Q & A for Students – December 2024

Q1: ನಾನು ಪದವಿ ಕೋರ್ಸ್ ಮುಗಿಸಿ, ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ದುಬಾರಿ ಕೋಚಿಂಗ್ ತೆದುಕೊಳ್ಳಲು ಸಾಧ್ಯವಿಲ್ಲ. ಖುದ್ದಾಗಿ ತಯಾರಾಗುವುದು ಹೇಗೆ?

Q2: ಸರ್, ನನಗೀಗ ೩೨ ವರ್ಷ. ಐಎಎಸ್ ಪರೀಕ್ಷೆ ಬರೆಯಲು ಸಾಧ್ಯವೇ?

ಐಎಎಸ್ ನೇಮಕಾತಿಗೆ,  ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯನ್ನು ಬರೆಯಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ೩೨ ವರ್ಷದವರೆಗೂ, ಹಾಗೂ ಇನ್ನಿತರ ವರ್ಗಗಳಿಗೆ ೩೭ ವರ್ಷದವರೆಗೂ ಅವಕಾಶವಿರುತ್ತದೆ

ಕಠಿಣವಾದ ಈ ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಕಡ್ಡಾಯವಲ್ಲ.   ಈ ಸಲಹೆಗಳನ್ನು ಅನುಸರಿಸಿ:

  • ಮೊದಲಿಗೆ, ಪೂರ್ವಭಾವಿ ಮತ್ತು ಅಂತಿಮ ಪರೀಕ್ಷೆಗಳ ಮಾದರಿ, ಪಠ್ಯಕ್ರಮವನ್ನು ಅರ್ಥೈಸಿಕೊಳ್ಳಬೇಕು.
  • ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗಮನಿಸಿ, ಅದಕ್ಕೆ ಅನುಗುಣವಾಗಿ ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿಕೊಳ್ಳಬೇಕು.
  • ಅಗತ್ಯವಾದ ಪುಸ್ತಕಗಳನ್ನು ಖರೀದಿಸಿ, ನಿಗದಿತ ವೇಳಾಪಟ್ಟಿಯಂತೆ ಸಮಗ್ರವಾದ ಮತ್ತು ಆಳವಾದ ಓದುವಿಕೆ, ಸಮೀಕ್ಷೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆಯಿಂದ ಓದುವಿಕೆ ಪರಿಣಾಮಕಾರಿಯಾಗಿಬೇಕು.
  • ಸೂಕ್ತವಾದ ಪೀಠಿಕೆ, ವಿಮರ್ಶಾತ್ಮಕ ವಿಷಯ ನಿರೂಪಣೆ ಹಾಗೂ ಮುಕ್ತಾಯ ಭಾಗದಲ್ಲಿ ವಿಷಯದ ಕುರಿತ ಪರಿಹಾರ ಮಾರ್ಗಗಳು, ಸಲಹೆಗಳು ಮತ್ತು ತಜ್ಞರ ಸಲಹೆಗಳೊಂದಿಗೆ, ಉತ್ತಮವಾದ ಪ್ರಬಂಧಗಳನ್ನು ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಿ.
  • ಖುದ್ದಾಗಿ ತಯಾರಾಗಿ ಐಎಎಸ್ ಅಧಿಕಾರಿಗಳಾಗಿರುವ ಸಾಧಕರ ಕಥೆಗಳನ್ನು, ಸಂದರ್ಶನಗಳನ್ನು ಮತ್ತು ವಿಡಿಯೋಗಳನ್ನು ಗಮನಿಸಿ.
  • ಗೂಗಲ್ ಮತ್ತು ಯೂಟ್ಯೂಬಿನಲ್ಲಿ, ತಯಾರಿ ಕುರಿತ ಮಾಹಿತಿ ಮತ್ತು ಉಪಯುಕ್ತ ವಿಡಿಯೋಗಳನ್ನು ವೀಕ್ಷಿಸಿ.
  • ಸ್ವಯಂ-ಮೌಲ್ಯಮಾಪನಕ್ಕಾಗಿ, ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರಬೇಕು.
  • ಸುದ್ದಿವಾಹಿನಿಗಳಲ್ಲಿ ನಡೆಯುವ ಪ್ರಮುಖ ಚರ್ಚೆಗಳು, ದಿನಪತ್ರಿಕೆಗಳ ಸಂಪಾದಕೀಯ ಮತ್ತು ನಿಯತಕಾಲಿಕೆಗಳನ್ನು ಗಮನಿಸುತ್ತಿರಬೇಕು.
  • ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ನಿಗದಿತ ವೇಳಾಪಟ್ಟಿಯಂತೆ ಸಮಯದ ನಿರ್ವಹಣೆ ಅತ್ಯಗತ್ಯ.
  • ಪರಿಣಾಮಕಾರಿ ಅಧ್ಯಯನದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk

Q3: ಸೈಬರ್ ಸೆಕ್ಯೂರಿಟಿ ಕ್ಷೇತ್ರದ ಅವಕಾಶಗಳ ಬಗ್ಗೆ ತಿಳಿಸಿ.

ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸೈಬರ್ ಸೆಕ್ಯೂರಿಟಿ ಕ್ಷೇತ್ರದ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ, ಯಶಸ್ಸಿಗೆ ಎಂಜಿನಿಯರಿAಗ್ (ಸೈಬರ್ ಸೆಕ್ಯೂರಿಟಿ, ಕಂಪ್ಯೂಟರ್ ಸೈನ್ಸ್ ಇತ್ಯಾದಿ) ಪದವಿ ಅಥವಾ ಇನ್ನಿತರ ಐಟಿ ಪದವಿಯ ಜೊತೆಗೆ ಸೈಬರ್ ಸೆಕ್ಯೂರಿಟಿ ಕ್ಷೇತ್ರದ ಉನ್ನತ ಮಟ್ಟದ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ ಮಾಡಿರಬೇಕು. ತಾಂತ್ರಿಕ ಜ್ಞಾನ ಹಾಗೂ ಈ ಕ್ಷೇತ್ರಕ್ಕೆ ಸಂಬAಧಿಸಿದ ಕೌಶಲಗಳಾದ ಎಥಿಕಲ್ ಹ್ಯಾಕಿಂಗ್, ಕ್ಲೌಡ್ ಸೆಕ್ಯೂರಿಟಿ, ನೆಟ್‌ವರ್ಕ್ ಸೆಕ್ಯೂರಿಟಿ, ರಿಸ್ಕ್ ಮ್ಯಾನೇಜ್‌ಮೆಂಟ್, ಆಪರೇಟಿಂಗ್ ಸಿಸ್ಟಮ್ಸ್, ಕೋಡಿಂಗ್, ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಸಂವಹನ ಮುಂತಾದ ಕೌಶಲಗಳಿರಬೇಕು.

ಈ ಕ್ಷೇತ್ರದ ವೃತ್ತಿಪರರಿಗೆ ಬ್ಯಾಂಕಿಂಗ್, ಹಣಕಾಸು,  ಬಂಡವಾಳ ಹೂಡಿಕೆ, ರಕ್ಷಣೆ, ಇ-ಕಾಮರ್ಸ್, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಉತ್ಪಾದನೆ,  ಆರೋಗ್ಯ ಸೇರಿದಂತೆ ಅರ್ಥವ್ಯವಸ್ಥೆಯ ಎಲ್ಲಾ ಕ್ಷೇತ್ರಗಳಲ್ಲಿ ಸೈಬರ್ ಸೆಕ್ಯೂರಿಟಿ ಅನಲಿಸ್ಟ್, ಸೆಕ್ಯೂರಿಟಿ ಆರ್ಕಿಟೆಕ್ಟ್, ಸೈಬರ್ ಸೆಕ್ಯೂರಿಟಿ ಎಂಜಿನಿಯರ್, ಕ್ಲೌಡ್ ಸೆಕ್ಯೂರಿಟಿ ಎಂಜಿನಿಯರ್, ಸೆಕ್ಯೂರಿಟಿ ಆಡಿಟರ್, ಎಥಿಕಲ್ ಹ್ಯಾಕರ್ ಮುಂತಾದ ಹುದ್ದೆಗಳನ್ನು ಪಡೆದುಕೊಳ್ಳಬಹುದು.

