ಎಂಜಿನಿಯರಿಂಗ್ ಕೋರ್ಸ್‌ಗೆ ಪರ್ಯಾಯ ಎನ್ನಬಹುದಾದ ಕೋರ್ಸ್‌ಗಳು

ಈ ಬಾರಿ ಕರ್ನಾಟಕದ ಸಿಇಟಿ ಕೌಂಸೆಲಿಂಗ್ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದ್ದು ಪಿಯುಸಿ ಮತ್ತು ಸಿಇಟಿ ಪರೀಕ್ಷೆಗಳನ್ನು ಮುಗಿಸಿ ಎಂಜಿನಿಯರಿಂಗ್ ಸೀಟ್‌ಗಾಗಿ ಕಾದಿರುವ ವಿದ್ಯಾರ್ಥಿಗಳ ಭವಿಷ್ಯ ಆತಂಕದಲ್ಲಿದೆ.

ಇದಲ್ಲದೆ, ಬೇಡಿಕೆಯಲ್ಲಿರುವ ಎಂಜಿನಿಯರಿಂಗ್ ವಿಭಾಗದ ಸೀಟ್‌ಗಳು ಉತ್ತಮವಾದ ಕಾಲೇಜಿನಲ್ಲಿ, ಅದೂ ಸರ್ಕಾರಿ ಕೋಟಾದಲ್ಲಿ ಸಿಗುವುದು ಸುಲಭವಲ್ಲ. ಹಾಗೊಂದು ವೇಳೆ ಸಿಕ್ಕರೂ ಅಥವಾ ಖಾಸಗಿ ಕಾಲೇಜುಗಳಲ್ಲಿನ ದುಬಾರಿ ಸೀಟ್ ಸಿಕ್ಕಿ ಎಂಜಿನಿಯರಿಂಗ್ ಪದವಿ ಮುಗಿಸಿದ ಮೇಲೆ, ಉನ್ನತ ಮಟ್ಟದ ಫಲಿತಾಂಶ ದೊರಕದಿದ್ದರೆ ಕೆಲಸ ಸಿಗುವುದೂ ಖಚಿತವಿಲ್ಲ. ಏಕೆಂದರೆ, ಎಂಜಿನಿಯರಿಂಗ್ ಪದವೀಧರರಲ್ಲಿ ಉದ್ಯಮಗಳಿಗೆ ಬೇಕಾಗುವ ಕೌಶಲಗಳ ಕೊರತೆ ಸುಮಾರು ಶೇ 75 ವಿದ್ಯಾರ್ಥಿಗಳಲ್ಲಿದೆ ಎನ್ನುವ ಅಭಿಪ್ರಾಯ ಹಲವಾರು ವರ್ಷಗಳಿಂದ ಉದ್ಯೋಗದಾತರಲ್ಲಿದೆ.

ಇಷ್ಟೆಲ್ಲಾ ಸಮಸ್ಯೆಗಳೂ, ಸವಾಲುಗಳಿದ್ದರೂ ಎಂಜಿನಿಯರಿಂಗ್ ಕೋರ್ಸ್ ಬಗ್ಗೆ ಅಸಮರ್ಥನೀಯವಾದ ವ್ಯಾಮೋಹ ಮುಂದುವರೆಯುತ್ತಿದೆ. ಇದಕ್ಕೆ ಎಂಜಿನಿಯರಿಂಗ್ ಕೋರ್ಸ್ಗೆ ಪರ್ಯಾಯ ಎನ್ನಬಹುದಾದ ಕೋರ್ಸ್ಗಳ ಬಗ್ಗೆ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಅರಿವಿಲ್ಲದಿರುವುದೂ ಕಾರಣವಾಗಿದೆ.

ಈ ಪರ್ಯಾಯ ಕೋರ್ಸ್ಗಳು ಯಾವುವು?

ಉದಾಹರಣೆಗೆ, ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ಬದಲು ಬಿಸಿಎ ಅಥವಾ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಮಾಡಬಹುದು. ಅದೇ ರೀತಿ, ಎಂಜಿನಿಯರಿಂಗ್ (ಎಲೆಕ್ಟಿçಕಲ್ ) ಬದಲು ಬಿ.ಎಸ್ಸಿ (ಅಪ್ಲೈಡ್ ಫಿಸಿಕ್ಸ್), ಎಂಜಿನಿಯರಿಂಗ್ (ಎಲೆಕ್ಟಾçನಿಕ್ಸ್) ಬದಲು ಬಿ.ಎಸ್ಸಿ (ಎಲೆಕ್ಟಾçನಿಕ್ಸ್), ಎಂಜಿನಿಯರಿಗ್ (ಸಿವಿಲ್) ಬದಲು ಬಿ.ಎಸ್ಸಿ (ಜಿಯಾಲಜಿ), ಎಂಜಿನಿಯರಿಂಗ್ (ಕೆಮಿಕಲ್) ಬದಲು ಬಿ.ಎಸ್ಸಿ (ಕೆಮಿಸ್ಟ್ರಿ), ಎಂಜಿನಿಯರಿಂಗ್ (ಏರೋನಾಟಿಕಲ್) ಬದಲು ಬಿಎಸ್ಸಿ (ಏರೋನಾಟಿಕಲ್) ಇತ್ಯಾದಿ. ಹಾಗೂ, ಈ ಪರ್ಯಾಯ ಕೋರ್ಸ್ಗಳ ಜೊತೆ ಅರೆಕಾಲಿಕ ಕೌಶಲಾಭಿವೃದ್ಧಿ ಕೋರ್ಸ್ಗಳನ್ನು ಮಾಡಿ ಎಂಜಿನಿಯರಿಂಗ್ ಕೋರ್ಸಿಗೆ ಸರಿಸಮಾನ ಎನ್ನಬಹುದಾದ ತಜ್ಞತೆಯನ್ನು ಪಡೆಯಬಹುದು. ಉದಾಹರಣೆಗೆ, ಕಂಪ್ಯೂಟರ್ ಸೈನ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್ಗಳಾದ ಮೆಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಇತ್ಯಾದಿ ಕೋರ್ಸ್ಗಳನ್ನು ಮಾಡಬಹುದು. ಇಂತಹ ಕೌಶಲಾಭಿವೃದ್ಧಿ ಕೋರ್ಸ್ಗಳು ಎಂಜಿನಿಯರಿAಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇವೆ. ವಿಶೇಷವೇನೆಂದರೆ, ಸಾವಿರಾರು ಕೋರ್ಸ್ಗಳು ‘ಮೂಕ್’ (ಮ್ಯಾಸ್ಸೀವ್ ಓಪನ್ ಆನ್‌ಲೈನ್ ಕೋರ್ಸ್”) ವೇದಿಕೆಯಡಿ ಉಚಿತವಾಗಿಯೂ ಲಭ್ಯ (https://www.mooc.org/)

ಹಾಗಾಗಿ, ವೃತ್ತಿಜೀವನದ ಗುರಿಯನ್ನು ಸಾಧಿಸಲು ಎಂಜಿನಿಯರಿAಗ್ ಕೋರ್ಸ್ ಅಲ್ಲದೆ ಅನೇಕ ಪರ್ಯಾಯ ಮಾರ್ಗಗಳಿದ್ದು, ಈ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಗಮನ ಹರಿಸಿ, ಎಂಜಿನಿಯರಿಂಗ್ ಕೋರ್ಸ್ ಕುರಿತ ಅಭಿಪ್ರಾಯವನ್ನು ಪುನರ್ಮೌಲ್ಯಗೊಳಿಸಬೇಕು. ಪ್ರಮುಖವಾಗಿ, ಸ್ವಾಭಾವಿಕ ಆಸಕ್ತಿ ಮತ್ತು ಒಲವಿನ ಆಧಾರದ ಮೇಲೆ ರೂಪಿಸಿದ ವೃತ್ತಿಯೋಜನೆಯನ್ನು, ಅನ್ಯ ಮಾರ್ಗಗಳಿಂದ ಅನುಷ್ಠಾನಗೊಳಿಸಬಹುದೇ ಎಂದು ಪರಿಶೀಲಿಸಬೇಕು.

Download PDF Document

About author View all posts Author website

V Pradeep Kumar

Leave a Reply

Your email address will not be published. Required fields are marked *