1: ನಾನು ಪಿಯುಸಿ ಮುಗಿಸಿ, ಸಿಇಟಿಗೆ ತಯಾರಿ ನಡೆಸುತ್ತಿದ್ದೇನೆ. ಯಾವ ಎಂಜಿನಿಯರಿಂಗ್ ಕೋರ್ಸಿಗೆ ಉತ್ತಮ ಉದ್ಯೋಗಾವಕಾಶಗಳಿವೆ?
ಈಗ ಕಂಪ್ಯೂಟರ್ ಸೈನ್ಸ್, ಐಟಿ, ರೊಬಾಟಿಕ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮೆಷಿನ್ ಲರ್ನಿಂಗ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಕೋರ್ಸ್ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ, ಸಾಂಪ್ರದಾಯಿಕ ವಿಭಾಗಗಳಾದ ಎಲೆಕ್ಟಾçನಿಕ್ಸ್ ಅಂಡ್ ಕಮ್ಯೂನಿಕೇಷನ್, ಎಲೆಕ್ಟಿçಕಲ್ ಅಂಡ್ ಎಲೆಕ್ಟಾçನಿಕ್ಸ್, ಬಯೋಮೆಡಿಕಲ್, ಬಯೋಟೆಕ್, ಏರೋನಾಟಿಕಲ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್ ಇತ್ಯಾದಿ ವಿಭಾಗಗಳಿಗೂ ಸಾಧಾರಣವಾದ ಬೇಡಿಕೆಯಿದೆ. ಎಂಜಿನಿಯರಿಂಗ್ನಲ್ಲಿ ಐವತ್ತಕ್ಕೂ ಹೆಚ್ಚಿನ ವಿಭಾಗಗಳಿದ್ದು. ಕೋರ್ಸ್ ಫಲಿತಾಂಶ ಉತ್ಕöÈಷ್ಟವಾಗಿದ್ದರೆ, ಉಜ್ವಲವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗೂ, ಆಯಾ ವಿಭಾಗಗಳ ವಿಷಯಗಳಲ್ಲಿ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆ ಇರಬೇಕು.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
2: ಸರ್, ನಾನು ಬಿಸಿಎ ಪದವಿಯನ್ನು ಮುಗಿಸಿದ್ದು, ಕೆಪಿಎಸ್ಸಿ ಮೂಲಕ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ, ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಈ ಕುರಿತ ಕೆಪಿಎಸ್ಸಿ ಅಧಿಸೂಚನೆಯಂತೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪಟ್ಟಿಯಲ್ಲಿ ಬಿಸಿಎ ಪದವಿ ಸೇರಿರುವುದಿಲ್ಲ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಸಿಎ ಪದವೀಧರರಿಗೆ ಅರ್ಹತೆಯಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ಕೆಪಿಎಸ್ಸಿ ಕಛೇರಿಯನ್ನು ಸಂಪರ್ಕಿಸಿ.
3: ಸರ್, ನಾನು ಬಿಎ (ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್) ೬ನೇ ಸೆಮಿಸ್ಟರ್ ಓದುತ್ತಿದ್ದು, ನನಗೆ ಎಂಎ ಮಾಡುವುದರಲ್ಲಿ ಆಸಕ್ತಿ ಇಲ್ಲ; ಮುಂದೆ, ನಾನು ಎಂಎಸ್ಸಿ ಮಾಡಲು ಅವಕಾಶವಿದೆಯೇ?
ನಮಗಿರುವ ಮಾಹಿತಿಯಂತೆ, ಸಾಮಾನ್ಯವಾಗಿ ಬಿಎ (ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್) ನಂತರ ಎಂಎಸ್ಸಿ (ಫೊರೆನ್ಸಿಕ್ ಸೈನ್ಸ್) ಅಥವಾ ಎಂಎಸ್ಸಿ (ಕ್ರಿಮಿನಾಲಜಿ) ಮಾಡಬಹುದು. ಆದರೆ, ಪ್ರತಿ ವಿಶ್ವವಿಧ್ಯಾಲಯದ ಅರ್ಹತೆಯ ನಿಯಮಗಳು, ಪ್ರವೇಶ ಪ್ರಕ್ರಿಯೆ, ಪಠ್ಯಕ್ರಮ ಇತ್ಯಾದಿಗಳಲ್ಲಿ ವ್ಯತ್ಯಾಸಗಳಿರುವುದು ಸಹಜ. ಹಾಗಾಗಿ, ಯಾವ ವಿಶ್ವವಿಧ್ಯಾಲಯದಲ್ಲಿ ಅಧ್ಯಯನವನ್ನು ಮುಂದುವರಿಸಬೇಕೆAದು ನಿರ್ಧರಿಸಿ, ಅದರಂತೆ ಹೆಚ್ಚಿನ ಮಾಹಿತಿಗಾಗಿ ಸಂಬAಧಪಟ್ಟ ವಿಶ್ವವಿಧ್ಯಾಲಯವನ್ನು ಸಂಪರ್ಕಿಸಿ.
4: ಸರ್, ನಾನು ಬಿಎ ಪ್ರಥಮ ಸೆಮಿಸ್ಟರ್ ಮುಗಿಸಿದ್ದೇನೆ. ಸದ್ಯಕ್ಕೆ, ನನಗೆ ಉದ್ಯೋಗದ ಅವಶ್ಯಕತೆ ಇದೆ. ಹಾಗಾಗಿ, ಏನು ಮಾಡಬಹುದು?
ನೀವು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ, ಬಿಎ ಪದವಿಗೆ ಸೇರಿದ್ದರೆ ಒಂದು ವರ್ಷದ ಅವಧಿಯ ನಂತರ ಸರ್ಟಿಫಿಕೆಟ್ ಪಡೆದು ಪೂರ್ಣಾವಧಿ ಕೆಲಸಕ್ಕೆ ಸೇರಬಹುದು. ರಾಷ್ಟಿçÃಯ ಶಿಕ್ಷಣ ನೀತಿಯ ಅನುಸಾರ, ನಿಮಗೆ ಅನುಕೂಲವಾದಾಗ ಪದವಿ ಕೋರ್ಸಿಗೆ ಮರು ಸೇರ್ಪಡೆಯಾಗುವ ಅವಕಾಶವಿರುತ್ತದೆ.
ಅಥವಾ, ಬಿಎ ಕೋರ್ಸ್ ಮಾಡುತ್ತಾ, ಅರೆಕಾಲಿಕ ಕೆಲಸಗಳನ್ನು ಮಾಡಬಹುದು. ಮಾರ್ಕೆಟಿಂಗ್, ಹೋಟೆಲ್ಸ್, ರೆಸ್ಟೋರೆಂಟ್ಸ್, ಮಾಧ್ಯಮ, ಬರವಣಿಗೆ, ಪ್ರದರ್ಶನಗಳು ಮುಂತಾದ ಕ್ಷೇತ್ರಗಳಲ್ಲಿ, ವೈವಿಧ್ಯಮಯ ಅರೆಕಾಲಿಕ ಉದ್ಯೋಗಾವಕಾಶಗಳಿವೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: https://youtu.be/faQz_iLCWEk
5: ನಾನು ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್) ಮಾಡುತ್ತಿದ್ದು, ಮುಂದೆ ಬಿಇ ಮಾಡುವ ಆಸೆಯಿದೆ. ಉದ್ಯೋಗಾವಕಾಶಗಳ ದೃಷ್ಟಿಯಿಂದ ಯಾವ ಕೋರ್ಸ್ ಒಳ್ಳೆಯದು?
ಡಿಪ್ಲೊಮಾ (ಕಂಪ್ಯೂಟರ್ ಸೈನ್ಸ್) ನಂತರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೆಬ್ ಡೆವಲಪರ್, ಸಾಫ್ಟ್ವೇರ್ ಡೆವಲಪರ್, ಫುಲ್ ಸ್ಟಾಕ್ ಡೆವಲಪರ್, ಯುಐ/ಯುಎಕ್ಸ್ ಡಿಸೈನರ್, ಸಿಸ್ಟಮ್ಸ್ ಅನಲಿಸ್ಟ್, ಡೇಟಾ ಅನಲಿಸ್ಟ್ ಮುಂತಾದ ವೈವಿಧ್ಯಮಯ ಉದ್ಯೋಗಾವಕಾಶಗಳಿವೆ. ಕೆಲವು ಉದ್ಯೋಗಗಳಿಗೆ, ಅಲ್ಪಾವಧಿ/ಸರ್ಟಿಫಿಕೆಟ್ ಕೋರ್ಸ್ಗಳ ಅಗತ್ಯವಿರುತ್ತದೆ.
ಈಗಲೇ ದುಡಿಯುವ ಅಗತ್ಯವಿಲ್ಲದಿದ್ದರೆ, ಲ್ಯಾಟರಲ್ ಎಂಟ್ರಿ ಮೂಲಕ ಮೂರು ವರ್ಷದ ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್) ಮಾಡುವುದು, ಭವಿಷ್ಯದ ದೃಷ್ಟಿಯಿಂದ ಸೂಕ್ತ.
ಪ್ರಮುಖವಾಗಿ, ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನೂ, ಕುಟುಂಬದ ಅಗತ್ಯ ಮತ್ತು ಸವಾಲುಗಳನ್ನೂ ಪರಿಗಣಿಸಿ,
ವೃತ್ತಿಯ ಯೋಜನೆಯನ್ನು ಮಾಡಿ, ಅದರಂತೆ ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ
6: ನನ್ನ ಮಗ ಎಸ್ಎಸ್ಎಲ್ಸಿ ಮುಗಿಸಿದ್ದು, ಮುಂದೆ ಯಾವ ಕೋರ್ಸ್ ಮಾಡಬಹುದು?
ವಿದ್ಯಾಭ್ಯಾಸದ ನಂತರ ಯಾವ ವೃತ್ತಿಯನ್ನು ಅನುಸರಿಸಬೇಕು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಯಾವ ಕೋರ್ಸ್ಗಳನ್ನು ಮಾಡಬೇನ್ನುವ ಪರಿಕಲ್ಪನೆಯೇ ವೃತ್ತಿ ಯೋಜನೆ. ಈ ಕೆಳಗೆ ವಿವರಿಸಿರುವ ಕ್ರಮದಲ್ಲಿ ವೃತ್ತಿ ಯೋಜನೆಯನ್ನು ಮಾಡಿದ ನಂತರ, ಮುಂದಿನ ಆಯ್ಕೆ ಸುಲಭವಾಗುತ್ತದೆ.
- ವಿದ್ಯಾರ್ಥಿಯ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು.
- ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ.
- ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತ ಪಡಿಸಿಕೊಳ್ಳಿ.
- ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ವಿವಿಧ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ.
- ಅವಶ್ಯಕತೆಗಳಿಗೆ ತಕ್ಕಂತೆ ಮಾಡಬೇಕಾದ ಕೋರ್ಸ್ಗಳು, ಪ್ರವೇಶ ಪರೀಕ್ಷೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗುರುತಿಸಿ.
- ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ.
ಹೆಚ್ಚಿನ ಮಾರ್ಗದರ್ಶನಕ್ಕಾಗಿ, ಈ ಲೇಖನವನ್ನು ಗಮನಿಸಿ: https://www.vpradeepkumar.com/what-after-sslc-kannada/
7: ನಾನು ಬಿಡಿಎಸ್ ಮಾಡಿದ್ದೇನೆ? ಸರ್ಕಾರಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ.
ಬಿಡಿಎಸ್ (ಬ್ಯಾಚಲರ್ ಅಫ್ ಡೆಂಟಲ್ ಸೈನ್ಸ್) ನಂತರ, ರಾಜ್ಯ ಸರ್ಕಾರದ ಅಡಿಯಲ್ಲಿರುವ ಆಸ್ಪತ್ರೆಗಳು, ಸಂಸ್ಥೆಗಳು, ಆರೋಗ್ಯ ಇಲಾಖೆ, ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಇದೇ ರೀತಿ, ಕೇಂದ್ರ ಸರ್ಕಾರದ ಅಡಿಯಲ್ಲಿರುವ ಆಸ್ಪತ್ರೆಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಇಲಾಖೆ, ರಕ್ಷಣಾ ಪಡೆ (ಭಾರತೀಯ ಸೇನೆ), ಪ್ಯಾರಾ ಮಿಲಿಟರಿ, ಬೃಹತ್ ಕೈಗಾರಿಕೆಗಳು ( ಬಿಎಚ್ಇಎಲ್, ಸ್ಟೀಲ್ ಅಥಾರಿಟಿ ಇತ್ಯಾದಿ), ರೈಲ್ವೇಸ್ ಇತ್ಯಾದಿ ಕ್ಷೇತ್ರಗಳಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳನ್ನು ಪಡೆಯಬಹುದು.