Q4: ವಿದೇಶದಲ್ಲಿ ಯಾವ ಕೋರ್ಸ್ ಮಾಡಿದರೆ ಹೆಚ್ಚು ಸೂಕ್ತ?

ಇಂದು ಭಾರತದಲ್ಲೇ ಅನೇಕ ಜಗದ್ವಿಖ್ಯಾತ ಕಾಲೇಜುಗಳೂ, ವಿಶ್ವವಿದ್ಯಾಲಯಗಳೂ ಇವೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವಿರಾದರೆ, ಈ ನಿರ್ಣಯದ ಹಿಂದಿರುವ ಪ್ರೇರಣೆ, ನಿಮ್ಮ ಆಸಕ್ತಿ, ಒಲವು, ಸಾಮರ್ಥ್ಯ, ದೌರ್ಬಲ್ಯಗಳ ಅರಿವು ಮತ್ತು ಸ್ಪಷ್ಟವಾದ ವೃತ್ತಿ ಯೋಜನೆಯಿರಬೇಕು. ಸಾಮಾನ್ಯವಾಗಿ ಎಂಜಿನಿಯರಿAಗ್, ಮೆಡಿಕಲ್, ಹಣಕಾಸು, ಹೋಟೆಲ್ ಮತ್ತು ಬಿಸಿನೆಸ್ ಮ್ಯಾನೇಜ್‌ಮೆಂಟ್, ಪ್ರವಾಸೋದ್ಯಮ, ಪರಿಸರ ವಿಜ್ಞಾನ, ನೈಸರ್ಗಿಕ ಮತ್ತು ಅನ್ವಯಿಕ ವಿಜ್ಞಾನ, ಕಾನೂನು ಮುಂತಾದ ಕ್ಷೇತ್ರಗಳ ಸ್ನಾತಕೋತ್ತರ ಕೋರ್ಸ್ಗಳನ್ನು ವಿದೇಶದಲ್ಲಿ ಮಾಡಲು ಪರಿಗಣಿಸಬಹುದು. ವೃತ್ತಿ ಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ; https://www.youtube.com/watch?v=AwlDno1YduQ

