Q & A for Students – November 2024

Q1: ನಾನು ದ್ವಿತೀಯ ಪಿಯುಸಿ ಮಾಡುತ್ತಿದ್ದು ಮುಂದೆ ಎಂಬಿಬಿಎಸ್ ಮಾಡುವ ಇಚ್ಛೆಯಿದೆ. ಸರ್ಕಾರಿ ಸೀಟ್ ಸಿಗುವ ಖಾತರಿಯಿಲ್ಲದಿರುವುದರಿಂದ, ವೈದ್ಯಕೀಯ ಸಂಬಂಧಿತ ಕ್ಷೇತ್ರದ ಬೇರೆ ಯಾವ ಕೋರ್ಸ್ ಮಾಡಬಹುದು?

ಪಿಯುಸಿ ನಂತರ ವೈದ್ಯಕೀಯ, ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಲು ಎಂಬಿಬಿಎಸ್ ಅಲ್ಲದೆ ಡೆಂಟಲ್, ಆಯುರ್ವೇದ, ನ್ಯಾಚುರೋಪತಿ, ಹೋಮಿಯೋಪತಿ, ಯುನಾನಿ ಸೇರಿದಂತೆ ವೈವಿಧ್ಯಮಯ ಅವಕಾಶಗಳಿವೆ.

  • ಬಿ.ಎಸ್ಸಿ (ಪ್ಯಾರಮೆಡಿಕಲ್): ಮೆಡಿಕಲ್ ಸೈನ್ಸ್, ಲ್ಯಾಬೋರೇಟರಿ ಟೆಕ್ನಾಲಜಿ, ಇಮೇಜಿಂಗ್ ಟೆಕ್ನಾಲಜಿ, ಅನಸ್ಥೇಶಿಯ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ರೇಡಿಯಾಲಜಿ, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ, ಕಾರ್ಡಿಯಾಕ್ ಟೆಕ್ನಾಲಜಿ, ನರ್ಸಿಂಗ್, ಡಯಟಿಕ್ಸ್, ಫಿಸಿಯೋತೆರಪಿ, ಸ್ಪೋರ್ಟ್ಸ್ ಸೈನ್ಸ್ ಸೇರಿದಂತೆ ೨೦ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಬಿ.ಎಸ್ಸಿ (ಪ್ಯಾರಮೆಡಿಕಲ್) ಕೋರ್ಸ್ ಮಾಡಬಹುದು.
  • ಬಿಫಾರ್ಮಾ ಕೋರ್ಸ್: ರಾಸಾಯನಿಕ ವಿಜ್ಞಾನ,  ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ÷್ಯಕ್ಕೆ ಸಂಬAಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರದಲ್ಲಿ ವೃತ್ತಿಯನ್ನು ಅರಸಲು ಬಿಫಾರ್ಮಾ ಮಾಡಬಹುದು.
  • ವಿಜ್ಞಾನ, ಅನ್ವಯಿಕ ವಿಜ್ಞಾನ ಮತ್ತು ಸಂಶೋಧನೆ: ಈ ಕ್ಷೇತ್ರಗಳಲ್ಲಿ ಆಸಕ್ತಿಯಿದ್ದರೆ ಬಿ.ಎಸ್ಸಿ ಕೋರ್ಸನ್ನು ಬಯಾಲಜಿ, ಬಯೋಕೆಮಿಸ್ಟಿç, ಬಯೋಟೆಕ್ನಾಲಜಿ, ಬಯೋಇನ್‌ಫರ್‌ಮೇಟಿಕ್ಸ್, ಮೈಕ್ರೊಬಯಾಲಜಿ, ಕ್ಲಿನಿಕಲ್ ರಿಸರ್ಚ್, ಜೆನೆಟಿಕ್ಸ್, ಸೈಕಾಲಜಿ, ಕ್ರಿಮಿನಾಲಜಿ, ಫೊರೆನ್ಸಿಕ್ ಸೈನ್ಸ್, ಕೌನ್ಸೆಲಿಂಗ್, ಪರಿಸರ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಾಡಿ ವೃತ್ತಿಯನ್ನು ಅರಸಬಹುದು.

Q2: ನಾನು ಪಿಯುಸಿ ನಂತರ ಬಿಸಿಎ ಮಾಡಲು ಇಚ್ಛಿಸಿದ್ದೇನೆ. ಈ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ.

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಸಿಎ ಪದವೀಧರರಿಗೆ ಬೇಡಿಕೆ ಇದೆ. ನಾಲ್ಕು ವರ್ಷದ ಬಿಸಿಎ ಕೋರ್ಸಿನಲ್ಲಿ ವೃತ್ತಿಪರ ಇಂಗ್ಲೀಷ್, ಗಣಿತ, ಸಂಖ್ಯಾಶಾಸ್ತç, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಬAಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಡೇಟಾ ಸೈನ್ಸ್, ಎಐ, ಎಂಎಲ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿAಗ್ ಮುಂತಾದ ವಿಷಯಗಳಲ್ಲಿ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕೋರ್ಸ್ ಮಾಡಬಹುದು.  ಕ್ಯಾಂಪಸ್ ನೇಮಕಾತಿಯಿರುವ ಕಾಲೇಜಿನಲ್ಲಿ ಬಿಸಿಎ ಮಾಡುವುದರಿಂದ ವೃತ್ತಿಯನ್ನು ಆರಂಭಿಸಲು ಸುಲಭವಾಗುತ್ತದೆ. ನೀವು ಸೇರಬಯಸುವ ಕಾಲೇಜನ್ನು ಅವಲಂಬಿಸಿ ಪ್ರವೇಶ ನೇರವಾಗಿಯೂಕೆಲವೊಮ್ಮೆ ಪ್ರವೇಶ ಪರೀಕ್ಷೆಯ ಮುಖಾಂತರವೂ ಆಗುತ್ತದೆ.

Q3: ಸರ್, ಈಗ ದ್ವಿತೀಯ ಪಿಯು ಮಾಡುತ್ತಿದ್ದು ಮನೆಯವರು ಮುಂದೆ ಎಂಬಿಬಿಎಸ್ ಮಾಡು ಎನ್ನುತ್ತಿದ್ದಾರೆ. ಆದರೆ, ನನಗೆ ಎಂಜಿನಿಯರಿAಗ್ ಮಾಡುವಾಸೆಯಿದೆ. ಈ ಗೊಂದಲಕ್ಕೆ ಪರಿಹಾರವೇನು?

ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿAಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿ ಮತ್ತು ಕೋರ್ಸ್ ಆಯ್ಕೆ ಮಾಡುವುದು ಸೂಕ್ತ. ವೃತ್ತಿಯೋಜನೆಯ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=AwlDno1YduQ

Q4: ಮುಂದಿನ ವರ್ಷ ಬಿಟೆಕ್ ಮುಗಿಸುತ್ತಿದ್ದೇನೆ. ನಂತರ ಎಂಬಿಎ ಅಥವಾ ಎಂಟೆಕ್ ಮಾಡುವ ಆಲೋಚನೆಯಿದೆ. ನಿರ್ಧಾರ ಮಾಡುವುದು ಹೇಗೆ?

ನೀವು ಬಿ.ಟೆಕ್ ಯಾವ ವಿಭಾಗದಲ್ಲಿ ಮಾಡುತ್ತಿದ್ದೀರಿ ಎಂದು ತಿಳಿಸಿಲ್ಲ.

ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ ಯಾವ ಕ್ಷೇತ್ರದಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬೇಕೆಂದು ನಿರ್ಧರಿಸಿ. ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯಿದ್ದಲ್ಲಿ ಎಂಟೆಕ್ ಮಾಡಬಹುದು; ಮ್ಯಾನೇಜ್‌ಮೆಂಟ್ ಕ್ಷೇತ್ರ ಅಥವಾ ಅನುಭವದ ನಂತರ ಸ್ವಂತ ಉದ್ದಿಮೆಯನ್ನು ಮಾಡುವ ಆಸಕ್ತಿಯಿದ್ದರೆ ಎಂಬಿಎ ಮಾಡಬಹುದು. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಕಲಿಕೆಯಾಗುವುದರಿಂದ, ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸನ್ನು ಸಾಧಿಸಲು ಅನುಕೂಲವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=7ex7tjtoMlw

Q5: ನಾನು ಬಿಕಾಂ ಮಾಡುತ್ತಿದ್ದು, ಮುಂದೆ ಸಿಎ ಮಾಡಬೇಕೆಂದುಕೊAಡಿದ್ದೇನೆ. ದಯವಿಟ್ಟು ಮಾರ್ಗದರ್ಶನ ನೀಡಿ.

