Q & A for Students – October 2021

Q & A – 4th October, 2021

Q1. ನಾನು ಎಂಎ (ಅರ್ಥಶಾಸ್ತ್ರ) ಮುಗಿಸಿ, ಎರಡು ವರ್ಷ ಕೆಲಸ ಮಾಡಿದ್ದೇನೆ. ನಾನು ಓದಿರುವ ವಿಷಯಕ್ಕೆ ಸಂಬAಧಿಸಿದ ಉದ್ಯೋಗವೇ ನನಗೆ ಇಷ್ಟ. ಕಿವಿ ಸಮಸ್ಯೆ ಇದೆ. ಅರ್ಥಶಾಸ್ತçಕ್ಕೆ ಸಂಬAಧ ಪಟ್ಟ ಉದ್ಯೋಗಗಳ ಬಗ್ಗೆ ತಿಳಿಸಿ.

ಅರ್ಥಶಾಸ್ತçದಲ್ಲಿ ಉನ್ನತ ಪದವಿಯನ್ನು ಗಳಿಸಿರುವ ನಿಮಗೆ ಅನೇಕ ವೃತ್ತಿಯ ಅವಕಾಶಗಳಿವೆ. ಬೇಡಿಕೆಯಲ್ಲಿರುವ ಈ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿಯ ಅನುಸಾರ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಶಿಕ್ಷಣ, ಬ್ಯಾಂಕಿAಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ, ಮಾಧ್ಯಮ, ವಿಷಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಹಾಗೂ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದ ಇಲಾಖೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು. ಕಿವಿಯ ಸಮಸ್ಯೆಗೆ ತಜ್ಞ ವೈದ್ಯರೊಡನೆ ಸಮಾಲೋಚಿಸಿ ಪರಿಹಾರವನ್ನು ಕಂಡುಕೊಳ್ಳಿ.

Q2. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆಯಲ್ಲಿ ಪಾಸಾದರೆ, ಅದು ರೆಗ್ಯುಲರ್ ಪಿಯುಸಿಗೆ ಸರಿಸಮವಾಗಿರುತ್ತದೆಯೇ? ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಬಹುದೇ? ಎಸ್‌ಡಿಎ, ಪೋಲಿಸ್ ಕಾನ್‌ಸ್ಟೇಬಲ್ ಇನ್ನೂ ಮುಂತಾದ ಸರ್ಕಾರಿ ಉದ್ಯೋಗಗಳಿಗೆ ಪರೀಕ್ಷೆ ಬರೆಯಬಹುದೇ? ದಯಮಾಡಿ ತಿಳಿಸಿ. ಮುಂದೆ ಐಎಎಸ್ ಆಗಬೇಕೆಂದು ಕನಸು ಕಂಡಿದ್ದೇನೆ.

ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊAಡು ಪಾಸಾದ ಪಿಯುಸಿಗೆ ಮಾನ್ಯತೆ ಇರುತ್ತದೆ. ಹಾಗಾಗಿ, ನಿಮ್ಮ ಯೋಜನೆಯಂತೆ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

Q3. ನನಗೆ ಈಗ 25 ವರ್ಷ ವಯಸ್ಸು. ನಾನು ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಬೇಕೆನ್ನುವ ಹಂಬಲ, ಹಠ ಎರಡೂ ಇದೆ. ಆದರೆ, ಸಮಯದ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸಲಹೆ ನೀಡಿ.

Q4. ನಾನು ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದು ಮುಂದೆ ಯುಪಿಎಸ್‌ಸಿ  ಪರಿಕ್ಷೆ ಬರೆಯಲು ಇಚ್ಛಿಸಿದ್ದೇನೆ. ನನ್ನ ತಯಾರಿ ಹೇಗಿರಬೇಕು? ಹಾಗೂ ಮೊದಲ ಪತ್ರಿಕೆಗೆ  ಯಾವ ರೀತಿ ತಯಾರಾಗಬೇಕು?

Q5. ಕೆಪಿಎಸ್‌ಸಿ ಎಂದರೆ ಗೊಂದಲ ಶುರುವಾಗುತ್ತೆ. ಅಂತಹದರಲ್ಲಿ, ನಾನು ಕೆಎಎಸ್ ಮಾಡಬೇಕು ಅಂದುಕೊAಡಿದ್ದೇನೆ, ಆದರೆ ಇಂಗ್ಲಿಷ್ ಭಯವಿದ್ದು ಅದರಿಂದ ಹೊರಗೆ ಬರುವುದು ಹೇಗೆ ಮತ್ತು ಕೆಎಎಸ್ ಪಠ್ಯಕ್ರಮದ ಬಗ್ಗೆ ತಿಳಿಸಿಕೊಡಿ.

ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳ ಮಾದರಿ ಹೆಚ್ಚುಕಡಿಮೆ ಒಂದೇ ವಿಧದಲ್ಲಿರುತ್ತದೆ.  ಕೆಎಎಸ್ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಬಹುದು. ಹಾಗೂ, ಇಂಗ್ಲೀಷ್ ಭಾಷೆಯನ್ನು ಆಫ್‌ಲೈನ್ ಅಥವಾ ಆನ್‌ಲೈನ್ ಕೋರ್ಸ್ಗಳ ಮುಖಾಂತರ ಕಲಿಯಬಹುದು. ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ವಿವರ, ಪಠ್ಯಕ್ರಮ ಮತ್ತು ತಯಾರಿಯ ಬಗ್ಗೆ ಇದೇ ವರ್ಷದ ಜೂನ್ 21, ಜೂನ್ 28 ಮತ್ತು  ಸೆಪ್ಟೆಂಬರ್ 27ರ ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

Q6. ನನಗೆ ಬಣ್ಣಕುರುಡು ಇದೆ. ನಾನು ಕೆಪಿಎಸ್‌ಸಿ ಮುಖಾಂತರ ವಿವಿಧ ಹುದ್ದೆಗಳಿಗೆ ಅಂಗವಿಕಲತೆಯ ಕೋಟಾದಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದೇ?.

ನಮಗಿರುವ ಮಾಹಿತಿಯಂತೆ ನಿಮಗಿರುವ ಸಮಸ್ಯೆಗೆ ಅಂಗವಿಕಲತೆಯೆ ಕೋಟಾ ಅನ್ವಯವಾಗುವುದಿಲ್ಲ. ಖಚಿತವಾದ ಮಾಹಿತಿಗಾಗಿ ಕೆಪಿಎಸ್‌ಸಿಯ ಮಾಹಿತಿ ಕೇಂದ್ರವನ್ನು ಸಂಪರ್ಕಿಸಿ.

Q7. ಬಿಫಾರ್ಮಾ ಕೋರ್ಸ್ ಮುಗಿಸಿದ ನಂತರದ ಸರ್ಕಾರಿ ಉದ್ಯೋಗಗಳ  ಬಗ್ಗೆ ದಯವಿಟ್ಟು ತಿಳಿಸಿ.

