕೊರೆಯುವಂತಹ ಚಳಿಯಲ್ಲಿ ಸನಿಹದಲ್ಲೇ ಇದ್ದ ನಮ್ಮ ಹೋಟೆಲ್ ಕಡೆ ನಡೆಯುತ್ತಿದ್ದಂತೆ ಅನಿಸಿದ್ದು: ಇದು ಕನಸೋ? ಕಲ್ಪನೆಯೋ? ನಿರ್ಮಲವಾದ ಹಳ್ಳಿಯ ಸ್ವಾಭಾವಿಕ ಸಿರಿಯ ಸೊಬಗಿನೊಂದಿಗೆ, ಪಟ್ಟಣದ ಮೂಲ ಸೌಕರ್ಯಗಳ ಸಂಯೋಗ ನಮ್ಮನ್ನು ಮೂಕವಿಸ್ಮಯರನ್ನಾಗಿಸಿತು. ಹಾಂ! ಈ ಇಡೀ ಪ್ರದೇಶದಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ [ಛಿಚಿಡಿ ಜಿಡಿee zoಟಿe]. ಓಡಾಡಲು ವಿದ್ಯುತ್ ಚಾಲಿತ ವಾಹನಗಳಿವೆ; ಆದರೆ ಟ್ರಾಫಿûಕ್ ಸಿಗ್ನಲ್‍ಗಳಿಲ್ಲ. ಈ ಸುಂದರ, ನಿರ್ಮಲ ಪರಿಸರದಲ್ಲಿ ನಿರಾಂತಕವಾಗಿ ಓಡಾಡುವ ಅನುಭವವೇ ಅಸಾಧಾರಣವಾದದ್ದು.

ಮ್ಯಾಟರ್‍ಹಾರ್ನ್ ಶಿಖರ

ಇಲ್ಲಿನ ಪ್ರಮುಖ ಆಕರ್ಷಣೆ ಪಿರಮಿಡ್ ಆಕಾರದ ಮ್ಯಾಟರ್‍ಹಾರ್ನ್ ಶಿಖರ. 14692 ಅಡಿ ಎತ್ತರದ ಈ ಶಿಖರ, ಎಲ್ಲಿ ಹೋದರೂ ಕಾಣುವ, ತನ್ನ ಪ್ರಭಾವವನ್ನು ಠೀವಿಯಿಂದ ಬೀರುವ ಅಗಾಧ ಹಿಮಪರ್ವತವಿದು.

ಈ ಪ್ರದೇಶದಲ್ಲಿ ಪರ್ವತಾರೋಹಣದ ಕುರಿತು ನಿಖರವಾದ ಮಾಹಿತಿ ಬೇಕಿತ್ತು. ನಾವಿದ್ದ ಹೋಟೆಲಿನ ಜನರಲ್ ಮ್ಯಾನೇಜರ್‍ರವರ ಸಹಾಯದಿಂದ ಹೆಸರಾಂತ ತಜ್ಞರಾದ ಡೇವಿಡ್‍ರೊಡನೆ ಇಲ್ಲಿನ ಪಂಚತಾರ ಹೋಟೆಲ್ ಆಮ್ನಿಯದ ಕಾಫೀಶಾಪಿನಲ್ಲಿ ಭೇಟಿಗೆ ಅವಕಾಶ ಸಿಕ್ಕಿತು. 35ರ ಸ್ಪುರದ್ರೂಪಿ ಯುವಕ ಡೇವಿಡ್ ಸ್ವತಃ ಪರ್ವತಾರೋಹಿ ಮತ್ತು ವಿಷಯ ತಜ್ಞ. ಹೋಟೆಲಿನಲ್ಲಿ ಬಿಸಿಬಿಸಿ ಕಾಫಿಯನ್ನು ಸವಿಯುತ್ತಾ ಅವರೊಡನೆ ಮಾತಿಗಿಳಿದಾಗ ಅನೇಕ ಕುತೂಹಲಕಾರೀ ಮಾಹಿತಿಗಳು ಲಭಿಸಿತು.

ವಾತಾವರಣದಲ್ಲಿನ ತಾಪಮಾನ ತೀವ್ರವಾಗಿ ಕುಸಿದಾಗ ಬೀಳುವ ಹಿಮ, ಕ್ರಮೇಣ ಪದರಗಳಾಗಿ, ಬಂಡೆಗಳಾಗಿ ವರ್ಷಗಳು ಉರುಳುತ್ತಿದ್ದಂತೆ, ನಿರಂತರ ಹಿಮಪಾತದಿಂದ ಬೆಟ್ಟವಾಗುತ್ತದೆ. ಆದರೆ, ಟ್ರೆಕ್ಕಿಂಗ್ ಮಾಡುವ ಮೊದಲು ಸ್ಥಳದ ಆಧ್ಯಯನವನ್ನು ಕೂಲಂಕುಷವಾಗಿ ವಿಮರ್ಶಿಸಬೇಕು. ಏಕೆಂದರೆ, ಹಿಮಪದರ, ಹಿಮಬಂಡೆ ಅಥವಾ ನೀರ್ಗಲ್ಲುಗಳ ಏರುವಿಕೆ [ಖಿಡಿeಞಞiಟಿg] ಅಥವಾ ಜಾರುವಿಕೆಗೆ [Sಞiಟಿg] ಬೇಕಾಗುವ ಕೌಶಲ್ಯಗಳಲ್ಲಿ ವ್ಯತ್ಯಾಸಗಳಿರುತ್ತವೆ. ಇಲ್ಲಿ ದೈಹಿಕ ಸಾಮಥ್ರ್ಯವಷ್ಟೇ ಅಲ್ಲ; ಗೆಲ್ಲುವ ಮನೋಧರ್ಮ, ಸುರಕ್ಷತೆಯ ಅರಿವು ಮತ್ತು ತಂತ್ರಜ್ಞಾನದ ನೆರವು ಬೇಕಾಗುತ್ತದೆ.

1865ರಲ್ಲಿ ಮೊಟ್ಟಮೊದಲಿಗೆ ಎಡ್ವರ್ಡ್ ವಿಂಪರ್ ಮ್ಯಾಟರ್‍ಹಾರ್ನ್ ಶಿಖರವನ್ನು ಏರಿದ ಪರ್ವತಾರೋಹಿ. ಅವರ ಕೃತಿ ‘Sಛಿಡಿಚಿmbಟes ಚಿmoಟಿgsಣ ಣhe ಂಟಠಿs’, ಪರ್ವತಾರೋಹಣೆಗೆ ಸಂಬಂಧಿಸಿದ ಒಂದು ಅತ್ಯುನ್ನತ ಸಾಹಿತ್ಯವೆಂದು ಇಂದಿಗೂ ಪರಗಣಿಸಲಾಗುತ್ತದೆ. ವಿಂಪರ್‍ರವರ ಮ್ಯಾಟರ್‍ಹಾರ್ನ್‍ನ ಸೌಂದರ್ಯದ ಬಣ್ಣನೆಯಿಂದ ಪ್ರೇರಿತರಾಗಿ ಪ್ರಖ್ಯಾತ ಬ್ರಿಟೀಷ್ ಲೇಖಕ ಥಾಮಸ್ ಹಾರ್ಡಿಯವರು ಒಂದು ಕವನವನ್ನೇ ಬರೆದರು.

