Q&A for students – Week 1

1.    ನಾನು ಎರಡನೇ ವರ್ಷದ ಬಿಎ‍ಸ್‍ಸಿಯಲ್ಲಿ ಓದುತ್ತಿದ್ದು ಗಣಿತದಲ್ಲಿ ಎಂಎಸ್‍ಸಿ ಕೋರ್ಸ್ ಅನ್ನು ಮಾಡಲಿಚ್ಛಿಸಿದ್ದೇನೆ. ಆದರೆ, ನನ್ನ ಹಿತೈಶಿಗಳು ಭೌತಶಾಸ್ತ್ರದಲ್ಲಿ ಮಾಡಿದರೆ ಹೆಚ್ಚಿನ ಅವಕಾಶಗಳಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದನ್ನು ತೆಗೆದುಕೊಳ್ಳಲಿ?

ಎಂಎಸ್‍ಸಿ. ಗಣಿತದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಖಾಸಗೀ ಕ್ಷೇತ್ರದ ಐಟಿ, ರಿಸರ್ಚ್  ಕಂಪನಿಗಳಲ್ಲಿ, ಸರ್ಕಾರಿ ವಲಯದಲ್ಲಿ ವೃತ್ತಿಯ ಅವಕಾಶಗಳಿರುತ್ತವೆ.  ಇದಲ್ಲದೆ, ಡಾಕ್ಟರೇಟ್ ಮಾಡಿ ಅಥವಾ ಒ.Sಛಿ. ನಂತರವೂ ಶಿಕ್ಷಕ ವೃತ್ತಿಯ ಅವಕಾಶಗಳಿವೆ. ಇದಲ್ಲದೆ, ಐಎಎಸ್   ಕೂಡಾ ಮಾಡಬಹುದು. ಹಾಗಾಗಿ, ನಿಮಗೆ ಒಲವಿರುವ ವಿಷಯವನ್ನು ಆರಿಸುವುದು ಉತ್ತಮ.

2.   ದ್ವಿತೀಯ ಪಿ.ಯು.ಸಿ. (ಕಾಮರ್ಸ್) ನಂತರ ಏನು ಮಾಡಬಹುದು?

ದ್ವಿತೀಯ ಪಿ.ಯು.ಸಿ. (ಕಾಮರ್ಸ್) ನಂತರ ಬಿಕಾಂ, ಸಿಎ, ಎಸಿಎಸ್, ಐಸಿಡಬ್ಯುಎ ಇತ್ಯಾದಿಯಂತೆ ಅವಕಾಶಗಳಿವೆ. ನಿಮಗೆ ಇಷ್ಟವಿರುವ  ವೃತ್ತಿಯನ್ನು   ಮೊದಲು ನಿರ್ಧರಿಸಿ ಅದರಂತೆ ಕೋರ್ಸ್ ಅಯ್ಕೆ ಉತ್ತಮ.

3.   ನಾನು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದೇನೆ. ಸ್ಪರ್ದಾತ್ಮಕ ಪರೀಕೆಗಳಲ್ಲಿ ಆಸಕ್ತಿ ಇದೆ. ಶಿಕ್ಷಣ ಸಂಬಂಧಿತ ಸಾಲವಿರುವುದರಿಂದ ಮೊದಲು ಕೆಲಸಕ್ಕೆ ಸೇರಿ ಸ್ಪರ್ಧಾತ್ಮಕ ಪರೀಕೆಗಳಿಗೆ ತಯಾರಾಗಲೇ? ಗೊಂದಲವಿದೆ; ಸಹಾಯ ಮಾಡಿ.

ನೀವು ಸಾಲ ಪಡೆದಿರುವ ಸಂಸ್ಥೆಯ ಜೊತೆ ಮಾತನಾಡಿ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದು. ಬ್ಯಾಂಕ್‍ಗಳಲ್ಲಿ ಇಂತಹ ವ್ಯವಸ್ಥೆ ಇದೆ. ನೀವು ಯಾವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿಯಿದ್ದೀರಿ ಎನ್ನುವ ಮಾಹಿತಿ ಇಲ್ಲ, ಹಾಗಾಗಿ, ಕೆಲಸಕ್ಕೆ ಸೇರಿಯೂ ಕೂಡ ಸಮಯದ ನಿರ್ವಹಣೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬಹುದು. ಅಂತಿಮ ನಿರ್ಧಾರ ನಿಮ್ಮ ವೈಯಕ್ತಿಕ ಆದ್ಯತೆಯಂತಿರಲಿ.

4.   ನಾನು 10ನೇ ತರಗತಿಯ ವಿದ್ಯಾರ್ಥಿ ಹಾಗೂ ಐಎಎಸ್  ಮಾಡಲು ಬಯಸಿದ್ದೆನೆ. ನಾನೊಬ್ಬ ಕನ್ನಡ ಮಾಧ್ಯಮ ವಿದ್ಯಾರ್ಥಿ. ಹಾಗಾಗಿ ನನಗೆ ವಿಜ್ಞಾನ ವಿಭಾಗದಲ್ಲಿ ಆಸಕ್ತಿ ಇಲ್ಲ. ನಾನು ಯಾವ ವಿಭಾಗ ಆರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ.

ಐಎಎಸ್ ಮಾಡಿದ ಮೇಲೆ ಅಖಿಲ ಭಾರತ, ಗ್ರೂಪ್ ಎ, ಗ್ರೂಪ್ ಬಿ ಸೇರಿದಂತೆ, ಯಾವ ಸವೀಸ್ ವಿಭಾಗಕ್ಕೆ ಸೇರಬೇಕು ಎನ್ನುವ ಯೋಜನೆಯಿದ್ದರೆ, ಅದಕ್ಕೆ ಅನುಗುಣವಾಗಿ  ಪಿಯುಸಿ ವಿಷಯಗಳ ಆಯ್ಕೆ ಸುಲಭ. ನೀವು  ಪಿಯುಸಿಯಲ್ಲಿ ಆರ್ಟ್ಸ್ ಅಥವಾ ಕಾಮರ್ಸ್ ತೆಗೆದುಕೊಳ್ಳಬಹುದು. 

5.   ನಾನು 10ನೇ ತರಗತಿಯಲ್ಲಿ ಓದುತ್ತಿದ್ದೇನೆ. 10ನೇ ತರಗತಿ ಆದ ಮೇಲೆ ಯಾವ ವಿಭಾಗ ತೆಗೆದುಕೊಳ್ಳುವ ಗೊಂದಲದಲ್ಲಿದ್ದೀನಿ. ನಾನು ಯಾವ ವಿಭಾಗ ತೆಗೆದುಕೊಳ್ಳುವದು ಸೂಕ್ತ?

ಕೋರ್ಸ್ ನಿರ್ಧಾರಕ್ಕೆ ಮುಂಚೆ ನಿಮ್ಮ ವೃತ್ತಿ ಜೀವನದ ಬಗ್ಗೆ ಚಿಂತಿಸಿ. ನಿಮಗೆ ಇಷ್ಟವಿರುವ, ಒಲವಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಆರಿಸುವುದು ಒಳ್ಳೆಯದು. ಅಂದರೆ, ಡಾಕ್ಟರ್, ಎಂಜಿನಿಯರ್, ಲಾಯರ್, ವಿಜ್ಞಾನಿ, ಶಿಕ್ಷಕ ವೃತ್ತಿ, ಫ್ಯಾಶನ್ ಡಿಸೈನರ್, ಆರ್ಕಿಟೆಕ್ಟ್, ಜರ್ನಲಿಸ್ಟ್, ಐಎಎಸ್  ಸೇರಿದಂತೆ ನೂರಾರು ವೃತ್ತಿಗಳಿವೆ. ವೃತ್ತಿಯ ಆಯ್ಕೆಯ ನಂತರ ಪಿಯುಸಿ ವಿಭಾಗದ ಆಯ್ಕೆಯಲ್ಲಿ ಗೊಂದಲವಿರುವುದಿಲ್ಲ.

