Q1: ಸಿಎ ಮಾಡಬೇಕಾದರೆ ತಯಾರಿ ಹೇಗಿರಬೇಕು?
ಸಿಎ ಮಾಡಲು ಎರಡು ಆಯ್ಕೆಗಳಿರುತ್ತದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಫೌಂಡೇಷನ್ ಕೋರ್ಸ್ಗೆ ಸೇರಿ, ಶೇ ೫೦ ಅಂಕಗಳನ್ನು ಪಡೆದರೆ, ಇಂಟರ್ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಬಿಕಾಂ ಪದವೀಧರರು ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲ. ಬಿಕಾಂ ಪದವಿಯಲ್ಲಿ ಕನಿಷ್ಠ ಶೇ ೫೫ ಅಂಕಗಳನ್ನು ಗಳಿಸಿ ನೇರವಾಗಿ ಸಿಎ ಇಂಟರ್ಮೀಡಿಯಟ್ ಕೋರ್ಸ್ ಮಾಡಬಹುದು. ಇನ್ನಿತರ ಪದವೀಧರರು ಕನಿಷ್ಠ ಶೇಕಡ ೬೦ ಪಡೆದಿರಬೇಕು.
ಜೊತೆಗೆ, ೩ ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್ಮೀಡಿಯೆಟ್ ನಂತರ ಫೈನಲ್ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಇಂಟರ್ಮೀಡಿಯೆಟ್ ಮತ್ತು ಫೈನಲ್ ಪರೀಕ್ಷೆಗಳಲ್ಲಿರುವ ಎರಡು ಗ್ರೂಪ್ಗಳನ್ನು ಪ್ರತ್ಯೇಕವಾಗಿ ಬರೆಯುವ ಅವಕಾಶವಿರುತ್ತದೆ. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಪರೀಕ್ಷೆಯ ಕಾರ್ಯತಂತ್ರವನ್ನು ರೂಪಿಸಬೇಕು.
ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆAಟ್ ಇನ್ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=RyNVWuRVjbA
Q2: ಆರ್ಕಿಟೆಕ್ಚರ್ಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ.
ದೇಶದ ತ್ವರಿತವಾದ ಬೆಳವಣಿಗೆ ಮತ್ತು ಅಭಿವೃದ್ಧಿಯಿಂದ, ಆರ್ಕಿಟೆಕ್ಚರ್ ಕ್ಷೇತ್ರಕ್ಕೆ ಉತ್ತಮವಾದ ಬೇಡಿಕೆಯಿದೆ. ಸೃಜನಶೀಲತೆ, ಕಲ್ಪನಾ ಶಕ್ತಿ, ವಿನ್ಯಾಸದ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಯೋಜನೆಯ ನಿರ್ವಹಣೆ, ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯತೆ ಹಾಗೂ ಆರ್ಕಿಟೆಕ್ಚರ್ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪಿಯುಸಿ ನಂತರ ಬ್ಯಾಚೆಲರ್ ಅ¥s಼ï ಆರ್ಕಿಟೆಕ್ಚರ್ (ಬಿ.ಆರ್ಕ್) ಕೋರ್ಸ್ ಅನ್ನು ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ನಾಟಾ) ಪ್ರವೇಶ ಪರೀಕ್ಷೆಯ ಮೂಲಕ ಮಾಡಬಹುದು.
ಈ ಕೋರ್ಸ್ ನಂತರ ಆರ್ಕಿಟೆಕ್ಟ್, ಅರ್ಬನ್ ಪ್ಲಾನಿಂಗ್, ಇಂಟೀಯರ್ ಡಿಸೈನಿಂಗ್, ಲ್ಯಾಂಡ್ಸ್ಕೇಪ್ ಡಿಸೈನಿಂಗ್, ಪ್ರಾಪರ್ಟಿ ಡೆವಲಪ್ಮೆಂಟ್ ಮುಂತಾದ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಉನ್ನತ ಶ್ರೇಣಿಯ ಕಾಲೇಜುಗಳಲ್ಲಿ ಕ್ಯಾಂಪಸ್ ನೇರ ನೇಮಕಾತಿಯ ಸೌಲಭ್ಯವಿರುತ್ತದೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲಿಯೂ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಅನುಭವವನ್ನು ಗಳಿಸಿದ ನಂತರ ಸ್ವಂತವಾಗಿ ಪ್ರಾಕ್ಟೀಸ್ ಮಾಡಬಹುದು.