1965ರ ನಂತರ, ಈ ಉಚ್ಚ ಶಿಖರವನ್ನು ಟ್ರೆಕ್ಕಿಂಗ್ ಮಾಡಿರುವ ಅಸಂಖ್ಯಾತ ಮಹನೀಯರಿದ್ದಾರೆ. ಈ ಪ್ರದೇಶದಲ್ಲಿ ಯಶಸ್ವಿಯಾಗಿ ಟ್ರೆಕ್ಕಿಂಗ್ ಮಾಡಿರುವವರಲ್ಲಿ ಅಮೇರಿಕದ ಥಿಯೋಡರ್ ರೂಸ್ವೆಲ್ಟ್ [1881ರಲ್ಲಿ] ಮತ್ತು ಬ್ರಿಟನ್ನಿನ ವಿಂಸ್ಟನ್ ಚರ್ಚಿಲ್ [1994ರಲ್ಲಿ] ಕೂಡ ಸೇರಿದ್ದಾರೆ. ಮುಂದೆ 1901ರಲ್ಲಿ ಅಮೇರಿಕದ ರಾಷ್ಟ್ರಪತಿಗಳಾದ ರೂಸ್ವೆಲ್ಟ್ ತಮ್ಮ ತಂಗಿ ಆನಾಗೆ ಪತ್ರದಲ್ಲಿ ಪರ್ವತಾರೋಹಣದ ಬಗ್ಗೆ ಹೀಗೆ ಬರೆಯುತ್ತಾರೆ: “ಈ ಪರ್ವತವು ಅತ್ಯಂತ ಕಡಿದಾಗಿದೆ; ಹಿಮವು ಬಂಡೆಗಳ ಮೇಲೆ ಉಳಿಯುವುದಿಲ್ಲ. ಅದಾಗ್ಯೂ, ಅಪಘಾತಗಳು ಸಾಮಾನ್ಯವಾಗಿ ದೌರ್ಬಲ್ಯದಿಂದಲೋ ಅಥವಾ ಅಂಜುಬುರುಕುತನ ಮತ್ತು ಆಯಾಸದಿಂದಲೇ ಆಗುವುದು ಹೆಚ್ಚು. ಆದರೆ, ಗಟ್ಟಿಯಾದ ಮತ್ತು ಎಚ್ಚರಿಕೆಯುಳ್ಳ ಮನುಷ್ಯನಿಗೆ ಒಳ್ಳೆಯ ಮಾರ್ಗದರ್ಶಿಗಳಿದ್ದರೆ ಆತಂಕಕ್ಕೆ ಕಾರಣವಿಲ್ಲ”. ರೂಸ್ವೆಲ್ಟ್ ಜûರ್ಮಾಟಿಗೆ ತಮ್ಮ ಪತ್ನಿ ಅಲೀಸ್ ಜೊತೆ ಮಧುಚಂದ್ರಕ್ಕೆ ಬಂದಾಗ ಹೋಟೆಲಿನಲ್ಲಿದ್ದ ಇಬ್ಬರು ಬ್ರಿಟೀಷರೊಡನೆ ವಾಗ್ವಾದವಾಗಿ, ಮ್ಯಾಟರ್‍ರ್ಹಾನ್ ಟ್ರೆಕ್ಕಿಂಗ್ ಮಾಡುವುದು ಅಮೇರಿಕದವರಿಗೂ ಸಾಧ್ಯವೆಂದು ತೋರಿಸಬೇಕಿತ್ತು. ಮುಂದೆ ಅವರು ಅತ್ಯಂತ ಪ್ರಬಲ ಮತ್ತು ಆಕ್ರಮಣಶೀಲ ರಾಷ್ಟ್ರಪತಿಗಳೆನ್ನುವ ಹೆಗ್ಗಳಿಕೆಗೂ ಪಾತ್ರರಾದರು. 1940ರಲ್ಲಿ ಬ್ರಿಟೀಷ್ ಪ್ರಧಾನ ಮಂತ್ರಿಗಳಾದ ಚರ್ಚಿಲ್ ಅವರು 1894ರಲ್ಲಿ ಜûರ್ಮಾಟ್‍ಗೆ ಬಂದಾಗ ಮ್ರ್ಯಾಟರ್‍ಹಾರ್ನ್‍ಗಿಂತಲೂ ಕಡಿದಾದ ಮತ್ತು ಸ್ವಲ್ಪ ಹೆಚ್ಚು ಎತ್ತರದ ಮೊಂಟ್ ರೋಸ ಶಿಖರವನ್ನೇರುತ್ತಾರೆ; ಏಕೆಂದರೆ ಇದು ಹೆಚ್ಚು ಎತ್ತರ ಮತ್ತು ಕಡಿದದ್ದಾದರೂ, ಅವರ ಮಾರ್ಗದರ್ಶಿಗಳು ಮ್ರ್ಯಾಟರ್‍ಹಾರ್ನ್‍ಗಿಂತ ಅರ್ದದಷ್ಟು ಶುಲ್ಕವನ್ನು ವಿಧಿಸುತ್ತಾರೆಂಬ ಕಾರಣದಿಂದ! ಟ್ರೆಕ್ಕಿಂಗ್ ಕಲಿಯಲು ಇಲ್ಲಿ ಎಲ್ಲ ಅನುಕೂಲಗಳಿವೆ. ಟ್ರೆಕ್ಕಿಂಗ್‍ನಲ್ಲಿ ಆಸಕ್ತಿಯಿಲ್ಲದಿದ್ದರೆ ಅಥವಾ ಆರಾಮವಾಗಿ ಮ್ರ್ಯಾಟರ್‍ಹಾರ್ನ್‍ಗೆ ಹೋಗುವ ಇಷ್ಟವಿದ್ದರೆ ಎರಡು ಆಯ್ಕೆಗಳಿವೆ; ಕಾಗ್‍ವೀಲ್ ರೈಲಿನ ಮುಖಾಂತರ ಅಥವಾ ಕೇಬಲ್ ಕಾರ್. ಆದರೆ, ಕೇಬಲ್ ಕಾರಿನಿಂದ ಕಾಣುವ ದೃಶ್ಯಾವಳಿ ಹೆಚ್ಚು ಅದ್ಭುತವೆಂದು ಎಲ್ಲರ ಅಭಿಪ್ರಾಯ.

ನಮ್ಮೊಡನೆ ಕಾಲ ಕಳೆದ ಡೇವಿಡ್‍ರವರಿಗೆ ಧನ್ಯವಾದಗಳನ್ನು ಹೇಳಿ, ಅವರ ಸೂಚನೆಯ ಮೇರೆಗೆ ಕೇಬಲ್ ಕಾರ್‍ನಲ್ಲಿ ಮ್ರ್ಯಾಟರ್‍ಹಾರ್ನ್ ತಲುಪಿದೆವು. ಇಲ್ಲಿನ ದೃಶ್ಯಾವಳಿ ನಯನ ಮನೋಹರ ಮತ್ತು ರೋಮಾಂಚನಕಾರಿ. ಒಂದೆಡೆ ಇಡೀ ಆಲ್ಫ್ಸ್ ಪರ್ವತ ಶ್ರೇಣಿಯ ವಿಸ್ತಾರವಾದ ನೋಟ; ಅಡಿಯಲ್ಲಿ ಜûರ್ಮಾಟ್ ಪಟ್ಟಣದ ಪಕ್ಷಿನೋಟ. ಕೊರೆಯುವ ಚಳಿಯಲ್ಲಿಯೂ ಕೆಲವು ಕ್ಷಣ ಅಲ್ಲಿಯೇ ನಿಂತ ನಮಗೆ ನಿಜಕ್ಕೂ ಪ್ರಕೃತಿ ದೇವತೆಯ ಸೌಂದರ್ಯವನ್ನು ಆಸ್ವಾದಿಸಿದ ಪರಮಾನಂದದ ಅನುಭವವಾಯಿತು.

ಗ್ಲೇಸಿಯರ್ ಪ್ಯಾಲೇಸ್

ಮ್ರ್ಯಾಟರ್‍ರ್ಹಾನ್ ಶಿಖರದಿಂದ ಸುಮಾರು 50 ಅಡಿ ಕೆಳಗೆ ಗ್ಲೇಸಿಯರ್ ಪ್ಯಾಲೇಸಿನ ನಿರ್ಮಾಣವೇ ಒಂದು ಅದ್ಭುತವಾದ ಪರಿಕಲ್ಪನೆ. ಲಿಫ್ಟ್ ಮುಖಾಂತರ ಪ್ಯಾಲೇಸ್ ಒಳಹೋದಲ್ಲಿ ಕಾಣುವುದು ನೀರ್ಗಲ್ಲಿನಲ್ಲಿ ಕೆತ್ತಿದ ಕಲಾತ್ಮಕ ಸ್ಮಾರಕಗಳು, ಭವ್ಯವಾದ ಪ್ರತಿಮೆಗಳು; ಇವೆಲ್ಲದರಲ್ಲಿಯೂ ಶಿಲ್ಪಿಯ ನೈಪುಣ್ಯತೆಯೊಂದಿಗೆ ಪ್ರತಿ ಕಲಾಕೃತಿಯ ಹಿನ್ನೆಲೆಯ ಕತೆ ನಮ್ಮನ್ನು ಬೆರಗಾಗಿಸುತ್ತದೆ. ಈ ಪ್ಯಾಲೇಸಿನ ನೀರ್ಗಲ್ಲಿನ ನೆಲದ ಮೇಲೆ ಜಾಗರೂಕತೆಯಿಂದ ನಡೆದಾಡುವುದೊಂದು ಶಾಶ್ವತವಾದ ಅನುಭವ.

ಇಲ್ಲಿನ ಅಂಗಳದಲ್ಲಿರುವ ರೆಸ್ಟೋರೆಂಟಿನಲ್ಲಿ ಸ್ವಿಸ್ ಮತ್ತು ಭಾರತೀಯ ತಿನಿಸುಗಳು ಲಭ್ಯ; ಜೊತೆಗೆ ಆತ್ಮೀಯರೊಡನೆ ಕಾಲಕಳೆಯಲು ಇಲ್ಲೊಂದು ಮೀಟಿಂಗ್ ರೂಮ್ ಕೂಡ ಇದೆ. ಅಷ್ಟೇ ಅಲ್ಲ; ಇಲ್ಲಿನ ಆರಾಮದಾಯಕ ಲೌಂಜಿನ ಬೆಳಕಿನಲ್ಲಿ ಕುಳಿತು ವಾಯುಮಂಡಲದ ಸಂಗೀತದೊಡನೆ ಗ್ಲೇಸಿಯರ್ ಪ್ಯಾಲೇಸಿನ ಪ್ರಶಾಂತತೆಯನ್ನು ಸಂಪೂರ್ಣವಾಗಿ ಆನಂದಿಸಬಹುದು.

ಮ್ರ್ಯಾಟರ್‍ರ್ಹಾನ್ ಶಿಖರದ ಮೇಲಿರುವ ಆಕಷಣೆಗಳೆಂದರೆ 365 ದಿನವಿಡೀ ಇರುವ ಹಿಮ, ಸ್ನೋ ಟ್ಯೂಬಿಂಗ್, ರೋಮಾಂಚಕಾರಿ ಸಿನಿಮಾ ದೃಶ್ಯಗಳನ್ನು ಹೊಂದಿರುವ ಸಿನೆಮಾ ಲೌಂಜ್, 360 ಡಿಗ್ರಿ ದೃಶ್ಯಾವಳಿ ಹೊಂದಿರುವ ವೀಕ್ಷಣಾ ಡೆಕ್. ಹಾಂ! ಇಲ್ಲಿ ಅನೇಕ ಹಾಲಿವುಡ್ ಚಿತ್ರಗಳಿಗೆ ಚಿತ್ರೀಕರಣವಾಗಿದೆ.

ವರ್ಷದ 365 ದಿನವೂ ಹಿಮವಿರುವ ಜûರ್ಮಾಟ್‍ನ ಇನ್ನಿತರ ಆಕರ್ಷಣೆಗಳೆಂದರೆ ಸ್ಕೀಯಿಂಗ್, ಸ್ಕೀ ಸ¥sóÁರಿ, ಸ್ಕೀ ಟೂರ್, ಸ್ಕೀ ರೆಂಟಲ್, ಸ್ಕೀ ಟೀಚರ್/ಸ್ಕೂಲ್, ಸ್ನೋ ಪಾರ್ಕ್, ಸ್ಕೇಟಿಂಗ್, ಇತ್ಯಾದಿ. ಇಲ್ಲಿ ಇಂತಹ ಆಟಗಳಿಗೆ ಸಿದ್ದಪಡಿಸಿರುವ ಉಪಕರಣಗಳು, ಪೂರಕಗಳು, ಸೌಕರ್ಯಗಳನ್ನು ಗಮನಿಸಿ ದಂಗಾದೆವು.