ಸಿಎ ಮಾಡಲು ಎರಡು ಆಯ್ಕೆಗಳಿರುತ್ತದೆ. ಪಿಯು ಕೋರ್ಸ್ನಲ್ಲಿ ಶೇ ೫೦ ಅಂಕಗಳನ್ನು ಪಡೆದ  ವಿದ್ಯಾರ್ಥಿಗಳು ಸಿಎ ಫೌಂಡೇಷನ್ ಕೋರ್ಸ್ ಮಾಡಿದರೆ, ನಂತರ ಇಂಟರ್‌ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಬಿಕಾಂ ಪದವೀಧರರು ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲ.  ಬಿಕಾಂ ಪದವಿಯಲ್ಲಿ ಕನಿಷ್ಠ ಶೇ ೫೫ ಅಂಕಗಳನ್ನು ಗಳಿಸಿ ನೇರವಾಗಿ ಸಿಎ ಇಂಟರ್‌ಮೀಡಿಯಟ್ ಕೋರ್ಸ್ ಮಾಡಬಹುದು. ಹಾಗಾಗಿ, ಈಗಲೇ ಫೌಂಡೇಷನ್ ಕೋರ್ಸ್ ಮಾಡುವುದು ಅಥವಾ ಬಿಕಾಂ ನಂತರ ನೇರವಾಗಿ ಇಂಟರ್‌ಮೀಡಿಯಟ್ ಕೋರ್ಸ್ ಮಾಡುವುದು, ನಿಮ್ಮ ಆಯ್ಕೆ.

ಜೊತೆಗೆ, ೩ ವರ್ಷದ ಆರ್ಟಿಕಲ್ಡ್ ತರಬೇತಿ ಪಡೆಯಲು, ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗಳನ್ನು ಸೇರಬೇಕು. ಇಂಟರ್‌ಮೀಡಿಯೆಟ್ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಪರಿಶ್ರಮ, ಬದ್ಧತೆ, ಆತ್ಮ ವಿಶ್ವಾಸ ಮತ್ತು ಸಮಯದ ನಿರ್ವಹಣೆಯಿಂದ ಸಿಎ ಕೋರ್ಸ್ ಮಾಡಬಹುದು; ಕೋಚಿಂಗ್ ಕಡ್ಡಾಯವಲ್ಲ. ಮೇಲಾಗಿ, ಚಾರ್ಟರ್ಡ್ ಅಕೌಂಟೆAಟ್ ಇನ್‌ಸ್ಟಿಟ್ಯೂಟ್ ವತಿಯಿಂದ ನೀಡುವ ಕೋಚಿಂಗ್ ಮತ್ತು ಮಾರ್ಗದರ್ಶನದ ಸೌಲಭ್ಯವನ್ನು ನೀವು ಉಪಯೋಗಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo

Q6: ನಾನು ಕಳೆದ ವರ್ಷ ಬಿಟೆಕ್ ಮಾಡಿ ಕ್ಯಾಂಪಸ್ ನೇಮಕಾತಿಯಾಗದೆ ಈಗಲೂ ಸರಿಯಾದ ಕೆಲಸ ಸಿಕ್ಕಿಲ್ಲ. ನಿಮ್ಮ ಸಲಹೆ   ನೀಡಿ.

ಬಿಟೆಕ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಸ್ವಯಂ-ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿAಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ, ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬAಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ, ಇತ್ಯಾದಿ ಕೌಶಲಗಳೂ  ಎಂಜಿನಿಯರಿAಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.

ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಕುಂದು ಕೊರತೆಗಳನ್ನರಿತು, ಪ್ರಾಮಾಣಿಕ ಪ್ರಯತ್ನಗಳಿಂದ ಈ ಕೌಶಲಗಳನ್ನು ವ್ಯಕ್ತಿತ್ವದಲ್ಲಿ  ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ಮತ್ತು ವೃತ್ತಿಗೆ ಸಂಬAಧಿಸಿದ ಕೌಶಲಗಳನ್ನು ಕಲಿಯಲು ಇಂದು ವಿಭಿನ್ನವಾದ ಮತ್ತು ವಿಸ್ತಾರವಾದ ಅವಕಾಶಗಳಿವೆ.

ಅಚ್ಚುಕಟ್ಟಾದ ಬಯೋಡೇಟ ಬರೆಯುವುದರ ಬಗ್ಗೆ ಮತ್ತು  ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=faQz_iLCWEk