Q & A for students – Week 12

  1. ನಾನುಪಿಯುಸಿಓದುತ್ತಿದ್ದೇನೆ. ಮುಂದೆಅಪರಾಧಶಾಸ್ತ್ರಮತ್ತುಮನಶ್ಯಾಸ್ತ್ರವಿಷಯದಲ್ಲಿಆಸಕ್ತಿಇದೆ. ಈವಿಷಯದಬಗ್ಗೆಸಂಪೂರ್ಣಮಾಹಿತಿತಿಳಿಸಿ.

ಅಪರಾಧ ಶಾಸ್ತ್ರದ ಅಧ್ಯಯನದಲ್ಲಿ ಅಪರಾಧ, ನಡವಳಿಕೆಯ ಕಾರಣಗಳು ಮತ್ತು ತಡೆಗಟ್ಟುವಿಕೆ, ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ, ಕಾನೂನು, ಮನೋವಿಶ್ಲೇಷಣೆ ಇತ್ಯಾದಿ ವಿಷಯಗಳಿರುತ್ತದೆ. ಮನಶ್ಯಾಸ್ತ್ರ, ವಿಧಿ ವಿಜ್ಞಾನ, ಸಮಾಜ ಶಾಸ್ತ್ರ ಅಪರಾಧ ಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು. ಅಪರಾಧ ಶಾಸ್ತ್ರದ ಪದವಿ ಕೋರ್ಸ್‍ಗಳನ್ನು ಸಾಮಾನ್ಯವಾಗಿ ವಿಜ್ಞಾನ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಪಿಯುಸಿ ನಂತರ ಮಾಡಬಹುದು. ಈಗ ಅನುಷ್ಟಾನಗೊಳ್ಳುತ್ತಿರುವ ನೂತನ ಶಿಕ್ಷಣ ನೀತಿಯ ಅನುಸಾರ ಐಚ್ಛಿಕ ವಿಷಯವಾಗಿಯೂ ಅಧ್ಯಯನ ಮಾಡುವ ಸಾಧ್ಯತೆ ಇದೆ.

ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸ್ವಾಭಾವಿಕವಾದ ಒಲವು ಮತ್ತು ಆಸಕ್ತಿಯಿದ್ದು ವಿವೇಚನೆ, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ, ತಾರ್ಕಿಕ ಪ್ರತಿಪಾದನಾ ಕೌಶಲ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ಸಮಯ ಪ್ರಜ್ಞೆ ಇತ್ಯಾದಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಬೇಡಿಕೆಯಿರುವ ಈ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳಲು ಸ್ನಾತಕೋತ್ತರ ಪದವಿಯನ್ನು ಮಾಡುವುದು ಒಳ್ಳೆಯದು. ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು,  ಪೋಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.

2.         ನಾನು ಬಿಎ ಅಂತಿಮ ವರ್ಷದ ವಿದ್ಯಾರ್ಥಿ. ಬಿಯೆಡ್, ಎಂಎಸ್ಡಬ್ಲ್ಯು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ  ಯಾವುದನ್ನು ಮಾಡಿದರೆ ಬೇಗನೆ ಜೀವನದಲ್ಲಿ ಉತ್ತಮವಾದ ಸ್ಥಾನ ಗಳಿಸಬಹುದು ಎಂಬುದನ್ನು ತಿಳಿಸಿ.

ಯಾವುದೇ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು ವೃತ್ತಿ ಸಂಬಂಧಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು.  ಇವೆಲ್ಲವನ್ನೂ ನಿಮ್ಮಲ್ಲಿ ಬೆಳೆಸಿಕೊಂಡರೆ, ಸ್ವಾಭಾವಿಕವಾಗಿಯೇ ನಿಮ್ಮ ಕಾರ್ಯಾಚರಣೆ ನಿರೀಕ್ಷೆಯಂತಿರುತ್ತದೆ ಮತ್ತು ಕಾಲಕ್ರಮೇಣ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಬಹುದು.

ಹಾಗಾಗಿ, ನಿಮ್ಮ ಸಾಮಥ್ರ್ಯ, ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ನಿಮಗೆ ಸರಿಹೊಂದುವ, ಇಷ್ಟಪಡುವ  ವೃತ್ತಿಯನ್ನು  ಗುರುತಿಸಿ, ಸಂಬಂಧಪಟ್ಟ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ. ಸಾಧ್ಯವಾದರೆ, ಯುಪಿಎಸ್‍ಸಿ  ಪರೀಕ್ಷೆಯ ಮುಖಾಂತರ ಐಎಎಸ್ ಅಧಿಕಾರಿಯಾಗಲು ಪ್ರಯತ್ನಿಸಿ.

3.         ನಾನು ಪಿಎಸ್ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಇದರ ಸಂಪೂರ್ಣ ವಿಷಯಸೂಚಿ ಬಗ್ಗೆ ತಿಳಿಸಿ.

ಕರ್ನಾಟಕ ಪಿಎಸ್‍ಐ ನೇಮಕಾತಿ ಪ್ರಕ್ರಿಯೆ, ಪರೀಕ್ಷೆಗಳ ವಿವರ ಮತ್ತು ವಿಷಯಸೂಚಿಗೆ  ಗಮನಿಸಿ: https://prepp.in/karnataka-police-exam

4.         ನಾನು 28 ವರ್ಷದ ಸಿಎಸ್ ಎಂಜಿನಿಯರಿಂಗ್ ಪದವೀಧರ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿಯಿದೆ. ಆದರೆ ಪ್ರಸ್ತುತ ಒಂದು ಪ್ರತಿಷ್ಠಿತ ಪತ್ರಿಕೆಯಲ್ಲಿ ವರದಿಗಾರನಾಗಿದ್ದೇನೆ. ಕೆಲಸದಲ್ಲಿ ಪೂರ್ಣ ವಿಶ್ವಾಸವಿಲ್ಲ. ನನ್ನ ಮುಂದಿನ ನಿರ್ಧಾರಗಳ ಬಗ್ಗೆ ಗೊಂದಲವಿದೆ, ನಾನು ಏನು ಮಾಡಿದರೆ ಒಳಿತು ಎಂಬುದರ ಬಗ್ಗೆ ದಯವಿಟ್ಟು ತಿಳಿಸಿ.

ಆಸಕ್ತಿ ಮತ್ತು ಆತ್ಮವಿಶ್ವಾಸವಿಲ್ಲದ ವೃತ್ತಿಯಿಂದ ಬದುಕು ನೀರಸವಾಗುತ್ತದೆ. ಆದ್ದರಿಂದಲೇ, ಸಾಮಥ್ರ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಆಯ್ಕೆಯಿರಬೇಕು. ಮುಖ್ಯವಾಗಿ, ನಿಮ್ಮ ಈಗಿನ ವೃತ್ತಿಯಲ್ಲಿ ವಿಶ್ವಾಸ ಕಳೆದುಕೊಳ್ಳಲು ಕಾರಣಗಳನ್ನು ಗುರುತಿಸಿ, ನಿಮ್ಮ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಂಡು ಈಗಿರುವ ವೃತ್ತಿಯನ್ನು ಮುಂದುವರಿಸಬಹುದೇ ಎಂದು ಪರಿಶೀಲಿಸಿ.

ಸಿಎಸ್ ಬೇಡಿಕೆಯಲ್ಲಿರುವ ಕ್ಷೇತ್ರ. ಹಾಗಾಗಿ, ಈ ಕ್ಷೇತ್ರದಲ್ಲಿನ ನಿಮ್ಮ ಜ್ಞಾನ ಮತ್ತು ವೃತ್ತಿ ಸಂಬಂಧಿತ ಕೌಶಲಗಳನ್ನು ಪರಿಷ್ಕರಿಸಿ ಖಾಸಗಿ ಕ್ಷೇತ್ರದಲ್ಲಿ ಅಥವಾ ಯುಪಿಎಸ್‍ಸಿ/ಕೆಪಿಎಸ್‍ಸಿ ಗಳಂತಹ ಪರೀಕ್ಷೆಗಳ ಮುಖಾಂತರ ಸರ್ಕಾರಿ  ವೃತ್ತಿಯನ್ನು ಅರಸಿ. ಇನ್ನೂ ಗೊಂದಲಗಳಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ. 

5.         ಸರ್, ನನಗೆ ಬಿಎಸ್ಸಿ (ಸಿಬಿಝೆಡ್ಪದವಿ ಮುಗಿಸಿದ ಮೇಲೆ ಎಂಎಸ್ಸಿ ಕುರಿತು ಆಸಕ್ತಿ ಇಲ್ಲ. ಬೇರೆ ಯಾವ ಕೋರ್ಸ್ ಮಾಡಬಹುದು ತಿಳಿಸಿ.

ಬಿಎಸ್‍ಸಿ ನಂತರ ನಿಮ್ಮ ಭವಿಷ್ಯದ ಯೋಜನೆಯ ಪ್ರಕಾರ ಮಾಡಬಹುದಾದ ಕೋರ್ಸ್/ವೃತ್ತಿಗಳೆಂದರೆ ಎಂಬಿಎ, ಬಿಎಡ್, ಎಂಎಸ್‍ಸಿ (ಅಸಂಪ್ರದಾಯಕ ವಿಷಯಗಳು- ಪರಿಸರ ವಿಜ್ಞಾನ, ಜೀವ ವಿಜ್ಞಾನ, ಆಹಾರ ವಿಜ್ಞಾನ, ಅರಣ್ಯ ಶಾಸ್ತ್ರ, ವಿಧಿ ವಿಜ್ಞಾನ, ತಳಿ ವಿಜ್ಞಾನ ಇತ್ಯಾದಿ), ಇಂಟಗ್ರೇಟೆಡ್ ಪಿಎಚ್‍ಡಿ, ಪ್ಯಾರಾ ಮೆಡಿಕಲ್ ಮತ್ತು ಕ್ಲಿನಿಕಲ್ ಕೋರ್ಸ್‍ಗಳು, ಕೃಷಿ ಸಂಶೋಧನೆ ಕೋರ್ಸ್‍ಗಳು ಮತ್ತು ಅನೇಕ ಅಲ್ಪಾವಧಿ ಕೋರ್ಸ್‍ಗಳೂ ಇವೆ. ಹಾಗೂ, ನೇರವಾಗಿ ಸ್ಪರ್ಧಾತ್ಮಕ ಕೋರ್ಸ್‍ಗಳ ಮುಖಾಂತರ ನಿಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.