ಲಿಫ್ಟ್ಸ್/ಪೀಸ್ಟ್

ಸುತ್ತಮುತ್ತಲಿನ ಸುಮಾರು 200 ಕಿ.ಮೀ. ಪ್ರದೇಶದಲ್ಲಿ ಎಲ್ಲರಿಗೂ ಹೋಗಲು ಅನುಕೂಲವಾಗುವಂತೆ ಸುಮರು 200 ಲಿಫ್ಟ್ಸ್‍ಗಳಿವೆ ಮತ್ತು 360 ಕಿ.ಮೀ.ಗಳಷ್ಟು ಪೀಸ್ಟ್‍ಗಳಿವೆ [ಸ್ಕೀಯಿಂಗಿಗಾಗಿ ಸಿದ್ದ ಪಡಿಸಿದ ದೃಢವಾದ ಹಿಮದ ಪಥಕ್ಕೆ ಪೀಸ್ಟ್ ಎನ್ನುತ್ತಾರೆ]. ಇಷ್ಟೆಲ್ಲಾ ಕೌಶಲ್ಯ ಕ್ರೀಡೆಗಳಿರುವಾಗ ಇಲ್ಲಿ ಉಪಾಹಾರಗೃಹಗಳಿಗೇನೂ ಕಮ್ಮಿಯಿಲ್ಲ. ನೀವು ಸ್ಕೀ ಮಾಡುತ್ತಾ ಬಳಲಿದರೆ, ಎಲ್ಲೆಡೆ ಆರಾಮದಾಯಕ ರೆಸ್ಟೋರೆಂಟುಗಳಿವೆ; ಸಸ್ಯಾಹಾರಿ, ಏಷಿಯನ್ ಶೈಲಿ ಕೂಡ ಉಪಲಬ್ಧ. [ಜûರ್ಮಾಟ್‍ನಲ್ಲಿ ಭಾರತೀಯ ಶೈಲಿಯ ಅಡುಗೆ ಉಪಲಬ್ಧವಿರುವ ಒಂದೆರಡು ರೆಸ್ಟೋರೆಂಟುಗಳಿವೆ]

ಜûರ್ಮಾಟ್ ಸತತವಾಗಿ ಪ್ರಪಂಚದ ಮತ್ತು ಸ್ವಿಟ್ಜಲ್ರ್ಯಾಂಡ್‍ನ ಅತ್ಯಂತ ಶ್ರೇಷ್ಟ ಸ್ಕೀ ರೆಸಾರ್ಟ್ ಎಂದು ಪ್ರಶಸ್ತಿಯನ್ನೂ ಪಡೆಯುತ್ತಿದೆ. ಇಲ್ಲಿ ಸಿಗುವ ವಾತಾವರಣ, ಅನುಭವಕ್ಕೆ ಸಾಟಿಯಿಲ್ಲ. ಆದ್ದರಿಂದಲೇ, ಸ್ವಿಟ್ಜಲ್ರ್ಯಾಂಡ್‍ನ ಬೇರೆಲ್ಲ ಆಲ್ಫ್ಸ್ ಪರ್ವತ ಶ್ರೇಣಿಗಳಿಗಿಂತಲೂ ಜûರ್ಮಾಟಿಗೆ ಬರುವ ಪ್ರವಾಸಿಗರೇ ಹೆಚ್ಚು. ಆದರೂ ಜûರ್ಮಾಟ್ ಒಂದು ಅದ್ಧೂರಿ ರೆಸಾರ್ಟ್ ಪಟ್ಟಣ ಮತ್ತು ಎಲ್ಲರಿಗೂ ದಕ್ಕುವುದಿಲ್ಲವೆಂಬ ಅಭಿಪ್ರಾಯವಿದ್ದರೆ ಅದು ನಿಜವಲ್ಲ. ಜೊತೆಗೆ, ಸ್ಕೀಯಿಂಗ್ ಅಲ್ಲದೆ ಎಲ್ಲ ಪ್ರವಾಸಿಗರಿಗೂ ಅನ್ವಯವಾಗುವಂತಹ ಪ್ರೇಕ್ಷಣೀಯ ಸ್ಥಳಗಳು ಮತ್ತು ಚಟುವಟಿಕೆಗಳಿವೆ. ಉಳಿದುಕೊಳ್ಳಲು ಒಳ್ಳೆಯ ಹೋಟೆಲ್‍ಗಳು ದಿನವೊಂದಕ್ಕೆ ಸುಮಾರು 6000/-ದಿಂದ ಲಭ್ಯ. ಇಲ್ಲಿರುವ ಅನೇಕ ಕ್ಯಾಸಿನೋದಲ್ಲಿ ಆಡುವ ಸಲುವಾಗಿ ಕೆಲವರು ಬಂದರೆ, ಹೆಚ್ಚಿನ ಪ್ರವಾಸಿಗರು ಬರುವುದು ಈ ಸುಂದರ ಮತ್ತು ಅಪೂರ್ವವಾದ ಪ್ರಕೃತಿ ದರ್ಶನಕ್ಕಾಗಿ. ವರ್ಷಕ್ಕೆ ಸುಮಾರು 3000ಕ್ಕೂ ಹೆಚ್ಚು ಜನ ನಿರ್ಧಿಷ್ಟವಾಗಿ ಮ್ಯಾಟರ್‍ಹಾರ್ನ್ ಟ್ರೆಕ್ಕಿಂಗ್‍ಗಾಗಿಯೇ ಬರುತ್ತಾರೆ.

ಗ್ಲೇಸಿಯರ್ ಎಕ್ಸ್‍ಪ್ರೆಸ್ಸ್

ಸ್ವಿಟ್ಜಲ್ರ್ಯಾಂಡ್‍ನಲ್ಲಿ ರೈಲ್ವೆ ಸಂಪರ್ಕ ಅಭಿವೃದ್ಧಿಯಾಗಿದೆ; ವಿಶೇಷವಾಗಿ, ಗುಣಮಟ್ಟ ಮತ್ತು ಸಮಯಪಾಲನೆಗೆ ಹೆಸರುವಾಸಿ. [ಇತ್ತೀಚೆಗಷ್ಟೇ, ಇಲ್ಲಿ ವಿಶ್ವದ ಅತಿ ಹೆಚ್ಚು ಉದ್ದವಿರುವ 57 ಕಿ.ಮೀ. ರೈಲ್ವೆ ಸುರಂಗ ಮಾರ್ಗದ ಉದ್ಘಾಟನೆಯಾಗಿದೆ].
ಜಗತ್ತಿನ 10 ಅತ್ಯಂತ ಶ್ರೇಷ್ಟ ರೈಲು ಪ್ರಯಾಣಗಳಲ್ಲಿ ಒಂದಾದ ಗ್ಲೇಸಿಯರ್ ಎಕ್ಸ್‍ಪ್ರೆಸ್ಸ್‍ನಲ್ಲಿ ಜûರ್ಮಾಟಿನಿಂದ ದೇಶದ ಉತ್ತರ ಭಾಗದಲ್ಲಿರುವ ಸೇಂಟ್ ಮೋರಿಟ್ಜ್‍ಗೆ ಹೋಗಲು ಮೊದಲೇ ಬುಕ್ ಮಾಡಿದ್ದೆವು. ಸ್ವಿಟ್ಜಲ್ರ್ಯಾಂಡ್‍ನ ಪರ್ವತ ಶ್ರೇಣಿಯ ಅಗಾಧ ಹಿಮ ಮತ್ತು ಹಚ್ಚ ಹಸಿರಿನ ನಡುವೆ, ಯೋರೋಪಿನ ಹೆಸರಾಂತ ಪೌರಾಣಿಕ ರೈಲಿನಲ್ಲಿ ಪ್ರಯಾಣಿಸುವುದು ನಮ್ಮದೊಂದು ಸೌಭಾಗ್ಯವೆನಿಸಿತ್ತು! ಜೊತೆಗೆ ರೈಲು ಪ್ರಯಾಣದ ಸಂಭ್ರಮವೇ ಬೇರೆ.

ಈ ರೈಲಿನ ರಚನೆ ಮತ್ತು ವಿನ್ಯಾಸದ ಬಗ್ಗೆ ಹೇಳಲೇಬೇಕು. ಪ್ರವಾಸೋಧ್ಯಮವನ್ನೇ ಉದ್ದೇಶವಾಗಿಟ್ಟುಕೊಂಡು ರಚಿಸಿರುವ ಈ ರೈಲಿನ ಬೋಗಿಗಳಲ್ಲಿ ವಿಸ್ತಾರವಾದ ಮತ್ತು ಮೇಲ್ಛಾವಣಿಯಷ್ಟು ಎತ್ತರವಾದ ಗಾಜಿನ ಕಿಟಕಿಗಳಿದ್ದು, ಪ್ರಯಾಣಿಕರಿಗೆ ಸರ್ವತೋಮುಖ ದೃಷ್ಟಿಯ ಸೌಲಭ್ಯವಿದೆ. ಸಾಮಾನ್ಯವಾಗಿ ಮೊದಲನೇ ಮತ್ತು ಎರಡನೇ ದರ್ಜೆಯ ತಲಾ ಎರಡು ಬೋಗಿಗಳಿದ್ದು, ಅವೆರಡರ ಮಧ್ಯೆ ಪ್ಯಾಂಟ್ರಿ ಕಾರ್ ವ್ಯವಸ್ಥೆಯಿದೆ. ಇಲ್ಲಿಂದ ಸೇಂಟ್ ಮೋರಿಟ್ಜ್‍ಗೆ 290 ಕಿ.ಮೀ. ಆದರೆ, ಪ್ರಯಾಣದ ಅವಧಿ 8 ಗಂಟೆ! ಇದಕ್ಕೆ ಸೂಕ್ತ ಕಾರಣಗಳಿವೆ. ಈ ಮಾರ್ಗದಲ್ಲಿ ಅತ್ಯಂತ ಕಿರಿದಾದ ಕಣಿವೆಗಳು, ಬಿಗಿಯಾದ ಅಂಕುಡೊಂಕಾದ ಹಾದಿಗಳು, 91 ಸುರಂಗಗಳು ಮತ್ತು 291 ಸೇತುವೆಗಳಿವೆ. ಸರಾಸರಿ 36 ಕಿ.ಮೀ. ವೇಗದ ಈ ರೈಲಿಗೆ ಜಗತ್ತಿನ ಅತ್ಯಂತ ನಿಧಾನಗತಿಯ ರೈಲೆಂಬ ಪ್ರಖ್ಯಾತಿಯೂ ಇದೆ!

