ಉದ್ಯೋಗಾನ್ವೇಷಣೆಗೆ ಬೇಕು ಕೌಶಲಗಳು

ಜಾಗತೀಕರಣ, ಉದಾರೀಕರಣದಂತಹ ಬೆಳವಣಿಗೆಗಳಿಂದ ಗ್ರಾಹಕರ ಆದ್ಯತೆಗಳು ಬದಲಾಗುತ್ತಿವೆ. ಉತ್ಪಾದನಾ ಕ್ರಮಗಳಲ್ಲಿ ನೂತನ ವಿಧಾನಗಳನ್ನು, ಸ್ವಯಂಚಾಲಿತ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ರೊಬೋಟಿಕ್ ತಂತ್ರಜ್ಞಾನದ ಸಹಾಯದಿಂದ ಮಾನವನ ಹಸ್ತಕ್ಷೇಪವಿಲ್ಲದ ಆಟೋಮೇಷನ್ ಹೆಚ್ಚಾಗುತ್ತಿದೆ; ಆದ್ದರಿಂದ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿನ ಕೆಲಸಗಳು ಕುಂಠಿತವಾಗುತ್ತಲಿದೆ.  

ಇನ್ನೂ ಗಂಭೀರವಾದ ಬಿಕ್ಕಟ್ಟೇನೆಂದರೆ, ಕಳೆದ ಎರಡು ದಶಕಗಳಲ್ಲಿ ಉದ್ಯೋಗಕ್ಕೆ ಪದವಿಗಳಷ್ಟೇ ಸಾಕಾಗುವುದಿಲ್ಲವೆಂಬ ಅಂಶ ಆಗಿಂದಾಗ್ಗೆ ನಡೆಯುತ್ತಿರುವ ಎಲ್ಲ ಸಮೀಕ್ಷೆಗಳಲ್ಲಿ ಕಂಡುಬಂದಿದೆ. ಏಕೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೌಶಲಗಳ ಬಗ್ಗೆ ಪ್ರಾಮುಖ್ಯತೆಯಿಲ್ಲದೆ ಉದ್ಯೋಗಕ್ಕೆ ಅಗತ್ಯವಾದ ತರಬೇತಿಯನ್ನು ವಿಧ್ಯಾರ್ಥಿಗಳಿಗೆ ನೀಡುತ್ತಿಲ್ಲ. ಈ ಬಗ್ಗೆ ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ತಜ್ಞರ ನಡುವೆ ಸಾಕಷ್ಟು ಪರಿಶೀಲನೆ, ಚರ್ಚೆಗಳಾಗಿ ನೂತನ ಯೋಜನೆಗಳು ಅನುಷ್ಠಾನಗೊಂಡು ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆಯಾದರೂ, ವಾಸ್ತವದಲ್ಲಿ ಕೌಶಲಗಳ ಕೊರತೆ ಮುಂದುವರಿದಿದೆ. ಆದ್ದರಿಂದಲೇ, ಎಂಜಿನಿಯರಿಂಗ್ ಮತ್ತು ಎಂ.ಬಿ.ಎ. ಪದವೀದರೂ ಸೇರಿದಂತೆ ಕ್ಯಾಂಪಸ್ ನೇರ ನೇಮಕಾತಿಗಳಲ್ಲಿ ಕೌಶಲವಿರುವ ಅಭ್ಯರ್ಥಿಗಳಿಗಷ್ಟೇ ಉದ್ಯೋಗಗಳು ಸಿಗುತ್ತಿವೆ.

ಅನೇಕ ಕ್ಷೇತ್ರಗಳಲ್ಲಿ ಹೆಚ್ಚುವರಿದ ಆಟೋಮೇಷನ್ ಪರಿಣಾಮವಾಗಿ ನಿನ್ನೆಯವರೆಗೂ ಇದ್ದ ಕೆಲಸಗಳು ಇಂದು ಮಾಯವಾಗುತ್ತಿವೆ; ಮುಂದಿನ ದಿನಗಳ ಕೆಲಸಗಳಿಗೆ ಅಗತ್ಯವಿರುವ ಕೌಶಲಭರಿತ ಮಾನವಸಂಪಲ್ಮೂಲನ ಇಂದು ತಯಾರಾಗುತ್ತಿಲ್ಲ. ಹಾಗಾಗಿ, ಕೆಲಸಕ್ಕಾಗಿ ಹೆಣಗಾಡುತ್ತಿರುವ ಉದ್ಯೋಗಾರ್ಥಿಗಳು ಒಂದೆಡೆಯಾದರೆ, ಕೌಶಲಭರಿತ ಅಭ್ಯರ್ಥಿಗಳೇ ಸಿಗುತ್ತಿಲ್ಲವೆಂಬ ಆತಂಕ ಉದ್ಯೋಗದಾತರದ್ದು. ಪರಿಣಾಮವಾಗಿ ನಿರುದ್ಯೋಗದ ಸಮಸ್ಯೆ ಉಲ್ಬಣಗೊಂಡು ಗ್ರಾಹಕರ ಕೊಳ್ಳುವ ಸಾಮಾಥ್ರ್ಯ ಕ್ರಮೇಣ ಕಮ್ಮಿಯಾಗುತ್ತಿದೆ.