4 ವರ್ಷದ ಬಿಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ,  ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ÷್ಯಕ್ಕೆ ಸಂಬAಧಿಸಿದ ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಲ್ಯಾಬೋರೇಟರಿಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್ಸಿ÷್ಕçಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ.

Q8. ನಾನು ನನ್ನ ಎಲೆಕ್ಟಿçಕಲ್ ಎಂಜಿನಿಯರ್ ಕೋರ್ಸ್ ಮುಗಿಸಿದ್ದೇನೆ. ಮುಂದಿನ ಉದ್ಯೋಗಾವಕಾಶಗಳೇನು ಎಂದು ಮಾಹಿತಿ ನೀಡಿ.

ಎಲೆಕ್ಟಿçಕಲ್ ಎಂಜಿನಿಯರಿAಗ್ ಪದವಿಯ ನಂತರ ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆ ಸಂಸ್ಥೆಗಳು, ರೈಲ್ವೇಸ್, ಆಟೋಮೊಬೈಲ್, ಏರೋಸ್ಪೇಸ್, ಪ್ರಾಪರ್ಟಿ, ಎಂಜಿನಿಯರಿAಗ್ ಸೇವೆಗಳ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವಕಾಶಗಳಿವೆ.

Q9. ನನ್ನ ಮೊಮ್ಮಗ 10ನೇ ತರಗತಿಯಲ್ಲಿದ್ದು, ಮಿಲಿಟರಿ ಆಫೀಸರ್ ಆಗಬೇಕೆಂಬ ಹಂಬಲದಿAದ ಮುಂದಿನ ವರ್ಷಗಳಲ್ಲಿ ಎನ್‌ಡಿಎ ಪರೀಕ್ಷೆ ತೆಗೆದುಕೊಳ್ಳಲು ಅಪೇಕ್ಷಿಸುತ್ತಿದ್ದಾನೆ. ಹೈದರಾಬಾದ್ ಮತ್ತು ರಾಜಸ್ಥಾನದಲ್ಲಿ ಕೋಚಿಂಗ್ ಸೆಂಟರ್‌ಗೆ ಹೋಗುವುದೇ ಎಂದು ಯೋಚಿಸುತ್ತಿದ್ದಾನೆ. ನಿಮ್ಮ ಸಲಹೆ ನೀಡಿ.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸ್ವಯಂ ಅಧ್ಯಯನದಿಂದ ತಯಾರಾಗುವುದೇ ಅಥವಾ ಕೋಚಿಂಗ್ ಸೆಂಟರ್ ಸೇರಬೇಕೇ ಎನ್ನುವುದು ಕ್ಲಿಷ್ಟವಾದ ಆಯ್ಕೆ. ಎರಡೂ ಬಗೆಯ ಪ್ರಯತ್ನಗಳಿಂದ ಇಂತಹ ಪರೀಕ್ಷೆಗಳಲ್ಲಿ ಯಶಸ್ವಿಯಾದವರು ಇರುವುದರಿಂದ ಈ ಗೊಂದಲ ಸಹಜ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನವಿರಬೇಕು. ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿಯಿದ್ದರೆ ಸ್ವಯಂ ಅಧ್ಯಯನದಿಂದಲೂ ಯಶಸ್ಸನ್ನು ಗಳಿಸಬಹುದು. ಹಾಗಾಗಿ, ಅಂತಿಮ ನಿರ್ಧಾರ ನಿಮ್ಮದು.

Q10. ನನ್ನ ಬಿಎ 6ನೇ ಸೆಮಿಸ್ಟರ್ ಮುಗಿದಿದೆ. ಮುಂದೆ ಯಾವ ಕೋರ್ಸ್ಗಳನ್ನು ಮಾಡಬಹುದು? ಯಾವುದಾದರೂ ವೃತ್ತಿಪರ ಕೋರ್ಸ್ ಮಾಡಬಹುದೇ? ನಿಮ್ಮ ಸಲಹೆ ನೀಡಿ.

ಸಾಮಾನ್ಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಬಿಎ ನಂತರದ ಆಯ್ಕೆಯಲ್ಲಿ ವಿಪುಲತೆಯೂ ವೈವಿಧ್ಯತೆಯೂ ಇದೆ. ನೀವು ಬಿಎ ನಂತರ ಮಾಡಬಹುದಾದ ಕೋರ್ಸ್ಗಳೆಂದರೆ ಐಎಎಸ್, ಕೆಎಎಸ್, ಎಂಎ, ಎಂಬಿಎ, ಎಲ್‌ಎಲ್‌ಬಿ, ಸಿಎ, ಎಸಿಎಸ್, ಬಿಎಡ್, ಬಿಪಿಇಡಿ, ಬಿಎಸ್‌ಡಬ್ಲು÷್ಯ, ಜರ್ನಲಿಸಮ್, ಫೈನ್ ಆರ್ಟ್ಸ್, ಕ್ರಿಯೇಟಿವ್ ರೈಟಿಂಗ್, ಡಿಸೈನ್ ಕೋರ್ಸ್ಗಳು (ಗ್ರಾಫಿಕ್ಸ್, ವಿಎಫ್‌ಎಕ್ಸ್, ಗೇಮ್ಸ್, ಫ್ಯಾಷನ್ ಇತ್ಯಾದಿ), ವಿದೇಶಿ ಮತ್ತು ಭಾರತೀಯ ಭಾಷೆಗಳು, ವಿಷಯಾನುಸಾರ ಸರ್ಟಿಫಿಕೆಟ್ ಮತ್ತು ಡಿಪ್ಲೊಮಾ ಕೋರ್ಸ್ಗಳು ಇತ್ಯಾದಿ. ಪ್ರಮುಖವಾಗಿ, ನಿಮ್ಮ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಮುಂದಿನ ಕೋರ್ಸ್ ಆಯ್ಕೆ ಮಾಡಬಹುದು. 

Q11. ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬಿಇ ಮುಗಿಸಿದ್ದೇನೆ. ಪಿಡಿಒ ಪರೀಕ್ಷೆಗೆ ಬೇಕಾದ ಪುಸ್ತಕ ಮತ್ತು ಪರೀಕ್ಷೆಯ ಬಗ್ಗೆ ಮಾಹಿತಿ ತಿಳಿಸಿ.

ಪಿಡಿಒ ಪರೀಕ್ಷೆಯ ಮಾದರಿ, ವಿಷಯಸೂಚಿ ಮತ್ತು ಇನ್ನಿತರ ಮಾಹಿತಿಗಾಗಿ ಗಮನಿಸಿ: https://www.recruitment.guru/syllabus/kea-pdo-syllabus/

Q12. ಎಂಕಾಂ ಮತ್ತು ಬಿಇಡಿ ಆಗಿದೆ. ಶಾಲಾ ಶಿಕ್ಷಕ ಅಥವಾ ವಾರ್ಡನ್ ಆಗಿ ಕೆಲಸ ಸಿಗುತ್ತದೆಯೇ?