Q3: ಆರ್ಕಿಟೆಕ್ಚರ್ಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ.
ದೇಶದ ತ್ವರಿತವಾದ ಬೆಳವಣಿಗೆ ಮತ್ತು ಅಭಿವೃದ್ಧಿಯಿಂದ, ಆರ್ಕಿಟೆಕ್ಚರ್ ಕ್ಷೇತ್ರಕ್ಕೆ ಉತ್ತಮವಾದ ಬೇಡಿಕೆಯಿದೆ. ಸೃಜನಶೀಲತೆ, ಕಲ್ಪನಾ ಶಕ್ತಿ, ವಿನ್ಯಾಸದ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಯೋಜನೆಯ ನಿರ್ವಹಣೆ, ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯತೆ ಹಾಗೂ ಆರ್ಕಿಟೆಕ್ಚರ್ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪಿಯುಸಿ ನಂತರ ಬ್ಯಾಚೆಲರ್ ಅ¥s಼ï ಆರ್ಕಿಟೆಕ್ಚರ್ (ಬಿ.ಆರ್ಕ್) ಕೋರ್ಸ್ ಅನ್ನು ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ನಾಟಾ) ಪ್ರವೇಶ ಪರೀಕ್ಷೆಯ ಮೂಲಕ ಮಾಡಬಹುದು.
ಈ ಕೋರ್ಸ್ ನಂತರ ಆರ್ಕಿಟೆಕ್ಟ್, ಅರ್ಬನ್ ಪ್ಲಾನಿಂಗ್, ಇಂಟೀಯರ್ ಡಿಸೈನಿಂಗ್, ಲ್ಯಾಂಡ್ಸ್ಕೇಪ್ ಡಿಸೈನಿಂಗ್, ಪ್ರಾಪರ್ಟಿ ಡೆವಲಪ್ಮೆಂಟ್ ಮುಂತಾದ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಉನ್ನತ ಶ್ರೇಣಿಯ ಕಾಲೇಜುಗಳಲ್ಲಿ ಕ್ಯಾಂಪಸ್ ನೇರ ನೇಮಕಾತಿಯ ಸೌಲಭ್ಯವಿರುತ್ತದೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲಿಯೂ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಅನುಭವವನ್ನು ಗಳಿಸಿದ ನಂತರ ಸ್ವಂತವಾಗಿ ಪ್ರಾಕ್ಟೀಸ್ ಮಾಡಬಹುದು.
Q4: ನಾನು ಬಿಕಾಂ ಮುಗಿಸಿದ್ದೀನಿ. ಮುಂದೇನು ಮಾಡುವುದು ತಿಳಿಯುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಮನೆಯಲ್ಲಿ ಹೇಳುತ್ತಿದ್ದಾರೆ. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.
ಬಿಕಾಂ ಪದವೀಧರರಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಪದವಿಯ ನಂತರ ಬ್ಯಾಂಕಿAಗ್, ಫೈನಾನ್ಸ್, ಇನ್ವೆಸ್ಟ್ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನೂ ಪಡೆದುಕೊಳ್ಳಬಹುದು.
ಹಾಗೂ, ಬಿಕಾಂ ನಂತರ ಶಿಕ್ಷಣವನ್ನು ಮುಂದುವರೆಸಿ, ಸಿಎ (ಚಾರ್ಟೆಡ್ ಅಕೌಂಟೆAಟ್), ಸಿಎಸ್ (ಕಂಪನಿ ಸೆಕ್ರೆಟರಿ), ಎಂಕಾA, ಎಂಬಿಎ ಮುಂತಾದ ಕೋರ್ಸ್ಗಳನ್ನು ಮಾಡಿ, ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo
Q5: ನನ್ನ ಮಗಳು ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದು, ಪಿಯುಸಿ ನಂತರ ವೈದ್ಯಕೀಯ ಕೋರ್ಸ್ ಬಿಟ್ಟು ಜೀವಶಾಸ್ತç ಸಂಬಂಧಿತ ಯಾವ ಕೋರ್ಸ್ ಮಾಡಬಹುದು?
ಪಿಯುಸಿ ನಂತರ ವೈದ್ಯಕೀಯ ಕೋರ್ಸ್ ಅಲ್ಲದೆ ಬಿ.ಎಸ್ಸಿ (ಪ್ಯಾರಾ ಮೆಡಿಕಲ್-೨೦ಕ್ಕೂ ಹೆಚ್ಚು ಆಯ್ಕೆಗಳು), ಬಿ.ಎಸ್ಸಿ (ಜೀವಶಾಸ್ತç, ಫೊರೆನ್ಸಿಕ್, ಮನೋವಿಜ್ಞಾನ, ಫಾರೆಸ್ಟಿç, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಹಲವಾರು ಆಯ್ಕೆಗಳು) ಎಂಜಿನಿಯರಿAಗ್ (ಬಯೋಟೆಕ್, ಬಯೋಮೆಡಿಕಲ್, ಜೆನೆಟಿಕ್, ಬಯೋಮಾಲಿಕ್ಯುಲಾರ್ ಇತ್ಯಾದಿ) ಕೋರ್ಸ್ಗಳನ್ನು ಮಾಡಬಹುದು.
Q6: ನನ್ನ ಮಗ ಬಿಸಿಎ ಕೋರ್ಸ್ ಮಾಡುತ್ತಿದ್ದು, ಸರ್ಕಾರಿ ಉದ್ಯೋಗ ಸಿಗಬಹುದೇ? ಹಾಗೂ ಇನ್ನಿತರ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.
ಐಟಿ ವಿಸ್ತಾರವಾದ ಕ್ಷೇತ್ರ. ಈ ಕ್ಷೇತ್ರದಲ್ಲಿರುವ ಆಕರ್ಷಕ ಮತ್ತು ವೈವಿಧ್ಯಮಯ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ವೃತ್ತಿಯೋಜನೆಯಿರಬೇಕು. ಆದ್ದರಿಂದ, ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಅಭಿರುಚಿಯಂತೆ ವೃತ್ತಿಯೋಜನೆಯನ್ನು ಮಾಡಿದರೆ ಯಾವ ಕ್ಷೇತ್ರ ಸೂಕ್ತವೆಂದು ಅರಿವಾಗುತ್ತದೆ. ಕ್ಷೇತ್ರದ ಆಯ್ಕೆಗೆ ಅನುಗುಣವಾಗಿ ಪ್ರೋಗ್ರಾಮಿಂಗ್, ಡೇಟಾ ಸೈಂಟಿಸ್ಟ್, ವೆಬ್ ಡೆವಲಪ್ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಪ್ರಾಡಕ್ಟ್ ಮ್ಯಾನೇಜ್ಮೆಂಟ್, ಬ್ಲಾಕ್ಚೈನ್ ಮುಂತಾದ ಕ್ಷೇತ್ರಗಳಿಗೆ ಸಂಬAಧಿಸಿದಂತೆ ಹೆಚ್ಚಿನ ತಜ್ಞತೆಗಾಗಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಿ ಉದ್ಯೋಗವನ್ನು ಅರಸಬಹುದು.