Q5: ನಾನು ಪಿಯುಸಿ ಮಾಡುತ್ತಿದ್ದು ಡಿಜಿಟಲ್ ಕ್ಷೇತ್ರದಲ್ಲಿನ ಅವಕಾಶಗಳ ಬಗ್ಗೆ ತಿಳಿಸಿ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಉದ್ಯಮವನ್ನು ಅಭಿವೃದ್ಧಿಪಡಿಸಲು ಡಿಜಿಟಲ್ ಮಾರ್ಕೆಟಿಂಗ್, ಪ್ರಮುಖವಾದ ಮತ್ತು   ಪರಿಣಾಮಕಾರಿಯಾದ ಸಾಧನವಾಗಿದೆ. ಗ್ರಾಹಕರ ಗಮನವನ್ನು ಸೆಳೆಯುವುದು, ವಸ್ತು ಮತ್ತು ಸೇವೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಒದಗಿಸುವುದು, ಗ್ರಾಹಕರ ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ, ವಿಶ್ವಾಸಾರ್ಹ ಬ್ರಾ÷್ಯಂಡ್ ನಿರ್ಮಾಣ ಮುಂತಾದ ಉದ್ಯಮ ಕ್ಷೇತ್ರದ ಬಹುತೇಕ ಕಾರ್ಯಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸಿದ್ದಾಂತಗಳ ಬಳಕೆಯಾಗುತ್ತದೆ. ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ಬಿಕಾಂ/ಬಿಬಿಎ/ಎAಬಿಎ (ಡಿಜಿಟಲ್ ಮಾರ್ಕೆಟಿಂಗ್) ಪದವಿಗಳ ನಂತರ, ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ಮಾರ್ಕೆಟಿಂಗ್ ಅಸಿಸ್ಟೆಂಟ್, ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್, ಸೋಷಿಯಲ್ ಮೀಡಿಯ ಮ್ಯಾನೇಜರ್, ಎಸ್‌ಇಒ ಸ್ಪೆಷಲಿಸ್ಟ್, ಬ್ರಾ÷್ಯಂಡ್ ಮ್ಯಾನೇಜರ್, ಕಂಟೆAಟ್ ಕ್ರಿಯೇಟರ್ ಮುಂತಾದ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಇನ್ನಿತರ ಪದವಿಗಳ ನಂತರವೂ, ಅರೆಕಾಲಿಕ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು (ಡಿಜಿಟಲ್ ಮಾರ್ಕೆಟಿಂಗ್) ಮಾಡಿ, ಡಿಜಿಟಲ್ ಕ್ಷೇತ್ರದಲ್ಲಿ ವೃತ್ತಿಯನ್ನು ಅರೆಸಬಹುದು

Q6: ಎಂಬಿಎ ಕೋರ್ಸ್, ಮಾಡುವ ಪ್ರಕ್ರಿಯೆ ಮತ್ತು ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಿ.

ಬಿ.ಎಸ್ಸಿ ನಂತರ ಎಂಬಿಎ ಕೋರ್ಸ್ ಮಾಡಲು ಸಾಮಾನ್ಯವಾಗಿ ಈ ಪ್ರಕ್ರಿಯೆಗಳಿರುತ್ತದೆ.

  • ಪ್ರವೇಶ ಪರೀಕ್ಷೆ.
  • ಸಮೂಹ ಚರ್ಚೆ.
  • ವೈಯಕ್ತಿಕ ಸಂದರ್ಶನ.

ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್‌ಮೆಂಟ್ (ಐಐಎಂ) ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಬಿಎ ಮಾಡಲು ಕ್ಯಾಟ್ ಪರೀಕ್ಷೆಯನ್ನು ಬರೆಯಬೇಕು. ಇನ್ನಿತರ ವಿಶ್ವವಿದ್ಯಾಲಯ/ಕಾಲೇಜುಗಳಿಗೆ ಜಿಮ್ಯಾಟ್, ಪಿಜಿ-ಸಿಇಟಿ, ಮ್ಯಾಟ್ ಇತ್ಯಾದಿ ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಬೇಕು. ನೀವು ಯಾವ ವಿಶ್ವವಿದ್ಯಾಲಯ/ಕಾಲೇಜಿನಲ್ಲಿ ಎಂಬಿಎ ಮಾಡಲು ಬಯಸುತ್ತೀರೋ, ಅದಕ್ಕೆ ಅನ್ವಯವಾಗುವ ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬೇಕು.

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್ ಸಿದ್ದಾಂತದ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಹಾಗಾಗಿ, ಈ ಕೋರ್ಸಿನಲ್ಲಿ ಮಾರ್ಕೆಟಿಂಗ್, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು, ಲಾಜಿಸ್ಟಿಕ್ಸ್, ಬಿಸಿನೆಸ್ ಅನಲಿಟಿಕ್ಸ್, ಉತ್ಪಾದನೆ, ಇಂಟರ್‌ನ್ಯಾಷನಲ್ ಬಿಸಿನೆಸ್ ಮುಂತಾದ ಸ್ಪೆಷಲೈಜೇಷನ್ಸ್ಗಳಿದ್ದು ನಿಮ್ಮ ವೃತ್ತಿಯೋಜನೆಯಂತೆ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=1TcHjPKJ1gw

Q7: ನನ್ನ ಮಗನಿಗೆ ಗಣಿತ ಹಾಗೂ ಕಂಪ್ಯೂಟರ್ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿದೆ. ಹಾಗಾಗಿ, ಯಾವ ವಿಭಾಗದಲ್ಲಿ ಉನ್ನತ ಶಿಕ್ಷಣ ಮಾಡಬಹುದು?