ಎಂಕಾಂ ಮತ್ತು ಬಿಇಡಿ ಆಗಿರುವುದರಿಂದ ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಬಹುದು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಬೇಕಾದರೆ, ಸೆಂಟ್ರಲ್ ಟೀಚರ್ ಎಲಿಜಿಬಲಿಟಿ ಟೆಸ್ಟ್ (ಸಿಟಿಇಟಿ) ಪಾಸಾಗಬೇಕು.

Q13. ಸರ್, ನಾನು ಪಿಯುಸಿ ಮುಗಿಸಿದ್ದೇನೆ. ಮುಂದೆ ಎಂಜಿನಿಯರಿAಗ್‌ನಲ್ಲಿ ಯಾವ ವಿಭಾಗ ಮತ್ತು ಯಾವ ಕಾಲೇಜು ತೆಗೆದುಕೊಂಡರೆ ಉತ್ತಮ. ಹಾಗೇ, ಓದಿನ ಜೊತೆ ಮನೆಯಿಂದಲೇ ಮಾಡಬಹುದಾದ ಪಾರ್ಟ್ ಟೈಮ್ ಕೆಲಸಗಳ ಬಗ್ಗೆ ತಿಳಿಸಿಕೊಡಿ.

ಒಂದು ಅಂದಾಜಿನ ಪ್ರಕಾರ ಎಂಜಿನಿಯರಿAಗ್ ಕೋರ್ಸ್ನಲ್ಲಿ ಸುಮಾರು ನೂರು ಸ್ಪೆಷಲೈಜೇಷನ್ಸ್ ಇದೆ ಎನ್ನಲಾಗುತ್ತದೆ. ಪ್ರಮುಖವಾಗಿ, ಕಂಪ್ಯೂಟರ್ ಸೈನ್ಸ್, ಐಟಿ, ರೊಬೊಟಿಕ್ಸ್, ಎಲೆಕ್ಟಾçನಿಕ್ಸ್, ಎಲೆಕ್ಟಿçಕಲ್, ಮೆಕ್ಯಾನಿಕಲ್, ಮೆಕಾಟ್ರಾನಿಕ್ಸ್, ಸಿವಿಲ್, ಬಯೋಟೆಕ್, ಬಯೋಮೆಡಿಕಲ್, ಏರೋನಾಟಿಕಲ್, ಏರೋಸ್ಪೇಸ್ ಇತ್ಯಾದಿ. ನಿಮ್ಮ ಆಸಕ್ತಿ ಮತ್ತು ಸ್ವಾಭಾವಿಕ ಪ್ರತಿಭೆಯ ಆಧಾರದ ಮೇಲೆ ವೃತ್ತಿಯೋಜನೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ಮುಂದಿನ ಕೋರ್ಸ್ ಮತ್ತು ವಿಭಾಗವನ್ನು ಆಯ್ಕೆ ಮಾಡಬಹುದು. ಅರೆಕಾಲಿಕ ವೃತ್ತಿಗಳಿಗಾಗಿ, ಈ ಪುರವಣಿಯಲ್ಲಿ ಕಳೆದ ಸೆಪ್ಟೆಂಬರ್ 27ರಂದು ಪ್ರಕಟವಾದ ಲೇಖನವನ್ನು ನೋಡಿ.  ಕಾಲೇಜುಗಳ ಆಯ್ಕೆಗಳು ಮತ್ತು ರ‍್ಯಾಂಕಿAಗ್ ಮಾಹಿತಿಗಾಗಿ ಗಮನಿಸಿ: https://www.nirfindia.org/2021/EngineeringRanking.html

Q14. ನಾನು ಪಿಯುಸಿ (ವಿಜ್ಞಾನ) ಮುಗಿಸಿ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ಗೆ 5 ವರ್ಷಗಳ ಅರ್ಥಶಾಸ್ತ್ರ ಕೋರ್ಸ್ಗೆ ಆಯ್ಕೆಯಾಗಿದ್ದೇನೆ. ಈ ಕೋರ್ಸ್ ಬಗ್ಗೆ ಮತ್ತು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಬೇಕು. ದಯವಿಟ್ಟು ನನಗೆ ಸಹಾಯ ಮಾಡಿ.

ನೀವು ಆಯ್ಕೆಯಾಗಿ ಸೇರಬಯಸುತ್ತಿರುವುದು ಒಂದು ಪ್ರತಿಷ್ಠಿತ ಸಂಸ್ಥೆ.  ಈ ಕೋರ್ಸ್ ನಂತರ ಶಿಕ್ಷಣ, ಬ್ಯಾಂಕಿAಗ್, ಹಣಕಾಸು, ಸಂಶೋಧನೆ ಮತ್ತು ವಿಶ್ಲೇಷಣೆ, ಬಂಡವಾಳ ಹೂಡಿಕೆ ಮುಂತಾದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಪ್ಲೇಸ್‌ಮೆಂಟ್ ಮತ್ತು ಇನ್ನಿತರ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಿ.

Q & A – 11th October, 2021

Q1. ನಾನು ಬಿಕಾಂ ಪದವಿ ಮುಗಿಸಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಮಾಹಿತಿಯನ್ನು ಹೇಗೆ ಪಡೆಯಬೇಕು?

ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವತಿಯಿಂದ ಪ್ರಕಟವಾಗುವ ಎಂಪ್ಲಾಯ್‌ಮೆAಟ್ ನ್ಯೂಸ್ ವಾರಪತ್ರಿಕೆಗೆ ನೀವು ಚಂದಾದಾರರಾಗಬಹುದು. ಈ ವಾರಪತ್ರಿಕೆ ಮುದ್ರಣ ಮಾಧ್ಯಮ ಮತ್ತು ಇ-ಪೇಪರ್ ಆವೃತ್ತಿಯಲ್ಲಿಯೂ ದೊರಕುತ್ತದೆ. ಇದಲ್ಲದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಯಾ ಇಲಾಖೆಗಳ ವೆಬ್‌ಸೈಟ್ ಮತ್ತು ದಿನಪತ್ರಿಕೆಗಳಲ್ಲಿ ಅಧಿಸೂಚನೆಗಳ ಪ್ರಕಟಣೆಯೂ ಇರುತ್ತದೆ. ಸರ್ಕಾರಿ ಉದ್ಯೋಗ ವಿನಿಮಯ ಕಛೇರಿಗಳಲ್ಲಿ ನೋಂದಾಯಿಸಿಕೊಳ್ಳುವುದರಿAದ ಉದ್ಯೋಗವನ್ನು ಅರಸಲು ಸಹಾಯವಾಗಬಹುದು. ಹಾಗೂ, ಉದ್ಯೋಗಗಳ ಮಾಹಿತಿ ಅನೇಕ ಖಾಸಗಿ ವೆಬ್‌ಸೈಟ್‌ಗಳಲ್ಲಿಯೂ ಲಭ್ಯ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: http://employmentnews.gov.in/

Q2. ಸರ್, ನಾನು ಬಿಎಸ್‌ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಐಪಿಎಸ್ ಅಧಿಕಾರಿ ಆಗಬೇಕು ಅಂತ ಕನಸು ಕಂಡಿದ್ದೇನೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಛಿಕ  ವಿಷಯವನ್ನಾಗಿ ತೆಗೆದುಕೊಂಡರೆ ಯಾವ ಲೇಖಕರ ಪುಸ್ತಕಗಳನ್ನು ಓದಬೇಕು. ಹಾಗೇ, ಯುಪಿಎಸ್‌ಸಿ ಪಠ್ಯದ ಬಗ್ಗೆ ಮಾಹಿತಿ ನೀಡಿ.

