Q & A for Students – April 2023

1. ಪ್ರಥಮ ವರ್ಷದ ಬಿ.ಎಸ್ಸಿ (ನರ್ಸಿಂಗ್) ಓದುತ್ತಿರುವ ನಾನು ಮುಂದೆ ಆರೋಗ್ಯ ಪರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಿದ್ದೇನೆ. ಮುಂದಿನ ಅವಕಾಶಗಳು ಹಾಗೂ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿ.

ನರ್ಸಿಂಗ್, ಉದಾತ್ತವಾದ ಮತ್ತು ಶ್ರೇಷ್ಠವಾದ ವೃತ್ತಿಯೆಂದು ಪರಿಗಣಿಸಲಾಗುತ್ತದೆ.  ಈ ವೃತ್ತಿಯ ಜೊತೆಗೆ, ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಮ್ಮ ಬಯಕೆ ಶ್ಲಾಘನೀಯ. ಕೋವಿಡ್ ಪಿಡುಗಿನ ನಂತರ ಈ ವೃತ್ತಿಗೆ ಬೇಡಿಕೆ ಹೆಚ್ಚಾಗಿದೆ. ನರ್ಸಿಂಗ್ ಕೋರ್ಸ್ ಮುಗಿದ ನಂತರ ಈ ಕ್ಷೇತ್ರಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು:

ಆಸ್ಪತ್ರೆಗಳು ಮತ್ತು ಸಾರ್ವಜನಿಕ ಆರೋಗ್ಯ ಕೇಂದ್ರಗಳು, ಆಂಬ್ಯುಲೆನ್ಸ್ ಸೇವೆಗಳು, ನರ್ಸಿಂಗ್ ಹೋಂಗಳು, ನರ್ಸಿಂಗ್ ಕಾಲೇಜುಗಳು, ಆರೋಗ್ಯ ಸಂಬAಧಿತ ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ದಾಶ್ರಮಗಳು, ಉದ್ದಿಮೆಗಳು, ಕೈಗಾರಿಕೆಗಳು, ಸಶತ್ರ ಪಡೆಗಳು, ರೆಡ್ ಕ್ರಾಸ್ ಸೊಸೈಟಿ, ಎನ್‌ಜಿಒ ಸಂಸ್ಥೆಗಳು ಇತ್ಯಾದಿ.

ಈ ವೃತ್ತಿಯಲ್ಲಿ ಯಶಸ್ವಿಯಾಗಲು ತಾಳ್ಮೆ, ಅನುಭೂತಿ, ಸೇವಾ ಮನೋಭಾವ, ಉತ್ತಮ ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯತೆ ಮುಂತಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.

ಬೆಳೆದ ಮಕ್ಕಳು ಮತ್ತು ಸಂಸಾರದ ಹಿರಿಯರು ಪ್ರತ್ಯೇಕವಾಗಿ ವಾಸ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು. ವೃದ್ಯಾಪ್ಯ ವಿಜ್ಞಾನ  (ಜೆರಿಯಾಟ್ರಿಕ್ ಸೈನ್ಸ್) ಕ್ಷೇತ್ರದಲ್ಲಿ ಮಾನವ ಸಂಪನ್ಮೂಲಕ್ಕೆ ಪೂರೈಕೆಗಿಂತಲೂ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ, ಹಿರಿಯ ನಾಗರಿಕರ ಆರೈಕೆ, ಔಷದೋಪಚಾರ, ಸಕ್ರಿಯ ಸಂವಹನ, ಸುರಕ್ಷತೆ, ವ್ಯಾಯಾಮ, ದೈನಂದಿನ ಚಟುವಟಿಕೆಗಳಲ್ಲಿ ಸಹಾಯ ಮುಂತಾದ ಕಾರ್ಯಗಳಲ್ಲಿಯೂ ನಿಮ್ಮನ್ನು ತೊಡಗಿಸಿಕೊಳ್ಳಬಹುದು. ಶುಭಹಾರೈಕೆಗಳು.

2. ನಾನುಬಿ.ಎಸ್ಸಿ (ಪಿಸಿಎಂ) ಮುಗಿಸಿದ್ದೇನೆ. ಮುಂದಿನಅವಕಾಶಗಳಬಗ್ಗೆಮಾಹಿತಿಕೊಡಿ. ಅಥವಾ, ಯಾವುದಾದರೂಟೆಕ್ನಿಕಲ್ಕೋರ್ಸ್ಮಾಡಬಹುದೇ?

ಮೊದಲಿಗೆ, ಬಿ.ಎಸ್ಸಿ ನಂತರದ ನಿಮ್ಮ ವೃತ್ತಿಜೀವನದ ಕನಸುಗಳೇನು ಎನ್ನುವುದರ ಬಗ್ಗೆ ಸ್ಪಷ್ಟತೆಯಿರಬೇಕು. ಈ ಅವಕಾಶಗಳನ್ನು ಪರಿಶೀಲಿಸಿ:

  • ಬಿ,ಎಸ್ಸಿ ನಂತರ ನಿಮಗಿಷ್ಟವಿರುವ ವಿಷಯದಲ್ಲಿ ಎಂ.ಎಸ್ಸಿ/ಪಿಎಚ್.ಡಿ ಮಾಡಬಹುದು. ಇದಾದ ನಂತರ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಬೋಧಿಸಬಹುದು.
  • ಟೆಕ್ನಿಕಲ್ ಕೋರ್ಸ್ ಮಾಡುವ ಇಚ್ಛೆಯಿದ್ದರೆ, ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಬಹುದು. ಹೆಚ್ಚಿನ ತಜ್ಞತೆಗಾಗಿ, ಪರ್ಯಾಯ ಪ್ರವೇಶದ ಮೂಲಕ ಎಂಜಿನಿಯರಿಂಗ್ ಮಾಡಬಹುದು.
  • ಎಂಬಿಎ ಮಾಡಿ ಆಕರ್ಷಕ ವೃತ್ತಿಯ ಅವಕಾಶಗಳನ್ನು ಬಳಸಿಕೊಳ್ಳಬಹುದು.
  • ಬಿ.ಎಸ್ಸಿ ನಂತರ ವೃತ್ತಿಯನ್ನು ಅರಸಿ, ದೂರಶಿಕ್ಷಣದ ಮೂಲಕ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು.

ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಸ್ವಾಭಾವಿಕ ಪ್ರತಿಭೆಯಂತೆ ವೃತ್ತಿಯೋಜನೆಯನ್ನು ಮಾಡಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯೋಜನೆಯನ್ನು ಮಾಡದೆ ಕೋರ್ಸ್ ಮಾಡಿದರೆ, ಇಂತಹ ಗೊಂದಲಗಳಿAದ, ಮುಂದಿನ ಬದುಕಿನ ಬಗ್ಗೆ ಗೊಂದಲಗಳು ಮೂಡುವುದು ಸಹಜ. ನಿಮ್ಮ ಭವಿಷ್ಯದ ಕನಸಿನಂತೆ, ವೃತ್ತಿ ಯೋಜನೆಯನ್ನು ಮಾಡಿ, ಅದರಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=MHnPg_sp6E0

3. ನಾನು 2018 ರಲ್ಲಿ ಬಿಇ (ಸಿವಿಲ್) ಮಾಡಿದ್ದು, ಕಾರಣಾಂತರಗಳಿಂದ ವೃತ್ತಿಜೀವನವನ್ನು ಕ್ರಮಬದ್ದವಾಗಿ ರೂಪಿಸಿಕೊಳ್ಳಲು ಈವರೆಗೆ ಸಾಧ್ಯವಾಗಿಲ್ಲ. ಸ್ಥಿರವಾದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು, ಈಗ ನನಗಿರುವ ಆಯ್ಕೆಗಳಾದ ಬಿ.ಇಡಿ, ಎಂಇ, ಎಂಬಿಎ ಕೋರ್ಸ್ಗಳಲ್ಲಿ ಯಾವುದನ್ನು ಆರಿಸಿಕೊಳ್ಳಬಹುದು?

ನೀವು ಗುರುತಿಸಿರುವ ಮೂರೂ ಆಯ್ಕೆಗಳಿಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳು ವಿಭಿನ್ನ ಮತ್ತು ಈ ಎಲ್ಲಾ ಕ್ಷೇ ತ್ರಗಳಲ್ಲೂ ವೃತ್ತಿಯ ಅವಕಾಶಗಳಿವೆ. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ಮುಂದಿನ ಆಯ್ಕೆಯಿರಲಿ. ಉನ್ನತ ಶಿಕ್ಷಣದ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

4. ನಾನು ಎಂಎ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್) ಮಾಡುತ್ತಿದ್ದೇನೆ. ಈ ವಿಷಯಕ್ಕೆ ಸಂಬಂಧಪಟ್ಟ ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.

ಎಂಎ ಪದವಿಯ ನಂತರ ಐಎಎಸ್/ಕೆಎಎಸ್ ಮುಂತಾದ ಸರ್ಕಾರಿ ವಲಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಇನ್ನಿತರ ಕ್ಷೇತ್ರಗಳಾದ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಎನ್‌ಜಿಒ ಸಂಸ್ಥೆಗಳು, ಬ್ಯಾಂಕಿAಗ್, ಗ್ರಾಮೀಣ ಕೈಗಾರಿಕೆಗಳು, ಸಂಶೋಧನಾ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.

5. ನಾನು ಪಿಯುಸಿ ಮುಗಿಸಿದ್ದೇನೆ. ಫೊರೆನ್ಸಿಕ್ ಸೈನ್ಸ್ ಮಾಡಬೇಕೆಂದಿದ್ದೇನೆ. ವೃತ್ತಿಯ ಅವಕಾಶಗಳ ಬಗ್ಗೆ ತಿಳಿಸಿ.

ನಿಮ್ಮ ಇಚ್ಛೆಯಂತೆ ಬಿ.ಎಸ್ಸಿ ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್) ಕೋರ್ಸ್ ಮಾಡಬಹುದು. ವಿಧಿ ವಿಜ್ಞಾನ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

6. ನಮಸ್ತೆ ಸರ್. ನಾನು ಬಿ.ಇಡಿ ಮಾಡುತ್ತಿದ್ದೇನೆ. ಪ್ರಸಕ್ತ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಮಾಡಬಹುದೇ? ದಯವಿಟ್ಟು ಉತ್ತರಿಸಿ.

ನಮಗಿರುವ ಮಾಹಿತಿಯಂತೆ, ಈಗ ಎರಡು ಕೋರ್ಸ್ಗಳನ್ನು ಏಕಕಾಲದಲ್ಲಿ ಮಾಡಬಹುದು. ಹೆಚ್ಚಿನ ಮಾಹಿತಿ, ನಿಯಮಗಳು ಮತ್ತು ನಿಬಂಧನೆಗಳಿಗಾಗಿ, ಗಮನಿಸಿ: https://uni-mysore.ac.in/

7. ನನಗೆ12ನೇತರಗತಿಯಲ್ಲಿ8.1ಸಿಜಿಪಿಎಬಂದಿದ್ದು, ಬಿ.ಎಸ್ಸಿಕೋರ್ಸಿಗೆಕರ್ನಾಟಕದಲ್ಲಿಸೇರಬೇಕು. ಪ್ರವೇಶಪರೀಕ್ಷೆಯಿರುತ್ತದೆಯೇ? ಶುಲ್ಕಇತ್ಯಾದಿಗಳಬಗ್ಗೆಮಾಹಿತಿನೀಡಿ.

ಬಿ.ಎಸ್ಸಿ ಕೋರ್ಸಿಗೆ ಸಾಮಾನ್ಯವಾಗಿ 12ನೇ ತರಗತಿಯ ಫಲಿತಾಂಶದ ಆಧಾರದ ಮೇಲೆ ಪ್ರವೇಶ ಸಿಗುತ್ತದೆ. ಆದರೆ, ಕೆಲವು ಪ್ರತಿಷ್ಠಿತ ಕಾಲೇಜು/ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪರೀಕ್ಷೆ, ವೈಯಕ್ತಿಕ ಸಂದರ್ಶನ ಇತ್ಯಾದಿ ಪ್ರಕ್ರಿಯೆಯೂ ಇರುತ್ತದೆ. ಕಾಲೇಜು ಶುಲ್ಕ, ಹಾಸ್ಟೆಲ್ ವೆಚ್ಚ ಇತ್ಯಾದಿಗಳು, ನೀವು ಯಾವ ಕಾಲೇಜು (ಸರ್ಕಾರಿ, ಖಾಸಗಿ) ಸೇರುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ.  ಬಿ.ಎಸ್ಸಿ ನಂತರದ ಅವಕಾಶಗಳ ಕುರಿತ ಮಾಹಿತಿ ಇಂದಿನ ಪ್ರಶ್ನೋತ್ತರದಲ್ಲಿ ಪ್ರಕಟವಾಗಿದೆ. ದಯವಿಟ್ಟು ಓದಿಕೊಳ್ಳಿ.

8. ನಾನು ಬಿಕಾಂ ಮುಗಿಸಿದ್ದೇನೆ, ಮುಂದೆ ಎಂಕಾಂ ಮತ್ತು ಎಂಬಿಎ ಇವೆರಡರಲ್ಲ್ಲಿ, ಯಾವುದನ್ನು ವೃತ್ತಿಯ ಅವಕಾಶಗಳ ದೃಷ್ಠಿಯಿಂದ ಆರಿಸಿಕೊಳ್ಳಬಹುದು?

ವೃತ್ತಿಯ ದೃಷ್ಠಿಯಿಂದ ಎಂಬಿಎ ಕೋರ್ಸ್ ನಂತರ ಹೆಚ್ಚಿನ ಕ್ಷೇತ್ರಗಳಲ್ಲಿ (ಬ್ಯಾಂಕಿಂಗ್, ಇನ್‌ಶ್ಯೂರೆನ್ಸ್, ಫೈನಾನ್ಸ್, ಎಫ್ಎಂಜಿಸಿ, ರೀಟೇಲ್, ಸರ್ಕಾರಿ ಇತ್ಯಾದಿ) ಅವಕಾಶಗಳಿವೆ. ಎಂಕಾA ಅಥವಾ ಎಂಬಿಎ ನಂತರ, ಆಯಾ ಕ್ಷೇತ್ರಗಳಲ್ಲಿನ ಕೆಲಸದ ವಿವರಗಳಿಗೆ (ಜಾಬ್ ಪ್ರೊಫೈಲ್)  ತಕ್ಕಂತೆ ಜ್ಞಾನ, ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ಪರಿಶೀಲಿಸಲು, ವೃತ್ತಿಯೋಜನೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

9. ನಾನು ಬಿಎಸ್ಸಿ (ಪಿಸಿಎಂ) ಪದವಿ ಮುಗಿಸಿದ್ದೇನೆ. ಮುಂದೆ ಎಂಎಸ್ಸಿ (ಡೇಟಾ ಸೈನ್ಸ್) ಮಾಡಬೇಕೆಂದುಕೊಂಡಿದ್ದೇನೆ. ಎಂ.ಎಸ್ಸಿ ಕೋರ್ಸಿನಲ್ಲಿ ಡೇಟಾ ಸೈನ್ಸ್ ಹಾಗೂ ಡೇಟಾ ಸೈನ್ಸ್ ಮತ್ತು ಅನಲಿಟಿಕ್ಸ್ ಎಂಬಂತೆ ಎರಡು ಆಯ್ಕೆಗಳಿವೆ. ಇವೆರಡರಲ್ಲಿ ಯಾವುದು ಸೂಕ್ತ?

ವ್ಯಾಪಾರದ ಮಾಹಿತಿ, ದತ್ತಾಂಶ ತಿಳುವಳಿಕೆ ಮತ್ತು ತಯಾರಿಕೆ, ಮೌಲ್ಯಮಾಪನ ಮತ್ತು ನಿಯೋಜನೆಗಾಗಿ ಉದ್ಯಮಗಳು ಡೇಟಾ ಸೈನ್ಸ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿAದ,  ಜಾಗತಿಕ ಮಾರುಕಟ್ಟೆಯಲ್ಲಿ ಡೇಟಾ ಸೈನ್ಸ್ ತಜ್ಞರಿಗೆ ಅಪಾರವಾದ ಬೇಡಿಕೆಯಿದೆ.

ಡೇಟಾ ಸೈನ್ಸ್ ಕ್ಷೇತ್ರದಲ್ಲಿರುವ ಅನೇಕ ವಿಭಾಗಗಳಲ್ಲಿ ಅನಲಿಟಿಕ್ಸ್ ಪ್ರಮುಖವೆಂದು ಪರಿಗಣಿಸಲಾಗುತ್ತದೆ.  ಮೇಲ್ನೋಟಕ್ಕೆ ಎಂ.ಎಸ್ಸಿ ಡೇಟಾ ಸೈನ್ಸ್ ಮತ್ತು ಅನಲಿಟಿಕ್ಸ್ ಉತ್ತಮ ಆಯ್ಕೆಯೆಂದು ಅನಿಸಿದರೂ, ಎರಡೂ ಕೋರ್ಸ್ಗಳ ಸಂಪೂರ್ಣ ವಿವರಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಮೇಲಷ್ಟೇ ನಿರ್ಣಯಕ್ಕೆ ಬರಬಹುದು. ಉದಾಹರಣೆಗೆ, ಎರಡೂ ಕೋರ್ಸ್ಗಳ ಕಲಿಕೆಯ ಫಲಿತಾಂಶವೇನು (ಲರ್ನಿಂಗ್ ಔಟ್‌ಕಮ್) ಎನ್ನುವುದು ವೃತ್ತಿಯ ದೃಷ್ಠಿಯಿಂದ ಮುಖ್ಯವಾಗುತ್ತದೆ.  ಹಾಗಾಗಿ, ನೀವು ತಿಳಿಸಿರುವ ಎರಡೂ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ವಿಷಯ, ವಿನ್ಯಾಸ, ಮೂಲಸೌಕರ್ಯಗಳು, ಪ್ಲೇಸ್‌ಮೆಂಟ್ ಮಾಹಿತಿ, ಇತ್ಯಾದಿಗಳನ್ನು ಪರಿಶೀಲಿಸಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳನ್ನು ಗಮನಿಸಿ, ಯಾವ ವಿಶ್ವವಿದ್ಯಾಲಯದ ಕೋರ್ಸ್ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

10. ನಾನುಎಂ.ಎಸ್ಸಿ (ಬಯೋಕೆಮಿಸ್ಟ್ರಿ) ಮಾಡಿಕೆಲಸದಲ್ಲಿದ್ದೇನೆ. ಈಗ, ಡೇಟಾಸೈನ್ಸ್ಬಗ್ಗೆಆಸಕ್ತಿಯಿದೆ. ಯಾವಕೋರ್ಸ್ಮಾಡಬಹುದು?

ಡೇಟಾ ಸೈನ್ಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಆಸಕ್ತಿಯ ಜೊತೆಗೆ ಸಮಸ್ಯೆಗಳ ಪರಿಹಾರ, ವಿವರಗಳಿಗೆ ಗಮನ, ಮೆಷಿನ್ ಲರ್ನಿಂಗ್, ಪ್ರೋಗ್ರಾಮಿಂಗ್ ಮುಂತಾದ ಕೌಶಲಗಳಿರಬೇಕು. ಈಗ ನೀವು ಕೆಲಸ ಮಾಡುತ್ತಿರುವ ಕ್ಶೇತ್ರದಲ್ಲಿ ಮುಂದುವರಿಯುತ್ತಾ ಡೇಟಾ ಸೈನ್ಸ್ ಕ್ಷೇತ್ರದ ತಜ್ಞತೆಗಾಗಿ, ಅಲ್ಪಾವಧಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ಗಳನ್ನು ಮಾಡಬಹುದು. ಇದಾದ ನಂತರ, ವೃತ್ತಿಯ ದೃಷ್ಠಿಯಿಂದ ಈ ಕ್ಷೇತ್ರ ನಿಮಗೆ ಸೂಕ್ತವೆನಿಸಿದರೆ ಮತ್ತು ಹೆಚ್ಚಿನ ತಜ್ಞತೆ ಅಗತ್ಯವೆನಿಸಿದರೆ, ಸ್ನಾತಕೋತ್ತರ ಪದವಿಯನ್ನು ಮಾಡಬಹುದು.

11. ನಾನು ಪಿಯುಸಿ ಮುಗಿಸುತ್ತಿದ್ದು ಮುಂದೆ ಎಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ಇವೆರಡರಲ್ಲಿ ಅಯ್ಕೆ ಮಾಡಲು ಗೊಂದಲವಿದ್ದು ಮಾರ್ಗದರ್ಶನದ ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ.

ನೀವು ಕೇಳಿರುವ ಎರಡೂ ಆಯ್ಕೆಗಳು ಉತ್ತಮವಾದದ್ದಾದರೂ, ನಿಮಗೆ ಯಾವುದು ಹೆಚ್ಚು ಸೂಕ್ತವೆಂದು ಮೌಲ್ಯಮಾಪನ ಮಾಡಬೇಕು. ವೈದ್ಯರಾಗಲು ಸೇವಾ ಮನೋಭಾವ, ಜ್ಞಾಪಕ ಶಕ್ತಿ, ನಿಷ್ಠೆ, ಪ್ರಾಮಾಣಿಕತೆ, ಸಮಯದ ನಿರ್ವಹಣೆ, ವೃತ್ತಿ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಅಗತ್ಯವಾದರೆ, ಎಂಜಿನಿಯರಿಂಗ್ ವೃತ್ತಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ ಅಗತ್ಯವಾಗುತ್ತದೆ. ಹಾಗಾಗಿ, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳು, ಧ್ಯೇಯಗಳನ್ನು ಗುರುತಿಸಿ, ವೃತ್ತಿಯ ಆಯ್ಕೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

12. ನಾನು12ನೇತರಗತಿಯಲ್ಲಿದ್ದುಡಾಕ್ಟರ್ಆಗಬೇಕೆಂದಿದ್ದೇನೆ. ಸರ್ಕಾರಿ ಸೀಟ್ ಪಡೆಯಲು ಸಿಇಟಿ ಬರೆದರೆ ಸಾಕೇ ಅಥವಾ ನೀಟ್ ಬರೆಯಲೇಬೇಕೇ? ಒಳ್ಳೆಯ ಕಾಲೇಜ್ ಸೀಟ್ ಸಿಗಲು ಯಾವುದನ್ನು ಬರೆಯಬೇಕು?

ದೇಶದ ವಿವಿಧ ಕಾಲೇಜುಗಳ ವೈದ್ಯಕೀಯ ಸಂಬಂಧಿತ ಪದವಿ ಪೂರ್ವ ಕೋರ್ಸ್ಗಳಿಗೆ, ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ)ಯನ್ನು ಆಯೋಜಿಸುತ್ತದೆ. ನೀಟ್ ಪರೀಕ್ಷೆಯ ಮಾದರಿಯಂತೆ, ಭೌತಶಾಸ್ತç, ರಸಾಯನಶಾಸ್ತç ಮತ್ತು ಜೀವಶಾಸ್ತç ವಿಷಯಗಳ 180 ಪ್ರಶ್ನೆಗಳಿರುತ್ತದೆ. ಸರಿಯಾದ ಉತ್ತರಗಳಿಗೆ 4 ಅಂಕಗಳೂ, ತಪ್ಪಾದ ಪ್ರತಿ ಉತ್ತರಕ್ಕೆ 1 ಅಂಕವನ್ನು ಕಡಿತಗೊಳಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ರ‍್ಯಾಂಕ್ ಆಧಾರದ ಮೇಲೆ ಸೀಟ್ ಹಂಚಿಕೆಯಾಗುತ್ತದೆ. ಕಳೆದ ವರ್ಷಗಳಲ್ಲಿ, ರ‍್ಯಾಂಕ್ ಆಧಾರದ ಮೇಲೆ ವಿವಿಧ ಕಾಲೇಜುಗಳ ಸೀಟ್ ಹಂಚಿಕೆಯ ಮಾಹಿತಿಯನ್ನು ವಿಶ್ಲೇಷಿಸಿ, ನಿಮಗೆ ಸೂಕ್ತವೆನಿಸುವ ಕಾಲೇಜು ಪ್ರವೇಶಕ್ಕೆ ಬೇಕಾಗುವ ರ‍್ಯಾಂಕ್ ಮತ್ತು ಅಂಕಗಳನ್ನು ಅಂದಾಜು ಮಾಡಿ, ಪರೀಕ್ಷೆಯ ಕಾರ್ಯತಂತ್ರವನ್ನು ರೂಪಿಸಬೇಕು. ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನೀಟ್ ಪರೀಕ್ಷೆ ಕಡ್ಡಾಯ; ಸಿಇಟಿ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಒಳ್ಳೆಯ ಕಾಲೇಜುಗಳನ್ನು ಗುರುತಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

13. ನಾನೀಗ ಬಿ.ಎಸ್ಸಿ ಮೂರನೇ ವರ್ಷದಲ್ಲಿದ್ದು, ಮುಂದೆ ಎಂ.ಸಿಎ ಅಥವಾ ಎಂ.ಎಸ್ಸಿ ಮಾಡಬೇಕೆಂದಿದ್ದೇನೆ. ಸರಿಯಾದ ಆಯ್ಕೆ ಯಾವುದೆಂದು ತಿಳಿಸಿ.

ನೀವು ಯಾವ ವಿಷಯಗಳಲ್ಲಿ ಬಿ.ಎಸ್ಸಿ ಮಾಡುತ್ತಿದ್ದೀರೆಂದು ತಿಳಿಸಿಲ್ಲ. ಎಂ.ಸಿಎ ಕೋರ್ಸ್, ಕಂಪ್ಯೂಟರ್ ವಿಜ್ಞಾನದ ಸಿದ್ಧಾಂತಗಳು ಮತ್ತು ಅಪ್ಲಿಕೇಷನ್ಸ್ ಕುರಿತು ಹೆಚ್ಚು ಕೇಂದ್ರೀಕೃತವಾಗಿರುತ್ತದೆ. ಎಂ.ಎಸ್ಸಿ ಕೋರ್ಸ್ ನಂತರದ ಅವಕಾಶಗಳು, ಕೋರ್ಸಿನ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ವೃತ್ತಿಯ ದೃಷ್ಠಿಯಿಂದ, ಎಂ.ಸಿಎ ಅಥವಾ ಎಂ.ಎಸ್ಸಿ ನಂತರ, ಆಯಾ ಕ್ಷೇತ್ರಗಳಲ್ಲಿನ ಕೆಲಸದ ವಿವರಗಳಿಗೆ (ಜಾಬ್ ಪ್ರೊಫೈಲ್) ತಕ್ಕಂತೆ ಜ್ಞಾನ, ಆಸಕ್ತಿ, ಅಭಿರುಚಿ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ಪರಿಶೀಲಿಸಲು, ನಿಮ್ಮ ಸ್ವಾಭಾವಿಕ ಪ್ರತಿಭೆ, ಆಸಕ್ತಿ, ಒಲವು ಮತ್ತು ಕೌಶಲಗಳ ಮೌಲ್ಯಮಾಪನ ಮಾಡಿ, ವೃತ್ತಿಯೋಜನೆಯನ್ನು ಮಾಡುವುದು ಸೂಕ್ತ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

14. ನಾನು ಬಿಕಾಂ ದ್ವಿತೀಯ ವರ್ಷದಲ್ಲಿದ್ದು, ಸಿಎ ಮಾಡಬೇಕೆಂದುಕೊAಡಿದ್ದೇನೆ. ಈಗಿನಿಂದಲೇ ಪ್ರಾರಂಭ ಮಾಡಬೇಕಾದರೆ ಹೇಗೆ? ದಯವಿಟ್ಟು ತಿಳಿಸಿ.

ಸಿಎ ಮಾಡಲು ಎರಡು ಆಯ್ಕೆಗಳಿರುತ್ತದೆ. ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಫೌಂಡೇಷನ್ ಕೋರ್ಸ್ಗೆ ಸೇರಿ, ಶೇ 50ರ ಅಂಕಗಳನ್ನು ಪಡೆದರೆ, ಇಂಟರ್‌ಮೀಡಿಯಟ್ ಕೋರ್ಸಿಗೆ ಅರ್ಹತೆ ಸಿಗುತ್ತದೆ. ಬಿಕಾಂ ಪದವೀಧರರು ಫೌಂಡೇಷನ್ ಕೋರ್ಸ್ ಮಾಡುವ ಅಗತ್ಯವಿಲ್ಲ. ಬಿಕಾಂ ಪದವಿಯಲ್ಲಿ ಕನಿಷ್ಠ ಶೇ 55 ಅಂಕಗಳನ್ನು ಗಳಿಸಿ ನೇರವಾಗಿ ಸಿಎ ಇಂಟರ್‌ಮೀಡಿಯಟ್ ಕೋರ್ಸ್ ಮಾಡಬಹುದು. ಹಾಗಾಗಿ, ಈಗಲೇ ಫೌಂಡೇಷನ್ ಕೋರ್ಸ್ ಮಾಡುವುದು ಅಥವಾ ಬಿಕಾಂ ನಂತರ ನೇರವಾಗಿ ಇಂಟರ್‌ಮೀಡಿಯಟ್ ಕೋರ್ಸ್ ಮಾಡುವುದು, ನಿಮ್ಮ ಆಯ್ಕೆ.

15. ನನಗೆ ಕಿವಿ ಕೇಳಿಸುವುದಿಲ್ಲ. ನಾನು ಡಿಪ್ಲೊಮಾ (ಸಿವಿಲ್ ಎಂಜಿನಿಯರಿಗ್) ಮುಗಿಸಿದ್ದೇನೆ. ಆದರೆ ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದು, ನನ್ನ ಅಣ್ಣನ ಸಹಾಯದಿಂದ ಉತ್ತೀರ್ಣನಾಗಲು ಪ್ರಯತ್ನಿಸುತ್ತಿದ್ದೇನೆ. ಮುಂದೆ ಬಿಇ ಮಾಡಬೇಕು; ಆದರೆ, ಪಾಠಗಳನ್ನು ಕೇಳಿಸಿಕೊಳ್ಳದೆ ಬಿಇ ಓದುವುದು ಕಷ್ಟ. ಕಾಲೇಜಿನಲ್ಲಿ ಉಪನ್ಯಾಸಕರನ್ನು ಕೇಳುವುದಕ್ಕೆ ಭಯ; ಏಕೆಂದರೆ, ಅವರು ನನಗೆ ಅರ್ಥ ಆಗುವ ಹಾಗೆ ಹೇಳುವುದಿಲ್ಲ. ನನ್ನ ಪ್ರಯತ್ನದಿಂದಲೇ ಉತ್ತೀರ್ಣನಾಗುವುದು ಹೇಗೆ?

ಶ್ರವಣ ದೋಷವಿದ್ದರೂ, ಡಿಪ್ಲೊಮಾ ಮುಗಿಸಿ ಎಂಜಿನಿಯರಿಂಗ್ ಪದವಿಯನ್ನು ಮಾಡುವ ಧ್ಯೇಯವಿರುವ ನಿಮಗೆ ಅಭಿನಂದನೆಗಳು. ಎಂಜಿನಿಯರಿಂಗ್ ಪದವಿಯನ್ನು ಮಾಡಲು ತಮಿಳುನಾಡಿನ ಕೃಷ್ಣನ್‌ಕೋವಿಲ್‌ನಲ್ಲಿರುವ ಕಲಸಲಿಂಗಮ್ ಅಕಾಡೆಮಿ ಅಫ್ ರಿಸರ್ಚ್ ಅಂಡ್ ಎಜುಕೇಷನ್ ಸಂಸ್ಥೆಯನ್ನು ಸಂಪರ್ಕಿಸಿ. ಈ ಸಂಸ್ಥೆ ಶ್ರವಣದೋಷವಿರುವ ವಿದ್ಯಾರ್ಥಿಗಳಿಗೆಂದೇ ವಿಶೇಷವಾದ ಬಿಟೆಕ್ ಕೋರ್ಸ್ನ್ನು ಮಾಡಲು ಬೇಕಾಗುವ ಎಲ್ಲಾ ಮೂಲಸೌಕರ್ಯಗಳನ್ನು ಹೊಂದಿದೆ ಎನ್ನಲಾಗುತ್ತದೆ. ದೇಶದಲ್ಲಿರುವ ಇಂತಹ ಸಂಸ್ಥೆಗಳನ್ನು ಸಂಪರ್ಕಿಸಿ ನಿಮ್ಮ ಧ್ಯೇಯವನ್ನು ಸಾಧಿಸಲು ಪ್ರಯತ್ನಿಸಿ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: http://kare.kalasalingam.ac.in/course/b-techship-computer-science-and-engineering/ ಇದಲ್ಲದೆ, ನೀವು ಓದುವ ಕಾರ್ಯತಂತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ನಿಮ್ಮ ಓದುವಿಕೆ ಹೆಚ್ಚು ಪರಿಣಾಮಕಾರಿಯಾಗಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ಲೇಖನವನ್ನು ಗಮನಿಸಿ: http://www.vpradeepkumar.com/effective-learning/

16. ನಾನು ಬಿಎಸ್ಸಿ (ಪಿಸಿಎಂ) ಪದವಿ ಮುಗಿಸಿದ್ದೇನೆ. ಮುಂದೆ ಎಂಎಸ್ಸಿ (ಡೇಟಾ ಸೈನ್ಸ್) ಮಾಡಬೇಕೆಂದುಕೊಂಡಿದ್ದೇನೆ. ಎಂ.ಎಸ್ಸಿ ಕೋರ್ಸಿನಲ್ಲಿ ಡೇಟಾ ಸೈನ್ಸ್ ಹಾಗೂ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಎಂಬಂತೆ ಎರಡು ಆಯ್ಕೆಗಳಿವೆ. ಇವೆರಡರಲ್ಲಿ ಯಾವುದು ಸೂಕ್ತ?

ವ್ಯಾಪಾರದ ಮಾಹಿತಿ, ದತ್ತಾಂಶ ತಿಳುವಳಿಕೆ ಮತ್ತು ತಯಾರಿಕೆ, ಮೌಲ್ಯಮಾಪನ ಮತ್ತು ನಿಯೋಜನೆಗಾಗಿ ಉದ್ಯಮಗಳು ಡೇಟಾ ಸೈನ್ಸ್ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿAದ, ಜಾಗತಿಕ ಮಾರುಕಟ್ಟೆಯಲ್ಲಿ ಡೇಟಾ ಸೈನ್ಸ್ ತಜ್ಞರಿಗೆ ಅಪಾರವಾದ ಬೇಡಿಕೆಯಿದೆ.

ಡೇಟಾ ಸೈನ್ಸ್ ಕ್ಷೇತ್ರದಲ್ಲಿರುವ ಅನೇಕ ವಿಭಾಗಗಳಲ್ಲಿ ಅನಾಲಿಟಿಕ್ಸ್ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಮೇಲ್ನೋಟಕ್ಕೆ ಎಂ.ಎಸ್ಸಿ ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್ ಉತ್ತಮ ಆಯ್ಕೆಯೆಂದು ಅನಿಸಿದರೂ, ಎರಡೂ ಕೋರ್ಸ್ಗಳ ಸಂಪೂರ್ಣ ವಿವರಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಮೇಲಷ್ಟೇ ನಿರ್ಣಯಕ್ಕೆ ಬರಬಹುದು. ಉದಾಹರಣೆಗೆ, ಎರಡೂ ಕೋರ್ಸ್ಗಳ ಕಲಿಕೆಯ ಫಲಿತಾಂಶವೇನು (ಲರ್ನಿಂಗ್ ಔಟ್‌ಕಮ್) ಎನ್ನುವುದು ವೃತ್ತಿಯ ದೃಷ್ಠಿಯಿಂದ ಮುಖ್ಯವಾಗುತ್ತದೆ. ಹಾಗಾಗಿ, ನೀವು ತಿಳಿಸಿರುವ ಎರಡೂ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ವಿಷಯ, ವಿನ್ಯಾಸ, ಮೂಲಸೌಕರ್ಯಗಳು, ಪ್ಲೇಸ್‌ಮೆಂಟ್ ಮಾಹಿತಿ, ಇತ್ಯಾದಿಗಳನ್ನು ಪರಿಶೀಲಿಸಿ, ನಿಮ್ಮ ಆಸಕ್ತಿ, ಅಭಿರುಚಿ ಮತ್ತು ಕೌಶಲಗಳನ್ನು ಗಮನಿಸಿ, ಯಾವ ವಿಶ್ವವಿದ್ಯಾಲಯದ ಕೋರ್ಸ್ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

17. ನಾನು ದ್ವಿತೀಯ ಪಿಯುಸಿ ಪರೀಕ್ಷೆಯ ಎಲ್ಲಾ ವಿಷಯದಲ್ಲಿಯೂ ತೇರ್ಗಡೆಯಾಗಿರುತ್ತೇನೆ. ಒಂದೆರಡು ವಿಷಯದಲ್ಲಿ ಅತೃಪ್ತಿಯಿದೆ. ಫಲಿತಾಂಶವನ್ನು ತಿರಸ್ಕರಿಸಿ ಮತ್ತೆ ಪರೀಕ್ಷೆ ಬರೆದರೆ ಪುನರಾವರ್ತಿತ ಅಭ್ಯರ್ಥಿ ಎಂದು ಅಂಕ ಪಟ್ಟಿಯಲ್ಲಿ ನಮೂದಿಸುತ್ತಾರಾ? ಹಾಗೂ, ಅದರಲ್ಲಿ ಮೊದಲಿಗಿಂತಲೂ ಕಡಿಮೆ ಅಂಕಗಳು ಬಂದರೆ ಯಾವ ಅಂಕವನ್ನು ಪರಿಗಣಿಸುತ್ತಾರೆ?

ನಮಗಿರುವ ಮಾಹಿತಿಯಂತೆ, ಒಂದು ಬಾರಿ ಫಲಿತಾಂಶವನ್ನು ತಿರಸ್ಕರಿಸಿ, ಪೂರಕ ಪರೀಕ್ಷೆಗೆ ಹಾಜರಾದ ಮೇಲೆ ಹಿಂದಿನ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳನ್ನು ಮರುಪಡೆಯಲು ಅವಕಾಶವಿರುವುದಿಲ್ಲ. ಹಾಗೂ, ಅಂಕಪಟ್ಟಿಯಲ್ಲಿನ ವಿದ್ಯಾರ್ಥಿಯ ವಿವರದಲ್ಲಿ ‘ಪುನರಾವರ್ತಿತ (ರಿಪೀಟರ್) ಎಂಬ ಮಾಹಿತಿಯಿರುತ್ತದೆ.