ಈ ರೈಲಿನಲ್ಲಿಯೇ ಕುಳಿತು ಹಿಮಾವೃತ ಪರ್ವತಗಳನ್ನೂ, ಹಿಮನದಿಗಳನ್ನೂ ಹತ್ತಿರದಿಂದಲೇ ನೋಡಬಹುದೆಂಬ ಕಲ್ಪನೆಯಿರದಿರಲಿ; ಇವುಗಳನ್ನು ದೂರದಿಂದ ನೋಡಬಹುದಷ್ಟೇ! ಆದರೆ, ರೈಲಿನಿಂದ ಕಾಣುವ ದೃಶ್ಯಾವಳಿಯ ಅದ್ಭುತಕ್ಕೇನೂ ಕಡಿಮೆಯಿಲ್ಲ. ಆದ್ದರಿಂದಲೇ, ಈ ಮಾರ್ಗವನ್ನು ವೈಶಿಷ್ಟ್ಯಪೂರ್ಣ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ.

1. ಜûರ್ಮಾಟ್-ಬ್ರಿಗ್

ಜûರ್ಮಾಟ್‍ನಿಂದ ಸ್ವಲ್ಪ ದೂರ ಕ್ರಮಿಸುತ್ತಿದ್ದಂತೆ ಹಿಮಪಾತ ಕಡಿಮೆಯಾಗಿ, ಮೋಡಗಳ ಮೇಲೆ ಮುಂಜಾನೆಯ ಸೂರ್ಯಕಿರಣಗಳ ಸ್ಪರ್ಶವಾಗುತ್ತಿದ್ದಂತೆ, ಶ್ವೇತಧಾರೆಯನ್ನುಟ್ಟ ಆ ಹಸಿರು ಪ್ರಕೃತಿ ದೇವತೆಯ ಸೊಬಗಿನ ಸಿರಿ ಹೊರಹೊಮ್ಮಿ, ಕಣ್ಣಿಗೆ ಹಬ್ಬ ಮತ್ತು ಮನೋಲ್ಲಾಸವೆನಿಸಿತು.

ಸುಮಾರು 5300 ಅಡಿ ಎತ್ತರದಲ್ಲಿ ಶುರುವಾಗುವ ಪ್ರಯಾಣ 2200 ಅಡಿ ಎತ್ತರದ ವಿಸ್ಪ್ ಪಟ್ಟಣವನ್ನು ತಲುಪುವುದರಲ್ಲಿ ಹಿಮಾವೃತ ಬೃಹತ್ ಆಲ್ಫ್ಸ್ ಪರ್ವತಗಳನ್ನೂ, ಬಂಡೆಗಳ ಸ್ವರೂಪಗಳನ್ನೂ [ ಖoಛಿಞ ಜಿoಡಿmಚಿಣioಟಿs] ನೋಡಬಹುದು. ಇಂತಹ ಕೆಲವು ಆಕೃತಿಗಳ ಎತ್ತರ ಸುಮಾರು 13,000 ಅಡಿಗಳಿಗೂ ಹೆಚ್ಚು. ಇಲ್ಲಿಂದ ಸಮತಟ್ಟಾದ ಸ್ವಲ್ಪ ದೂರವನ್ನು ಕ್ರಮಿಸಿದರೆ ಸಿಗುವುದೇ ಬ್ರಿಗ್ ಪಟ್ಟಣ. ರೈಲಿನ ವಿನೂತನ ವಿನ್ಯಾಸದಿಂದ, ಎಡ ಅಥವಾ ಬಲದಲ್ಲಿ ಕುಳಿತರೂ ದೃಶ್ಯಾವಳಿಯ ವೀಕ್ಷಣೆಗೆ ಅಡಚಣೆಯಾಗುವುದಿಲ್ಲ!

ವಿಸ್ಪ್

ರೋನ್ ಮತ್ತು ವಿಸ್ಪ ನದಿಗಳ ಸಂಗಮ ಸ್ಥಳದಲ್ಲಿರುವ ವಿಸ್ಪ್, ಸುಮಾರು 8000 ಜನಸಂಖ್ಯೆಯ ಒಂದು ಪುಟ್ಟ ಪಟ್ಟಣ. ಇಲ್ಲಿನ ರೈಲ್ವೆ ನಿಲ್ದಾಣದಿಂದ ಜಿನೀವ ಮತ್ತು ಜûೂರಿಕ್‍ಗೆ ನೇರ ರೈಲು ಸಂಪರ್ಕವಿದೆ. ಪ್ರಯಾಣ ಸುಮಾರು ಎರಡು ಗಂಟೆ.

ಬ್ರಿಗ್

ಸುಮಾರು 13,000 ಜನಸಂಖ್ಯೆಯ ಪಟ್ಟಣ ಮತ್ತು ಈ ಪ್ರದೇಶದ ಮುಖ್ಯ ರೈಲ್ವೆ ಜಂಕ್ಷನ್. ಹಾಗಾಗಿ, ಇಲ್ಲಿಂದ ಜಿನೀವ, ಜûೂರಿಕ್, ಲೂಸೈನ್, ಬರ್ನ್, ಇಟಲಿಯ ಮಿಲನ್ ಇತ್ಯಾದಿ ನಗರಗಳಿಗೆ ನೇರ ರೈಲು ಸಂಪರ್ಕವಿದೆ.

2. ಬ್ರಿಗ್-ಆಂಡರ್‍ಮಾಟ್

ಬ್ರಿಗ್ನಿಂದ ನಿರ್ಗಮಿಸುತ್ತಲೇ ಬರುವುದು ಇಲ್ಲಿನ ಪ್ರಮುಖ ನದಿ ರೋನ್. ಇದಾದ ನಂತರ ರೋನ್ ಮೇಲ್ದಂಡೆಯ ಪ್ರದೇಶ ಗಿ ಆಕಾರದಲ್ಲಿದ್ದು ಹಾದಿ ಅತ್ಯಂತ ಕಿರಿದಾಗಿದೆ. ಸುಮಾರು 800 ಕಿ.ಮೀ. ಹರಿಯುವ ರೋನ್ ನದಿಯ ಕಣಿವೆಯ ಅಂಚಿನಲ್ಲಿರುವ 4500 ಅಡಿ ಎತ್ತರದ ಒಬರ್ವಾಲ್ಡ್ ತಲಪುವಲ್ಲಿ ಅನೇಕ ಬೆಟ್ಟಗಳ ಸುರಂಗಮಾರ್ಗಗಳನ್ನು, ಸೇತುವೆಗಳನ್ನೂ ದಾಟುತ್ತೇವೆ. ರೋನ್ ನದಿ ಲೇಕ್ ಜಿನೀವ ಮುಖಾಂತರ ಫ್ರಾಂನ್ಸ್ ದೇಶದಲ್ಲಿ ಹರಿದು ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತದೆ. ಸುಮಾರು 6000ಕ್ಕೂ ಹೆಚ್ಚು ದ್ರಾಕ್ಷಿತೋಟಗಳಿರುವ ರೋನ್ ಕಣಿವೆಯಲ್ಲಿ ತಯಾರಾಗುವ ವೈನ್ ಉತ್ಕೃಷ್ಟತೆಗೆ ಹೆಸರುವಾಸಿ.

ಈ ಪ್ರದೇಶದಲ್ಲಿ ಸುರಂಗಗಳನ್ನು ಕೊರೆಯುವಾಗ ಅನೇಕ ಎಂಜಿನಿಯರಿಂಗ್ ಸವಾಲುಗಳೂ, ಅಡ್ಡಿ ಆತಂಕಗಳೂ ಎದುರಾಗಿದ್ದವು. ಈ ದೃಷ್ಟಿಕೋನದಿಂದಲೂ ಮತ್ತು ಪ್ರಾಕೃತಿಕ ಸೌಂದರ್ಯದಿಂದಲೂ ಸಕಲೇಶಪುರ-ಮಂಗಳೂರು ರೈಲುಮಾರ್ಗದ ನೆನಪಾಯಿತು. ಈ ಭಾಗದ ಪ್ರಯಾಣದಲ್ಲಿ ರೈಲಿನ ಬಲಬಾಗದಿಂದ ವೀಕ್ಷಣೆ ಹೆಚ್ಚು ಸುಂದರವೆನಿಸಿತ್ತದೆ.

ಅಂಡರ್‍ಮಾಟ್

ಇಲ್ಲಿನ ಜನಸಂಖ್ಯೆ ಕೇವಲ 1300; ಈ ಪ್ರದೇಶದಲ್ಲಿ ಸ್ಕೀಯಿಂಗ್ ಅಭಿವೃದ್ಧಿಯಾಗಿದೆ; ಹಾಗಾಗಿ ಸಾಕಷ್ಟು ಹೋಟೆಲ್ಸ್, ರೆಸಾಟ್ರ್ಸ್‍ಗಳಿದ್ದು ಸ್ಥಳೀಯರಿಗೆ ವೀಕೆಂಡ್ ತಾಣವಾಗಿದೆ.

3. ಅಂಡರ್‍ಮಾಟ್-ಚುರ್

ಈ ಭಾಗದಲ್ಲಿ ಮಾರ್ಗದ ಅತ್ಯಂತ ಎತ್ತರವನ್ನೂ [6700 ಅಡಿ] ಹಾಗೂ ಅತ್ಯಂತ ತಗ್ಗು ಪ್ರದೇಶವನ್ನೂ [1930 ಅಡಿ] ರೈಲು ಕ್ರಮಿಸುತ್ತದೆ. ಹಾಗಾಗಿ, ಈ ಮಾರ್ಗ ಸುಂದರವೂ ರೋಮಾಂಚನಕಾರಿಯೂ ಆಗಿದೆ. ಈ ಪ್ರದೇಶದಲ್ಲಿ ಹರಿಯುವ ರೈನ್, ಯೂರೋಪಿನ ಪ್ರಮುಖ ನದಿಯಾಗಿದ್ದು ಪರ್ವತಗಳಿಂದ ಸ್ವಾಭಾವಿಕವಾಗಿ ಹರಿಯುವ ಅನೇಕ ಜಲಪಾತಗಳನ್ನು ವೀಕ್ಷಿಸಬಹುದು. ಹಾಗೂ, ಈ ಪ್ರದೇಶವನ್ನು ‘ಸ್ವಿಸ್ ಗ್ರಾಂಡ್ ಕ್ಯಾನನ್’ ಎಂದೂ ಕರೆಯುತ್ತಾರೆ. ಇಲ್ಲಿ ಹೆಚ್ಚು ಹಿಮಪಾತವಾಗುವುದರಿಂದ ನವೆಂಬರ್-ಏಪ್ರಿಲ್ ಕಾಲಾವಧಿಯಲ್ಲಿ ರಸ್ತೆ ಸಂಪರ್ಕವನ್ನು ಬಂದ್ ಮಾಡಲಾಗುತ್ತದೆ. ಈ ಭಾಗದಲ್ಲಿ ರೈಲಿನ ಎಡಭಾಗದ ವೀಕ್ಷಣೆ ಉತ್ತಮ.

ಚುರ್

ಈ ಪ್ರದೇಶದ ಅತಿ ದೊಡ್ದ ಪಟ್ಟಣ; ಜನಸಂಖ್ಯೆ 35,000. 16ನೇ ಶತಮಾನದ ಪುರಾತನ ಹಳೇ ಚುರ್ ಪ್ರದೇಶವನ್ನು ನೋಡಬಹುದು. ಸ್ಕೀಯಿಂಗ್, ಚಳಿಗಾಲದ ಅನೇಕ ಆಟಗಳು, ಕೇಬಲ್ ಕಾರ್ ಇತ್ಯಾದಿಗಳಿಂದ ಪ್ರವಾಸೋಧ್ಯಮ ಸಾಕಷ್ಟು ಅಭಿವೃದ್ಧಿಯಾಗಿದೆ. ಇಲ್ಲಿಂದ ಜಿನೀವ, ಜûೂರಿಕ್, ಮಿಲನ್ ಇತ್ಯಾದಿ ಪ್ರಮುಖ ನಗರಗಳಿಗೆ ನೇರ ರೈಲು ಸಂಪರ್ಕವಿದೆ.

4. ಚುರ್-ಸೇಂಟ್ ಮೋರಿಟ್ಜ್

ರೈಲು ದೊಮೆಲ್ಸ್ಚ್ ಕಣಿವೆಯತ್ತ ಸಾಗುತ್ತದೆ. ಈ ಪ್ರದೇಶದಲ್ಲಿ ಅನೇಕ ಪುರಾತನ ಕೋಟೆಗಳೂ ಅವಶೇಷಗಳೂ ಇವೆ. ಮುಂದೆ, ರೈಲು ವಿಶ್ವವಿಖ್ಯಾತ ಆರು ಕಮಾನುಗಳ ಲ್ಯಾಂಡ್‍ವಾಸರ್ ಸೇತುವೆಯನ್ನು ಸಾಗಿ, ಅನೇಕ ಸುರುಳಿಯಾಕಾರದ ಲೂಪ್‍ಗಳ ಮುಖಾಂತರ ಅಲ್ಬುಲ ಸುರಂಗವನ್ನು [1789 ಅಡಿ ಉದ್ದ] ತಲುಪುತ್ತದೆ. ಈ ಪ್ರದೇಶವೂ ಸಹ ವೀಕ್ಷಣೆಗೆ ಮತ್ತು ಟ್ರೆಕ್ಕಿಂಗಿಗೆ ಹೆಸರುವಾಸಿ. ರೈಲಿನ ಎಡಭಾಗ ವೀಕ್ಷಣೆಗೆ ಸಹಕಾರಿ. ಇಲ್ಲಿಂದ ಸುಮಾರು 30 ನಿಮಿಷಗಳಲ್ಲಿ ರೈಲು ಸೇಂಟ್ ಮೋರಿಟ್ಜ್‍ಗೆ [6012 ಅಡಿ] ತಲುಪುತ್ತದೆ.

ವೀಕ್ಷಣೆಯ ಜೊತೆಗೆ ಅರ್ಥೈಸಿಕೊಳ್ಳಲು ಉಪಯುಕ್ತ ಮಾಹಿತಿ ಹೆಡ್‍ಫೋನ್ ಮೂಲಕ ಲಭ್ಯ. ಈ ರೈಲಿನಲ್ಲಿ ಪ್ಯಾಂಟ್ರಿ ಕಾರ್ ಜೊತೆಗೆ ಆಗಿಂದಾಗ್ಗೆ ಟ್ರಾಲಿಯಲ್ಲಿ ಕಾಫಿ, ಪಾನೀಯಗಳು, ಲಘು ತಿನಿಸುಗಳನ್ನು ಸರಬರಾಜು ಮಾಡುತ್ತಾರೆ. ಈ 8 ಗಂಟೆಗಳ ಪ್ರಯಾಣ ಅತ್ಯಂತ ರೋಮಾಂಚನಕಾರಿ ಮತ್ತು ನಮ್ಮ ಜೀವನದ ಮರೆಯಲಾಗದ ಕ್ಷಣಗಳನ್ನೂ ಅನುಭವಗಳನ್ನೂ ಕಟ್ಟಿಕೊಟ್ಟಿದೆ. ಇಲ್ಲಿಗೆ ಬರುವ ಪ್ರವಾಸಿಗರು ಕನಿಷ್ಟ ತಲಾ ಒಂದು ದಿನ ಜûರ್ಮಾಟಿನಲ್ಲೂ, ಸೇಂಟ್ ಮೋರಿಟ್ಜ್‍ನಲ್ಲೂ ಕಳೆಯಬಹುದು. ಅವಿಸ್ಮರಣೀಯವಾದ ಈ ರೈಲು ಪ್ರಯಾಣಕ್ಕೆ ಒಂದು ದಿನವನ್ನು ಮೀಸಲಾಗಿಸಿ; ಈ ಪ್ರಯಾಣಕ್ಕೆ ಎರಡನೇ ದರ್ಜೆಯಲ್ಲಿ ಬುಕಿಂಗ್ ಫೀ ಸೇರಿ ಸುಮಾರು ರೂ 7500/- ಆಗುತ್ತದೆ; ಆದರೆ, ಮೂರು ದಿನಗಳ ಅನಿಯಮಿತ ಸ್ವಿಸ್ ಟ್ರಾವೆಲ್ ಪಾಸಿಗೆ ಕೇವಲ ರೂ 15,000 ಆಗಬಹುದು.

ದರ್ಜೆಗಳಲ್ಲಿನ ಸೌಕರ್ಯಗಳಲ್ಲಿ ಹೆಚ್ಚಿನ ಅಂತರವಿಲ್ಲವಾದ್ದರಿಂದ ಎರಡನೇ ದರ್ಜೆ ಸೂಕ್ತ. ಸಮಯದ ಅಭಾವವಿದ್ದಲ್ಲಿ, ಈ ಮಾರ್ಗದ ಕೆಲವು ಭಾಗಗಳಲ್ಲೂ [ ವಿಸ್ಪ್, ಬ್ರಿಗ್, ಅಂಡರ್‍ಮಾಟ್, ಚುರ್] ಪ್ರಯಾಣಿಸಿ ಇದರ ಅಮೋಘ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಮಾರ್ಗದಲ್ಲಿ ಇನ್ನಿತರ ಫಾಸ್ಟ್ ರೈಲುಗಳೂ ಸಹ ಇದೆ; ಆದರೆ, ದೃಶ್ಯಾವಳಿಯ ವೀಕ್ಷಣೆ ಸಾಮಾನ್ಯವಾಗಿರುತ್ತದೆ.

ಸೇಂಟ್ ಮೋರಿಟ್ಜ್

ನೂರಾರು ವರ್ಷಗಳಿಂದ ರಾಜಮನೆತನದವರನ್ನೂ, ಸೆಲೆಬ್ರಿಟಿಗಳನ್ನೂ ಆಕರ್ಷಿಸುತ್ತಿರುವ ಸೇಂಟ್ ಮೋರಿಟ್ಜ್ ಈಗ ಸಾಮಾನ್ಯ ಪ್ರವಾಸಿಗರಿಗೂ ಎಟುಕುವ ಹೆಸರಾಂತ ಆಲ್ಪೈನ್ ರೆಸಾರ್ಟ್ ಪಟ್ಟಣ.