Q3. ನನಗೆ ಈಗ 27 ವರ್ಷ ವಯಸ್ಸು. ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಲು ಇಚ್ಛಿಸಿದ್ದೀನಿ. ಆದರೆ ಈಗ ಒಂದು ಪ್ರತಿಷ್ಠಿತ ಕಂಪೆನಿಯಲ್ಲಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದೇನೆ. 8 ತಾಸಿನ ಕೆಲಸದ ಜತೆಗೆ ಓದಬೇಕು ಎಂದು ನಿರ್ಧರಿಸಿದೆ; ಆದರೆ, ಓದಲು ಆಗುತ್ತಿಲ್ಲ. ದಯವಿಟ್ಟು ಯಾವುದಾದರೂ ಕೋಚಿಂಗ್ ಸೆಂಟರ್ ಬಗ್ಗೆ ತಿಳಿಸಿ. ಕೆಲಸದ ಜೊತೆಗೆ ನಾನು ಯುಪಿಎಸ್‌ಸಿ ಮಾಡಬಹುದೇ ಎಂಬ ಭಯ ಕಾಡುತ್ತಿದೆ. ದಯವಿಟ್ಟು ಸಲಹೆ ನೀಡಿ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ, ನಿರಂತರ ಅಭ್ಯಾಸ ಮತ್ತು ಮಾರ್ಗದರ್ಶನವಿರಬೇಕು. ಎಲ್ಲಾ ಪ್ರದೇಶಗಳಲ್ಲೂ ಇರುವ ಕೋಚಿಂಗ್ ಸೆಂಟರ್‌ಗಳಲ್ಲಿ  ಯಾವುದನ್ನು ಸೇರಬೇಕೆನ್ನುವುದು ನಿಮ್ಮ ಆಯ್ಕೆ.  ಯುಪಿಎಸ್‌ಸಿ ಪರೀಕ್ಷೆಗಳ ವಿವರ, ಪಠ್ಯಕ್ರಮ ಮತ್ತು ತಯಾರಿಯ ಬಗ್ಗೆ ಇದೇ ವರ್ಷದ ಜೂನ್ 21 ಮತ್ತು ಜೂನ್ 28ರ ಪ್ರಶ್ನೋತ್ತರದಲ್ಲಿ ವಿವರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ.

Q4. ಸರ್, ನನಗೆ 53 ವರ್ಷ ವಯಸ್ಸು. ನಾನು ಸರ್ಕಾರಿ ಶಾಲೆ ಶಿಕ್ಷಕನಾಗಿದ್ದು ಎಲ್‌ಎಲ್‌ಬಿ ಅಧ್ಯಯನ ನಡೆಸಲು ಇರುವ ಅವಕಾಶಗಳ ಬಗ್ಗೆ ದಯವಿಟ್ಟು ಮಾರ್ಗದರ್ಶನ ನೀಡಿ.

ನಮಗಿರುವ ಮಾಹಿತಿಯಂತೆ ಬಾರ್ ಕೌಂಸಿಲ್ ಅಫ್ ಇಂಡಿಯ   ನಿಯಮಾವಳಿಯಂತೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಲು ಇದ್ದ 30 ವರ್ಷದ ಗರಿಷ್ಠ ವಯೋಮಿತಿಯನ್ನು ಈಗ 45 ವರ್ಷದವರೆಗೆ ಸಡಿಲಿಸಲಾಗಿದೆ. ಆದರೂ, ಅನೇಕ ಕಾಲೇಜುಗಳಲ್ಲಿ ಹಳೆಯ ವಯೋಮಿತಿಯ ಉಲ್ಲೇಖವೇ ಇರುವುದು ನಮ್ಮ ಗಮನಕ್ಕೆ ಬಂದಿದೆ.

Q5. ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಂತಿಮ ಬಿಪಿಇಡಿ ವ್ಯಾಸಂಗ ಮಾಡುತ್ತಿದ್ದೇನೆ. ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಕಳೆದ 12 ವರ್ಷಗಳಿಂದಲೂ ಯಾವುದೇ ಸರ್ಕಾರಿ ಉದ್ಯೋಗಕ್ಕೆ ಬಡ್ತಿ ನೀಡುತ್ತಿಲ್ಲ. ಯಾವುದೇ ರೀತಿಯ ನೇಮಕಾತಿ ಪರೀಕ್ಷೆಗಳನ್ನೂ ನಡೆಸುತ್ತಿಲ್ಲ. ಹೀಗೇ ಆದರೆ ನಮ್ಮ ಗತಿ ಏನು; ಮುಂದೆ ನಾವೇನು ಮಾಡಬೇಕು?

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಂತೆ ಬಿಪಿಇಡಿ ಕೋರ್ಸ್ ಮಾಡಲು ನಿರ್ಧರಿಸಿದ್ದೀರಾ ತಿಳಿಯದು. ಬಿಪಿಇಡಿ ಕೋರ್ಸ್ ದೈಹಿಕ ಮತ್ತು ಮಾನಸಿಕ ಆರೋಗ್ಯ, ಮತ್ತು ಸ್ವಾಸ್ಥ್ಯಕ್ಕೆ ಸಂಬAಧಿಸಿದ ಕ್ಷೇತ್ರ. ಈ ಪದವಿಯ ನಂತರ ಶಾಲಾ ಕಾಲೇಜುಗಳು, ಜಿಮ್ ಮತ್ತು ಫಿಟ್‌ನೆಸ್ ಸಂಸ್ಥೆಗಳು, ಕ್ರೀಡೆ ಮತ್ತು ಸಂಬAಧಿತ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಎನ್‌ಜಿಒ ಸಂಸ್ಥೆಗಳು, ಇತ್ಯಾದಿ ಕ್ಷೇತ್ರಗಳಲ್ಲಿ ಅಪರಿಮಿತ ಉದ್ಯೋಗಾವಕಾಶಗಳಿವೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಉದ್ಯೋಗವನ್ನೇ ನಂಬಿ ವೃತ್ತಿಜೀವನವನ್ನು ಅರಸುವುದು ಸೂಕ್ತವಲ್ಲ. ಹಾಗಾಗಿ, ಕೋರ್ಸ್ ಮುಗಿಸಿದ ನಂತರ ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆಯೂ ನಿಮ್ಮ ಗಮನವನ್ನು ಹರಿಸಿ.

Q6. ನಾನು ಬಿಎ ಪದವಿ ಮುಗಿಸಿದ್ದೇನೆ. ಮುಂದೆ ಬಿಎಡ್  ಓದಬೇಕೋ ಅಥವಾ ಎಂಎ ಮಾಡಬೇಕೋ ಗೊತ್ತಾಗುತ್ತಿಲ್ಲ. ನಿಮ್ಮ  ಸಲಹೆ ನೀಡಿ.

ವೃತ್ತಿಯ ಯೋಜನೆಯಿಲ್ಲದೆ ಕೋರ್ಸ್ ಆಯ್ಕೆ ಸೂಕ್ತವಲ್ಲ. ನಿಮ್ಮ ಸಾವi.ರ್ಥ್ಯ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆಯನ್ನು ಮಾಡಿದರೆ, ಯಾವ ಕೋರ್ಸ್ ಮಾಡಬೇಕು ಎನ್ನುವುದು ಅರಿವಾಗುತ್ತದೆ ಮತ್ತು ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಇನ್ನೂ ಗೊಂದಲವಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

Q7. ನಾನು 10ನೇ ತರಗತಿಯಲ್ಲಿ ಫೇಲ್ ಆಗಿರುತ್ತೇನೆ (1981-82). ಡೀಸೆಲ್ ಮೆಕ್ಯಾನಿಕ್ ಐಟಿಐ ಕೋರ್ಸ್ ಮುಗಿಸಿದ್ದೇನೆ (1982-83). ಸದ್ಯ ನಾನು ಸರ್ಕಾರಿ ನೌಕರ. ಸರ್ಕಾರವು ಎಸ್‌ಎಸ್‌ಎಲ್‌ಸಿ ಆಧಾರದಲ್ಲಿ ಬಡ್ತಿ ನೀಡುತ್ತಿದೆ. ಐಟಿಐ ಆಧಾರದಲ್ಲಿ ನನಗೆ ಬಡ್ತಿ ಸಿಗಬಹುದೇ? ಐಟಿಐಯನ್ನು ಎಸ್‌ಎಸ್‌ಎಲ್‌ಸಿಗೆ ಸಮ ಎಂದು ಸರ್ಕಾರ ಪರಿಗಣಿಸುತ್ತದೆಯೇ? ಉದಾಹರಣೆಗೆ: ದ್ವಿತೀಯ ಪಿಯುಸಿಯನ್ನು ಡಿಪ್ಲೊಮಾಗೆ ಸಮ ಎಂದು ಸರ್ಕಾರ ಹೇಳಿದೆಯಲ್ಲಾ?

ನೀವು ನೀಡಿರುವ ಮಾಹಿತಿಯಂತೆ ಒಂದು ವರ್ಷದ ಡಿಪ್ಲೊಮಾ ಮಾಡಿದ್ದೀರಿ. ಆದರೆ, ನಿಮ್ಮ ನೇಮಕಾತಿಯ ಹಿನ್ನೆಲೆ ತಿಳಿಯದು.  ಹಾಗಾಗಿ, ಈ ವಿಚಾರದಲ್ಲಿ ನಿಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಡನೆ ಚರ್ಚಿಸಿ, ಬಡ್ತಿ ಸಾಧ್ಯತೆಯನ್ನು ಪರಿಶೀಲಿಸಿ.

Q & A – 18th October, 2021

Q1. ಇತ್ತೀಚೆಗೆ ಅಂತಿಮ ಪದವಿ ಮಗಿಸಿದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗಕ್ಕೆ ಮಾರ್ಗಗಳು ಇವೆಯೇ?

ಮುಂದಿನ ಭವಿಷ್ಯವನ್ನು ರೂಪಿಸಲು ಸ್ವಯಂ ಉದ್ಯೋಗ ಒಂದು ಶ್ಲಾಘನೀಯ ಮತ್ತು ಅನುಕರಣೀಯ ಮಾರ್ಗ. ನಿಮ್ಮ ಜ್ಞಾನ,  ಕೌಶಲ, ಆಸಕ್ತಿ ಮತ್ತು ಅವಕಾಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಾವ ಉದ್ಯಮ ನಿಮಗೆ ಸೂಕ್ತ ಎಂದು ಮೊದಲು ಗುರುತಿಸಬೇಕು. ಹೆಚ್ಚು ಬಂಡವಾಳವಿಲ್ಲದ ಅನೇಕ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ ಜೊತೆಗೆ ನವೋದ್ಯಮಗಳ (ಸ್ಟಾರ್ಟ್ ಅಪ್) ಅವಕಾಶಗಳೂ ಹೇರಳವಾಗಿದೆ. ಗ್ರಾಹಕರ ಬೇಡಿಕೆ ಅಥವಾ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ಉತ್ಪನ್ನ ಅಥವಾ ಸೇವೆಯನ್ನು ಗುರುತಿಸುವುದು ಮತ್ತು ಉದ್ಯಮವನ್ನು ಸಮರ್ಪಕವಾಗಿ ನಿರ್ವಹಿಸುವುದು ಯಶಸ್ಸಿಗೆ ಪ್ರಮುಖ ಕಾರಣವಾಗುತ್ತದೆ. 

ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಮತ್ತು ಸ್ವಯಂ ಉದ್ಯೋಗಾಕಾಂಕ್ಷಿಗಳನ್ನು ಉತ್ತೇಜಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ, ಕೈಗಾರಿಕೆ ಮತ್ತು ವಾಣಿಜ್ಯ  ಇಲಾಖೆಗಳ ಅಡಿಯಲ್ಲಿ ಪಿಎಂಇಜಿಪಿ ಸೇರಿದಂತೆ ಅನೇಕ ಯೋಜನೆಗಳಿವೆ. ಕೌಶಲಾಭಿವೃದ್ಧಿ, ಸಾಲ, ಧನಸಹಾಯ ಇತ್ಯಾದಿ ಸರ್ಕಾರದ ಸೌಲಭ್ಯಗಳನ್ನು ನಿಮ್ಮ ಯೋಜನೆಗೆ ಅನುಗುಣವಾಗಿ ಉಪಯೋಗಿಸಿಕೊಳ್ಳಬೇಕು. ಇವೆಲ್ಲವನ್ನೂ ನೀವೇ ನಿರ್ವಹಿಸಲು ಕಷ್ಟವೆನಿಸಿದರೆ ಉದ್ಯಮ ಸಮಾಲೋಚಕರು ಅಥವಾ ಮಾರ್ಗದರ್ಶಕರ ಬೆಂಬಲವನ್ನು ಪಡೆಯಬಹುದು. ಶುಭಹಾರೈಕೆಗಳು.

Q2. ನಾನು ಮೆಕ್ಯಾನಿಕಲ್ ಎಂಜಿನಿಯರಿAಗ್ ಓದುತ್ತಿದ್ದೇನೆ. ಮುಂದೆ ಎಂಎಸ್ ಮಾಡುವಂತೆ ಪೋಷಕರು ಹೇಳುತ್ತಿದ್ದಾರೆ. ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಯಾವ ಎಂಎಸ್ ಕೋರ್ಸ್ ಇದೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ದಯಮಾಡಿ, ಪಠ್ಯ, ಕೋರ್ಸ್ ಬಗ್ಗೆ ಮಾಹಿತಿ ನೀಡಿ. ಭಾರತದಲ್ಲೇ ಎಂಎಸ್ ಮಾಡಬೇಕು ಎಂದಿದ್ದೇನೆ.

ಐಐಟಿ ಸೇರಿದಂತೆ ದೇಶದ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿAಗ್ ಸಂಬAಧಿತ ಎಂಎಸ್ ಕೋರ್ಸ್ ಮಾಡುವ ಅವಕಾಶಗಳಿವೆ. ಈ ಕೋರ್ಸ್ ಮಾಡಲು ಜಿಎಟಿಇ (ಗೇಟ್) ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://engineering.careers360.com/colleges/list-of-ms-in-mechanical-engineering-colleges-in-india

ಇದಲ್ಲದೆ, ಮೆಕ್ಯಾನಿಕಲ್ ಎಂಜಿನಿಯರಿAಗ್ ಪದವಿಯ ನಂತರ ಎಂಇ ಅಥವಾ ಎಂಟೆಕ್ ಕೋರ್ಸ್ ಕೂಡಾ ಮಾಡಬಹುದು.

Q3. ಸರ್, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ಕ್ಷೇತ್ರಗಳಲ್ಲಿನ ಅವಕಾಶಗಳೇನು? ಈ ಕೋರ್ಸ್ಗಳು ಭವಿಷ್ಯದಲ್ಲಿ ಉಪಯುಕ್ತವೇ?

ವೈದ್ಯಕೀಯ ವಿಜ್ಞಾನ ಒಂದು ವಿಸ್ತಾರವಾದ ಕ್ಷೇತ್ರ. ವಿಶೇಷವಾದ ಸಾಮರ್ಥ್ಯವಿರುವ ವ್ಯಕ್ತಿಗಳು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ನೆರವಾಗುವ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ಕ್ಷೇತ್ರದಲ್ಲಿ ವೃತ್ತಿಯನ್ನು ಬಯಸುವುದಾದರೆ, 4 ವರ್ಷದ ಬಿಪಿಒ ಕೋರ್ಸನ್ನು ಮಾಡಬೇಕು. ಕೋರ್ಸ್ ಮಾಡಿದ ನಂತರ, ಎರಡೂ ಕ್ಷೇತ್ರಗಳಿಗೆ ಸಂಬAಧಿಸಿದAತೆ ಪ್ರಾಯೋಗಿಕ ತರಬೇತಿ ಇರುತ್ತದೆ. ಈ ಕೋರ್ಸ್ ನಂತರ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು, ಪುನರ್ವಸತಿ ಕೇಂದ್ರಗಳು, ಶುಶ್ರೂಷ ಕೇಂದ್ರಗಳಲ್ಲಿ ಉದ್ಯೋಗವನ್ನು ಅರಸಬಹುದು ಅಥವಾ ಇದೇ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ತಜ್ಞತೆಯನ್ನು ಪಡೆದುಕೊಳ್ಳಬಹುದು.  ಸಧ್ಯಕ್ಕೆ ನಿಯಮಿತವಾದ ಬೇಡಿಕೆಯಿದ್ದರೂ ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಹೆಚ್ಚು ಸೃಷ್ಠಿಯಾಗುವ ಲಕ್ಷಣಗಳಿವೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://www.careers360.com/careers/orthotist-and-prosthetist

Q4. ಸರ್, ನಾನು ಈ ವರ್ಷ ಇಂಜಿನಿಯರಿAಗ್ (ಸಿವಿಲ್) ಮುಗಿಸಿದ್ದೆನೆ. ಬ್ಯಾಂಕ್ ಪರೀಕ್ಷೆಗಳ ಬಗ್ಗೆ ಮಾಹಿತಿ ತಿಳಿಸಿ.

ಪದವಿಯ ನಂತರ ಬ್ಯಾಂಕಿAಗ್ ಕ್ಷೇತ್ರದಲ್ಲಿನ ಹುದ್ದೆಗಳಿಗೆ ಐಬಿಪಿಎಸ್ ಅಥವಾ ಆಯಾ ಬ್ಯಾಂಕ್ ನಡೆಸುವ ಅರ್ಹತಾ ಪರೀಕ್ಷೆಯ ಮುಖಾಂತರ ನೇಮಕಾತಿ ಆಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಗಮನಿಸಿ: https://www.collegedekho.com/articles/upcoming-bank-exams

ನನ್ನ ಎತ್ತರ 166.5 ಸೆ.ಮೀ ಇದೆ. ಹುದ್ದೆಗಳಿಗೆ 168 ಸೆ.ಮೀ. ಎತ್ತರ ಕಡ್ಡಾಯವೇ? ಹಾಗಾದರೆ ನಾನು ಕೆಎಸ್‌ಪಿ ಉದ್ಯೋಗಕ್ಕೆ ಅರ್ಹನಿಲ್ಲವೇ? ನನ್ನ ವಿದ್ಯಾರ್ಹತೆ ಬಿಇ (ಮೆಕ್ಯಾನಿಕಲ್-2021).

ನಮಗಿರುವ ಮಾಹಿತಿಯಂತೆ ಪೊಲಿಸ್ ಸಬ್‌ಇನ್ಸ್ಪೆಕ್ಟರ್ ಹುದ್ದೆಗೆ ಕನಿಷ್ಠ 168 ಸೆ.ಮೀ. ಎತ್ತರ ಕಡ್ಡಾಯವಾಗಿರುತ್ತದೆ.  ಆದರೆ, ಯುಪಿಎಸ್‌ಸಿ ಪರೀಕ್ಷೆಯ ಮುಖಾಂತರ ಆಯ್ಕೆಯಾಗುವ ಐಪಿಎಸ್ ಅಧಿಕಾರಿಗಳಿಗೆ 165 ಸೆ.ಮೀ. ಎತ್ತರ ಕಡ್ಡಾಯವಿರುತ್ತದೆ. ನೀವು ಕೆಎಎಸ್ ಪರೀಕ್ಷೆಯ ಮುಖಾಂತರ ರಾಜ್ಯದ ಗೃಹ ಇಲಾಖೆಯ ಇನ್ನಿತರ ಹುದ್ದೆಗಳಿಗೂ ಪ್ರಯತ್ನಿಸಬಹುದು.

Q5. ನನ್ನ ವಯಸ್ಸು 32. ಸದ್ಯದ ಪರಿಸ್ಥಿತಿಯಲ್ಲಿ ನಾನೊಬ್ಬ ನಿರುದ್ಯೋಗಿ. ನಾನು ಸ್ವಯಂ-ಉದ್ಯೋಗಿ ಆಗಲು ಬಯಸುವೆ. ಇತ್ತೀಚೆಗಷ್ಟೇ ಬಿಎ ಪರೀಕ್ಷೆ ಬರೆದಿರುವೆ. ನಾನು ಲಾಯರ್ ಪರೀಕ್ಷೆ ತಗೆದುಕೊಳ್ಳಬಹುದೇ? ಅರ್ಹತೆಗಳ ಬಗ್ಗೆ ಮಾಹಿತಿ ಹಾಗೂ ವಯಸ್ಸಿನ ಮಿತಿಯನ್ನು ತಿಳಿಸಿಕೊಡಿ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವೆ.

ಅನೇಕ ಉಚ್ಛ ನ್ಯಾಯಾಲಯಗಳಲ್ಲಿ ವಯೋಮಿತಿ ನಿಬಂಧನೆ ಕುರಿತ ಅರ್ಜಿಗಳ ವಿಚಾರಣೆ ನಡೆದ ನಂತರ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಲು ಇದ್ದ 30 ವರ್ಷದ ಗರಿಷ್ಠ ವಯೋಮಿತಿಯನ್ನು ಸಡಿಲಿಸಲಾಗಿದ್ದು ಈಗ ಯಾವುದೇ ವಯೋಮಿತಿಯ ನಿಬಂಧನೆಯಿಲ್ಲ ಎಂಬ ವರದಿಯಿದೆ. ಆದರೂ, ಅನೇಕ ಕಾಲೇಜುಗಳಲ್ಲಿ ಹಳೆಯ ವಯೋಮಿತಿಯ ಉಲ್ಲೇಖವೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ, ಖಚಿತವಾದ ಮಾಹಿತಿಗಾಗಿ ನೀವು ಸೇರಬಯಸುತ್ತಿರುವ ಕಾಲೇಜಿನಲ್ಲಿ ವಿಚಾರಿಸಿ.

ಬಿಎ ಪದವಿಯ ಕೋರ್ಸ್ ನಂತರ ಎಲ್‌ಎಲ್‌ಬಿ ಕೋರ್ಸ್ ಮಾಡಿ  ಲಾಯರ್ ವೃತ್ತಿಯನ್ನು ಅನುಸರಿಸಲು ಬಾರ್ ಕೌಂಸಿಲ್ ಪರೀಕ್ಷೆಯಲ್ಲಿ ಪಾಸಾಗಿ ನೋಂದಾಯಿಸಿಕೊಳ್ಳಬೇಕು.

Q & A – 25th October, 2021

Q1. ಸರ್, ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ಮುಂದೆ ಪ್ಯಾರಾಮೆಡಿಕಲ್ ಆಯ್ಕೆ ಮಾಡಿಕೊಂಡರೆ ಒಳ್ಳೆಯದೇ? ಮತ್ತು ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯ ವೇತನದ ಕೆಲಸ ಸಿಗಬಹುದು?

ಈಗ ಹೆಚ್ಚಿನ ಬೇಡಿಕೆಯಿರುವ ಮತ್ತು ಆರೋಗ್ಯ ಮತ್ತು ಸ್ವಾಸ್ಥ÷್ಯಕ್ಕೆ ಸಂಬAಧಿಸಿದ ಕೆಲವು ಪ್ಯಾರಾಮೆಡಿಕಲ್ ಪದವಿ ಕೋರ್ಸ್ಗಳೆಂದರೆ ಬಿಎಸ್‌ಸಿ ( ನರ್ಸಿಂಗ್, ಫಿಸಿಯೋತೆರಪಿ, ರೇಡಿಯಾಲಜಿ, ಇಮೇಜಿಂಗ್, ಕಾರ್ಡಿಯಾಕ್ ಕೇರ್, ಅನಸ್ತೇಶಿಯಾ, ಒ.ಟಿ., ಹಾಸ್ಪಿಟಲ್ ಮ್ಯಾನೇಜ್‌ಮೆಂಟ್, ಮೆಡಿಕಲ್ ಲ್ಯಾಬ್, ನ್ಯೂಕ್ಲಿಯರ್ ಮೆಡಿಸಿನ್ ಟೆಕ್ನಾಲಜಿ  ಇತ್ಯಾದಿ). ಸಾಮಾನ್ಯವಾಗಿ, ಇವೆಲ್ಲವೂ  3-4 ವರ್ಷದ ಕೋರ್ಸ್ಗಳು ಮತ್ತು ಕೋರ್ಸ್ ಮುಗಿದ ನಂತರ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಅಪಘಾತ ಚಿಕಿತ್ಸಾ ಕೇಂದ್ರಗಳು, ಪ್ರಯೋಗಾಲಯಗಳು, ತುರ್ತು ನಿಗಾ ಘಟಕಗಳು, ಮೆಡಿಕಲ್ ಕಾಲೇಜುಗಳಲ್ಲಿ ಉದ್ಯೋಗವನ್ನು ಅರಸಬಹುದು. ಹೆಚ್ಚಿನ ವಿವರಗಳಿಗಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಜಾಲತಾಣವನ್ನು ಪರಿಶೀಲಿಸಿ.

ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆ ಮಾಡಿ ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಬೇಕು. ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಷಮತೆ ನಿರೀಕ್ಷೆಗೆ ಅನುಗುಣವಾಗಿದ್ದರೆ ವೇತನ, ಇನ್ನಿತರ ಅನುಕೂಲಗಳು ಕಾಲಕ್ರಮೇಣ ಹೆಚ್ಚಾಗುತ್ತವೆ.

Q2. ನಾನು ಮೆಕ್ಯಾನಿಕಲ್ ಎಂಜಿನಿಯರಿAಗ್ ಎಂಟೆಕ್ 2021ರಲ್ಲಿ ಮುಗಿಸಿದ್ದೇನೆ. ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವುದಾದರೆ ಯಾವ ಕ್ಷೇತ್ರದ ವೃತ್ತಿಗಳಿಗೆ ಹೋಗಬಹುದು?

ಏರೋಸ್ಪೇಸ್, ಏರೋನಾಟಿಕಲ್, ಆಟೋಮೊಬೈಲ್, ಮೈನಿಂಗ್, ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟಿçಕಲ್, ಡಿಫೆನ್ಸ್ ಇತ್ಯಾದಿ ಕ್ಷೇತ್ರಗಳಲ್ಲಿನ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ವೃತ್ತಿಯನ್ನು ಅರಸಬಹುದು.

Q3. ನಾನು ಬಿಕಾಂ ಮುಗಿಸಿದ್ದೇನೆ; ಆದರೆ, ಮುಂದೇನು ಮಾಡಬೇಕೆಂದು ತಿಳಿಯದೆ ಗೊಂದಲದಲ್ಲಿದ್ದೇನೆ. ಹಾಗೂ, ಸರಿಯಾದ ಮಾರ್ಗದರ್ಶನ ನೀಡುವರಿಲ್ಲ. ನಾವು ಮಧ್ಯಮ ವರ್ಗದ ಕುಟುಂಬದವರು. ಹಾಗಾಗಿ, ಖಾಸಗಿ ಕಾಲೇಜಿಗೆ ಸೇರಲಾಗುವುದಿಲ್ಲ; ಸರ್ಕಾರಿ ಕಾಲೇಜಿಗೇ ಸೇರಬೇಕು. ದಯವಿಟ್ಟು ನಿಮ್ಮ ಮಾರ್ಗದರ್ಶನ ನೀಡಿ.

ಕಾಮರ್ಸ್ ವಿಸ್ತಾರವಾದ ಕ್ಷೇತ್ರ. ಬಿಕಾಂ ನಂತರ ಮಾಡಬಹುದಾದ ಕೋರ್ಸ್ಗಳೆಂದರೆ ಎಂಕಾA, ಎಂಬಿಎ, ಎಂಸಿಎ, ಸಿಎ, ಐಸಿಡಬ್ಲು÷್ಯಎ, ಎಸಿಎಸ್, ಐಎಎಸ್, ಕೆಎಎಸ್ ಇತ್ಯಾದಿ. ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಆಧಾರದ ಮೇಲೆ ವೃತ್ತಿಯ ಯೋಜನೆ ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡಿ, ಸರ್ಕಾರಿ ಕಾಲೇಜುಗಳಲ್ಲಿ ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಆರ್ಥಿಕ ಸಮಸ್ಯೆಯಿರುವ ವಿದ್ಯಾರ್ಥಿಗಳಿಗಿರುವ ಅನೇಕ ಸ್ಕಾಲರ್‌ಶಿಪ್, ಉಚಿತ ಪುಸ್ತಕಗಳು, ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಆ ಅನುಕೂಲಗಳನ್ನು ಪಡೆದುಕೊಳ್ಳಿ. ಅಗತ್ಯವಿದ್ದರೆ, ವೃತ್ತಿ ಸಮಾಲೋಚಕರನ್ನು ಸಂಪರ್ಕಿಸಿ.

Q4. ನಾನು ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ನಾನು ಹೇಗೆ ಎಲೆಕ್ಟಿçಕಲ್ ಲೈಸೆನ್ಸ್ ಪಡೆಯಬೇಕು?

ಎಲೆಕ್ಟಿçಕಲ್ ಲೈಸೆನ್ಸ್ ವಿವರಗಳಿಗಾಗಿ ಗಮನಿಸಿ:

https://ksei.gov.in/pdf/faq/LECFAQ.pdf

Q5. ನಾನು ಅಮೇರಿಕ ದೇಶದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿAಗ್ ಸ್ನಾತಕೋತ್ತರ ಕೋರ್ಸನ್ನು 2017ರಲ್ಲಿ ಮುಗಿಸಿದ್ದರೂ ನಿರುದ್ಯೋಗಿಯಾಗಿದ್ದು ಖಿನ್ನತೆಗೆ ಒಳಗಾಗಿದ್ದೆ. ಅಕ್ಟೋಬರ್ 2020ರಲ್ಲಿ ಭಾರತಕ್ಕೆ ವಾಪಸ್ ಬಂದೆ. ಇಲ್ಲಿನ ಕೆಲವು ಸಂದರ್ಶನಗಳಲ್ಲಿ ಸಫಲತೆ ಸಿಗಲಿಲ್ಲ. ಇದುವರೆಗೆ, ಇಲ್ಲೂ ಕೆಲಸ ಸಿಗದೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. 4 ವರ್ಷದಿಂದ ಉದ್ಯೋಗವಿಲ್ಲದೆ ಶಿಕ್ಷಣದ ಸಾಲವನ್ನೂ ತೀರಿಸಲಾಗುತ್ತಿಲ್ಲ. ಈ ವಿಷಯದ ಸಲುವಾಗಿ ಎಲ್ಲರೂ ನಿರಾಶೆಗೊಂಡಿದ್ದು ನಾನು ಮುಂದೇನು ಮಾಡಬಹುದೆಂದು ತಿಳಿಸಿ.

ನಿರುದ್ಯೋಗ, ಸಾಲದ ಹೊರೆಯಿಂದ ಬಳಲುತ್ತಿರುವ ನಿಮ್ಮ ಸಮಸ್ಯೆಗಳು ಅರ್ಥವಾಗುತ್ತದೆ. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸಕಾರಾತ್ಮಕ ಮನೋಭಾವವೇ ಸಂಜೀವಿನಿಯಾಗಬಲ್ಲದು. ಉನ್ನತ ವ್ಯಾಸಂಗ ಮಾಡಿರುವ ನೀವು ಆಶಾವಾದಿಗಳಾಗಿ ಹೊಸ ದೃಷ್ಟಿಕೋನದಿಂದ ನಿಮಗಿರುವ ಸಾಧ್ಯತೆಗಳ ಬಗ್ಗೆ ಯೋಚಿಸಿ. ಉದಾಹರಣೆಗೆ, ಯುಪಿಎಸ್‌ಸಿ/ಕೆಪಿಎಸ್‌ಸಿ ಪರೀಕ್ಷೆಗಳ ಮುಖಾಂತರ ಸರ್ಕಾರದ ಉನ್ನತ ಹುದ್ದೆಗಳಿಗೆ ಪ್ರಯತ್ನಿಸಬಹುದು; ಅಥವಾ, ವಿಸ್ತಾರವಾದ ಮೆಕ್ಯಾನಿಕಲ್ ಎಂಜಿನಿಯರಿAಗ್ ಸಂಬAಧಿತ ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳತ್ತ ಗಮನವನ್ನು ಹರಿಸಬಹುದು. ಇದಲ್ಲದೆ, ಸ್ವಯಂ ಉದ್ಯೋಗವೂ ನಿಮಗಿರುವ ಅವಕಾಶವೆನ್ನುವುದನ್ನು ಮರೆಯದಿರಿ. ಹಾಗಾಗಿ, ಈ ಎಲ್ಲಾ ಅವಕಾಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸ್ಪಷ್ಟವಾದ ಗುರಿ, ಸಾಧಿಸುವ ಛಲ ಮತ್ತು ಗೆಲ್ಲುವ ಆತ್ಮವಿಶ್ವಾಸವಿದ್ದರೆ ಉಜ್ವಲ ಭವಿಷ್ಯ ನಿಮ್ಮದಾಗಬಲ್ಲದು. ಅಗತ್ಯವಿದ್ದರೆ, ವೃತ್ತಿ ಸಮಾಲೋಚಕರ ಮಾರ್ಗದರ್ಶನವನ್ನು ಪಡೆಯಿರಿ.