ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ | V Pradeep Kumar | 2019

ಉನ್ನತ ಶಿಕ್ಷಣಕ್ಕೆ ಬೇಕು ಮಾರ್ಗದರ್ಶನ

ಇದುಕೆಲವು ವರ್ಷಗಳ ಹಿಂದೆನಡೆದಘಟನೆ. ಜಾನ್ ಮೆಕಾಟ್ರಾನಿಕ್ಸ್‍ಎಂಜಿನಿಯರಿಂಗ್‍ನ ಸ್ನಾತಕೋತ್ತರ ಪದವಿಯನ್ನುಅಮೇರಿಕದಲ್ಲಿ ಗಳಿಸಿಅಪಾರವಾದ ಆಸೆ-ಆಕಾಂಕ್ಷೆಗಳಿಂದ ಭಾರತಕ್ಕೆಮರಳಿದಾಗ ಅವನಿಗಾದ ಶಾಕ್‍ಅಷ್ಟಿಷ್ಟಲ್ಲ!ಏಕೆಂದರೆ, ಉದ್ಯೋಗದ ಸಂದರ್ಶನಗಳಲ್ಲಿಕೇಳುತ್ತಿದ್ದ ಪ್ರಶ್ನೆಗಳಿಂದಅವನು ಆತ್ಮವಿಶ್ವಾಸವನ್ನು ಕೆಳೆದುಕೊಳ್ಲುತ್ತಿದ್ದ. ಎಲ್ಲೆಡೆಅದೇ ಪ್ರಶ್ನೆ; ಅದೇ ಪ್ರತಿಕ್ರಿಯೆ. “ನಮಗೆ ಮೆಕಾನಿಕಲ್‍ಅಥವಾಎಲೆಕ್ಟ್ರಾನಿಕ್ಸ್ ಪದವೀಧರರಅವಶ್ಯಕತೆಯಿದೆಯೇ ಹೊರತು ಮೆಕಾಟ್ರಾನಿಕ್ಸ್ ಪದವೀಧರರಅವಶ್ಯಕತೆಯಿಲ್ಲ”ಎಂದು ಸಂದರ್ಶಕರು ಹೇಳಿಬಿಡುತ್ತಿದ್ದರು. ಪ್ರತಿ ಸಂದರ್ಶನದಿಂದನಂತರವೂಯಾಕಾದರೂ ಈ ಕೋರ್ಸ್ ಮಾಡಿದೆನೋಎಂದುಜಾನ್‍ಗೆ ಅನಿಸುತ್ತಿತ್ತು.

ನಿರುದ್ಯೋಗದಸವಾಲು ಒಂದೆಡೆಯಾದರೆಇಪ್ಪತೈದು ಲಕ್ಷ ಸಾಲವನ್ನುತೀರಿಸುವಮತ್ತು ಸಂಸಾರವನ್ನು ನೋಡಿಕೊಳ್ಳುವ ಜವಾಬ್ದಾರಿ ಬೇರೆ.ಕ್ಲಿಷ್ಟವಾದ ಈ ಸಮಸ್ಯೆಗಳಿಗೆ ಪರಿಹಾರ ಸಿಗದೆ, ತೀವ್ರವಾದಖಿನ್ನತೆಯಿಂದ ಬಳಲಿ ಮಾರ್ಗದರ್ಶನಕ್ಕೆ ನನ್ನ ಬಳಿ ಬಂದಾಗಜಾನ್ ಸಂಪೂರ್ಣವಾಗಿ ಕುಸಿದು ಹೋಗಿದ್ದ.