6.   ನನಗೆ ಐಎಎಸ್  ಆಗಬೇಕು ಅಂತ ಆಸೆ. 10 ನೇ ತರಗತಿ ನಂತರ ಬಿಎ ಅಥವಾ ಬಿಎಸ್‍ಸಿ ತೆಗೆದುಕೊಳ್ಳಬೇಕಾ? ಅದನ್ನು ಓದುವುದಕ್ಕೆ ಎಷ್ಟು ಖರ್ಚಾಗುತ್ತದೆ. ಫೀಸ್? ಮತ್ತೆ ಕೆಲಸ ಸಿಕ್ಕಿದ ಮೇಲೆ ಕರ್ನಾಟಕದಲ್ಲಿ ಕೆಲಸ ಮಾಡಬೇಕು ಅಂದರೆ ಏನು ಮಾಡಬೇಕು.

ಐಎಎಸ್  ಪರೀಕ್ಷೆಯನ್ನು ಯಾವುದೇ ಪದವಿಯ ನಂತರ ಮಾಡಬಹುದು. ಹಾಗಾಗಿ ಬಿಎ ಅಥವಾ ಬಿಎಸ್‍ಸಿ ಆಯ್ಕೆ ನಿಮ್ಮದು. ಐಎಎಸ್ ಪರೀಕ್ಷೆಯ ತಯಾರಿಗೆ ನೀವು ಕೋಚಿಂಗ್ ತೆಗೆದುಕೊಳ್ಳಬಹುದು. ಅಥವಾ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಖರೀದಿಸಿ [ಸುಮಾರು 20 ಸಾವಿರ] ನೀವೇ ತಯಾರಿ ಮಾಡಿಕೊಳ್ಳಬಹುದು. ಕೋಚಿಂಗ್ ತೆಗೆದುಕೊಂಡರೆ ಸುಮಾರು 1 ರಿಂದ 1.5 ಲಕ್ಷ ಖರ್ಚಾಗಬಹುದು. ಐಎಎಸ್ ನೇಮಕಾತಿಯ ಉದ್ದೇಶ ಮತ್ತು ನಿಯಮಗಳ ಅನುಸಾರ, ಅಧಿಕಾರಿಗಳು ತಮ್ಮ ರಾಜ್ಯಕ್ಕೆ ಸಾಮಾನ್ಯವಾಗಿ ನೇಮಕವಾಗುವುದಿಲ್ಲ.

7.    ನಾನು ಬಿಕಾಂ ಮಾಡಿ ಐಸಿಡಬ್ಯುಎ ಕೋರ್ಸಿನ ಇಂಟರ್‍ಮೀಡಿಯೆಟ್ ಒಂದು ಗ್ರೂಪ್ ಮುಗಿಸಿದ್ದೇನೆ. ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಕೆಳಗೆ ಕೆಲಸ ಮಾಡುತ್ತಿದ್ದೆ. ಲಾಕ್ ಡೌನ್ ಕಾರಣದಿಂದ ಈಗ ಅದೂ ಇಲ್ಲದೆ ಮನೆಯಲ್ಲಿದ್ದೇನೆ. ಉಳಿದಿರುವ ಕೋರ್ಸ್ ಮುಗಿಸಿ ಕೆಲಸಕ್ಕೆ ಸೇರಲು ಇನ್ನೂ ಎರಡು ವರ್ಷಗಳಾಗುತ್ತದೆ. ನಿಮ್ಮ ಸಲಹೆ ಬೇಕು.

ಸಾಧ್ಯವಾದರೆ, ನಿಮ್ಮ ವೃತ್ತಿ ಸಂಬಂಧಿತ ವ್ಯಕ್ತಿತ್ವ ವಿಕಸನದ ಕೋರ್ಸ್ ಮಾಡಿ. ಆನ್‍ಲೈನ್ ಶುಲ್ಕ ರಹಿತ ಕೋರ್ಸ್‍ಗಳೂ ಇವೆ. ಈ ಕೋರ್ಸ್ ಮತ್ತು ಬಿಕಾಂ ಕೋರ್ಸ್ ಆಧಾರದ ಮೇಲೆ ಕೆಲಸಕ್ಕೆ ಸೇರಿ, ಐಸಿಡಬ್ಯುಎ ಮುಂದುವರೆಸಿ. ಈ ಕಾರ್ಯದಲ್ಲಿ ಸಮಯದ ನಿರ್ವಹಣೆ ಅತ್ಯಗತ್ಯ.

8. ಬಿಟೆಕ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಹಾಗೂ ಡಿಫಾರ್ಮ ಕೋರ್ಸ್ ಉಪಯುಕ್ತತೆ ಬಗ್ಗೆ ತಿಳಿಸಿ.

ಬಿಟೆಕ್ ಕೋರ್ಸ್‍ನಲ್ಲಿ 100ಕ್ಕೂ ಹೆಚ್ಚು ಸ್ಪೆಷಲೈಶನ್‍ಗಳಿವೆ ಹಾಗೂ ದೇಶದಲ್ಲಿ 3500 ಕ್ಕೂ ಹೆಚ್ಚು ಕಾಲೇಜುಗಳಿವೆ. ಬಿಟೆಕ್ ಪಾಸಾದ ವಿದ್ಯಾರ್ಥಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಎಂಜಿನಿಯರಿಂಗ್ ವೃತ್ತಿಗೆ ಮುಖ್ಯವಾಗಿ ಸಂವಹನ ಕೌಶಲ್ಯ, ತಾರ್ಕಿಕ ಪ್ರತಿಪಾದನಾ ಕೌಶಲ್ಯ ಅಂದ್ರೆ  ಸಮಸ್ಯೆಗಳನ್ನ ಅರ್ಥ ಮಾಡಿಕೊಂಡು ಪರಿಹಾರವನ್ನ ಒದಗಿಸೋ ಕೌಶಲ್ಯ, ವಿಶ್ಲೇಷಣೆ ಮಾಡೋ ಕೌಶಲ್ಯಗಳು ಬೇಕಾಗುತ್ತದೆ. ವೃತ್ತಿಯ ಯಶಸ್ಸಿಗೆ ವಿಧ್ಯಾರ್ಥಿಗಳು ಈ ಕೌಶಲ್ಯಗಳನ್ನೂ ಸಹ ಬೆಳೆಸಿಕೊಳ್ಳಬೇಕು.

ಡಿಫಾರ್ಮ ಕೋರ್ಸ್ ನಂತರ ಸರ್ಕಾರಿ ಮತ್ತು ಖಾಸಗಿ  ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್ ಕೆಲಸ ಮಾಡಬಹುದು. ಹಾಗೂ ನೋಂದಣಿ ನಂತರ, ಮೆಡಿಕಲ್ ಸ್ಟೋರ್ ವ್ಯಾಪಾರ ಮಾಡಬಹುದು.

9.   ಪಿಯುಸಿ ನಂತರ ನಾನು ಆಯ್ಕೆ ಮಾಡಲು ಇಚ್ಛಿಸುವ ಕೋರ್ಸ್‍ಗೆ ಕಳಿಸಲು ನನ್ನ ತಂದೆಗೆ ಒಪ್ಪಿಗೆ ಇಲ್ಲ. ಅವರನ್ನು ಒಪ್ಪಿಸಲು ಸಾಧ್ಯವಾಗಿಲ್ಲ, ಏನು ಮಾಡಬೇಕು?

ಎಲ್ಲಾ ಪೋಷಕರು ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಎಂದೇ ಬಯಸುತ್ತಾರೆ. ಪ್ರಾಯಶ: ನಿಮ್ಮ ತಂದೆಯವರಿಗೆ, ನೀವು ಇಚ್ಛಿಸುವ ಕೋರ್ಸ್‍ನ್ನು ಯಶಸ್ವಿಯಾಗಿ ಪೂರೈಸಲು ಬೇಕಾದ ಸಾಮಥ್ರ್ಯಗಳು ನಿಮ್ಮಲ್ಲಿ ಇವೆಯೇ ಎನ್ನುವ ಅಥವಾ ಕೋರ್ಸ್ ಸಂಬಂಧಿತ ವೃತ್ತಿಗಳ ಬಗ್ಗೆ ಇನ್ನಿತರ ಸಂದೇಹಗಳಿರಬಹುದು. ಆದ್ದರಿಂದ,  ಅವರ ಸಂದೇಹಗಳ, ಸಮಸ್ಯೆಗಳ ನಿವಾರಣೆಯನ್ನು ನೀವು ಮಾಡಲೇಬೇಕು. ಇದು ಸಾಧ್ಯವಾಗದಿದ್ದರೆ, ಶೈಕ್ಷಣಿಕ ಸಮಾಲೋಚಕರನ್ನು ಸಂಪರ್ಕಿ.

10.  ನಾನು 12ನೇ ತರಗತಿಯ ನಂತರ ಅಇಖಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನನಗೆ, ಅರಣ್ಯ ಶಾಸ್ತ್ರ, ವನ್ಯಜೀವಿಗಳು, ಪಕ್ಷಿ ವಿಜ್ಞಾನ, ಪರಿಸರ ಸಂರಕ್ಷಣೆ ವಿಷಯಗಳಲ್ಲಿ ಆಸಕ್ತಿ. ಮನೆಯ ನಿರ್ವಹಣೆಯನ್ನು ನಾನೇ ಮಾಡಬೇಕು. ಸೂಕ್ತ ಕೋರ್ಸ್, ಒಳ್ಳೆಯ ಸಂಬಳ ದೊರಕುವ ಸರ್ಕಾರಿ ನೌಕರಿಯ ಬಗ್ಗೆ ಮಾಹಿತಿಯನ್ನು ನೀಡಿ.

ಬಹಳ ಒಳ್ಳೆಯ ವಿಷಯಗಳಲ್ಲಿ ನಿಮ್ಮ ಆಸಕ್ತಿ ಇದೆ. ಅಭಿನಂದನೆಗಳು. ನಿಮಗೆ ಇಷ್ಟವಿರುವ ಈ ಯಾವುದೇ ವಿಚಾರಗಳಲ್ಲಿ ಪದವಿಯನ್ನು ಪಡೆದು ಪ್ರವೇಶ ಪರೀಕ್ಷೆಗಳ ಮುಖಾಂತರ ಸರ್ಕಾರಿ ನೌಕರಿಯನ್ನು ಪಡೆಯಬಹುದು.

11.   ನಾನೀಗ 11ನೇ ತರಗತಿಯಿಂದ 12ನೇ ತರಗತಿಗೆ ಹೋಗುತ್ತಿದ್ದೇನೆ. ಕಾಲೇಜಿನ ಕ್ಲಾಸುಗಳು ಮತ್ತು ನೀಟ್ ಕೋಚಿಂಗ್ ಕ್ಲಾಸುಗಳೆರಡೂ ಆನ್‍ಲೈನ್ ಇರುವುದರಿಂದ ನಿಭಾಯಿಸಲು ಕಷ್ಟವಾಗುತ್ತಿದೆ.

ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ; ಆದರೆ, ಸಧ್ಯಕ್ಕೆ ಆಫ್‌ಲೈನ್ ತರಗತಿಗಳ ಸಾಧ್ಯತೆ ಇಲ್ಲ. ಈ ವರ್ಷದ ಅಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದ ವೇಳೆಗೆ ಆಫ್‌ಲೈನ್ ತರಗತಿಗಳನ್ನು ನಿರೀಕ್ಷಿಸಬಹುದು.

ಈಗ ಅತಿ ಹೆಚ್ಚೆನಿಸಿರುವ ಆನ್‍ಲೈನ್ ಕ್ಲಾಸುಗಳ ಮಧ್ಯೆ ನಿಯಮಿತ ವಿರಾಮವನ್ನು ತೆಗೆದುಕೊಳ್ಳುವುದರಿಂದ ಮತ್ತು ದಿನಕ್ಕೆ ಒಂದೆರಡು ಬಾರಿ ಭ್ರಾಮರಿ ಪ್ರಾಣಾಯಾಮವನ್ನು ಮಾಡುವುದರಿಂದ ನಿಮ್ಮಲ್ಲಿ ಉಂಟಾಗುತ್ತಿರುವ ಒತ್ತಡವನ್ನು ನಿಯಂತ್ರಿಸಬಹುದು.