ಈಗ ಎಂಜಿನಿಯರಿಂಗ್‌ನಲ್ಲಿ ೫೫ಕ್ಕೂ ಹೆಚ್ಚಿನ ವಿಭಾಗಗಳಿವೆ. ಗಣಿತ ಮತ್ತು ಕಂಪ್ಯೂಟರ್ ವಿಷಯಗಳಲ್ಲಿ ಸ್ವಾಭಾವಿಕ ಪ್ರತಿಭೆ ಮತ್ತು ಹೆಚ್ಚಿನ ಆಸಕ್ತಿಯಿದ್ದರೆ, ಎಂಜಿನಿಯರಿಂಗ್ (ಗಣಿತ ಮತ್ತು ಕಂಪ್ಯೂಟಿಂಗ್) ಮಾಡಬಹುದು. ಈ ಕೋರ್ಸ್ನಲ್ಲಿ ಮುಂಬರುವ ತಂತ್ರಜ್ಞಾನಗಳ ಕುರಿತ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಳಂತಹ ಪ್ರಮುಖವಾದ ವಿಷಯಗಳನ್ನು ಕಲಿಸಲಾಗುತ್ತದೆ. ಪ್ರಸ್ತುತ, ಈ ಕೋರ್ಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಸೈನ್ಸ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ, ಎಂಎಸ್ ರಾಮಯ್ಯ ವಿಶ್ವವಿಧ್ಯಾಲಯ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಭ್ಯವಿದೆ. ಅಥವಾ, ನಾಲ್ಕು ವರ್ಷದ ಬಿ.ಎಸ್ಸಿ (ಗಣಿತ) ಮಾಡಿ ನೇರವಾಗಿ ಪಿ.ಎಚ್.ಡಿ (ಗಣಿತ) ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ, ಈ ವಿಡಿಯೊ ವೀಕ್ಷಿಸಿ: https://www.youtube.com/watch?v=Ly86IyOTYns

Q7: ಸರ್, ನಾನು ಪಿಯುಸಿ ನಂತರ ಏರೋಸ್ಪೇಸ್ ಎಂಜಿನಿಯರಿಂಗ್ ಮಾಡುವಾಸೆಯಿದೆ. ಈ ಕ್ಷೇತ್ರಕ್ಕೆ ಬೇಡಿಕೆಯಿದೆಯೇ?