ಅವನ ಸಮಸ್ಯೆಗಂಭೀರವಾಗಿತ್ತು; ಪರಿಹಾರಕ್ಕೆತೀರ ಹೆಣಗಾಡಬೇಕಾಯಿತು.ಏಕೆಂದರೆ ಮೆಕಾಟ್ರಾನಿಕ್ಸ್‍ಎಂಜಿನಿಯರ್‍ಗಳಿಗೆ ಭಾರತದಲ್ಲಿಆಗ ಬೇಡಿಕೆಯಿರಲಿಲ್ಲ.ಇಡೀದೇಶದಲ್ಲಿಮೂರ್ನಾಲ್ಕು ಕಂಪನಿಗಳಿಗಷ್ಟೇಈ ವರ್ಗೀಕರಣದಎಂಜಿನಿಯರುಗಳಅವಶ್ಯಕತೆಯಿತ್ತು. ಅಷ್ಟಕ್ಕೂ, ಜಾನ್ ಮಾಡಿದ್ದತಪ್ಪಾದರೂ ಏನು? ಹೊಸ ವರ್ಗೀಕರಣವೆಂದು ಸೇರಿದಕೋರ್ಸಿಗೆ ಉದ್ಯೋಗವನ್ನುಅನ್ವೇಷಿಸುವಾಗನಿರೀಕ್ಷಿತ ಬೇಡಿಕೆ ಬರಲಿಲ್ಲ; ಕೋರ್ಸ್‍ಗೆ ಸೇರುವ ಮೊದಲು ಮಾರ್ಗದರ್ಶಕರ [ಒeಟಿಣoಡಿ] ಸಲಹೆಯನ್ನು ಪಡೆದಿರಲಿಲ್ಲ.

ಇಂತಹತಪ್ಪುನಿರ್ಧಾರಗಳು, ಪ್ರಮಾದಗಳು ಈಗಲೂ ನಡೆಯುತ್ತಲೇ ಇವೆ. ಪೋಷಕರಒತ್ತಾಯದಿಂದಲೋಅಥವಾ ಮಾರ್ಗದರ್ಶನದಕೊರತೆಯಿಂದಲೋ, ವಿಧ್ಯಾರ್ಥಿಗಳು ಕೋರ್ಸ್‍ಆಯ್ಕೆಯಲ್ಲಿಎಡವುತ್ತಿದ್ದಾರೆ. ತೀವ್ರವಾದ ಪ್ರಮಾದಗಳನ್ನು ಸರಿಪಡಿಸುವುದಕ್ಕೆಎಲ್ಲ ಸಂದರ್ಭಗಳಲ್ಲಿ ಸಾಧ್ಯವಿಲ್ಲ; ಹಾಗೊಮ್ಮೆ ಸಾಧ್ಯವಾದರೂ, ಜಾನ್ ಅನುಭವಿಸಿದಂತೆ ಅಗಾಧವಾದ ಶ್ರಮ ಮತ್ತುಸಮಯ ಬೇಕಾಗುತ್ತದೆ.

ನಮ್ಮದೇಶದ ನಿಜವಾದ ಶಕ್ತಿಯೆಂದರೆ ನಮ್ಮಯುವಜನತೆ;ಅವರಿಂದಲೇದೇಶದ ಪ್ರಗತಿ ಸಾಧ್ಯ. ನಮ್ಮಯುವಜನತೆಯ ಇಚ್ಛಾಶಕ್ತಿ ಮತ್ತುಅಪರಿಮಿತಚೈತನ್ಯ ಸಂಪೂರ್ಣವಾಗಿ ಬಳಕೆಯಾಗಬೇಕಾದರೆ, ಅವರಿಗೆಸೂಕ್ತವಾದ ಮಾರ್ಗದರ್ಶನದಅವಶ್ಯಕತೆಯಿದೆ.ಹಾಗಾಗಿ, ನಿಮ್ಮಶೈಕ್ಷಣಿಕ ಮತ್ತು ವೃತ್ತಿಜೀವನದ ಕನಸುಗಳನ್ನು ಸಾಕಾರಪಡಿಸಲು ಈ ಸೂತ್ರಗಳನ್ನು ಪಾಲಿಸಿ:

ನಿಮ್ಮ ಕನಸುಗಳೇನು?

ಬದುಕಿಗೊಂದು ಸ್ಪಷ್ಟವಾದ, ನಿಖರವಾದ, ಸಾಧಿಸಬಹುದಾದಮತ್ತು ಅಳೆಯಬಹುದಾದಗುರಿಯಿರಬೇಕು.ಇದನ್ನುSಒಂಖಖಿ ಉoಚಿಟs ಅನ್ನುತ್ತೇವೆ. ಆ ಗುರಿಗಳು ನಿಮ್ಮನ್ನ ಸದಾಕಾಲ ಪ್ರೇರೇಪಿಸುವಂತಿರಬೇಕು.

ನಿಮ್ಮ ಶಕ್ತಿ, ಸಾಮಥ್ರ್ಯ, ಆಸಕ್ತಿ, ಅಭಿರುಚಿಗಳನ್ನು ಅರಿಯಿರಿ

ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ನಿಮ್ಮ ಸಾಮಥ್ರ್ಯ ಮತ್ತು ಅಭಿರುಚಿಗಳು ಆ ನಿಟ್ಟಿನಲ್ಲಿಯಿವೆಯೇಎಂಬುದು ಮುಖ್ಯವಾಗುತ್ತದೆ.ಉದಾಹರಣೆಗೆ, ನೀವು ಎಂಜಿನಿಯರಿಂಗ್ ಮಾಡುವ ಕನಸುಗಳಿದ್ದರೆ, ಗಣಿತದಲ್ಲಿಪರಿಣತಿಯಿರಬೇಕು; ಡಾಕ್ಟರ್‍ಆಗಬೇಕಿದ್ದರೆ ಸೇವಾಮನೋಭಾವದಜೊತೆಗೆಚುರುಕಾದಜ್ಞಾಪಕಶಕ್ತಿಯಿರಬೇಕು; ಬಿಸಿನೆಸ್ ಮಾಡಬೇಕಾದರೆ ವ್ಯವಹಾರಜ್ಞಾನ, ಸಂವಹನಾ ಶಕ್ತಿ, ಸೂಕ್ಷ್ಮ ಮತ್ತುಚುರುಕಾದ ಬುದ್ಧಿಶಕ್ತಿ ಇತ್ಯಾದಿ ಇರಬೇಕು;ಇಲ್ಲದಿದ್ದರೆಕಷ್ಟವಾದೀತು.

ಮಾರ್ಗದರ್ಶಕರನ್ನುಗುರುತಿಸಿ:

ಅನೇಕ ಬಾರಿ ಮಾರ್ಗದರ್ಶಕರನ್ನುಗುರುತಿಸುವುದೇಒಂದು ಸವಾಲಾಗುತ್ತದೆ. ಆದ್ದರಿಂದ, ಈ ಕೆಳಗಿನ ಅಂಶಗಳು ಗಮನದಲ್ಲಿರಲಿ:
ನಿಮಗೆ ಆಸಕ್ತಿಯಿರುವಕ್ಷೇತ್ರದಲ್ಲಿ ಮಾರ್ಗದರ್ಶಕರಿಗೆ ವ್ಯಾಪಕವಾದ ಶೈಕ್ಷಣಿಕ, ಸ್ವಂತಅನುಭವಅಥವಾತರಬೇತಿಯಿದ್ದು ಆ ಕ್ಷೇತ್ರದಲ್ಲಿ ನೈಪುಣ್ಯತೆಯಿರಬೇಕು; ಆ ಕ್ಷೇತ್ರದಲ್ಲಿ ಮುಂದೇನಾಗಬಹುದೆಂಬ ದೂರದೃಷ್ಟಿಯಿರಬೇಕು. ವಿಧ್ಯಾರ್ಥಿಗಳಿಗೆ ಸಹಾಯ ಮಾಡುವ ಮನೋಭಾವ, ತಾಳ್ಮೆ ಮತ್ತು ಸಂವಹನಾ ಶಕ್ತಿಯಿರಬೇಕು.ಇಂತಹ ನೈಪುಣ್ಯತೆ ಶಿಕ್ಷಕರುಅಥವಾ ಪೋಷಕರಲ್ಲಿದ್ದರೆಅವರೇನಿಮ್ಮಮಾರ್ಗದರ್ಶಕರಾಗಬಹುದು.

ಯಾವ ವೃತ್ತಿ? ಯಾವಕೋರ್ಸ್?

ಮಾರ್ಗದರ್ಶಕರನ್ನು ಗುರುತಿಸಿದ ಮೇಲೆ, ಅವರೊಡನೆ ಮುಕ್ತವಾಗಿ ನಿಮ್ಮ ಬದುಕಿನ ಕನಸುಗಳ ಕುರಿತು ಚರ್ಚಿಸಿ. ನಿಮಗೆ ಆಸಕ್ತಿಯಿರುವ ವೃತ್ತಿ ಮತ್ತು ಆ ವೃತ್ತಿಗೆ ಬೇಕಾಗುವ ಕೌಶಲ್ಯಗಳು ನಿಮ್ಮಲ್ಲಿವೆಯೇಎಂಬುದು ಮುಖ್ಯವಾಗುತ್ತದೆ.
ಇತ್ತಿಚೆಗೆ ನಡೆದ ಸರ್ವೆಗಳೂ ಸೇರಿದಂತೆ, ಅನೇಕ ಸರ್ವೆಗಳ ಪ್ರಕಾರ, ನಮ್ಮಪಧವೀಧರರಿಗೆ [ಎಂಜಿನಿಯರಿಂಗ್ ಮತ್ತು ಎಂ.ಬಿ.ಎ. ಸೇರಿದಂತೆ] ಹೆಚ್ಚಿನ ಮಟ್ಟಿಗೆಉದ್ಯೋಗಕ್ಕೆಅಗತ್ಯವಾದ ಕೌಶಲ್ಯಗಳಿರುವುದಿಲ್ಲ. ಹಾಗಾಗಿಯೇ, ಅನೇಕರಿಗೆಕ್ಯಾಂಪಸ್‍ನಲ್ಲಿ ನಡೆಯುವ ನೇರವಾದ ನೇಮಕಾತಿಗಳಲ್ಲಿ ಸೆಲೆಕ್ಷನ್ ಆಗುವುದಿಲ್ಲ; ಹಾಗೊಮ್ಮೆಆದರೂ ಅವರುಗಳಿಗೆಅಗಾಧವಾದತರಬೇತಿ ನೀಡಬೇಕಾಗುತ್ತದೆ.ಆದ್ದರಿಂದ, ನಿಮಗಿಷ್ಟವಿರುವಉದ್ಯೋಗಕ್ಕೆಅಗತ್ಯವಾದ ಕೌಶಲ್ಯಗಳನ್ನು ಪಡೆಯಲು ಮಾರ್ಗೋಪಾಯಗಳನ್ನು ಪತ್ತೆಹಚ್ಚಿ, ಅದರಸಾಧಕ ಬಾದಕಗಳನ್ನುಪರಿಶೀಲಿಸಿ.ಇದಾದ ನಂತರವೇವೃತ್ತಿ,ಕೋರ್ಸ್ ಮತ್ತುಕಾಲೇಜ್‍ಕುರಿತುಅಂತಿಮ ನಿರ್ಧಾರವನ್ನು ಮಾಡಬೇಕು.

ಮಾಗದರ್ಶಕರ ಸಂಪರ್ಕಜಾಲವನ್ನು ಬಳಸಿಕೊಳ್ಳಿ

ಮಾರ್ಗದರ್ಶಕರಿಗೆ ವ್ಯವಹಾರ ಮತ್ತುವೃತ್ತಿಗೆ ಪ್ರಸ್ತುತವಾದ ವ್ಯಾಪಕವಾದ ಸಂಪರ್ಕಗಳಿರುತ್ತವೆ. ಅವರ ಮೂಲಕವೇ ವೃತ್ತಿಪರ ಜಾಲತಾಣಗಳ [ತಿತಿತಿ.ಟiಟಿಞeಜIಟಿ.ಛಿom ಇತ್ಯಾದಿ] ಸಂಪರ್ಕಗಳನ್ನು ನೀವು ಬೆಳೆಸಿಕೊಳ್ಳಿ. ಈ ಸಂಪರ್ಕಗಳಿಂದಶೈಕ್ಷಣಿಕಮತ್ತು ವೃತ್ತಿಪರಜೀವನದಲ್ಲಿ ನಿಮಗೆ ಅನುಕೂಲವಾಗುತ್ತದೆ. ಉದಾಹರಣೆಗಾಗಿ ಇಂಟರ್ನ್‍ಶಿಪ್, ಸಮ್ಮರ್ ಪ್ರಾಜೆಕ್ಟ್ಸ್‍ಇತ್ಯಾದಿ.

