Q & A for students – Week 10

  1. ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕನಿಷ್ಟ ಎಷ್ಟು ಗಂಟೆಗಳು ಅಭ್ಯಾಸ ನಿರತರಾಗಿರಬೇಕು? ವಿಷಯಾವಾರು ಅಭ್ಯಾಸ ಹೇಗಿರಬೇಕು?

ಸುನೀಲ್ ಕುಮಾರ್ ಕೆ, ಮಡಿಕೇರಿ

ಪರೀಕ್ಷೆಗಳ ಪ್ರಾಮುಖ್ಯತೆ, ಕಠಿಣತೆಯ ಮಟ್ಟ ಹಾಗೂ ನಿಮ್ಮ ಧ್ಯೇಯ ಮತ್ತು ಸಾಮಥ್ರ್ಯದ ಆಧಾರದ ಮೇಲೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಬೇಕು. ಎಷ್ಟು ಸಮಯ ಓದಬೇಕು ಎನ್ನುವುದಕ್ಕಿಂತ ಓದುವಿಕೆ ಪರಿಣಾಮಕಾರಿಯಾಗಿರಬೇಕು.   ಅದೇ ರೀತಿ ತರಗತಿಗಳಲ್ಲಿ ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದ ಬಗ್ಗೆ ಒಳನೋಟಗಳು ಲಭಿಸಿ ನಿಮ್ಮಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲ್ಯದ ಅಭಿವೃದ್ಧಿಯಾಗಿ ಕಲಿಕೆ ಪರಿಪೂರ್ಣವಾಗುತ್ತದೆ.  ಹಾಗೂ, ಈ ಸಲಹೆಗಳನ್ನು ಗಮನಿಸಿ:

  1. SQ3R ನಂತಹ ಓದುವಿಕೆಯ ತಂತ್ರಗಾರಿಕೆ ಉಪಯುಕ್ತ.
  2. ಹಿಂದಿನ ಉಪನ್ಯಾಸದ ಟಿಪ್ಪಣಿಗಳನ್ನು ನೋಡಿ ಮುಂದಿನ ಉಪನ್ಯಾಸಕ್ಕೆ ತಯಾರಾಗಿ.
  3. ಮನಸ್ಸು ಉಲ್ಲಾಸವಾಗಿರುವಾಗ, ಕಠಿಣ ವಿಷಯಗಳು ಮತ್ತು ಕಡಿಮೆ ಆಸಕ್ತಿಯಿರುವ ವಿಷಯಗಳನ್ನು ಓದಿ.
  4. ದಿನನಿತ್ಯದ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸಿ.
  5. ಆದಷ್ಟು ಶಾಂತ ವಾತಾವರಣದಲ್ಲಿ ಏಕಾಗ್ರತೆಯಿಂದ ಓದಿ.
  6. ನಿಯತಕಾಲಿಕವಾಗಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.
  7. ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಹೆಚ್ಚಿಸುವ ಭ್ರಮರಿ ಪ್ರಾಣಾಯಾಮವನ್ನು ದಿನಕ್ಕೆ 2-3 ಬಾರಿ ಅಭ್ಯಾಸ ಮಾಡಿ.

2.         ನಾನು ಹತ್ತನೇ ತರಗತಿಯಲ್ಲಿ ಶೇ 88ರಷ್ಟು ಅಂಕ ಗಳಿಸಿರುವೆ. ಮುಂದೆ ಡಿಪೆÇ್ಲಮಾ ಸಿಎಸ್‍ನಲ್ಲಿ ಮಾಡಬೇಕು. ಆದರೆ, ಎನ್‍ಇಪಿ ಪ್ರಕಾರ ಭವಿಷ್ಯದಲ್ಲಿ ಏನಾದರೂ ತೊಂದರೆ ಆಗಬಹುದು ಎಂಬ ಭಯವಿದೆ. ದಯಮಾಡಿ ಮಾರ್ಗದರ್ಶನ ನೀಡಿ.

ಅಮೋಘವರ್ಷ ಯು.ಎ., ಊರು ತಿಳಿಸಿಲ್ಲ.

ಬದುಕಿನ ಕನಸುಗಳು ಮತ್ತು ನಿಮ್ಮ ಸಾಮಥ್ರ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ವೃತ್ತಿ ಮತ್ತು ಅದರಂತೆ ಕೋರ್ಸ್ ಆಯ್ಕೆಯಿರಲಿ. ಡಿಪ್ಲೊಮಾ ಕೋರ್ಸ್‍ಗಳಿಗೆ ಈ ವರ್ಷದಿಂದಲೇ ಎನ್‍ಇಪಿಯ ನೂತನ ನಿಯಮಗಳು ಅನ್ವಯವಾಗುವುದೆಂದು ಕರ್ನಾಟಕ ಸರ್ಕಾರ ಇತ್ತೀಚಿಗೆ ಘೋಷಿಸಿದೆ. ಹಾಗಾಗಿ, ಭವಿಷ್ಯದ ಕುರಿತು ಆತಂಕ ಪಡಬೇಕಿಲ್ಲ.

3.         ನಾನು ಪಿಯುಸಿ ಮುಗಿಸಿ ಬಿಡಿಸೈನ್ (ಕಮ್ಯೂನಿಕೇಷನ್) ಮಾಡಲಿಚ್ಛಿಸಿದ್ದೇನೆ. ಆದರೆ, ಭವಿಷ್ಯದ ಕುರಿತು ಆತಂಕವಿದೆ. ಕೋರ್ಸ್ ಮಾಡಬಹುದೇ?

ವೈಷ್ಣವಿ ಬಿ.ವಿ., ಶಿವಮೊಗ್ಗ.

ಈ ಕೋರ್ಸ್ ಮಾಡಿದ ನಂತರ ಮಾಧ್ಯಮ ಮತ್ತು ಸಂವಹನ, ಜಾಹೀರಾತು ಮತ್ತು ಪ್ರಚಾರ, ಸಾರ್ವಜನಿಕ ಸಂಪರ್ಕ, ಶಿಕ್ಷಣ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.  ಇದೊಂದು ಸೃಜನಾತ್ಮಕ ಕ್ಷೇತ್ರ. ಹಾಗಾಗಿ, ಸೃಜನಶೀಲತೆಯಿದ್ದು, ಡಿಸೈನ್ ಸಂಬಂಧಿತ ಸಾಫ್ಟ್‍ವೇರ್ ಬಳಕೆಯಲ್ಲಿ ಪರಿಣತಿಯಿರಬೇಕು. ಆದಷ್ಟು, ಕ್ಯಾಂಪಸ್ ಪ್ಲೇಸ್‍ಮೆಂಟ್ ಸೌಲಭ್ಯವಿರುವ ಕಾಲೇಜಿನಲ್ಲಿ ಈ ಕೋರ್ಸ್ ಮಾಡಬಹುದು.

4.         ನನ್ನ ಮಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ 98 ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಮುಂದೆ ಯಾವ ಕೋರ್ಸ್ ಮಾಡುವುದು ಉತ್ತಮ ಮತ್ತು ಉದ್ಯೋಗಾವಕಾಶ ಇರುವ ಕೋರ್ಸ್‍ಮಾಹಿತಿಯನ್ನು ದಯಮಾಡಿ ತಿಳಿಸಿ.

ಹೆಸರು ತಿಳಿಸಿಲ್ಲ, ಮೂಡಿಗೆರೆ

ಪಿಯುಸಿ ಫಲಿತಾಂಶದ ಪ್ರಕಾರ ನಿಮ್ಮ ಮಗಳು ಪ್ರತಿಭಾವಂತ ವಿದ್ಯಾರ್ಥಿ. ಎಲ್ಲಾ ಕ್ಷೇತ್ರಗಳಲ್ಲೂ ಪ್ರತಿಭಾವಂತರಿಗೆ ಮನ್ನಣೆ ಮತ್ತು ಅವಕಾಶಗಳಿವೆ. ಹಾಗಾಗಿ, ಸ್ವಾಭಾವಿಕ ಅಭಿರುಚಿ ಮತ್ತು ಆಸಕ್ತಿಯಿರುವ ವೃತ್ತಿಯ ಬಗ್ಗೆ ನಿರ್ಧರಿಸಿ, ಅದರಂತೆ ಕೋರ್ಸ್ ಆಯ್ಕೆ ಮಾಡಬಹುದು.

5.         ನಾನು ಬಿಎಸ್‍ಸಿ ಪದವೀಧರ. ಮುಂದೆ ಎಲ್‍ಎಲ್‍ಬಿ ಕಾನೂನು ಪದವಿ ಮಾಡಬೇಕೆಂದುಕೊಂಡಿದ್ದೇನೆ. ಎಲ್‍ಎಲ್‍ಬಿಯನ್ನು ದೂರ ಶಿಕ್ಷಣ ಕಾಲೇಜಿನಿಂದ ಪಡೆಯಬಹುದೇ ಮತ್ತು ನ್ಯಾಯಾಲಯದಲ್ಲಿ ವಾದಿಸಲು ಅವಕಾಶ ಸಿಗುವುದೇ?

ರಮೇಶ, ಬೆಳಗಾವಿ.

ನಮಗಿರುವ ಮಾಹಿತಿಯಂತೆ ದೂರ ಶಿಕ್ಷಣದಿಂದ ಪಡೆದ ಎಲ್‍ಎಲ್‍ಬಿ ಕೋರ್ಸಿಗೆ ಬಾರ್ ಕೌಂಸಿಲ್‍ನ ಮಾನ್ಯತೆಯಿಲ್ಲ.

6.         ಎಸ್‍ಎಸ್‍ಎಲ್‍ಸಿ ನಂತರ ಪಿಯುಸಿ ಮಾಡಿ ಬಿ.ಮಾಡುವುದು ಒಳ್ಳೆಯದೆ? ಅಥವಾ ಡಿಪೆÇ್ಲಮಾ ಮಾಡಿ ಬಿ.ಮಾಡುವುದು ಒಳ್ಳೆಯದೆ?

ಸುಜನ್.ಪಿ, ದೊಡ್ಡಬಳ್ಳಾಪುರ

ಸಾಮಾನ್ಯವಾಗಿ, ಪಿಯುಸಿ ನಂತರ ಬಿಇ ಮಾಡುವುದು ಸೂಕ್ತವೆನ್ನುವುದು ನಮ್ಮ ಅಭಿಪ್ರಾಯ. ಆದರೂ, ನಿಮ್ಮ ವೃತ್ತಿ ಯೋಜನೆಯ ಆದ್ಯತೆಗಳಂತೆ ನಿರ್ಧರಿಸಿ.

7.         ನಾನು ದ್ವಿತೀಯ ಪಿಯುಸಿ (ಕಲಾ ವಿಭಾಗ) ಓದುತ್ತಿದ್ದೇನೆ. ಮುಂದೆ ಐಎಎಸ್ ಅಧಿಕಾರಿ ಆಗಬೇಕೆಂಬ ಆಸೆ ಇದೆ. ಪಿಯುಸಿ ನಂತರ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಯಾವ ಕೋರ್ಸ್ ಮಾಡಬೇಕು ಮತ್ತು ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು?

ಎಮ್. ಡಿ. ಮಾನ್ಯ ಗೌಡ, ಚಿಕ್ಕಮಗಳೂರು.

ಐಎಎಸ್ ವೃತ್ತಿ ಕುರಿತ ಪ್ರಶ್ನೆಗಳನ್ನು ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ಉತ್ತರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

8.         ನಾನು ಎಂಎ ದೂರ ಶಿಕ್ಷಣದಲ್ಲಿ ಮಾಡುತ್ತಿದ್ದು ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ತೆಗೆದುಕೊಂಡಿದ್ದೇನೆ. ಪ್ರೊಫೆಸರ್ ಆಗುವ ಗುರಿ ಇದ್ದು, ಮುಂದಿನ ದಾರಿ ತಿಳಿಸಿ. ಮತ್ತು ಎಂಎ ಸಂಬಂಧಿತ ಸರ್ಕಾರಿ ಉದ್ಯೋಗದ ಕುರಿತು ತಿಳಿಸಿ.

ಶ್ವೇತಾ ನಾಯ್ಕ್, ಕಾರವಾರ

ಎಂಎ ನಂತರ ಡಾಕ್ಟೊರೇಟ್ ಮಾಡಿ ಎನ್‍ಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪ್ರೊಫೆಸರ್ ಹುದ್ದೆಗೆ ಪ್ರಯತ್ನಿಸಬಹುದು.

ಸರ್ಕಾರಿ ಉದ್ಯೋಗಗಳಿಗೆ ಎಂಎ ನಂತರ ಕೆಪಿಎಸ್‍ಸಿ/ಯುಪಿಎಸ್‍ಸಿ ಪರೀಕ್ಷೆಗಳ ಮುಖಾಂತರ ಪ್ರಯತ್ನಿಸಬಹುದು. ಹಾಗೂ, ಆರ್ಕಿಯಾಲಿಜಿಕಲ್ ಸರ್ವೆ ಅಫ್ ಇಂಡಿಯ (ಎಎಸ್‍ಐ) ಇಲಾಖೆ ಕೆಲವು ಹುದ್ದೆಗಳಿಗೆ ಮತ್ತು ಇಂಟರ್ನ್‍ಶಿಪ್ ಅವಕಾಶಗಳಿಗೆ ನೇರವಾಗಿಯೂ ನೇಮಕಾತಿಯನ್ನು ಮಾಡುತ್ತಾರೆ. ಹೆಚ್ಚಿನ ವಿವರಗಳಿಗೆ ಗಮನಿಸಿ: https://asi.nic.in/