ವಿಮಾನಗಳು, ಹೆಲಿಕಾಪ್ಟರ್‌ಗಳು, ಬಾಹ್ಯಾಕಾಶೆ ನೌಕೆಗಳು, ಬಾಹ್ಯಾಕಾಶ ನಿಲ್ದಾಣಗಳು, ಉಡಾವಣಾ ವಾಹನಗಳು, ರಾಕೆಟ್‌ಗಳು, ವಾಯುಯಾನ, ಮಿಲಿಟರಿ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಏರೋಸ್ಪೇಸ್ ಎಂಜಿನಿಯರ್‌ಗಳು ಕಾರ್ಯ ನಿರ್ವಹಿಸಬಹುದು. ಹಾಗೂ, ಇನ್ನೂ ಹೆಚ್ಚಿನ ಪರಿಸರ ಸ್ನೇಹಿ ಇಂಧನಗಳನ್ನು ಬಳಸಬಹುದಾದ ದಕ್ಷ ಎಂಜಿನ್‌ಗಳ ಉತ್ಪಾದನೆ ಮತ್ತು ಬಳಕೆ, ಮುಂತಾದ ಕ್ಷೇತ್ರಗಳಲ್ಲೂ ಅವಕಾಶವಿರುತ್ತದೆ. ಹಾಗಾಗಿ, ಏರೋಸ್ಪೇಸ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಬೇಡಿಕೆಯನ್ನು ನಿರೀಕ್ಷಿಸಬಹುದು.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ, ಸಮಸ್ಯೆಗಳನ್ನು ಪರಿಹರಿಸುವ ಕೌಶಲ, ವಿಶ್ಲೇಷಾತ್ಮಕ ಕೌಶಲ, ವಿಮರ್ಷಾತ್ಮಕ ಚಿಂತನೆ, ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಸ್ವಾಭಾವಿಕ ಪ್ರತಿಭೆ ಮತ್ತು ಪದವಿ ಪರೀಕ್ಷೆಗಳಲ್ಲಿ ಉತ್ರುಕ್ಷ್ಟವಾದ ಫಲಿತಾಂಶವಿರಬೇಕು.

Q8: ನಾನು ಎಂಬಿಎ (ಹಣಕಾಸು ನಿರ್ವಹಣೆ) ಮಾಡುತ್ತಿದ್ದು, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಬಹುದೇ? ಇಲ್ಲದಿದ್ದರೆ, ಹಣಕಾಸು ನಿರ್ವಹಣೆ ಕ್ಷೇತ್ರದಲ್ಲಿನ ಅವಕಾಶಗಳೇನು?

ಎಂಬಿಎ (ಹಣಕಾಸು ನಿರ್ವಹಣೆ) ನಂತರ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಕಷ್ಟವಾಗುತ್ತದೆ.

ಹಾಗಾಗಿ, ಹಣಕಾಸು, ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಬಂಡವಾಳ ಹೂಡಿಕೆ, ಸ್ಟಾಕ್ ಮಾರ್ಕೆಟ್, ಮ್ಯೂಚುಯಲ್ ಫಂಡ್ಸ್ ಇತ್ಯಾದಿ ಸೇರಿದಂತೆ ಅರ್ಥವ್ಯವಸ್ಥೆಯ ಸರ್ಕಾರಿ ಮತ್ತು ಕಾರ್ಪೊರೇಟ್ ಕ್ಷೇತ್ರದ ಎಲ್ಲಾ ಸಂಸ್ಥೆಗಳ ಹಣಕಾಸು ವಿಭಾಗದಲ್ಲಿ ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಎಂಬಿಎ ಪದವಿಯ ಜೊತೆಗೆ ನಿಷ್ಠೆ, ಪ್ರಾಮಾಣಿಕತೆ, ಸಂವಹನ, ಅಂತರ್‌ವೈಯಕ್ತಿಕ ಕೌಶಲ, ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಹಣಕಾಸು ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

Q9: ನನ್ನ ಮಗ ಬಿಟೆಕ್ (ಇಂಡಸ್ಟಿçಯಲ್ ಎಂಜಿನಿಯರಿಂಗ್) ಮಾಡಿದ್ದು, ಸರ್ಕಾರಿ ಕ್ಷೇತ್ರದಲ್ಲಿ ವೃತ್ತಿಯ ಅವಕಾಶಗಳೇನು?