ಯಶಸ್ವೀ ವೃತ್ತಿಜೀವನಕ್ಕೆಅಗತ್ಯವಾದ ಮೌಲ್ಯಗಳು

ಎಲ್ಲಾ ವೃತ್ತಿಗಳಿಗೂ ತನ್ನದೇಆದ, ನಿಯಮಗಳು, ನಿಬಂಧನೆಗಳು,ಕಟ್ಟುಕಟ್ಟಲೆಗಳು,ಮೌಲ್ಯಗಳು ರೂಢಿಗಳಿರುವುದು ಸಹಜ. ಮಾರ್ಗದರ್ಶಕರೊಡನೆ ಚರ್ಚಿಸಿ, ಇವುಗಳ ಮಹತ್ವವನ್ನುಅರಿತುವಿಧ್ಯಾರ್ಥಿಜೀವನದಿಂದಲೇಅವುಗಳನ್ನು ಮೈಗೂಡಿಸಿಕೊಳ್ಳಬೇಕು.ಆಗಲೇ, ನಿಮ್ಮ ವ್ಯಕ್ತಿತ್ವಎಲ್ಲರಿಗೂಆದರ್ಶಪ್ರಾಯವಾಗಿರುವಂತೆ ರೂಪಿಸಿಕೊಳ್ಳಬಹುದು.

ಸಾಮಾನ್ಯವಾಗಿ ಮಾರ್ಗದರ್ಶನ ಮಾಡುವವರಿಗೆಇದೊಂದು ಸದಭಿರುಚಿಯಷ್ಟೇ ಹೊರತು ಸಂಪಾದನೆಯ ಮಾರ್ಗವಲ್ಲ. ಆದ್ದರಿಂದ, ಮಾರ್ಗದರ್ಶಕರ ಆಸಕ್ತಿ ಮತ್ತುನಿಮ್ಮೊಡನೆ ಕಳೆಯುವ ಸಮಯದಸಲುವಾಗಿ ಸೂಕ್ತವಾದಗೌರವಅಭಿನಂದನೆಯನ್ನು ಸಲ್ಲಿಸಿ.

ಬದುಕುಅರ್ಥಪೂರ್ಣವಾಗಬೇಕಾದರೆ, ಕನಸುಗಳು ಮಹತ್ವಾಕಾಂಕ್ಷೆಯಾಗಿಸಾಧನೆಯ ಶಿಖರವನ್ನು ನೀವು ತಲುಪಬೇಕು. ಆದರೆ, ಇಂದಿನ ಸ್ಪರ್ದಾತ್ಮಕ ಮತ್ತು ಚಲನಶೀಲ ಯುಗದಲ್ಲಿ ದೀರ್ಘಕಾಲೀನ ವೃತ್ತಿಪರಯಶಸ್ಸು ಸುಲಭವಾಗಿಸಿಗುವುದಿಲ್ಲ. ಮಾರ್ಗದರ್ಶಕರದೃಷ್ಟಿಕೋನ,ವೃತ್ತಿಯಒಳನೋಟ ಮತ್ತು ಸಲಹೆ ನಿಮಗೆ ಸಿಕ್ಕಿದರೆ, ಹಂತ ಹಂತಕ್ಕೆಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.

ಆದ್ದರಿಂದ ಮರೆಯದಿರಿ.ಶಿಕ್ಷಣ ಮತ್ತು ವೃತ್ತಿಜೀವನದ ರೂಪುರೇಷೆಗಳನ್ನು ಮಾರ್ಗದರ್ಶಕರೊಡನೆ ಸಮಾಲೋಚಿಸಿಯೇ ನಿರ್ಧರಿಸಿ. ಆಗಲೇ, ನಿಮ್ಮ ಪರಿಶ್ರಮಕ್ಕೆ ಸಫಲತೆದೊರಕಿ, ಉಜ್ವಲ ಭವಿಷ್ಯ ನಿಮ್ಮದಾಗಬಲ್ಲದು.

 

pdf_iconDownload PDF Document

 

Leave a Reply

Your email address will not be published. Required fields are marked *

/* ]]> */