ಇದೊಂದು ಕ್ಲಿಷ್ಟವಾದ ಮತ್ತು ಗುರುತರವಾದ ಸಮಸ್ಯೆಯಾಗಿ, ದೇಶದ ಪ್ರಗತಿಗೆ ಮಾರಕವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇಡೀ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಯ ಅಗತ್ಯಗಳನ್ನು ಮನಗಂಡ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ [ ಆಡಿಚಿಜಿಣ ಓeತಿ ಇಜuಛಿಚಿಣioಟಿಚಿಟ Poಟiಛಿಥಿ] ಯನ್ನು ತಜ್ಞರು ಮತ್ತು ಸಾರ್ವಜನಿಕರೊಡನೆ ಚರ್ಚೆಗಾಗಿ ಹೊರತಂದಿದೆ. ಇದು ಅನುಷ್ಟಾನಗೊಂಡರೂ ಇದರ ಸಂಪೂರ್ಣ ಲಾಭ ಮುಂದಿನ ಪೀಳಿಗೆಯವರಿಗಷ್ಟೇ!

ಆದ್ದರಿಂದ, ಇಂದು ಶಾಲಾಕಾಲೇಜುಗಳಲ್ಲಿರುವ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಉದ್ಯೋಗದ ಅನ್ವೇಷಣೆಯಲ್ಲಿ ತೊಡಗುವ ವಿಧ್ಯಾರ್ಥಿಗಳು ಜ್ಞಾನಾರ್ಜನೆಯ ಜೊತೆಗೆ ತಮ್ಮ ಮುಂದಿನ ವೃತ್ತಿಯನ್ನು ನಿರ್ಧರಿಸಿ, ಅದಕ್ಕೆ ಅಗತ್ಯವಿರುವ ಕೌಶಲಗಳನ್ನು ಈಗಲೇ ಮೈಗೂಡಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಬೇಕು. ಆಗಲೇ ಭವಿಷ್ಯದ ಕನಸುಗಳು ಸಾಕಾರವಾಗಬಲ್ಲದು.

ಪ್ರಮುಖ ಉದ್ಯೋಗಶೀಲ ಕೌಶಲಗಳು

ಪರಿಪೂರ್ಣ ಅಭ್ಯರ್ಥಿಗಳಲ್ಲಿ ಶೈಕ್ಷಣಿಕ ಮತ್ತು ತಾಂತ್ರಿಕ ಗುಣಗಳೊಡನೆ ಪ್ರಾರ್ಥಮಿಕ ಕೌಶಲಗಳಿರಲೇಬೇಕು. ನಿಮ್ಮ ಆಸಕ್ತಿ ಮತ್ತು ಅಭಿರುಚಿಗೆ ಅನುಗುಣವಾಗಿ, ಅಗತ್ಯ ಕೌಶಲಗಳನ್ನು ಪಡೆದು ಸ್ವಯ ಉದ್ಯೋಗವನ್ನೂ ಮಾಡಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಲೂಬಹುದು. ಆದ್ದರಿಂದ, ಈ ಕೆಳಗೆ ತಿಳಿಸಿರುವ ಮಾಹಿತಿಯ ಅನುಸಾರ ನೀವು ಅರಸುವ ಉದ್ಯೋಗಕ್ಕೆ ಬೇಕಾಗುವ ಕೌಶಲಗಳನ್ನು ಗುರುತಿಸಿ:

ಪ್ರಾರ್ಥಮಿಕ ಕೌಶಲಗಳು

  1. ಆತ್ಮ ವಿಶ್ವಾಸ [Self-Confidence ]
  2. ಸ್ವಯಂಪ್ರೇರಣೆ [Self-Motivation]
  3. ವ್ಯಕ್ತಿತ್ವ [Personality]
  4. ಸಂವಹನೆ [Communication]
  5. ಅಂತರ್ವೈಯಕ್ತಿಕ ನೈಪುಣ್ಯತೆ [Inter-personal Skills]
  6. ಸಕಾರಾತ್ಮಕ ಧೋರಣೆ [Positive Attitude]
  7. ನಿಷ್ಟೆ, ಪ್ರಾಮಾಣಿಕತೆ [Integrity]
  8. ಬದ್ಧತೆ [Commitment]
  9. ಸಮಯದ ನಿರ್ವಹಣೆ [Time Management]
  10. ವೃತ್ತಿ ಮತ್ತು ಖಾಸಗೀ ಬದುಕಿನ ಸಮತೋಲನ [Balance in professional & Personal life]

ವೃತ್ತಿಪರ ಕೌಶಲಗಳು [ವೃತ್ತಿಗೆ ಅನುಗುಣವಾಗಿ]

  1. ಸೇವಾ ಮನೋಭಾವ [Service orientation]
  2. ಜ್ಞಾಪಕ ಶಕ್ತಿ [Memory]
  3. ಗಣಿತದಲ್ಲಿ ತಜ್ಞತೆ [Numerical skills]
  4. ಸಂಖ್ಯಾಶಾಸ್ತ್ರ ತಜ್ಞತೆ [ Statistics]
  5. ಕ್ರಮಾವಳಿ [Algorithm]
  6. ವಿಶ್ಲೇಷಾತ್ಮಕ ಕೌಶಲ [ Analytical skill]
  7. ದತ್ತಾಂಶ ನಿರ್ವಹಣೆ [Database management]
  8. ಯೋಜನೆಯ ನಿರ್ವಹಣೆ [Project Management]
  9. ತಾಂತ್ರಿಕ ಸಹಾಯ [Technical/IT Support]
  10. ಕಲೆಗಾರಿಕೆ [Artistic skill]
  11. ಆರ್ಥಿಕ ನಿರ್ವಹಣೆ [ Finance Management]
  12. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ [ Artificial Intelligence]
  13. ಆಟೋಮೇಷನ್ ತಂತ್ರಜ್ಞಾನ [Automation technology]
  14. ಅನ್ವಯ ತಂತ್ರಾಂಶ [ Application software]
  15. ವ್ಯಾಪಾರೋಧ್ಯಮ ಕೌಶಲ [ Business Skills]
  16. ಕಾನೂನು ತಜ್ಞತೆ [Legal expertise ]
  17. ಸಂಶೋಧನೆ ಮತ್ತು ಅಭಿವೃದ್ಧಿ ಕೌಶಲಗಳು  [Research & Development skills]
  18. ಬಹು ಸಂಸ್ಕೃತಿಯ ಕೌಶಲಗಳು [Multi-cultural skills]
  19. ಭೋದನೆ/ತರಬೇತಿ ನೀಡುವ ಕೌಶಲಗಳು [Teaching/Training skills]
  20. ನಾಯಕತ್ವದ ಸಾಮಥ್ರ್ಯ [Leadership skills]

ಈ ಕೌಶಲಗಳ ಮಹತ್ವವನ್ನು ಅರಿತ ಮೇಲೆ ಅವುಗಳನ್ನು ಮೈಗೂಡಿಸಿಕೊಳ್ಳುವುದು ಹೇಗೆಂಬ ಪ್ರಶ್ನೆ ಸಹಜ. ಈ ನಿಟ್ಟಿನಲ್ಲಿ ಹಲವಾರು ಸಂಪಲ್ಮೂಲನಗಳು, ಅವಕಾಶಗಳು ಮತ್ತು ಸೌಕರ್ಯಗಳನ್ನು ಗಮನಿಸಿ [ಇದು ಸಂಪೂರ್ಣ ಪಟ್ಟಿಯಲ್ಲ]:

  1. ಕೌಶಲ ತರಬೇತಿ ಕೇಂದ್ರಗಳು [Skill Development Centres- pmkvyofficial.org ಇತ್ಯಾದಿ]
  2. ರಾಜ್ಯ ಉದ್ಯೋಗ, ತರಬೇತಿ ಮತ್ತು ಕೌಶಲ್ಯ ಆಯೋಗ [http://koushalya.karnataka.gov.in/Pages/home.aspx]
  3. https://mhrd.gov.in/karnataka
  4. ನ್ಯಾಷನಲ್ ಕೌನ್ಸಿಲ್ ಅಫ್ ವೊಕೇಶನಲ್ ಟ್ರೈನಿಂಗ್  [http://164.100.160.33/content/institute/nvti-noida.php ]
  5. ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ [ https://www.ncvtmis.gov.in/Pages/ITI/Search.aspx ]
  6. ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನಾ [http://www.kvpy.iisc.ernet.in/main/index.htm]
  7. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ [http://www.kvic.org.in/kvicres/index.php]
  8. ಕೇಂದ್ರೀಯ ಪ್ಲಾಸ್ಟಿಕ್, ಎಲೆಕ್ಟ್ರೋಕೆಮಿಕಲ್, ಚರ್ಮ ಸಂಶೋಧನಾ ಸಂಸ್ಥೆಗಳು [ CIPET; CECRI, CLRI]
  9. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ [ http://dwcd.kar.nic.in:8080/kannada/HomePage.jsp ]
  10. https://nsdcindia.org
  11. https://eskillindia.org/Course/courses
  12. ವ್ಯಕ್ತಿತ್ವ ತರಬೇತಿ ಕೇಂದ್ರಗಳು [Personality Development Centres]
  13. nsd.gov.in
  14. ಮಾರ್ಗದರ್ಶಕರೊಡಗಿನ ಒಡನಾಟ [Association with mentors]
  15. ಯಶಸ್ಸಿನ ಕಥೆಗಳು ,ಪುಸ್ತಕಗಳು, ವಿಡಿಯೋಗಳು [Success stories Books, Videos]
  16. ಇ-ಲರ್ನಿಂಗ್/ಆನ್‍ಲೈನ್ ತರಗತಿಗಳು [E-learning/Online classes]

ಸಾಮಾನ್ಯ ಮತ್ತು ವೃತ್ತಿಪರ ಕೌಶಲಗಳ ತರಬೇತಿ ನೀಡಲು ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಕೌಶಲ ವಿಕಾಸ’ ಯೊಜನೆಯ ಅಡಿಯಲ್ಲಿ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಜೊತೆಗೆ ಪ್ರಮಾಣಪತ್ರವನ್ನು ನೀಡಿ ನೇಮಕಾತಿಯ ಸಹಾಯವನ್ನೂ ಮಾಡಲಾಗುತ್ತದೆ. ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಯುವಕ/ಯುವತಿಯರು ಲಾಭವನ್ನು ಪಡೆದಿದ್ದಾರೆ. ಇವುಗಳಲ್ಲದೆ ಖಾಸಗೀ ಸಂಸ್ಥೆಗಳು, ಕಲಿಕೆ ಜೊತೆ ಗಳಿಕೆಯ ಅವಕಾಶಗಳು, ವಿಧ್ಯಾರ್ಥಿವೇತನಗಳ ಸಾಧ್ಯತೆಗಳನ್ನು ಗುರುತಿಸಿ, ನಿಮಗೆ ಸೂಕ್ತವಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಿ.

ಈ ಕೌಶಲಗಳಿಂದ ಬಾಳಿನಲ್ಲಿ ಸುಖ, ಸಂತೋಷಗಳು ಮೂಡುವುದಲ್ಲದೆ ಕೆಲಸದ ಗುಣಮಟ್ಟದಲ್ಲಿ ಸುಧಾರಣೆಯಾಗಿ ನೀವೊಬ್ಬ ಆದರ್ಶಪ್ರಾಯ ಉದ್ಯೋಗಿಯಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ, ಬದುಕಿನಲ್ಲಿ ಕೌಶಲಭರಿತ ಆಕರ್ಷಕ ವ್ಯಕ್ತಿತವೇ ಏಳಿಗೆಗಾಗಿ ಪ್ರಮುಖವೆಂಬುದನ್ನು ಮರೆಯದಿರಿ. ಏಳಿ! ನಿಮ್ಮಲ್ಲಿರುವ ಅಪಾರ ಶಕ್ತಿಯಿಂದ ನಿಮ್ಮ ಉಜ್ವಲ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಿ.

Download PDF Document

                  

About author View all posts Author website

V Pradeep Kumar

Leave a Reply

Your email address will not be published. Required fields are marked *