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ, ಬ್ಯಾಂಕಿAಗ್, ಹಣಕಾಸು ವಲಯಗಳ ಅವಕಾಶಗಳನ್ನೂ ಪರಿಶೀಲಿಸಿ.
ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವಿಕ್ಷಿಸಿ: hಣಣಠಿs://ಥಿouಣu.be/ಂತಿಟಆಟಿo೧ಙಜuಕಿ
Q7: ನಾನೀಗ ಬಿಎ (ಪತ್ರಿಕೋದ್ಯಮ ಮತ್ತು ಸಾರ್ವಜನಿಕ ನೀತಿ) ಮಾಡುತ್ತಿದ್ದೇನೆ. ಮುಂದೆ ನಾನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯಲು ಬಯಸಿದ್ದೇನೆ. ಹಾಗಾಗಿ, ನಾನು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡುವುದು ಒಳಿತೇ? ಅಥವಾ ಬಿಎ ಪದವಿಯೊಂAದೇ ಈ ಕ್ಷೇತ್ರದಲ್ಲಿ ಮುಂದುವರೆಯಲು ಸಾಕೇ?
ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಿಎ ಪದವಿಯ ಜೊತೆಗೆ ವೃತ್ತಿ ಸಂಬAಧಿತ ಕೌಶಲಗಳಾದ ಸಂವಹನ (ಓದುವಿಕೆ, ಬರವಣಿಗೆ, ಮಾತುಗಾರಿಕೆ, ನಿರೂಪಣೆ ಇತ್ಯಾದಿ), ಭಾಷಾ ಪರಿಣತಿ, ವಿಶ್ಲೇಷಾತ್ಮಕ ಕೌಶಲ, ದಿಟ್ಟತನ, ಸಮಯದ ನಿರ್ವಹಣೆ ಇತ್ಯಾದಿಗಳನ್ನೂ ಬೆಳೆಸಿಕೊಳ್ಳಬೇಕು. ಯಾವುದೇ ವಿಚಾರವನ್ನು ಒಪ್ಪಿಕೊಳ್ಳುವ ಮುನ್ನ ತನಿಖೆ ಅಥವಾ ಪರಿಶೋಧನೆ ಮಾಡುವ ಮನಸ್ಥಿತಿ ಇರಬೇಕು. ಇದಲ್ಲದೆ, ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಕರ್ತರಿಗೆ ಹೆಚ್ಚಿನ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿರುವುದು ಸಹಜ; ಹಾಗಾಗಿ, ಪ್ರಾಮಾಣಿಕತೆ, ನಿಷ್ಠೆ, ಬದ್ದತೆಯನ್ನು ನಿಮ್ಮ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಳ್ಳಬೇಕು.
ಅತ್ಯಂತ ವಿಸ್ತಾರವಾದ ಈ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ (ದಿನ ಪತ್ರಿಕೆಗಳು, ನಿಯತಕಾಲಿಕೆಗಳು ಇತ್ಯಾದಿ), ಟೆಲಿವಿಷನ್, ರೇಡಿಯೊ, ಸಾಮಾಜಿಕ ಮಾಧ್ಯಮ, ವೆಬ್ಸೈಟ್ಸ್, ಬ್ಲಾಗ್ಸ್, ವಿಡಿಯೊ, ಪಾಡ್ಕಾಸ್ಟ್ ಇತ್ಯಾದಿ ವಲಯಗಳಲ್ಲಿದ್ದು, ನಿಮ್ಮ ಆಸಕ್ತಿ, ಅಭಿರುಚಿಯಂತೆ ಆಯ್ಕೆಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ತಜ್ಞತೆಗಾಗಿ, ಸಂಬAಧಿತ ವಿಷಯದಲ್ಲಿ ಡಿಪ್ಲೊಮಾ/ಸ್ನಾತಕೋತ್ತರ ಕೋರ್ಸ್ ಮಾಡಬಹುದು.