ಬಿಟೆಕ್ (ಇಂಡಸ್ಟಿçಯಲ್ ಎಂಜಿನಿಯರಿಂಗ್) ನಂತರ ಸರ್ಕಾರಿ ವಲಯದ ಉತ್ಪಾದನೆ, ರಿಫೈನರಿ, ಆಟೋಮೇಷನ್, ಜವಳಿ ಉದ್ಯಮ, ರೈಲ್ವೇಸ್, ಭಾರತೀಯ ರಕ್ಷಣಾ ಪಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು. ಹಾಗೂ, ಸರ್ಕಾರಿ ವಲಯದ ಪ್ರಮುಖ ಸಂಸ್ಥೆಗಳಾದ ಎನ್‌ಟಿಪಿಸಿ, ಒಎನ್‌ಜಿಸಿ, ಸ್ಟೀಲ್ ಅಥಾರಿಟಿ ಅಫ್ ಇಂಡಿಯ, ಎಂಜಿನಿಯರ್ಸ್ ಇಂಡಿಯ, ಇಸ್ರೋ, ಡಿಆರ್‌ಡಿಒ, ಎಚ್‌ಎಎಲ್ ಮುಂತಾದ ಸಂಸ್ಥೆಗಳಲ್ಲಿಯೂ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಜೊತೆಗೆ, ಯುಪಿಎಸ್‌ಸಿ ಪರೀಕ್ಷೆಯ ಮೂಲಕ ಐಎಎಸ್ ಅಧಿಕಾರಿಯಾಗಬಹುದು. ಈಗ, ಸರ್ಕಾರಿ ವಲಯದ ಎಲ್ಲಾ ವೃತ್ತಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿರುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿ, ವೃತ್ತಿಯೋಜನೆಯನ್ನು ಮಾಡಿ, ನಿರ್ಧಾರ ಮಾಡುವುದು ಸೂಕ್ತ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=AwlDno1YduQ

Q 10: ಎಂಎಸ್ಸಿ(ಫೊರೆನ್ಸಿಕ್ ಸೈನ್ಸ್ ಮತ್ತು ಕ್ರಿಮಿನಾಲಜಿ) ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಅವಕಾಶಗಳೇನು?

ಹೆಚ್ಚುತ್ತಿರುವ ಸೈಬರ್ ಕ್ರೆöÊಮ್, ವಂಚನೆ, ಮೋಸಗಾರಿಕೆ ಮತ್ತು ಇನ್ನಿತರ ಅಪರಾಧಗಳಿಂದ, ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಮತ್ತು ಅಪರಾಧ ಶಾಸ್ತç (ಕ್ರಿಮಿನಾಲಜಿ) ಕ್ಷೇತ್ರದ ತಜ್ಞರಿಗೆ ಬೇಡಿಕೆಯಿದೆ.  ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಪದವಿ ಪರೀಕ್ಷೆಯ ಫಲಿತಾಂಶ ಉತ್ಕöÈಷ್ಟವಾಗಿರಬೇಕು. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು,  ಪೋಲೀಸ್ ಇಲಾಖೆ, ವಿಧಿ ವಿಜ್ಞಾನ  ಲ್ಯಾಬೋರೇಟರಿಗಳು, ಸಿಐಡಿ, ಸಿಬಿಐ, ಐಬಿ, ಪೋಲೀಸ್ ಇಲಾಖೆ, ನರ್ಕೋಟಿಕ್ಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಇತ್ಯಾದಿ ಕ್ಷೇತ್ರಗಳಲ್ಲಿ ವೃತ್ತಿಯನ್ನು ಅರಸಬಹುದು.

Q 11: ನಾನು ಬಿಸಿಎ ಮಾಡುತ್ತಿದ್ದು, ಮುಂದೆ ಎಂಬಿಎ ಮಾಡಬಹುದೇ?

ಐಟಿ ವಿಸ್ತಾರವಾದ ಮತ್ತು ತ್ವರಿತವಾಗಿ ಅಭಿವೃದ್ಧಿಯಾಗುತ್ತಿರುವ ಕ್ಷೇತ್ರ. ಎಂ.ಬಿ.ಎ. ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು.  ಹಾಗಾಗಿ, ಬಿಸಿಎ ಅಥವಾ ಯಾವುದೇ ತಾಂತ್ರಿಕ ಕೋರ್ಸ್ ನಂತರ ಎಂಬಿಎ ಉತ್ತಮ ಆಯ್ಕೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg