Q1: ನಾನು ಬಿಟೆಕ್ (ಕಂಪ್ಯೂಟರ್ ಸೈನ್ಸ್) ಮಾಡುತ್ತಿದ್ದು, ಮುಂದೆ ಯಾವ ವಿಷಯದಲ್ಲಿ ಎಂಟೆಕ್ ಮಾಡಬಹುದು?
ಎಂಟೆಕ್ ಕೋರ್ಸ್ ಅನ್ನು ಕಂಪ್ಯೂಟರ್ ಸೈನ್ಸ್, ಐಟಿ, ರೊಬಾಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ದೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ, ಮೆಷಿನ್ ಲರ್ನಿಂಗ್ ಮುಂತಾದ ವಿಷಯಗಳಲ್ಲಿ ಮಾಡಬಹುದು. ಯಾವ ವಿಷಯದಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯಿದೆ ಎನ್ನುವುದನ್ನು ಗುರುತಿಸಿ, ಮುಂದಿನ ನಿರ್ಧಾರವನ್ನು ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
Q2: ನಾನು ಐಟಿಐ (ಮೆಕ್ಯಾನಿಕಲ್ ಮತ್ತು ಎಲೆಕ್ಟಿçಕಲ್) ಮಾಡುತ್ತಿದ್ದು, ಮುಂದೆ ಎಂಜಿನಿಯರಿAಗ್ ಮಾಡುವ ಗುರಿಯಿದೆ. ಐಟಿಐ ನಂತರ ಏನು ಮಾಡಬೇಕು? ಡಿಪ್ಲೊಮಾ ಮಾಡಿದರೆ ಯಾವ ಶಾಖೆ ಸೂಕ್ತ?
ಐಟಿಐ ಆದ ಮೇಲೆ ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೊಮಾ ( ಮೆಕ್ಯಾನಿಕಲ್, ಆಟೋಮೊಬೈಲ್, ಎಲೆಕ್ಟಿçಕಲ್, ಮೆಕಾಟ್ರಾನಿಕ್ಸ್) ಮಾಡಬಹುದು. ಇದಾದ ನಂತರ, ಲ್ಯಾಟರಲ್ ಎಂಟ್ರಿ ಮೂಲಕ ಎಂಜಿನಿಯರಿAಗ್ ಮಾಡಬಹುದು.
Q3: ಬಿಎ ಪದವಿ ಕೋರ್ಸ್ ಮಾಡಲು ಮನೋವಿಜ್ಞಾನ ಮತ್ತು ಸಮಾಜಶಾಸ್ತç ವಿಷಯಗಳಲ್ಲಿ ಯಾವುದು ಒಳ್ಳೆಯದು?
ನಮ್ಮ ಅಭಿಪ್ರಾಯದಂತೆ, ಮನೋವಿಜ್ಞಾನದಲ್ಲಿ ಉನ್ನತ ಶಿಕ್ಷಣಕ್ಕೂ ಹಾಗೂ ವೃತ್ತಿಜೀವನವನ್ನು ರೂಪಿಸಿಕೊಳ್ಳಲು, ಹೆಚ್ಚಿನ ಅವಕಾಶಗಳಿವೆ. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಮೊದಲು ಈ ವಿಷಯದಲ್ಲಿ ನಿಮಗೆ ಸ್ವಾಭಾವಿಕ ಆಸಕ್ತಿಯಿದೆಯೇ ಎಂದು ಖಚಿತಪಡಿಸಿಕೊಳ್ಳಿ.
Q4: ನಾನು ಪಿಯುಸಿ (ಕಲಾ ವಿಭಾಗ) ಮುಗಿಸಿ ಮುಂದೆ ಬಿಎ, ಎಲ್ಎಲ್ಬಿ ಮಾಡಬೇಕು. ಬೆಂಗಳೂರಿನ ಕಾಲೇಜುಗಳು ಮತ್ತು ಸ್ಕಾಲರ್ಶಿಪ್ (ಪರಿಶಿಷ್ಟ ಜಾತಿ) ಬಗ್ಗೆ ಮಾಹಿತಿ ನೀಡಿ.
ಬೆಂಗಳೂರಿನಲ್ಲಿ ಕಾನೂನು ಕೋರ್ಸ್ ಮಾಡಲು ಅನೇಕ ಕಾಲೇಜುಗಳಿವೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://www.collegesearch.in/integrated-law/colleges-bangalore
ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಅರ್ಹತೆ, ಆದಾಯ, ಜಾತಿ ಇತ್ಯಾದಿ ಆಧಾರಗಳ ಮೇಲೆ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್ಶಿಪ್ ಸೌಲಭ್ಯಗಳಿವೆ. ಇದರ ಜೊತೆಗೆ ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್ಗಳು ಈ ನಿಟ್ಟಿನಲ್ಲಿ ಶಿಷ್ಯವೇತನ, ಅನುದಾನ, ಸ್ಕಾಲರ್ಶಿಪ್ ಸೌಲಭ್ಯಗಳನ್ನು ನೀಡುತ್ತಿವೆ. ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣಗಳನ್ನು ಗಮನಿಸಿ:
- https://scholarships.gov.in
- https://socialjustice.gov.in/scheme-cat
- https://www.buddy4study.com/article/karnataka-scholarships
Q5: ನಾನು ಈಗ ಎಸ್ಎಸ್ಎಲ್ಸಿ ಮುಗಿಸಿದ್ದು ಮುಂದೆ ಯುಪಿಎಸ್ಸಿ ಪರೀಕ್ಷೆಯ ಮೂಲಕ ಐಎಎಸ್ ಅಧಿಕಾರಿಯಾಗುವ ಆಸೆಯಿದೆ. ಪಿಯುಸಿ ಮತ್ತು ಪದವಿಯನ್ನು ಯಾವ ವಿಭಾಗದಲ್ಲಿ ಮಾಡಿದರೆ ಒಳ್ಳೆಯದು?
ಐಎಎಸ್ ಅಧಿಕಾರಿಯಾಗಲು, ಯುಪಿಎಸ್ಸಿ ಆಯೋಜಿಸುವ ಮೂರು ಹಂತಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿ, ಆಯ್ಕೆಯಾಗಬೇಕು:
- ಬಹು ಆಯ್ಕೆ ಮಾದರಿಯ ಪೂರ್ವಭಾವಿ ಪರೀಕ್ಷೆ.
- ಪ್ರಬಂಧ ರೂಪದ ಮುಖ್ಯ ಪರೀಕ್ಷೆ.
- ಸಂದರ್ಶನ/ವ್ಯಕ್ತಿತ್ವ ಪರೀಕ್ಷೆ.
ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿಟೆಕ್ ಮುಂತಾದ ಯಾವುದಾದರೂ ಪದವಿ ಕೋರ್ಸ್ ಮುಗಿಸಿದ ನಂತರ ಯುಪಿಎಸ್ಸಿ ಪರೀಕ್ಷೆಗಳಲ್ಲಿ ಭಾಗವಹಿಸಲು ಅರ್ಹತೆ ಸಿಗುತ್ತದೆ. ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ನೀವು ಆಯ್ಕೆ ಮಾಡುವ ಐಚ್ಛಿಕ ವಿಷಯಕ್ಕೆ ಸಂಬAಧಿಸಿದ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ಹಾಗಾಗಿ, ನಿಮಗೆ ಹೆಚ್ಚಿನ ಆಸಕ್ತಿ ಮತ್ತು ಪರಿಣತಿಯಿರುವ ವಿಷಯದಲ್ಲಿ ಪದವಿ ಕೋರ್ಸ್ ಮಾಡುವುದು ಸೂಕ್ತ. ಆದರೆ, ಪದವಿ ಕೋರ್ಸ್ಗಳಿಗೆ ಮಾಡುವ ಅಧ್ಯಯನಕ್ಕೂ ಯುಪಿಎಸ್ಸಿ ಪರೀಕ್ಷೆಗೆ ಮಾಡಬೇಕಾದ ಅಧ್ಯಯನಕ್ಕೂ ಇರುವ ಗಮನಾರ್ಹವಾದ ವ್ಯತ್ಯಾಸಗಳನ್ನು ಗಮನಿಸಿ, ಪರಿಣಾಮಕಾರಿ ಅಧ್ಯಯನದ ಕಾರ್ಯತಂತ್ರವನ್ನು ರೂಪಿಸಬೇಕು.
ಪರೀಕ್ಷೆಗಳ ಮಾದರಿಯನ್ನು ಅರ್ಥೈಸಿಕೊಂಡು, ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ಖುದ್ದಾಗಿ ಅಥವಾ ಕೋಚಿಂಗ್ ಮುಖಾಂತರ ತಯಾರಿ ಮಾಡಬಹುದು. ಈ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಮಗ್ರವಾದ ಮತ್ತು ಆಳವಾದ ಓದುವಿಕೆ ಇರಬೇಕು. ಜೊತೆಗೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಅಧ್ಯಯನ ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
Q6: ನನಗೆ ಮುಂದೆ ಎಂಬಿಎ ಮಾಡುವ ಇಚ್ಛೆಯಿದ್ದು, ಯಾವ ವಿಷಯದಲ್ಲಿ ಮಾಡಬಹುದು?
ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್ಮೆಂಟ್ ಸಿದ್ದಾಂತದ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸಿನಲ್ಲಿ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು, ಲಾಜಿಸ್ಟಿಕ್ಸ್, ಬಿಸಿನೆಸ್ ಅನಾಲಿಟಿಕ್ಸ್, ಉತ್ಪಾದನೆ, ಇಂಟರ್ನ್ಯಾಷನಲ್ ಬಿಸಿನೆಸ್ ಮುಂತಾದ ವಿಭಾಗಗಳಿದ್ದು ನಿಮ್ಮ ವೃತ್ತಿಯೋಜನೆಯಂತೆ ಆಯ್ಕೆ ಮಾಡಿಕೊಳ್ಳಬಹುದು. ಮ್ಯಾನೇಜ್ಮೆಂಟ್ ತತ್ವ ಮತ್ತು ಸಿದ್ದಾಂತಗಳು, ಕಾನೂನು, ಸಂಖ್ಯಾಶಾಸ್ತç, ಮಾನವ ಸಂಪನ್ಮೂಲ, ಅರ್ಥಶಾಸ್ತç, ಮಾರ್ಕೆಟಿಂಗ್ ನಿರ್ವಹಣೆ, ಬಿಸಿನೆಸ್ ಸಂವಹನ ಇತ್ಯಾದಿ ವಿಷಯಗಳು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೂ ಇರುತ್ತದೆ. ಎಂಬಿಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg
Q7: ನನ್ನ ನಾಲ್ಕುವರೆ ವರ್ಷದ ಮಗಳು ಬಾಲವಾಡಿಯಲ್ಲಿ ಓದುತ್ತಿದ್ದು, ಎಲ್ಲಿಯವರೆಗೆ ಇಲ್ಲಿಯೇ ಓದಬಹುದು?
ನಮ್ಮ ಅಭಿಪ್ರಾಯದಂತೆ, ಶಾಲಾಪೂರ್ವ ಶಿಕ್ಷಣದ ನಂತರ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಮುಂದುವರಿಸಬಹುದು.
Q8: ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಮಾಡುತ್ತಿದ್ದು, ಬಿ.ಎಸ್ಸಿ (ಫಾರೆಸ್ಟ್ರಿ) ಕೋರ್ಸ್ ಮಾಡುವ ಆಸಕ್ತಿಯಿದೆ. ಆದರೆ, ಉದ್ಯೋಗಾವಕಾಶಗಳು ಹೇಗಿವೆ?
ಪಿಯುಸಿ (ವಿಜ್ಞಾನ) ನಂತರ, ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬಂದಿರುವ ನಾಲ್ಕು ವರ್ಷದ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಕೋರ್ಸ್ ಮುಖಾಂತರ ಆಕರ್ಷಕವಾದ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು. ಜಾಗತಿಕ ತಾಪಮಾನದ ಏರಿಕೆ ಮತ್ತು ಪರಿಸರ ವ್ಯವಸ್ಥೆಯ ಬಗ್ಗೆ ಕಾಳಜಿ, ವನ್ಯಜೀವಿಗಳ ಮೂಲಭೂತ ಅಂಶಗಳು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ, ಜಲವಿಜ್ಞಾನ, ಮಣ್ಣು ಮತ್ತು ನೀರಿನ ಸಮಸ್ಯೆ, ತೋಟಗಾರಿಕೆ ಇಂತಹ ವಿಷಯಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು, ಈ ಕೋರ್ಸ್ ಮಾಡಬಹುದು. ಸಿರ್ಸಿ ಮತ್ತು ಕೊಡಗಿನ ಪೊನ್ನಂಪೇಟೆಯಲ್ಲಿರುವ ಎರಡು ಸರ್ಕಾರಿ ಕಾಲೇಜುಗಳಿಗೆ ಸಿಇಟಿ ಪರೀಕ್ಷೆಯ ಮೂಲಕ ಸೀಟ್ ಹಂಚಿಕೆಯಾಗುತ್ತದೆ.
ಈ ಕೋರ್ಸ್ ನಂತರ ಸರ್ಕಾರದ ಅರಣ್ಯ ಇಲಾಖೆ ಮತ್ತು ಖಾಸಗಿ ವಲಯದ ಕೃಷಿ ವ್ಯಾಪಾರೋದ್ಯಮ ಕಂಪನಿಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ತಜ್ಞತೆಗಾಗಿ ಎಂ.ಎಸ್ಸಿ/ಪಿ.ಎಚ್ಡಿ ಮಾಡಬಹುದು. ಈ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/JlMo33YxTiA