ನಾವು ಸೇಂಟ್ ಮೋರಿಟ್ಜ್ ತಲುಪಿದಾಗ ಮಧ್ಯಾಹ್ನವಾಗಿತ್ತು. ನಾವು ಬುಕ್ ಮಾಡಿದ ಪಟ್ಟಣದ ಕೇಂದ್ರ ಭಾಗದಲ್ಲಿದ್ದ ಹಾಸೆರ್ ಹೋಟೆಲಿಗೆ ಧಾವಿಸಿದೆವು; ವಿಶೇಷವೆಂದರೆ ಇಲ್ಲಿನ ರೆಸ್ಟೋರೆಂಟಿನಲ್ಲಿ ಭಾರತೀಯ ಭಕ್ಷ್ಯಗಳು ಸಿಗುತ್ತವೆ.

ವಿರಾಮದ ನಂತರ ಸ್ವಲ್ಪ ಹೊತ್ತು ಪಟ್ಟಣದಲ್ಲಿ ಅಡ್ಡಾಡಿದೆವು. ಜûರ್ಮಾಟಿಗೆ ಹೋಲಿಸಿದರೆ ಸೇಂಟ್ ಮೋರಿಟ್ಜ್ ಸ್ವಲ್ಪ ದೊಡ್ಡದೇ; ಆದರೆ ಚಳಿ ಹೆಚ್ಚೆನಿಸಿತು. ಎರಡೂ ಸ್ಥಳಗಳು ಸ್ಕೀಯಿಂಗ್‍ಗೆ ಪ್ರಶಸ್ತ.

ಸ್ಕೀಯಿಂಗ್/ ಸ್ಕೀ ಟೂರಿಂಗ್

ಜûರ್ಮಾಟ್‍ನಂತೆಯೇ ಇಲ್ಲೂ ಸಹ ಸ್ಕೀಯಿಂಗಿಗೆ ಬೇಕಾಗುವ ಎಲ್ಲ ಸೌಲಭ್ಯಗಳಿದ್ದು ಸುಮಾರು 350 ಕಿ.ಮೀ.ಗಳಷ್ಟು ಪೀಸ್ಟ್‍ಗಳಿವೆ. ಸ್ಕೀಯಿಂಗ್ ಅನುಭವಿಗಳಿಗೂ ಸಾಮಾನ್ಯ ಪ್ರವಾಸಿಗರಿಗೂ ಅನುಭವ ನೀಡುವ ರೀತಿಯಲ್ಲಿ ಸ್ಕೀಯಿಂಗ್ ಹಾದಿಗಳನ್ನು ಸಿದ್ಧಪಡಿಸಲಾಗಿದೆ. ಕ್ಷಿಪ್ರವಾಗಿ ಈ ಆಟದ ಬಗ್ಗೆ ತಿಳಿಯಲು ಸ್ಕೀ ಟೂರಿಂಗ್ ವ್ಯವಸ್ಥೆಯಿದೆ.

ಲೇಕ್ ಸೇಂಟ್ ಮೋರಿಟ್ಜ್

ಇಲ್ಲಿರುವ ಸರೋವರವೇ ಪಟ್ಟಣದ ಕೇಂದ್ರ ಬಿಂದು ಮತ್ತು ಆಟದ ಮೈದಾನ. ಆಶ್ಚರ್ಯವಾಯಿತೇ?

ಈ ಸರೋವರ ವರ್ಷದಲ್ಲಿ ಸುಮಾರು 6 ತಿಂಗಳು [ಡಿಸೆಂಬರ್-ಮೇ] ಸತತವಾದ ಹಿಮಪಾತದಿಂದ ಘನೀಕರಿಣವಾಗಿ ಹೆಪ್ಪುಕಟ್ಟುತ್ತದೆ. ಹಾಗಾಗಿ, ಸರೋವರ ಆಟದ ಮೈದಾನವಾಗಿ ಪರಿವರ್ತನೆ! ಸ್ನೋ ಪೋಲೊ ಆಟಕ್ಕೆ ಹೆಸರುವಾಸಿಯಾದ ತಾಣ. 1985ರಿಂದ ಪ್ರತಿವರ್ಷ ನಡೆಯುವ ವಲ್ರ್ಡ್ ಕಪ್ ಪೋಲೊ ಟೂರ್ನಮೆಂಟ್ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಟಿತ. ಕುದುರೆಗಳ ರೇಸ್‍ಗೂ ಜನಪ್ರಿಯ. ವಿಶೇಷವೆಂದರೆ, 1988ರಿಂದ ಇಲ್ಲಿ ಕ್ರಿಕೆಟ್ ಆಡಲಾಗುತ್ತಿದೆ; ಮತ್ತು ಇತ್ತೀಚಿನ ವರ್ಷಗಳಲ್ಲಿ 20 ಓವರ್‍ಗಳ [ಖಿತಿeಟಿಣಥಿ20] ‘ಸೇಂಟ್ ಮೋರಿಟ್ಜ್ ಐಸ್ ಕ್ರಿಕೆಟ್’ ಆಡಲಾಗುತ್ತಿದೆ. ಕಳೆದ ವರ್ಷ ಇಲ್ಲಿ ಆಡುವ ಮೊದಲು ವೀರೇಂದ್ರ ಸೆಹ್ವಾಗ್, “ಐಸ್ ಮೇಲೆ ಕ್ರಿಕೆಟ್ ಆಡಲು ಸಾಧ್ಯವಿದೆಯೆಂದು ಅನಿಸಿರಲೇ ಇಲ್ಲ; ಆದರೆ, ಅದು ನಡೆಯಿತ್ತಿದೆ. ನಾನು ಅದನ್ನು ಅನುಭವಿಸಲು ಕಾತುರದಿಂದ್ದೇನೆ” ಎಂದು ಹೇಳಿದ್ದರು.

ಬರ್ನಿಯ ಎಕ್ಸ್‍ಪ್ರೆಸ್

ಇಲ್ಲಿಂದ ಇಟಲಿಯ ಟಿರಾನೊಗೆ ಹೋಗುವ ಈ ರೈಲುಮಾರ್ಗವೂ ಆಲ್ಫ್ಸ್ ಪರ್ವತಗಳು, ಕಿರಿದಾದ ಕಣಿವೆಗಳು, ಸುರಂಗಗಳಿಂದ ಕೂಡಿದ್ದು ಹೆಸರುವಾಸಿಯಾಗಿದೆ. ಬೋಗಿಗಳ ರಚನೆ ಮತ್ತು ವಿನ್ಯಾಸ ವೀಕ್ಷಣೆಗೆ ಸೂಕ್ತ. ಹಾಗಾಗಿ, ಇಟಲಿಯ ಕಡೆಯಿಂದ ಬರುವ/ಹೋಗುವ ಪ್ರವಾಸಿಗರಿಗೆ ಇದು ಜನಪ್ರಿಯ.

ಕೇಬಲ್ ಕಾರ್ಸ್

ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಇಲ್ಲೂ ಸಹ ಕೇಬಲ್ ಕಾರ್ ಮತ್ತು ಲಿ¥sóï್ಟಗಳ ವ್ಯವಸ್ಥೆಯಿದೆ.

ಒಲಂಪಿಕ್ಸ್/ಕ್ಯಾಸಿನೊ/ಮ್ಯೂಸಿಯಮ್ಸ್

ಇಲ್ಲಿ ಕ್ಯಾಸಿನೋಗಳಿದ್ದು, ಇದು ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ತಪ್ಪಾಗಲಾರದು. ಹಲವಾರು ಮ್ಯೂಸಿಯಮ್‍ಗಳೂ ಇಲ್ಲಿವೆ. ಚಳಿಗಾಲದ ಒಲಂಪಿಕ್ಸ್ ಸ್ಪರ್ದೆಯನ್ನು ಇಲ್ಲಿ ಎರಡು ಬಾರಿ ನಡೆಸಲಾಗಿದೆ.

ಸೇಂಟ್ ಮೋರಿಟ್ಜ್ ವಿಶೇಷತೆಗಳ ತವರೂರು. ಇಲ್ಲಿ ಪ್ರತಿ ವರ್ಷ ಮಾಸ್ಟರ್ ಶೆ¥sóïಗಳ ಉತ್ಸವವೂ ನಡೆಯುತ್ತದೆ. ಹಾಗಾಗಿ, ಜಗತ್ತಿನ ನಾನಾ ಕಡೆಗಳಿಂದ ಬರುವ ಶೆ¥sóïಗಳೂ, ಉದ್ಯಮ ತಜ್ಞರೂ, ಭೋಜನ ಪ್ರಿಯರೂ ಇಲ್ಲಿ ಸೇರುತ್ತಾರೆ. ಹಾಗೆಯೇ, ವಿಶ್ವದ ಪರಿಸರ ಮತ್ತು ಆರೋಗ್ಯವೂ ಸೇರಿದಂತೆ ಇನ್ನಿತರ ಜ್ವಲಂತ ಸಮಸ್ಯೆಗಳನ್ನೂ ಚರ್ಚಿಸಲು ವಿಶ್ವ ಆರ್ಥಿಕ ವೇದಿಕೆಯ ಪ್ರತಿಷ್ಟಿತ ವಾರ್ಷಿಕ ಸಮ್ಮೇಳನ ನಡೆಯುವ ದಾವೋಸ್ ಪಟ್ಟಣ ಹತ್ತಿರದಲ್ಲೇ ಇದೆ. ಆಲ್ಫ್ಸ್ ಪರ್ವತ ಶ್ರೇಣಿಯ ದೃಶ್ಯಾವಳಿ, ಅತ್ಯುತ್ತಮ ಹೋಟೆಲ್ಸ್ ಮತ್ತು ರೆಸಾಟ್ರ್ಸ್ ಸೇರಿದಂತೆ ಒಂದು ಸಂತೋಷಕರ, ಅವಿಸ್ಮರಣೀಯ ಪ್ರವಾಸಕ್ಕೆ ಬೇಕಾಗುವ ಎಲ್ಲಾ ಸೌಕರ್ಯಗಳಿವೆ.

ಮಧುಚಂದ್ರಕ್ಕೆ ಪ್ರಶಸ್ತ ತಾಣ

ಒಂದು ಕಾಲದಲ್ಲಿ ಸ್ವಿಟ್ಜಲ್ರ್ಯಾಂಡ್ ಮಧುಚಂದ್ರಕ್ಕೆ ಅತ್ಯಂತ ಪ್ರಶಸ್ತ ಸ್ಥಳವೆನ್ನುವ ಖ್ಯಾತಿಯಿತ್ತು; ಈಗಲೂ, ಸ್ವಿಟ್ಜಲ್ರ್ಯಾಂಡ್‍ಗೆ ಹೋಗುವವರಿಗೇನೂ ಕಮ್ಮಿಯಿಲ್ಲ. ಈ ನಿಟ್ಟಿನಲ್ಲಿ ಜûರ್ಮಾಟ್ ಮಧುಚಂದ್ರಕ್ಕೆ ಪ್ರಶಸ್ತವೆನ್ನುತ್ತಾರೆ. ಈ ಕಾರು-ಮುಕ್ತ ಪಟ್ಟಣದಲ್ಲಿರುವ ಸುಂದರ ಪರಿಸರ, ಕೈ ಕೈ ಹಿಡಿದು ಇಲ್ಲಿನ ಬೆಟ್ಟ-ಗುಡ್ಡಗಳ ನಡುವೆ, ನದಿ-ಜರಿಗಳ ದಡದಲ್ಲಿ ಓಡಾಡುತ್ತಾ, ಏಕಾಂತಕ್ಕೂ ವಿಶ್ರಾಂತಿಗೂ ಅನುವಾಗುವಂತಹ ಎಲ್ಲ ಸೌಕರ್ಯಗಳನ್ನು ನಿಮ್ಮದಾಗಿಸಿಕೊಂಡು, ಜೀವನ ಸಂಗಾತಿಯೊಡನೆ ಈ ಭೂಲೋಕ ಸ್ವರ್ಗದಲ್ಲಿ ಪ್ರೇಮಪಕ್ಷಿಗಳಂತೆ ವಿಹರಿಸಬಹುದು.

ಡಿಸೆಂಬರ್ ಮತ್ತು ಜನವರಿ ಮಾಸಗಳಲ್ಲಿ ಆಲ್ಫ್ಸ್ ಪರ್ವತ ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯವಾಗಿ ತೀರ ಕಡಿಮೆಯಿದ್ದು, ರಕ್ತವನ್ನು ಹೆಪ್ಪುಗಟ್ಟಿಸುವಂತಹ ಚಳಿ; ಆದರೆ ಬಯಲು ಪ್ರದೇಶಗಳಾದ ಜಿನೀವ, ಜûೂರಿಕ್, ಇಂಟರ್‍ಲಾಕೆನ್, ಲೂಸರ್ನ್ ಪಟ್ಟಣಗಳ ವೀಕ್ಷಣೆಯನ್ನು ಸೂಕ್ತ ತಯಾರಿಯೊಂದಿಗೆ ಈ ಮಾಸಗಳಲ್ಲಿಯೂ ನಿಭಾಯಿಸಬಹುದು. ಸ್ವಿಟ್ಜಲ್ರ್ಯಾಂಡಿನ ಚಳಿಗಾಲ ಹಾಗೂ ಬೇಸಿಗೆಯ ಚಟುವಟಿಕೆಗಳು ವಿಭಿನ್ನ. ಋತುಮಾನ, ಸಾಮಥ್ರ್ಯ, ಆಸಕ್ತಿಗಳ ಆಧಾರಗಳ ಮೇಲೆ ನಾವು ಪ್ರವಾಸದ ವಿವರಗಳನ್ನು ನಿರ್ಧರಿಸಬೇಕು. ಜûರ್ಮಾಟ್ ಮತ್ತು ಸೇಂಟ್ ಮೋರಿಟ್ಜ್‍ಗಳೆರಡೂ ಅತ್ಯುನ್ನತ ರೆಸಾರ್ಟ್ ಪಟ್ಟಣಗಳೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸಮಯದ ಅಭಾವದಿಂದ ಇವೆರಡರಲ್ಲಿ ಒಂದನ್ನೇ ಆಯ್ಕೆ ಮಾಡಬೇಕಾದರೆ ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ನೀವು ಎಲ್ಲಿಂದ ಬರುತ್ತೀರಿ ಮತ್ತು ಎಲ್ಲಿಗೆ ಹೋಗಬೇಕು ಎನ್ನುವುದರ ಆಧಾರದ ಮೇಲೆ ಆಯ್ಕೆ ಮಾಡಬಹುದು.

ಸ್ವಿಟ್ಜಲ್ರ್ಯಾಂಡ್ ಆಲಿಪ್ತ ಮತ್ತು ಶ್ರೀಮಂತ ರಾಷ್ಟ್ರ

ಸ್ವಿಟ್ಜಲ್ರ್ಯಾಂಡನ್ನು ಒಂದು ಆಲಿಪ್ತ ರಾಷ್ಟ್ರವನ್ನಾಗಿ ಪರಿಗಣಿಸಲಾಗುತ್ತದೆ. ಯಾವುದೇ ರಾಷ್ಟ್ರದೊಡನೆ ಸಶಸ್ತ್ರ ಘರ್ಷಣೆಗಳಲ್ಲಿ ಭಾಗಿಯಾಗಬಾರದೆಂಬ ತನ್ನ ಸ್ವಯಂ ಘೋಷಿತ ನೀತಿ ಶ್ಲಾಘನೀಯ. ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದು ವಿವಾದಗಳ ಸನ್ನಿವೇಶಗಳಲ್ಲಿ ಮಧ್ಯಸ್ತಿಕೆಯನ್ನೂ ವಹಿಸಿದೆ. ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಈ ಆಲಿಪ್ತ ನೀತಿಯಿಂದಲೇ ತಮ್ಮ ಪೀಠಗಳನ್ನು ಜಿನೀವದಲ್ಲಿ ಸ್ಥಾಪಿಸಿವೆ.

ದೈನಂದಿನ ಜೀವನ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಕಾನೂನು ಕಟ್ಟುನಿಟ್ಟು. ನೈಸರ್ಗಿಕ ಸಂಪನ್ಮೂಲಗಳು ಮತ್ತು ಪ್ರಗತಿಪರ ಆಡಳಿತದ ಪರಿಣಾಮವಾಗಿ ಸ್ವಿಟ್ಜಲ್ರ್ಯಾಂಡ್ ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ. ಆದ್ದರಿಂದಲೇ, ಮಾನವನ ಜೀವನದ ಗುಣಮಟ್ಟವನ್ನು ಅಳೆಯುವ ಅನೇಕ ಸರ್ವೆಗಳಲ್ಲಿ ಜûೂರಿಕ್ ಮತ್ತು ಜಿನೀವ ಸತತವಾಗಿ ಮೇಲ್ಗೈ ಸಾಧಿಸುತ್ತಿದೆ [ಒeಡಿಛಿeಡಿ ಕಿuಚಿಟiಣಥಿ oಜಿ ಐiviಟಿg suಡಿveಥಿ 2017].

ಸ್ವಿಟ್ಜಲ್ರ್ಯಾಂಡಿನ ಆರ್ಥಿಕ ಅಭಿವೃದ್ಧಿಗೆ ಪ್ರವಾಸೋಧ್ಯಮದ ಪ್ರಾಮುಖ್ಯತೆ ಅಪಾರ. ಹಾಗಾಗಿ, ಪರಿಸರದ ಸೌಂದರ್ಯವನ್ನು ರಕ್ಷಿಸುತ್ತಾ, ಪ್ರವಾಸೋಧ್ಯಮಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳ ಅಭಿವೃದ್ಧಿಗೆ ಇಲ್ಲಿನ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹಾಗಾಗಿ, ಪ್ರವಾಸಿಗರಿಗೆ ಸ್ವಿಟ್ಜಲ್ರ್ಯಾಂಡ್ ಭೂಲೋಕದ ಸ್ವರ್ಗವೆಂಬ ಭಾವನೆ ಮೂಡಿದರೆ ಅತಿಶಯೋಕ್ತಿಯಲ್ಲ. ಈ ಸ್ವರ್ಗದಲ್ಲಿರುವ ಅಪ್ರತಿಮ ರೆಸಾರ್ಟ್ ನಗರಗಳ ವೀಕ್ಷಣೆ ಮತ್ತು ಇವೆರಡರ ನಡುವಿನ ಗ್ಲೇಸಿಯರ್ ಎಕ್ಸ್‍ಪ್ರೆಸ್ ಪ್ರಯಾಣ ನಮ್ಮ ಪಾಲಿಗಂತೂ ಅವಿಸ್ಮರಣೀಯ. ಸ್ವಿಟ್ಜಲ್ರ್ಯಾಂಡಿನ ಕೈಗಡಿಯಾರಗಳು ಸುಪ್ರಸಿದ್ಧವಾದರೂ ದುಬಾರಿ! ಆದರೆ, ಈ ವಿಸ್ಮಯನಾಡಿನಲ್ಲಿ ಸಂಪಾದಿಸುವ ನೆನಪುಗಳಿಗೆ ಬೆಲೆ ಕಟ್ಟಲಾಗದು; ಅಮೂಲ್ಯವಾದ ಆ ನೆನಪುಗಳೇ ನಮ್ಮ ವೈಯಕ್ತಿಕ ಸಾಹಿತ್ಯದ ಭಂಡಾರ. ಹಾಗಾಗಿ, ಸ್ವಿಟ್ಜಲ್ರ್ಯಾಂಡಿಗೆ ಜೀವಮಾನದಲ್ಲಿ ಒಮ್ಮೆಯಾದರೂ ಬರಲೇಬೇಕು.

ಸ್ವಿಸ್ ಅಡಿಗೆಗಳು

ಸ್ಥಳೀಯ ಸಂಸ್ಕೃತಿಯನ್ನು ಅನ್ವೇಷಿಸುವಾಗ, ಅಲ್ಲಿನ ಆಹಾರ ಪದ್ದತಿಯ ಅರಿವು, ಸ್ಥಳೀಯರೊಡನೆ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹಾಯಕಾರಿ. ಹಾಗೂ, ಈ ಅರಿವಿನೊಂದಿಗೆ, ನಾವು ನಮಗೊಪ್ಪುವ ಆಹಾರವನ್ನು ಸೇವಿಸಿಬಹುದು. ಹೊರದೇಶಗಳಿಗೆ ಹೋದಾಗ ಸಸ್ಯಾಹಾರಿಗಳಿಗೆ ಆಹಾರ ಒಂದು ಸವಾಲಾಗಬಹುದು.

ಸಾಮಾನ್ಯವಾಗಿ ನಾವು ಏನನ್ನು ಬೆಳೆಯುತ್ತೇವೆಯೋ; ನಮ್ಮಲ್ಲಿ ಏನೂ ಯತೇಚ್ಛವಾಗಿದೆಯೋ, ಅದನ್ನೇ ಆಹಾರವನ್ನಾಗಿಸಿಕೊಳ್ಳುವುದು ಸ್ವಾಭಾವಿಕ. ಹಾಗಾಗಿ, ಸ್ವಿಟ್ಜಲ್ರ್ಯಾಂಡಿನ ಪಾಕಪದ್ದತಿಯಲ್ಲಿ ಹಾಲು, ಚೀಸ್, ಆಲೂಗಡ್ಡೆಯಂತಹ ಪದಾರ್ಥಗಳ ಪ್ರಭಾವವಿದೆ.

ಕೆಲವು ಪ್ರಮುಖ ಸಸ್ಯಾಹಾರಿ ಆಹಾರಗಳು

  • ¥sóÀಂಡೂ [ಬ್ರೆಡ್, ತರಕಾರಿ, ಚೀಸ್]
  • ರೋಸ್ಟಿ [ ಕರಿದ ಆಲೂಗಡ್ಡೆ, ಗ್ರೇವಿ]
  • ಸ್ಥಳೀಯ ಚೀಸ್ ಸ್ಲೈಸ್ ಮತ್ತು ಬೇಯಿಸಿದ ತರಕಾರಿ
  • ರಕ್ಲೆಟ್ [ಚೀಸ್, ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಉಪ್ಪಿನಕಾಯಿ]
  • ಸ್ವಿಸ್ ಪಾಸ್ಟ

ತಲಪುವುದು ಹೇಗೆ?

ಬೆಂಗಳೂರಿನಿಂದ ಜûೂರಿಕ್‍ಗೆ ದುಬೈ, ಅಬುದಾಬಿ, ಮಸ್ಕಟ್ ಅಥವಾ ಪ್ಯಾರಿಸ್ ಮುಖಾಂತರ 8-14 ಗಂಟೆಯಲ್ಲಿ ಪ್ರಯಾಣಿಸಬಹುದು. ವಿಮಾನ ದರ ರೂ 45,000-60,000ರವರೆಗೆ. ಜûೂರಿಕ್‍ನಿಂದ ಜûರ್ಮಾಟ್‍ಗೆ ಮೂರುವರೆ ಗಂಟೆಯಾದರೆ, ಅದೇ ಸೇಂಟ್ ಮೋರಿಟ್ಜ್‍ಗೆ ಎರಡೂವರೆ ಗಂಟೆಯ ಪ್ರಯಾಣ. ಜûûರ್ಮಾಟ್ ಹೋಟೆಲ್ ರೂ 6000ದಿಂದ, ಸೇಂಟ್ ಮೋರಿಟ್ಜ್ ರೂ 7000ದಿಂದ ಲಭ್ಯ. ಇನ್ನಿತರ ಖರ್ಚುಗಳು ದಿನಕ್ಕೆ ಸುಮಾರು ತಲಾ ರೂ 5000 ಆಗಬಹುದು. ಒಂದು ವಾರದ ಸ್ವಿಟ್ಜಲ್ರ್ಯಾಂಡ್ ಪ್ರವಾಸಕ್ಕೆ ಒಟ್ಟು ಖರ್ಚು ತಲಾ ರೂ 1 ಲಕ್ಷವಾಗಬಹುದು. ಇಲ್ಲಿ ಯೂರೋ ಸಹ ಚಲಾವಣೆಯಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ

https://www.zermatt.ch/en

https://www.stmoritz.ch/en

https://www.myswitzerland.com/en-in/home.html

https://www.swissrailways.com/

ಮೊಟ್ಟಮೊದಲ ಪ್ಯಾಕೇಜ್ ಟೂರ್

1858ರಲ್ಲಿ ಬ್ರಿಟನ್ನಿನ ಥಾಮಸ್ ಕುಕ್ [ ಥಾಮಸ್ ಕುಕ್ ಕಂಪನಿಯ ಸಂಸ್ಥಾಪಕ] ಯೂರೋಪಿನ ಮೊಟ್ಟ ಮೊದಲ ಪ್ಯಾಕೇಜ್ ಟೂರನ್ನು ಆಯೋಜಿಸಿದರು. ಸಾಮೂಹಿಕ ಪ್ರವಾಸೋಧ್ಯಮದ ಉಗಮವಾಗಿದ್ದೇ ಹೀಗೆ.

1871ರಲ್ಲಿ ಮೌಂಟ್ ರಿಗಿಗೆ ಕಾಗ್ ವೀಲ್ ರೈಲ್ವೆಯ ಉದ್ಘಾಟನೆಯಾಗಿ ಸಾರ್ವಜನಿಕರಿಗೆ ಸ್ವಿಟ್ಜಲ್ರ್ಯಾಂಡಿನ ಪರ್ವತಗಳನ್ನು ಸುಲಭವಾಗಿ ಪ್ರವೇಶಿಸುವ ಸೌಲಭ್ಯ ಲಭಿಸಿತು. ಇದಾದ ನಂತರ 1898ರಲ್ಲಿ ಮ್ಯಾಟರ್‍ಹಾರ್ನ್ [14,692 ಅಡಿ], 1912ರಲ್ಲಿ ಉಂಪ್ಫ್ರಾಘ್ [ 13721 ಅಡಿ], ಮೌಂಟ್ ಟಿಟ್ಲಿಸ್‍ಗೆ [10, 623 ಅಡಿ] ಕೇಬಲ್ ಕಾರ್ ವ್ಯವಸ್ಥೆಗಳಾಗಿ, ದೇಶದ ಪ್ರವಾಸೋಧ್ಯಮದ ಅಭಿವೃದ್ಧಿಗೆ ಭದ್ರವಾದ ಅಡಿಪಾಯವಾಯಿತು.

ಪಾಸ್ಪೋರ್ಟ್ ಸ್ಟಾಂಪಿಂಗ್: ಜಾಗರೂಕತೆ ಅಗತ್ಯ

ಕೆಲವೊಮ್ಮೆ ಊಹಿಸಿದ ಅಚಾತುರ್ಯವೇ ನಡೆದುಹೋಗುತ್ತದೆ. ನಾವು ಜûೂರಿಕ್‍ಗೆ ಆಮ್ಸ್ಟರ್ಡಾಮ್ ಮುಖಾಂತರ 26 ದೇಶಗಳಿಗೆ ಸಂಬಂಧಿಸಿದ ಯೂರೋಪಿಯನ್ ಶೆಂಗನ್ ವೀಸ ಪಡೆದು ಪ್ರಯಾಣ ಬೆಳೆಸಿದ್ದೆವು. ಮುಂಜಾನೆ ಆಮ್ಸ್ಟರ್ಡಾಮ್ ತಲುಪಿ, ಆ ದಿನ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಸಂಜೆ ಜûೂರಿಕ್‍ಗೆ ಪ್ರಯಾಣ ಬೆಳೆಸಿದ್ದೆವು. ಆ ಸಂಜೆ, ಆಮ್ಸ್ಟರ್ಡಾಮ್ ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್‍ನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಿತಾಳ ಪಾಸ್ಪೋರ್ಟಿಗೆ ಎಕ್ಸಿಟ್ ಸ್ಟಾಂಪ್ ಹಾಕಿಯೇ ಬಿಟ್ಟರು. ವಾಸ್ತವವಾಗಿ ಇನ್ನೂ ಯೂರೋಪಿನ ದೇಶಗಳಲ್ಲಿಯೇ ನಾವು ಪ್ರಯಾಣ ಮುಂದುವರಿಸಬೇಕಿದ್ದು, ಎಕ್ಸಿಟ್ ಸ್ಟಾಂಪ್ ಹಾಕುವಂತಿರಲಿಲ್ಲ. ತಕ್ಷಣವೇ, ಅಲ್ಲಿನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಆ ಎಕ್ಸಿಟ್ ಸ್ಟಾಂಪನ್ನು ಕ್ಯಾಂಸೆಲ್ ಮಾಡಿಸಿಕೊಂಡೆವು; ಜೊತೆಗೆ ಅವರ ಕಡೆಯಿಂದಲೇ ಜûೂರಿಕ್ ವಿಮಾನ ನಿಲ್ದಾಣಕ್ಕೆ ಸಂದೇಶವನ್ನು ಕಳುಹಿಸಲಾಯಿತು; ಇಲ್ಲದಿದ್ದರೆ, ಜûೂರಿಕ್‍ನಲ್ಲಿ ಎಂಟ್ರಿ ಸಿಗುತ್ತಿರಲಿಲ್ಲ. ಯೂರೋಪಿನ ವಿವಿಧ ದೇಶಗಳಲ್ಲಿ ಪ್ರಯಾಣಿಸುವಾಗ, ಈ ಕುರಿತು ಎಚ್ಚರಿಕೆ ಅಗತ್ಯ.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *