Q1: ದ್ವಿತೀಯ ಪಿಯುಸಿ ಮುಗಿಸಿ, ಬಿಟೆಕ್ (ಕಂಪ್ಯೂಟರ್ ಸೈನ್ಸ್) ಅಥವಾ ಆರ್ಕಿಟೆಕ್ಚರ್ ಮಾಡಬೇಕೆಂದುಕೊAಡಿದ್ದೇನೆ. ಆದರೆ, ಇವೆರಡರ ನಡುವೆ ಆಯ್ಕೆ ಮಾಡುವುದು ಹೇಗೆ?
ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಲು, ಆಸಕ್ತಿ, ಅಭಿರುಚಿ ಮತ್ತು ವೃತ್ತಿ ಸಂಬAಧಿತ ಕೌಶಲಗಳು ಅಗತ್ಯ.
ಎಂಜಿನಿಯರಿAಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ಗಳಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ ಮುಂತಾದ ಕೌಶಲಗಳು ಅಗತ್ಯ. ಆದರೆ ಯಶಸ್ವೀ ಆರ್ಕಿಟೆಕ್ಟ್ ಆಗಲು, ಈ ಕೌಶಲಗಳ ಜೊತೆಗೆ ಈ ಕ್ಷೇತ್ರದಲ್ಲಿ ಅಭಿರುಚಿ, ಸೃಜನಶೀಲತೆ, ವಿನ್ಯಾಸ, ಗ್ರಾಹಕ ಸಂಬAಧಗಳ ಮತ್ತು ಸಮಯದ ನಿರ್ವಹಣೆಯ ಕೌಶಲಗಳು ಅತ್ಯಗತ್ಯ. ಹಾಗಾಗಿ, ಅಂತಿಮ ಆಯ್ಕೆಯ ಮುನ್ನ, ನಿಮ್ಮಲ್ಲಿ ಈ ಕೌಶಲಗಳಿವೆಯೇ ಎಂದು ವಿಶ್ಲೇಷಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
Q2: ಓದಿನೆಡೆ ಏಕಾಗ್ರತೆ ಬೆಳೆಸಿಕೊಳ್ಳುವುದು ಹೇಗೆ?
ನಿಮ್ಮ ವಿದ್ಯಾಭ್ಯಾಸದ ನಂತರ ವೃತ್ತಿಪರ ಮತ್ತು ವೈಯಕ್ತಿಕ ಬದುಕಿನ ಕನಸುಗಳೇನು? ನಿಮ್ಮ ಭವಿಷ್ಯದ ಕನಸುಗಳಂತೆ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ವಿಯಾಗಲು ಸ್ಪಷ್ಟವಾದ, ಸಾಧಿಸಬಹುದಾದ ಗುರಿಗಳನ್ನು ನಿಗದಿಪಡಿಸಿ. ಈ ಗುರಿಗಳು ದೃಡವಾಗಿದ್ದರೆ, ಸ್ವಯಂಪ್ರೇರಣೆ ತಾನೇ ತಾನಾಗಿ ಮೂಡುತ್ತದೆ. ಪ್ರೇರಣೆಯೆಂದರೆ, ನಮ್ಮ ಗುರಿಗಳತ್ತ ನಮ್ಮನ್ನು ಕ್ರಿಯಾತ್ಮಕವಾಗಿಸುವ ಚಾಲನಾ ಶಕ್ತಿ. ಏಕೆಂದರೆ, ಅತ್ಯಂತ ಶಕ್ತಿಶಾಲಿಯಾದ ಆಂತರಿಕ ಪ್ರೇರಣೆಯೇ ನಮ್ಮ ಸ್ಪೂರ್ತಿಗೂ, ಚೈತನ್ಯಕ್ಕೂ, ಕಾರ್ಯತತ್ಪರತೆಗೂ ಮೂಲ. ಪ್ರೇರಣೆ, ಬದುಕಿನ ಕನಸುಗಳನ್ನು ಕಾಣುವುದರ ಜೊತೆಗೆ ನಮ್ಮಲ್ಲಿ ಅವುಗಳನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವನ್ನು ಹುಟ್ಟುಹಾಕುತ್ತದೆ. ಹಾಗಾಗಿ, ಈ ಸ್ವಯಂಪ್ರೇರಣೆಯ ಚಾಲನಾ ಶಕ್ತಿಯಿಂದಲೇ ಓದಿನೆಡೆ ನಿಮ್ಮ ಏಕಾಗ್ರತೆಯನ್ನು ಬೆಳೆಸಿಕೊಳ್ಳಬಹುದು. ಇದಲ್ಲದೆ, ನಿಮ್ಮ ಓದುವಿಕೆ ಪರಿಣಾಮಕಾರಿಯಾಗಿರಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/3PzmKRaJHmk
Q3: ಕಂಪ್ಯೂಟರ್ ವಿಜ್ಞಾನದಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಮುಂದೇನು ಮಾಡಬಹುದು?
ಡಿಪ್ಲೊಮಾ ನಂತರ ಸಿಇಟಿ ಪ್ರವೇಶ ಪರೀಕ್ಷೆಯನ್ನು ಬರೆದು, ಲ್ಯಾಟರಲ್ ಎಂಟ್ರಿ ಮೂಲಕ ಎರಡನೇ ವರ್ಷದ ಬಿಟೆಕ್‌ಗೆ ಸೇರಬಹುದು. ಅಥವಾ, ನಿಮಗೆ ಸೂಕ್ತವೆನಿಸುವ ಕೆಲಸಕ್ಕೆ ಸೇರಿ, ಬಿಟೆಕ್ (ಅರೆಕಾಲಿಕ) ಮಾಡಬಹುದು. ಬಿಟೆಕ್ ಮಾಡುವ ಆಸಕ್ತಿಯಿಲ್ಲದಿದ್ದರೆ, ಹೆಚ್ಚಿನ ತಜ್ಞತೆಗಾಗಿ, ನಿಮ್ಮ ಕ್ಷೇತ್ರಕ್ಕೆ ಸಂಬAಧಿಸಿದ ವಿಷಯದಲ್ಲಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಬಹುದು.
Q4: ನಾನು ನಿವೃತ್ತ ಸರ್ಕಾರಿ ನೌಕರ. ಸಮಯವನ್ನು ಸಾರ್ಥಕವಾಗಿ ಬಳಸಲು ಯಾವ ಕೋರ್ಸ್ ಮಾಡಬಹುದು?
ಸಾಮಾನ್ಯವಾಗಿ, ವೃತ್ತಿಯಿಂದ ನಿವೃತ್ತರಾದ ಬಳಿಕ, ಮನೆಯಿಂದಲೇ ನಿಮ್ಮ ಸಮಯಕ್ಕೆ ಅನುಗುಣವಾಗಿ ಅರೆಕಾಲಿಕ ಕೆಲಸಗಳನ್ನು ಮಾಡುವ ಅವಕಾಶಗಳು ಈಗ ಲಬ್ಯ. ನಿಮ್ಮ ಸಾಮರ್ಥ್ಯ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯನ್ನು ಪ್ರತಿಬಿಂಬಿಸುವ ಕ್ಷೇತ್ರಗಳ ಬಗ್ಗೆ ಚಿಂತಿಸಿ, ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಆಯ್ಕೆ ಮಾಡಿ. ಉದಾಹರಣೆಗೆ ಜಾಲತಾಣಗಳು, ಬ್ಲಾಗ್‌ಗಳು, ವಿಡಿಯೋಗಳಿಗೆ ವಿಷಯಾಭಿವೃದ್ಧಿ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್ ಮತ್ತು ಡಿಜಿಟಲೀಕರu,, ಬೋಧನೆ, ಗ್ರಾಹಕ ಸಂಬAಧಿತ ಸಂಶೋಧನೆ ಮತ್ತು ಸೇವೆಗಳು, ಮಾರುಕಟ್ಟೆಯ ಚಟುವಟಿಕೆಗಳು, ದತ್ತಾಂಶ ಪರಿಷ್ಕರಣೆ ಮತ್ತು ನಿರ್ವಹಣೆ ಮುಂತಾದ ಕ್ಷೇತ್ರಗಳನ್ನು ಪರಿಗಣಿಸಬಹುದು. ಕೋರ್ಸ್ ಆಯ್ಕೆಯ ಮಾಹಿತಿಗಾಗಿ ಗಮನಿಸಿ: https://www.mooc.org/
Q5: ಸರ್, ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುವ ಬಗ್ಗೆ ಮಾಹಿತಿ ಕೊಡಿ.
ನೀಟ್ (ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆ ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಈ ಸಲಹೆಗಳನ್ನು ಗಮನಿಸಿ:
- ಹಿಂದಿನ ವರ್ಷಗಳ ಕಟ್‌ಆಫ್ ರ‍್ಯಾಂಕಿAಗ್ ಮಾಹಿತಿಯನ್ನು ವಿಶ್ಲೇಷಿಸಿ, ನಿಮ್ಮ ಆದ್ಯತೆಯ ಅನುಸಾರ, ನಾನಾ ಕಾಲೇಜುಗಳಿಗೆ ಬೇಕಾಗಬಹುದಾದ ರ‍್ಯಾಂಕ್ ಮತ್ತು ಅಂಕಗಳ ಗುರಿಯನ್ನು ನಿಗದಿಪಡಿಸಿ.
- ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಖುದ್ದಾಗಿ ಅಥವಾ ಕೋಚಿಂಗ್ ಮೂಲಕ ತಯಾರಾಗಲು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
- ವಿಷಯಸೂಚಿಯ ಪ್ರಕಾರ ಮತ್ತು ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಗಮನಿಸಿ, ಅಣಕು-ಪರೀಕ್ಷೆ ಆಧಾರಿತ ತಯಾರಿಯನ್ನು, ನಿರಂತರವಾಗಿ ಮಾಡುತ್ತಿರಬೇಕು.
- ಪರೀಕ್ಷೆಯಲ್ಲಿ ಯಶಸ್ವಿಯಾಗಲು, ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಓದುವಿಕೆ ಇರಬೇಕು. ಮನೆಯಲ್ಲಿ ಓದುವಾಗ ಕಣ್ಣಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿರುತ್ತದೆ.
- ಹಾಗೂ, ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವಿಕೆಯ ಕಾರ್ಯತಂತ್ರಗಳಲ್ಲಿ ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು.
ಈ ಎಲ್ಲಾ ಕಾರ್ಯತಂತ್ರಗಳ ಜೊತೆಗೆ ಸಮಯದ ನಿರ್ವಹಣೆ, ಏಕಾಗ್ರತೆ, ಸಾಕಷ್ಟು ಪರಿಶ್ರಮ, ದೃಢತೆ, ಗೆಲ್ಲುವ ಆಶಾಭಾವನೆ ಅತ್ಯಗತ್ಯ. ಪರಿಣಾಮಕಾರಿ ಓದುವಿಕೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk
Q6: ಬಿಎಎಂಎಸ್ ಕೋರ್ಸ್ಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ.
ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ನೈಸರ್ಗಿಕ ವಿಪತ್ತುಗಳು ಮತ್ತು ಪಿಡುಗುಗಳ ಜೊತೆಗೆ ಜಗತ್ತಿನ ಜನಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣ ಹೆಚ್ಚುತ್ತಿದು,್ದ ಆರೋಗ್ಯಕ್ಕೆ ಸಂಬAಧಿಸಿದ ಎಲ್ಲಾ ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಹಾಗಾಗಿ, ಬಿಎಎಂಎಸ್ (ಬ್ಯಾಚಲರ್ ಅ¥s಼ï ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ) ಕೋರ್ಸಿಗೆ, ಭವಿಷ್ಯದಲ್ಲಿಯೂ ಬೇಡಿಕೆಯನ್ನು ನಿರೀಕ್ಷಿಸಬಹುದು. ಕೋರ್ಸ್ ನಂತರ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಬಹುದು. ಹಲವಾರು ವರ್ಷಗಳ ಅನುಭವದ ನಂತರ ಖುದ್ದಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ತಜ್ಞತೆಗಾಗಿ, ಎಂಎಸ್ (ಆಯುರ್ವೇದ) ಮಾಡಬಹುದು.
Q7: ಐಟಿಐ ಮುಗಿದ ನಂತರ ಬಿಎ (ರೆಗ್ಯುಲರ್) ಪದವಿಯನ್ನು ಪಡೆದಿದ್ದು ಈಗ ೩ ವರ್ಷದ ಎಲ್‌ಎಲ್‌ಬಿ ಕೋರ್ಸ್ಗೆ ಪ್ರವೇಶ ಪಡೆಯಬಹುದೇ?
ನೀವು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನ್ಯತೆಯಿರುವ ವಿಶ್ವವಿದ್ಯಾಲಯದಿಂದ ಬಿಎ ಪದವಿಯನ್ನು ಮಾಡಿರುವುದರಿಂದ, ಈಗ ಎಲ್‌ಎಲ್‌ಬಿ ಕೋರ್ಸ್‍ಗೆ ಪ್ರವೇಶವನ್ನು ಪಡೆಯಬಹುದು.
Q8: ನಾನು ಪಿಯುಸಿ ಮುಗಿಸಿದ್ದು ಈಗ ಬಿ.ಟೆಕ್ ಮಾಡಲಿಚ್ಛಿಸಿದ್ದೇನೆ. ಆದರೆ, ಬ್ರಾಂಚ್ ಆಯ್ಕೆಯಲ್ಲಿ ಗೊಂದಲವಿದೆ. ಬಿ.ಟೆಕ್ (ಬ್ರಾಂಚ್) ಆಯ್ಕೆ ಹೇಗೆ? ದಯವಿಟ್ಟು ತಿಳಿಸಿ.
ಎಂಜಿನಿಯರಿAಗ್ ಕೋರ್ಸಿನಲ್ಲಿ ೫೫ಕ್ಕೂ ಹೆಚ್ಚು ಸ್ಪೆಷಲೈಜೇಷನ್‌ಗಳಿವೆ ಎನ್ನಲಾಗುತ್ತದೆ. ಯಾವುದೇ ಸ್ಪೆಷಲೈಜೇಷನ್ ಮಾಡಿದರೂ ಸಹ, ಕೋರ್ಸ್ ಫಲಿತಾಂಶ ಉತ್ಕöÈಷ್ಟವಾಗಿದ್ದರೆ ಬೇಡಿಕೆ ಇದೆ. ಎಂಜಿನಿಯರಿAಗ್ ಕೋರ್ಸ್ ಮಾಡಲು ತಾರ್ಕಿಕ ಪ್ರತಿಪಾದನಾ ಕೌಶಲ, ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಕೌಶಲ ಮತ್ತು ವಿಶ್ಲೇಷಣಾ ಕೌಶಲಗಳ ಜೊತೆಗೆ ಆಯಾ ಸ್ಪೆಷಲೈಜೇಷನ್ ಸಂಬAಧಿತ ವಿಷಯಗಳಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇರಬೇಕು. ಈ ಸಲಹೆಗಳನ್ನು ಗಮನಿಸಿ:
- ನಿಮ್ಮ ಅಭಿರುಚಿ, ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಯಾವ ಕ್ಷೇತ್ರದಲ್ಲಿದೆ ಎಂದು ಗಮನಿಸಿ.
- ಅದರಂತೆ ವೃತ್ತಿ ಯೋಜನೆಯನ್ನು ಮಾಡಿ, ಎಲ್ಲಿಯವರೆಗೆ ಓದಬೇಕು ಎಂದು ನಿರ್ಧರಿಸಿ. ಸ್ನಾತಕೋತ್ತರ ಪದವಿಯ ಯೋಜನೆಯಿದ್ದರೆ, ಬಿ.ಟೆಕ್‌ನಲ್ಲಿ ಕೋರ್ ಬ್ರಾಂಚ್ ( ಸಿವಿಲ್, ಮೆಕ್ಯಾನಿಕಲ್, ಎಲೆಕ್ಟಿçಕಲ್, ಕಂಪ್ಯೂಟರ್ ಸೈನ್ಸ್) ಆಯ್ಕೆ ಮಾಡಿ, ಎಂ.ಟೆಕ್‌ನಲ್ಲಿ ಸ್ಪೆಷಲೈಜೇಷನ್ ಮಾಡುವುದು ಉತ್ತಮ.
- ನಿಮಗೆ ಆಸಕ್ತಿಯಿರುವ ಬಿ.ಟೆಕ್ ಕೋರ್ಸಿನ ಪಠ್ಯಕ್ರಮ, ಕೋರ್ಸ್ ಕಲಿಕೆಯ ಉದ್ದೇಶ ಮತ್ತು ಗುರಿ, ಕೋರ್ಸ್ ಯೋಜನೆ ಇತ್ಯಾದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಮ್ಮ ಅಗತ್ಯಕ್ಕೆ ಸರಿಹೊಂದುತ್ತದೆಯೇ ಎಂದು ಮೌಲ್ಯಮಾಪನ ಮಾಡಿ, ಕೋರ್ ಬ್ರಾಂಚ್/ಸ್ಪೆಷಲೈಜೇಷನ್ ಆಯ್ಕೆ ಮಾಡಿ. ಇದಾದ ನಂತರವೂ ಗೊಂದಲವಿದ್ದರೆ, ವೃತ್ತಿ ಸಲಹೆಗಾರರನ್ನು ಸಂಪರ್ಕಿಸಿ.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/Ly86IyOTYns